goglobalwithtwitterbanner

ನಿಂದನೀಯ ವರ್ತನೆ

Twitter ನಿಯಮಗಳು: ಇತರರ ಗುರಿಪಡಿಸಿದ ದೌರ್ಜನ್ಯವೆಸಗುವಲ್ಲಿ ನೀವು ತೊಡಗಿಸಿಕೊಳ್ಳಬಾರದು ಅಥವಾ ಹೀಗೆ ಮಾಡುವಂತೆ ಇತರರನ್ನು ಪ್ರಚೋದಿಸಬಾರದು. ದೌರ್ಜನ್ಯಕಾರಿ ವರ್ತನೆಯನ್ನು ಬೆದರಿಕೆ ಒಡ್ಡುವುದು, ದೌರ್ಜನ್ಯ ಅಥವಾ ಇತರರ ಧ್ವನಿಯನ್ನು ಉಡುಗಿಸುವ ಪ್ರಯತ್ನ ಎಂದು ಪರಿಗಣಿಸುತ್ತೇವೆ. 

ತಾರ್ಕಿಕ ವಿವರಣೆ

Twitter ನಲ್ಲಿ, ನಿಮ್ಮ ವಿಶಿಷ್ಟ ದೃಷ್ಟಿಕೋನವನ್ನು ಅಭಿವ್ಯಕ್ತಿಗೊಳಿಸಲು ನೀವು ಮುಕ್ತವಾಗಿರುವ ಭಾವನೆ ಹೊಂದಬೇಕು. ನಾವು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮುಕ್ತ ಸಂಭಾಷಣೆಯಲ್ಲಿ ವಿಶ್ವಾಸ ಹೊಂದಿದ್ದೇವೆ, ಆದರೆ ಜನರು ಮಾತನಾಡಲು ಹೆದರಿದರೆ ಅವರ ಧ್ವನಿಯನ್ನು ಉಡುಗಿಸಲಾಗುತ್ತದೆ ಎಂಬುದು ಇದರ ಸುಪ್ತ ಸಿದ್ಧಾಂತವಾಗಿರುತ್ತದೆ. 

ಪ್ಲಾಟ್‌ಫಾರಂನಲ್ಲಿ ಆರೋಗ್ಯಕರ ಸಂವಾದಕ್ಕೆ ಅವಕಾಶ ಮಾಡಿಕೊಡುವ ಮತ್ತು ವಿಭಿನ್ನ ಅಭಿಪ್ರಾಯಗಳು ಮತ್ತು ನಂಬಿಕೆಗಳನ್ನು ವ್ಯಕ್ತಪಡಿಸಲು ವ್ಯಕ್ತಿಗಳನ್ನು ಸಬಲಗೊಳಿಸುವ ನಿಟ್ಟಿನಲ್ಲಿ, ಇತರರ ಮೇಲೆ ದೌರ್ಜನ್ಯ ಎಸಗುವ ಅಥವಾ ಪ್ರಚೋದಿಸುವ ಅಥವಾ ಯಾವುದೇ ರೀತಿಯಲ್ಲಿ ಇತರರನ್ನು ಅವಮಾನ ಮಾಡುವ ಅಥವಾ ಹೀಗಳೆಯುವ ವರ್ತನೆಯನ್ನು ನಾವು ನಿಷೇಧಿಸುತ್ತೇವೆ. ಜನರ ಸುರಕ್ಷತೆಗೆ ಅಪಾಯವನ್ನು ಉಂಟು ಮಾಡುವುದರ ಜೊತೆಗೆ, ಬಾಧಿತರಿಗೆ ದೈಹಿಕ ಮತ್ತು ಭಾವನಾತ್ಮಕ ಸಂಕಷ್ಟಕ್ಕೂ ನಿಂದನೀಯ ವರ್ತನೆಯು ಕಾರಣವಾಗಬಹುದು. 

ಪಾಲಿಸಿ ಅಭಿವೃದ್ಧಿ ಮತ್ತು ನಮ್ಮ ಜಾರಿ ತತ್ವಕ್ಕೆ ನಮ್ಮ ಪ್ರಸ್ತಾಪದ ಕುರಿತು ಇನ್ನಷ್ಟು ತಿಳಿಯಿರಿ.

ಇದನ್ನು ಅನ್ವಯಿಸಿದಾಗ 

ಕೆಲವು ಟ್ವೀಟ್‌ಗಳನ್ನು ಪ್ರತ್ಯೇಕವಾಗಿ ನೋಡಿದಾಗ ನಿಂದನೀಯವಾಗಿ ಕಂಡುಬರಬಹುದು, ಆದರೆ ವ್ಯಾಪಕವಾದ ಸಂಭಾಷಣೆಯ ಪ್ರಸಂಗದಲ್ಲಿ ನೋಡಿದಾಗ ಹಾಗೆ ಕಾಣದೇ ಇರಬಹುದು. ಈ ರೀತಿಯ ಕಂಟೆಂಟ್ ಅನ್ನು ನಾವು ಪರಿಶೀಲಿಸಿದಾಗ, ವ್ಯಕ್ತಿಯ ಮೇಲೆ ದೌರ್ಜನ್ಯವೆಸಗುವ ಉದ್ದೇಶದ್ದೇ ಅಥವಾ ಇದು ಸಮ್ಮತಿಯುಕ್ತ ಸಂವಾದದ ಭಾಗವೇ ಎಂದು ಸ್ಪಷ್ಟವಿಲ್ಲದಿರಬಹುದು. ಸಂವಾದದ ಸಂದರ್ಭವನ್ನು ನಮ್ಮ ತಂಡ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದಕ್ಕಾಗಿ, ಯಾವುದೇ ಜಾರಿ ಕ್ರಮವನ್ನು ತೆಗೆದುಕೊಳ್ಳುವುದಕ್ಕೂ ಮೊದಲು ಅಗತ್ಯ ಮಾಹಿತಿಯನ್ನು ನಾವು ಹೊಂದಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ಗುರಿಪಡಿಸುವಿಕೆಗೆ ಒಳಗಾದ ವ್ಯಕ್ತಿಯ ಅಭಿಪ್ರಾಯವನ್ನು ನಾವು ನೇರವಾಗಿ ಕೇಳಬೇಕಾಬಹುದು.

ಟ್ವೀಟ್‌ಗಳು ಅಥವಾ ನೇರ ಸಂದೇಶಗಳಲ್ಲಿ ಈ ಮುಂದಿನ ಯಾವುದೇ ವರ್ತನೆ ಮಾಡಿದ ವ್ಯಕ್ತಿ ಅಥವಾ ವ್ಯಕ್ತಿಗಳ ಸಮೂಹವನ್ನು ಖಾತೆಗಳು ಗುರಿಪಡಿಸಿದ ವರದಿಗಳನ್ನು ನಾವು ಪರಿಶೀಲಿಸುತ್ತೇವೆ ಮತ್ತು ಕ್ರಮ ತೆಗೆದುಕೊಳ್ಳುತ್ತೇವೆ. ತಮ್ಮ ಪ್ರೊಫೈಲ್‌ನಲ್ಲಿ ನಿಂದನೀಯ ವರ್ತನೆಯಲ್ಲಿ ತೊಡಗುವ ಖಾತೆಗಳ ಕುರಿತಾಗಿ, ನಮ್ಮ ನಿಂದನೀಯ ವರ್ತನೆ ನೀತಿ ಅನ್ನು ದಯವಿಟ್ಟು ನೋಡಿ. ಜಾತಿ, ಜನಾಂಗ, ರಾಷ್ಟ್ರೀಯ ಮೂಲ, ಲೈಂಗಿಕ ಆದ್ಯತೆ, ಲಿಂಗ, ಲಿಂಗ ಗುರುತು, ಧಾರ್ಮಿಕ ಸಂಬಂಧ, ವಯಸ್ಸು, ಅಂಗವೈಕಲ್ಯ ಅಥವಾ ಗಂಭೀರ ರೋಗದ ಆಧಾರದಲ್ಲಿ ವ್ಯಕ್ತಿಗಳನ್ನು ಗುರಿಪಡಿಸುವ ವರ್ತನೆಗಳು ನಮ್ಮ ದ್ವೇಷಯುತ ವರ್ತನೆ ನೀತಿ ಉಲ್ಲಂಘನೆಯಾಗಿರಬಹುದು.


ವ್ಯಕ್ತಿ ಅಥವಾ ವ್ಯಕ್ತಿಯ ಸಮೂಹಕ್ಕೆ ಗಂಭೀರ ಹಾನಿಯನ್ನು ಕೋರುವುದು, ಆಶಿಸುವುದು ಅಥವಾ ಕರೆಯುವುದು

ವ್ಯಕ್ತಿ ಅಥವಾ ವ್ಯಕ್ತಿಯ ಸಮೂಹಕ್ಕೆ ಮರಣ, ಗಂಭೀರ ದೈಹಿಕ ಹಾನಿ ಅಥವಾ ಗಂಭೀರ ರೋಗ ಉಂಟಾಗಲಿ ಎಂದು ಬಯಸುವುದು, ಆಶಿಸುವುದು, ಪ್ರೋತ್ಸಾಹಿಸುವುದು, ಉತ್ತೇಜಿಸುವುದು ಅಥವಾ ಬಯಕೆ ಅಭಿವ್ಯಕ್ತಿಸುವುದನ್ನು ನಾವು ಸಹಿಸುವುದಿಲ್ಲ. ಇದರಲ್ಲಿ ಇವು ಒಳಗೊಂಡಿರುತ್ತವೆ, ಆದರೆ ಇದಕ್ಕೆ ಸೀಮಿತವಾಗಿರುವುದಿಲ್ಲ: 

  • ಗಂಭೀರ ಕಾಯಿಲೆಯಿಂದ ಇತರರು ಸಾವನ್ನಪ್ಪಲಿ ಎಂದು ಬಯಸುವುದು, ಉದಾ., "ನಿನಗೆ ಕ್ಯಾನ್ಸರ್‌ ಬಂದು ಸಾಯಲಿ ಎಂದು ನಾನು ಆಶಿಸುತ್ತೇನೆ."
  • ಗಂಭೀರ ಅಪಘಾತಕ್ಕೆ ಬಲಿಯಾಗಲಿ ಎಂದು ಇತರರಿಗೆ ಕೋರುವುದು, ಉದಾ., "ಮುಂದಿನ ಬಾರಿ ನೀನು ಬಾಯಿ ತೆರೆದಾಗ ಕಾರು ಅಪಘಾತವಾಗಲಿ ಎಂದು ನಾನು ಬಯಸುತ್ತೇನೆ".
  • ವ್ಯಕ್ತಿಗಳ ಸಮೂಹಕ್ಕೆ ಗಂಭೀರ ದೈಹಿಕ ಗಾಯ ಉಂಟಾಗಲಿ ಎಂದು ಹೇಳಲಾಗುತ್ತದೆ, ಉದಾ., "ಈ ಪ್ರತಿಭಟನಾಕಾರ ಸಮೂಹವು ಸುಮ್ಮನಿರದಿದ್ದರೆ, ಅವರಿಗೆ ಗುಂಡಿಕ್ಕಬೇಕಾಗುತ್ತದೆ."

Twitter ನಲ್ಲಿ ಅಪಾಯದ ಕೋರುವಿಕೆಯ ವಿನಾಯಿತಿಗಳ ಬಗ್ಗೆ

ತೀವ್ರ ಹಿಂಸೆಯ ಬಗ್ಗೆ ವಿಶ್ವಾಸಾರ್ಹವಾಗಿ ಆರೋಪಿತ ಕೆಲವು ವ್ಯಕ್ತಿಗಳ ಬಗೆಗಿನ ಸಂವಹನಗಳು ಉದ್ವೇಗವನ್ನು ಪ್ರಚೋದಿಸಬಹುದು ಮತ್ತು ಅಪಾಯದ ಬಯಕೆಗೆ ಸಂಬಂಧಿಸಿರಬಹುದು ಎಂದು ನಾವು ಗುರುತಿಸಿದ್ದೇವೆ. ಈ ಸೀಮಿತ ಪ್ರಕರಣಗಳಲ್ಲಿ, ಖಾತೆಗೆ ದಂಡ, ನಿರ್ಬಂಧ ಅಥವಾ ಅಮಾನತಿನ ಯಾವುದೇ ಅಪಾಯವಿಲ್ಲದೇ ಟ್ವೀಟ್ ಅನ್ನು ಅಳಿಸುವಂತೆ ಬಳಕೆದಾರರನ್ನು ನಾವು ವಿನಂತಿಸುತ್ತೇವೆ. ಉದಾಹರಣೆಗೆ, ಆದರೆ ಇದಕ್ಕೆ ಸೀಮಿತವಾಗಿಲ್ಲದಂತೆ:

  •  “ಎಲ್ಲ ಅತ್ಯಾಚಾರಿಗಳು ಸಾಯಬೇಕು ಎಂದು ನಾನು ಬಯಸುತ್ತೇನೆ.” 
  • “ಮಕ್ಕಳನ್ನು ದೌರ್ಜನ್ಯ ಮಾಡುವವರನ್ನು ನೇಣಿಗೇರಿಸಬೇಕು.”

ಅನಪೇಕ್ಷಿತ ಲೈಂಗಿಕ ಕೃತ್ಯಗಳು

Twitter ನಲ್ಲಿ ಕೆಲವು ಸಮ್ಮತಿಯುತ ನಗ್ನತೆ ಮತ್ತು ವಯಸ್ಕ ಕಂಟೆಂಟ್‌ ಅನ್ನು ಸಮ್ಮತಿಸಲಾಗಿದ್ದರೂ, ಅನಪೇಕ್ಷಿತ ಲೈಂಗಿಕ ಕೃತ್ಯಗಳನ್ನು ಮತ್ತು ವ್ಯಕ್ತಿಯ ಸಮ್ಮತಿಯಿಲ್ಲದೇ ಅವರನ್ನು ಲೈಂಗಿಕವಾಗಿ ನಿರ್ದಿಷ್ಟಪಡಿಸುವ ಕಂಟೆಂಟ್ ಅನ್ನು ನಾವು ನಿಷೇಧಿಸುತ್ತೇವೆ. ಇದರಲ್ಲಿ ಇವು ಒಳಗೊಂಡಿರುತ್ತವೆ, ಆದರೆ ಇದಕ್ಕೆ ಸೀಮಿತವಾಗಿರುವುದಿಲ್ಲ:

  • ಚಿತ್ರಗಳು, ವೀಡಿಯೋಗಳು ಮತ್ತು GIF ಗಳು ಸೇರಿದಂತೆ ಇತರರಿಗೆ ಅನಪೇಕ್ಷಿತ ಮತ್ತು/ಅಥವಾ ಅನಗತ್ಯ ವಯಸ್ಕ ಮಾಧ್ಯಮವನ್ನು ಕಳುಹಿಸುವುದು; 
  • ಇತರರ ದೇಹದ ಅನಗತ್ಯ ಲೈಂಗಿಕ ಚರ್ಚೆ; 
  • ಲೈಂಗಿಕ ಕೃತ್ಯಗಳನ್ನು ಅಪೇಕ್ಷಿಸುವುದು; ಮತ್ತು 
  • ವ್ಯಕ್ತಿಯ ಸಮ್ಮತಿ ಇಲ್ಲದೇ ಇತರ ಯಾವುದೇ ರೀತಿಯಲ್ಲಿ ಲೈಂಗಿಕಗೊಳಿಸುವ ಯಾವುದೇ ಇತರ ಕಂಟೆಂಟ್‌. 

ಇತರರನ್ನು ದೌರ್ಜನ್ಯಗೊಳಿಸುವ ಅಥವಾ ಕೆರಳಿಸುವ ಉದ್ದೇಶದಿಂದ ಆಕ್ರಮಣಕಾರಿ ಅವಮಾನವನ್ನು ಬಳಸುವುದು

ನಿಂದೆ ಅಥವಾ ಅದೇ ರೀತಿಯ ಭಾಷೆಯನ್ನು ಒಳಗೊಂಡ ಕಂಟೆಂಟ್ ಸೇರಿದಂತೆ ವ್ಯಕ್ತಿಯನ್ನು ಗುರಿಪಡಿಸುವ ವಿಪರೀತ ಆಕ್ರಮಣಕಾರಿ ಅವಮಾನಗಳ ವಿರುದ್ಧ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಕೆಲವು ಪದಗಳು ಆಕ್ಷೇಪಾರ್ಹ ಎಂದು ಕೆಲವು ವ್ಯಕ್ತಿಗಳಿಗೆ ಕಂಡುಬರಬಹುದಾದರೂ, ಅವಮಾನಕರ ಪದಗಳನ್ನು ಬಳಸಿರುವ ಪ್ರತಿ ಸನ್ನಿವೇಶದ ವಿರುದ್ಧ ನಾವು ಕ್ರಮ ತೆಗೆದುಕೊಳ್ಳುವುದಿಲ್ಲ ಎಂಬುದನ್ನೂ ದಯವಿಟ್ಟು ಗಮನಿಸಿ. 


ವ್ಯಕ್ತಿ ಅಥವಾ ವ್ಯಕ್ತಿಗಳ ಸಮೂಹದ ಮೇಲೆ ದೌರ್ಜನ್ಯ ಎಸಗುವಂತೆ ಇತರರನ್ನು ಪ್ರೋತ್ಸಾಹಿಸುವುದು ಅಥವಾ ಕರೆ ಮಾಡುವುದು

ನಿಂದನೀಯ ವರ್ತನೆಯೊಂದಿಗೆ ನಿರ್ದಿಷ್ಟ ವ್ಯಕ್ತಿಗಳು ಅಥವಾ ಸಮೂಹಗಳನ್ನು ನಿಂದಿಸುವ ಅಥವಾ ಗುರಿಪಡಿಸುವುದಕ್ಕೆ ಇತರರನ್ನು ಪ್ರೋತ್ಸಾಹಿಸುವ ವರ್ತನೆಯನ್ನು ನಾವು ನಿಷೇಧಿಸುತ್ತೇವೆ. ಇದು ಇದನ್ನೂ ಒಳಗೊಂಡಿರುತ್ತದೆ, ಆದರೆ ಇದಕ್ಕೆ ಸೀಮಿತವಾಗಿಲ್ಲ; ಆನ್‌ಲೈನ್‌ನಲ್ಲಿ ನಿಂದನೆ ಅಥವಾ ದೌರ್ಜನ್ಯದೊಂದಿಗೆ ಜನರನ್ನು ಟಾರ್ಗೆಟ್‌ ಮಾಡಲು ಕರೆ ನೀಡುವುದು. 

ಸಾಮೂಹಿಕ ಮರಣ ಸಂಭವಿಸಿರುವ ಘಟನೆ ನಡೆದಿರುವುದನ್ನು ನಿರಾಕರಿಸುವುದು

ಸಾಮೂಹಿಕ ಕೊಲೆ ಅಥವಾ ಇತರ ಸಾಮೂಹಿಕ ಮರಣ ಘಟನೆ ನಡೆದಿರುವುದನ್ನು ನಾವು ಪರಿಶೀಲಿಸಬಹುದಾಗಿದ್ದಲ್ಲಿ ಮತ್ತು ಕಂಟೆಂಟ್ ಅನ್ನು ನಿಂದನೀಯ ಉದ್ದೇಶದಿಂದ ಹಂಚಿಕೊಂಡಿದ್ದಲ್ಲಿ ನಿರಾಕರಣೆಯ ಕಂಟೆಂಟ್ ಅನ್ನು ನಾವು ನಿಷೇಧಿಸುತ್ತೇವೆ. ಇಂತಹ ಘಟನೆಗಳನ್ನು "ನಕಲಿ" ಎಂದು ಉಲ್ಲೇಖಿಸುವುದು ಅಥವಾ ಆ ಸಂತ್ರಸ್ತರು ಅಥವಾ ಉಳಿದವರ ಹೇಳಿಕೆಗಳನ್ನು ನಕಲಿ ಅಥವಾ "ನಟನೆ" ಎಂದು ಉಲ್ಲೇಖಿಸುವುದನ್ನೂ ಇದು ಒಳಗೊಂಡಿರಬಹುದು.  ಹೋಲೋಕಾಸ್ಟ್‌, ಶಾಲೆಯಲ್ಲಿ ಗುಂಡಿನ ದಾಳಿ, ಉಗ್ರ ದಾಳಿ ಮತ್ತು ನೈಸರ್ಗಿಕ ವಿಪತ್ತಿನಂತಹ ಘಟನೆಗಳನ್ನೂ ಇದು ಒಳಗೊಂಡಿರಬಹುದು, ಆದರೆ ಇದಕ್ಕೆ ಸೀಮಿತವಾಗಿರುವುದಿಲ್ಲ.

Twitter ನಿಯಮಗಳ ಉಲ್ಲಂಘನೆಗೆ ಪರಿಶೀಲನೆ ನಡೆಸಬೇಕಾಗಿರುವ ಈ ಕಂಟೆಂಟ್‌ನ ಗುರಿ ನಾನಾಗಿರಬೇಕೆ?

ಇಲ್ಲ, ಇಂತಹ ಕಂಟೆಂಟ್‌ನ ಪ್ರಥಮ ವ್ಯಕ್ತಿ ಅಥವಾ ವೀಕ್ಷಕರ ವರದಿಗಳನ್ನೂ ನಾವು ಪರಿಶೀಲಿಸುತ್ತೇವೆ.


ಪರಿಣಾಮಗಳು

ಈ ನೀತಿಯ ಉಲ್ಲಂಘನೆಯ ದಂಡವನ್ನು ಗುರುತಿಸುವಾಗ, ಉಲ್ಲಂಘನೆಯ ತೀವ್ರತೆ ಮತ್ತು ಈ ಹಿಂದೆ ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ವ್ಯಕ್ತಿಯ ದಾಖಲೆಗಳು ಸೇರಿದಂತೆ, ಇದಕ್ಕೆ ಸೀಮಿತವಾಗಿಲ್ಲದಂತೆ ಹಲವು ಅಂಶಗಳನ್ನು ನಾವು ಪರಿಗಣಿಸುತ್ತೇವೆ. 

ಉದಾಹರಣೆಗೆ, ಉಲ್ಲಂಘಿಸುತ್ತಿರುವ ಕಂಟೆಂಟ್ ತೆಗೆದುಹಾಕುವಂತೆ ನಾವು ಇತರರನ್ನು ಕೇಳಬಹುದು ಮತ್ತು ಅವರು ಪುನಃ ಟ್ವೀಟ್‌ ಮಾಡಲು ಸಾಧ್ಯವಾಗುವುದಕ್ಕೂ ಮುನ್ನ ಓದಲು ಮಾತ್ರ ಮೋಡ್‌ನಲ್ಲಿ ಸ್ವಲ್ಪ ಸಮಯದವರೆಗೆ ಅವರನ್ನು ಇಡಬಹುದು. ನಂತರದ ಉಲ್ಲಂಘನೆ ಉಂಟಾದಲ್ಲಿ ದೀರ್ಘಕಾಲದವರೆಗೆ ಓದಲು ಮಾತ್ರ ಅವಧಿಗೆ ಕಾರಣವಾಗುತ್ತದೆ ಮತ್ತು ನಂತರದಲ್ಲಿ ಶಾಶ್ವತ ಅಮಾನತಿಗೆ ಕಾರಣವಾಗಬಹುದು. ಒಂದು ಖಾತೆಯು ಪ್ರಾಥಮಿಕವಾಗಿ ನಿಂದನೀಯ ವರ್ತನೆಯಲ್ಲಿ ತೊಡಗಿಸಿಕೊಂಡಿದ್ದರೆ, ಆರಂಭಿಕ ಪರಿಶೀಲನೆಯ ನಂತರ ನಾವು ಖಾತೆಯನ್ನು ಶಾಶ್ವತವಾಗಿ ಅಮಾನತು ಮಾಡಬಹುದು. 

ನಮ್ಮ ಜಾರಿ ಆಯ್ಕೆಗಳ ಶ್ರೇಣಿಯ ಬಗ್ಗೆ ಇನ್ನಷ್ಟು ತಿಳಿಯಿರಿ

 

ಬುಕ್‌ಮಾರ್ಕ್ ಮಾಡಿ ಅಥವಾ ಈ ಲೇಖನವನ್ನು ಹಂಚಿಕೊಳ್ಳಿ