Media Studio ಬಳಸುವುದು ಹೇಗೆ

Twitter ನಲ್ಲಿ ನಿಮ್ಮ ವೀಡಿಯೋವನ್ನು ನಿರ್ವಹಿಸಲು, ಅಳೆಯಲು ಮತ್ತು ಮಾನಿಟೈಸ್ ಮಾಡುವುದಕ್ಕಾಗಿ ಬಳಸಲು ಸುಲಭವಾದ ವೇದಿಕೆ.

Twitter ಎಂಬುದು ಕೇವಲ 280 ಅಕ್ಷರಗಳಿಗಿಂತ ಹೆಚ್ಚಿನ ಸಂಗತಿಯಾಗಿದೆ. ಚಿತ್ರಗಳು, GIF ಗಳು ಮತ್ತು ವೀಡಿಯೋಗಳ ಮೂಲಕ ಕಥೆಯನ್ನೂ ಹೇಳಿ. ಲೈವ್​ಸ್ಟ್ರೀಮ್ ಆರಂಭಿಸಿ. ನೀವು ಒಂದು ಖಾತೆಯನ್ನು ಹೊಂದಿರಲಿ ಅಥವಾ ಐವತ್ತು ಖಾತೆಯನ್ನೇ ಹೊಂದಿರಲಿ, ನಿಮ್ಮ ಇಡೀ ಸಂಸ್ಥೆಗಾಗಿ Twitter ನಲ್ಲಿ ವಿಷಯವನ್ನು ನಿರ್ವಹಿಸಲು ಒಂದು ಸೂರಿನಡಿಯ ವೇದಿಕೆಯಾದ Media Studio ಮೂಲಕ ನಿಮ್ಮ ಕಥೆಯನ್ನು ನಿಮ್ಮ ಶೈಲಿಯಲ್ಲಿ ಹೇಳಿ. ಲೈಬ್ರರಿ, ಅನಾಲಿಟಿಕ್ಸ್, ಮಾನಟೈಸೇಶನ್​ ಮತ್ತು ಪ್ರೊಡ್ಯೂಸರ್​ ಮೂಲಕ Media Studio ದ ಸೌಲಭ್ಯಗಳನ್ನು ಬಳಸಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳಿ.

ನಿಮ್ಮ ಲೈಬ್ರರಿಗೆ ಮೀಡಿಯಾ ಅಪ್​ಲೋಡ್​ ಮಾಡುವುದು ಹೇಗೆ

  1. ನೀವು ಲಾಗಿನ್ ಮಾಡಿದ್ದೀರಿ ಮತ್ತು ನಿಮಗೆ studio.twitter.com ಕಾಣಿಸುತ್ತಿದೆ ಎಂದು ಖಚಿತಪಡಿಸಿಕೊಳ್ಳಿ.
  2. ಪುಟದ ಮೇಲ್ತುದಿಯಲ್ಲಿರುವ ಅಪ್​ಲೋಡ್ ಬಟನ್ ​ಮೇಲೆ ಕ್ಲಿಕ್ ಮಾಡಿ.
  3. ನಿಮ್ಮ ಕಂಪ್ಯೂಟರ್​ನಲ್ಲಿರುವ ಮೀಡಿಯಾವನ್ನು ಆಯ್ಕೆ ಮಾಡಿ.
    1. ಸಲಹೆ: ಪ್ರತಿ ಅಪ್​ಲೋಡ್​ನಲ್ಲೂ ವಿವಿಧ ವಿಧದ ಮೀಡಿಯಾ ಸೇರಿದಂತೆ ಎಷ್ಟು ಬೇಕಾದರೂ ಫೈಲ್​ಗಳನ್ನು ನೀವು ಆಯ್ಕೆ ಮಾಡಬಹುದು.
  4. ನಿಮ್ಮ ಮೀಡಿಯಾವನ್ನು ಆಯ್ಕೆ ಮಾಡಿದ ನಂತರ, ಅಪ್​ಲೋಡ್​ ಸ್ವಯಂಚಾಲಿತವಾಗಿ ಆರಂಭವಾಗುತ್ತದೆ.

ಮೀಡಿಯಾ ಮೆಟಾಡೇಟಾವನ್ನು ತಿದ್ದುಪಡಿ ಮಾಡುವುದು ಹೇಗೆ

  1.  ನೀವು ತಿದ್ದುಪಡಿ ಮಾಡಲು ಬಯಸುವ ಮೀಡಿಯಾವನ್ನು ನಿಮ್ಮ Media Studio ಲೈಬ್ರರಿಯಲ್ಲಿ ಕ್ಲಿಕ್​ ಮಾಡಿ.
  2. ಸೆಟ್ಟಿಂಗ್​ಗಳು ಟ್ಯಾಬ್​ ಕ್ಲಿಕ್ ಮಾಡಿ.
  3. ನೀವು ಈ ಮುಂದಿನ ವಿಧದ ಮೆಟಾಡೇಟಾವನ್ನು ಅಪ್​ಡೇಟ್ ​ಮಾಡಬಹುದು (ಎಲ್ಲವೂ ಐಚ್ಛಿಕ):
    1. ಶೀರ್ಷಿಕೆ
    2. ವಿವರಣೆ
    3. ಕ್ರಿಯೆಗೆ ಕರೆ URL
    4. ಸಲಹೆ: ಡೆಸ್ಕ್​ಟಾಪ್​ ಮೂಲಕ ನಿಮ್ಮ ವೀಡಿಯೋವನ್ನು ವೀಕ್ಷಿಸುವ ಜನರಿಗೆ ಈ ಶೀರ್ಷಿಕೆ ಮತ್ತು ವಿವರಣೆ ಕ್ಷೇತ್ರಗಳು ಕಾಣಿಸುತ್ತವೆ; ಈ ಕ್ಷೇತ್ರಗಳು ಯಾವುದೇ ಮೊಬೈಲ್​ ವೇದಿಕೆಯಲ್ಲಿ ಕಾಣಿಸುವುದಿಲ್ಲ.
  4. ವೀಡಿಯೋಗೆ ಭೌಗೋಳಿಕ ನಿರ್ಬಂಧವನ್ನು ಸಕ್ರಿಯಗೊಳಿಸಬೇಕಾದಲ್ಲಿ ವಿಷಯ ನಿರ್ಬಂಧಗಳು ಅನ್ನು ತೆರೆಯಿರಿ:
    1. ಸೇರಿಸಿಕೊಳ್ಳಿ
    2. ಹೊರಗಿಡಿ

 

ನಿಮ್ಮ ಲೈಬ್ರರಿಯಿಂದ ಮೀಡಿಯಾವನ್ನು ಟ್ವೀಟ್​ ಮಾಡುವುದು ಹೇಗೆ

  1. ಮೀಡಿಯಾ ಥಂಬ್​ನೇಲ್​ ಕೆಳಗೆ ಇರುವ ಟ್ವೀಟ್ ಬಟನ್​ ಅನ್ನು  ಕ್ಲಿಕ್ ಮಾಡಿ.
  2. ಟ್ವೀಟ್ ಕಂಪೋಸ್ ವಿಂಡೋದಲ್ಲೇ, ನಿಮ್ಮ ಟ್ವೀಟ್ ಪಠ್ಯವನ್ನು ನಮೂದಿಸಿ (280 ಅಕ್ಷರಗಳವರೆಗೆ).
  3. ನಿಮ್ಮ ಹೊಸ ಟ್ವೀಟ್ ​ಅನ್ನು ತಕ್ಷಣ ಪೋಸ್ಟ್​ ಮಾಡಲು ಟ್ವೀಟ್ ಬಟನ್ು ಕ್ಲಿಕ್ ಮಾಡಿ.
    1. ಸಲಹೆ: ನಿಮ್ಮ ಟೈಮ್​ಲೈನ್​ನಲ್ಲಿ ಕಾಣಿಸದ ಟ್ವೀಟ್ ​ಅನ್ನು ರಚಿಸಲು ನೀವು ಬಯಸಿದರೆ, 'ಪ್ರಾಯೋಜಿತ-ಮಾತ್ರ' ಎಂದು ಗುರುತು ಮಾಡಿದ ಚೆಕ್​ಬಾಕ್ಸ್ ಅನ್ನು ಆಯ್ಕೆ ಮಾಡಿ. ಪ್ರಾಯೋಜಿತ-ಮಾತ್ರ ಟ್ವೀಟ್​ಗಳ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಕಂಡುಕೊಳ್ಳಿ.

ನಿಮ್ಮ ಲೈಬ್ರರಿಯಿಂದ ಟ್ವೀಟ್​ ಅನ್ನು ಶೆಡ್ಯೂಲ್​ ಮಾಡುವುದು ಹೇಗೆ

  1. ಮೀಡಿಯಾ ಥಂಬ್​ನೇಲ್ ​ಕೆಳಗೆ ಇರುವ ಟ್ವೀಟ್ ಬಟನ್​ ಅನ್ನು  ಕ್ಲಿಕ್ ಮಾಡಿ.
  2. ಟ್ವೀಟ್ ಕಂಪೋಸ್ ವಿಂಡೋದಲ್ಲೇ, ನಿಮ್ಮ ಟ್ವೀಟ್ ಪಠ್ಯವನ್ನು ನಮೂದಿಸಿ (280 ಅಕ್ಷರಗಳವರೆಗೆ).
  3. ಡೈಲಾಗ್ ಬಾಕ್ಸ್ ​ಕೆಳಗೆ ಇರುವ ಶೆಡ್ಯೂಲ್ ಬಟನ್​ ಮೇಲೆ ಕ್ಲಿಕ್ ಮಾಡಿ.
  4. ಕಾಣಿಸಿಕೊಳ್ಳುವ ಡೇಟ್​ ಪಿಕ್ಕರ್​ನಲ್ಲಿ ದಿನಾಂಕ ಮತ್ತು ನಿಖರ ಸಮಯವೆರಡನ್ನೂ ಆಯ್ಕೆ ಮಾಡಿ (ನಿಮ್ಮ ಪ್ರಸ್ತುತ ಸಮಯವನ್ನೂ ಇದು ತೋರಿಸುತ್ತದೆ).
  5. ಶೆಡ್ಯೂಲ್ ಮಾಡಿದ ಟ್ವೀಟ್ ಉಳಿಸಲು ಟ್ವೀಟ್ ಬಟನ್ ಕ್ಲಿಕ್ ಮಾಡಿ.
  6. ನೀವು ಆಯ್ಕೆ ಮಾಡಿದ ದಿನಾಂಕ ಮತ್ತು ಸಮಯದಲ್ಲಿ ನಿಮ್ಮ ಟ್ವೀಟ್​ ಅನ್ನು Media Studio ಪೋಸ್ಟ್​ ಮಾಡುತ್ತದೆ.

ನಿಮ್ಮ ಲೈಬ್ರರಿಯಿಂದ ಮೀಡಿಯಾವನ್ನು ಇನ್ನೊಂದು Twitter ಬಳಕೆದಾರರ ಹೆಸರಿಗೆ ಹಂಚಿಕೊಳ್ಳುವುದು ಹೇಗೆ

  1. ನಿಮ್ಮ Media Studio ಲೈಬ್ರರಿಯಲ್ಲಿ ಮೀಡಿಯಾದ ಮೇಲೆ ಕ್ಲಿಕ್​ ಮಾಡಿ.
  2. ಹಂಚಿಕೊಳ್ಳುವಿಕೆ ಟ್ಯಾಬ್ ​ಮೇಲೆ ಕ್ಲಿಕ್ ಮಾಡಿ.
  3. ಮೀಡಿಯಾವನ್ನು ನೀವು ಯಾರ ಜೊತೆ ಹಂಚಿಕೊಳ್ಳಲು ಬಯಸುತ್ತೀರೋ ಆ ವ್ಯಕ್ತಿಯ ಬಳಕೆದಾರರ ಹೆಸರನ್ನು ಟೈಪ್​ ಮಾಡಲು ಆರಂಭಿಸಿ.
  4. ಡ್ರಾಪ್​ಡೌನ್​ನಲ್ಲಿ ಕಾಣಿಸುವ ಸರಿಯಾದ ಬಳಕೆದಾರರ ಹೆಸರಿನ ಮೇಲೆ ಕ್ಲಿಕ್ ಮಾಡಿ.
  5. ಹಂಚಿದ ಪ್ರವೇಶವನ್ನು ನೀವು ತೆಗೆದುಹಾಕಲು ಬಯಸಿದರೆ, ಸಂಬಂಧಿಸಿದ ಬಳಕೆದಾರರ ಹೆಸರಿನ ಪಕ್ಕದಲ್ಲಿರುವ ಅಳಿಸಿ ಐಕಾನ್​  ಮೇಲೆ ಕ್ಲಿಕ್ ಮಾಡಿ.

Media Studio ಮೂಲಕ ಹಂಚಿಕೊಂಡ ಮೀಡಿಯಾವನ್ನು ನಿರ್ವಹಿಸುವುದು ಹೇಗೆ

  1. ನ್ಯಾವಿಗೇಶನ್​ ಬಾರ್​ ಅಡಿಯಲ್ಲಿ ಲೈಬ್ರರಿ ಶೀರ್ಷಿಕೆಯ ಪಕ್ಕ ಇರುವ ಡ್ರಾಪ್​ಡೌನ್​  ಮೇಲೆ ಕ್ಲಿಕ್ ಮಾಡಿ.
  2. ಹಂಚಿಕೊಂಡ ಮೀಡಿಯಾ ಮೇಲೆ ಕ್ಲಿಕ್ ಮಾಡಿ
  3. ಈ ವೀಕ್ಷಣೆಯಲ್ಲೇ ಹಂಚಿಕೊಂಡ ಮೀಡಿಯಾ ಮೂಲಕ ಟ್ವೀಟ್​ಗಳನ್ನು ನಿರ್ವಹಿಸಿ ಮತ್ತು ರಚಿಸಿ.
    1. ಗಮನಿಸಿ: ಈ ವಿಧಾನದ ಮೂಲಕ ರಚಿಸಿದ ಎಲ್ಲ ಟ್ವೀಟ್​ಗಳು ವೀಡಿಯೋದ ಮೂಲ ಮಾಲೀಕರ (ಮೂಲದಲ್ಲಿ ವೀಡಿಯೋ ಹಂಚಿಕೊಂಡ ಬಳಕೆದಾರರ ಹೆಸರು) ಉಲ್ಲೇಖವನ್ನು ಒಳಗೊಂಡಿರುತ್ತದೆ.

ನಿಮ್ಮ Media Studio ಖಾತೆಗೆ ಹೆಚ್ಚುವರಿ ಜನರನ್ನು ಸೇರಿಸುವುದು ಹೇಗೆ

  1. ಬಲ ಮೇಲ್ತುದಿಯಲ್ಲಿ ನಿಮ್ಮ ಹೆಸರಿನ ಪಕ್ಕ ಇರುವ ಡ್ರಾಪ್​ಡೌನ್​ ಕ್ಲಿಕ್ ಮಾಡಿ.
  2. ಖಾತೆಗೆ ಸಂಪಾದನೆ ಅವಕಾಶ ಅನ್ನು ಕ್ಲಿಕ್ ಮಾಡಿ.
  3. ಪ್ರವೇಶ ಸೇರಿಸಿ ಬಟನ್​ ಕ್ಲಿಕ್ ಮಾಡಿ.
  4. ಪ್ರವೇಶವನ್ನು ಸ್ವೀಕರಿಸುವ ವ್ಯಕ್ತಿಯ ಬಳಕೆದಾರರ ಹೆಸರನ್ನು ಟೈಪ್ ಮಾಡಲು ಆರಂಭಿಸಿ ಮತ್ತು ಕಾಣಿಸುವ ಸಲಹೆ ಪಟ್ಟಿಯಿಂದ ಆಯ್ಕೆ ಮಾಡಿ.
  5. ಪಟ್ಟಿಯಿಂದ ಅನುಮತಿ ಮಟ್ಟವನ್ನು ಆಯ್ಕೆ ಮಾಡಿ:
    1. ಸ್ಟುಡಿಯೋ ಖಾತೆ ನಿರ್ವಾಹಕ - ಬಳಕೆದಾರರಿಗೆ ಖಾತೆಗಾಗಿ ಸಂಪೂರ್ಣ ಪ್ರವೇಶವನ್ನು ನೀಡಲಾಗಿದೆ ಮತ್ತು ಖಾತೆ ಮಾಲೀಕರು ಮಾಡಬಹುದಾದ ಎಲ್ಲವನ್ನೂ ಮಾಡಬಹುದಾಗಿದೆ. ನೀಡಿರುವ ಖಾತೆಗೆ ಒಂದಕ್ಕಿಂತ ಹೆಚ್ಚು ನಿರ್ವಾಹಕರು ಇರಬಹುದು.
    2. ಸ್ಟುಡಿಯೋ ಕೊಡುಗೆದಾರರು - ಖಾತೆ ಸೆಟ್ಟಿಂಗ್​ಗಳನ್ನು ಬದಲಿಸುವುದು ಅಥವಾ ಹೆಚ್ಚುವರಿ ಬಳಕೆದಾರರನ್ನು ಸೇರಿಸುವುದರ ಹೊರತಾಗಿ ಖಾತೆಗಾಗಿ ಬಹುತೇಕ ಸಂಪೂರ್ಣ ಪ್ರವೇಶವನ್ನು ಬಳಕೆದಾರರಿಗೆ ಮಂಜೂರು ಮಾಡಲಾಗಿದೆ.
    3. ಸ್ಟುಡಿಯೋ ಪ್ರಕಾಶಕ - ತಮ್ಮದೇ ಖಾತೆಗೆ ಲೈಬ್ರರಿಯಿಂದ ಮೀಡಿಯಾ ಬಳಸಲು ಬಳಕೆದಾರರಿಗೆ ಪ್ರವೇಶ ಅನುಮತಿ ನೀಡಲಾಗಿದೆ. ಮುಖ್ಯ ಖಾತೆಯ ಪರವಾಗಿ ಅವರು ಯಾವುದೇ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ.
    4. ಸ್ಟುಡಿಯೋ ಅನಾಲಿಸ್ಟ್ - ಅನಾಲಿಟಿಕ್ಸ್ ಪ್ರವೇಶ ಮತ್ತು ಮರುಪರಿಶೀಲನೆಗಾಗಿ ಲೈಬ್ರರಿಗೆ ವೀಕ್ಷಣೆ ಮಾತ್ರದ ಪ್ರವೇಶವನ್ನು ಬಳಕೆದಾರರಿಗೆ ಮಂಜೂರು ಮಾಡಲಾಗಿದೆ.
  6. ಬದಲಾವಣೆ ಉಳಿಸಿ ಕ್ಲಿಕ್ ಮಾಡಿ.

Media Studio ದಲ್ಲಿ SRT ಉಪಶೀರ್ಷಿಕೆ ಫೈಲ್​ ಅಪ್​ಲೋಡ್​ ಮಾಡುವುದು ಹೇಗೆ

  1. Media Studio ಗೆ ನಿಮ್ಮ ವೀಡಿಯೋವನ್ನು ನೇರವಾಗಿ ಅಪ್​ಲೋಡ್ ​ಮಾಡಿ.
  2. ಅಪ್​ಲೋಡ್​ ಪೂರ್ಣಗೊಂಡ ನಂತರ, ವೀಡಿಯೋದ ವಿಸ್ತರಿಸಿದ ಮೆನು ವೀಕ್ಷಿಸಲು ಮೀಡಿಯಾ ವಿವರ ತಟ್ಟಿ.
  3. ಉಪಶೀರ್ಷಿಕೆಗಳು ಟ್ಯಾಬ್​ ತಟ್ಟಿ.
  4. Media Studio ಬೆಂಬಲಿತ ಭಾಷೆಗಳ ಪಟ್ಟಿಯಿಂದ SRT ಫೈಲ್​ನ ಭಾಷೆಯನ್ನು ಆಯ್ಕೆ ಮಾಡಿ.
  5. ಅಪ್​ಲೋಡ್​ ತಟ್ಟಿ.
  6. ನಿಮ್ಮ ಸಾಧನದಿಂದ SRT ಫೈಲ್​ ಆಯ್ಕೆ ಮಾಡಿ.

ಲೈಬ್ರರಿ ಅಪ್​ಲೋಡ್​ ವಿಶೇಷಣಗಳು

ಈ ಸೂಚನೆಗಳು Media Studio ಗೆ ಮಾತ್ರ ಮಾನ್ಯವಾಗಿದೆ ಮತ್ತು Twitter ಅಭಿವೃದ್ದಿಕಾರ API, ಪ್ರೋ ಮೀಡಿಯಾ API, ಡೆಸ್ಕ್​ಟಾಪ ್​ಅಪ್​ಲೋಡ್​ ಅಥವಾ ಮೊಬೈಲ್​ ಅಪ್​ಲೋಡ್​ ಬಳಕೆಗೆ ಅನುಸರಿಸಬಾರದು.

ವೀಡಿಯೋ

ಫೈಲ್​ಗಾತ್ರ ಮತ್ತು ವಿಧ

ಗರಿಷ್ಠ ಫೈಲ್​ ಗಾತ್ರ: 1 GB
ವಿಧ: .MP4, .MOV

ರೆಸಲ್ಯೂಶನ್​

ಶಿಫಾರಸು ಮಾಡಿದ ರೆಸಲ್ಯೂಶನ್ (ಲ್ಯಾಂಡ್​ಸ್ಕೇಪ್) 1280x720
ಶಿಫಾರಸು ಮಾಡಿದ ರೆಸಲ್ಯೂಶನ್ (ಸ್ಕೇರ್): 720x720

ಎನ್​ಕೋಡಿಂಗ್​

ವೀಡಿಯೋ ಸ್ಪೆಸಿಫಿಕೇಶನ್ AVC ಎನ್​ಕೋಡಿಂಗ್ (H264)
ಆಡಿಯೋ ಸ್ಪೆಸಿಫಿಕೇಶನ್: ಸ್ಟೀರಿಯೋ/ಮೋನೋ AAC (LC)
ಉಪಶೀರ್ಷಿಕೆಗಳು: CEA 608/708 ಎಂಬೆಡ್​ಮಾಡಿದ, .SRT ಸೈಡ್​ಕಾರ್​
ಗರಿಷ್ಠ ಫ್ರೇಮ್​ರೇಟ್ 60 FPS

ಅವಧಿ

ಹೆಚ್ಚಿನ ಜನರು 2:20 (140 ಸೆಕೆಂಡುಗಳು) ಗೆ ಸೀಮಿತವಾಗಿರುತ್ತಾರೆ, ಆದಾಗ್ಯೂ 10 ನಿಮಿಷಗಳವರೆಗೆ ವೀಡಿಯೋ ಅವಧಿಯನ್ನು ಅನುಮತಿಸಲು ಕೆಲವು ಪಾಲುದಾರರನ್ನು ಶ್ವೇತ ಪಟ್ಟಿಗೆ ಸೇರಿಸಲಾಗಿದೆ.

2:20 ಗಿಂತ ಹೆಚ್ಚಿನ ನಿಮಿಷಗಳ (10 ನಿಮಿಷಗಳವರೆಗೆ) ವೀಡಿಯೋ ಅಪ್​ಲೋಡ್​ ಮಾಡಲು ನಿಮ್ಮನ್ನು ಶ್ವೇತ ಪಟ್ಟಿಗೆ ಸೇರಿಸಬೇಕೆಂದಾದರೆ ನಿಮ್ಮ Twitter ಖಾತೆ ಮ್ಯಾನೇಜರ್​ರನ್ನು ಸಂಪರ್ಕಿಸಿ.

ಚಿತ್ರ

ಫೈಲ್​ಗಾತ್ರ ಮತ್ತು ವಿಧ

ಗರಿಷ್ಠ ಫೈಲ್​ ಗಾತ್ರ: 20 MB
ಫೈಲ್​ ವಿಧ: .JPG, .PNG

ರೆಸಲ್ಯೂಶನ್​

ಗರಿಷ್ಠ ರೆಸಲ್ಯೂಶನ್: 8192x8192

GIF

ಫೈಲ್​ ಗಾತ್ರ

ಗರಿಷ್ಠ ಫೈಲ್​ ಗಾತ್ರ: 15 MB
ಫೈಲ್​ ವಿಧ: .GIF

ರೆಸಲ್ಯೂಶನ್​

ಗರಿಷ್ಠ ರೆಸಲ್ಯೂಶನ್: 2048x2048

Bookmark or share this article