Twitter ಕ್ಷಣಗಳ ಮಾರ್ಗದರ್ಶಿಗಳು ಮತ್ತು ತತ್ವಗಳು

ದಿನದಲ್ಲಿ ಲಕ್ಷಾಂತರ ಟ್ವೀಟ್​ಗಳಲ್ಲಿ Twitter ನಲ್ಲಿ ನಡೆಯುತ್ತಿರುವ ಅತ್ಯುತ್ತಮವಾದುದನ್ನು ಕ್ಷಣಗಳು ಆಯ್ಕೆಮಾಡುತ್ತವೆ. ಕ್ಷಣಗಳ ಮೂಲಕ, ಅದು ಪ್ರತಿಭಟನೆಯ ಕೇಂದ್ರವಾಗಿರಲಿ, ಆಸ್ಕರ್​ನಲ್ಲಿನ ಮಂಚೂಣಿ ಸ್ಥಾನವಾಗಿರಲಿ, ವಿಶ್ವಕಪ್​ನ ಆಟದ ತಾಣವಾಗಿರಲಿ ಅಥವಾ ಬಾಹ್ಯಾಕಾಶದ ಸಂಗತಿಯಾಗಿರಲಿ ಲಕ್ಷಾಂತರ ಜನರು Twitter ಸಾಮರ್ಥ್ಯವನ್ನು ಆನಂದಿಸಬಹುದು. Twitter ನಲ್ಲಿ ನೀವು ನೋಡುವುದು ಜಗತ್ತಿನಲ್ಲಿ ಸಂಭವಿಸುವ ಕ್ಷಣಗಳಾಗಿರುತ್ತವೆ.

ನಾವು Twitter ಸಂಗ್ರಹಣೆ ತಂಡವಾಗಿ ಅನುಸರಣೆ ಮಾಡುವ ಮಾನದಂಡಗಳು ಮತ್ತು ಮಾರ್ಗದರ್ಶಿಗಳನ್ನೇ ಕ್ಷಣಗಳನ್ನು ರಚಿಸುವುದಕ್ಕಾಗಿ ಮತ್ತು ಆಯ್ಕೆಮಾಡುವುದಕ್ಕಾಗಿ ಅನುಸರಣೆ ಮಾಡಲಾಗುತ್ತದೆ.

ಕ್ಷಣಗಳ ಸಂಗ್ರಹಣೆ ನೀತಿ

ಕ್ಷಣಗಳನ್ನು Twitter ನಲ್ಲಿ ಅತ್ಯುತ್ತಮ ವಿಷಯವನ್ನು ಹುಡುಕಲು ಜನರಿಗೆ ಸಹಾಯ ಮಾಡುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ನಮ್ಮ ಸ್ವಂತ ಕ್ಯುರೇಟರ್​ಗಳು ಮೂಲ ವಿಷಯದ ವರದಿಗಾರರಾಗಿ ಅಥವಾ ಕ್ಯುರೇಟರ್​ಗಳಾಗಿ ಕಾರ್ಯನಿರ್ವಹಿಸುವುದಿಲ್ಲ; ಬದಲಿಗೆ, ಅವರು Twitter ನಲ್ಲಿ ಈಗಾಗಲೇ ಇರುವ ಆಸಕ್ತಿದಾಯಕ ವಿಷಯವನ್ನು ನೇರವಾದ, ಸುಲಭವಾಗಿ ಬಳಸಬಹುದಾದ ರೀತಿಯಲ್ಲಿ ಆಯೋಜಿಸುತ್ತಾರೆ ಮತ್ತು ಪ್ರಸ್ತುತಪಡಿಸುತ್ತಾರೆ.

ಈ ಜಾಗತಿಕ ಮಾರ್ಗದರ್ಶಿಗಳನ್ನು ವಿಷಯದ ಬಳಕೆದಾರರಿಗೆ ಮತ್ತು ಕ್ಷಣಗಳಲ್ಲಿ ಯಾರ ವಿಷಯ ಪ್ರಕಟಗೊಂಡಿದೆಯೋ ಅವರಿಗೆ ಹೀಗೆ ಇಬ್ಬರಿಗೂ ಸಾಧ್ಯವಾದ ಅತ್ಯುತ್ತಮ ಅನುಭವನ್ನು ನೀಡುವ ರೀತಿಯಲ್ಲಿ ಸ್ಪಷ್ಟವಾಗಿ ತಿಳಿಸುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಅತ್ಯುತ್ತಮ ಕ್ಷಣಗಳನ್ನು ರಚಿಸುವುದು

Twitter ನಲ್ಲಿ ಅತ್ಯುತ್ತಮ ವಿಷಯವನ್ನು ಹೈಲೈಟ್ ಮಾಡುವುದಕ್ಕಾಗಿ ಕ್ಷಣಗಳನ್ನು ವಿನ್ಯಾಸಗೊಳಿಸಲಾಗಿದೆ. ಅವುಗಳು ವ್ಯಾಪಕ ಪ್ರೇಕ್ಷಕರ ಶ್ರೇಣಿಗೆ ಆಕರ್ಷಣೀಯವಾಗಿರಬೇಕು ಮತ್ತು ವಿಷಯವು Twitter ಸಮುದಾಯದ ಎಲ್ಲಾ ಭಾಗಗಳಿಗೆ ಸೂಕ್ತವಾಗಿರಬೇಕು.

ಕೆಲವೊಮ್ಮೆ ವಿಶ್ವ ವೇದಿಕೆಯಲ್ಲಿ ಅಥವಾ ಮಾಧ್ಯಮದಲ್ಲಿ ಸಂಬಂಧಿತವಾಗಿರುವುದನ್ನು ಸಮಾನಾಂತರಗೊಳಿಸುತ್ತದೆ; ಇತರೆ ಸಮಯಗಳಲ್ಲಿ, ಅವುಗಳನ್ನು Twitter ಗೆ ಅನನ್ಯವಾಗಿರುವ ವಿಷಯದ ಆಧಾರದಲ್ಲಿ ನಿರ್ಮಿಸಲಾಗುತ್ತದೆ. Twitter ನಲ್ಲಿ ಏನಾಗುತ್ತಿದೆ ಎಂಬುದನ್ನು ಆಧರಿಸಿ ನಾವು ಕ್ಷಣಗಳನ್ನು ಆಯ್ಕೆಮಾಡುತ್ತೇವೆ ಅಥವಾ ಮಾಧ್ಯಮ ಔಟ್​ಲೆಟ್​ಗಳಲ್ಲಿ ಇರುವ Twitter ವಿಷಯವನ್ನು ಆಧರಿಸಿ ಕ್ಷಣಗಳನ್ನು ರಚಿಸುತ್ತೇವೆ. ವಿವಾದಾತ್ಮಕ ಸಂಗತಿಗಳ ಕುರಿತಂತೆ ಕ್ಷಣಗಳನ್ನು ಆಯ್ಕೆಮಾಡುವಾಗ, ಮುಖ್ಯವಾಹಿನಿಯ ಮಾಧ್ಯಮದಲ್ಲಿ ದೊಡ್ಡಮಟ್ಟಿದಲ್ಲಿ ಸುದ್ದಿಮಾಡಿರುವ ಅಥವಾ Twitter ನಲ್ಲಿ ದೊಡ್ಡ ಮಟ್ಟದಲ್ಲಿ ಸಾರ್ವಜನಿಕ ಸಂವಾದಗಳನ್ನು ತೋರಿಸುವ ಸಂಗತಿಗಳನ್ನು ನಾವು ಆಯ್ಕೆಮಾಡಿಕೊಳ್ಳುತ್ತೇವೆ.

ಗೌಪ್ಯತೆಯನ್ನು ಅತಿಕ್ರಮಿಸುವ, ಕಾನೂನುಬಾಹಿರ ಚಟುವಟಿಕೆಗಳಿಗೆ ಉತ್ತೇಜನ ನೀಡುವ, ಅಪ್ರಾಪ್ತರ ಶೋಷಣೆಯನ್ನು ಮಾಡುವ ಅಥವಾ ಅವರಿಗೆ ಹಾನಿ ಮಾಡುವ ಅಥವಾ Twitter, Inc ಅನ್ನು ಸಂಗತಿಯ ಕೇಂದ್ರಬಿಂದುವಾಗಿಸುವ ಕ್ಷಣಗಳನ್ನು ರಚಿಸುವುದನ್ನು ನಾವು ತಪ್ಪಿಸುತ್ತೇವೆ.

ನಾವು ಕ್ಯುರೇಟ್ ಮಾಡಲಾದ ಸಂಗ್ರಹಗಳನ್ನು ಅಥವಾ ಏಕ ಮೂರನೇ-ವ್ಯಕ್ತಿ ವೆಬ್ಸೈಟ್ನಲ್ಲಿ ಎಂಬೆಡ್ ಮಾಡಲಾದ ಟ್ವೀಟ್ಗಳ ಸೆಟ್ಗಳನ್ನು ಅಥವಾ ಒಂದೇ Twitter ಖಾತೆಯಿಂದ ಮರುಟ್ವೀಟಿಸಲಾದವುಗಳನ್ನು ನಕಲು ಮಾಡುವುದಿಲ್ಲ.

ಅತ್ಯುತ್ತಮ ಟ್ವೀಟ್​ಗಳನ್ನು ಆಯ್ಕೆಮಾಡುವುದು

ಕ್ಷಣಗಳು ಎನ್ನುವುದು Twitter ನಲ್ಲಿ ಜನರು ರಚಿಸಿದ ವಿಷಯವನ್ನು ಹೊಂದಿರುವುದಾಗಿದೆ. ವ್ಯಕ್ತಿಗಳ ಅಭಿಪ್ರಾಯಗಳನ್ನು ನಾವು ಕ್ಷಣಗಳಲ್ಲಿ ಸೇರಿಸಿಕೊಳ್ಳುವಾಗ ಆ ಅಭಿಪ್ರಾಯಗಳಿಗೆ ನಾವು ಸದಾ ನಿಷ್ಠಾವಂತರಾಗಿರುತ್ತೇವೆ ಮತ್ತು ಹಾದಿ ತಪ್ಪಿಸುವ, ತರುವಾಯು ಟ್ವೀಟ್​ನ ಮೂಲ ಸಂದರ್ಭವನ್ನು ಬದಲಾಯಿಸುವ ರೀತಿಯಲ್ಲಿ ಅಥವಾ ಸಂರಕ್ಷಿತ ಖಾತೆಗಳನ್ನು ಒಳಗೊಂಡಿರುವ ರೀತಿಯಲ್ಲಿ ಟ್ವೀಟ್​ಗಳನ್ನು ಸೇರಿಸಿಕೊಳ್ಳುವುದಿಲ್ಲ. Twitter ಉದ್ಯೋಗಿಗಳು ರಚಿಸಿರುವ ವಿಷಯವನ್ನು ನಾವು ಸೇರಿಸಿಕೊಳ್ಳುವುದನ್ನು ತಪ್ಪಿಸುತ್ತೇವೆ.

ಪಕ್ಷಪಾತ, ನಿಖರತೆ, ಮಾನದಂಡಗಳು

ಆಕರ್ಷಣೀಯವಾದ, ಮೂಲ ಮತ್ತು ವೈವಿಧ್ಯಮಯ ವಿಷಯವನ್ನು ಒಳಗೊಳ್ಳುವ ಉದ್ದೇಶವನ್ನು ಕ್ಷಣಗಳು ಹೊಂದಿದೆ. ಕ್ಷಣದಲ್ಲಿ ಕಂಡುಬರುವುದಕ್ಕಾಗಿ ವಿಷಯವನ್ನು ಆಯ್ಕೆಮಾಡುವಾಗ, ನಾವು ಟ್ವೀಟ್‌ನ ವಿಷಯ, ಯಾವುದೇ ಮಾಧ್ಯಮ ಮತ್ತು ಪೋಸ್ಟರ್‌ನ ಅವತಾರ್ ಮತ್ತು ಬಳಕೆದಾರರ ಹೆಸರನ್ನು ಪರಿಗಣಿಸುತ್ತೇವೆ.

  • ಪಕ್ಷಪಾತ: ನಾವು ವಿವಾದಾಸ್ಪದ ಸಂಗತಿಗಳ ಕುರಿತಾದ ಟ್ವೀಟ್​ಗಳನ್ನು ಆರಿಸಿಕೊಳ್ಳುವಾಗ ಡೇಟಾ-ಆಧಾರಿತ ನಿರ್ಧಾರವನ್ನು ಬಳಸುತ್ತೇವೆ ಮತ್ತು Twitter ನಲ್ಲಿ ಈಗಾಗಲೇ ಹೆಚ್ಚಿನ ತೊಡಗಿಸಿಕೊಳ್ಳುವಿಕೆಯನ್ನು ಸ್ವೀಕರಿಸುತ್ತಿರುವ ಟ್ವೀಟ್​ಗಳನ್ನು ಹೈಲೈಟ್ ಮಾಡುತ್ತೇವೆ. ಸಾರ್ವಜನಿಕ ಚರ್ಚೆಯನ್ನು ಪ್ರತಿಬಿಂಬಿಸುವ ಸಂಗತಿಗಳಲ್ಲಿ, ನಾವು ಚರ್ಚೆಯ ಬಹು ಆಯಾಮಗಳನ್ನು ಪ್ರತಿನಿಧಿಸುವ ಟ್ವೀಟ್​ಗಳನ್ನು ಮತ್ತು ಸೂಕ್ತವಾಗಿರುವಲ್ಲಿ ಸುದ್ದಿ ಸಂಗತಿಯನ್ನು ನಾವು ಆಯ್ಕೆಮಾಡುತ್ತೇವೆ. Twitter ಕ್ಯುರೇಟರ್​ಗಳು ತಮ್ಮ ಸ್ವಂತ ಅಭಿಪ್ರಾಯಗಳನ್ನು ಮಂಡಿಸಬಾರದು, ಆದರೆ ನಮ್ಮ ವೇದಿಕೆಗಳಲ್ಲಿ ಚರ್ಚೆಗಳು ಕಂಡುಬಂದಂತೆ ಅವುಗಳನ್ನು ಪ್ರತಿಬಿಂಬಿಸಬೇಕು.
  • ನಿಖರತೆ: ಸುದ್ದಿಗಳು ಅಥವಾ ಸುದ್ದಿಗೆ ಅರ್ಹವಾದ ವಿಷಯವನ್ನು ನಿರ್ವಹಣೆ ಮಾಡುವಾಗ, ನಿಖರ ಮಾಹಿತಿಯನ್ನು ಪ್ರತಿನಿಧಿಸುವ ಗುಣಮಟ್ಟದ ಟ್ವೀಟ್​ಗಳನ್ನು ಹೈಲೈಟ್ ಮಾಡಲು ನಾವು ಬಯಸುತ್ತೇವೆ. ನಿಖರವಾಗಿಲ್ಲದಿರುವ ವಿಷಯವನ್ನು ನಾವು ಹೈಲೈಟ್ ಮಾಡಿರುವ ಕುರಿತು ನಮಗೆ ತಿಳಿದುಬಂದರೆ, ನಾವು ಕಂಡುಬರುವ ತಿದ್ದುಪಡಿಗಳ ಮೂಲಕ ಕ್ಷಣವನ್ನು ನವೀಕರಿಸುತ್ತೇವೆ ಮತ್ತು ನವೀಕೃತ ಟ್ವೀಟ್ ಅನ್ನು ಪ್ರಕಟಿಸುತ್ತೇವೆ. ಅಪರೂಪದ ಸಂದರ್ಭಗಳಲ್ಲಿ, ನಾವು ಕ್ಷಣವನ್ನು ಅಳಿಸಬಹುದು ಮತ್ತು ಹಿಂತೆಗೆದುಕೊಳ್ಳುವಿಕೆಯನ್ನು ಪೋಸ್ಟ್ ಮಾಡಬಹುದು.
  • ಮಾನದಂಡಗಳು: ಅಶ್ಲೀಲತೆ, ಹಿಂಸೆ, ಲೈಂಗಿತತೆ ಮತ್ತು ಇತರ ಪ್ರಕಾರಗಳ ಸಂಭಾವ್ಯವಾಗಿ ಸೂಕ್ಷ್ಮವಾದ ವಿಷಯವನ್ನು ಒಂದು ವೇಳೆ ಸುದ್ದಿಗೆ ಅರ್ಹವಾದ ಸಂಗತಿಯನ್ನು ತಿಳಿಸುವುದಕ್ಕಾಗಿ ಅಗತ್ಯವಾಗದ ಹೊರತು ತಪ್ಪಿಸಬೇಕು. ಕಾನೂನುಬಾಹಿರ ನಡವಳಿಕೆಯನ್ನು ಉತ್ತೇಜಿಸುವ ಅಥವಾ ಪ್ರತಿಬಿಂಬಿಸುವ ವಿಷಯವನ್ನು ನಾವು ಸೇರಿಸಿಕೊಳ್ಳುವುದಿಲ್ಲ. ಕ್ಷಣವು ಸಂಭಾವ್ಯವಾಗಿ ಸೂಕ್ಷ್ಮ ವಿಷಯವನ್ನು ಒಳಗೊಂಡಿರಬಹುದು ಎಂಬ ಸ್ಪಷ್ಟವಾದ ಸೂಚನೆಯನ್ನು ನಾವು ವ್ಯಕ್ತಿಗಳಿಗೆ ನೀಡುವುದಿಲ್ಲ.

ಶೈಲಿ ಮಾರ್ಗದರ್ಶಿಗಳು 

ಕ್ಷಣ ಎಂಬುದು ಸ್ವತಃ ಟ್ವೀಟ್​ಗಳಂತಂಹ ಟ್ವೀಟ್​ಗಳ ಸಂಗ್ರಹವಾಗಿದೆ, ಇದು ವೈವಿಧ್ಯಮಯ ಶ್ರೇಣಿಯ ಅಭಿಪ್ರಾಯಗಳನ್ನು, ವ್ಯಾಪಕ ಶ್ರೇಣಿಯ ಮಾಧ್ಯಮವನ್ನು ಬಳಸಿಕೊಂಡು ಸೃಜನಶೀಲ ಸುದ್ದಿಗಳನ್ನು ಸಂಗತಿಗಳನ್ನು ತಿಳಿಸುವ ಮತ್ತು ಸಂಪೂರ್ಣಾದ ಮತ್ತು ಆಕರ್ಷಕ ಸುದ್ದಿಯನ್ನು ತಿಳಿಸುವ ಒಂದು ಅನುಕೂಲಕರ ವಿಧಾನವಾಗಿದೆ. ಅತ್ಯುತ್ತಮ ಕ್ಷಣಗಳಲ್ಲಿ ದೃಶ್ಯ ಅಥವಾ ಮೂಲದಿಂದ ನೇರವಾಗಿ ಬಂದ ಟ್ವೀಟ್​ಗಳು ಒಳಗೊಂಡಿರುತ್ತವೆ ಮತ್ತು ಇವುಗಳು Twitter ಸಕ್ರಿಯಗೊಳಿಸುವ ಅನನ್ಯ ವಿಷಯದ ಪ್ರಯೋಜನ ಪಡೆಯುವುದಕ್ಕಾಗಿ ದೃಷ್ಟಿಕೋನವನ್ನು, ಸಕಾಲಿಕತೆಯನ್ನು ಅಥವಾ ಅಭಿಪ್ರಾಯವನ್ನು ಪ್ರತಿಬಿಂಬಿಸುತ್ತದೆ.

ಕ್ಷಣಗಳನ್ನು ರಚಿಸುವುದಕ್ಕಾಗಿ ಪರಿಗಣಿಸಬೇಕಾದ ಕೆಲವು ಸಂಗತಿಗಳು ಇಲ್ಲಿದೆ:

  • ಪ್ರತಿಯೊಂದು ಕ್ಷಣವು Twitter ಗೆ ಅನನ್ಯವಾಗಿರುವ ಮಾಹಿತಿ ಅಥವಾ ದೃಷ್ಟಿಕೋನವನ್ನು ಒದಗಿಸಬೇಕು.
  • ಪ್ರತಿಯೊಂದು ಕ್ಷಣವೂ ಅದನ್ನು ಹಂಚಿಕೊಳ್ಳುವಂತೆ ಪ್ರೇಕ್ಷಕರನ್ನು ಪ್ರೇರೇಪಿಸಬೇಕು.
  • ಪ್ರತಿಯೊಂದು ಕ್ಷಣವು ಸಕಾಲಿಕವಾಗಿರಬೇಕು.
  • ಪ್ರತಿಯೊಂದು ಕ್ಷಣವು ಜನರನ್ನು, ಅಭಿಪ್ರಾಯಗಳನ್ನು ಮತ್ತು ಸುದ್ದಿಯ ದೃಷ್ಟಿಕೋನವನ್ನು ಹೈಲೈಟ್ ಮಾಡಬೇಕು.

Twitter ಸಂಗ್ರಹಣೆ ತಂಡವು ರಚಿಸಿದ ಕೆಲವು ಕ್ಷಣಗಳು ಶೀರ್ಷಿಕೆಯ ಕೆಳಗೆ ಅಥವಾ ಟ್ವೀಟ್ಗಳ ನಡುವೆ ಹೆಚ್ಚುವರಿ ಪಠ್ಯವನ್ನು ಒಳಗೊಂಡಿರಬಹುದು. ಈ ಪಠ್ಯವು ಕ್ಷಣಕ್ಕೆ ಸಂದರ್ಭವನ್ನು ಸೇರಿಸುವಂತಿರಬೇಕು ಮತ್ತು ಅದು ಕ್ಷಣದಲ್ಲಿ ಟ್ವೀಟ್​ಗಳ ಅನುವಾದವಾಗಿರಬಹುದು ಅಥವಾ ಈ ಟ್ವೀಟ್​ಗಳಿಂದ ವಿಷಯದ ಪುನರಾವರ್ತನೆಯಾಗಿರಬಹುದು. ಕ್ಷಣದಲ್ಲಿ ಟ್ವೀಟ್​ನಿಂದ ಈ ಹೆಚ್ಚುವರಿ ಪಠ್ಯವನ್ನು ಪಡೆದುಕೊಳ್ಳದೇ ಇದ್ದರೆ, ಅದನ್ನು ಸುಲಭವಾಗಿ ಪರಿಶೀಲಿಸಬಹುದು ಅಥವಾ ಅದರ ಮೂಲಕ ಆಟ್ರಿಬ್ಯೂಟ್ ಮಾಡಬಹುದು.

ಆಸಕ್ತಿಯ ಸಂಘರ್ಷಗಳನ್ನು ತಪ್ಪಿಸುವುದು

ಆದಾಯ ತರಲು, ಬಳಕೆದಾರರ ಬೆಳವಣಿಗೆ ಅಥವಾ Twitter ನ ಪಾಲುದಾರ ಸಂಬಂಧಗಳನ್ನು ನಿರ್ವಹಿಸುವುದಕ್ಕಾಗಿ ನಮ್ಮ ಕ್ಷಣಗಳ ಸಂಗ್ರಹಣೆ ತಂಡವು ಜವಾಬ್ದಾರಿಯಾಗಿರುವುದಿಲ್ಲ. ಕ್ಷಣಗಳಲ್ಲಿ ಟ್ವೀಟ್​ಗಳನ್ನು ನಾವು ಪ್ರಕಟಿಸುತ್ತೇವೆ ಮತ್ತು ನಮ್ಮ ಪ್ರೇಕ್ಷಕರಿಗೆ ಯಾವುದು ಅತ್ಯುತ್ತಮವಾಗಿ ಕೊಡುಗೆಯನ್ನು ನೀಡುತ್ತದೆಯೋ ಅದನ್ನು ಆಧರಿಸಿದ ಕ್ಷಣಗಳನ್ನು ಆಯ್ಕೆಮಾಡುತ್ತೇವೆಯೇ ಹೊರತು ನಮ್ಮ ಜಾಹೀರಾತುದಾರರು, ಪಾಲುದಾರರು ಅಥವಾ Twitter ನ ವ್ಯವಹಾರ ಆಸಕ್ತಿಗಳನ್ನು ಆಧರಿಸಿ ಅಲ್ಲ. ನಮ್ಮ ಸ್ವಂತ ಉದ್ಯಮ, ನಮ್ಮ ಕಂಪನಿ ಅಥವಾ ನಮ್ಮ ಪ್ರತಿಸ್ಪರ್ಧಿಗಳನ್ನು ಒಳಗೊಳ್ಳುವ ಕ್ಷಣಗಳನ್ನು ರಚಿಸುವುದನ್ನು ನಮ್ಮ ಸಂಗ್ರಹಣೆ ತಂಡವು ಸಾಮಾನ್ಯವಾಗಿ ತಪ್ಪಿಸುತ್ತದೆ. ಆದರೆ, ಒಂದು ವೇಳೆ Twitter ಅಥವಾ ಅದರ ಪ್ರತಿಸ್ಪರ್ಧಿಗಳು ವೇದಿಕೆಯ ಸಂವಾದದ ಗಣನೀಯ ಭಾಗವಾದರೆ (ಉದಾಹರಣೆಗೆ, ಸಮಸ್ಯೆಯು ಪ್ರವೃತ್ತಿಯಲ್ಲಿರುವ ಸಂಗತಿಆದರೆ), ಲಭ್ಯವಿರುವಲ್ಲಿ ಕಂಪನಿಯಿಂದ ಪ್ರತಿಕ್ರಿಯೆಯನ್ನು ಒಳಗೊಂಡಂತೆ, ನಮ್ಮ ಸಂಗ್ರಹಣೆ ತಂಡವು ಸಂವಾದದ ವಾಸ್ತವಿಕ ಸಾರಾಂಶವನ್ನು ಸಂಗ್ರಹಣೆ ಮಾಡಬಹುದು.

ವ್ಯಕ್ತಿಗಳು ಮತ್ತು Twitter ಪಾಲುದಾರರು ರಚಿಸಿದ ಕ್ಷಣಗಳು

ಕ್ಷಣಗಳನ್ನು ಸಂಗ್ರಹಿಸುವುದಕ್ಕಾಗಿ ನಾವು ವ್ಯಕ್ತಿಗಳು ಮತ್ತು ಪಾಲುದಾರರಿಗೆ ಅನುಮತಿಸುತ್ತೇವೆ ಮತ್ತು ಕ್ಷಣಗಳ ಟ್ಯಾಬ್ (twitter.com) ಮತ್ತು ಅನ್ವೇಷಣೆ ಟ್ಯಾಬ್ (iOS ಮತ್ತು Android ಗಾಗಿ Twitter) ನಲ್ಲಿ ಆ ಕ್ಷಣಗಳನ್ನು ಪ್ರಕಟಿಸಬಹುದು. ಪ್ರತಿ ಕ್ಷಣವನ್ನು ಪ್ರಕಟಿಸುವ ಮೊದಲು ಅದನ್ನು ಪರಿಶೀಲಿಸುತ್ತೇವೆ ಮತ್ತು ಕ್ಷಣಗಳು ಮತ್ತು ಅನ್ವೇಷಣೆ ಟ್ಯಾಬ್ಗಳಲ್ಲಿ ಅಥವಾ ಕ್ಷಣಗಳ ಖಾತೆಯಿಂದ ಪ್ರಕಟಗೊಂಡ ಯಾವುದೇ ಕ್ಷಣವು ಈ ನೀತಿಯಲ್ಲಿ ತಿಳಿಸಲಾಗಿರುವ ಒಟ್ಟಾರೆ ಕ್ಯುರೇಟೇರಿಯಲ್ ಮಾನದಂಡಗಳನ್ನು ಪೂರೈಸುತ್ತದೆ ಎಂಬುದನ್ನು ಖಾತ್ರಪಡಿಸುತ್ತೇವೆ. ಕ್ಷಣವನ್ನು ಯಾರು ಕ್ಯುರೇಟ್ ಮಾಡಿದ್ದಾರೆ ಎಂಬುದನ್ನೂ ಸಹ ನಾವು ಸದಾ ಸ್ಪಷ್ಟವಾಗಿ ಸೂಚಿಸುತ್ತೇವೆ.

Twitter ಪಾಲುದಾರರು ರಚಿಸಿದ ಕೆಲವು ಕ್ಷಣಗಳನ್ನು ಮೂರನೇ ಪಾರ್ಟಿಯು ಪ್ರಾಯೋಜಿಸಬಹುದು. ಕ್ಷಣಗಳು ಮತ್ತು ಅನ್ವೇಷಣೆ ಟ್ಯಾಬ್​ಗಳಲ್ಲಿ ಸೇರ್ಪಡೆಗಾಗಿ ಪಾಲುದಾರ ಕ್ಷಣಗಳನ್ನು ಆಯ್ಕೆಮಾಡುವಾಗ ಈ ಪ್ರಾಯೋಜಕತ್ವಗಳನ್ನು ನಾವು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಪ್ರಾಯೋಜಿಸಿದ ಪಾಲುದಾರ ಕ್ಷಣಗಳನ್ನು ಒಳಗೊಂಡಂತೆ, ಎಲ್ಲಾ ಕ್ಷಣಗಳು ನಮ್ಮ ಒಟ್ಟಾರೆ ಕ್ಯುರೇಟೋರಿಯಲ್ ಮಾನದಂಡಗಳಿಗೆ ಸಂಪೂರ್ಣವಾಗಿ ಬದ್ಧವಾಗಿರಬೇಕು.

Bookmark or share this article