Twitter ನಿಯಮಗಳು

ಎಲ್ಲರಿಗೂ ಆಲೋಚನೆಗಳು ಮತ್ತು ಮಾಹಿತಿಯನ್ನು ತ್ವರಿತವಾಗಿ, ಯಾವುದೇ ಅಡೆತಡೆ ಇಲ್ಲದೇ ರಚಿಸಲು ಮತ್ತು ಹಂಚಿಕೊಳ್ಳಲು ಅಧಿಕಾರ ಇರಬೇಕು ಎಂದು ನಾವು ನಂಬುತ್ತೇವೆ. Twitter ಬಳಸುವ ಜನರ ಅನುಭವ ಮತ್ತು ಸುರಕ್ಷತೆಯನ್ನು ರಕ್ಷಿಸುವ ನಿಟ್ಟಿನಲ್ಲಿ, ನಾವು ಅನುಮತಿಸುವ ಕಂಟೆಂಟ್ ಮತ್ತು ವರ್ತನೆಯ ವಿಧಗಳಲ್ಲಿ ಕೆಲವು ಮಿತಿಗಳಿವೆ. ಈ ಮಿತಿಗಳನ್ನು ಈ ಕೆಳಗೆ Twitter ನಿಯಮಗಳು ಎಂಬುದಾಗಿ ನಿಗದಿಸಲಾಗಿದೆ.

Twitter ನಿಯಮಗಳು (ಎಲ್ಲ ಒಟ್ಟಾರೆ ನೀತಿಗಳೊಂದಿಗೆ), ಗೌಪ್ಯತೆ ನೀತಿ ಮತ್ತು ಸೇವೆ ನಿಯಮಗಳನ್ನು ಒಟ್ಟಾರೆಯಾಗಿ “Twitter ಬಳಕೆದಾರರ ಕರಾರು” ಎಂದು ಕರೆಯಲಾಗಿದ್ದು, ಇದು Twitter ಗೆ ಬಳಕೆದಾರರ ಪ್ರವೇಶ ಮತ್ತು Twitter ನ ಸೇವೆಗಳ ಬಳಕೆಯನ್ನು ನಿರ್ದೇಶಿಸುತ್ತದೆ.

Twitter ಸೇವೆಗಳನ್ನು ಬಳಸುವ ಅಥವಾ ಪ್ರವೇಶಿಸುವ ಎಲ್ಲ ಬಳಕೆದಾರರು Twitter ನಿಯಮಗಳಲ್ಲಿ ನಿಗದಿಪಡಿಸಲಾಗಿರುವ ನೀತಿಗಳಿಗೆ ಬದ್ಧವಾಗಿರಬೇಕು. ಇದಕ್ಕೆ ವಿಫಲವಾದಲ್ಲಿ, ಈ ಮುಂದಿನ ಒಂದು ಅಥವಾ ಹೆಚ್ಚು ಜಾರಿ ಕ್ರಮಗಳನ್ನು Twitter ತೆಗೆದುಕೊಳ್ಳಬಹುದಾಗಿದೆ:

 • ಹೊಸ ಪೋಸ್ಟ್​ಗಳನ್ನು ಪುನಃ ರಚಿಸುವ ಮುನ್ನ ಮತ್ತು ಇತರ Twitter ಬಳಕೆದಾರರೊಂದಿಗೆ ಸಂವಹನ ನಡೆಸುವ ಮುನ್ನ ನೀವು ನಿಷೇಧಿತ ಕಂಟೆಂಟ್ ಅಳಿಸುವ ಅಗತ್ಯ;
 • ಪೋಸ್ಟ್​ಗಳನ್ನು ರಚಿಸುವ ಸಾಮರ್ಥ್ಯ ಅಥವಾ ಇತರ Twitter ಬಳಕೆದಾರರೊಂದಿಗೆ ಸಂವಹನ ನಡೆಸುವ ಸಾಮರ್ಥ್ಯ;
 • ಫೋನ್ ಸಂಖ್ಯೆ ಅಥವಾ ಇಮೇಲ್ ವಿಳಾಸದೊಂದಿಗೆ ಖಾತೆ ಮಾಲೀಕತ್ವವನ್ನು ಪರಿಶೀಲಿಸುವಂತೆ ನಿಮ್ಮನ್ನು ಕೇಳುವುದು; ಅಥವಾ
 • ನಿಮ್ಮ ಖಾತೆ(ಗಳನ್ನು) ಶಾಶ್ವತವಾಗಿ ಸ್ಥಗಿತಗೊಳಿಸುವುದು.

ಹೊಸ ಖಾತೆಗಳನ್ನು ರಚಿಸುವ ಮೂಲಕ ಶಾಶ್ವತ ಅಮಾನತನ್ನು ನೀವು ಮರೆಮಾಡಲು ಪ್ರಯತ್ನಿಸಿದರೆ, ನಿಮ್ಮ ಹೊಸ ಖಾತೆಯನ್ನೂ ನಾವು ಅಮಾನತು ಮಾಡುತ್ತೇವೆ.

ಕಾಲಕಾಲಕ್ಕೆ ನಾವು ಈ ನಿಯಮಗಳನ್ನು ಬದಲಿಸಬೇಕಾಗಬಹುದು ಮತ್ತು ಅದನ್ನು ಮಾಡುವ ಹಕ್ಕನ್ನು ಕಾಯ್ದಿರಿಸಿಕೊಂಡಿದ್ದೇವೆ ಎಂದು ದಯವಿಟ್ಟು ಗಮನಿಸಿ. ಅತ್ಯಂತ ಇತ್ತೀಚಿನ ಆವೃತ್ತಿಯು ಇಲ್ಲಿ ಎಂದಿಗೂ ಲಭ್ಯವಿದೆ: https://twitter.com/rules.

ಈ Twitter ನಿಯಮಗಳಲ್ಲಿ ನಿಗದಿಪಡಿಸಿದ ನೀತಿಗಳು ನಮ್ಮ ವೇದಿಕೆಯಲ್ಲಿನ ಆರೋಗ್ಯಕರ ಕಂಟೆಂಟ್ ಅನ್ನು ನಿರ್ದೇಶಿಸಿದೆ. ಜಾಹೀರಾತು ಮತ್ತು ಪ್ರಚಾರ ಕಂಟೆಂಟ್ ಅನ್ನು ನಿರ್ದೇಶಿಸುವ ನಿಯಮಗಳ ಬಗ್ಗೆ ಇನ್ನಷ್ಟು ತಿಳಿಯಲು ನಮ್ಮ ಜಾಹೀರಾತು ನೀತಿಗಳನ್ನು ದಯವಿಟ್ಟು ಪರಿಶೀಲಿಸಿ.

ಕಂಟೆಂಟ್ ಮಿತಿಗಳು ಮತ್ತು Twitter ಬಳಕೆ

ಬೌದ್ಧಿಕ ಸ್ವತ್ತು

ಟ್ರೇಡ್​ಮಾರ್ಕ್: ನಿಮ್ಮ ಬ್ರಾಂಡ್ ಬದ್ಧತೆಯೊಂದಿಗೆ ಇತರರ ಬ್ರಾಂಡ್ ಅಥವಾ ಟ್ರೇಡ್​ಮಾರ್ಕ್, ವಹಿವಾಟು ಹೆಸರು ಮತ್ತು/ಅಥವಾ ಲೋಗೋ ಬಗ್ಗೆ ಇತರರನ್ನು ತಪ್ಪುದಾರಿಗೆಳೆಯುವ ಅಥವಾ ಗೊಂದಲಕ್ಕೆಡೆ ಮಾಡುವಂತಿದ್ದರೆ, ಖಾತೆಗಳನ್ನು ಅಮಾನತುಗೊಳಿಸುವ ಅಥವಾ ಇತರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ. ನಮ್ಮ ಟ್ರೇಡ್​ಮಾರ್ಕ್ ನೀತಿಯ ಬಗ್ಗೆ ಮತ್ತು ಉಲ್ಲಂಘನೆಯ ಬಗ್ಗೆ ಹೇಗೆ ವರದಿ ಮಾಡುವುದು ಎಂಬ ಬಗ್ಗೆ ಇನ್ನಷ್ಟು ಓದಿ.

ಹಕ್ಕುಸ್ವಾಮ್ಯ: ಆರೋಪಿತ ಹಕ್ಕುಸ್ವಾಮ್ಯ ಉಲ್ಲಂಘನೆಯ ಸ್ಪಷ್ಟ ಮತ್ತು ಸಂಪೂರ್ಣ ನೋಟಿಸ್​ಗಳಿಗೆ ನಾವು ಪ್ರತಿಕ್ರಿಯಿಸುತ್ತೇವೆ. ನಮ್ಮ ಹಕ್ಕುಸ್ವಾಮ್ಯ ನಿಯಮಗಳನ್ನು ಸೇವೆ ನಿಯಮಗಳಲ್ಲಿ ವಿವರಿಸಲಾಗಿದೆ. ನಮ್ಮ ಹಕ್ಕುಸ್ವಾಮ್ಯ ನೀತಿ ಬಗ್ಗೆ ಇನ್ನಷ್ಟು ಓದಿ


ಗ್ರಾಫಿಕ್ ಹಿಂಸೆ ಮತ್ತು ವಯಸ್ಕರ ಕಂಟೆಂಟ್

ಸಾವು, ಗಂಭೀರ ಗಾಯ, ಹಿಂಸೆ ಅಥವಾ ಶಸ್ತ್ರಚಿಕಿತ್ಸೆ ಕ್ರಮಗಳಿಗೆ ಸಂಬಂಧಿಸಿದ ಯಾವುದೇ ರಕ್ತಸಿಕ್ತ ಮಾಧ್ಯಮದ ರೂಪವನ್ನು ಗ್ರಾಫಿಕ್ ಹಿಂಸೆ ಎಂದು ನಾವು ಪರಿಗಣಿಸುತ್ತೇವೆ. ಪೋರ್ನೋಗ್ರಾಫಿಕ್ ಮತ್ತು/ಅಥವಾ ಲೈಂಗಿಕ ಉದ್ರೇಕಕ್ಕೆ ಕಾರಣವಾಗುವ ಉದ್ದೇಶವನ್ನು ಹೊಂದಿರಬಹುದಾದ ಯಾವುದೇ ಮಾಧ್ಯಮವನ್ನು ನಾವು ವಯಸ್ಕರ ಕಂಟೆಂಟ್ ಎಂದು ಪರಿಗಣಿಸುತ್ತೇವೆ. 

ಸೂಕ್ಷ್ಮ ಮಾಧ್ಯಮವನ್ನು ಹೊಂದಿದೆ ಎಂದು ಟ್ವೀಟ್​ಗಳಲ್ಲಿ ಗುರುತಿಸಿ ಕೆಲವು ಗ್ರಾಫಿಕ್ ಹಿಂಸೆ ಮತ್ತು/ಅಥವಾ ವಯಸ್ಕರ ಕಂಟೆಂಟ್ ಅನ್ನು Twitter ಅನುಮತಿಸುತ್ತದೆ. ಆದಾಗ್ಯೂ, ನೀವು ಇಂತಹ ಒಳಾಂಶವನ್ನು ನಿಮ್ಮ ಲೈವ್ ವೀಡಿಯೋ, ನಿಮ್ಮ ಪ್ರೊಫೈಲ್ ಅಥವಾ ಶೀರ್ಷಿಕೆ ಚಿತ್ರಗಳಲ್ಲಿ ಬಳಸಬಾರದು. ಜೊತೆಗೆ, ಅಧಿಕವಾದ ಗ್ರಾಫಿಕ್ ಹಿಂಸೆಯನ್ನು ನೀವು ತೆಗೆದುಹಾಕುವುದು ಕೆಲವೊಮ್ಮೆ Twitter ಅಗತ್ಯವಾಗಬಹುದು. ನಾವು ಗ್ರಾಫಿಕ್ ಹಿಂಸೆಯನ್ನು ಮತ್ತು ವಯಸ್ಕ ವಿಷಯವನ್ನು ಹೇಗೆ ವ್ಯಾಖ್ಯಾನಿಸುತ್ತೇವೆ ಮತ್ತು ನಿಮ್ಮ ಮಾಧ್ಯಮವನ್ನು ಸೂಕ್ಷ್ಮ ಎಂಬುದಾಗಿ ಹೇಗೆ ಗುರುತಿಸುವುದು ಎಂಬ ಕುರಿತು ಇನ್ನಷ್ಟು ತಿಳಿಯಿರಿ.  

ಮರಣ ಹೊಂದಿರು ವ್ಯಕ್ತಿಗಳನ್ನು ವರ್ಣಿಸುವ ಮಾಧ್ಯಮ: ಗುರುತಿಸಬಹುದಾದ ವ್ಯಕ್ತಿಯ ಮರಣವನ್ನು ವರ್ಣಿಸುವ ಮಾಧ್ಯಮದ ಕುರಿತಂತೆ ನಾವು ಅವರ ಕುಟುಂಬ ಅಥವಾ ಅಧಿಕೃತ ಪ್ರತಿನಿಧಿಯಿಂದ ವಿನಂತಿ ಸ್ವೀಕರಿಸಿದರೆ ಅದನ್ನು ನೀವು ತೆಗೆದುಹಾಕುವುದು ನಮಗೆ ಅಗತ್ಯವಾಗಬಹುದು. ಅಂತಹ ವಿನಂತಿಯನ್ನು ಮಾಡುವುದು ಹೇಗೆ ಎಂಬ ಬಗ್ಗೆ ಇನ್ನಷ್ಟು ತಿಳಿಯಿರಿ.


ಅಕ್ರಮ ಬಳಕೆ

ಯಾವುದೇ ಅಕ್ರಮ ಉದ್ದೇಶಗಳಿಗೆ ಅಥವಾ ಅಕ್ರಮ ಚಟುವಟಿಕೆಗಳಿಗೆ ನಮ್ಮ ಸೇವೆಯನ್ನು ನೀವು ಬಳಸಬಾರದು. Twitter ಬಳಸುವ ಮೂಲಕ, ನಿಮ್ಮ ಆನ್​ಲೈನ್ ಸದಾಚಾರ ಮತ್ತು ಕಂಟೆಂಟ್ ನಿರ್ದೇಶಿಸುವ ಅನ್ವಯಿಸುವ ಎಲ್ಲ ಕಾನೂನುಗಳಿಗೆ ಬದ್ಧವಾಗಲು ನೀವು ಸಮ್ಮತಿಸುತ್ತೀರಿ.


ಹ್ಯಾಕ್ ಮಾಡಿದ ಸಾಮಗ್ರಿಗಳ ವಿತರಣೆ 

ವೈಯಕ್ತಿಕವಾಗಿ ಗುರುತಿಸಬಹುದಾದ ಮಾಹಿತಿಯನ್ನು ಒಳಗೊಂಡಿರುವ, ಜನರನ್ನು ಅತ್ಯಂತ ಅಪಾಯ ಅಥವಾ ಹಾನಿಗೆ ಎಡೆ ಮಾಡುವ ಅಥವಾ ವ್ಯಾಪಾರ ಗೌಪ್ಯತೆಗಳನ್ನು ಒಳಗೊಂಡಿರಬಹುದಾದ, ಹ್ಯಾಕಿಂಗ್ ಮೂಲಕ ಪಡೆದ ಕಂಟೆಂಟ್ ಅನ್ನು ನೇರವಾಗಿ ವಿತರಿಸಲು ನಮ್ಮ ಸೇವೆಗಳನ್ನು ಬಳಸಲು ನಾವು ಅನುಮತಿಸುವುದಿಲ್ಲ. ಹ್ಯಾಕ್ ಮಾಡಿದ ಸಾಮಗ್ರಿಗಳ ನೇರ ವಿತರಣೆಯಲ್ಲಿ ಹ್ಯಾಕ್ ಮಾಡಿದ ಕಂಟೆಂಟ್ ಅನ್ನು Twitter ನಲ್ಲಿ ಪೋಸ್ಟ್ ಮಾಡುವುದು (ಉದಾಹರಣೆಗೆ, ಟ್ವೀಟ್​ನ ಪಠ್ಯದಲ್ಲಿ ಅಥವಾ ಚಿತ್ರದಲ್ಲಿ) ಅಥವಾ ಇತರ ವೆಬ್​ಸೈಟ್​ಗಳಲ್ಲಿ ಹೋಸ್ಟ್ ಮಾಡಿದ ಹ್ಯಾಕ್ ಮಾಡಿದ ಕಂಟೆಂಟ್​ಗೆ ನೇರ ಲಿಂಕ್ ಮಾಡುವುದೂ ಒಳಗೊಂಡಿರುತ್ತದೆ.

ಹ್ಯಾಕ್ ಮಾಡಿದ ಜವಾಬ್ದಾರಿಯನ್ನು ಹೊತ್ತುಕೊಳ್ಳುವ ಹ್ಯಾಕ್ ಮಾಡಿದ ಸಾಮಗ್ರಿಯನ್ನು ನೇರವಾಗಿ ವಿತರಿಸುವ ಖಾತೆಗಳನ್ನು ಅಥವಾ ಕಂಟೆಂಟ್​ಅನ್ನು ವಿತರಿಸುವ ಖಾತೆ ಹ್ಯಾಕ್ ಮಾಡಿದೆ ಎಂದು Twitter ವಿಶ್ವಾಸಾರ್ಹವಾಗಿ ಗುರುತಿಸಿದಲ್ಲಿ ಅಂತಹ ಖಾತೆಗಳನ್ನು ನಾವು ಅಮಾನತುಗೊಳಿಸಬಹುದು.


ಟ್ರೆಂಡ್​ಗಳು

ಕೆಲವು ಬಾರಿ, ಕೆಲವು ಕಂಟೆಂಟ್ ಅನ್ನು ಟ್ರೆಂಡಿಂಗ್​ನಿಂದ ದೂರವಿಡಬಹುದು. Twitter ನಿಯಮಗಳನ್ನು ಉಲ್ಲಂಘಿಸುವ ಹಾಗೂ ಟ್ರೆಂಡ್​ಗಳನ್ನು ಬದಲಿಸುವ ಪ್ರಯತ್ನ ಮಾಡಿರಬಹುದಾದ ಕಂಟೆಂಟ್ ಅನ್ನು ಇದು ಒಳಗೊಂಡಿರಬಹುದು. ಟ್ರೆಂಡ್​ನಲ್ಲಿ ನಾವು ಏನನ್ನು ಅನುಮತಿಸುತ್ತೇವೆ ಮತ್ತು ಅನುಮತಿಸುವುದಿಲ್ಲ ಎಂಬ ಬಗ್ಗೆ ಇನ್ನಷ್ಟು ಓದಿ
 

ವೀಡಿಯೋ ಕಂಟೆಂಟ್​ನಲ್ಲಿ ತೃತೀಯ ಪಕ್ಷದ ಜಾಹೀರಾತು

ನಮ್ಮ ಪೂರ್ವ ಸಮ್ಮತಿ ಇಲ್ಲದೇ ತೃತೀಯ ಪಕ್ಷದ ಜಾಹೀರಾತುಗಳಾದ ಪ್ರೀ ರೋಲ್ ವೀಡಿಯೋ ಜಾಹೀರಾತುಗಳು ಅಥವಾ ಪ್ರಾಯೋಜಿತ ಗ್ರಾಫಿಕ್​ಗಳನ್ನು ಒಳಗೊಂಡ ವೀಡಿಯೋ ಕಂಟೆಂಟ್ ಅನ್ನು ನಮ್ಮ ಸೇವೆಗಳ ಮೂಲಕ ಸಲ್ಲಿಸಬಾರದು, ಪೋಸ್ಟ್ ಮಾಡಬಾರದು ಅಥವಾ ಡಿಸ್​ಪ್ಲೇ ಮಾಡಬಾರದು.


Twitter ಬ್ಯಾಡ್ಜ್​ಗಳ ದುರ್ಬಳಕೆ

Twitter ಪೂರೈಸದಿದ್ದರೆ ನೀವು “ಪ್ರೋತ್ಸಾಹಿತ” ಅಥವಾ “ಪರಿಶೀಲಿಸಿದ” Twitter ಬ್ಯಾಡ್ಜ್​ಗಳನ್ನು ಸೇರಿದಂತೆ, ಆದರೆ ಇದಕ್ಕೆ ಸೀಮಿತವಾಗದಂತೆ ಬ್ಯಾಡ್ಜ್​ಗಳನ್ನು ಬಳಸಬಾರದು. ತಮ್ಮ ಪ್ರೊಫೈಲ್ ಫೋಟೋಗಳು, ಶೀರ್ಷಿಕೆ ಫೋಟೋಗಳು, ಪ್ರದರ್ಶನ ಹೆಸರುಗಳ ಭಾಗವಾಗಿ ಅನಧಿಕೃತ ಬ್ಯಾಡ್ಜ್​ಗಳನ್ನು ಬಳಸುವ ಅಥವಾ ಈ ಬ್ಯಾಡ್ಜ್​ಗಳನ್ನು ಪ್ರದರ್ಶಿಸಲು Twitter ನೊಂದಿಗೆ ತಪ್ಪಾಗಿ ಸಂಬಂಧವನ್ನು ಅಥವಾ ದೃಢೀಕರಣವನ್ನು ಪರಿಭಾವಿಸುವ ಖಾತೆಗಳನ್ನು ಅಮಾನತು ಮಾಡಲಾಗುತ್ತದೆ.


ಬಳಕೆದಾರರ ಹೆಸರುಗಳ ದುರ್ಬಳಕೆ

ಬಳಕೆದಾರರ ಹೆಸರುಗಳನ್ನು ಮಾರಾಟ ಮಾಡುವುದು: Twitter ಬಳಕೆದಾರರ ಹೆಸರನ್ನು ನೀವು ಖರೀದಿ ಅಥವಾ ಮಾರಾಟ ಮಾಡಬಾರದು.

ಬಳಕೆದಾರರ ಹೆಸರು ದುರ್ಬಳಕೆ: ನೀವು ಬಳಕೆದಾರರ ಹೆಸರು ದುರ್ಬಳಕೆಯಲ್ಲಿ ತೊಡಗಬಾರದು. ವರ್ತನೆಯು ಬಳಕೆದಾರರ ಹೆಸರು ದುರ್ಬಳಕೆಯಲ್ಲಿ ತೊಡಗಿಸಿಕೊಂಡಿದ್ದಾರೆಯೇ ಎಂಬುದನ್ನು ಗುರುತಿಸುವಲ್ಲಿ ನಾವು ಈ ಮುಂದಿನ ಕೆಲವು ಅಂಶಗಳನ್ನು ಪರಿಗಣಿಸುತ್ತೇವೆ:

 • ರಚಿಸಿದ ಖಾತೆಗಳ ಸಂಖ್ಯೆ;
 • ಈ ಖಾತೆ ಹೆಸರುಗಳನ್ನು ಬಳಸುವುದರಿಂದ ಇತರರನ್ನು ತಡೆಯುವ ಉದ್ದೇಶಕ್ಕೆ ಖಾತೆಗಳನ್ನು ರಚಿಸುವುದು;
 • ಖಾತೆಗಳನ್ನು ಮಾರಾಟ ಮಾಡುವ ಉದ್ದೇಶಕ್ಕೆ ಖಾತೆಗಳನ್ನು ರಚಿಸುವುದು; ಮತ್ತು
 • ಈ ತೃತೀಯ ಪಕ್ಷಗಳ ಹೆಸರಿನ ಅಡಿಯಲ್ಲಿ ಖಾತೆಗಳನ್ನು ಅಪ್​ಡೇಟ್ ಮತ್ತು ನಿರ್ವಹಣೆ ಮಾಡಲು ತೃತೀಯ ಪಕ್ಷದ ಕಂಟೆಂಟ್ ಫೀಡ್​ಗಳನ್ನು ಬಳಸುವುದು.

ಆರು ತಿಂಗಳುಗಳಿಗಿಂತ ಹೆಚ್ಚು ಅವಧಿಗೆ ನಿಷ್ಕ್ರಿಯವಾಗಿರುವ ಖಾತೆಗಳನ್ನು Twitter ಅಳಿಸಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ಬಳಕೆದಾರರ ಹೆಸರು ದುರ್ಬಳಕೆಯ ಬಗ್ಗೆ ಇನ್ನಷ್ಟು ತಿಳಿಯಿರಿ.

ದೌರ್ಜನ್ಯಕರ ವರ್ತನೆ

ನಾವು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮುಕ್ತ ಸಂಭಾಷಣೆಯಲ್ಲಿ ವಿಶ್ವಾಸ ಹೊಂದಿದ್ದೇವೆ, ಆದರೆ ಜನರು ಮಾತನಾಡಲು ಹೆದರಿದರೆ ಅವರ ಧ್ವನಿಯನ್ನು ಉಡುಗಿಸಲಾಗುತ್ತದೆ ಎಂಬುದು ಇದರ ಸುಪ್ತ ಸಿದ್ಧಾಂತವಾಗಿರುತ್ತದೆ. ವೈವಿಧ್ಯ ಅಭಿಪ್ರಾಯ ಮತ್ತು ನಂಬಿಕೆಗಳನ್ನು ಅಭಿವ್ಯಕ್ತಪಡಿಸಲು ಜನರು ಸುರಕ್ಷಿತ ಎಂಬ ಭಾವವನ್ನು ಹೊಂದುವುದನ್ನು ಖಚಿತಪಡಿಸಲು, ದೌರ್ಜನ್ಯ, ಬೆದರಿಕೆಯ ವರ್ತನೆಯೂ ಸೇರಿದಂತೆ ಅಥವಾ ಇತರರ ಧ್ವನಿಯನ್ನು ಉಡುಗಿಸಲು ಬೆದರಿಕೆಯನ್ನು ಬಳಸುವ ಮೂಲಕ ಮಿತಿಯನ್ನು ಮೀರಿ ದೌರ್ಜನ್ಯಕ್ಕೆರಗುವ ವರ್ತನೆಯನ್ನು ನಾವು ನಿರ್ಬಂಧಿಸುತ್ತೇವೆ.

ದೌರ್ಜನ್ಯಕಾರಿ ವರ್ತನೆಯನ್ನು ಮೌಲೀಕರಿಸಲು ಮತ್ತು ಸೂಕ್ತ ಜಾರಿ ಕ್ರಮಗಳನ್ನು ಗುರುತಿಸುವಲ್ಲಿ ವಿಷಯವಸ್ತು ಪ್ರಮುಖವಾಗುತ್ತದೆ. ನಾವು ಪರಿಗಣಿಸುವ ಅಂಶಗಳು ಇವುಗಳಾಗಿದ್ದು, ಆದರೆ ಇದಕ್ಕೆ ಸೀಮಿತವಾಗಿಲ್ಲ:

 • ವ್ಯಕ್ತಿಕ ಅಥವಾ ವ್ಯಕ್ತಿ ಸಮೂಹಕ್ಕೆ ಗುರಿಪಡಿಸಿದ ವರ್ತನೆ:
 • ವರದಿಯನ್ನು ನಿಂದನಗೆ ಗುರಿಯಾದವರು ಅಥವಾ ದಾರಿಹೋಕರು ದಾಖಲಿಸಿದ್ದಾರೆಯೇ;
 • ವರ್ತನೆಯು ಸುದ್ದಿಯೋಗ್ಯವಾದ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಒಳಪಟ್ಟಿದೆ.


ಹಿಂಸೆ ಮತ್ತು ದೈಹಿಕ ಹಾನಿ

ಹಿಂಸೆ: ನೀವು ನಿರ್ದಿಷ್ಟ ಹಿಂಸೆಯ ಭೀತಿ ಒಡ್ಡಬಾರದು ಅಥವಾ ವ್ಯಕ್ತಿ ಅಥವಾ ವ್ಯಕ್ತಿಗಳ ಸಮೂಹಕ್ಕೆ ಗಂಭೀರ ದೈಹಿಕ ಹಾನಿ, ಸಾವು ಅಥವಾ ರೋಗವನ್ನು ಬಯಸಬಾರದು. ಬೆದರಿಕೆ ಅಥವಾ ಭಯೋತ್ಫಾದನೆ ಉತ್ತೇಜನವೂ ಇದು ಒಳಗೊಂಡಿದೆ, ಆದರೆ ಇದಕ್ಕೆ ಸೀಮಿತವಾಗಿಲ್ಲ. ತಮ್ಮ ಉದ್ದೇಶಕ್ಕಾಗಿ ನಾಗರಿಕರ ವಿರುದ್ಧ ಹಿಂಸೆಯನ್ನು ತಮ್ಮ ಹೇಳಿಕೆಯಿಂದಾಗಲೀ ಅಥವಾ ಚಟುವಟಿಕೆಯಿಂದಾಗಲೀ ಪ್ಲಾಟ್​ಫಾರಂನಲ್ಲಿ ಅಥವಾ ಹೊರಗೆ ಪ್ರಚೋದಿಸುವ ಅಥವಾ ಬಳಸುವ ಸಂಸ್ಥೆಗಳೊಂದಿಗೆ ನೀವು ಸಂಬಂಧ ಹೊಂದಿರಬಾರದು.

ಆತ್ಮಹತ್ಯೆ ಅಥವಾ ಸ್ವಯಂ ಹಾನಿ: ನೀವು ಆತ್ಮಹತ್ಯೆ ಅಥವಾ ಸ್ವಯಂ ಹಾನಿಯನ್ನು ಪ್ರಚೋದಿಸಬಾರದು ಅಥವಾ ಪ್ರೋತ್ಸಾಹಿಸಬಾರದು. ವ್ಯಕ್ತಿಯು ಆತ್ಮಹತ್ಯೆ ಅಥವಾ ಸ್ವಯಂಹಾನಿಯ ಬೆದರಿಕೆ ಒಡ್ಡುತ್ತಿದ್ದಾರೆ ಎಂಬ ವರದಿಗಳನ್ನು ನಾವು ಸ್ವೀಕರಿಸಿದಾಗ, ಅವರಿಗೆ ನೆರವಾಗಲು ವ್ಯಕ್ತಿಯನ್ನು ಸಂಪರ್ಕಿಸುವುದು ಮತ್ತು ನಮ್ಮ ಮಾನಸಿಕ ಆರೋಗ್ಯ ಪಾಲುದಾರರ ಸಂಪರ್ಕ ಮಾಹಿತಿಯಂತಹ ಸಂಪನ್ಮೂಲಗಳನ್ನು ಒದಗಿಸುವಂತಹ ಹಲವು ಕ್ರಮಗಳನ್ನು ನಾವು ತೆಗೆದುಕೊಳ್ಳಬಹುದು.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನು ನೀವು ಪ್ರೋತ್ಸಾಹಿಸಬಾರದು. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಶೂನ್ಯ ಸಹಿಷ್ಣುತೆ ನೀತಿ ಬಗ್ಗೆ ಇನ್ನಷ್ಟು ತಿಳಿಯಿರಿ


ದೌರ್ಜನ್ಯ ಮತ್ತು ದ್ವೇಷಯುತ ಸದಾಚಾರ

ದೌರ್ಜನ್ಯ: ಇತರರ ಗುರಿಪಡಿಸಿದ ದೌರ್ಜನ್ಯವೆಸಗುವಲ್ಲಿ ನೀವು ತೊಡಗಿಸಿಕೊಳ್ಳಬಾರದು ಅಥವಾ ಹೀಗೆ ಮಾಡುವಂತೆ ಇತರರನ್ನು ಪ್ರಚೋದಿಸಬಾರದು. ದೌರ್ಜನ್ಯಕಾರಿ ವರ್ತನೆಯನ್ನು ಬೆದರಿಕೆ ಒಡ್ಡುವುದು, ದೌರ್ಜನ್ಯ ಅಥವಾ ಇತರರ ಧ್ವನಿಯನ್ನು ಉಡುಗಿಸುವ ಪ್ರಯತ್ನ ಎಂದು ಪರಿಗಣಿಸುತ್ತೇವೆ.

ಅನಪೇಕ್ಷಿತ ಲೈಂಗಿಕ ಕೃತ್ಯಗಳು: ಅನಪೇಕ್ಷಿತ ಲೈಂಗಿಕ ಕಂಟೆಂಟ್ ಕಳುಹಿಸುವ, ಲೈಂಗಿಕವಾಗಿ ದೌರ್ಜನ್ಯಕಾರಿ ರೀತಿಯಲ್ಲಿ ಅವರನ್ನು ವಿಷದೀಕರಿಸುವುದು ಅಥವಾ ಲೈಂಗಿಕ ದುರ್ವರ್ತನೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಇತರರನ್ನು ನೀವು ದೌರ್ಜನ್ಯವೆಸಗುವಂತಿಲ್ಲ.

ದ್ವೇಷಪೂರಿತ ನಡವಳಿಕೆ: ಜಾತಿ, ಜನಾಂಗ, ರಾಷ್ಟ್ರೀಯ ಮೂಲ, ಲೈಂಗಿಕ ಆದ್ಯತೆ, ಲಿಂಗ, ಲಿಂಗ ಗುರುತು, ಧಾರ್ಮಿಕ ಸಂಬಂಧ, ವಯಸ್ಸು, ಅಂಗವೈಕಲ್ಯ ಅಥವಾ ಗಂಭೀರ ರೋಗದ ಆಧಾರದಲ್ಲಿ ಇತರ ವ್ಯಕ್ತಿಗಳ ವಿರುದ್ಧ ಹಿಂಸೆ, ಭೀತಿ ಅಥವಾ ದೌರ್ಜನ್ಯವನ್ನು ನೀವು ಪ್ರೋತ್ಸಾಹಿಸುವಂತಿಲ್ಲ. ನಮ್ಮ ದ್ವೇಷಯುತ ವರ್ತನೆ ನೀತಿಯ ಬಗ್ಗೆ ಇನ್ನಷ್ಟು ಓದಿ.

ದ್ವೇಷಯುತ ಚಿತ್ರ ಮತ್ತು ಪ್ರದರ್ಶನ ಹೆಸರುಗಳು: ನಿಮ್ಮ ಪ್ರೊಫೈಲ್ ಚಿತ್ರ ಅಥವಾ ಪ್ರೊಫೈಲ್ ಶೀರ್ಷಿಕೆಯಲ್ಲಿ ದ್ವೇಷಯುತ ಚಿತ್ರಗಳು ಅಥವಾ ಚಿಹ್ನೆಗಳನ್ನು ನೀವು ಬಳಸಬಾರದು. ನೀವು ನಿಮ್ಮ ಬಳಕೆದಾರರ ಹೆಸರು, ಪ್ರದರ್ಶನ ಹೆಸರು ಅಥವಾ ಪ್ರೊಫೈಲ್ ಸ್ವವಿವರವನ್ನು ದೌರ್ಜನ್ಯಕಾರಿ ವರ್ತನೆಗಳಾದ ಗುರಿಪಡಿಸಿದ ದೌರ್ಜನ್ಯ ಅಥವಾ ವ್ಯಕ್ತಿ, ಸಮೂಹ ಅಥವಾ ಸಂರಕ್ಷಿತ ವಿಭಾಗದ ಕಡೆಗೆ ದ್ವೇಷವನ್ನು ಅಭಿವ್ಯಕ್ತಪಡಿಸುವುದಕ್ಕಾಗಿ ಬಳಸಬಾರದು. 


ಖಾಸಗಿ ಮಾಹಿತಿ ಮತ್ತು ಅನ್ಯೋನ್ಯತೆ ಮಾಧ್ಯಮ

ಖಾಸಗಿ ಮಾಹಿತಿ: ಇತರ ವ್ಯಕ್ತಿಗಳ ಖಾಸಗಿ ಮಾಹಿತಿಯನ್ನು ಅವರ ಅಭಿವ್ಯಕ್ತ ದೃಢೀಕರಣ ಮತ್ತು ಅನುಮತಿ ಇಲ್ಲದೆಯೇ ಪ್ರಕಟಿಸಬಾರದು ಅಥವಾ ಪೋಸ್ಟ್ ಮಾಡಬಾರದು. ಖಾಸಗಿ ಮಾಹಿತಿಯ ವಿವರಣೆಗಳು ಸ್ಥಳೀಯ ಕಾನೂನುಗಳನ್ನು ಅವಲಂಬಿಸಿ ಬದಲಾಗಬಹುದು. ನಮ್ಮ ಖಾಸಗಿ ಮಾಹಿತಿ ನೀತಿಯ ಬಗ್ಗೆ ಇನ್ನಷ್ಟನ್ನು ಓದಿರಿ.

ಅನ್ಯೋನ್ಯ ಮಾಧ್ಯಮ: ಇತರರ ಸಮ್ಮತಿ ಇಲ್ಲದೇ ಉತ್ಪಾದಿಸಿದ ಅಥವಾ ವಿತರಿಸಿದ ಅನ್ಯೋನ್ಯ ವೀಡಿಯೋಗಳು ಅಥವಾ ಫೋಟೋಗಳನ್ನು ನೀವು ಪೋಸ್ಟ್ ಮಾಡುವಂತಿಲ್ಲ ಅಥವಾ ಹಂಚಿಕೊಳ್ಳುವಂತಿಲ್ಲ. ಲೈಂಗಿಕ ಹಿಂಸೆ ಮತ್ತು/ಅಥವಾ ಆಕ್ರಮಣವನ್ನು ವರ್ಣಿಸುವ ಮಾಧ್ಯವನ್ನು ಸಹ ಅನುಮತಿಸಲಾಗುವುದಿಲ್ಲ. ಗಮನಿಸಿ: ಸಂವಹನವು ಸಮ್ಮತವಾಗಿದೆ ಎಂಬ ಕುರಿತು ಸ್ಪಷ್ಟ ಸಂದರ್ಭವಿದ್ದರೆ ಸೀಮಿತ ವಿನಾಯಿತಿಗಳು ಅನ್ವಯಿಸಬಹುದು. Twitter ನಲ್ಲಿ ಅನ್ಯೋನ್ಯ ಮಾಧ್ಯಮದ ಬಗ್ಗೆ ಇನ್ನಷ್ಟು ಓದಿ.

ಬಹಿರಂಗ / ಹ್ಯಾಕ್ ಬೆದರಿಕೆ: ಇತರರ ಖಾಸಗಿ ಮಾಹಿತಿ ಅಥವಾ ಅನ್ಯೋನ್ಯ ಮಾಧ್ಯಮವನ್ನು ಬಹಿರಂಗಗೊಳಿಸುವ ಬೆದರಿಕೆಯನ್ನು ನೀವು ಒಡ್ಡುವಂತಿಲ್ಲ. ಇತರರ ಡಿಜಿಟಲ್ ಮಾಹಿತಿಯನ್ನು ನೀವು ಹ್ಯಾಕ್ ಅಥವಾ ಬಹಿರಂಗಗೊಳಿಸುವ ಬೆದರಿಕೆ ಒಡ್ಡಬಾರದು ಅಥವಾ ಇತರರಿಗೆ ಹೀಗೆ ಮಾಡುವಂತೆ ಪ್ರೋತ್ಸಾಹಿಸಲು ಪ್ರಯತ್ನಿಸಬಾರದು (ಉದಾ., ಇಂತಹ ಕ್ರಮಗಳ ಮೇಲೆ ಬೌಂಟಿ ಅಥವಾ ಪುರಸ್ಕಾರವನ್ನು ನಿಗದಿಸುವ ಮೂಲಕ).


ಸೋಗುಹಾಕುವುದು

ಇತರರನ್ನು ತಪ್ಪುದಾರಿಗೆಳೆಯುವ, ಗೊಂದಲಕ್ಕೆಡೆ ಮಾಡುವ ಅಥವಾ ವಂಚಿಸುವ ರೀತಿ ವ್ಯಕ್ತಿ, ಸಮೂಹ ಅಥವಾ ಸಂಸ್ಥೆಗಳಂತೆ ನೀವು ಸೋಗುಹಾಕಬಾರದು. ಆದಾಗ್ಯೂ ನೀವು ಪರೋಡಿ, ಅಭಿಮಾನಿ, ಕಾಮೆಂಟರಿ ಅಥವಾ ನ್ಯೂಸ್​ಫೀಡ್ ಖಾತೆಗಳನ್ನು ನಿರ್ವಹಿಸಬಹುದಾಗಿದ್ದರೂ, ಸ್ಪ್ಯಾಮ್ ಮಾಡುವ ಅಥವಾ ದೌರ್ಜನ್ಯ ವರ್ತನೆಯಲ್ಲಿ ತೊಡಗುವ ಉದ್ದೇಶದಿಂದ ಹೀಗೆ ಮಾಡಬಾರದು. ಸೋಗುಹಾಕುವುದರ ನೀತಿಯ ಬಗ್ಗೆ ಇನ್ನಷ್ಟನ್ನು ಓದಿ.

ಸ್ಪ್ಯಾಮ್ ಮತ್ತು ಭದ್ರತೆ

Twitter ನಲ್ಲಿ ತಾಂತ್ರಿಕ ದೌರ್ಜನ್ಯ ಮತ್ತು ಸ್ಪ್ಯಾಮ್​ನಿಂದ ಜನರನ್ನು ರಕ್ಷಿಸಲು ನಾವು ಪ್ರಯತ್ನಿಸುತ್ತೇವೆ.

Twitter ನಲ್ಲಿ ಸುರಕ್ಷಿತ ಮತ್ತು ಸ್ಥಿರ ಪರಿಸರವನ್ನು ಪ್ರೋತ್ಸಾಹಿಸಲು, Twitter ಅನ್ನು ಬಳಸುತ್ತಿರುವಾಗ ಅಥವಾ ಪ್ರವೇಶಾವಕಾಶ ಹೊಂದಿರವಾಗ ಈ ಮುಂದಿನ ಯಾವುದನ್ನೇ ಮಾಡಬಾರದು ಅಥವಾ ಮಾಡಲು ಪ್ರಯತ್ನಿಸಬಾರದು:

 • Twitter ನ ಸಾರ್ವಜನಿಕವಲ್ಲದ ಪ್ರದೇಶಗಳು, Twitter ಕಂಪ್ಯೂಟರ್ ಸಿಸ್ಟಂಗಳು ಅಥವಾ Twitter ಪೂರೈಕೆದಾರರ ತಾಂತ್ರಿಕ ವಿಲೇವಾರಿ ವ್ಯವಸ್ಥೆಗಳ (Twitter ಬಗ್ ಬೌಂಟಿ ಪ್ರೋಗ್ರಾಮ್​ನಿಂದ ಅಭಿವ್ಯಕ್ತಿಪೂರ್ವಕವಾಗಿ ಅನುಮತಿಸದ ಹೊರತು) ಪ್ರವೇಶಿಸುವುದು, ಬದಲಿಸುವುದು.
 • ಯಾವುದೇ ಸಿಸ್ಟಂ ಅಥವಾ ನೆಟ್​ವರ್ಕ್​ನ ಭೇದ್ಯತೆಯ ತನಿಖೆ, ಸ್ಕ್ಯಾನ್ ಅಥವಾ ಪರೀಕ್ಷೆ ಮಾಡುವುದು ಅಥವಾ ಯಾವುದೇ ಭದ್ರತೆ ಅಥವಾ ದೃಢೀಕರಣ ಕ್ರಮಗಳನ್ನು ಉಲ್ಲಂಘಿಸುವುದು ಅಥವಾ ವಂಚಿಸುವುದು (Twitter ಬಗ್ ಬೌಂಟಿ ಪ್ರೋಗ್ರಾಮ್​ನಿಂದ ಅಭಿವ್ಯಕ್ತಿಪೂರ್ವಕವಾಗಿ ಅನುಮತಿಸದ ಹೊರತು)
 • Twitter ಜೊತೆಗೆ ಪ್ರತ್ಯೇಕ ಕರಾರಿನ ಅಡಿಯಲ್ಲಿ ವಿಶೇಷವಾಗಿ ಅನುಮತಿಸದ ಹೊರತಾಗಿ Twitter ಒದಗಿಸಿದ ಪ್ರಕಟಿತ ಇಂಟರ್​ಫೇಸ್ (ಮತ್ತು ಅನ್ವಯಿಸುವ ನಿಯಮ ಮತ್ತು ಷರತ್ತುಗಳಿಗೆ ಅನ್ವಯಿಸುವಂತೆ) ಸದ್ಯ ಲಭ್ಯವಿರುವ ರೀತಿಯ ಹೊರತಾಗಿ ಯಾವುದೇ ರೀತಿಯಲ್ಲಿ Twitter ಪ್ರವೇಶ ಅಥವಾ ಹುಡುಕಾಟ ಅಥವಾ ಪ್ರವೇಶ ಅಥವಾ ಹುಡುಕಾಟಕ್ಕೆ ಪ್ರಯತ್ನ (ಸ್ವಯಂಚಾಲಿತ ಅಥವಾ ಇತರೆ) robots.txt ಫೈಲ್​ನಲ್ಲಿನ ಅನುಮತಿಗೆ ಅನುಗುಣವಾಗಿ ಮಾಡಿದ್ದರೆ Twitter ನುಸುಳುವುದು ಅನುಮತಿಸಲ್ಪಟ್ಟಿರುತ್ತದೆ; ಆದಾಗ್ಯೂ, ನಮ್ಮ ಪೂರ್ವ ಅನುಮತಿ ಇಲ್ಲದೇ Twitter ನುಸುಳುವುದು ಅಭಿವ್ಯಕ್ತಿಪೂರ್ವಕವಾಗಿ ನಿಷೇಧಿಸಲಾಗಿದೆ.
 • ಇಮೇಲ್ ಅಥವಾ ಪೋಸ್ಟಿಂಗ್​ನಲ್ಲಿ ಯಾವುದೇ ಟಿಸಿಪಿ/ಐಪಿ ಪ್ಯಾಕೆಟ್ ಹೆಡರ್ ಅಥವಾ ಹೆಡರ್ ಮಾಹಿತಿಯನ್ನು ನಕಲು ಮಾಡುವುದು ಅಥವಾ ಬದಲಿಸಿದ, ದುರುದ್ದೇಶಪೂರಿತ ಅಥವಾ ತಪ್ಪು ಮೂಲ ಗುರುತಿಸುವ ಮಾಹಿತಿಯನ್ನು ಕಳುಹಿಸಲು ಯಾವುದೇ ರೀತಿಯಲ್ಲಿ Twitter ಬಳಸುವುದು
 • ಯಾವುದೇ ಬಳಕೆದಾರ, ಹೋಸ್ಟ್ ಅಥವಾ ನೆಟ್​ವರ್ಕ್ ಮಧ್ಯಪ್ರವೇಶಿಸುವುದು ಅಥವಾ ಅಡ್ಡಿಪಡಿಸುವುದು ಹಾಗೂ ವೈರಸ್ ಕಳುಹಿಸುವುದು, ಓವರ್​ಲೋಡ್ ಮಾಡುವುದು, ಫ್ಲಡ್ ಮಾಡುವುದು, ಸ್ಪ್ಯಾಮ್ ಮಾಡುವುದು, Twitter ಸೇವೆಗಳಿಗೆ ಮೇಲ್ ಬಾಂಬಿಂಗ್ ಅಥವಾ Twitter ಗೆ ಮಧ್ಯಪ್ರವೇಶಿಸುವಂತೆ ಅಥವಾ ಅನಗತ್ಯ ಹೊರೆ ಉಂಟು ಮಾಡುವಂತೆ ಕಂಟೆಂಟ್ ರಚಿಸುವುದು.

ಈ ಮುಂದಿನ ಚಟುವಟಿಕೆಯಲ್ಲಿ ತೊಡಗಿರುವ ಯಾವುದೇ ಖಾತೆಗಳು ತಾತ್ಕಾಲಿಕವಾಗಿ ಲಾಕ್ ಆಗಬಹುದು ಅಥವಾ ಶಾಶ್ವತ ಅಮಾನತಿಗೆ ಕಾರಣವಾಗಬಹುದು:

 • ಮಾಲ್ವೇರ್​/ಫಿಶಿಂಗ್: ಇತರ ವ್ಯಕ್ತಿಯ ಬ್ರೌಸರ್ ಅಥವಾ ಕಂಪ್ಯೂಟರ್ ಅನ್ನು ಹಾಳು ಮಾಡುವ ಅಥವಾ ವಿಚ್ಛಿದ್ರಗೊಳಿಸುವ ಉದ್ದೇಶದಿಂದ ಅಥವಾ ವ್ಯಕ್ತಿಯ ಗೌಪ್ಯತೆಗೆ ರಾಜಿ ಮಾಡುವ ಉದ್ದೇಶದಿಂದ ನೀವು ದುರುದ್ದೇಶಕರ ಕಂಟೆಂಟ್ ಅನ್ನು ನೀವು ಪ್ರಕಟಿಸಬಾರದು ಅಥವಾ ಲಿಂಕ್ ಮಾಡಬಾರದು. 
 • ನಕಲಿ ಖಾತೆಗಳು: ನೀವು ನಕಲಿ ಅಥವಾ ತಪ್ಪುದಾರಿಗೆಳೆಯುವ ಖಾತೆಗಳನ್ನು ನೋಂದಾಯಿಸಬಾರದು ಅಥವಾ ರಚಿಸಬಾರದು. Twitter ನಲ್ಲಿ ನೀವು ಗುಪ್ತನಾಮ ಬಳಸಬಹುದು ಅಥವಾ ಪರೋಡಿ, ಕಾಮೆಂಟರಿ ಅಥವಾ ಫ್ಯಾಕ್ ಖಾತೆಯನ್ನು ಬಳಸಬಹುದು, ಆದರೆ Twitter ನಲ್ಲಿ ಸಂವಾದವನ್ನು ದುರುಪಯೋಗಪಡಿಸಿಕೊಳ್ಳುವುದೂ ಸೇರಿದಂತೆ ಸ್ಪ್ಯಾಮ್, ದೌರ್ಜನ್ಯ ಅಥವಾ ದುರುದ್ದೇಶಕಾರಿ ವರ್ತನೆಯಲ್ಲಿ ತೊಡಗಲು ತಪ್ಪು ಮಾಹಿತಿಗೆಳೆಯುವ ಖಾತೆ ಮಾಹಿತಿಯನ್ನು ಬಳಸಬಾರದು. ಖಾತೆ ನಕಲಿಯಾಗಿದೆಯೇ ಎಂದು ಗುರುತಿಸಲು ನಾವು ತೆಗೆದುಕೊಳ್ಳುವ ಕೆಲವು ಅಂಶಗಳೆಂದರೆ:
  • ಸಂಗ್ರಹ ಅಥವಾ ಕದ್ದ ಅವತಾರ್ ಫೋಟೋಗಳ ಬಳಕೆ
  • ಕದ್ದ ಅಥವಾ ನಕಲು ಮಾಡಿದ ಪ್ರೊಫೈಲ್ ಸ್ವವಿವರ ಬಳಕೆ
  • ಪ್ರೊಫೈಲ್ ಸ್ಥಳವೂ ಸೇರಿದಂತೆ ತಪ್ಪುದಾರಿಗೆಳೆಯುವ ಪ್ರೊಫೈಲ್ ಮಾಹಿತಿಯ ಬಳಕೆ
 • ಸ್ಪ್ಯಾಮ್: ಇತರರನ್ನು ಸ್ಪ್ಯಾಮ್ ಮಾಡುವ ಉದ್ದೇಶಕ್ಕೆ Twitter ಸೇವೆಗಳನ್ನು ನೀವು ಬಳಸಬಾರದು. ಸ್ಪ್ಯಾಮ್ ಅನ್ನು ಸಾಮಾನ್ಯವಾಗಿ ಸಮೂಹ ಅಥವಾ ವ್ಯಗ್ರ ಚಟುವಟಿಕೆ ಎಂದು Twitter ನಲ್ಲಿ ವಿವರಿಸಲಾಗಿದ್ದು, ಇದು ಸಂಬಂಧಿಸಿದಲ್ಲದ ಖಾತೆಗಳು, ಉತ್ಪನ್ನಗಳು, ಸೇವೆಗಳು ಅಥವಾ ಉಪಕ್ರಮಗಳಿಗೆ ಗಮನ ಸೆಳೆಯುವ ಅಥವಾ ದಟ್ಟಣೆಯನ್ನು ಆಕರ್ಷಿಸುವ ಅನುಭವವನ್ನು ಬಳಕೆದಾರರಿಗೆ ನೀಡುವುದು ಅಥವಾ Twitter ಅನ್ನು ದುರ್ಬಳಕೆ ಮಾಡುವುದು ಅಥವಾ ವ್ಯತ್ಯಯಗೊಳಿಸುವ ಪ್ರಯತ್ನಗಳನ್ನು ಒಳಗೊಂಡಿದೆ. ಸ್ಪ್ಯಾಮ್ ಎಂದು ಗುರುತಿಸುವಾಗ ನಾವು ಪರಿಗಣಿಸುವ ಕೆಲವು ಅಂಶಗಳು ಈ ಕೆಳಗಿನಂತಿವೆ:
  • ಅಲ್ಪಾವಧಿಯಲ್ಲಿ ನೀವು ತುಂಬಾ ಸಂಖ್ಯೆಯ ಖಾತೆಗಳನ್ನು ವಿಶೇಷವಾಗಿ ಸ್ವಯಂಚಾಲಿತ ವಿಧಾನದಲ್ಲಿ ಬೆಂಬಲಿಸಿದರೆ ಮತ್ತು/ಅಥವಾ ಬೆಂಬಲ ರದ್ದು ಮಾಡಿದರೆ (ತೀವ್ರ ಬೆಂಬಲಿಸುವ ಅಥವಾ ಬೆಂಬಲದಾರರ ಬದಲಾವಣೆ);
  • ಕಾಮೆಂಟರಿ ಇಲ್ಲದೇ ಹಂಚಿಕೊಂಡ ಲಿಂಕ್​ಗಳನ್ನು ನಿಮ್ಮ ಟ್ವೀಟ್​ಗಳು ಅಥವಾ ನೇರ ಸಂದೇಶಗಳನ್ನು ಒಳಗೊಂಡಿದ್ದರೆ;
  • ನಿಮ್ಮ ಖಾತೆಯಿಂದ ಅಧಿಕ ಪ್ರಮಾಣದ ಗುರಿಪಡಿಸಿಲ್ಲದ, ಅನಪೇಕ್ಷಿತ ಅಥವಾ ನಕಲು ಕಂಟೆಂಟ್ ಅಥವಾ ತೊಡಗಿಸಿಕೊಳ್ಳುವಿಕೆಯ ಪ್ರತಿಕ್ರಿಯೆಯಲ್ಲಿ ನಿಮ್ಮನ್ನು ಭಾರಿ ಪ್ರಮಾಣದ ಜನರು ನಿರ್ಬಂಧಿಸಿದರೆ;
  • ನಿಮ್ಮ ವಿರುದ್ಧ ಭಾರಿ ಪ್ರಮಾಣದ ಸ್ಪ್ಯಾಮ್ ದೂರುಗಳು ದಾಖಲಾದರೆ;
  • ನೀವು ನಕಲಿ ಅಥವಾ ಹಲವು ಖಾತೆಗಳಿಂದ ಒಂದೇ ರೀತಿಯ ಕಂಟೆಂಟ್, ಪ್ರತಿಕ್ರಿಯೆ ಅಥವಾ ನಮೂದುಗಳನ್ನು ಮಾಡಿದ್ದರೆ ಅಥವಾ ಒಂದು ಖಾತೆಯಿಂದ ಹಲವು ನಕಲಿ ಅಪ್​ಡೇಟ್​ಗಳು ಕಂಡುಬಂದರೆ ಅಥವಾ ನಕಲಿ ಅಥವಾ ಗಮನಾರ್ಹವಾಗಿ ಒಂದೇ ರೀತಿಯ ಖಾತೆಗಳನ್ನು ರಚಿಸಿದರೆ;
  • ಸಂಬಂಧಿಸಿಲ್ಲದ ಖಾತೆಗಳು, ಉತ್ಪನ್ನಗಳು, ಸೇವೆಗಳು ಅಥವಾ ಉಪಕ್ರಮಗಳಿಗೆ ಗಮನ ಸೆಳೆಯಲು ಅಥವಾ ದಟ್ಟಣೆಯನ್ನು ಆಕರ್ಷಿಸಲು ವಿಷಯವನ್ನು ಬೇರೆಡೆ ಸೆಳೆಯುವ ಅಥವಾ ದುರ್ಬಳಕೆ ಮಾಡುವ ಉದ್ದೇಶದೊಂದಿಗೆ ಒಂದು ಟ್ರೆಂಡಿಂಗ್ ಅಥವಾ ಜನಪ್ರಿಯ ವಿಷಯಕ್ಕೆ ಹಲವು ಅಪ್​ಡೇಟ್​ಗಳನ್ನು ಪೋಸ್ಟ್ ಮಾಡಿದರೆ;
  • ಭಾರಿ ಸಂಖ್ಯೆಯ ಅನಪೇಕ್ಷಿತ ಪ್ರತಿಕ್ರಿಯೆಗಳು ಅಥವಾ ನಮೂದುಗಳನ್ನು ಕಳುಹಿಸಿದರೆ;
  • ಸಮೂಹ ಅಥವಾ ವ್ಯಗ್ರ ರೀತಿಯಲ್ಲಿ ಪಟ್ಟಿಗಳಿಗೆ ಬಳಕೆದಾರರನ್ನು ಸೇರಿಸಿದರೆ;
  • ಸಂಬಂಧಿಸಿಲ್ಲದ ಖಾತೆಗಳು, ಉತ್ಪನ್ನಗಳು, ಸೇವೆಗಳು ಅಥವಾ ಉಪಕ್ರಮಗಳಿಗೆ ದಟ್ಟಣೆ ಅಥವಾ ಗಮನ ಸೆಳೆಯುವ ಉದ್ದೇಶಕ್ಕೆ ಟ್ವೀಟ್​ಗಳು (ಉದಾ., ಲೈಕ್​ಗಳು, ರಿಟ್ವೀಟ್​ಗಳು, ಇತ್ಯಾದಿ) ಅಥವಾ ಬಳಕೆದಾರರನ್ನು (ಉದಾ., ಫಾಲೋ ಮಾಡುವುದು, ಪಟ್ಟಿಗಳು ಅಥವಾ ಕ್ಷಣಗಳನ್ನು ಸೇರಿಸುವುದು ಇತ್ಯಾದಿ) ಯಾದೃಚ್ಛಿಕವಾಗಿ ಅಥವಾ ವ್ಯಗ್ರವಾಗಿ ತೊಡಗಿಸಿದರೆ;
  • ನಿಮ್ಮದೇ ಎಂಬಂತೆ ಇತರ ವ್ಯಕ್ತಿಗಳ ಖಾತೆ ಮಾಹಿತಿಯನ್ನು ಪದೇ ಪದೆ ಪೋಸ್ಟ್ ಮಾಡಿದರೆ (ಉದಾ., ಸ್ವವಿವರ, ಟ್ವೀಟ್​ಗಳು, ಪ್ರೊಫೈಲ್ ಯುಆರ್​ಎಲ್, ಇತ್ಯಾದಿ);
  • ನೀವು ತಪ್ಪುದಾರಿಗೆಳೆಯುವ, ದುರುದ್ದೇಶಪೂರಿತ ಅಥವಾ ಮೋಸದ ಲಿಂಕ್​ಗಳನ್ನು ಪೋಸ್ಟ್ ಮಾಡಿದರೆ (ಉದಾ., ಅಫಿಲಿಯೇಟ್ ಲಿಂಕ್​ಗಳು, ಮಾಲ್ವೇರ್​/ಕ್ಲಿಕ್​ಜಾಕಿಂಗ್ ಪುಟಗಳಿಗೆ ಲಿಂಕ್​ಗಳು ಇತ್ಯಾದಿ);
  • ಖಾತೆ ಸಂವಹನಗಳನ್ನು ಮಾರಾಟ, ಖರೀದಿ ಮಾಡಿದರೆ ಅಥವಾ ಕೃತಕವಾಗಿ ಹೆಚ್ಚಳ ಮಾಡಲು ಪ್ರಯತ್ನಿಸಿದರೆ (ಫಾಲೋವರ್​ಗಳು, ರಿಟ್ವೀಟ್​ಗಳು, ಲೈಕ್​ಗಳು, ಇತ್ಯಾದಿ); ಮತ್ತು
  • ನಿಮಗೆ ಹೆಚ್ಚು ಫಾಲೋವರುಗಳು, ರಿಟ್ವೀಟ್​ಗಳು ಅಥವಾ ಲೈಕ್​ಗಳನ್ನು ನೀಡುವ ಕ್ಲೇಮ್ ಮಾಡುವ ತೃತೀಯ ಪಕ್ಷದ ಸೇವೆಗಳು ಅಥವಾ ಅಪ್ಲಿಕೇಶನ್​ಗಳನ್ನು ನೀವು ಬಳಸಿದರೆ ಅಥವಾ ಪ್ರಚಾರ ಮಾಡಿದರೆ (ಫಾಲೋವರ್ ಟ್ರೇನ್​ಗಳು, “ತ್ವರಿತವಾಗಿ ಹೆಚ್ಚು ಫಾಲೋವರ್​ಗಳು” ಎಂದು ಭರವಸೆ ನೀಡುವ ಸೈಟ್​ಗಳು ಅಥವಾ ನಿಮ್ಮ ಖಾತೆ ಅಥವಾ ಟ್ವೀಟ್​ಗೆ ಸ್ವಯಂಚಾಲಿತವಾಗಿ ಫಾಲೋವರ್​ಗಳು ಅಥವಾ ತೊಡಗಿಸಿಕೊಳ್ಳುವಿಕೆಯನ್ನು ಸೇರಿಸುವ ಕೊಡುಗೆ ನೀಡುವ ಯಾವುದೇ ಇತರ ಸೈಟ್).

ಈ ನಿರ್ದಿಷ್ಟ ಖಾತೆ ವರ್ತನೆಗಳಿಗೆ ನಿಯಮಗಳು ಹೇಗೆ ಅನ್ವಯವಾಗುತ್ತವೆ ಎಂಬ ವಿವರವಾದ ಮಾಹಿತಿಗಾಗಿ ನಿಯಮಗಳನ್ನು ಅನುಸರಿಸುವುದು ಮತ್ತು ಉತ್ತಮ ಅಭ್ಯಾಸಗಳು ಹಾಗೂ ಸ್ವಯಂಚಾಲನೆ ನಿಯಮಗಳು ಮತ್ತು ಉತ್ತಮ ಅಭ್ಯಾಸಗಳು ಎಂಬ ಬೆಂಬಲ ಲೇಖನಗಳನ್ನು ನೋಡಿ.

ಅಮಾನತುಗೊಂಡ ಖಾತೆಯನ್ನು ನಕಲು ಮಾಡಲು ಅಥವಾ ಬದಲಿಸಲು ರಚಿಸಲಾದ ಖಾತೆಯನ್ನು ಶಾಶ್ವತವಾಗಿ ಅಮಾನತು ಮಾಡಬಹುದಾಗಿದೆ. Twitter ನಿಯಮಗಳನ್ನು ಉಲ್ಲಂಘಿಸಿದೆ ಎಂದು Twitter ಗೆ ವಿಶ್ವಾಸಾರ್ಹವಾಗಿ ತಿಳಿದುಬರುವ ಖಾತೆಗಳನ್ನೂ ನಾವು ತೆಗೆದುಹಾಕಬಹುದು.

ಕಂಟೆಂಟ್ ಗೋಚರತೆ

ತನಿಖೆಯಲ್ಲಿರುವ ಖಾತೆ ಅಥವಾ ಈ ನಿಯಮಗಳ ಉಲ್ಲಂಘನೆಯಲ್ಲಿ ಕಂಟೆಂಟ್ ಹಂಚಿಕೊಳ್ಳಲಾಗಿದೆ ಎಂದು ಗುರುತಿಸಲ್ಪಟ್ಟ ಖಾತೆ ಅಥವಾ ಟ್ವೀಟ್ ಗೋಚರತೆಯು ಹುಡುಕಾಟ ಸೇರಿದಂತೆ Twitter ನ ವಿವಿಧ ಭಾಗಗಳಲ್ಲಿ ಮಿತಿಗೆ ಒಳಪಟ್ಟಿರುತ್ತದೆ. Twitter ನಲ್ಲಿ ಕಂಟೆಂಟ್ ಮಿತಿಗೊಳಿಸಬಹುದಾದ ಹೆಚ್ಚು ಸನ್ನಿವೇಶಗಳ ಬಗ್ಗೆ ತಿಳಿಯಲು, ಹುಡುಕಾಟ ನಿಯಮಗಳು ಮತ್ತು ನಿರ್ಬಂಧಗಳು ಎಂಬ ನಮ್ಮ ಬೆಂಬಲ ಲೇಖನವನ್ನು ದಯವಿಟ್ಟು ಓದಿ.

Bookmark or share this article