Twitter ಸಮೀಕ್ಷೆಗಳ ಕುರಿತು
Twitter ಸಮೀಕ್ಷೆಗಳು Twitter ನಲ್ಲಿ ಇತರರು ಕೇಳಿದ ಪ್ರಶ್ನೆಗಳನ್ನು ಮನನ ಮಾಡಲು ಅವಕಾಶ ನೀಡುತ್ತದೆ. ನೀವು ನಿಮ್ಮದೇ ಸಮೀಕ್ಷೆಯನ್ನು ರಚಿಸಬಹುದು ಮತ್ತು ತಕ್ಷಣವೇ ಫಲಿತಾಂಶವನ್ನು ನೋಡಬಹುದು.
Twitter ಸಮೀಕ್ಷೆಯಲ್ಲಿ ಮತ ಹಾಕಿ
ಸಮೀಕ್ಷೆಯಲ್ಲಿ ಮತ ಹಾಕಲು:
ಟ್ವೀಟ್ನಲ್ಲಿ ನೀವು ಸಮೀಕ್ಷೆ ನೋಡಿದಾಗ, ನಿಮ್ಮ ಆದ್ಯತೆಯ ಆಯ್ಕೆಯನ್ನು ಕ್ಲಿಕ್ ಮಾಡಿ ಅಥವಾ ತಟ್ಟಿ. ನೀವು ಮತ ಹಾಕಿದ ನಂತರ ತಕ್ಷಣವೇ ಫಲಿತಾಂಶ ಕಾಣಿಸಿಕೊಳ್ಳುತ್ತದೆ. ಆಯ್ಕೆಯ ಎದುರು ಚೆಕ್ಮಾರ್ಕ್ನಿಂದ ನಿಮ್ಮ ಮತವನ್ನು ಸೂಚಿಸಲಾಗುತ್ತದೆ.
ಒಂದು ಬಾರಿಗೆ ಒಂದು ಸಮೀಕ್ಷೆಯಲ್ಲಿ ನೀವು ಮತ ಹಾಕಬಹುದು. ಪ್ರಸ್ತುತ ಒಟ್ಟು ಮತದ ಲೆಕ್ಕ ಮತ್ತು ಸಮೀಕ್ಷೆಯಲ್ಲಿ ಉಳಿದ ಸಮಯವನ್ನು ಸಮೀಕ್ಷೆ ಆಯ್ಕೆ ಅಡಿಯಲ್ಲಿ ಪ್ರದರ್ಶಿಸಲಾಗುತ್ತದೆ.
ಅಂತಿಮ ಫಲಿತಾಂಶಗಳನ್ನು ವೀಕ್ಷಿಸಲು:
Twitter ಸಮೀಕ್ಷೆಯನ್ನು ಪೋಸ್ಟ್ ಮಾಡಿದ ನಂತರ ಟ್ವೀಟ್ ಮಾಡಿದ ವ್ಯಕ್ತಿಯು ನಿಗದಿಸಿದ ಅವಧಿಯನ್ನು ಆಧರಿಸಿ 5 ನಿಮಿಷದಿಂದ 7 ದಿನಗಳವರೆಗೆ ಇರುತ್ತದೆ. ಗೆದ್ದ ಆಯ್ಕೆಯನ್ನು ದಪ್ಪ ಅಕ್ಷರಗಳಲ್ಲಿ ತೋರಿಸಲಾಗುತ್ತದೆ. ನೀವು ಸಮೀಕ್ಷೆಯಲ್ಲಿ ಮತ ಹಾಕಿದರೆ, ಅಂತಿಮ ಫಲಿತಾಂಶವನ್ನು ಸೂಚಿಸಿ ನಿಮಗೆ ಪುಶ್ ಸೂಚನೆ ಕಾಣಿಸಿಕೊಳ್ಳಬಹುದು.
ಖಾಸಗಿಯಾಗಿ ಮತ ಹಾಕುವುದು:
ನೀವು ಸಮೀಕ್ಷೆಯಲ್ಲಿ ಮತ ಹಾಕಿದಾಗ ನಿಮ್ಮ ಭಾಗವಹಿಸುವಿಕೆಯು ಇತರರಿಗೆ ಕಾಣಿಸುವುದಿಲ್ಲ: ರಚನೆಕಾರರಾಗಲೀ ಅಥವಾ ಇತರ ಭಾಗಹಿಸಿದವರಾಗಲೀ ಯಾರು ಮತ ಹಾಕಿದ್ದಾರೆ ಅಥವಾ ಹೇಗೆ ಮತ ಹಾಕಿದ್ದಾರೆ ಎಂಬುದನ್ನು ನೋಡಲಾಗದು.
ಗಮನಿಸಿ: Twitter ಸಮೀಕ್ಷೆಯಲ್ಲಿ ಫೋಟೋಗಳನ್ನು ಸೇರಿಸಲಾಗದು.