ಟ್ವೀಟ್ ಸ್ಥಳ FAQ ಗಳು

ನಿಮ್ಮ ಸ್ಥಳದೊಂದಿಗೆ ಟ್ವೀಟ್ ಮಾಡುವುದರ ಕುರಿತಂತೆ ಈ ಕೆಳಗೆ ಕೆಲವು ಸಾಮಾನ್ಯ ಪ್ರಶ್ನೆಗಳಿಗೆ ಉತ್ತರಗಳಿವೆ.  ನಿಮ್ಮ ಸ್ಥಳದೊಂದಿಗೆ ಟ್ವೀಟ್ ಮಾಡುವುದು ಹೇಗೆ ಎಂಬ ಬಗ್ಗೆ ತಿಳಿಯಿರಿ.

ನನ್ನ ಟ್ವೀಟ್‌ಗಳಿಗೆ ಯಾವ ಸ್ಥಳ ಮಾಹಿತಿ ಲಗತ್ತಿಸಲಾಗುತ್ತದೆ?
 

 • ನಿಖರ ಸ್ಥಳವನ್ನು ಸಕ್ರಿಯಗೊಳಿಸುವುದರಿಂದ, ನಿಮ್ಮ ಟ್ವೀಟ್‌ಗಳಿಗೆ ಸ್ಥಳ ಮಾಹಿತಿಯನ್ನು ಬೇಕಾದ ಹಾಗೆ ಸೇರಿಸಲು ಅನುವಾಗುತ್ತದೆ. ಈ ವೈಶಿಷ್ಟ್ಯ ಡೀಫಾಲ್ಟ್ ಆಗಿ ಆಫ್ ಆಗಿರುತ್ತದೆ ಮತ್ತು ಇದನ್ನು ಬಳಸಲು ನೀವು ಆಯ್ಕೆ ಮಾಡಿಕೊಳ್ಳಬೇಕು. ಜಿಪಿಎಸ್ ಮಾಹಿತಿಯಂತಹ ನಿಮ್ಮ ನಿಖರ ಸ್ಥಳವನ್ನು ಸಂಗ್ರಹಿಸಲು, ಶೇಖರಿಸಲು ಮತ್ತು ಬಳಸಲು Twitter ಗೆ ಇದು ಅನುವು ಮಾಡುತ್ತದೆ.
 • ನೀವು ನಿಖರ ಸ್ಥಳವನ್ನು ಸಕ್ರಿಯಗೊಳಿಸಿದ ನಂತರ, ನಿಮ್ಮ ಟ್ವೀಟ್‌ಗೆ ನಿಮ್ಮ ಆಯ್ಕೆಯ ಸ್ಥಳವನ್ನು (ನಗರ ಅಥವಾ ನೆರೆಹೊರೆಯಂತಹ) ಲಗತ್ತಿಸಲು ನಿಮಗೆ ಸಾಧ್ಯವಾಗುತ್ತದೆ. ನಿಮ್ಮ ಟ್ವೀಟ್ ರಚನೆ ಮಾಡುವಾಗ ಸ್ಥಳ ಮಾರ್ಕರ್ ಅನ್ನು ತಟ್ಟಿ ಮತ್ತು ನೀವು ಟ್ಯಾಗ್ ಮಾಡಲು ಬಯಸುವ ಸ್ಥಳವನ್ನು ಆಯ್ಕೆ ಮಾಡಿ.
  ಗಮನಿಸಿ: ಸ್ಥಳದ ಜೊತೆಗೆ ನೀವು ಟ್ವೀಟ್ ಮಾಡಿದಾಗ, ನಿಮ್ಮ ಮುಂದಿನ ಟ್ವೀಟ್ ಸ್ವಯಂಚಾಲಿತವಾಗಿ ಸಾಮಾನ್ಯ ಸ್ಥಳ ಲೇಬಲ್‌ ಅನ್ನು ಒಳಗೊಂಡಿರುತ್ತದೆ. ಯಾವುದೇ ಸಮಯದಲ್ಲಿ ಸ್ಥಳ ಆಫ್‌ ಮಾಡುವುದು ಹೇಗೆ ಎಂದು ತಿಳಿಯಿರಿ.
 • ಮೂರನೇ ವ್ಯಕ್ತಿ ಅಪ್ಲಿಕೇಶನ್‌ಗಳು ಅಥವಾ ವೆಬ್‌ಸೈಟ್‌ಗಳು ನಿಮ್ಮ ನಿಖರ ಸ್ಥಳ ಸೇರಿದಂತೆ ಸ್ಥಳದೊಂದಿಗೆ ಟ್ವೀಟ್‌ ಮಾಡಲು ನಿಮಗೆ ಅನುವು ಮಾಡಬಹುದು. ಸ್ಥಳದೊಂದಿಗೆ ಟ್ವೀಟ್‌ ಮಾಡಲು ಅವರ ಉತ್ಪನ್ನಗಳನ್ನು ನೀವು ಬಳಸಿದಾಗ ಯಾವ ಮಾಹಿತಿಯನ್ನು ಹಂಚಿಕೊಳ್ಳಲಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ವಿವರಿಸುವಂತೆ ಈ ಡೆವಲಪರ್‌ಗಳಿಗೆ ನಾವು ಕೇಳುತ್ತೇವೆ. 
   

ನನ್ನ ಟ್ವೀಟ್‌ಗಳಿಗೆ ಸ್ಥಳ ಮಾಹಿತಿಯನ್ನು ನಾನು ಲಗತ್ತಿಸಿದಾಗ ಯಾವ ನಿಯಂತ್ರಣಗಳನ್ನು ನಾನು ಹೊಂದುತ್ತೇನೆ?
 

ನಿಮ್ಮ ಸ್ಥಳದೊಂದಿಗೆ ಟ್ವೀಟ್ ಮಾಡುವುದನ್ನು ನೀವು ಸಕ್ರಿಯಗೊಳಿಸಿದ ನಂತರವೂ, ಯಾವ ಟ್ವೀಟ್‌ಗಳನ್ನು (ಮತ್ತು ಯಾವ ರೀತಿಯ ಸ್ಥಳ ಮಾಹಿತಿಯನ್ನು) ಹಂಚಿಕೊಳ್ಳಲಾಗುತ್ತದೆ ಎಂಬುದರ ಮೇಲೆ ಹೆಚ್ಚುವರಿ ನಿಯಂತ್ರಣವನ್ನು ನೀವು ಹೊಂದಿರುತ್ತೀರಿ. ಇದನ್ನು ಗಮನದಲ್ಲಿಟ್ಟುಕೊಂಡು:

 • ಟ್ವೀಟ್ ಸ್ಥಳವು ಡೀಫಾಲ್ಟ್ ಆಗಿ ಆಫ್ ಆಗಿರುತ್ತದೆ ಮತ್ತು ಸೇವೆಯನ್ನು ನೀವು ಆಯ್ಕೆ ಮಾಡಿಕೊಳ್ಳಬೇಕು.
 • ಯಾವುದೇ ಸಮಯದಲ್ಲಿ ಟ್ವೀಟ್ ಸ್ಥಳವನ್ನು ನೀವು ಆನ್ ಅಥವಾ ಆಫ್‌ ಮಾಡಬಹುದು. 
 • ಒಂದು ಸ್ಥಳದಲ್ಲಿ ನಿಮ್ಮ ಟ್ವೀಟ್‌ಗಳಲ್ಲಿ ನಿಮ್ಮ ಹಿಂದಿನ ಸ್ಥಳದ ಡೇಟಾವನ್ನು ನೀವು ಅಳಿಸಬಹುದು (ಪ್ರತಿ ಹಂತದ ಸೂಚನೆಗಳಿಗಾಗಿ ಈ ಲೇಖನ ನೋಡಿ).
 • ನೀವು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುವ ಮಾಹಿತಿಯ ಬಗ್ಗೆ ಗಮನವಿರಲಿ ಮತ್ತು ಎಚ್ಚರಿಕೆಯಿಂದಿರಿ. ನಿಮ್ಮ ಸ್ಥಳವನ್ನು ಹಂಚಿಕೊಳ್ಳಬೇಕಾದ ಕೆಲವು ಅಪ್‌ಡೇಟ್‌ಗಳು ಇರಬಹುದು ("ಪರೇಡ್ ಈಗ ಆರಂಭವಾಗುತ್ತಿದೆ" ಅಥವಾ "ರಸ್ತೆಯ ಮೇಲೆ ರುಚಿಕರವಾದ ಕ್ಯಾಂಡಿಯನ್ನು ಟ್ರಕ್ ಚೆಲ್ಲಿದೆ!") ಮತ್ತು ಕೆಲವು ಅಪ್‌ಡೇಟ್‌ಗಳಲ್ಲಿ ನೀವು ನಿಮ್ಮ ಸ್ಥಳವನ್ನು ಖಾಸಗಿಯಾಗಿ ಇಡಬಹುದು. ನಿಮ್ಮ ಮನೆ ವಿಳಾಸವನ್ನು ನೀವು ಟ್ವೀಟ್ ಮಾಡುತ್ತಿರುವ ಹಾಗೆಯೇ, ಇತರರು ನೋಡಲು ನೀವು ಬಯಸದ ಸ್ಥಳಗಳಿಂದ ಟ್ವೀಟ್ ಮಾಡುವಾಗ ಎಚ್ಚರಿಕೆಯಿಂದಿರಿ.
 • ಸ್ಥಳ ಟ್ವೀಟ್ ಮಾಡಲು ನೀವು ಆಯ್ಕೆ ಮಾಡಿದಾಗ, ಸಲಹೆ ಮಾಡಿದ ಸ್ಥಳಗಳನ್ನು ನಿಮಗೆ ಒದಗಿಸಲಾಗುತ್ತದೆ. ಆದರೆ, ವೈಯಕ್ತಿಕ ಟ್ವೀಟ್‌ಗಳಿಗೆ ನಿಮ್ಮ ಸ್ಥಳವನ್ನು ಹಂಚಿಕೊಳ್ಳದಿರಲು ನೀವು ಆಯ್ಕೆ ಮಾಡಬಹುದು ಎಂಬುದನ್ನು ದಯವಿಟ್ಟು ಗಮನಿಸಿ (ಸೂಚನೆಗಳಿಗೆ ಈ ಲೇಖನ ನೋಡಿ).
 • ನಮ್ಮ ಸಾಮಾನ್ಯ ಸೆಟ್ಟಿಂಗ್‌ಗಳು ಮತ್ತು ನೀವು ಟ್ವೀಟ್ ಮಾಡುವ ಯಾವುದೇ ಅಪ್ಲಿಕೇಶನ್‍ಗಳು ಮತ್ತು ಸಾಧನಗಳ ಸೆಟ್ಟಿಂಗ್‌ಗಳ ಬಗ್ಗೆ ದಯವಿಟ್ಟು ತಿಳಿದುಕೊಂಡಿರಿ. ಇದರಿಂದ, ನೀವು ಹಂಚಿಕೊಳ್ಳುವ ಮಾಹಿತಿಯ ಬಗ್ಗೆ ನಿಮಗೆ ಅರಿವು ಇರುತ್ತದೆ.
 • ನೆನಪಿಡಿ, ನೀವು ಏನನ್ನಾದರೂ ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದರೆ, ಇತರರು ನೋಡಬಹುದು.
   

ಯಾವ ಸ್ಥಳ ಮಾಹಿತಿಯನ್ನು ಪ್ರದರ್ಶಿಸಲಾಗುತ್ತದೆ?
 

 • ಎಲ್ಲ ಜಿಯೋಲೊಕೇಶನ್‌ ಮಾಹಿತಿಯು (ರೇಖಾಂಶ ಮತ್ತು ಅಕ್ಷಾಂಶ) ನಿಮ್ಮ ಬ್ರೌಸರ್‌ ಅಥವಾ ಸಾಧನದಿಂದ ಕಳುಹಿಸಿದ ಸ್ಥಳವಾಗಿ ಆರಂಭವಾಗುತ್ತದೆ. ವೈಶಿಷ್ಟ್ಯವನ್ನು ನೀವು ಆಯ್ಕೆ ಮಾಡಿಲ್ಲದಿದ್ದರೆ ಮತ್ತು ನಿಮ್ಮ ಸ್ಥಳ ವಿವರಗಳನ್ನು ನಮಗೆ ವರ್ಗಾವಣೆ ಮಾಡಲು ನಿಮ್ಮ ಸಾಧನ ಅಥವಾ ಬ್ರೌಸರ್‌ಗೆ ಅನುಮತಿ ನೀಡದಿದ್ದರೆ ಯಾವುದೇ ಸ್ಥಳ ಮಾಹಿತಿಯನ್ನು Twitter ತೋರಿಸುವುದಿಲ್ಲ.
 • ನಿಮ್ಮ ಟ್ವೀಟ್‌ಗಳಿಗೆ ಸ್ಥಳ ಮಾಹಿತಿಯನ್ನು ಲಗತ್ತಿಸಲು ನೀವು ಆಯ್ಕೆ ಮಾಡಿಕೊಂಡರೆ, ನೀವು ಆಯ್ಕೆ ಮಾಡಿದ ಸ್ಥಳ ಲೇಬಲ್‌ ಅನ್ನು ಟ್ವೀಟ್‌ನ ಪಠ್ಯದ ಕೆಳಗೆ ಪ್ರದರ್ಶಿಸಲಾಗುತ್ತದೆ.
 • twitter.com ನಲ್ಲಿ, ನೆರೆಹೊರೆ ಅಥವಾ ನಗರದ ಹೆಸರಿನಂತಹ ಸ್ಥಳ ಲೇಬಲ್ ಅನ್ನು ನೀವು ಆಯ್ಕೆ ಮಾಡಬಹುದು.
 • ನಿಮ್ಮ ಟ್ವೀಟ್‌ಗೆ ಫೋಟೋ ಅಥವಾ ವೀಡಿಯೋವನ್ನು ಲಗತ್ತಿಸಲು iOS ಮತ್ತು Android ಗಾಗಿ Twitter ನಲ್ಲಿ ಆಪ್ ಒಳಗಿನ ಕ್ಯಾಮೆರಾವನ್ನು ನೀವು ಬಳಸುವಾಗ ಮತ್ತು ನಿಮ್ಮ ನಿಖರ ಸ್ಥಳವನ್ನು ಟ್ಯಾಗ್ ಮಾಡಲು ಆಯ್ಕೆಯನ್ನು ಟಾಗಲ್ ಮಾಡಿದಾಗ, ಆ ಟ್ವೀಟ್‌ನಲ್ಲಿ ನಿಮ್ಮ ಆಯ್ಕೆಯ ಸ್ಥಳ ಲೇಬಲ್ ಮತ್ತು API ಮೂಲಕ ಕಂಡುಕೊಳ್ಳಬಹುದಾದ ನಿಮ್ಮ ಸಾಧನದ ನಿಖರ ಸ್ಥಳವೆರಡೂ (ಅಕ್ಷಾಂಶ ಮತ್ತು ರೇಖಾಂಶ) ಸೇರಿರುತ್ತದೆ. ನೀವು ಆಯ್ಕೆ ಮಾಡುವ ಸ್ಥಳ ಲೇಬಲ್‌ಗಿಂತ ನಿಮ್ಮ ನಿಖರ ಸ್ಥಳವು ಇನ್ನಷ್ಟು ನಿಖರವಾಗಿರಬಹುದು. ಇದು ಆ ಸ್ಥಳದಲ್ಲಿನ ಕ್ಷಣಗಳನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ.
  ಗಮನಿಸಿ: ಆಪ್ ಒಳಗಿನ ಕ್ಯಾಮೆರಾದಿಂದ ನಿಮ್ಮ ನಿಖರ ಸ್ಥಳವನ್ನು ಹಂಚಿಕೊಳ್ಳುವ ಆಯ್ಕೆಯು iOS ಗಾಗಿ Twitter (6.26 ಅಥವಾ ನಂತರದ) ಹೊಸ ಆವೃತ್ತಿಗಳು ಮತ್ತು Android ಗಾಗಿ Twitter (ಆವೃತ್ತು 5.55 ಅಥವಾ ನಂತರದ) ಹೊಸ ಆವೃತ್ತಿಗಳಲ್ಲಿ ಮಾತ್ರ ಪ್ರಸ್ತುತ ಲಭ್ಯವಿದೆ. 
 • ನಿಮ್ಮ ಟ್ವೀಟ್‌ನಲ್ಲಿ ನಿಖರ ಸ್ಥಳ ವಿವರವನ್ನು ಸೇರಿಸಬೇಕೋ ಅಥವಾ ಸ್ಥಳವನ್ನು ಮಾತ್ರ ಸೇರಿಸಬೇಕೋ ಎಂಬುದನ್ನು ಮೊದಲೇ ಮತ್ತು ನಿಖರವಾಗಿ ಅಪ್ಲಿಕೇಶನ್ ಡೆವಲಪರ್‌ಗಳು ನಿಖರಗೊಳಿಸಬೇಕು. ತೃತೀಯ ಪಕ್ಷದ ಅಪ್ಲಿಕೇಶನ್ ಅಥವಾ ಮೊಬೈಲ್ ಸಾಧನದಿಂದ ಟ್ವೀಟ್ ಮಾಡುವಾಗ, ನಿಮ್ಮ ಟ್ವೀಟ್‌ನಲ್ಲಿ ಯಾವ ವಿಧದ ಡೇಟಾವನ್ನು ಸೇರಿಸಲಾಗುತ್ತದೆ ಎಂಬುದು ಸ್ಪಷ್ಟವಾಗಿರಬೇಕು.

ಗಮನಿಸಿ: ಕೆಲವು ಕ್ಷೇತ್ರಗಳಲ್ಲಿ, ನಿಗದಿತ ವ್ಯವಹಾರ, ಲ್ಯಾಂಡ್‌ಮಾರ್ಕ್ ಅಥವಾ ಹಿತಾಸಕ್ತಿ ಅಂಶದೊಂದಿಗೆ ನಿಮ್ಮ ಟ್ವೀಟ್‌ ಅನ್ನು ಲೇಬಲ್‌ ಮಾಡುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ. ಈ ಸ್ಥಳಗಳನ್ನು Foursquare ಇಂದ ಪಡೆಯಲಾಗಿರುತ್ತದೆ. ಸ್ಥಳದ ಕುರಿತು ನೀವು ಯಾವುದೇ ಸಮಸ್ಯೆಯನ್ನು ಎದುರಿಸಿದರೆ, Foursquare ನ ಸಹಾಯ ಕೇಂದ್ರ ದ ಮೂಲಕ ಇದನ್ನು ದಯವಿಟ್ಟು ವರದಿ ಮಾಡಿ. ನಿರ್ದಿಷ್ಟ ಟ್ವೀಟ್ ನಿಂದನೀಯ ಎಂದು ನೀವು ಭಾವಿಸಿದರೆ, ದಯವಿಟ್ಟು ಅದನ್ನು Twitter ಗೆ ವರದಿ ಮಾಡಿ.

ಈ ಲೇಖನ ಹಂಚಿಕೊಳ್ಳಿ