ಆಂಡ್ರಾಯ್ಡ್‌ನಲ್ಲಿ Twitter Lite ಬಳಸುವುದು ಹೇಗೆ

ಸ್ಮಾರ್ಟ್‌ಫೋನ್‌ನಲ್ಲಿ Twitter ಬಳಕೆಗಾಗಿ Twitter Lite ಆಪ್ ಡೇಟಾ ಮತ್ತು ಸಂಗ್ರಹ ಸ್ನೇಹಿ ವಿಧಾನವಾಗಿದೆ. Twitter Lite ಆಪ್ ಪ್ರಮುಖ ಲಕ್ಷಣಗಳು ಹೀಗಿವೆ:

  • 2G ಮತ್ತು 3G ನೆಟ್‌ವರ್ಕ್‌ಗಳಲ್ಲಿ ತ್ವರಿತವಾಗಿ ಲೋಡ್ ಆಗುತ್ತದೆ. 
  • ಡೇಟಾ ಬಳಕೆಯನ್ನು ಕಡಿಮೆ ಮಾಡುತ್ತದೆ - ನೀವು ನೋಡಲು ಬಯಸುವ ಚಿತ್ರಗಳು ಅಥವಾ ವೀಡಿಯೋಗಳನ್ನು ಮಾತ್ರ ಡೌನ್​ಲೋಡ್ ಮಾಡಲು ಡೇಟಾ ಸೇವರ್ ಮೋಡ್ ಆನ್ ಮಾಡಿ.
  • ಕಡಿಮೆ ಸ್ಥಳ ತೆಗೆದುಕೊಳ್ಳುತ್ತದೆ - 3MB ಗಿಂತ ಕಡಿಮೆ ಇನ್‌ಸ್ಟಾಲ್‌ ಗಾತ್ರದಿಂದಾಗಿ, ನಿಮ್ಮ ಫೋನ್‌ನಲ್ಲಿ Twitter Lite ತುಂಬಾ ಹೆಚ್ಚು ಸ್ಥಳವನ್ನು ತೆಗೆದುಕೊಳ್ಳುವುದಿಲ್ಲ.

Note: Twitter Lite ವಿಶೇಷವಾಗಿ Google Play Store* ನಲ್ಲಿ ಲಭ್ಯವಿದೆ ಮತ್ತು ಪ್ರಸ್ತುತ ಆಂಡ್ರಾಯ್ಡ್‌ 5.0 ಮತ್ತು ಹೆಚ್ಚಿನ ಅವೃತ್ತಿಗಳನ್ನು ಬೆಂಬಲಿಸುವ ಸಾಧನಗಳೊಂದಿಗೆ ಹೊಂದಿಕೆಯಾಗುತ್ತದೆ. ನೀವು Google Play Store ಪ್ರವೇಶಾವಕಾಶ ಹೊಂದಿಲ್ಲದಿದ್ದರೆ, mobile.twitter.com ನಲ್ಲಿTwitter ನ ಮೊಬೈಲ್ ವೆಬ್ ಆವೃತ್ತಿಯನ್ನು ಬಳಸಿ.

ನಿಮ್ಮ ಡೇಟಾ ಬಳಕೆಯನ್ನು ಕಡಿಮೆ ಮಾಡುವುದು ಹೇಗೆ

ನೀವು Twitter ಬಳಸುವಾಗ ಬಳಕೆಯಾಗುವ ಡೇಟಾ ಪ್ರಮಾಣವನ್ನು ಕಡಿಮೆ ಮಾಡಲು Twitter Lite ಅನ್ನು ವಿನ್ಯಾಸ ಮಾಡಲಾಗಿದೆ. Twitter ಬಳಸುವ ಡೇಟಾದ ಪ್ರಮಾಣವನ್ನು ಡೇಟಾ ಸೇವರ್ ಮೋಡ್ ಅನ್ನು ಸಕ್ರಿಯಗೊಳಿಸುವ ಮೂಲಕ ಕಡಿಮೆ ಮಾಡಬಹುದು. ಡೇಟಾ ಉಳಿಸಲು ನೆರವಾಗುವುದಕ್ಕಾಗಿ ನೈಜ ಸಮಯದಲ್ಲಿ ಯಾವ ಮಾಧ್ಯಮವನ್ನು ನೀವು ಡೌನ್‌ಲೋಡ್ ಮಾಡಬೇಕು ಎಂಬುದನ್ನು ನಿಯಂತ್ರಿಸಿ. 

  • ಡ್ಯಾಶ್ ಮೆನು ಪ್ರವೇಶಾವಕಾಶಕ್ಕಾಗಿ ನಿಮ್ಮ ಪ್ರೊಫೈಲ್ ಫೋಟೋ ತಟ್ಟಿ.
  • ಆನ್ ಮಾಡಲು ಡೇಟಾ ಸೇವರ್ ಪಕ್ಕ ಇರುವ ಟಾಗಲ್ ಅನ್ನು ತಟ್ಟಿ.

ಈ ಮೋಡ್‌ನಲ್ಲಿ, ಚಿತ್ರಗಳನ್ನು ಮುನ್ನೋಟದ ರೀತಿ ಪ್ರಸ್ತುತಪಡಿಸಲಾಗುತ್ತದೆ ಮತ್ತು ನೀವು ವಿನಂತಿ ಮಾಡಿದಾಗ ಮಾತ್ರವೇ ದೊಡ್ಡ ಚಿತ್ರಗಳನ್ನು ಲೋಡ್ ಮಾಡಲಾಗುತ್ತದೆ. Twitter Lite ನಲ್ಲಿ ಚಿತ್ರ ಲೋಡ್ ಮಾಡಿ ಎಂಬುದನ್ನು ತಟ್ಟುವ ಮೂಲಕ ನೀವು ಚಿತ್ರಗಳನ್ನು ವೀಕ್ಷಿಸಬಹುದು.

 

ಲಾಗ್ ಇನ್ ಮಾಡಲ ಅಥವಾ ಸೈನ್ ಅಪ್ ಮಾಡಲು

ಆರಂಭಿಸಲು, ಡೌನ್‌ಲೋಡ್ ಮಾಡಿದ ನಂತರ Twitter Lite ಆಪ್ ತೆರೆಯಿರಿ.

ಲಾಗಿನ್‌ ಮಾಡಲು:

  1. ಲಾಗಿನ್‌ ತಟ್ಟಿ.
  2. ನಿಮ್ಮ ಬಳಕೆದಾರರ ಹೆಸರು, ಫೋನ್ ಸಂಖ್ಯೆ ಅಥವಾ ಇಮೇಲ್ ವಿಳಾಸವನ್ನು ನಮೂದಿಸಿ.
  3. ನಿಮ್ಮ ಪಾಸ್‌ವರ್ಡ್ ನಮೂದಿಸಿ.
  4. ಲಾಗಿನ್‌ ತಟ್ಟಿ.

ಹೊಸ ಖಾತೆಗೆ ಸೈನ್ ಅಪ್ ಮಾಡಲು:

  1. ಸೈನ್ ಅಪ್ ತಟ್ಟಿ.
  2. ನಿಮ್ಮ ಸಂಪೂರ್ಣ ಹೆಸರು ಮತ್ತು ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಿ. ನಿಮ್ಮ ಇಮೇಲ್ ಬಳಸಲು ನೀವು ಆದ್ಯತೆ ಹೊಂದಿದ್ದರೆ, ಬದಲಿಗೆ ಇಮೇಲ್ ಬಳಸಿ ಎಂಬುದನ್ನು ತಟ್ಟಿ. 
  3. ಸೈನ್ ಅಪ್ ತಟ್ಟಿ. 
  4. ಪಾಸ್‌ವರ್ಡ್‌ ನಮೂದಿಸಿ ಮತ್ತು ಮುಂದೆ ತಟ್ಟಿ.
  5. ಇಮೇಲ್ ವಿಳಾಸದ ಮೂಲಕ ನೀವು ಸೈನ್ ಅಪ್ ಮಾಡಲು ಆಯ್ಕೆ ಮಾಡಿಕೊಂಡರೆ, ನಿಮ್ಮ ಫೋನ್ ಸಂಖ್ಯೆಯನ್ನು ನಾವು ಕೇಳಬಹುದು. ನೀವು ಅದನ್ನು ನಮೂದಿಸಬಹುದು ಅಥವಾ ಈಗಲ್ಲ ತಟ್ಟಬಹುದು.
  6. ನಿಮ್ಮ ಬಳಕೆದಾರರ ಹೆಸರನ್ನು ನಮೂದಿಸಿ (ನಾವು ಕೆಲವು ಲಭ್ಯ ಆಯ್ಕೆಗಳನ್ನು ಸಲಹೆ ಮಾಡುತ್ತೇವೆ), ನಂತರ ಮುಂದೆ ಒತ್ತಿ.
  7. ಆಸಕ್ತಿ ವಿಭಾಗಗಳು ಮತ್ತು ಆ ವಿಭಾಗಗಳಲ್ಲಿನ ಖಾತೆಗಳನ್ನು ಸಲಹೆ ಮಾಡುವ ಮೂಲಕ ಆರಂಭಿಸಲು ನಾವು ಸಹಾಯ ಮಾಡುತ್ತೇವೆ.
  8. ನೀವು ಆಂಡ್ರಾಯ್ಡ್ ಸಾಧನದಲ್ಲಿದ್ದರೆ, ನೀವು ಪುಶ್ ಸೂಚನೆಗಳನ್ನು ಪಡೆಯಬಹುದು. ಪುಶ್ ಸೂಚನೆಗಳನ್ನು ಪಡೆಯಲು ಸೂಚನೆಗಳನ್ನು ಆನ್ ಮಾಡಿ ತಟ್ಟಿ.
  9. ನಿಮ್ಮ ಕಾಲರೇಖೆಗೆ ತೆರಳಲು ನೀವು ಸಿದ್ಧವಾಗಿದ್ದಾಗ, ಮುಗಿಯಿತು ತಟ್ಟಿ.

ಟ್ವೀಟ್ ಪೋಸ್ಟ್ ಮಾಡಲು

  1. ನಿಮ್ಮ ಹೋಮ್ ಕಾಲರೇಖೆ, ಹುಡುಕಾಟ ಟ್ಯಾಬ್, ಸೂಚನೆಗಳ ಟ್ಯಾಬ್ ಅಥವಾ ಪ್ರೊಫೈಲ್‌ನಿಂದ ಪ್ರವೇಶಿಸಬಹುದಾದ ಟ್ವೀಟ್ ಕಂಪೋಸ್ ಐಕಾನ್  ಮೇಲೆ ತಟ್ಟಿ.
  2. ಏನು ನಡೆಯುತ್ತಿದೆ?  ಎಂದು ಕೇಳುವಲ್ಲಿ ಟೈಪ್ ಮಾಡಲು ಆರಂಭಿಸಿ
  3. ಚಿತ್ರವನ್ನು ಟ್ವೀಟ್ ಮಾಡಲು ನೀವು ಬಯಸಿದರೆ, ಫೋಟೋ ಐಕಾನ್  ಮೇಲೆ ತಟ್ಟಿ ನೀವು ನಿಮ್ಮ ಟ್ವೀಟ್‌ಗೆ ಗರಿಷ್ಠ ನಾಲ್ಕು ಚಿತ್ರಗಳನ್ನು ಸೇರಿಸಬಹುದು.
  4. ಪೋಸ್ಟ್ ಮಾಡಲು ಟ್ವೀಟ್ ತಟ್ಟಿ.

ಗಮನಿಸಿ: ಹಲವು ಟ್ವೀಟ್‌ಗಳನ್ನು ಒಳಗೊಂಡಿರುವ ಥ್ರೆಡ್ ಅನ್ನು ರಚಿಸುವುದು ಹೆಗೆ ಎಂದು ತಿಳಿಯಿರಿ.

ಖಾತೆಗಳನ್ನು ಹುಡುಕಲು ಮತ್ತು ಹಿಂಬಾಲಿಸಲು

ಖಾತೆ ಕಂಡುಕೊಳ್ಳಲು:

  1. ಹುಡುಕಾಟ ಐಕಾನ್ ತಟ್ಟಿ 
  2. ನೀವು ಹುಡುಕುತ್ತಿರುವ ಖಾತೆಯ ಹೆಸರು ಅಥವಾ ಬಳಕೆದಾರರ ಹೆಸರನ್ನು ಟೈಪ್ ಮಾಡಿ. 
  3. ನೀವು ಟೈಪಿಂಗ್ ಆರಂಭಿಸುತ್ತಿದ್ದಂತೆಯೆ ಸಲಹೆ ಮಾಡಿದ ಖಾತೆಗಳು ಮತ್ತು ಟ್ರೆಂಡ್​ಗಳ ಪಟ್ಟಿ ಕಾಣಿಸಿಕೊಳ್ಳುತ್ತವೆ.

ಒಂದು ಖಾತೆಯನ್ನು ಹಿಂಬಾಲಿಸಲು:

  1. ಖಾತೆ ಪ್ರೊಫೈಲ್‌ಗೆ ಹೋಗಿ ಮತ್ತು ಹಿಂಬಾಲಿಸಿ ತಟ್ಟಿ. 
  2. ಒಂದು ಖಾತೆಯಿಂದ ಟ್ವೀಟ್‌ ನೋಡಿ, ನೀವು ಅವರನ್ನು ಹಿಂಬಾಲಿಸಲು ನಿರ್ಧರಿಸಿದರೆ, ಅದನ್ನು ವಿಸ್ತರಿಸಲು ಟ್ವೀಟ್ ಮೇಲೆ ತಟ್ಟಿ ಮತ್ತು ನಂತರ ಹಿಂಬಾಲಿಸು ಐಕಾನ್ ತಟ್ಟಿ 

ಟ್ವೀಟ್ ಬುಕ್‌ಮಾರ್ಕ್ ಮಾಡುವುದು ಹೇಗೆ 

ನಂತರ ನೀವು ನೋಡಲು ಬಯಸುವ ಟ್ವೀಟ್‌ಗಳನ್ನು ಬುಕ್‌ಮಾರ್ಕ್‌ ಮಾಡಲು ಬುಕ್‌ಮಾರ್ಕ್‌ಗಳು ಲಕ್ಷಣವನ್ನು ಬಳಸಿ:

  1. ಹಂಚು ಐಕಾನ್ ತಟ್ಟಿ.
  2. ನಂತರ ವೀಕ್ಷಿಸಲು ಉಳಿಸುವುದಕ್ಕಾಗಿ ಬುಕ್‌ಮಾರ್ಕ್‌ಗಳಿಗೆ ಸೇರಿಸಿ ಆಯ್ಕೆ ಮಾಡಿ.

ನಿಮ್ಮ ಬುಕ್‌ಮಾರ್ಕ್‌ಗಳನ್ನು ಪ್ರವೇಶಿಸಲು:

  1. ಬುಕ್‌ಮಾರ್ಕ್‌ಗಳು ಮೆನು ಆಯ್ಕೆಯ ಪ್ರವೇಶಾವಕಾಶಕ್ಕೆ ಬಲ ಮೇಲ್ತುದಿಯಲ್ಲಿರುವ ನಿಮ್ಮ ಪ್ರೊಫೈಲ್ ಫೋಟೋ ತಟ್ಟಿ.

ಹೋಮ್ ಕಾಲರೇಖೆ

  1. ನಿಮ್ಮ ಹೋಮ್ ಕಾಲರೇಖೆಯನ್ನು ಪಡೆಯಲು ಹೋಮ್ ಐಕಾನ್  ತಟ್ಟಿ.
  2. ನೀವು ಹಿಂಬಾಲಿಸುವ ಖಾತೆಗಳಿಂದ ಇತ್ತೀಚಿನ ಟ್ವೀಟ್‌ಗಳನ್ನು ನಿಮ್ಮ ಹೋಮ್ ಕಾಲರೇಖೆ ಒಳಗೊಂಡಿರುತ್ತದೆ.
  3. ಹೋಮ್ ಟ್ಯಾಬ್‌ ಪಕ್ಕದಲ್ಲಿ ನೀಲಿ ಚುಕ್ಕೆಯನ್ನು ಹೊಂದಿದ್ದರೆ, ನಿಮ್ಮ ಕಾಲರೇಖೆಯಲ್ಲಿ ಕಾಣಿಸಿಕೊಳ್ಳಲು ಹೊಸ ಟ್ವೀಟ್‌ಗಳು ಕಾಯುತ್ತಿರುತ್ತವೆ. ಈ ಹೊಸ ಟ್ವೀಟ್‌ಗಳನ್ನು ಲೋಡ್‌ ಮಾಡಲು ನಿಮ್ಮ ಕಾಲರೇಖೆಯನ್ನು ಕೆಳಕ್ಕೆ ಎಳೆಯಿರಿ.
  4. ಹೋಮ್ ಕಾಲರೇಖೆಯಿಂದ, ಟ್ವೀಟ್ ವಿವರಗಳನ್ನು ನೋಡಲು ವೈಯಕ್ತಿಕ ಟ್ವೀಟ್‌ ಮೇಲೆ ನೀವು ತಟ್ಟಬಹುದು. ಇಲ್ಲಿಂದ ನೀವು ಟ್ವೀಟ್‌ಗೆ ಪ್ರತಿಕ್ರಿಯಿಸಬಹುದು, ಮರುಟ್ವೀಟ್ ಮಾಡಬಹುದು, ಟ್ವೀಟ್ ಉಲ್ಲೇಖಿಸಬಹುದು ಅಥವಾ ಟ್ವೀಟ್ ಇಷ್ಟಪಡಬಹುದು.
  5. ಹೋಮ್ ಕಾಲರೇಖೆಗೆ ನೀವು ವಾಪಸ್ ನ್ಯಾವಿಗೇಟ್ ಮಾಡಲು ಬಯಸಿದಾಗ, ಹಿಂದೆ ಐಕಾನ್ ಅನ್ನು ತಟ್ಟಿ 

ಸೂಚನೆಗಳು

ಇತರರು Twitter ನಲ್ಲಿ ನಿಮ್ಮೊಂದಿಗೆ ಸಂವಾದ ನಡೆಸುತ್ತಿದ್ದಾರೆ ಎಂಬುದನ್ನು ಸೂಚನೆಗಳ ಟ್ಯಾಬ್‌ನಲ್ಲಿ ನೀವು ನೋಡಬಹುದು.

  1. ನಿಮ್ಮ ಸೂಚನೆ ಕಾಲರೇಖೆಯನ್ನು ಪಡೆಯಲು ಸೂಚನೆಗಳು ಐಕಾನ್ ತಟ್ಟಿ 
  2. ನಿಮ್ಮ ಯಾವ ಟ್ವೀಟ್‌ಗಳನ್ನು ಇಷ್ಟಪಡಲಾಗಿದೆ ಎಂಬುದನ್ನು ಹಾಗೂ ಇತ್ತೀಚಿನ ಮರುಟ್ವೀಟ್‌ಗಳು (ನಿಮ್ಮ ಟ್ವೀಟ್‌ಗಳ), ನಿಮಗೆ ನಿರ್ದೇಶಿಸಿದ ಟ್ವೀಟ್‌ಗಳು (ಪ್ರತಿಕ್ರಿಯೆಗಳು ಮತ್ತು ನಮೂದುಗಳು) ಮತ್ತು ನಿಮ್ಮ ಹೊಸ ಹಿಂಬಾಲಕರನ್ನು ನಿಮ್ಮ ಸೂಚನೆಗಳ ಕಾಲರೇಖೆಯು ತೋರಿಸುತ್ತದೆ.

ಪ್ರೊಫೈಲ್ ಮತ್ತು ಸೆಟ್ಟಿಂಗ್‌ಗಳು

ನಿಮ್ಮ ಪ್ರೊಫೈಲ್ ಮತ್ತು ಸೆಟ್ಟಿಂಗ್‌ಗಳನ್ನು ಪ್ರವೇಶಿಸಲು ನಿಮ್ಮ ಪ್ರೊಫೈಲ್ ಫೋಟೋ ತಟ್ಟಿ. ಮೆನುವಿನಲ್ಲಿ, ನೀವು ಹೀಗೆ ಮಾಡಬಹುದು:

  • ನಿಮ್ಮ ಪ್ರೊಫೈಲ್‌ಗೆ ಹೋಗಲು ಪ್ರೊಫೈಲ್ ತಟ್ಟಿ.
  • ನಿಮ್ಮ ಪ್ರೊಫೈಲ್ ಎಡಿಟ್ ಮಾಡಲು, ಪ್ರೊಫೈಲ್ ಮತ್ತು ನಂತರ ಪ್ರೊಫೈಲ್ ಎಡಿಟ್ ತಟ್ಟಿ. ಇಲ್ಲಿಂದ ನೀವು ನಿಮ್ಮ ಪ್ರೊಫೈಲ್ ಫೋಟೋ, ಪೂರ್ಣ ಹೆಸರು, URL‌, ಸ್ಥಳ ಮತ್ತು ಸ್ವವಿವರ ವನ್ನು ಎಡಿಟ್ ಮಾಡಬಹುದು.
  • ನಿಮ್ಮ ಹಿಂಬಾಲಿಸುತ್ತಿರುವವರು ಮತ್ತು ಹಿಂಬಾಲಕರ ಪಟ್ಟಿಗಳನ್ನು ಹಾಗೂ ಪೋಸ್ಟ್ ಮಾಡಿದ ಮಾಧ್ಯಮ ಮತ್ತು ನಿಮ್ಮ ಇಷ್ಟಗಳನ್ನು ಸ್ವೀಕರಿಸಲು ಪ್ರೊಫೈಲ್‌ ತಟ್ಟಿ.
  • ನಿಮ್ಮ ಸೆಟ್ಟಿಂಗ್‌ಗಳನ್ನು ಎಡಿಟ್ ಮಾಡಲು, ನಿಮ್ಮ ಪ್ರೊಫೈಲ್ ಫೋಟೋ ತಟ್ಟಿ, ನಂತರ ಸೆಟ್ಟಿಂಗ್ಸ್ ಮತ್ತು ಗೌಪ್ಯತೆ ತಟ್ಟಿ. ಇಲ್ಲಿಂದ ನೀವು ನಿಮ್ಮ ಈ ಕೆಳಗಿನವುಗಳನ್ನು ಎಡಿಟ್ ಮಾಡಬಹುದು:
  • ಖಾತೆ ಸೆಟ್ಟಿಂಗ್‌ಗಳು, ಇದು ಒಳಗೊಂಡಿರುವುದೇನೆಂದರೆ:
    • ಬಳಕೆದಾರರ ಹೆಸರು
    • ಫೋನ್
    • ಇಮೇಲ್
    • ಪಾಸ್‌ವರ್ಡ್
    • ಭದ್ರತೆ
    • ಡೇಟಾ ಮತ್ತು ಅನುಮತಿ ಎಂಬುದರಲ್ಲಿ ನೀವು ನಿಮ್ಮ Twitter ಡೇಟಾ ಮತ್ತು ಸಂಪರ್ಕಿಸಿದ ಅಪ್ಲಿಕೇಶನ್‌ಗಳನ್ನು ಮರುಪರಿಶೀಲನೆ ಮಾಡಬಹುದಾಗಿದೆ
  • ಗೌಪ್ಯತೆ ಮತ್ತು ಸುರಕ್ಷತೆ ಸೆಟ್ಟಿಂಗ್‌ಗಳು.
  • ಸೂಚನೆಗಳು ಸೆಟ್ಟಿಂಗ್‌ಗಳು
  • ಕಂಟೆಂಟ್ ಆದ್ಯತೆಗಳು
  • ಸಾಮಾನ್ಯ ಸೆಟ್ಟಿಂಗ್‌ಗಳು, ಇದು ಡೇಟಾ ಬಳಕೆ ಒಳಗೊಂಡಿರುತ್ತದೆ:

ಡಾರ್ಕ್‌ ಮೋಡ್ ಸಕ್ರಿಯಗೊಳಿಸುವುದು ಹೇಗೆ

  1. ಮೇಲ್ಭಾಗದ ಮೆನುವಿನಲ್ಲಿ, ನಿಮ್ಮ ಪ್ರೊಫೈಲ್ ಐಕಾನ್ ತಟ್ಟಿ.

  2. ಸೆಟ್ಟಿಂಗ್‌ಗಳು ಮತ್ತು ಗೌಪ್ಯತೆ ಅನ್ನು ತಟ್ಟಿ.

  3. ಡಿಸ್‌ಪ್ಲೇ ಮತ್ತು ಧ್ವನಿ ಟ್ಯಾಬ್ ಅನ್ನು ತಟ್ಟಿ.

  4. ಸೌಲಭ್ಯವನ್ನು ಆನ್ ಮಾಡಲು ಡಾರ್ಕ್ ಮೋಡ್ ಸ್ಲೈಡರ್ ಅನ್ನು ತಟ್ಟಿ

  5. ಸೌಲಭ್ಯವನ್ನು ಆಫ್‌ ಮಾಡಲು, ಡಾರ್ಕ್‌ ಮೋಡ್ ಸ್ಲೈಡರ್ ಅನ್ನು ಪುನಃ ತಟ್ಟಿ.


ಮೆನುವಿನಿಂದ ಡಾರ್ಕ್‌ ಮೋಡ್ ಸಕ್ರಿಯಗೊಳಿಸುವುದು ಹೇಗೆ

  1. ನಿಮ್ಮ ಪ್ರೊಫೈಲ್ ಐಕಾನ್ ತಟ್ಟಿ. 

  2. ಡಾರ್ಕ್‌ ಮೋಡ್ ಆನ್ ಮಾಡಲು ಎಡ ಕೆಳಭಾಗದಲ್ಲಿರುವ ಡಾರ್ಕ್ ಮೋಡ್ ಸ್ಲೈಡರ್ ಅನ್ನು ತಟ್ಟಿ.

ನೇರ ಸಂದೇಶಗಳು

ನೇರ ಸಂದೇಶಗಳ ಕುರಿತು ಮತ್ತು ನಮ್ಮ ನೇರ ಸಂದೇಶ ಆಗಾಗ್ಗೆ ಕೇಳಲಾದ ಪ್ರಶ್ನೆಗಳು ಇನ್ನಷ್ಟು ಮಾಹಿತಿಗಾಗಿ ಓದಿ. ಗಮನಿಸಿ: ನೇರ ಸಂದೇಶಗಳಲ್ಲಿ ಪೂರ್ವನಿರ್ಧರಿತ ಪ್ರತಿಕ್ರಿಯೆಗಳನ್ನು ಸಂದೇಶ ಬೆಂಬಲಿಸುವುದಿಲ್ಲ (ಉದಾ., ವಹಿವಾಟು ಪ್ರೊಫೈಲ್‌ಗಳಿಂದ). 

*Twitter Lite ಅಪ್ಲಿಕೇಶನ್‌ ಈ ಮುಂದಿನ ದೇಶಗಳಲ್ಲಿ ಲಭ್ಯವಿದೆ: ಅಲ್ಬೇನಿಯಾ, ಅಂಗೋಲಾ, ಆಂಟಿಗಾ ಮತ್ತು ಬರ್ಬುಡಾ, ಅರ್ಮೇನಿಯಾ, ಅರುಬಾ, ಆಸ್ಟ್ರಿಯಾ, ಅಜರ್‌ಬೈಜಾನ್, ಬಹಾಮಾಸ್‌, ಬಹರೇನ್‌, ಬೆಲಿಜೆ, ಬೆನಿನ್, ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಬೋಟ್ಸ್‌ವಾನಾ, ಬಲ್ಗೇರಿಯಾ, ಬುರ್ಕಿನಾ ಫಾಸೋ, ಕಾಂಬೋಡಿಯಾ, ಕ್ಯಾಮರೂನ್, ಕೇಪ್‌ ವೆರ್ಡೆ, ಐವರಿ ಕೋಸ್ಟ್‌, ಕ್ರೊಯೇಶಿಯಾ, ಸೈಪ್ರಸ್, ಜೆಕ್ ರಿಪಬ್ಇಕ್, ಫಿಜಿ, ಫಿನ್ಲೆಂಡ್, ಗ್ಯಾಬೋನ್, ಜರ್ಮನಿ, ಗ್ರೀಸ್, ಗಿನಿಯಾ ಬಿಸಾವು, ಹೈತಿ, ಹಂಗೆರಿ, ಐರ್ಲೆಂಡ್, ಇಟಲಿ, ಜಮೈಕಾ, ಕುವೈತ್, ಕಿರ್ಗಿಸ್ತಾನ್, ಲಾವೋಸ್, ಲ್ಯಾಟ್ವಿಯಾ, ಲೀಶೆನ್‌ಸ್ಟೀನ್‌, ಲಕ್ಸೆಂಬರ್ಗ್, ಮಕೆಡೋನಿಯಾ (ಎಫ್‌ವೈಆರ್‌ಒಎಂ), ಮಾಲಿ, ಮಾಲ್ಟಾ, ಮಾರಿಷಸ್‌, ಮಾಲ್ಡೋವಾ, ಮೊಜಾಂಬಿಕ್, ಮಯನ್ಮಾರ್ (ಬರ್ಮಾ), ನಮೀಬಿಯಾ, ನಿಗರ್, ಓಮನ್, ಪಾಕಿಸ್ತಾನ, ಪಪುವಾ ನ್ಯೂ ಗಿನಿಯಾ, ಪೋಲೆಂಡ್‌, ಖತಾರ್, ರವಾಂಡಾ, ಸೌದಿ ಅರೇಬಿಯಾ, ಸೆನೆಗಲ್, ಸ್ಲೊವಾಕಿಯಾ, ಶ್ರೀಲಂಕಾ, ಸ್ವೀಡನ್‌, ಸ್ವಿಜರ್ಲೆಂಡ್, ತಜಿಕಿಸ್ತಾನ್‌, ಟೋಗೋ, ಟ್ರಿನಿಡಾಡ್ ಮತ್ತು ಟೊಬಾಗೋ, ತುರ್ಕಮೆನಿಸ್ತಾನ್‌, ಯುನೈಟೆಡ್‌ ಅರಬ್ ಎಮಿರೇಟ್ಸ್, ಯುನೈಟೆಡ್‌ ಕಿಂಗ್‌ಡಮ್‌, ಉಜ್ಬೆಕಿಸ್ತಾನ್, ವಿಯೆಟ್ನಾಂ ಮತ್ತು ಜಾಂಬಿಯಾ.

 

Bookmark or share this article