Twitter ಹುಡುಕಾಟ ಬಳಸುವ ಬಗೆ

ನಿಗದಿತ ಟ್ವೀಟ್‌ಗಳು, ಖಾತೆಗಳು ಅಥವಾ ನಡೆಯುತ್ತಿರುವ ಸಂವಹನಗಳನ್ನು ಹುಡುಕಿ

Twitter ನಲ್ಲಿ ಹುಡುಕಾಟ ಬಳಸಲು ಹಲವು ವಿಧಗಳಿವೆ. ನಿಮ್ಮ, ಸ್ನೇಹಿತರ, ಸ್ಥಳೀಯ ವ್ಯವಹಾರಗಳ ಮತ್ತು ಜನಪ್ರಿಯ ಮನರಂಜಕರಿಂದ ಜಾಗತಿಕ ರಾಜಕೀಯ ನಾಯಕರವರೆಗೆ ಯಾರದೇ ಟ್ವೀಟ್‌ಗಳನ್ನು ನೀವು ಕಂಡುಕೊಳ್ಳಬಹುದು. ಕೀಲಿಪದ ಅಥವಾ ಹ್ಯಾಶ್‌ಟ್ಯಾಗ್‌ಗಳನ್ನು ಹುಡುಕುವ ಮೂಲಕ, ಬ್ರೇಕಿಂಗ್ ನ್ಯೂಸ್ ಅಥವಾ ವೈಯಕ್ತಿಕ ಹಿತಾಸಕ್ತಿಗಳ ಕುರಿತು ನಡೆಯುತ್ತಿರುವ ಸಂವಾದಗಳನ್ನು ನೀವು ಹಿಂಬಾಲಿಸಬಹುದು.  

ಸುರಕ್ಷಿತ ಹುಡುಕಾಟ ಮೋಡ್ ಮೂಲಕ ನಿಮ್ಮ ಹುಡುಕಾಟ ಫಲಿತಾಂಶಗಳ ಮೇಲೆ ನಾವು ನಿಮಗೆ ನಿಯಂತ್ರಣ ಒದಗಿಸುತ್ತೇವೆ. ನಿಮ್ಮ ಹುಡುಕಾಟ ಫಲಿತಾಂಶಗಳಿಂದ ನೀವು ಸದ್ದಡಗಿಸಿದ ಅಥವಾ ತಡೆಹಿಡಿದವುಗಳ ಜೊತೆಗೆ ಈ ಫಿಲ್ಟರ್‌ಗಳು ಸಂಭಾವ್ಯ ಸೂಕ್ಷ್ಮ ಕಂಟೆಂಟ್ ಅನ್ನು ಹೊರಗಿಡುತ್ತವೆ. ಯಾವುದೇ ಸಮಯದಲ್ಲಿ ನೀವು ಇದನ್ನು ಆಫ್‌ ಮಾಡುವ ಅಥವಾ ಪುನಃ ಆನ್ ಮಾಡುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ (ಈ ಕೆಳಗೆ ಪಟ್ಟಿ ಮಾಡಿದ ಸೂಚನೆಗಳು).

ವೆಬ್‌ನಲ್ಲಿ ನಿವು ಖಾತೆಗೆ ಸೈನ್ ಇನ್ ಮಾಡಿದಾಗ, iOS ಗಾಗಿ Twitter ಅಥವಾ Android ಆಪ್‌ಗಳಲ್ಲಿರುವುದಕ್ಕಿಂತ ಹುಡುಕಾಟವು ಸ್ವಲ್ಪ ವಿಭಿನ್ನವಾಗಿರುತ್ತದೆ. ಈ ಕೆಳಗಿನ ಎರಡಕ್ಕೂ ನೀವು ಸೂಚನೆಗಳನ್ನು ಕಂಡುಕೊಳ್ಳಬಹುದು.

View instructions for:

iOS ಗಾಗಿ Twitter ನಲ್ಲಿ ಹುಡುಕಾಟ

  1. ಎಕ್ಸ್‌ಪ್ಲೋರ್ ಟ್ಯಾಬ್ ತಟ್ಟಿ 
  2. ಪುಟದ ಮೇಲ್ಭಾಗದಲ್ಲಿ, ಹುಡುಕಾಟ ಬಾಕ್ಸ್‌ನಲ್ಲಿ ನಿಮ್ಮ ಹುಡುಕಾಟವನ್ನು ನಮೂದಿಸಿ ಮತ್ತು ಹುಡುಕಾಟವನ್ನು ತಟ್ಟಿ.
  3. ಟ್ವೀಟ್‌ಗಳು, ಫೋಟೋಗಳು ಖಾತೆಗಳು ಮತ್ತು ಇನ್ನಷ್ಟರ ಸಂಯೋಜನೆಯನ್ನು ನಿಮ್ಮ ಫಲಿತಾಂಶಗಳು ತೋರಿಸುತ್ತವೆ.
  4. ಪ್ರಮುಖ, ಇತ್ತೀಚಿನ, ಜನರು, ಫೋಟೋಗಳು, ವೀಡಿಯೋಗಳು, ಸುದ್ದಿ ಅಥವಾ ಪ್ರಸಾರಣ (ನಿಮ್ಮ ಹುಡುಕಾಟ ಫಲಿತಾಂಶಗಳ ಮೇಲೆ ಇರುವ) ತಟ್ಟುವ ಮೂಲಕ ನಿಮ್ಮ ಹುಡುಕಾಟಗಳನ್ನು ಫಿಲ್ಟರ್ ಮಾಡಿ.
  5. ಎಲ್ಲ ಜನರು ಅಥವಾ ನೀವು ಹಿಂಬಾಲಿಸುವ ಜನರು ಮತ್ತು ಎಲ್ಲೆಡೆ ಅಥವಾ ನಿಮ್ಮ ಸಮೀಪ ಕ್ಕೆ ಅನುಗುಣವಾಗಿ ನಿಮ್ಮ ಫಲಿತಾಂಶಗಳನ್ನು ಸಂಸ್ಕರಿಸಲುಹುಡುಕಾಟ ಬಾರ್‌ನಲ್ಲಿನ ಫಿಲ್ಟರ್ ಐಕಾನ್  ತಟ್ಟಿ .

Note: ನಿಮ್ಮ ಹುಡುಕಾಟ ಫಲಿತಾಂಶಗಳಿಂದ ನೀವು ಸದ್ದಡಗಿಸಿದ ಅಥವಾ ತಡೆಹಿಡಿದವುಗಳ ಜೊತೆಗೆ ಈ ಫಿಲ್ಟರುಗಳು ಸಂಭಾವ್ಯ ಸೂಕ್ಷ್ಮ ಕಂಟೆಂಟ್ ಮತ್ತು/ಅಥವಾ ಖಾತೆಗಳನ್ನು ಹೊರಗಿಡಲು ನಿಮ್ಮ ಹುಡುಕಾಟ ಫಲಿತಾಂಶಗಳನ್ನು ಫಿಲ್ಟರ್‌ ಮಾಡುವುದಕ್ಕಾಗಿ ಸುರಕ್ಷಿತ ಹುಡುಕಾಟ ಸೆಟ್ಟಿಂಗ್‌ ಅನುವು ಮಾಡುತ್ತದೆ. twitter.com ನಲ್ಲಿ ನಿಮ್ಮ ಖಾತೆಗೆ ಲಾಗಿನ್ ಮಾಡಿ ವೆಬ್‌ನಿಂದ ಹುಡುಕಾಟ ಸೂಚನೆಗಳನ್ನು ಬಳಸಿ ನೀವು ಈ ಸೆಟ್ಟಿಂಗ್ ಅನ್ನು ಹೊಂದಿಸಬಹುದು. ವೆಬ್‌ನಲ್ಲಿ, ನಿಮ್ಮ iOS ಆಪ್‌ ಮತ್ತು Android ಗಾಗಿ Twitterನಲ್ಲಿ ಹುಡುಕಾಟಗಳಿಗೆ ನಿಮ್ಮ ಸೆಟ್ಟಿಂಗ್‌ಗಳು ಅನ್ವಯವಾಗುತ್ತವೆ.

Android ಗಾಗಿ Twitter ನಲ್ಲಿ ಹುಡುಕಾಟ

  1. ಎಕ್ಸ್‌ಪ್ಲೋರ್ ಟ್ಯಾಬ್ ತಟ್ಟಿ
  2. ಹುಡುಕಾಟ ಬಾಕ್ಸ್‌ನಲ್ಲಿ ನಿಮ್ಮ ಹುಡುಕಾಟವನ್ನು ನಮೂದಿಸಿ ಮತ್ತು ಹುಡುಕಾಟವನ್ನು ತಟ್ಟಿ.
  3. ಟ್ವೀಟ್‌ಗಳು, ಫೋಟೋಗಳು ಖಾತೆಗಳು ಮತ್ತು ಇನ್ನಷ್ಟರ ಸಂಯೋಜನೆಯನ್ನು ನಿಮ್ಮ ಫಲಿತಾಂಶಗಳು ತೋರಿಸುತ್ತವೆ.
  4. ಪ್ರಮುಖ, ಇತ್ತೀಚಿನ, ಜನರು, ಫೋಟೋಗಳು, ವೀಡಿಯೋಗಳು ಅಥವಾ ಸುದ್ದಿ ಅಥವಾ Periscope (ನಿಮ್ಮ ಹುಡುಕಾಟ ಫಲಿತಾಂಶಗಳ ಮೇಲೆ ಇರುವ) ತಟ್ಟುವ ಮೂಲಕ ನಿಮ್ಮ ಹುಡುಕಾಟಗಳನ್ನು ಫಿಲ್ಟರ್ ಮಾಡಿ.
  5. ಯಾರಿಂದಲಾದರೂ ಅಥವಾ ನೀವು ಹಿಂಬಾಲಿಸುವ ಜನರು ಮತ್ತು ಎಲ್ಲಾದರೂ ಅಥವಾ ನಿಮ್ಮ ಸಮೀಪ ಕ್ಕೆ ಅನುಗುಣವಾಗಿ ನಿಮ್ಮ ಫಲಿತಾಂಶಗಳನ್ನು ಸಂಸ್ಕರಿಸಲುಹುಡುಕಾಟ ಬಾರ್‌ನಲ್ಲಿನ ಫಿಲ್ಟರ್ ಐಕಾನ್  ತಟ್ಟಿ. 
  6. ಹುಡುಕಾಟ ಸೆಟ್ಟಿಂಗ್‌ಗಳ ಪ್ರವೇಶಾವಕಾಶಕ್ಕೆ ಓವರ್‌ಫ್ಲೋ ಐಕಾನ್ ಅನ್ನು ತಟ್ಟಿ ನಿಮ್ಮ ಹುಡುಕಾಟ ಫಲಿತಾಶಗಳನ್ನು ಫಿಲ್ಟರ್‌ ಮಾಡಲು ಸುರಕ್ಷಿತ ಹುಡುಕಾಟವು ಎರಡು ಆಯ್ಕೆಯನ್ನು ಒದಗಿಸುತ್ತದೆ:
    1. ಫಲಿತಾಂಶಗಳಿಂದ ಸಂಭಾವ್ಯ ಸೂಕ್ಷ್ಮ ಕಂಟೆಂಟ್ ಹೊರತುಪಡಿಸುವಿಕೆ: ಈ ಸೆಟ್ಟಿಂಗ್ ನಿಷ್ಕ್ರಿಯಗೊಳಿಸಲು, ಆಫ್ ಮಾಡಲು ಸೂಕ್ಷ್ಮಕಂಟೆಂಟ್ ಮರೆ ಮಾಡಿ ಪಕ್ಕದಲ್ಲಿರುವ ಬಾಕ್ಸ್‌ ಗುರುತು ತೆಗೆಯಿರಿ.
    2. ನಿವು ಸದ್ದಡಗಿಸಿದ ಅಥವಾ ನಿರ್ಬಂಧಿಸಿದ ಖಾತೆಗಳನ್ನು ಹೊರಗಿಡುವಿಕೆ: ಈ ಸೆಟ್ಟಿಂಗ್ ನಿಷ್ಕ್ರಿಯಗೊಳಿಸಲು, ಆಫ್ ಮಾಡಲು ತಡೆಹಿಡಿದ ಮತ್ತು ಸದ್ದಡಗಿಸಿದ ಖಾತೆಗಳನ್ನು ತೆಗೆಯುವುದು ಪಕ್ಕದಲ್ಲಿರುವ ಬಾಕ್ಸ್‌ ಗುರುತು ತೆಗೆಯಿರಿ.

Note: ನಿಮ್ಮ ಹುಡುಕಾಟ ಆಯ್ಕೆಗಳು ಮತ್ತು ಫಲಿತಾಂಶಗಳನ್ನು ರೂಪಿಸುವ ಕುರಿತು ಹೆಚ್ಚು ತಿಳಿಯಲು, ಸುಧಾರಿತ ಹುಡುಕಾಟದ ಕುರಿತಾದ ನಮ್ಮ ಲೇಖನ ಓದಿ.

ವೆಬ್‌ನಿಂದ ಹುಡುಕಿ

  1. ಪುಟದ ಮೇಲ್ಭಾಗದಲ್ಲಿ, ಹುಡುಕಾಟ ಬಾಕ್ಸ್‌ನಲ್ಲಿ ನಿಮ್ಮ ಹುಡುಕಾಟವನ್ನು ನಮೂದಿಸಿ.
  2. ಟ್ವೀಟ್‌ಗಳು, ಫೋಟೋಗಳು ಖಾತೆಗಳು ಮತ್ತು ಇನ್ನಷ್ಟರ ಸಂಯೋಜನೆಯನ್ನು ನಿಮ್ಮ ಫಲಿತಾಂಶಗಳು ತೋರಿಸುತ್ತವೆ.
  3. ಪ್ರಮುಖ, ಇತ್ತೀಚಿನ, ಜನರು, ಫೋಟೋಗಳುವೀಡಿಯೋಗಳು (ನಿಮ್ಮ ಹುಡುಕಾಟ ಫಲಿತಾಂಶಗಳ ಮೇಲೆ ಇರುವ) ಕ್ಲಿಕ್ ಮಾಡುವ ಮೂಲಕ ನಿಮ್ಮ ಹುಡುಕಾಟಗಳನ್ನು ಫಿಲ್ಟರ್ ಮಾಡಿ.
  4. ಯಾರಿಂದಲಾದರೂ ಅಥವಾ ನಿಮಗೆ ತಿಳಿದಿರುವ ವ್ಯಕ್ತಿ ಮತ್ತು ಎಲ್ಲಿಂದಲಾದರೂ ಅಥವಾ ನಿಮ್ಮ ಸಮೀಪದಿಂದ ನಿಮ್ಮ ಫಲಿತಾಂಶಗಳನ್ನು ಫಿಲ್ಟರ್ ಮಾಡಲು ಹುಡುಕಾಟ ಫಿಲ್ಟರುಗಳ ಆಯ್ಕೆಯನ್ನು ಕ್ಲಿಕ್ ಮಾಡಿ. ಹೆಚ್ಚುವರಿಯಾಗಿ, ವಿಭಿನ್ನ ಭಾಷೆಯನ್ನು ನೀವು ಆಯ್ಕೆ ಮಾಡಬಹುದು ಅಥವಾ ಸುಧಾರಿತ ಹುಡುಕಾಟವನ್ನು ನಡೆಸಬಹುದು.
  5. ಹೆಚ್ಚಿನ ಆಯ್ಕೆಗಳಿಗಾಗಿ ಹುಡುಕಾಟ ಫಲಿತಾಂಶಗಳ ಪುಟದ ಬಲ ಭಾಗದಲ್ಲಿರುವ ಇನ್ನಷ್ಟು ಐಕಾನ್  ಅನ್ನು ಕ್ಲಿಕ್ ಮಾಡಿ:
    1. ನಿಮ್ಮಹುಡುಕಾಟ ಫಲಿತಾಂಶಗಳನ್ನು ಫಿಲ್ಟರ್ ಮಾಡಲು ಸುರಕ್ಷಿತ ಹುಡುಕಾಟ ನಿಷ್ಕ್ರಿಯಗೊಳಿಸಲು (ಅಥವಾ ಮರುಸಕ್ರಿಯಗೊಳಿಸಲು) ಹುಡುಕಾಟ ಸೆಟ್ಟಿಂಗ್‌ಗಳನ್ನು ಕ್ಲಿಕ್ ಮಾಡಿ:
    2. ಸೂಕ್ಷ್ಮ ಕಂಟೆಂಟ್ ಮರೆ ಮಾಡಿ ಮತ್ತು ತಡೆಹಿಡಿದ ಮತ್ತು ಸದ್ದಡಗಿಸಿದ ಖಾತೆಗಳನ್ನು ತೆಗೆಯಿರಿ ಸೇರಿದಂತೆ ಸುರಕ್ಷಿತ ಹುಡುಕಾಟ ಸೆಟ್ಟಿಂಗ್‌ಗಳು. ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸಲು ಬಾಕ್ಸ್‌ ಗುರುತು ತೆಗೆಯಿರಿ, ಯಾವುದೇ ಸಮಯದಲ್ಲಿ ನೀವು ಮರುಸಕ್ರಿಯಗೊಳಿಸಬಹುದು. ಗಮನಿಸಿ: ಪರಿಣಾಮ ಬೀರಲು ಈ ಸೆಟ್ಟಿಂಗ್ ಹಲವು ನಿಮಿಷಗಳನ್ನು ತೆಗೆದುಕೊಳ್ಳಬಹುದು.
    3. ನಿಮ್ಮ ಹುಡುಕಾಟ ಟರ್ಮ್‌ ಅನ್ನು ಉಳಿಸಲು ಈ ಹುಡುಕಾಟವನ್ನು ಉಳಿಸಿ ಕ್ಲಿಕ್ ಮಾಡಿ.
    4. ವೆಬ್‌ಸೈಟ್‌ಗೆ ಹುಡುಕಾಟ ವಿಜೆಟ್ ಅನ್ನು ರಚಿಸಲು ಈ ಹುಡುಕಾಟವನ್ನು ಎಂಬೆಡ್ ಮಾಡಿ ಕ್ಲಿಕ್ ಮಾಡಿ. ನಮ್ಮ ಡೆವೆಲಪರ್ ದಾಖಲೆಯಲ್ಲಿ ಹೆಚ್ಚಿನ ಮಾಹಿತಿ ಕಂಡುಕೊಳ್ಳಿ.

Bookmark or share this article