Twitter ನಲ್ಲಿ ಲೈವ್ ವೀಡಿಯೋಗಳನ್ನು ಹೇಗೆ ರಚಿಸುವುದು
ಬ್ರೇಕಿಂಗ್ ನ್ಯೂಸ್ ಹಾಗೂ ಪ್ರಮುಖ ನೇರ ಪ್ರಸಾರಗಳೂ ಒಳಗೊಂಡಂತೆ ವಿಶ್ವದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಲು ಇರುವ ಸ್ಥಳವೇ Twitter. ನೀವು ಲೈವ್ ಆಗಿ ನಡೆಯುತ್ತಿರುವುದನ್ನು ಹಂಚಿಕೊಳ್ಳಲು Periscope ಬೆಂಬಲಿತ ಲೈವ್ ವೀಡಿಯೊಗಳನ್ನು ಸುಲಭವಾಗಿ ರಚಿಸಬಹುದು.
ಅತಿಥಿಗಳೊಂದಿಗೆ ಲೈವ್ಗೆ ಹೋಗಿ
ಸಕ್ರಿಯಗೊಳಿಸಿದಾಗ, ಅತಿಥಿಗಳಾಗಿ ಸೇರಲು ತಮ್ಮ ವೀಕ್ಷಕರನ್ನು ಪ್ರಸಾರಕರು ಅಹ್ವಾನಿಸಬಹುದು ಮತ್ತು ತಮ್ಮ ವೀಕ್ಷಕರನ್ನು ಅತಿಥಿಯಾಗಿ ಸೇರುವಂತೆ ನೇರ ಪ್ರಸಾರದ ವೀಕ್ಷಕರು ವಿನಂತಿಸಬಹುದು. ಒಂದು ಬಾರಿಗೆ ಗರಿಷ್ಠ ಮೂರು ಅತಿಥಿಗಳು ನೇರ ಪ್ರಸಾರದಲ್ಲಿ ಭಾಗವಹಿಸಬಹುದು. ಬ್ರಾಡ್ಕಾಸ್ಟ್ ಮಾಡುವವರು ಕ್ಯಾಮೆರಾ ಆಫ್ ಮಾಡಲು ಆಯ್ಕೆಮಾಡಬಹುದು ಮತ್ತು ಧ್ವನಿ ಮೂಲಕ ಮಾತ್ರ ಭಾಗವಹಿಸಬಹುದು. ಅತಿಥಿಗಳು ಧ್ವನಿ ಮೂಲಕ ಭಾಗವಹಿಸುತ್ತಾರೆ ಮತ್ತು ಎಲ್ಲ ವೀಕ್ಷಕರೂ ಕೇಳಿಸಿಕೊಳ್ಳುತ್ತಾರೆ.
ಅತಿಥಿಗಳೊಂದಿಗೆ ನೇರ ಪ್ರಸಾರ ಆರಂಭಿಸಲು:
ನಿಮ್ಮ ಕಾಲರೇಖೆಯಿಂದ ಎಡಕ್ಕೆ ಸ್ವೈಪ್ ಮಾಡುವ ಮೂಲಕ ಅಥವಾ ಟ್ವೀಟ್ ಕಂಪೋಸರ್ನಿಂದ ತಟ್ಟುವ ಮೂಲಕ ಕ್ಯಾಮೆರಾ ತೆರೆಯಿರಿ.
ಕೆಳಭಾಗದಲ್ಲಿ ಲೈವ್ ಮೋಡ್ ತಟ್ಟಿ.
ನಿಮ್ಮ ಪ್ರಸಾರಕ್ಕೆ ಸೇರುವಂತೆ ವಿನಂತಿ ಮಾಡಲು ಲೈವ್ ವೀಕ್ಷಕರಿಗೆ ಅನುಮತಿ ನೀಡುವುದಕ್ಕಾಗಿ ಬಲ ಮೇಲ್ಭಾಗದಲ್ಲಿರುವ ಐಕಾನ್ ತಟ್ಟಿ.
ನಿಮ್ಮ ಪ್ರಸಾರವನ್ನು ಆರಂಭಿಸಲು ಲೈವ್ಗೆ ಹೋಗಿ ತಟ್ಟಿ.
ನಿಮ್ಮ ಪ್ರಸಾರಕ್ಕೆ ಸೇರುವಂತೆ ವೀಕ್ಷಕರು ಕೇಳಿದಾಗ ಚಾಟ್ನಲ್ಲಿ ಒಂದು ಸೂಚನೆ ಕಾಣಿಸಿಕೊಳ್ಳುತ್ತದೆ. ಕೆಳಭಾಗದ ಬಾರ್ನಲ್ಲಿ ಐಕಾನ್ ತಟ್ಟುವ ಮೂಲಕ ನೀವು ಆಹ್ವಾನ ಪಟ್ಟಿಯನ್ನೂ ನೋಡಬಹುದು ಮತ್ತು ಪ್ರಸಾರಕ್ಕೆ ಸೇರುವಂತೆ ಆಹ್ವಾನಿಸಲ್ಪಟ್ಟ ಎಲ್ಲ ವೀಕ್ಷಕರನ್ನೂ ನೋಡಬಹುದು.
ಪ್ರಸಾರಕ್ಕೆ ಸೇರಿಸಲು ಅನ್ನು ತಟ್ಟಿ. ಅವರು ಸೇರುವುದಕ್ಕೂ ಮೊದಲು 5 ಸೆಕೆಂಡ್ ಕ್ಷಣಗಣನೆ ಇರುತ್ತದೆ.
- ಪ್ರಸಾರಕ್ಕೆ ವಿನಂತಿಯನ್ನು ತೆಗೆದುಹಾಕಲು, ಅವರ ಅವತಾರ್ನ ಬಲ ಮೇಲ್ಭಾಗದಲ್ಲಿರುವ X ತಟ್ಟಿ.
ನೇರ ಪ್ರಸಾರಕ್ಕೆ ವೀಕ್ಷಕರನ್ನು ಆಹ್ವಾನಿಸಲು:
ನಿಮ್ಮ ಕಾಲರೇಖೆಯಿಂದ ಎಡಕ್ಕೆ ಸ್ವೈಪ್ ಮಾಡುವ ಮೂಲಕ ಅಥವಾ ಟ್ವೀಟ್ ಕಂಪೋಸರ್ನಿಂದ ಐಕಾನ್ ತಟ್ಟುವ ಮೂಲಕ ಕ್ಯಾಮೆರಾ ತೆರೆಯಿರಿ.
ಕೆಳಭಾಗದಲ್ಲಿ ಲೈವ್ ಮೋಡ್ ತಟ್ಟಿ.
ನಿಮ್ಮ ಪ್ರಸಾರಕ್ಕೆ ಸೇರುವಂತೆ ವಿನಂತಿ ಮಾಡಲು ಲೈವ್ ವೀಕ್ಷಕರಿಗೆ ಅನುಮತಿ ನೀಡುವುದಕ್ಕಾಗಿ ಬಲ ಮೇಲ್ಭಾಗದಲ್ಲಿರುವ ಐಕಾನ್ ತಟ್ಟಿ.
ನಿಮ್ಮ ಪ್ರಸಾರವನ್ನು ಆರಂಭಿಸಲು ಲೈವ್ಗೆ ಹೋಗಿ ತಟ್ಟಿ.
ಐಕಾನ್ ತಟ್ಟಿ.
- ಅತಿಥಿಗಳನ್ನು ಆಹ್ವಾನಿಸಿ ಎಂಬುದನ್ನು ತಟ್ಟಿ.
ನೇರ ಪ್ರಸಾರಕ್ಕೆ ಅತಿಥಿಗಳನ್ನು ಸೇರಿಸಲು:
- ನಿಮ್ಮ ಕಾಲರೇಖೆಯಿಂದ ಎಡಕ್ಕೆ ಸ್ವೈಪ್ ಮಾಡುವ ಮೂಲಕ ಅಥವಾ ಟ್ವೀಟ್ ಕಂಪೋಸರ್ನಿಂದ ಐಕಾನ್ ತಟ್ಟುವ ಮೂಲಕ ಕ್ಯಾಮೆರಾ ತೆರೆಯಿರಿ.
- ಕೆಳಭಾಗದಲ್ಲಿ ಲೈವ್ ಮೋಡ್ ತಟ್ಟಿ.
- ನಿಮ್ಮ ಪ್ರಸಾರಕ್ಕೆ ಸೇರುವಂತೆ ವಿನಂತಿ ಮಾಡಲು ಲೈವ್ ವೀಕ್ಷಕರಿಗೆ ಅನುಮತಿ ನೀಡುವುದಕ್ಕಾಗಿ ಬಲ ಮೇಲ್ಭಾಗದಲ್ಲಿರುವ ಐಕಾನ್ ತಟ್ಟಿ.
- ನಿಮ್ಮ ಪ್ರಸಾರವನ್ನು ಆರಂಭಿಸಲು ಲೈವ್ಗೆ ಹೋಗಿ ತಟ್ಟಿ.
- ಐಕಾನ್ ತಟ್ಟಿ.
- ಅತಿಥಿಯಾಗಿ ಸೇರಿಸಲು ನೀವು ಬಯಸುವ ವೀಕ್ಷಕರ ಪಕ್ಕದಲ್ಲಿರುವ "+" ತಟ್ಟಿ.
ಅತಿಥಿಯಾಗಿ ನೇರ ಪ್ರಸಾರವನ್ನು ಸೇರಲು:
ಅತಿಥಿಗಳನ್ನು ಸಕ್ರಿಯಗೊಳಿಸಿದ ನೇರ ಪ್ರಸಾರವನ್ನು ವೀಕ್ಷಿಸಲು, ಐಕಾನ್ ತಟ್ಟಿ ಮತ್ತು ನಂತರ ಸೇರುವಂತೆ ಕೇಳಿ ಎಂಬುದನ್ನು ತಟ್ಟಿ.
ಅತಿಥಿಯಾಗಿ ಸೇರುವಂತೆ ನಿಮ್ಮ ವಿನಂತಿಯನ್ನು ಪ್ರಸಾರಕರು ಅನುಮತಿಸಬೇಕು.
ಅನುಮತಿಸಿದ ನಂತರ, ಪ್ರಸಾರಕ್ಕೆ ನಿಮ್ಮನ್ನು ಸೇರಿಸುವ ಮೊದಲು 5 ಸೆಕೆಂಡಿನ ಕ್ಷಣಗಣನೆ ಕಾಣಿಸಿಕೊಳ್ಳುತ್ತದೆ. ನೀವು ಸೇರಲು ಬಯಸದೇ ಇದ್ದರೆ, ರದ್ದು ಎಂಬುದನ್ನು ತಟ್ಟಿ.
ಪ್ರಸಾರದಲ್ಲಿನ ಎಲ್ಲ ವೀಕ್ಷಕರಿಗೂ ನಿಮ್ಮ ಧ್ವನಿ ಕೇಳಿಸುತ್ತದೆ.
ಅತಿಥಿಯಾಗಿ ಪ್ರಸಾರವನ್ನು ತೊರೆಯಲು:
ಅತಿಥಿಯಾಗಿ ನೇರ ಪ್ರಸಾರವನ್ನು ತೊರೆಯಲು, ಕೆಳಭಾಗದಲ್ಲಿರುವ ಐಕಾನ್ ಮೇಲೆ ತಟ್ಟಿ ಮತ್ತು ಹ್ಯಾಂಗ್ ಅಪ್ ಆಯ್ಕೆ ಮಾಡಿ ಅಥವಾ ಸ್ಕ್ರೀನ್ನ ಎಡ ಮೇಲ್ಭಾಗದಲ್ಲಿರುವ X ಅನ್ನು ಸರಳವಾಗಿ ತಟ್ಟಿ. ಅತಿಥಿಯಾಗಿ ನೀವು ಪ್ರಸಾರವನ್ನು ತೊರೆದಾಗ, ವೀಕ್ಷಕರಾಗಿ ನೀವು ನೇರ ಪ್ರಸಾರ ವೀಕ್ಷಣೆಯನ್ನು ಮುಂದುವರಿಸಬಹುದು.
ಹೌದು! ಲೈವ್ ವೀಡಿಯೋ ಅಥವಾ ರಿಪ್ಲೇ ಫುಲ್ಸ್ಕ್ರೀನ್ ಮೋಡ್ ಇಂದ, ಹಂಚು ಐಕಾನ್ಅನ್ನು ತಟ್ಟಿ ಅಥವಾ ಕ್ಲಿಕ್ ಮಾಡಿ ನಂತರ ಈ ಮುಂದಿನ ಆಯ್ಕೆಗಳ ಪೈಕಿ ಒಂದನ್ನು ಆಯ್ಕೆ ಮಾಡಿ:
- ಸಂಪುರ್ಣ ಲೈವ್ ವೀಡಿಯೋ ಅಥವಾ ಆರಂಭದಿಂದ ರೀಪ್ಲೇಯನ್ನು ಟ್ವೀಟ್ ಮಾಡಲು, ನೇರ ಸಂದೇಶ ಕಳುಹಿಸಲು ಅಥವಾ ಲಿಂಕ್ ನಕಲು ಮಾಡಲು ಲೈವ್ ಹಂಚಿ (ಲೈವ್ ಆಗಿದ್ದಾಗ) ಅಥವಾ ಆರಂಭದಿಂದ ಹಂಚಿ ಅನ್ನು (ರೀಪ್ಲೇ ಮೋಡ್ನಲ್ಲಿದ್ದಾಗ) ಕ್ಲಿಕ್ ಮಾಡಿ ಅಥವಾ ತಟ್ಟಿ.
- ಸೆಲೆಕ್ಷನ್ ಬಾರ್ ಬಳಸಿ ಆಯ್ದ ಪಾಯಿಂಟ್ನಿಂದ ಲೈವ್ ವೀಡಿಯೋ ಅಥವಾ ರೀಪ್ಲೇಯನ್ನು ಟ್ವೀಟ್ ಮಾಡಲು, ನೇರ ಸಂದೇಶ ಕಳುಹಿಸಲು ಅಥವಾ ಲಿಂಕ್ ನಕಲು ಮಾಡಲು ...ಇಂದ ಹಂಚಿ ಅನ್ನು ಕ್ಲಿಕ್ ಮಾಡಿ ಅಥವಾ ತಟ್ಟಿ.
ಪ್ರಸಾರದಲ್ಲಿ ಕಾಮೆಂಟ್ಗಳ ಮೇಲೆ ಕಣ್ಣಿಡಲು ಮತ್ತು ತಮ್ಮ ಪರವಾಗಿ ಜನರನ್ನು ಮ್ಯೂಟ್ ಮಾಡಲು ಮಾಡರೇಟರುಗಳನ್ನು Periscope ಪ್ರಸಾರಕರು ನಿಯೋಜಿಸಬಹುದು. ಪ್ರೇಕ್ಷಕರ ಪೈಕಿ ಯಾರನ್ನಾದರೂ ಆಯ್ದ ಮಾಡರೇಟರುಗಳು ಮ್ಯೂಟ್ ಮಾಡಿದರೆ, ಪ್ರಸಾರದ ಉಳಿದ ಅವಧಿಗೆ ಚಾಟ್ ಮಾಡಲು ಕಾಮೆಂಟ್ ಮಾಡುವವರಿಗೆ ಸಾಧ್ಯವಾಗುವುದಿಲ್ಲ. Periscope ಅಥವಾ Twitter ನಲ್ಲಿ ಪ್ರಸಾರವನ್ನು ಸೇರುವ ಎಲ್ಲರೂ ಯಾವುದಾದರೂ ಮಾಡರೇಟರುಗಳಿಂದ ಮ್ಯೂಟ್ ಆದಾಗ ಅದನ್ನು ನೋಡಬಹುದಾಗಿರುತ್ತದೆ.
Periscope ಇಂದ ಚಾಟ್ ಮಾಡರೇಟರುಗಳನ್ನು ನಿಯೋಜಿಸುವುದು ಹೇಗೆ ಎಂಬ ಬಗ್ಗೆ ಇನ್ನಷ್ಟು ತಿಳಿಯಿರಿ.
ಟ್ವೀಟ್ ಹೋಗಬಹುದಾದ ಎಲ್ಲ ಕಡೆ ನಿಮ್ಮ ಲೈವ್ ವೀಡಿಯೋ ಹೋಗುತ್ತದೆ. ಅಂದರೆ, ಇದನ್ನು Twitter ಆಪ್ನಲ್ಲಿ, Twitter ವೆಬ್ಸೈಟ್ನಲ್ಲಿ ಹುಡುಕಬಹುದು ಮತ್ತು ಯಾವುದೇ ಇತರ ಟ್ವೀಟ್ ರೀತಿಯಲ್ಲೇ ಯಾವುದೇ ಇತರ ವೆಬ್ಸೈಟ್ಗಳಲ್ಲಿ ಎಂಬೆಡ್ ಮಾಡಬಹುದು. Twitter ನಲ್ಲಿ ಲೈವ್ ವೀಡಿಯೋಗಳನ್ನು ಪ್ರಸಾರಿಸುವ Periscope ನಲ್ಲೂ ಇರುತ್ತದೆ ಮತ್ತು ಹುಡುಕಬಹುದಾಗಿದೆ. ನಿಮ್ಮ ಲೈವ್ ವೀಡಿಯೋ ಟ್ವೀಟ್ಗೆ ನೀವು ಸ್ಥಳವನ್ನು ಸೇರಿಸಿದರೆ, Periscope ನಲ್ಲಿ ಜಾಗತಿಕ ನಕ್ಷೆಯಲ್ಲಿ ನಿಮ್ಮ ವೀಡಿಯೋವನ್ನು ಪರಿಶೋಧಿಸಬಹುದು.
iOS ಮತ್ತು ಆಂಡ್ರಾಯ್ಡ್ಗಾಗಿ Twitter ಆಪ್ಗಳಲ್ಲಿ, ನೀವು ಶೀರ್ಷಿಕೆ, ಥಂಬ್ನೇಲ್ ಇಮೇಜ್ ಬದಲಾವಣೆ ಮಾಡಬಹುದು ಮತ್ತು ಪ್ರಸಾರವನ್ನು ಮುಗಿಸಿದ ನಂತರ ಕಸ್ಟಮ್ ಆರಂಭಿಕ ಪಾಯಿಂಟ್ ಅನ್ನು ನಿಗದಿಸಬಹುದು. ಆರಂಭಿಸಲು, ನೀವು ಎಡಿಟ್ ಮಾಡಲು ಬಯಸುವ ಪ್ರಸಾರದ ಮೇಲೆ ತಟ್ಟಿ. ಓವರ್ಫ್ಲೋ ಮೆನುವಿನ ಮೇಲೆ ತಟ್ಟಿ, ನಂತರ ಪ್ರಸಾರ ಎಡಿಟ್ ಆಯ್ಕೆಯ ಮೇಲೆ ತಟ್ಟಿ. ಬದಲಾವಣೆಗಳನ್ನು ಮಾಡಿದ ನಂತರ ಉಳಿಸುವಂತೆ ನಿಮಗೆ ಸೂಚಿಸಲಾಗುತ್ತದೆ.
ಪ್ರಸಾರ ಶೀರ್ಷಿಕೆಯನ್ನು ಗರಿಷ್ಠ ಮೂರು ಬಾರಿ ಬದಲಾವಣೆ ಮಾಡಬಹುದು ಎಂಬುದನ್ನು ದಯವಿಟ್ಟು ಗಮನದಲ್ಲಿಟ್ಟುಕೊಳ್ಳಿ. ಅಲ್ಲದೆ, ಎಡಿಟ್ಗಳು Twitter ನಲ್ಲಿ ಕಾಣಿಸಿಕೊಳ್ಳಲು 15 ನಿಮಿಷಗಳನ್ನು ಮತ್ತು Periscope ನಲ್ಲಿ ಕಾಣಿಸಿಕೊಳ್ಳಲು ಗರಿಷ್ಠ ಒಂದು ನಿಮಿಷವನ್ನು ತೆಗೆದುಕೊಳ್ಳುತ್ತದೆ.
Periscope ಗೆ ಲಾಗಿನ್ ಮಾಡಲು ನಾವು ನಿಮ್ಮ Twitter ಖಾತೆಯನ್ನು ಬಳಸುತ್ತೇವೆ. Periscope ಲಕ್ಷಣಗಳ ಸಂಪೂರ್ಣ ಅನುಕೂಲ ಪಡೆದುಕೊಳ್ಳಲು, ಜನಪ್ರಿಯ ಮತ್ತು ಫೀಚರ್ ಲೈವ್ ವೀಡಿಯೋಗಳನ್ನು ಪರಿಶೋಧಿಸಲು ಮತ್ತು ಹಿಂಬಾಲಿಸಲು ಖಾತೆಗಳನ್ನು ಕಂಡುಕೊಳ್ಳಲು Periscope ಆಪ್ ಅನ್ನು ಡೌನ್ಲೋಡ್ ಮಾಡಿ. Periscope ನಲ್ಲಿ ನೀವು ನಿಮ್ಮ ಖಾತೆಯ ಸೆಟ್ಟಿಂಗ್ಗಳನ್ನು ನೀವು ಅಪ್ಡೇಟ್ ಮಾಡಬಹುದು.
ನಿಮ್ಮ ಲೈವ್ ವೀಡಿಯೋಗಳನ್ನು ನೀವು ಲೈವ್ ಹೋದಾಗ ಸ್ವಯಂಚಾಲಿತವಾಗಿ ಟ್ವೀಟ್ ಎಂದು ಪೋಸ್ಟ್ ಮಾಡಲಾಗುತ್ತದೆ. ನಿಮ್ಮ ಲೈವ್ ವೀಡಿಯೋ ಕೊನೆಯಲ್ಲಿ ಕ್ಯಾಮೆರಾ ರೋಲ್ಗೆ ಉಳಿಸಿ ಎಂಬುದನ್ನು ತಟ್ಟುವ ಮೂಲಕ ನಿಮ್ಮ ಸಾಧನದ ಕ್ಯಾಮೆರಾ ರೋಲ್ಗೆ ನಿಮ್ಮ ಲೈವ್ ವೀಡಿಯೋವನ್ನು ಉಳಿಸಬಹುದು. ನಿಮ್ಮ ವೀಡಿಯೋವನ್ನು ನಂತರ ಅಪ್ಲೋಡ್ ಮತ್ತು ಹಂಚಿಕೊಳ್ಳಲು ಬಯಸಿದರೆ, Twitter ನಲ್ಲಿ ವೀಡಿಯೋಗಳನ್ನು ಹಂಚಿಕೊಳ್ಳುವುದು ಮತ್ತು ವೀಕ್ಷಿಸುವುದು ಹೇಗೆ ಎಂಬುದನ್ನು ಓದಿ.
ಹೌದು! ಖಾತೆಗಳು ಲೈವ್ಗೆ ಹೋದಾಗ ಪುಶ್ ಸೂಚನೆಗಳನ್ನು ಸ್ವೀಕರಿಸುವುದು ಹೇಗೆ ಎಂಬುದನ್ನು ತಿಳಿಯಲು ನಮ್ಮ Twitter ನಲ್ಲಿ ವೀಡಿಯೋಗಳನ್ನು ಹಂಚಿಕೊಳ್ಳುವುದು ಮತ್ತು ವೀಕ್ಷಿಸುವುದು ಎಂಬ ಲೇಖನವನ್ನು ಓದಿ.
ಹೌದು, iOS, ಆಂಡ್ರಾಯ್ಡ್ ಮತ್ತು ವೆಬ್ನಲ್ಲಿ ನೀವು ವೀಕ್ಷಿಸುತ್ತಿರುವ ಯಾವುದೇ ಲೈವ್ ವೀಡಿಯೋಗೆ ಕಾಮೆಂಟ್ ಮಾಡಬಹುದು ಮತ್ತು ಹಾರ್ಟ್ಸ್ ಕಳುಹಿಸಬಹುದು. ಖಾತೆ ಪ್ರೊಫೈಲ್ ನೋಡುವುದು, ಕಾಮೆಂಟ್ಗೆ ಪ್ರತಿಕ್ರಿಯಿಸುವುದು ಅಥವಾ ಖಾತೆಯನ್ನು ಬ್ಲಾಕ್ ಮಾಡಲು ಕಾಮೆಂಟ್ ಮೇಲೆ ತಟ್ಟುವ ಮೂಲಕ ಇತರ ಪ್ರೇಕ್ಷಕ ಸದಸ್ಯರೊಂದಿಗೆ ಸಂವಹನ ಮಾಡಬಹುದು. ನೀವು Twitter ಇಂದ ಒಂದು ಖಾತೆಯನ್ನು ತಡೆಹಿಡಿದರೆ, ಅದನ್ನು Periscope ಇಂದಲೂ ತಡೆಹಿಡಿಯಲಾಗುತ್ತದೆ ಎಂಬುದನ್ನು ಗಮನಿಸಿ.
ಹಾರ್ಟ್ಸ್ ಎಂದರೇನು?
ಒಂದು ವೀಡಿಯೋಗೆ ಬೆಂಬಲವನ್ನು ನೀವು ಹಂಚಿಕೊಳ್ಳುತ್ತೀರಿ ಮತ್ತು ಉತ್ಸಾಹವನ್ನು ತೋರಿಸುತ್ತೀರಿ ಎಂಬುದೇ ಹಾರ್ಟ್ಸ್ ಆಗಿದೆ. iOS ಅಥವಾ ಆಂಡ್ರಾಯ್ಡ್ನಲ್ಲಿ, ಬ್ರಾಡ್ಕಾಸ್ಟ್ ಮಾಡುವವರಿಗೆ ಹಾರ್ಟ್ ನೀಡಲು ಸ್ಕ್ರೀನ್ ಮೇಲೆ ತಟ್ಟಿ. ವೆಬ್ನಲ್ಲಿ, ಲಾಗಿನ್ ಮಾಡಿದ ನಂತರ ಕೆಳ ಬಲ ಮೂಲೆಯಲ್ಲಿರುವ ಹಾರ್ಟ್ ಐಕಾನ್ ಮೇಲೆ ಕ್ಲಿಕ್ ಮಾಡುವ ಮೂಲಕ ನೀವು ಹಾರ್ಟ್ಸ್ ನೀಡಬಹುದು. ಹಾರ್ಟ್ಸ್ ಮತ್ತು ಸೂಪರ್ ಹಾರ್ಟ್ಸ್ ಬಗ್ಗೆ ನಾವು ಇನ್ನಷ್ಟು ಮಾಹಿತಿಯನ್ನು ಹೊಂದಿದ್ದೇವೆ.
Twitter ನಲ್ಲಿ ಯಾರನ್ನಾದರೂ ನೀವು ತಡೆಹಿಡಿದರೆ, ನಿಮ್ಮ ಲೈವ್ ವೀಡಿಯೋವನ್ನು ಅವರು ವೀಕ್ಷಿಸಲು ಅಥವಾ ಕಾಮೆಂಟ್ ಮಾಡಲು ಸಾಧ್ಯವಾಗುವುದಿಲ್ಲ. ನಿಮ್ಮ ಲೈವ್ ವೀಡಿಯೋದಲ್ಲಿ ಯಾರನ್ನಾದರೂ ಕಾಮೆಂಟ್ ಮಾಡದಂತೆ ತಡೆಯಲು ಬಯಸಿದರೆ, ಅವರ ಕಾಮೆಂಟ್ ಮೇಲೆ ತಟ್ಟಿ, ಅವರ ಪ್ರೊಫೈಲ್ ಆಯ್ಕೆ ಮಾಡಿ, ಗಿಯರ್ ಐಕಾನ್ ತಟ್ಟಿ, ನಂತರ ಬಳಕೆದಾರರನ್ನು ತಡೆಹಿಡಿ ಆಯ್ಕೆ ಮಾಡಬಹುದು. ನಿಮ್ಮ ಲೈವ್ ವೀಡಿಯೋಗಳಲ್ಲಿ ಖಾತೆಯು ಇನ್ನು ಭಾಗವಹಿಸಲು ಸಾಧ್ಯವಾಗುವುದಿಲ್ಲ ಮತ್ತು ಅವರನ್ನು Twitter ಮತ್ತು Periscope ಇಂದ ನಿರ್ಬಂಧಿಸಲಾಗುತ್ತದೆ. ಇನ್ನಷ್ಟು ತಿಳಿಯಲು Periscope ನ ಕಾಮೆಂಟ್ ತಿದ್ದುಪಡಿ ಲೇಖನ ವನ್ನು ಓದಿ.
ವೀಕ್ಷಕರಾಗಿ, ದೌರ್ಜನ್ಯಕಾರಿ ಅಥವಾ ಅವಹೇಳನಕಾರಿ ಕಾಮೆಂಟ್ಗಳನ್ನು ನೀವು ಕಾಮೆಂಟ್ ಆಯ್ಕೆ ಮಾಡಿ ಮತ್ತು ಕಾಮೆಂಟ್ ವರದಿ ಮಾಡಿ ಎಂಬುದನ್ನು ಆಯ್ಕೆ ಮಾಡುವ ಮೂಲಕ ವರದಿ ಮಾಡಬಹುದು. ಒಂದು ಕಾಮೆಂಟ್ ಅನ್ನು ವರದಿ ಮಾಡಿದಾಗ ಲೈವ್ ವೀಡಿಯೋದ ಉಳಿದ ಸಮಯದಲ್ಲಿ ನಿಮಗೆ ಆ ಕಾಮೆಂಟ್ದಾರರಿಂದ ಸಂದೇಶಗಳು ಕಾಣಿಸುವುದಿಲ್ಲ. ಆದರೆ ಇದರಿಂದ Twitter ಅಥವಾ Periscope ನಲ್ಲಿ ಖಾತೆಯನ್ನು ತಡೆಹಿಡಿಯುವುದಿಲ್ಲ.
ಹೌದು, ಯಾವುದೇ ಸಮಯದಲ್ಲಿ ನಿಮ್ಮ ಯಾವುದೇ ಪೋಸ್ಟ್ ಮಾಡಿದ ವೀಡಿಯೋವನ್ನು ಅಳಿಸಬಹುದು.
ಟಿಪ್ಪಣಿ: ನಿಮ್ಮ ಲೈವ್ ವೀಡಿಯೋದೊಂದಿಗೆ ಒಂದು ಟ್ವೀಟ್ ಅನ್ನು ಅಳಿಸಿದರೆ Periscope ನಲ್ಲಿರುವ ವೀಡಿಯೋ ಕೂಡ ಅಳಿಸಿ ಹೋಗುತ್ತದೆ, ಆದರೆ Periscope ನಿಂದ ವೀಡಿಯೋವನ್ನು ಅಳಿಸಿದಾಗ Twitter ನಿಂದ ಟ್ವೀಟ್ ಸ್ವಯಂಚಾಲಿತವಾಗಿ ಅಳಿಸಿಹೋಗುವುದಿಲ್ಲ.
ಹೌದು, ನೀವು ಹೀಗೆ ಮಾಡಬಹುದು. ಆಯ್ಕೆಮಾಡದಿರಲು: ನಿಮ್ಮ ಸೆಟ್ಟಿಂಗ್ಗಳು ಮತ್ತು ಗೌಪ್ಯತೆ ಗೆ ನ್ಯಾವಿಗೇಟ್ ಮಾಡಿ, ಗೌಪ್ಯತೆ ಮತ್ತು ಸುರಕ್ಷತೆ ಅನ್ನು ತಟ್ಟಿ, ನಂತರ ಲಕ್ಷಣವನ್ನು ಆಫ್ ಮಾಡಲು Periscope ಗೆ ಸಂಪರ್ಕಿಸಿ ಆಯ್ಕೆ ರದ್ದುಗೊಳಿಸಿ.
ನೀವು ತೊರೆದಾಗ, Twitter ನಲ್ಲಿ ನೀವು ಲೈವ್ ಹೋಗಲು ಸಾಧ್ಯವಾಗುವುದಿಲ್ಲ ಮತ್ತು ಇತರರ ಲೈವ್ ವೀಡಿಯೋಗಳಿಗೆ ಹಾರ್ಟ್ ಅಥವಾ ಕಾಮೆಂಟ್ ಮಾಡಲಾಗುವುದಿಲ್ಲ. ಆದರೆ ನಿಮ್ಮ ಹಿಂದಿನ ಲೀವ್ ವೀಡಿಯೋಗಳು Twitter ಮತ್ತು Periscope ನಲ್ಲಿ ಉಳಿದಿರುತ್ತವೆ. ನಿಮ್ಮ ಲೈವ್ ವೀಡಿಯೋದೊಂದಿಗೆ ಟ್ವೀಟ್ ಅಳಿಸಿದರೆ Twitter ಮತ್ತು Periscope ನಿಂದ ಹಿಂದಿನ ಲೈವ್ ವೀಡಿಯೋಗಳನ್ನು ಅಳಿಸಲು ನೀವು ಆಯ್ಕೆ ಮಾಡಬಹುದು.
ನೀವು ಟ್ವೀಟ್ಗಳನ್ನು ರಕ್ಷಿಸಿದ್ದರೆ ನೀವು Twitter ಇಂದ ಲೈವ್ಗೆ ಹೋಗಲಾಗದು. ಆದರೂ, ನೀವು Periscope ಡೌನ್ಲೋಡ್ ಮಾಡಬಹುದು ಮತ್ತು Periscope ಮೂಲಕ ಖಾಸಗಿ ಲೈವ್ ವೀಡಿಯೋವನ್ನು ಹೋಸ್ಟ್ ಮಾಡಬಹುದು.
ನೀವು ನಿಮ್ಮ ಟ್ವೀಟ್ಗಳನ್ನು ರಕ್ಷಿಸಿದಾಗ ಸಾರ್ವಜನಿಕಗೊಂಡ ನಂತರದಲ್ಲಿ ನಿಮ್ಮ ಲೈವ್ ವೀಡಿಯೋಗಳನ್ನು Twitter ನಲ್ಲಿ ನಿಮ್ಮ ಹಿಂಬಾಲಕರು ಮಾತ್ರ ಪರಿಶೋಧಿಸಬಹುದು. ಆದರೆ Periscope ನಲ್ಲಿ ಲಭ್ಯವಾಗಿಯೇ ಇರುತ್ತದೆ. ನಿಮ್ಮ ಲೈವ್ ವೀಡಿಯೋದೊಂದಿಗೆ ಟ್ವೀಟ್ ಅಳಿಸುವ ಮೂಲಕ ನೀವು Twitter ಮತ್ತು Periscope ನಿಂದ ಹಿಂದಿನ ಲೈವ್ ವೀಡಿಯೋಗಳನ್ನು ಅಳಿಸಬಹುದು.
Twitter ಮತ್ತು Periscope ಮೂಲಕ ಲೈವ್ ವೀಡಿಯೋಗಳಲ್ಲಿ ವೀಕ್ಷಕರು ನೇರವಾಗಿ ಕಾಮೆಂಟ್ ಮಾಡಬಹುದು. ಇನ್ನಷ್ಟು ಕಲಿಯಲು, Periscope ಸಹಾಯ ಕೇಂದ್ರ ಕ್ಕೆ ಭೇಟಿ ನೀಡಿ.
ವಿಶ್ವದಾದ್ಯಂತದ ಲೈವ್ ವೀಡಿಯೋಗಳನ್ನು ಕಂಡುಕೊಳ್ಳಲುPeriscope ಡೌನ್ಲೋಡ್ ಮಾಡಿ.