ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸುವುದು ಹೇಗೆ

X ನಿಂದ ವಿರಾಮ ತೆಗೆದುಕೊಳ್ಳುತ್ತಿದ್ದೀರಾ? ನಮಗೆ ಅರ್ಥವಾಯಿತು. ಪ್ರಸ್ತುತ ಸಂಗತಿಗಳಿಂದ ಒಂದು ಹೆಜ್ಜೆ ಹಿಂದೆ ಇಡುವುದು ಕೆಲವು ಬಾರಿ ಒಳ್ಳೆಯದು. ಅಥವಾ ನಿಮಗೆ ಶಾಶ್ವತ ವಿರಾಮ ಬೇಕಾದಲ್ಲಿ, ನಾವು ನಿಮಗೆ ಸಹಾಯ ಮಾಡಬಹುದು. ನಿಮ್ಮ X ಖಾತೆಯನ್ನು ಹೇಗೆ ನಿಷ್ಕ್ರಿಯಗೊಳಿಸುವುದು ಅಥವಾ ಅಳಿಸುವುದು ಹೇಗೆ ಎಂಬ ಪ್ರತಿ ಹಂತದ ಸೂಚನೆಗಳನ್ನು ಅನುಸರಿಸಿ.

ಟಿಪ್ಪಣಿ: ನೀವು ಖಾತೆ ಸಮಸ್ಯೆಯನ್ನು ಹೊಂದಿದ್ದರೆ (ಉದಾ., ಟ್ವೀಟ್ ಕಳೆದಿರುವುದು, ಹಿಂಬಾಲಕರು ಅಥವಾ ಹಿಂಬಾಲಿಸುತ್ತಿರುವವರ ತಪ್ಪಾದ ಲೆಕ್ಕ, ಅನುಮಾನಾಸ್ಪದ ನೇರ ಸಂದೇಶ ಅಥವಾ ಸಂಭಾವ್ಯ ಖಾತೆ ರಾಜಿ) ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸುವುದು ಮತ್ತು ಮರುಸಕ್ರಿಯಗೊಳಿಸುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ದಯವಿಟ್ಟು ನಮ್ಮ ದೋಷ ಪರಿಹಾರ ಲೇಖನಗಳನ್ನು ನೋಡಿ ಅಥವಾ X ಬೆಂಬಲ ಸಂಪರ್ಕಿಸಿ.

 

ನಿಮ್ಮ Twitter ಖಾತೆ ನಿಷ್ಕ್ರಿಯಗೊಳಿಸುವುದು ಹಾಗೂ ಅಳಿಸುವುದು

ನಿಮ್ಮ ಖಾತೆಯನ್ನು ಶಾಶ್ವತವಾಗಿ ಅಳಿಸುವುದಕ್ಕೆ ನಿಮ್ಮ Twitter ಖಾತೆಯನ್ನು ನಿಷ್ಕ್ರಿಯಗೊಳಿಸುವುದು ಮೊದಲ ಹಂತವಾಗಿದೆ. ನಿಷ್ಕ್ರಿಯಗೊಳಿಸುವಿಕೆಯು 30 ದಿನಗಳವರೆಗೆ ಇರುತ್ತದೆ. 30 ದಿನದ ನಿಷ್ಕ್ರಿಯಗೊಳಿಸುವಿಕೆ ಅವಧಿಯೊಳಗೆ ನಿಮ್ಮ ಖಾತೆಯನ್ನು ನೀವು ಪ್ರವೇಶಿಸದಿದ್ದರೆ, ನಿಮ್ಮ ಖಾತೆ ಅಳಿಸಿಹೋಗುತ್ತದೆ ಮತ್ತು ನಿಮ್ಮ ಬಳಕೆದಾರರ ಹೆಸರು ಇನ್ನು ಮುಂದೆ ನಿಮ್ಮ ಖಾತೆಯೊಂದಿಗೆ ಸಂಬಂಧ ಹೊಂದಿರುವುದಿಲ್ಲ.
 

 

ನಿಮ್ಮ Twitter ಖಾತೆಯನ್ನು ನಿಷ್ಕ್ರಿಯಗೊಳಿಸುವುದು

ನಿಮ್ಮ Twitter ಖಾತೆಯನ್ನು ಶಾಶ್ವತವಾಗಿ ಅಳಿಸುವ ಪ್ರಕ್ರಿಯೆಯನ್ನು ನಿಷ್ಕ್ರಿಯಗೊಳಿಸುವಿಕೆಯು ಆರಂಭಿಸುತ್ತದೆ. ನಿಮ್ಮ ಖಾತೆಯನ್ನು ಪುನಃ ಸಕ್ರಿಯಗೊಳಿಸಲು ಬಯಸುತ್ತೀರಾ ಎಂಬುದನ್ನು ನಿರ್ಧರಿಸಲು ನಿಮಗೆ ಅವಕಾಶ ನೀಡುವ 30 ದಿನದ ಸೌಲಭ್ಯವನ್ನು ಈ ಹಂತವು ಆರಂಭಿಸುತ್ತದೆ.

ನಿಮ್ಮ Twitter ಖಾತೆಯನ್ನು ನಿಷ್ಕ್ರಿಯಗೊಳಿಸುವುದು ಎಂದರೆ ನಿಮ್ಮ ಬಳಕೆದಾರರ ಹೆಸರು (ಅಥವಾ "ಹ್ಯಾಂಡಲ್") ಮತ್ತು ಸಾರ್ವಜನಿಕ ಪ್ರೊಫೈಲ್‌ twitter.com, iOS ಗಾಗಿ Twitter ಅಥವಾ Android ಗಾಗಿ Twitter ನಲ್ಲಿ ಕಾಣಿಸುವುದಿಲ್ಲ ಎಂದರ್ಥ. 
 

 

ನಿಮ್ಮ Twitter ಖಾತೆ ಅಳಿಸುವುದು

ನಿಮ್ಮ 30 ದಿನದ ನಿಷ್ಕ್ರಿಯಗೊಳಿಸುವಿಕೆ ಸೌಲಭ್ಯದ ನಂತರ, ನಿಮ್ಮ Twitter ಖಾತೆಯನ್ನು ಶಾಶ್ವತವಾಗಿ ಅಳಿಸಲಾಗುತ್ತದೆ. 30 ದಿನದ ಸೌಲಭ್ಯದಲ್ಲಿ ನೀವು ನಿಮ್ಮ ಖಾತೆಗೆ ಲಾಗಿನ್ ಮಾಡದಿದ್ದರೆ, ನಿಮ್ಮ Twitter ಖಾತೆಯನ್ನು ಶಾಶ್ವತವಾಗಿ ಅಳಿಸಲು ನೀವು ಬಯಸುತ್ತೀರಿ ಎಂಬುದನ್ನು ತಿಳಿಸುತ್ತದೆ. ನಿಮ್ಮ ಖಾತೆಯನ್ನು ಅಳಿಸಿದರೆ, ನಮ್ಮ ಸಿಸ್ಟಮ್‌ಗಳಲ್ಲಿ ಇನ್ನು ನಿಮ್ಮ ಖಾತೆ ಇರುವುದಿಲ್ಲ. ನಿಮ್ಮ ಹಿಂದಿನ ಖಾತೆಯನ್ನು ಪುನಃ ಸಕ್ರಿಯಗೊಳಿಸಲು ನಿಮಗೆ ಸಾಧ್ಯವಾಗುವುದಿಲ್ಲ ಮತ್ತು ಯಾವುದೇ ಹಳೆಯ ಟ್ವೀಟ್‌ಗಳಿಗೆ ನೀವು ಪ್ರವೇಶ ಹೊಂದಿರುವುದಿಲ್ಲ.

ನಿಮ್ಮ 30 ದಿನಗಳ ನಿಷ್ಕ್ರಿಯಗೊಳಿಸುವಿಕೆ ನಂತರ, ನಿಮ್ಮ Twitter ಖಾತೆಯನ್ನು ಶಾಶ್ವತವಾಗಿ ಅಳಿಸಿದ ಮೇಲೆ, ಖಾತೆಗಳ ನೋಂದಣಿಗೆ ನಿಮ್ಮ ಬಳಕೆದಾರರ ಹೆಸರು ಲಭ್ಯವಿರುತ್ತದೆ.

 

ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸುವುದಕ್ಕೂ ಮೊದಲು ತಿಳಿದಿರಬೇಕಾದ ಪ್ರಮುಖ ಸಂಗತಿಗಳು

ನಿಮ್ಮ Twitter ಖಾತೆಯನ್ನು ನಿಷ್ಕ್ರಿಯಗೊಳಿಸುವುದು ಅಥವಾ ಅಳಿಸಲು ನಿರ್ಧರಿಸಿದರೆ ಗಮನದಲ್ಲಿಟ್ಟುಕೊಳ್ಳಬೇಕಾದ ಕೆಲವು ಸಂಗತಿಗಳು ಇಲ್ಲಿವೆ:

  • ನಿಮ್ಮ Twitter ಖಾತೆಯನ್ನು ಅಳಿಸುವುದರಿಂದ, Google ಅಥವಾ Bing ನಂತಹ ಸರ್ಚ್‌ ಇಂಜಿನ್‌ಗಳಿಂದ ನಿಮ್ಮ ಮಾಹಿತಿಯು ಅಳಿಸಿಹೋಗುವುದಿಲ್ಲ. ಯಾಕೆಂದರೆ, ಈ ಸೈಟ್‌ಗಳನ್ನು Twitter ನಿಯಂತ್ರಿಸುವುದಿಲ್ಲ. ನೀವು ಸರ್ಚ್‌ ಇಂಜಿನ್‌ ಸಂಪರ್ಕಿಸಿದರೆ, ನೀವು ತೆಗೆದುಕೊಳ್ಳಬೇಕಾದ ಕೆಲವು ಹಂತಗಳಿವೆ:
  • ನಿಮ್ಮ Twitter ಖಾತೆಯನ್ನು ನಿಷ್ಕ್ರಿಯಗೊಳಿಸಿದಾಗ, ಇತರರ ಟ್ವೀಟ್‌ಗಳಲ್ಲಿ ನಿಮ್ಮ ಖಾತೆಯ ಬಳಕೆದಾರರ ಹೆಸರಿನ ಹೆಸರಿಸುವಿಕೆಗಳು ಇನ್ನೂ ಇರುತ್ತವೆ. ಆದರೆ, ನಿಮ್ಮ ಪ್ರೊಫೈಲ್‌ ಇನ್ನು ಲಭ್ಯವಿಲ್ಲದಿರುವುದರಿಂದ ಇದು ನಿಮ್ಮ ಪ್ರೊಫೈಲ್‌ಗೆ ಲಿಂಕ್ ಮಾಡುವುದಿಲ್ಲ. Twitter ನಿಯಮಗಳು ಅಡಿಯಲ್ಲಿ ಕಂಟೆಂಟ್ ಅನ್ನು ಪರಿಶೀಲಿಸಬೇಕು ಎಂದು ನೀವು ಬಯಸಿದರೆ, ಇಲ್ಲಿ ನೀವು ಟಿಕೆಟ್ ದಾಖಲಿಸಬಹುದು.
  • ನಿಮ್ಮ Twitter ಖಾತೆಗೆ ಸಂಬಂಧಿಸಿದ ಬಳಕೆದಾರರ ಹೆಸರು ಅಥವಾ ಇಮೇಲ್ ಅನ್ನು ಬದಲಿಸಲು ನಿಮ್ಮ ಖಾತೆಯನ್ನು ನೀವು ಅಳಿಸಬೇಕಿಲ್ಲ. ಯಾವುದೇ ಸಮಯದಲ್ಲಿ ಅದನ್ನು ನವೀಕರಿಸಲು ಖಾತೆ ಮಾಹಿತಿಗೆ ಹೋಗಿ.
  • 30 ದಿನದ ಸೌಲಭ್ಯದೊಳಗೆ ನಿಮ್ಮ ಖಾತೆಗೆ ಲಾಗಿನ್ ಮಾಡಿದರೆ ನಿಮ್ಮ ಖಾತೆ ಸುಲಭವಾಗಿ ಮರುಸ್ಥಾಪನೆಯಾಗುತ್ತದೆ.
  • ನಿಮ್ಮ Twitter ಡೇಟಾವನ್ನು ಡೌನ್‌ಲೋಡ್ ಮಾಡಲು ನೀವು ಬಯಸಿದರೆ, ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸುವುದಕ್ಕೂ ಮೊದಲು ನೀವು ವಿನಂತಿಸಬೇಕಾಗಿರುತ್ತದೆ. ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಿದರೆ Twitter ಸಿಸ್ಟಮ್‌ಗಳಿಂದ ಡೇಟಾ ತೆಗೆದುಹಾಕಲ್ಪಡುವುದಿಲ್ಲ.
  • ತನ್ನ ಪ್ಲಾಟ್‌ಫಾರಂ ಮತ್ತು Twitter ಬಳಸುವ ಜನರ ಸುರಕ್ಷತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ನಿಮ್ಮ ನಿಷ್ಕ್ರಿಯಗೊಳಿಸಿದ ಖಾತೆಯ ಬಗ್ಗೆ ಕೆಲವು ಮಾಹಿತಿಯನ್ನು Twitter ಉಳಿಸಿಕೊಳ್ಳಬಹುದು. ಇನ್ನಷ್ಟು ಮಾಹಿತಿಯನ್ನು ಇಲ್ಲಿ ಕಂಡುಕೊಳ್ಳಬಹುದು.
     

ನಿಮ್ಮ Twitter ಖಾತೆಯನ್ನು ನಿರ್ವಹಿಸುವ ಸಮಸ್ಯೆಯನ್ನು ನೀವು ಹೊಂದಿದ್ದರೆ, ನಿಮ್ಮ Twitter ಖಾತೆ ಅಳಿಸುವುದನ್ನು ಆಯ್ಕೆ ಮಾಡುವುದಕ್ಕೂ ಮೊದಲು ಸಾಮಾನ್ಯ ಸಮಸ್ಯೆಗಳನ್ನು ನಿರ್ವಹಿಸಲು ಈ ಸಲಹೆಗಳನ್ನು ನೋಡಿ.

 
ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸುವುದು ಹೇಗೆ
ಹಂತ 1

ನ್ಯಾವಿಗೇಶನ್ ಮೆನು ಐಕಾನ್ ಅನ್ನು ತಟ್ಟಿ, ನಂತರ ಸೆಟ್ಟಿಂಗ್‌ಗಳು ಮತ್ತು ಗೌಪ್ಯತೆ ಅನ್ನು ತಟ್ಟಿ.

ಹಂತ 3

ಖಾತೆ ನಿಷ್ಕ್ರಿಯಗೊಳಿಸುವಿಕೆ ಮಾಹಿತಿಯನ್ನು ಓದಿ, ನಂತರನಿಷ್ಕ್ರಿಯಗೊಳಿಸಿ ತಟ್ಟಿ.

ಹಂತ 4

ಪ್ರಾಂಪ್ಟ್ ಮಾಡಿದಾಗ ನಿಮ್ಮ ಪಾಸ್‌ವರ್ಡ್ ನಮೂದಿಸಿ ಮತ್ತು ನಿಷ್ಕ್ರಿಯಗೊಳಿಸಿ ತಟ್ಟಿ.

ಹಂತ 5

ನೀವು ಮುಂದುವರಿಸಲು ಬಯಸಿದ್ದೀರಿ ಎಂಬುದನ್ನು ದೃಢೀಕರಿಸಲು ಹೌದು, ನಿಷ್ಕ್ರಿಯಗೊಳಿಸಿ ತಟ್ಟುವ ಮೂಲಕ ಮುಂದುವರಿಯಿರಿ.

ಹಂತ 1

ಮೇಲಿನ ಮೆನುವಿನಲ್ಲಿ, ನಿಮಗೆ ನ್ಯಾವಿಗೇಶನ್ ಮೆನು ಐಕಾನ್ ಅಥವಾ ನಿಮ್ಮ ಪ್ರೊಫೈಲ್ ಐಕಾನ್ ಕಾಣಿಸುತ್ತದೆ. ನೀವು ಹೊಂದಿರುವ ಯಾವುದೇ ಐಕಾನ್ ಅನ್ನು ತಟ್ಟಿ, ನಂತರ ಸೆಟ್ಟಿಂಗ್​ಗಳು ಹಾಗೂ ಗೌಪ್ಯತೆ ಅನ್ನು ಆಯ್ಕೆಮಾಡಿ.

ಹಂತ 3

ಖಾತೆ ನಿಷ್ಕ್ರಿಯಗೊಳಿಸುವಿಕೆ ಮಾಹಿತಿಯನ್ನು ಓದಿ, ನಂತರನಿಷ್ಕ್ರಿಯಗೊಳಿಸಿ ತಟ್ಟಿ.

ಹಂತ 4

ಪ್ರಾಂಪ್ಟ್ ಮಾಡಿದಾಗ ನಿಮ್ಮ ಪಾಸ್‌ವರ್ಡ್ ನಮೂದಿಸಿ ಮತ್ತು ನಿಷ್ಕ್ರಿಯಗೊಳಿಸಿ ತಟ್ಟಿ.

ಹಂತ 5

ನೀವು ಮುಂದುವರಿಸಲು ಬಯಸಿದ್ದೀರಿ ಎಂಬುದನ್ನು ದೃಢೀಕರಿಸಲು ಹೌದು, ನಿಷ್ಕ್ರಿಯಗೊಳಿಸಿ ತಟ್ಟುವ ಮೂಲಕ ಮುಂದುವರಿಯಿರಿ.

ಹಂತ 1

ಇನ್ನಷ್ಟು ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ಡ್ರಾಪ್ ಡೌನ್ ಮೆನುವಿನಿಂದ ಸೆಟ್ಟಿಂಗ್​ಗಳು ಮತ್ತು ಗೌಪ್ಯತೆ ಕ್ಲಿಕ್ ಮಾಡಿ.

ಹಂತ 2

ನಿಮ್ಮ ಖಾತೆ ಟ್ಯಾಬ್‌ನಿಂದ, ನಿಮ್ಮ ಖಾತೆ ನಿಷ್ಕ್ರಿಯಗೊಳಿಸಿ ಮೇಲೆ ಕ್ಲಿಕ್ ಮಾಡಿ.

ಹಂತ 3

ಖಾತೆ ನಿಷ್ಕ್ರಿಯಗೊಳಿಸುವಿಕೆ ಮಾಹಿತಿ ಓದಿ, ನಂತರ ನಿಷ್ಕ್ರಿಯಗೊಳಿಸಿ ಕ್ಲಿಕ್ ಮಾಡಿ.

ಹಂತ 4

ಪ್ರಾಂಪ್ಟ್ ಮಾಡಿದಾಗ ನಿಮ್ಮ ಪಾಸ್‌ವರ್ಡ್ ನಮೂದಿಸಿ ಮತ್ತು ಖಾತೆ ನಿಷ್ಕ್ರಿಯಗೊಳಿಸಿ ಬಟನ್ ಕ್ಲಿಕ್ ಮಾಡುವ ಮೂಲಕ ನೀವು ಮುಂದುವರಿಯಲು ಬಯಸಿದ್ದೀರಿ ಎಂದು ದೃಢೀಕರಿಸಿ.


X ವಿಯೋಗವನ್ನು ಅನುಭವಿಸುತ್ತಿದ್ದೀರಿ ಮತ್ತು 30 ಕ್ಕಿಂತಲೂ ಕಡಿಮೆ ದಿನಗಳಾಗಿವೆ ಎಂದು ನೀವು ಕಂಡುಕೊಂಡಿದ್ದರೆ, ಲಾಗ್ ಇನ್ ಮಾಡಿ ಮತ್ತು ಈ ನಿಮ್ಮ ಖಾತೆ ಪುನಃ ಸಕ್ರಿಯಗೊಳಿಸುವ ಹಂತಗಳು ಅನುಸರಿಸಿ.
 

 

ಸಬ್‌ಸ್ಕ್ರಿಪ್ಷನ್‌ಗಳು ಮತ್ತು ಖಾತೆ ನಿಷ್ಕ್ರಿಯಗೊಳಿಸುವಿಕೆ

ನಿಮ್ಮ X ಚಂದಾದಾರಿಕೆಯನ್ನು ನಿಷ್ಕ್ರಿಯಗೊಳಿಸುವುದರಿಂದ X ಚಂದಾದಾರಿಕೆಯು ಸ್ವಯಂಚಾಲಿತವಾಗಿ ರದ್ದಾಗುವುದಿಲ್ಲ. X ಆಪ್‌ ಮೂಲಕ ಖರೀದಿ ಮಾಡಿದ ಯಾವುದೇ ಸಕ್ರಿಯ ಪಾವತಿ ಸಹಿತ ಸಬ್‌ಸ್ಕ್ರಿಪ್ಷನ್‌ಗಳನ್ನು (ಉದಾ., X Blue, ಸೂಪರ್ ಫಾಲೋಗಳು) ನೀವು ಹೊಂದಿದ್ದರೆ, ಅವು ಸಕ್ರಿಯವಾಗಿಯೇ ಇರುತ್ತವೆ. ನೀವು ಮೂಲದಲ್ಲಿ ಸಬ್‌ಸ್ಕ್ರೈಬ್ ಮಾಡಿದ ಪ್ಲಾಟ್‌ಫಾರಂ ಮೂಲಕ ಈ ಸಬ್‌ಸ್ಕ್ರಿಪ್ಷನ್‌ಗಳನ್ನು ನೀವು ನಿರ್ವಹಿಸಬಹುದು. X.com ನಲ್ಲಿ ಖರೀದಿ ಮಾಡಿದ ಸಬ್‌ಸ್ಕ್ರಿಪ್ಷನ್‌ಗಳು ನೀವು ನಿಮ್ಮ ಖಾತೆಯನ್ನು ನಿಷ್ಕ್ರಿಯಗೊಳಿಸಿದ ನಂತರ ಸ್ವಯಂಚಾಲಿತವಾಗಿ ರದ್ದಾಗುತ್ತವೆ.

X Blue ಸಬ್‌ಸ್ಕ್ರಿಪ್ಷನ್‌ ರದ್ದು ಮಾಡುವುದು ಹೇಗೆ

ಸೂಪರ್ ಫಾಲೋಗಳ ಸಬ್‌ಸ್ಕ್ರಿಪ್ಷನ್‌ ರದ್ದು ಮಾಡುವುದು ಹೇಗೆ

 

ನಿಷ್ಕ್ರಿಯಗೊಳಿಸುವಿಕೆ FAQ ಗಳು

Twitter ನಿಷ್ಕ್ರಿಯಗೊಳಿಸುವುದರಿಂದ ನನ್ನ ನೇರ ಸಂದೇಶಗಳೂ ಅಳಿಸಿಹೋಗುತ್ತವೆಯೇ?

30 ದಿನದ ನಿಷ್ಕ್ರಿಯಗೊಳಿಸುವಿಕೆ ಅವಧಿಯಲ್ಲಿ, ನಿಮ್ಮ ನೇರ ಸಂದೇಶಗಳನ್ನು ಅಳಿಸಲಾಗುವುದಿಲ್ಲ. ನಿಮ್ಮ ನಿಷ್ಕ್ರಿಯಗೊಳಿಸುವಿಕೆ ಅವಧಿ ಮುಗಿದು, ನಿಮ್ಮ ಖಾತೆಯನ್ನು ಅಳಿಸಿದಾಗ, ನೀವು ಕಳುಹಿಸಿದ ನೇರ ಸಂದೇಶಗಳನ್ನೂ ಅಳಿಸಲಾಗುತ್ತದೆ.

ನಾನು ನನ್ನ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ದೇನೆ. ಆದರೆ, ಇದು ಏಕೆ ಪುನಃ ಸಕ್ರಿಯಗೊಳ್ಳುತ್ತಲೇ ಇದೆ?

ನಿಮ್ಮ ಖಾತೆ ಆಕ್ಸೆಸ್ ಮಾಡಲು ನೀವು ಯಾವುದೇ ತೃತೀಯ ಪಕ್ಷದ ಆಪ್‌ಗಳಿಗೆ ಅಧಿಕಾರ ನೀಡಿದ್ದರೆ, ನೀವು ಪರೋಕ್ಷವಾಗಿ ಇನ್ನೊಂದು ಆಪ್‌ನಿಂದ ಲಾಗ್ ಇನ್ ಆಗುತ್ತಿರಬಹುದು. ಏಕೆಂದರೆ, Twitter ಗೆ ಲಾಗಿನ್ ಆಗುವುದು ನಿಮ್ಮ ಖಾತೆಯನ್ನು ಸ್ವಯಂಚಾಲಿತವಾಗಿ ಮರುಸಕ್ರಿಯಗೊಳಿಸುತ್ತದೆ. ನಿಮ್ಮ Twitter ಖಾತೆಗೆ ತೃತೀಯ ಪಕ್ಷದ ಆಪ್‌ ಆಕ್ಸೆಸ್ ಅನ್ನು ಹಿಂಪಡೆಯುವುದನ್ನು ಖಚಿತಪಡಿಸಿಕೊಳ್ಳಿ.

ನಾನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸುತ್ತಿರುವಾಗ ನನ್ನ ಬಳಿ ಪಾಸ್‌ವರ್ಡ್‌ ಇಲ್ಲದಿದ್ದರೆ ಏನು ಮಾಡುವುದು?

ಇದು ನಿಮ್ಮ ಕೈಗೆ ಸಿಗುವಂತೆ ಇಲ್ಲದಿದ್ದರೆ ಅಥವಾ ತಪ್ಪಾದ ಸಂದೇಶವನ್ನು ಸ್ವೀಕರಿಸುತ್ತಿದ್ದರೆ, ನಿಮ್ಮ ಪಾಸ್‌ವರ್ಡ್‌ ಅನ್ನು ನೀವು ಮರುನಿಗದಿ ಮಾಡಬೇಕಾಗಬಹುದು. ಪಾಸ್‌ವರ್ಡ್ ಮರುನಿಗದಿ ಇಮೇಲ್‌ ವಿನಂತಿಸಲು ಪ್ರಯತ್ನಿಸಿ.

ನಾನು ಪಾಸ್‌ವರ್ಡ್ ಮರುನಿಗದಿ ಇಮೇಲ್‌ ವಿನಂತಿಸಿದ್ದೇನೆ. ಆದರೆ, ನನ್ನ ಖಾತೆಯನ್ನು ಸೆಟಪ್‌ ಮಾಡಲು ನಾನು ಬಳಸಿದ ನನ್ನ ಇಮೇಲ್ ವಿಳಾಸಕ್ಕೆ ಪ್ರವೇಶವನ್ನು ಕಳೆದುಕೊಂಡಿದ್ದರೆ ಏನು ಮಾಡುವುದು?

ನಿಮ್ಮ Twitter ಖಾತೆಗೆ ಸಂಪರ್ಕಿಸಿದ ನಿಮ್ಮ ಇಮೇಲ್ ವಿಳಾಸಕ್ಕೆ ಪ್ರವೇಶವನ್ನು ನೀವು ಕಳೆದುಕೊಂಡರೆ, ನಿಮ್ಮ ಇಮೇಲ್ ಸೇವೆ ಪೂರೈಕೆದಾರರನ್ನು ನೀವು ಸಂಪರ್ಕಿಸಬೇಕು. ನಿಮ್ಮ ಇಮೇಲ್ ವಿಳಾಸ ಪ್ರವೇಶಕ್ಕೆ ಸಹಾಯ ಪಡೆಯಿರಿ. ನಿಷ್ಕ್ರಿಯಗೊಳಿಸುವಿಕೆಯು ಖಚಿತಪಡಿಸಿದ ಖಾತೆದಾರರಿಂದ ಅಥವಾ ಖಚಿತಪಡಿಸಿದ ಖಾತೆದಾರರ ವಿನಂತಿಯ ಮೂಲಕ ಮಾಡಬೇಕಾದ ಕ್ರಮವಾಗಿದೆ. ಇಲ್ಲವಾದಲ್ಲಿ, ಖಚಿತಪಡಿಸಿದ ಇಮೇಲ್ ವಿಳಾಸದಿಂದ ನೀವು ನಮ್ಮನ್ನು ಸಂಪರ್ಕಿಸಬಹುದು (ಅಥವಾ ಖಾತೆಯಲ್ಲಿನ ಪರಿಶೀಲಿಸಿದ ಮೊಬೈಲ್‌ ಸಂಖ್ಯೆಗೆ ಪ್ರವೇಶ ಪಡೆಯಬಹುದು), ನಿಮ್ಮ ಪರವಾಗಿ ಖಾತೆಯನ್ನು ನಾವು ನಿಷ್ಕ್ರಿಯಗೊಳಿಸಲಾಗದು. ನಿಮ್ಮ ಖಾತೆಯಲ್ಲಿನ ಪರಿಶೀಲಿಸಿದ ಮೊಬೈಲ್ ಸಂಖ್ಯೆಗೆ ನೀವು ಪ್ರವೇಶ ಹೊಂದಿಲ್ಲದಿದ್ದರೆ, ಆಗ ನೀವು ಪಾಸ್‌ವರ್ಡ್ ಮರುನಿಗದಿ ವಿನಂತಿಯನ್ನು ಮಾಡಬಹುದು.

ನನ್ನ ಲಾಕ್ ಆದ ಅಥವಾ ಅಮಾನತು ಆದ ಖಾತೆಯನ್ನು ನಾನು ಹೇಗೆ ನಿಷ್ಕ್ರಿಯಗೊಳಿಸುವುದು?

ಅಮಾನತು ಮಾಡಿದ ಅಥವಾ ಲಾಕ್ ಮಾಡಿದ ಖಾತೆಯನ್ನು ನಿಷ್ಕ್ರಿಯಗೊಳಿಸಲು, ದಯವಿಟ್ಟು ಇಲ್ಲಿ ವಿನಂತಿಯನ್ನು ಸಲ್ಲಿಸಿ.ನಮ್ಮ ಗೌಪ್ಯತಾ ನೀತಿಯ "ನಮ್ಮನ್ನು ಸಂಪರ್ಕಿಸುವುದು ಹೇಗೆ" ವಿಭಾಗದ ಅಡಿಯಲ್ಲಿ ಪಟ್ಟಿ ಮಾಡಿದ ಸಂಪರ್ಕಗಳಿಗೆ ವಿನಂತಿಗಳನ್ನು ಕಳುಹಿಸಬಹುದು.

ನಿಮ್ಮ ಖಾತೆಯನ್ನು ಅನ್‌ಲಾಕ್ ಮಾಡಲು ಸಹಾಯವನ್ನೂ ನೀವು ಪಡೆಯಬಹುದು.ಮೇಲ್ಮನವಿ ಸಲ್ಲಿಸುವುದೂ ಸೇರಿದಂತೆ ನಿಮ್ಮ ಲಾಕ್ ಮಾಡಿದ ಅಥವಾ ಅಮಾನತು ಮಾಡಿದ ಖಾತೆಯ ಕುರಿತು ಇನ್ನಷ್ಟು ಮಾಹಿತಿ ಪಡೆಯಿರಿ.

ಈ ಲೇಖನ ಹಂಚಿಕೊಳ್ಳಿ