goglobalwithtwitterbanner

Twitter ನಲ್ಲಿ ವೀಡಿಯೋಗಳನ್ನು ಹಂಚಿಕೊಳ್ಳುವುದು ಮತ್ತು ವೀಕ್ಷಿಸುವುದು ಹೇಗೆ

Twitter ನಲ್ಲಿ ವೀಡಿಯೋ ಹಂಚಿಕೊಳ್ಳುವುದು

Twitter ನಲ್ಲಿ ವೀಡಿಯೋ ಹಂಚಿಕೊಳ್ಳಲು ನಾಲ್ಕು ವಿಧಗಳಿವೆ:

  1. ರೆಕಾರ್ಡ್ Twitter ಆಪ್​ನಿಂದ (iPhone ಗಾಗಿ Twitter ಅಥವಾ Android OS 4.1 ಮತ್ತು ಅಧಿಕ ಆವೃತ್ತಿಗಾಗಿ Twitter) ನೀವು ವೀಡಿಯೋಗಳನ್ನು ರೆಕಾರ್ಡ್, ಸಂಪಾದಿಸಬಹುದು ಮತ್ತು ಹಂಚಿಕೊಳ್ಳಬಹುದು.
  2. ಆಮದು: iPhone ಅಥವಾ iPad ಆಪ್​ಗಾಗಿ Twitter ಅನ್ನು ನೀವು ಬಳಸಿದರೆ, ನಿಮ್ಮ ಸಾಧನದಿಂದ ವೀಡಿಯೋಗಳನ್ನು ನೀವು ಆಮದು ಮಾಡಬಹುದು.
  3. ಅಪ್​ಲೋಡ್ twitter.com ಗೆ ವೀಡಿಯೋಗಳನ್ನು ನೀವು ಅಪ್​ಲೋಡ್ ಮಾಡಬಹುದು.
  4. ಲೈವ್​ಗೆ ಹೋಗಿ: ನಿಮ್ಮ Twitter ಆಪ್​ನಿಂದಲೇ ಲೈವ್ ವೀಡಿಯೋ ರಚಿಸುವುದು ಹೇಗೆ ಎಂದು ತಿಳಿಯಿರಿ.
ಇದಕ್ಕಾಗಿ ಸೂಚನೆಗಳನ್ನು ವೀಕ್ಷಿಸಿ:

ಟ್ವೀಟ್​ಗೆ ವೀಡಿಯೋ ರೆಕಾರ್ಡ್ ಮಾಡಲು

  1. ಕ್ಷಣದಲ್ಲಿ ವೀಡಿಯೋವನ್ನು ತ್ವರಿತವಾಗಿ ಹಂಚಿಕೊಳ್ಳಲು ಮೇಲಿನ ಮೆನುವಿನಿಂದ ಕ್ಯಾಮರಾ ಐಕಾನ್ ತಟ್ಟಿ ಅಥವಾ ಟೈಮ್​ಲೈನ್​ನಿಂದ ಎಡಕ್ಕೆ ಸ್ವೈಪ್ ಮಾಡಿ.
    ವೀಡಿಯೋವನ್ನು ರೆಕಾರ್ಡ್ ಮಾಡಲು ಕ್ಯಾಪ್ಚರ್ ಐಕಾನ್ ಅನ್ನು ತಟ್ಟಿ ಮತ್ತು ಹಿಡಿದುಕೊಳ್ಳಿ.

    ಟ್ವೀಟ್ ಪ್ರತಿ ಮತ್ತು ಒಂದು ಸ್ಥಳವನ್ನು ಸೇರಿಸಲು ನೀವು ಆಯ್ಕೆ ಹೊಂದಿದ್ದೀರಿ.

    ಪೋಸ್ಟ್ ಮಾಡಲು ನೀವು ಸಿದ್ಧವಾದಾಗ ಟ್ವೀಟ್ ತಟ್ಟಿ ಅಥವಾ ನಿಮ್ಮ ಕೊನೆಯ ಟ್ವಿಟ್​ಗೆ ಸಂಪರ್ಕಿಸಲು ಥ್ರೆಡ್​ಗೆ ಸೇರಿಸಿ ತಟ್ಟಿ ಮತ್ತು ನಂತರ ಅದನ್ನು ಹಂಚಲು ಸೇರಿಸಿ ಒತ್ತಿ.

  2. ಟ್ವೀಟ್​ಗೆ ವೀಡಿಯೋ ಸೇರಿಸುವುದು.
    ನಿಮ್ಮ ಆಲೋಚನೆಗೆ ಸೇರಿಸುವುದಕ್ಕಾಗಿ ವೀಡಿಯೋ ಅಪ್​ಲೋಡ್​ಮಾಡಲು ಅಥವಾ ಚಿತ್ರೀಕರಿಸಲು ಟ್ವೀಟ್ ಐಕಾನ್  ಅನ್ನು ನೀವು ತಟ್ಟಬಹುದು.

    ಟ್ವೀಟ್ ಸಂಯೋಜನೆ ಬಾಕ್ಸ್​ನ ಕೆಳಗೆ, ಹೊಸ ವೀಡಿಯೋ ಸೇರಿಸಲು ತ್ವರಿತ ಆಯ್ಕೆಗಳನ್ನು ನೀವು ನೋಡುತ್ತೀರಿ. ನಿಮ್ಮ ಗ್ಯಾಲರಿಯಲ್ಲಿನ ನಿಮ್ಮ ಇತ್ತೀಚಿನ ವೀಡಿಯೋಗಳು ಸುಲಭ ಲಭ್ಯತೆಗಾಗಿ ಥಂಬ್​ನೇಲ್​ಪೂರ್ವವೀಕ್ಷಣೆ ರೂಪದಲ್ಲಿ ಕಾಣಿಸುತ್ತವೆ.

    ವೀಡಿಯೋ ಚಿತ್ರೀಕರಿಸಲು ಕ್ಯಾಮರಾ ಐಕಾನ್​  ತಟ್ಟಿ.

    ಕೆಳಗೆ ಬಾರ್​ಅನ್ನು ಯಾವುದಾದರೂ ಕಡೆಗೆ ಎಳೆಯುವ ಮೂಲಕ ನಿಮ್ಮ ವೀಡಿಯೋದ ಉದ್ದವನ್ನು ನೀವು ಟ್ರಿಮ್​ಮಾಡಬಹುದು. ವೀಡಿಯೋದ ಗರಿಷ್ಠ ಉದ್ದವು 2 ನಿಮಿಷಗಳು ಮತ್ತು 20 ಸೆಕೆಂಡುಗಳಾಗಿವೆ.

    ನಿಮ್ಮ ಸಂಪಾದನೆಗಳನ್ನು ಮುಕ್ತಾಯಗೊಳಿಸಲು ಟ್ರಿಮ್ ಅನ್ನು ತಟ್ಟಿ. ಟ್ವೀಟ್ ಮಾಡುವುದಕ್ಕೂ ಮುನ್ನ ಪ್ಲೇ ಬಟನ್​ತಟ್ಟಿ ನಿಮ್ಮ ವೀಡಿಯೋವನ್ನು ಪೂರ್ವ ವೀಕ್ಷಿಸಬಹುದು ಮತ್ತು ಹಂಚಿಕೊಳ್ಳುವ ಮೊದಲು ನಿಮ್ಮ ವೀಡಿಯೋಗೆ ಹೆಚ್ಚುವರಿ ಸಂಪಾದನೆಗಳನ್ನು ಮಾಡಬಹುದು.

    ಪೋಸ್ಟ್ ಮಾಡಲು ಟ್ವೀಟ್ ತಟ್ಟಿ. 

ಗಮನಿಸಿ: ಟ್ವೀಟ್ ಮಾಡುವುದಕ್ಕೂ ಮೊದಲು ವೀಡಿಯೋ ತೆಗೆಯಲು, ವೀಡಿಯೋ ಥಂಬ್ನೇಲ್ನಲ್ಲಿ X ತಟ್ಟಿ.

ಟ್ವೀಟ್​ಗೆ ವೀಡಿಯೋ ರೆಕಾರ್ಡ್ ಮಾಡಲು

  1. ಕ್ಷಣದಲ್ಲಿ ವೀಡಿಯೋವನ್ನು ತ್ವರಿತವಾಗಿ ಹಂಚಿಕೊಳ್ಳಲು, ಮೇಲಿನ ಮೆನುವಿನಿಂದ ಕ್ಯಾಮೆರಾ ಐಕಾನ್ ತಟ್ಟಿ ಅಥವಾ ಟೈಮ್​ಲೈನ್​ನಿಂದ ಎಡಕ್ಕೆ ಸ್ವೈಪ್ ಮಾಡಿ.

    ವೀಡಿಯೋವನ್ನು ರೆಕಾರ್ಡ್ ಮಾಡಲು ಕ್ಯಾಪ್ಚರ್ ಐಕಾನ್ ಅನ್ನು ತಟ್ಟಿ ಮತ್ತು ಹಿಡಿದುಕೊಳ್ಳಿ.

    ಟ್ವೀಟ್ ಪ್ರತಿ ಮತ್ತು ಒಂದು ಸ್ಥಳವನ್ನು ಸೇರಿಸಲು ನೀವು ಆಯ್ಕೆ ಹೊಂದಿದ್ದೀರಿ.

    ಪೋಸ್ಟ್ ಮಾಡಲು ನೀವು ಸಿದ್ಧವಾದಾಗ ಟ್ವೀಟ್ ತಟ್ಟಿ ಅಥವಾ ನಿಮ್ಮ ಕೊನೆಯ ಟ್ವಿಟ್​ಗೆ ಸಂಪರ್ಕಿಸಲು ಥ್ರೆಡ್​ಗೆ ಸೇರಿಸಿ ತಟ್ಟಿ ಮತ್ತು ನಂತರ ಅದನ್ನು ಹಂಚಲು ಸೇರಿಸಿ ಒತ್ತಿ.

  2. ಟ್ವೀಟ್​ಗೆ ವೀಡಿಯೋ ಸೇರಿಸುವುದು.
    ನಿಮ್ಮ ಆಲೋಚನೆಗೆ ಸೇರಿಸುವುದಕ್ಕಾಗಿ ವೀಡಿಯೋ ಅಪ್​ಲೋಡ್​ಮಾಡಲು ಅಥವಾ ಚಿತ್ರೀಕರಿಸಲು ಟ್ವೀಟ್ ಐಕಾನ್ ಅನ್ನು ನೀವು ತಟ್ಟಬಹುದು.

    ಟ್ವೀಟ್ ಸಂಯೋಜನೆ ಬಾಕ್ಸ್​ನ ಕೆಳಗೆ, ಹೊಸ ವೀಡಿಯೋ ಸೇರಿಸಲು ತ್ವರಿತ ಆಯ್ಕೆಗಳನ್ನು ನೀವು ನೋಡುತ್ತೀರಿ. ನಿಮ್ಮ ಗ್ಯಾಲರಿಯಲ್ಲಿನ ನಿಮ್ಮ ಇತ್ತೀಚಿನ ವೀಡಿಯೋಗಳು ಸುಲಭ ಲಭ್ಯತೆಗಾಗಿ ಥಂಬ್​ನೇಲ್​ಪೂರ್ವವೀಕ್ಷಣೆ ರೂಪದಲ್ಲಿ ಕಾಣಿಸುತ್ತವೆ.

    ವೀಡಿಯೋ ಚಿತ್ರೀಕರಿಸಲು ಕ್ಯಾಮೆರಾ ಐಕಾನ್​ ತಟ್ಟಿ.

    ಕೆಳಗೆ ಬಾರ್​ಅನ್ನು ಯಾವುದಾದರೂ ಕಡೆಗೆ ಎಳೆಯುವ ಮೂಲಕ ನಿಮ್ಮ ವೀಡಿಯೋದ ಉದ್ದವನ್ನು ನೀವು ಟ್ರಿಮ್​ಮಾಡಬಹುದು. ವೀಡಿಯೋದ ಗರಿಷ್ಠ ಉದ್ದವು 2 ನಿಮಿಷಗಳು ಮತ್ತು 20 ಸೆಕೆಂಡುಗಳಾಗಿವೆ.

    ನಿಮ್ಮ ಸಂಪಾದನೆಗಳನ್ನು ಮುಕ್ತಾಯಗೊಳಿಸಲು ಟ್ರಿಮ್ ಅನ್ನು ತಟ್ಟಿ. ಟ್ವೀಟ್ ಮಾಡುವುದಕ್ಕೂ ಮುನ್ನ ಪ್ಲೇ ಬಟನ್​ತಟ್ಟಿ ನಿಮ್ಮ ವೀಡಿಯೋವನ್ನು ಪೂರ್ವ ವೀಕ್ಷಿಸಬಹುದು ಮತ್ತು ಹಂಚಿಕೊಳ್ಳುವ ಮೊದಲು ನಿಮ್ಮ ವೀಡಿಯೋಗೆ ಹೆಚ್ಚುವರಿ ಸಂಪಾದನೆಗಳನ್ನು ಮಾಡಬಹುದು.

    ಮುಕ್ತಾಯಗೊಳಿಸಲು ಟ್ವೀಟ್ ತಟ್ಟಿ. 

ಗಮನಿಸಿ: ಟ್ವೀಟ್ ಮಾಡುವುದಕ್ಕೂ ಮೊದಲು ವೀಡಿಯೋ ತೆಗೆಯಲು, ವೀಡಿಯೋ ಥಂಬ್ನೇಲ್ನಲ್ಲಿ X ತಟ್ಟಿ.

ಗಮನಿಸಿ: ನಿಮ್ಮ ಸೆಟ್ಟಿಂಗ್​ಗಳು ಮತ್ತು ಗೌಪ್ಯತೆಯಪ್ರವೇಶಿಸುವಿಕೆ ವಿಭಾಗದಿಂದ ನಿಮ್ಮ ಸ್ವಯಂ ಪ್ಲೇ ಸೆಟ್ಟಿಂಗ್​ಗಳನ್ನು ನೀವು ಹೊಂದಿಸಲೂಬಹುದು.

ವೆಬ್ ಮೂಲಕ ವೀಡಿಯೋವನ್ನು ಅಪ್​ಲೋಡ್ ಮಾಡಲು ಮತ್ತು ಟ್ವೀಟ್ ಮಾಡಲು

  1. ಕಂಪೋಸ್ ಬಾಕ್ಸ್ ಉಪಯೋಗಿಸಿ, ಅಥವಾ ಟ್ವೀಟ್ ಬಟನ್ ಕ್ಲಿಕ್ ಮಾಡಿ. 
  2. ಗ್ಯಾಲರಿ ಬಟನ್ ಕ್ಲಿಕ್ ಮಾಡಿ
  3. ನಿಮ್ಮ ಕಂಪ್ಯೂಟರ್​ನಲ್ಲಿ ಸಂಗ್ರಹಿಸಿದ ವೀಡಿಯೋ ಫೈಲ್ ಆಯ್ಕೆ ಮಾಡಿ ಮತ್ತು ತೆರೆಯಿರಿ ಕ್ಲಿಕ್ ಮಾಡಿ. ಬೆಂಬಲಿತ ಫಾರ್ಮ್ಯಾಟ್​ನಲ್ಲಿ ವೀಡಿಯೋ ಇಲ್ಲದಿದ್ದರೆ ನಿಮಗೆ ಸೂಚಿಸಲಾಗುತ್ತದೆ. TweetVideo ಗಾಗಿ ಫೈಲ್​ನ ಗರಿಷ್ಟ ಗಾತ್ರ 512MB ಆಗಿರುತ್ತದೆ, ಆದರೆ ನಿಮಗೆ 2 ನಿಮಿಷಗಳು ಮತ್ತು 20 ಸೆಕೆಂಡ್​ಗಳಿಗಿಂತ ಹೆಚ್ಚಿನ ಅವಧಿಯ ವೀಡಿಯೋವನ್ನು ಅಪ್​ಲೋಡ್ ಮಾಡಲು ಮತ್ತು ಟ್ವೀಟ್​ನಲ್ಲಿ ವೀಡಿಯೋವನ್ನು ಸೇರಿಸುವ ಮೊದಲು ಅದನ್ನು ಟ್ರಿಮ್ ಮಾಡಲು ಸಾಧ್ಯವಾಗುತ್ತದೆ.
  4. ನಿಮ್ಮ ಸಂದೇಶವನ್ನು ಪೂರ್ಣಗೊಳಿಸಿ ಮತ್ತು ನಿಮ್ಮ ಟ್ವೀಟ್ ಮತ್ತು ವೀಡಿಯೋವನ್ನು ಹಂಚಿಕೊಳ್ಳಲು ಟ್ವೀಟ್ ಕ್ಲಿಕ್ ಮಾಡಿ. 

Twitter ನಲ್ಲಿ ವೀಡಿಯೋ ವೀಕ್ಷಿಸುವುದು

ಕಾಲರೇಖೆಗಳು, ಕ್ಷಣಗಳು, ಎಕ್ಸ್​ಪ್ಲೋರ್ ಟ್ಯಾಬ್​ಮತ್ತು Twitter ನಾದ್ಯಂತ, ಸ್ಥಳೀಯ ವೀಡಿಯೋಗಳು ಮತ್ತು GIF ಗಳು ಸ್ವಯಂ ಪ್ಲೇ ಆಗುತ್ತವೆ.

ಸ್ವಯಂ ಪ್ಲೇ ಆಗುವುದರಿಂದ ವೀಡಿಯೋಗಳನ್ನು ನಾನು ನಿಲ್ಲಿಸುವುದು ಹೇಗೆ?

ವೀಡಿಯೋ ಸ್ವಯಂ ಪ್ಲೇ ಸೆಟ್ಟಿಂಗ್ ಬದಲಿಸುವ ಮೂಲಕ ಟೈಮ್‌ಲೈನ್‌, ಕ್ಷಣಗಳು ಮತ್ತು ಎಕ್ಸ್‌ಪ್ಲೋರ್‌ ಟ್ಯಾಬ್‌ನಲ್ಲಿ ವೀಡಿಯೋಗಳು ಸ್ವಯಂ ಪ್ಲೇ ಆಗುವುದನ್ನು ನಿಲ್ಲಿಸಬಹುದು. ವೀಡಿಯೋ ಸ್ವಯಂ ಪ್ಲೇಗಾಗಿ ನಿಮ್ಮ ಸೆಟ್ಟಿಂಗ್‌ಗಳನ್ನು twitter.com ಮತ್ತು Twitter ಆಪ್‌ನಲ್ಲಿ ಸ್ವತಂತ್ರವಾಗಿ ಹೊಂದಿಸಬಹುದು (ಉದಾಹರಣೆಗೆ, ವೆಬ್‌ನಲ್ಲಿ ಹೊರತುಪಡಿಸಿ iOS ಸಾಧನದಲ್ಲಿ ನೀವು ವೀಡಿಯೋಗಳನ್ನು ಸ್ವಯಂ ಪ್ಲೇ ನಿಗದಿಸಬಹುದು).

ನಿಮ್ಮ iOS ಗಾಗಿನ Twitter ಆಪ್ ನಲ್ಲಿ ಸ್ವಯಂ ಪ್ಲೇ ಹೊಂದಿಸಲು:

  1. ಸೆಟ್ಟಿಂಗ್​ಗಳು ಮತ್ತು ಗೌಪ್ಯತೆ ಗೆ ನ್ಯಾವಿಗೇಟ್ ಮಾಡಿ.
  2. ಸಾಮಾನ್ಯ ವಿಭಾಗದಲ್ಲಿ ಡೇಟಾ ಬಳಕೆ ತಟ್ಟಿ.
  3. ವೀಡಿಯೋ ಸ್ವಯಂ ಪ್ಲೇ ಅನ್ನು ತಟ್ಟಿ. 
  4. ಈ ಮುಂದಿನ ಆಯ್ಕೆಗಳಿಂದ ನೀವು ಆಯ್ಕೆ ಮಾಡಬಹುದಾಗಿದೆ: 

    ಸೆಲ್ಯುಲಾರ್‌ನಲ್ಲಿ ಅಥವಾ ವೈಫೈನಲ್ಲಿ, ವೈಫೈನಲ್ಲಿ ಮಾತ್ರ ಮತ್ತು ಎಂದೂ ಇಲ್ಲ.

ನಿಮ್ಮ Android ಗಾಗಿನ Twitter ಆಪ್ ನಲ್ಲಿ ಸ್ವಯಂ ಪ್ಲೇ ಹೊಂದಿಸಲು:

  1. ಸೆಟ್ಟಿಂಗ್​ಗಳು ಮತ್ತು ಗೌಪ್ಯತೆ ಗೆ ನ್ಯಾವಿಗೇಟ್ ಮಾಡಿ. 
  2. ಸಾಮಾನ್ಯ ವಿಭಾಗದಲ್ಲಿ ಡೇಟಾ ಬಳಕೆ ತಟ್ಟಿ.
  3. ವೀಡಿಯೋ ಸ್ವಯಂ ಪ್ಲೇ ಅನ್ನು ತಟ್ಟಿ. 
  4. ಈ ಮುಂದಿನ ಆಯ್ಕೆಗಳಿಂದ ನೀವು ಆಯ್ಕೆ ಮಾಡಬಹುದಾಗಿದೆ: ಮೊಬೈಲ್ ಡೇಟಾ ಮತ್ತು ವೈಫೈ, ವೈಫೈ ಮಾತ್ರ ಮತ್ತು ಎಂದೂ ಬೇಡ.

twitter.com ನಲ್ಲಿ ಸ್ವಯಂ ಪ್ಲೇ ಹೊಂದಿಸಲು:

  1. ಮುಖ್ಯ ಮೆನುವಿನಿಂದ, ಇನ್ನಷ್ಟು ಕ್ಲಿಕ್ ಮಾಡಿ, ನಂತರ ಸೆಟ್ಟಿಂಗ್​ಗಳು ಮತ್ತು ಗೌಪ್ಯತೆ ಆಯ್ಕೆಮಾಡಿ.
  2. ಸಾಮಾನ್ಯ ಅಡಿಯಲ್ಲಿ,, ಡೇಟಾ ಬಳಕೆ ಕ್ಲಿಕ್ ಮಾಡಿ.
  3. ಸ್ವಯಂ ಪ್ಲೇ ಮೇಲೆ ಕ್ಲಿಕ್ ಮಾಡಿ, ನಂತರ ಸೆಲ್ಯುಲಾರ್ ಅಥವಾ ವೈಫೈ ಅಥವಾ ಎಂದೂ ಇಲ್ಲ ಆಯ್ಕೆ ಮಾಡಿ.

 

ಮುಚ್ಚಿದ ಶೀರ್ಷಿಕೆಗಳು ಮತ್ತು ಉಪಶೀರ್ಷಿಕೆಗಳು

ವೀಡಿಯೋದಲ್ಲಿ ಮುಚ್ಚಿದ ಶೀರ್ಷಿಕೆಗಳನ್ನು ನೋಡುವುದು ಹೇಗೆ:
ನಿಮ್ಮ ಸಾಧನದ ಅಕ್ಸೆಸಬಿಲಿಟಿ ಸೆಟ್ಟಿಂಗ್​ಗಳಲ್ಲಿ ಶೀರ್ಷಿಕೆಗಳ ಆಯ್ಕೆಯನ್ನು ಆನ್ ಮಾಡಿ. iOS ನಲ್ಲಿ, ಇದನ್ನು ಮುಚ್ಚಿದ ಶೀರ್ಷಿಕೆಗಳು ಎಂದು ಲೇಬಲ್ ಮಾಡಲಾಗುತ್ತದೆ. Android ನಲ್ಲಿ, ಇದನ್ನು ಶೀರ್ಷಿಕೆಗಳು ಎಂದು ಲೇಬಲ್ ಮಾಡಲಾಗುತ್ತದೆ. 

ಉಪಶೀರ್ಷಿಕೆಗಳನ್ನು ವೀಕ್ಷಿಸುವುದು ಹೇಗೆ:
ನಿಮ್ಮ ಸಾಧನದ ಧ್ವನಿಯನ್ನು ಆಫ್​ಮಾಡಿ. ವೆಬ್​ನಲ್ಲಿ ಉಪಶೀರ್ಷಿಕೆಗಳನ್ನು ವೀಕ್ಷಿಸಲು, ವೀಡಿಯೋದಲ್ಲಿ “CC” ಸ್ಲೈಡರ್ ಅನ್ನು ತಟ್ಟಿ.

ಗಮನಿಸಿ: ಎಲ್ಲ ವೀಡಿಯೋಗಳಿಗೂ ಶೀರ್ಷಿಕೆಗಳು ಅಥವಾ ಉಪಶೀರ್ಷಿಕೆಗಳು ಲಭ್ಯವಿರುವುದಿಲ್ಲ. iOS ಮತ್ತು Android ನಲ್ಲಿ, ನಿಮ್ಮ ಕಾಲರೇಖೆಯಲ್ಲಿ ವೀಡಿಯೋಗಳನ್ನು ವೀಕ್ಷಿಸಿದಾಗ ಶೀರ್ಷಿಕೆಗಳನ್ನು ಸ್ವಯಂಚಾಲಿತವಾಗಿ ತೋರಿಸಲಾಗುತ್ತದೆ. ಸಂಪೂರ್ಣ ಸ್ಕ್ರೀನ್‌ನನಲ್ಲಿ ಶೀರ್ಷಿಕೆಗಳನ್ನು ನೋಡಲು, ಸಿಸ್ಟಮ್ ಹಂತದಲ್ಲಿ ಶೀರ್ಷಿಕೆಗಳನ್ನು ಸಕ್ರಿಯಗೊಳಿಸಿ.

Twitter ನಲ್ಲಿ ಲೈವ್ ವೀಡಿಯೋ ವೀಕ್ಷಿಸುವುದು

ಕ್ಷಣಗಳು, ಎಕ್ಸ್​ಪ್ಲೋರ್ ಟ್ಯಾಬ್ಟ್ರೆಂಡ್​ಗಳಿಂದ ನೀವು ಲೈವ್ ವೀಡಿಯೋಗಳನ್ನು ವೀಕ್ಷಿಸಬಹುದು ಅಥವಾ ಲೈವ್ ಆಗಿರುವ ಖಾತೆಯ ಟ್ವೀಟ್​ಗಳನ್ನು ನೀವು ವೀಕ್ಷಿಸಬಹುದು.

ಅಮೇಜಾನ್​ಫೈರ್ ಟಿವಿ ಮತ್ತು ಆಪಲ್​ಟಿವಿಯಲ್ಲಿ Twitter ನಿಂದ ಲೈವ್ ಪ್ರೋಗ್ರಾಮ್​ಗಳನ್ನೂ ನೀವು ವೀಕ್ಷಿಸಬಹುದು.  Xbox ಮತ್ತು Android TV ಬಳಕೆದಾರರು ತಮ್ಮ ವೆಬ್​ಬ್ರೌಸರ್​ತೆರೆದು ಮತ್ತು twitter.com ಗೆ ಹೋಗಿ Twitter ಅನ್ನು ಬಳಸಬಹುದು.

ಲೈವ್ ವೀಡಿಯೋ ಅಥವಾ ರಿಪ್ಲೇ ಅನ್ನು ವೀಕ್ಷಿಸುವಾಗ, ಟ್ವೀಟ್, ನೇರ ಸಂದೇಶದ ಮೂಲಕ ಅಥವಾ ಲಿಂಕ್ ನಕಲು ಮಾಡುವ ಮೂಲಕ ಪ್ರಸಾರವನ್ನು ನೀವು ಹಂಚಿಕೊಳ್ಳಬಹುದು. ಇಡೀ ಪ್ರಸಾರವನ್ನು ಹಂಚಿಕೊಳ್ಳಲು ಅಥವಾ ನಿಮ್ಮ ಆಯ್ಕೆಯ ನಿಗದಿತ ಅಂಶದಿಂದ ಆರಂಭಿಸಿದ ಪ್ರಸಾರವನ್ನು ಹಂಚಿಕೊಳ್ಳುವ ಆಯ್ಕೆಯನ್ನು ನೀವು ಹೊಂದಿದ್ದೀರಿ.

ಲೈವ್ ಪ್ರಸಾರ ಅಥವಾ ರಿಪ್ಲೇಯನ್ನು ಹಂಚಿಕೊಳ್ಳುವುದು ಹೇಗೆ:

  1. ಲೈವ್ ವೀಡಿಯೋ ಅಥವಾ ರಿಪ್ಲೇ ಇಂದ ಫುಲ್ ಸ್ಕ್ರೀನ್ ಮೋಡ್‌ನಿಂದ ಹಂಚಿಕೆ ಐಕಾನ್  ಅನ್ನು ಕ್ಲಿಕ್ ಮಾಡಿ ಅಥವಾ ತಟ್ಟಿ
    1. ಸಂಪುರ್ಣ ಲೈವ್ ವೀಡಿಯೋ ಅಥವಾ ಆರಂಭದಿಂದ ರೀಪ್ಲೇಯನ್ನು ಟ್ವೀಟ್ ಮಾಡಲು‌, ನೇರ ಸಂದೇಶ ಕಳುಹಿಸಲು ಅಥವಾ ಲಿಂಕ್‌ ನಕಲು ಮಾಡಲು ಲೈವ್ ಹಂಚಿ (ಲೈವ್‌ ಆಗಿದ್ದಾಗ) ಅಥವಾ ಆರಂಭದಿಂದ ಹಂಚಿ ಅನ್ನು (ರೀಪ್ಲೇ ಮೋಡ್‌ನಲ್ಲಿದ್ದಾಗ) ಕ್ಲಿಕ್ ಮಾಡಿ ಅಥವಾ ತಟ್ಟಿ.
    2. ಸೆಲೆಕ್ಷನ್ ಬಾರ್‌ ಬಳಸಿ ಆಯ್ದ ಪಾಯಿಂಟ್‌ನಿಂದ ಲೈವ್ ವೀಡಿಯೋ ಅಥವಾ ರೀಪ್ಲೇಯನ್ನು ಟ್ವೀಟ್ ಮಾಡಲು, ನೇರ ಸಂದೇಶ ಕಳುಹಿಸಲು ಅಥವಾ ಲಿಂಕ್ ನಕಲು ಮಾಡಲು ...ಇಂದ ಹಂಚಿ ಅನ್ನು ಕ್ಲಿಕ್ ಮಾಡಿ ಅಥವಾ ತಟ್ಟಿ.

ನೇರ ವೀಡಿಯೋಗಳನ್ನು ವೀಕ್ಷಿಸುವಾಗ ನೀವು ಸಮಸ್ಯೆಗಳನ್ನು ಎದುರಿಸಬಹುದು. ಸಾಮಾನ್ಯವಾಗಿ, ಉತ್ತಮ ನೆಟ್​ವರ್ಕ್​ಸಂಪರ್ಕದಿಂದ ವೀಕ್ಷಿಸುವುದನ್ನು ಮತ್ತು/ಅಥವಾ ವಿಭಿನ್ನ ನೆಟ್​ವರ್ಕ್​ಅಥವಾ ಬ್ರೌಸರ್​ಪ್ರಯತ್ನಿಸುವುದನ್ನು ಶಿಫಾರಸು ಮಾಡಲಾಗಿದೆ. ಹೆಚ್ಚುವರಿಯಾಗಿ, ಅಪ್ಲಿಕೇಶನ್ ಅಥವಾ ಬ್ರೌಸರ್​ಮುಚ್ಚುವುದು ಮತ್ತು ಪುನಃ ತೆರೆಯುವುದು ನೆರವಾಗಬಹುದು. ಉತ್ತಮ ಫಲಿತಾಂಶಗಳಿಗಾಗಿ, ಅಪ್​ಟು ಡೇಟ್​ಆಪ್​ಅಥವಾ ಬ್ರೌಸರ್​ಆವೃತ್ತಿಯನ್ನು ಬಳಸಿ. ಲೈವ್ ವೀಡಿಯೋದಲ್ಲಿ ಸಮಸ್ಯೆ ಮುಂದುವರಿದರೆ, ದಯವಿಟ್ಟು ನಮಗೆ ತಿಳಿಸಿ.

ಮುಂದಕ್ಕೆ ಅಥವಾ ಹಿಂದಕ್ಕೆ ಸ್ಕಿಪ್ ಮಾಡಿ

ವೀಡಿಯೋ ವೀಕ್ಷಿಸುವಾಗ, ಹಿಂದೆ ಮತ್ತು ಮುಂದೆ ತ್ವರಿತವಾಗಿ ಸಾಗಲು ಸ್ಕ್ರೀನ್ ಅನ್ನು ನೀವು ಎರಡು ಬಾರಿ ತಟ್ಟಬಹುದು.

ವೀಡಿಯೋದಲ್ಲಿ ಸ್ಕಿಪ್ ಮಾಡುವುದು ಹೇಗೆ:

  1. ಮುಂದೆ 5 ಸೆಕೆಂಡುಗಳಷ್ಟು ಹೋಗಲು, ವೀಡಿಯೋ ಸ್ಕ್ರೀನ್​ನ ಹೊರ ಬಲ ಭಾಗದಲ್ಲಿ ಎರಡು ಬಾರಿ ತಟ್ಟಿ. 
  2. ಹಿಂದೆ 5 ಸೆಕೆಂಡುಗಳಷ್ಟು ಹೋಗಲು, ವೀಡಿಯೋ ಸ್ಕ್ರೀನ್​ನ ಹೊರ ಎಡ ಭಾಗದಲ್ಲಿ ಎರಡು ಬಾರಿ ತಟ್ಟಿ.

ಸ್ಕಿಪ್​ಮಾಡಲು ನೀವು ಎರಡು ಬಾರಿ ತಟ್ಟಿದಾಗ, ಒಂದು ಬಾರಿ ತಟ್ಟುವ ಮೂಲಕ ನೀವು ಆ ದಿಕ್ಕಿನಲ್ಲಿ ಮುಂದುವರಿಯಬಹುದು.

ಫುಲ್​ಸ್ಕ್ರೀನ್​ನಲ್ಲಿ ವೀಡಿಯೋಗಳನ್ನು ವೀಕ್ಷಿಸುತ್ತಿದ್ದಾಗ ಮಾತ್ರ ಹಿಂದೆ ಮತ್ತು ಮುಂದೆ ಸ್ಕಿಪ್​ಮಾಡುವುದು ಸದ್ಯ ಲಭ್ಯವಿದೆ.

ಗಮನಿಸಿ: ಲೈವ್ ವೀಡಿಯೋ ಅನುಭವವನ್ನು ಒದಗಿಸುವುದು ಮತ್ತು ಜಾಹೀರಾತುಗಳನ್ನು ವಿತರಣೆ ಮಾಡುವಂತಹ ಎರಡು ಸಂಗತಿಗಳಿಗಾಗಿ ಪ್ರೀಮಿಯಂ ಲೈವ್ ವಿಷಯ ಸ್ಟ್ರೀಮಿಂಗ್ ಮತ್ತು ಎಂಬೆಡೆಡ್​ಲೈವ್ ವೀಡಿಯೋ ವಿಜೆಟ್​ಗಳು twitter.com ನ twimg.com ಎಂಬ ಇನ್ನೊಂದು ಕುಕೀಗಳ ಮೇಲೆ ಅವಲಂಬಿತವಾಗಿರುತ್ತವೆ. ನಿಮ್ಮ ಬ್ರೌಸರ್​ನಲ್ಲಿ ತೃತಿಯ ಪಕ್ಷದ ಕುಕೀಗಳನ್ನು ನಿಷ್ಕ್ರಿಯಗೊಳಿಸಿದರೆ, ಲೈವ್ ವೀಡಿಯೋ ಅನುಭವ ಕೆಲಸ ಮಾಡುವುದಿಲ್ಲ ಹಾಗೂ ಅನುಭವವನ್ನು ಬೆಂಬಲಿಸಲು ನಾವು ಜಾಹೀರಾತುಗಳನ್ನು ಒದಗಿಸಲಾಗುವುದಿಲ್ಲ. ಕೇಳಲ್ಪಟ್ಟಾಗ "ಅನುಮತಿಸಿ" ಬಟನ್​ಕ್ಲಿಕ್ ಮಾಡುವ ಮೂಲಕ ಸಫಾರಿ ಬಳಕೆದಾರರು ಪ್ರೀಮಿಯಂ ಲೈವ್ ಕಂಟೆಂಟ್ ಸ್ಟ್ರೀಮಿಂಗ್ ಅಥವಾ ಎಂಬೆಡೆಡ್​ಲೈವ್ ವೀಡಿಯೋ ವಿಜೆಟ್​ಅನ್ನು, ಬ್ರೌಸರ್ ಸೆಟ್ಟಿಂಗ್​ಗಳನ್ನು ಬಳಸದೇ ಅನುಭವಿಸಬಹುದು. ಲೈವ್ ವೀಡಿಯೋ ಅನುಭವವನ್ನು ಮತ್ತು ಜಾಹೀರಾತುಗಳನ್ನು ಒದಗಿಸಲು ನಮಗೆ ಸಹಾಯ ಮಾಡುವ twimg.com ಗೆ ಕುಕೀ ನಿಗದಿಸಲು ನಮಗೆ ಇದು ನೆರವಾಗುತ್ತದೆ. ನೀವು ಇನ್ನೊಂದು ಬ್ರೌಸರ್​ಅನ್ನು ಬಳಸುತ್ತಿದ್ದರೆ, ತೃತೀಯ ಪಕ್ಷದ ಕುಕೀಗಳನ್ನು ಅನುಮತಿಸಲು ಮಾಹಿತಿಗಾಗಿ ನಿಮ್ಮ ಬ್ರೌಸರ್​ಸಹಾಯ ವಿಭಾಗವನ್ನು ದಯವಿಟ್ಟು ಸಂಪರ್ಕಿಸಿ.

ಇದಕ್ಕಾಗಿ ಸೂಚನೆಗಳನ್ನು ವೀಕ್ಷಿಸಿ:

ಲೈವ್ ವೀಡಿಯೋಗಳಿಗೆ ಪುಶ್ ಸೂಚನೆಗಳು

ನೀವು ತಪ್ಪಿಸಿಕೊಳ್ಳಲು ಬಯಸದವರ ಲೈವ ವೀಡಿಯೋ ಖಾತೆ ಇದ್ದರೆ, ಅವರು ಲೈವ್ ಹೋದಾಗ ಪುಶ್ ಸೂಚನೆಗಳನ್ನು ಪಡೆಯಲು ಸಮ್ಮತಿಸಬಹುದು. ಖಾತೆಯ ಪ್ರೊಫೈಲ್ ಪುಟದಿಂದಲೇ ಅಧಿಸೂಚನೆಗಳನ್ನು ಹೊಂದಿಸುವುದು ಸುಲಭವಾಗಿದೆ.

  1. ಖಾತೆ ಪ್ರೊಫೈಲ್​ಇಂದ, ಸೂಚನೆ ಐಕಾನ್ ತಟ್ಟಿ 
  2. ಪಾಪ್ ಅಪ್​ಸಂದೇಶದಿಂದ, ಲೈವ್ ವೀಡಿಯೋ ಹೊಂದಿರುವ ಟ್ವೀಟ್​ಗಳನ್ನು ಮಾತ್ರ ಆಯ್ಕೆ ಮಾಡಿ.
  3. ಲೈವ್ ವೀಡಿಯೋ ಪುಶ್ ಸೂಚನೆಗಳನ್ನು ರದ್ದುಗೊಳಿಸಲು, ಖಾತೆ ಪ್ರೊಫೈಲ್​ನಿಂದ ಹೈಲೈಟ್ ಮಾಡಿದ ಸೂಚನೆ ಐಕಾನ್  ತಟ್ಟಿ ಮತ್ತು ಇಲ್ಲ ಎಂಬುದನ್ನು ಆಯ್ಕೆ ಮಾಡಿ.

ಲೈವ್ ವೀಡಿಯೋಗಳಿಗೆ ಪುಶ್ ಸೂಚನೆಗಳು

ನೀವು ತಪ್ಪಿಸಿಕೊಳ್ಳಲು ಬಯಸದವರ ಲೈವ ವೀಡಿಯೋ ಖಾತೆ ಇದ್ದರೆ, ಅವರು ಲೈವ್ ಹೋದಾಗ ಪುಶ್ ಸೂಚನೆಗಳನ್ನು ಪಡೆಯಲು ಸಮ್ಮತಿಸಬಹುದು. ಖಾತೆಯ ಪ್ರೊಫೈಲ್ ಪುಟದಿಂದಲೇ ಅಧಿಸೂಚನೆಗಳನ್ನು ಹೊಂದಿಸುವುದು ಸುಲಭವಾಗಿದೆ.

  1. ಖಾತೆ ಪ್ರೊಫೈಲ್​ಇಂದ, ಸೂಚನೆ ಐಕಾನ್ ತಟ್ಟಿ 
  2. ಖಾತೆ ಸೂಚನೆಗಳು ಪಕ್ಕದಲ್ಲಿರುವ ಪೆಟ್ಟಿಗೆಯಲ್ಲಿ ಗುರುತು ಮಾಡಿ. 
  3. ಪಾಪ್ ಅಪ್​ಸಂದೇಶದಿಂದ, ಕೇವಲ ಲೈವ್ ವೀಡಿಯೋ ಆಯ್ಕೆ ಮಾಡಿ.
  4. ಲೈವ್ ವೀಡಿಯೋ ಪುಶ್ ಸೂಚನೆಗಳನ್ನು ರದ್ದುಗೊಳಿಸಲು, ಖಾತೆ ಪ್ರೊಫೈಲ್​ನಿಂದ ಹೈಲೈಟ್ ಮಾಡಿದ ಸೂಚನೆ ಐಕಾನ್  ತಟ್ಟಿ ಮತ್ತು ಇಲ್ಲ ಎಂಬುದನ್ನು ಆಯ್ಕೆ ಮಾಡಿ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ನನ್ನ ಟ್ವೀಟ್​ಗಳನ್ನು ಸಂರಕ್ಷಿಸಲಾಗಿದೆ. ನನ್ನ ವೀಡಿಯೋಗಳೂ ರಕ್ಷಿತವಾಗಿವೆಯೇ?‏

ನಿಮ್ಮ ಟ್ವೀಟ್​ಗಳನ್ನು ಸಂರಕ್ಷಿಸಿದರೆ, ನಿಮ್ಮ ಟ್ವೀಟ್​ಗಳಲ್ಲಿನ ವೀಡಿಯೋಗಳನ್ನು ನಿಮ್ಮ ಹಿಂಬಾಲಕರು ಮಾತ್ರ ವೀಕ್ಷಿಸಬಹುದಾಗಿದೆ. ನೀವು ಸಂರಕ್ಷಿತ ಟ್ವೀಟ್​ಗಳಲ್ಲಿ ಹಂಚಿಕೊಂಡ ವೀಡಿಯೋಗಳನ್ನು ನಿಮ್ಮ ಹಿಂಬಾಲಕರು ಡೌನ್​ಲೋಡ್​ಮಾಡಬಹುದು ಅಥವಾ ಲಿಂಕ್​ಮರು ಹಂಚಿಕೊಳ್ಳಬಹುದು ಎಂಬುದನ್ನು ದಯವಿಟ್ಟು ಗಮನಿಸಿ. Twitter ನಲ್ಲಿ ಹಂಚಿಕೊಂಡ ವೀಡಿಯೋಗಳ ಲಿಂಕ್​ಗಳನ್ನು ಸಂರಕ್ಷಿಸಿರುವುದಿಲ್ಲ. ಲಿಂಕ್ ಹೊಂದಿರುವ ಯಾರಾದರೂ ವಿಷಯವನ್ನು ವೀಕ್ಷಿಸಬಹುದು. Twitter ನಲ್ಲಿ ನಿಮ್ಮ ವೀಡಿಯೋಗಳನ್ನು ಯಾರೂ ವೀಕ್ಷಿಸುವುದನ್ನು ನೀವು ಬಯಸದಿದ್ದರೆ, ಅಂತಹ ವೀಡಿಯೋಗಳನ್ನು ಹೊಂದಿರುವ ಟ್ವೀಟ್​ಗಳನ್ನು ಅಳಿಸಿ ಎಂದು ನಾವು ನಿಮಗೆ ಸಲಹೆ ನೀಡುತ್ತೇವೆ.

ಟ್ವೀಟ್​ನಲ್ಲಿ ಅಕ್ಷರ ಮಿತಿಗೆ ವೀಡಿಯೋಗಳೂ ಲೆಕ್ಕಕ್ಕೆ ಒಳಪಡುತ್ತವೆಯೇ?

ಇಲ್ಲ, ಟ್ವೀಟ್​ನಲ್ಲಿ ಅಕ್ಷರ ಮಿತಿಗೆ ವೀಡಿಯೋಗಳೂ ಲೆಕ್ಕಕ್ಕೆ ಒಳಪಡುವುದಿಲ್ಲ.

Twitter ನಲ್ಲಿ ವೀಡಿಯೋಗಳು ಸ್ವಯಂಚಾಲಿತವಾಗಿ ಪುನರಾವರ್ತಿತವಾಗಿ ಪ್ಲೇ ಆಗುತ್ತವೆಯೇ?

Twitter ನಲ್ಲಿ ಪೋಸ್ಟ್ ಮಾಡಿದ 60 ಸೆಕೆಂಡುಗಳು ಅಥವಾ ಅದಕ್ಕಿಂತ ಕಡಿಮೆ ಅವಧಿಯ ಎಲ್ಲ ವೀಡಿಯೋಗಳು ಸ್ವಯಂಚಾಲಿತವಾಗಿ ಪುನರಾವರ್ತಿತವಾಗಿ ಪ್ಲೇ ಆಗುತ್ತವೆ.

Twitter ನಲ್ಲಿ ವೀಡಿಯೋವನ್ನು ನೀವು ಡಾಕ್​ಮಾಡಬಹುದೇ?

iOS ಗಾಗಿ Twitter ಮತ್ತು Android ಗಾಗಿ Twitter ಆಪ್​ನಿಂದ ನೀವು ಮೊದಲೇ ರೆಕಾರ್ಡ್​ಮಾಡಿದ ವೀಡಿಯೋವನ್ನು ಡಾಕ್ ಮಾಡಬಹುದು ಅಥವಾ ಪ್ರಸಾರ ಮಾಡಬಹುದು. ವೀಡಿಯೋ ಡಾಕ್​ಮಾಡುವುದರಿಂದ, ನಿಮ್ಮ ಟೈಮ್​ಲೈನ್ ಸ್ಕ್ರಾಲ್ ಮಾಡುವುದು ಅಥವಾ ನೇರ ಸಂದೇಶ ಕಳುಹಿಸುವಂತಹ ಬಳಕೆಯನ್ನು Twitter ನಲ್ಲಿ ಮಾಡುತ್ತಲೇ ವೀಕ್ಷಣೆ ಮಾಡುವುದು ಸುಲಭ. 

ವೀಡಿಯೋವನ್ನು ಡಾಕ್​ಮಾಡುವುದು ಮತ್ತು ಡಾಕ್​ರದ್ದತಿ ಮಾಡುವುದು ಹೇಗೆ (iOS ಮತ್ತು Android):

  • ವೀಡಿಯೋವನ್ನು ಡಾಕ್ ಮಾಡಲು, ಫುಲ್​ಸ್ಕ್ರೀನ್​ಮೋಡ್​ನಲ್ಲಿ ವೀಡಿಯೋದ ಬಲ ಮೇಲ್ತುದಿಯಲ್ಲಿ ಡಾಕಿಂಗ್ ಐಕಾನ್​ ಮೇಲೆ ಸರಳವಾಗಿ ತಟ್ಟಿ. 
  • ಡಾಕ್​ವೀಡಿಯೋ ಇಂದ ಫುಲ್​ಸ್ಕ್ರೀನ್ ವೀಕ್ಷಣೆಗೆ ವಾಪಸಾಗಲು ವೀಡಿಯೋ ಮೇಲೆ ತಟ್ಟಿ.
  • ಡಾಕ್ ಮಾಡಿದ ವೀಡಿಯೋವನ್ನು ತೊರೆಯಲು, ಡಾಕ್​ಮಾಡಿದ ವೀಡಿಯೋ ಮರೆಯಾಗುವವರೆಗೂ ನಿಮ್ಮ ಸ್ಕ್ರೀನ್​ನ ಅಂಚಿನವರೆಗೆ ನಿಮ್ಮ ಬೆರಳನ್ನು ಬಳಸಿ ಸರಿಸಿ. ಪರ್ಯಾಯವಾಗಿ, ನೀವು ವಿಭಿನ್ನ ವೀಡಿಯೋ ಮೇಲೆ ತಟ್ಟಿದರೆ, ಪ್ರಸ್ತುತ ಡಾಕ್ ಆಗಿರುವ ವೀಡಿಯೋ ಸ್ವಯಂಚಾಲಿತವಾಗಿ ಮರೆಯಾಗುತ್ತದೆ. 

 

ಯಾವ ವೀಡಿಯೋ ಫಾರ್ಮ್ಯಾಟ್​ಗಳು ಬೆಂಬಲಿಸುತ್ತವೆ?

ನಾವು ಪ್ರಸ್ತುತ ಮೊಬೈಲ್​ಆಪ್​ಗಳಲ್ಲಿ MP4 ಮತ್ತು MOV ವೀಡಿಯೋ ಫಾರ್ಮ್ಯಾಟ್​ಗಳನ್ನು ಬೆಂಬಲಿಸುತ್ತೇವೆ.

ವೆಬ್​ನಲ್ಲಿ, MP4 ಆಡಿಯೋ ಜೊತೆಗೆ H264 ಫಾರ್ಮ್ಯಾಟ್​ನೊಂದಿಗೆ MP4 ವೀಡಿಯೋ ಫಾರ್ಮ್ಯಾಟ್​ಅನ್ನು ನಾವು ಬೆಂಬಲಿಸುತ್ತೇವೆ. ನೀವು 512 MB ವರೆಗಿನ ವೀಡಿಯೋಗಳನ್ನು ಅಪ್​ಲೋಡ್ ಮಾಡಬಹುದು, ಆದಾಗ್ಯೂ 2 ನಿಮಿಷಗಳು 20 ಸೆಕೆಂಡುಗಳು ಅಥವಾ ಕಡಿಮೆ ಉದ್ದದ ವೀಡಿಯೋಗಳನ್ನು ಸಂಪಾದನೆ ಮಾಡಲು ನಿಮಗೆ ಸುಚಿಸಲಾಗುತ್ತದೆ.

ವೆಬ್​ನಲ್ಲಿ ಅಪ್​ಲೋಡ್​ಮಾಡಬಹುದಾದ ವೀಡಿಯೋ ರೆಸೊಲ್ಯುಶನ್​ಗಳು ಮತ್ತು ಆಸ್ಪೆಕ್ಟ್ ಅನುಪಾತದ ಮಿತಿ ಎಷ್ಟು?

  • ಕನಿಷ್ಠ ರೆಸೊಲ್ಯುಶನ್ 32 x 32
  • ಗರಿಷ್ಠ ರೆಸಲ್ಯೂಶನ್: 1920 x 1200 (ಮತ್ತು 1200 x 1900)
  • ಆಸ್ಪೆಕ್ಟ್ ರೇಶಿಯೋಗಳು: 1:2.39 - 2.39:1 ರೇಂಜ್ಒ(ಳಗೊಂಡ)
  • ಗರಿಷ್ಠ ಫ್ರೇಮ್​ರೇಟ್ 40 fps
  • ಗರಿಷ್ಠ ಬಿಟ್​ರೇಟ್: 25 Mbps

ವೀಡಿಯೋದಲ್ಲಿ ನಾನು ಜನರನ್ನು ಟ್ಯಾಗ್ ಮಾಡಬಹುದೇ?

ವೀಡಿಯೋದಲ್ಲಿ ನೀವು ಜನರನ್ನು ಟ್ಯಾಗ್ ಮಾಡಲಾಗದು, ಆದರೆ ಫೋಟೋಗಳಲ್ಲಿ ಟ್ಯಾಗ್ ಮಾಡಬಹುದಾಗಿದೆ. ಫೋಟೋ ಟ್ಯಾಗ್ ಮಾಡುವಿಕೆ ಬಗ್ಗೆ ಇನ್ನಷ್ಟು ತಿಳಿಯಿರಿ.

ವೀಡಿಯೋವನ್ನು ನಾನು ಹೇಗೆ ಅಳಿಸಬಹುದು (ಟ್ವೀಟ್ ಮಾಡಿದ ನಂತರ)?

ಫೋಟೋವನ್ನು ಅಳಿಸುವಂತೆಯೇ ಟ್ವೀಟ್​ಅನ್ನೇ ಅಳಿಸುವ ಮೂಲಕ ವೀಡಿಯೋವನ್ನು ನೀವು ಅಳಿಸಬಹುದು. 

ನೇರ ಸಂದೇಶಗಳ ಮೂಲಕ ನಾನು ವೀಡಿಯೋಗಳನ್ನು ಕಳುಹಿಸಬಹುದೆ?

ಹೌದು, ನೀವು ವೀಡಿಯೋಗಳನ್ನು ಮತ್ತು GIF ಗಳನ್ನು ನೇರ ಸಂದೇಶಗಳ ಮೂಲಕ ಕಳುಹಿಸಬಹುದು. 

ಬುಕ್‌ಮಾರ್ಕ್ ಮಾಡಿ ಅಥವಾ ಈ ಲೇಖನವನ್ನು ಹಂಚಿಕೊಳ್ಳಿ

ಈ ಲೇಖನವು ಉಪಯುಕ್ತವಾಗಿತ್ತೇ?

ಪ್ರತಿಕ್ರಿಯೆ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು. ನಾವು ಸಹಾಯ ಮಾಡಲು ಸಾಧ್ಯವಾಗಿದ್ದಕ್ಕೆ ಹರ್ಷಿಸುತ್ತೇವೆ!

ಪ್ರತಿಕ್ರಿಯೆ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು. ಈ ಲೇಖನವನ್ನು ನಾವು ಹೇಗೆ ಸುಧಾರಿಸಬಹುದು?

ಪ್ರತಿಕ್ರಿಯೆ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು. ನಿಮ್ಮ ಕಾಮೆಂಟ್‌ಗಳು ಭವಿಷ್ಯದಲ್ಲಿ ನಮ್ಮ ಲೇಖನಗಳನ್ನು ಸುಧಾರಿಸಲು ನಮಗೆ ಸಹಾಯ ಮಾಡುತ್ತವೆ.