ಸ್ವಯಂ ಹಾನಿ ಮತ್ತು ಆತ್ಮಹತ್ಯೆಯ ಕುರಿತು Twitter ನಲ್ಲಿ ಏನು ಮಾಡಬಹುದು

ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಸ್ವಯಂ ಹಾನಿಯ ಬಗ್ಗೆ ಯೋಚಿಸುತ್ತಿದ್ದರೆ ಅಥವಾ ಆತ್ಮಹತ್ಯೆ ವರ್ತನೆಯನ್ನು ಮಾಡುತ್ತಿದ್ದರೆ, ವಿಪತ್ತು ನಿರ್ವಹಣೆ ಮತ್ತು ಆತ್ಮಹತ್ಯೆ ತಡೆಯಲ್ಲಿ ಪರಿಣಿತಿ ಹೊಂದಿರುವ ಸೇವೆಗಳನ್ನು ಸಂಪರ್ಕಿಸುವ ಮೂಲಕ ಸಾಧ್ಯವಾದಷ್ಟು ಬೇಗ ನೀವು ಸಹಾಯವನ್ನು ಆಗ್ರಹಿಸಬೇಕು. Twitter ನಲ್ಲಿ ಈ ರೀತಿಯ ವರ್ತನೆಯನ್ನು ಎದುರಿಸಿದರೆ ಸ್ವಯಂ ಹಾನಿ ಅಥವಾ ಆತ್ಮಹತ್ಯೆ ವರ್ತನೆಯಲ್ಲಿ ತೊಡಗಿಸಿಕೊಂಡಿರಬಹುದಾದ ಖಾತೆಗಳೊಂದಿಗೆ ಸಂಬಂಧಿಸಿರುವ ವರದಿಗಳನ್ನು ನಿರ್ವಹಿಸುವಲ್ಲಿ ಗಮನ ಹರಿಸಿರುವ Twitter ತಂಡಕ್ಕೂ ನೀವು ಎಚ್ಚರಿಕೆ ನೀಡಬಹುದು.
 

ಸ್ವಯಂ ಹಾನಿ ಮತ್ತು ಆತ್ಮಹತ್ಯೆಗೆ ಸಂಬಂಧಿಸಿದ ಕಂಟೆಂಟ್‌ ಬಗ್ಗೆ Twitter ನ ಕಾರ್ಯನೀತಿ
 

ಸ್ವಯಂ ಹಾನಿ ಅಥವಾ ಆತ್ಮಹತ್ಯೆಯ ಬಗ್ಗೆ ಯೋಚನೆ ಮಾಡುತ್ತಿರುವವರ ಬಗ್ಗೆ ವರದಿಯನ್ನು ಸ್ವೀಕರಿಸಿದ ನಂತರ, ಅವರ ಕಾಳಜಿ ವಹಿಸುವವರನ್ನು ಗುರುತಿಸಲಾಗಿದೆ ಮತ್ತು ಅವರು ಅಪಾಯದಲ್ಲಿರಬಹುದು ಎಂಬುದನ್ನು ತಿಳಿಸಲು ಬಾಧಿತ ವ್ಯಕ್ತಿಯನ್ನು Twitter ಸಂಪರ್ಕಿಸುತ್ತದೆ. ಬೆಂಬಲ ಆಗ್ರಹಿಸಲು ಅವರನ್ನು ನಾವು ಪ್ರೋತ್ಸಾಹಿಸುತ್ತೇವೆ ಮತ್ತು ಸಹಾಯ ಮಾಡಬಹುದಾದ ನಿಗದಿತ ಆನ್‌ಲೈನ್‌ ಮತ್ತು ಹಾಟಲೈನ್ ಸಂಪನ್ಮೂಲಗಳ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ.
 

ಚಿಹ್ನೆಗಳನ್ನು ಗುರುತಿಸುವುದು
 

ಆನ್‌ಲೈನ್ ಪೋಸ್ಟ್‌ಗಳನ್ನು ಮಾತ್ರವೇ ಆಧರಿಸಿ ನಡವಳಿಕೆಯನ್ನು ನಿರ್ಧರಿಸುವುದು ಸವಾಲಿನ ಕಾರ್ಯವಾಗಿದೆ, ಆದರ ಸ್ವಯಂ-ಹಾನಿ ಅಥವಾ ಆತ್ಮಹತ್ಯೆ ಬಗ್ಗೆ ಯಾರಾದರೂ ಯೋಚಿಸುತ್ತಿರುವ  ಸಂಭಾವ್ಯ ಎಚ್ಚರಿಕೆಯ ಚಿಹ್ನೆಗಳು ಅಥವಾ ಸೂಚಕಗಳಿವೆ. ಆತ್ಮಹತ್ಯೆ ಚಿಂತನೆಗಳನ್ನು ವ್ಯಕ್ತಿಯು ಅನುಭವಿಸುತ್ತಿದ್ದರೆ ನಿಮ್ಮನ್ನು ನೀವು ವಿಶ್ಲೇಷಿಸಿಕೊಳ್ಳಲು ನೀವು ಕೇಳಿಕೊಳ್ಳಬಹುದಾದ ಪ್ರಶ್ನೆಗಳು ಈ ಕೆಳಗಿವೆ:

  • ಈ ವ್ಯಕ್ತಿಯು ಖಿನ್ನತೆ ಅಥವಾ ಅಸಹಾಯಕತೆಯ ಭಾವನೆಗಳ ವಿಷಯವನ್ನು ಆಗಾಗ್ಗೆ ಪೋಸ್ಟ್ ಮಾಡುತ್ತಾರೆಯೇ?

  • ಈ ವ್ಯಕ್ತಿಯು ಸಾವಿನ ಕುರಿತು ಅಥವಾ ಸಾವು ಏಕೈಕ ಆಯ್ಕೆ ಎಂಬ ಭಾವನೆಗಳ ಕಾಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆಯೇ?

  • ಈ ಹಿಂದೆ ಆತ್ಮಹತ್ಯೆಯ ಪ್ರಯತ್ನ ಮಾಡಿರುವ ಕುರಿತು ಅವರು ಕಾಮೆಂಟ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆಯೇ?

  • ಸ್ವಯಂ ಹಾನಿಯ ಅಥವಾ ಅವರನ್ನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಂತೆ ಗುರುತಿಸುತ್ತಿರುವ ಫೋಟೋಗಳನ್ನು ಅವರು ವಿವರಿಸುತ್ತಿದ್ದಾರೆಯೇ ಅಥವಾ ಪೋಸ್ಟ್ ಮಾಡುತ್ತಿದ್ದಾರೆಯೇ?

  • ಅವರ ಮನೋಭಾವ ಮತ್ತು ಪೋಸ್ಟ್‌ಗಳ ವಿಷಯವು ಇತ್ತೀಚಿಗೆ ಬದಲಾಗಿದೆಯೇ?
     

ನೀವು ಕಾಳಜಿ ಹೊಂದಿದ್ದರೆ ಮತ್ತು ಒಳಗೊಂಡಿರುವ ವ್ಯಕ್ತಿಯ ಪರಿಚಯವಿದ್ದರೆ, ಅವರನ್ನು ವೈಯಕ್ತಿಕವಾಗಿ ಸಂಪರ್ಕಿಸುವುದು ಸಹಾಯ ಮಾಡಬಹುದು  ಮತ್ತು ಸಹಾಯ ಮಾಡಬಹುದಾದ ನಿಗದಿತ ಸೇವೆಗಳಿಂದ ಸಹಾಯವನ್ನು ಆಗ್ರಹಿಸಲು ಅವರನ್ನು ಪ್ರೋತ್ಸಾಹಿಸಬಹುದು. ಒಂದು ವೇಳೆ ಮತ್ತೊಂದು ಸಂದರ್ಭದಲ್ಲಿ, ಒಳಗೊಂಡಿರುವ ವ್ಯಕ್ತಿ ನಿಮಗೆ ತಿಳಿದಿಲ್ಲದಿದ್ದರೆ, ನೀವು ಇನ್ನೂ ಸಹ ಕಳವಳವನ್ನು ವ್ಯಕ್ತಪಡಿಸಲು ಅವರನ್ನು ಸಂಪರ್ಕಿಸಲು ಆಯ್ಕೆ ಮಾಡಬಹುದು ಅಥವಾ ಅವರ ಕುರಿತು ನಿಗದಿತ ಸಂಸ್ಥೆಗಳಿಗೆ, ಆತ್ಮಹತ್ಯೆ ಹಾಟ್‌ಲೈನ್‌ಗೆ ಅಥವಾ ಅವರಿಗೆ ವೈಯಕ್ತಿಕವಾಗಿ ಪರಿಚಯವಿರುವ ಮತ್ತೊಬ್ಬರಿಗೆ ತಿಳಿಸಬಹುದು. ನಿಮಗೆ ಸ್ವಂತವಾಗಿ ವ್ಯಕ್ತಿಯನ್ನು ಸಂಪರ್ಕಿಸಲು ಮುಜುಗರವಾದರೆ ಅಥವಾ ಅವರನ್ನು ಹೇಗೆ ಸಂಪರ್ಕಿಸಬೇಕೆಂದು ಗೊತ್ತಿಲ್ಲದಿದ್ದರೆ, ನಿಗದಿತ ವರದಿ ಮಾಡುವಿಕೆ ಹರಿವಿನ ಮೂಲಕ ನೀವು Twitter ಗೆ ಸಹ ಎಚ್ಚರಿಸಬಹುದು.
 

ಸ್ವಯಂ ಹಾನಿ ಅಥವಾ ಆತ್ಮಹತ್ಯೆ ಯೋಚನೆಗಳ ಕುರಿತ ಅನುಭವಗಳನ್ನು ನಿರ್ವಹಣೆ ಮಾಡುವುದು
 

ಸ್ವಯಂ ಹಾನಿ ಅಥವಾ ಆತ್ಮಹತ್ಯೆ ವರ್ತನೆಯಲ್ಲಿ ನೀವು ತೊಡಗಿದ್ದೀರಿ ಎಂದು ನೀವು ಭಾವಿಸಿದ್ದರೆ ಅಥವಾ ಖಿನ್ನತೆ ಅಥವಾ ಉದ್ವೇಗದ ಭಾವಗಳನ್ನು ಅನುಭವಿಸುತ್ತಿದ್ದರೆ, ನೀವು ವಿಶ್ವಾಸ ಹೊಂದಿರುವ ಜನರ ಜೊತೆಗೆ ಮಾತನಾಡುವುದು ಅಥವಾ ಈ ಅನುಭವಗಳನ್ನು ನಿರ್ವಹಿಸಲು ಸಹಾಯ ಮಾಡಲು ಬೆಂಬಲ ನೀಡುವ ಮತ್ತು ನೆರವಾಗುವ ನಿಗದಿತ ಸಂಸ್ಥೆಗಳನ್ನು ಸಂಪರ್ಕಿಸುವುದು ನೆರವಾಗಬಹುದು. ಖಿನ್ನತೆ, ಒಂಟಿತನ, ಮಾದಕ ವ್ಯಸನ, ಅನಾರೋಗ್ಯ, ಸಂಬಂಧಗಳ ಸವಾಲುಗಳು ಮತ್ತು ಹಣಕಾಸು ಸಂಕಷ್ಟ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಲಹೆಗೆ ಈ ಸಂಪನ್ಮೂಲಗಳ ಸಲಹೆಯನ್ನು ನೀವು ಪಡೆಯಬಹುದು.

ಖಿನ್ನತೆಯು ವಿವಿಧ ರೋಗಲಕ್ಷಣಗಳನ್ನು ಹೊಂದಿರುತ್ತದೆ ಮತ್ತು ಪ್ರತಿ ವರ್ಷ ಲಕ್ಷಾಂತರ ಜನರಿಗೆ ಪರಿಣಾಮ ಬೀರುತ್ತದೆ. ಸಾಮಾನ್ಯ ರೋಗಲಕ್ಷಣಗಳಲ್ಲಿ ಬೇಸರ, ಚಟುವಟಿಕೆಗಳಲ್ಲಿ ಆಸಕ್ತಿ ಕಳೆದುಕೊಳ್ಳುವಿಕೆ, ಹಸಿವು ಮತ್ತು ನಿದ್ರೆಯ ಪ್ರಕಾರಗಳಲ್ಲಿ ಬದಲಾವಣೆಗಳು, ನಿಶ್ಯಕ್ತಿ, ಆಲೋಚನೆ ಮಾಡುವಲ್ಲಿ ತೊಂದರೆ ಮತ್ತು ಸಂಭಾವ್ಯವಾಗಿ ಆತ್ಮಹತ್ಯೆಯ ಆಲೋಚನೆಗಳು ಒಳಗೊಂಡಿರುತ್ತವೆ. ನೀವು ಈ ಪ್ರಕಾರಗಳ ನಡವಳಿಕೆಗಳನ್ನು ಪ್ರದರ್ಶಿಸಬಹುದು ಅಥವಾ ಅವುಗಳು ಸೂಕ್ಷ್ಮವಾಗಿರಬಹುದು. ಯಾವುದೇ ರೀತಿಯಲ್ಲಾದರೂ, ಅವುಗಳನ್ನು ನಿರ್ಲಕ್ಷಿಸಬೇಡಿ.

 

ಈ ಲೇಖನ ಹಂಚಿಕೊಳ್ಳಿ