ನಿಮ್ಮ ಸಂಪರ್ಕಗಳನ್ನು ಅಪ್ಲೋಡ್ ಮಾಡುವ ಮತ್ತು ನಿರ್ವಹಿಸುವ ಬಗೆ
ನಿಮ್ಮ ಖಾತೆಗೆ ನೀವು ಸಂಪರ್ಕಗಳನ್ನು ಅಪ್ಲೋಡ್ ಮಾಡಿದಾಗ, ನೀವು ತಿಳಿದಿರುವ ವ್ಯಕ್ತಿಗಳನ್ನು Twitter ನಲ್ಲಿ ಹುಡುಕಲು ನಾವು ಸಹಾಯ ಮಾಡುತ್ತೇವೆ. ತಮ್ಮನ್ನು ಇತರರು ಇಮೇಲ್ ವಿಳಾಸ ಅಥವಾ ಫೋನ್ ನಂಬರ್ ಮೂಲಕ ಕಂಡುಕೊಳ್ಳಲು ಅನುಮತಿ ನೀಡಿರುವ ಸಂಪರ್ಕಗಳನ್ನು ಕಂಡುಕೊಳ್ಳಲು ಮತ್ತು ಅನುಸರಿಸಲು ನಿಮಗೆ ಸಾಧ್ಯವಾಗಲಿದೆ. ಸಲಹೆ ನೀಡುವುದು ಅಥವಾ ಬಳಕೆದಾರರ ಖಾತೆಗಳನ್ನು ತೋರಿಸುವುದು ಮತ್ತು ನಿಮಗೆ ಮತ್ತು ಇತರ ವ್ಯಕ್ತಿಗಳಿಗೆ ಟ್ವೀಟ್ಗಳಂತಹ ವೈಯಕ್ತಿಕಗೊಳಿದ ಕಂಟೆಂಟ್ಗಾಗಿ ನಿಮ್ಮ ಆಮದು ಮಾಡಿದ ವಿಳಾಸ ಪುಸ್ತಕ ಸಂಪರ್ಕಗಳನ್ನೂ ನಾವು ಬಳಸಬಹುದಾಗಿದೆ. ಖಾತೆ ಸಲಹೆಗಳನ್ನು ಮಾಡಲು ಹೇಗೆ ನಾವು ನಿಮ್ಮ ಅಪ್ಲೋಡ್ ಮಾಡಿದ ಸಂಪರ್ಕಗಳನ್ನುಬಳಸುತ್ತೇವೆ ಮತ್ತು Twitter ನಲ್ಲಿ ಹಿಂಬಾಲಿಸುವುದಕ್ಕಾಗಿ ಜನರನ್ನು ಕಂಡುಕೊಳ್ಳಲು ಇತರ ವಿಧಾನಗಳನ್ನು ಕಂಡುಕೊಳ್ಳುವ ಕುರಿತು ಇನ್ನಷ್ಟು ತಿಳಿಯಿರಿ.
ನಿಮ್ಮ ಇಮೇಲ್ ವಿಳಾಸ ಅಥವಾ ಫೋನ್ ಸಂಖ್ಯೆಯ ಮೂಲಕ ಇತರರು ಕಂಡುಕೊಳ್ಳಲಿ ಎಂಬ ಗೌಪ್ಯತೆ ಸೆಟ್ಟಿಂಗ್ಗಳನ್ನು ಹೊಂದಿಸುವ ಮೂಲಕ ಇತರರಿಗೆ ನಿಮ್ಮ ಖಾತೆಯನ್ನು ಸಲಹೆ ಮಾಡಲು ನಿಮ್ಮ ವಿಳಾಸ ಪುಸ್ತಕವನ್ನು Twitter ಬಳಸಬಹುದೇ ಎಂಬುದನ್ನು ನೀವು ನಿಯಂತ್ರಿಸಬಹುದು.
iOS ಗಾಗಿ Twitter ಅಥವಾ Android ಆಪ್ನಲ್ಲಿ ವಿಳಾಸ ಪುಸ್ತಕ ಸಂಪರ್ಕಗಳ ಸಿಂಕ್ ಮಾಡುವಿಕೆ ನಿಲ್ಲಿಸಲು
ವಿಳಾಸ ಪುಸ್ತಕ ಸಂಪರ್ಕಗಳ ಸೆಟ್ಟಿಂಗ್ ಸಿಂಕ್ ಹೊಂದಿಸುವ ಮೂಲಕ ನಿರಂತರವಾಗಿ Twitter ನಲ್ಲಿ ನಿಮ್ಮ ಸಂಪರ್ಕಗಳ ಅಪ್ಲೋಡ್ ಮಾಡುವುದನ್ನು ನಿಲ್ಲಿಸಬಹುದು.
iOS ಗಾಗಿ Twitter ಬಳಸಿ:
- ಮೇಲಿನ ಮೆನುವಿನಲ್ಲಿ, ನಿಮ್ಮ ಪ್ರೊಫೈಲ್ ಐಕಾನ್ ತಟ್ಟಿ.
- ಸೆಟ್ಟಿಂಗ್ಗಳು ಮತ್ತು ಸುರಕ್ಷತೆ, ನಂತರ ಗೌಪ್ಯತೆ ಮತ್ತು ಸುರಕ್ಷತೆ ತಟ್ಟಿ.
- ಪರಿಶೋಧಿಸಲ್ಪಡುವ ಸಾಮರ್ಥ್ಯ ಮತ್ತು ಸಂಪರ್ಕಗಳು ಅಡಿಯಲ್ಲಿ, ಪರಿಶೋಧಿಸಲ್ಪಡುವ ಸಾಮರ್ಥ್ಯ ಮತ್ತು ಸಂಪರ್ಕಗಳು ತಟ್ಟಿ.
- ಸಿಂಕ್ ವಿಳಾಸ ಪುಸ್ತಕ ಸಂಪರ್ಕಗಳ ಪಕ್ಕದಲ್ಲಿ ಆಫ್ ಮಾಡಲು ಸ್ಲೈಡರ್ ಅನ್ನು ಎಳೆಯಿರಿ.
Android ಗಾಗಿ Twitter ಬಳಸಿ:
- ಮೇಲ್ಭಾಗದ ಮೆನುವಿನಲ್ಲಿ, ನೀವು ನ್ಯಾವಿಗೇಶನ್ ಮೆನು ಐಕಾನ್ ಅಥವಾ ನಿಮ್ಮ ಪ್ರೊಫೈಲ್ ಐಕಾನ್ ನೋಡುತ್ತೀರಿ. ನೀವು ಹೊಂದಿರುವ ಯಾವುದೇ ಐಕಾನ್ ಅನ್ನು ತಟ್ಟಿ.
- ಸೆಟ್ಟಿಂಗ್ಗಳು ಮತ್ತು ಸುರಕ್ಷತೆ, ನಂತರ ಗೌಪ್ಯತೆ ಮತ್ತು ಸುರಕ್ಷತೆ ತಟ್ಟಿ.
- ಪರಿಶೋಧಿಸಲ್ಪಡುವ ಸಾಮರ್ಥ್ಯ ಮತ್ತು ಸಂಪರ್ಕಗಳು ಅಡಿಯಲ್ಲಿ, ಪರಿಶೋಧಿಸಲ್ಪಡುವ ಸಾಮರ್ಥ್ಯ ಮತ್ತು ಸಂಪರ್ಕಗಳು ತಟ್ಟಿ.
- ಸಿಂಕ್ ವಿಳಾಸ ಪುಸ್ತಕ ಸಂಪರ್ಕಗಳ ಪಕ್ಕದಲ್ಲಿ ಆಫ್ ಮಾಡಲು ಬಾಕ್ಸ್ ಅನ್ನು ಗುರುತಿಸಿ.
ಗಮನಿಸಿ: ನೀಡಿದ ಸಾಧನದಲ್ಲಿ ವಿಳಾಸ ಪುಸ್ತಕ ಸಂಪರ್ಕಗಳನ್ನು ಸಿಂಕ್ ಮಾಡಿ ಸೆಟ್ಟಿಂಗ್ ಅನ್ನು ನೀವು ಆಫ್ ಮಾಡಿದಾಗ, ಆ ಸಾಧನದಿಂದ ಮಾತ್ರವೇ Twitter ಗೆ ಸಿಂಕ್ ಮಾಡುವುದನ್ನು ನಿಲ್ಲಿಸಲ್ಪಡುತ್ತದೆ. ಇತರ ಸಾಧನಗಳಿಂದ ಸಂಪರ್ಕಗಳ ಸಿಂಕ್ ಮಾಡುವುದನ್ನು ನೀವು ನಿಲ್ಲಿಸಲು ಬಯಸಿದರೆ, ಆ ಸಾಧನಗಳಲ್ಲಿ ನಿಮ್ಮ ಸೆಟ್ಟಿಂಗ್ಗಳನ್ನು ನೀವು ಹೊಂದಿಸಬೇಕಾಗುತ್ತದೆ ಅಥವಾ Twitter ಇಂದ ಎಲ್ಲ ಸಂಪರ್ಕಗಳನ್ನು ತೆಗೆಯಬೇಕಾಗುತ್ತದೆ. ನೀವು ಎಲ್ಲ ಸಂಪರ್ಕಗಳನ್ನು ಅಳಿಸುವವರೆಗೂ ಈ ಹಿಂದೆ ನೀವು ಅಪ್ಲೋಡ್ ಮಾಡಿದ ಸಂಪರ್ಕಗಳ ಸಂಗ್ರಹ ಮತ್ತು ಬಳಕೆಯನ್ನು Twitter ಮುಂದುವರಿಸುತ್ತದೆ.
ಗಮನಿಸಿ: ನೀವು ಈ ಹಿಂದೆ ಅಪ್ಲೋಡ್ ಮಾಡಿದ ಯಾವುದೇ ಸಂಪರ್ಕಗಳನ್ನು ಇದು ತೆಗೆಯುತ್ತದೆ ಮತ್ತು ನೀವು ಈ ಹಿಂದೆ ಸಂಪರ್ಕಗಳನ್ನು ಸಿಂಕ್ ಮಾಡಲು ಆಯ್ಕೆ ಮಾಡಿಕೊಂಡ ಯಾವುದೇ ಸಾಧನದಲ್ಲಿ ನಿಮ್ಮ ಖಾತೆಯ ವಿಳಾಸ ಪುಸ್ತಕ ಸಂಪರ್ಕಗಳ ಸಿಂಕ್ ಸೆಟ್ಟಿಂಗ್ ಅನ್ನು ಆಫ್ ಮಾಡಲಾಗುತ್ತದೆ. ಇದಕ್ಕೆ ಸ್ವಲ್ಪವೇ ಸಮಯ ಸಾಕು ಮತ್ತು ಈ ಸಮಯದಲ್ಲಿ ನೀವು Twitter ನಲ್ಲಿ (ನಿಮ್ಮ ಸಂಪರ್ಕಗಳನ್ನು ಆಧರಿಸಿ) ಈಗಲೂ ಕೆಲವು ಸಲಹೆಗಳನ್ನು ನೀವು ಗಮನಿಸಬಹುದು ಎಂಬುದನ್ನು ತಿಳಿದುಕೊಂಡಿರಿ.
twitter.com ಮೂಲಕ ಸಂಪರ್ಕಗಳನ್ನು ವೀಕ್ಷಿಸುವುದು ಮತ್ತು ತೆಗೆದುಹಾಕುವ ಬಗೆ
ಯಾವುದೇ ಸಮಯದಲ್ಲಿ ಈ ಹಿಂದೆ Twitter ಇಂದ ಆಮದು ಮಾಡಿಕೊಂಡ ಸಂಪರ್ಕಗಳನ್ನು ನೀವು ವೀಕ್ಷಿಸಬಹುದು ಅಥವಾ ತೆಗೆದುಹಾಕಬಹುದು. ಈ ಮಾಹಿತಿಯನ್ನು ತೆಗೆದುಹಾಕಿದ ನಂತರ ನಿಮ್ಮ ಖಾತೆ ಶಿಫಾರಸುಗಳು ಸೂಕ್ತವಲ್ಲದಿರಬಹುದು ಎಂಬುದನ್ನು ದಯವಿಟ್ಟು ಗಮನಿಸಿ.
- ಇನ್ನಷ್ಟು ಮೆನು ಕ್ಲಿಕ್ ಮಾಡಿ.
- ಸೆಟ್ಟಿಂಗ್ಗಳು ಮತ್ತು ಗೌಪ್ಯತೆ ಗೆ ಹೋಗಿ.
- ಗೌಪ್ಯತೆ ಮತ್ತು ಸುರಕ್ಷತೆ ಕ್ಲಿಕ್ ಮಾಡಿ.
- ಪರಿಶೋಧಿಸಲ್ಪಡುವ ಸಾಮರ್ಥ್ಯ ಮತ್ತು ಸಂಪರ್ಕಗಳು ಕ್ಲಿಕ್ ಮಾಡಿ.
- ಸಂಪರ್ಕಗಳನ್ನು ನಿರ್ವಹಿಸಿ ಕ್ಲಿಕ್ ಮಾಡಿ.
- ನಿಮ್ಮ ಪಾಸ್ವರ್ಡ್ ನಮೂದಿಸುವಂತೆ ನಿಮಗೆ ಸೂಚಿಸಲಾಗುತ್ತದೆ. ಅಪ್ಲೋಡ್ ಮಾಡಿದ ಎಲ್ಲ ಸಂಪರ್ಕಗಳನ್ನು ಪ್ರದರ್ಶಿಸಲಾಗುತ್ತದೆ.
- ನಿಮ್ಮ ಸಂಪರ್ಕಗಳನ್ನು ನೀವು ತೆಗೆಯಲು ಬಯಸಿದರೆ, ಎಲ್ಲ ಸಂಪರ್ಕಗಳನ್ನು ತೆಗೆಯಿರಿ ಕ್ಲಿಕ್ ಮಾಡಿ. ತೆಗೆಯಿರಿ ಎಂಬುದನ್ನು ಕ್ಲಿಕ್ ಮಾಡುವ ಮೂಲಕ ಈ ವಿನಂತಿಯನ್ನು ನೀವು ದೃಢೀಕರಿಸಿದರೆ, ನೀವು ಈ ಹಿಂದೆ ಅಪ್ಲೋಡ್ ಮಾಡಿದ ಯಾವುದೇ ಸಂಪರ್ಕಗಳನ್ನು ಇದು ತೆಗೆಯುತ್ತದೆ ಮತ್ತು ನೀವು ಈ ಹಿಂದೆ ಸಂಪರ್ಕಗಳನ್ನು ಸಿಂಕ್ ಮಾಡಲು ಆಯ್ಕೆ ಮಾಡಿಕೊಂಡ ಯಾವುದೇ ಸಾಧನದಲ್ಲಿ ನಿಮ್ಮ ಖಾತೆಯ ವಿಳಾಸ ಪುಸ್ತಕ ಸಂಪರ್ಕಗಳ ಸಿಂಕ್ ಸೆಟ್ಟಿಂಗ್ ಅನ್ನು ಆಫ್ ಮಾಡಲಾಗುತ್ತದೆ. ಇದಕ್ಕೆ ಸ್ವಲ್ಪವೇ ಸಮಯ ಸಾಕು ಮತ್ತು ಈ ಸಮಯದಲ್ಲಿ ನೀವು Twitter ನಲ್ಲಿ (ನಿಮ್ಮ ಸಂಪರ್ಕಗಳನ್ನು ಆಧರಿಸಿ) ಈಗಲೂ ಕೆಲವು ಸಲಹೆಗಳನ್ನು ನೀವು ಗಮನಿಸಬಹುದು ಎಂಬುದನ್ನು ತಿಳಿದುಕೊಂಡಿರಿ.
mobile.twitter.com ಮೂಲಕ ಸಂಪರ್ಕಗಳನ್ನು ತೆಗೆದುಹಾಕಲು:
- ನಿಮ್ಮ ಪ್ರೊಫೈಲ್ ಐಕಾನ್ ತಟ್ಟಿ.
- ಸೆಟ್ಟಿಂಗ್ಗಳು ಮತ್ತು ಸುರಕ್ಷತೆ, ನಂತರ ಗೌಪ್ಯತೆ ಮತ್ತು ಸುರಕ್ಷತೆ ತಟ್ಟಿ.
- ಪರಿಶೋಧಿಸಲ್ಪಡುವ ಸಾಮರ್ಥ್ಯ ಮತ್ತು ಸಂಪರ್ಕಗಳು ಅಡಿಯಲ್ಲಿ, ಪರಿಶೋಧಿಸಲ್ಪಡುವ ಸಾಮರ್ಥ್ಯ ಮತ್ತು ಸಂಪರ್ಕಗಳು ತಟ್ಟಿ.
- ಸಂಪರ್ಕಗಳನ್ನು ತೆಗೆಯಿರಿ ತಟ್ಟಿ. ಪ್ರಾಂಪ್ಟ್ ಅನ್ನು ತಟ್ಟುವ ಮೂಲಕ ಎಲ್ಲ ಸಂಪರ್ಕಗಳನ್ನು ತೆಗೆಯಲು ನೀವು ದೃಢೀಕರಿಸಬೇಕು.