Twitter ಪಟ್ಟಿಗಳನ್ನು ಬಳಸುವ ಬಗೆ
ಪಟ್ಟಿ ಎಂಬುದು Twitter ಖಾತೆಗಳ ಸಂಚಿತ ಸಮೂಹವಾಗಿದೆ. ನೀವು ನಿಮ್ಮದೇ ಪಟ್ಟಿಗಳನ್ನು ರಚಿಸಬಹುದು ಅಥವಾ ಇತರರು ರಚಿಸಿದ ಪಟ್ಟಿಗಳಿಗೆ ಸಬ್ಸ್ಕ್ರೈಬ್ ಮಾಡಬಹುದು. ಪಟ್ಟಿ ಕಾಲರೇಖೆಯು ಆ ಪಟ್ಟಿಯಲ್ಲಿರುವ ಖಾತೆಗಳ ಟ್ವೀಟ್ಗಳ ಹರಿವನ್ನು ಮಾತ್ರ ನಿಮಗೆ ತೋರಿಸುತ್ತದೆ.
ಇದಕ್ಕಾಗಿ ಸೂಚನೆಗಳನ್ನು ವೀಕ್ಷಿಸಿ:
ಇದಕ್ಕಾಗಿ ಸೂಚನೆಗಳನ್ನು ವೀಕ್ಷಿಸಿ:
ಗಮನಿಸಿ: iOS ಗಾಗಿ Twitter ಮತ್ತು twitter.com ನಲ್ಲಿ ಯಾವ ಪಟ್ಟಿಯಲ್ಲಿ ನೀವು ಇದ್ದೀರಿ ಎಂಬುದನ್ನು ನೋಡಬಹುದು. ನಿಮ್ಮ ಪಟ್ಟಿಗಳು ಟ್ಯಾಬ್ನಲ್ಲಿ, ಯಾವ ಪಟ್ಟಿಗಳಲ್ಲಿ ನೀವು ಇದ್ದೀರಿ ಎಂಬುದನ್ನು ವೀಕ್ಷಿಸಲು ಸದಸ್ಯತ್ವ ಕ್ಲಿಕ್ ಮಾಡಿ. ಪಟ್ಟಿಯಿಂದ ನಿಮ್ಮನ್ನು ನೀವು ತೆಗೆದುಹಾಕಿಕೊಳ್ಳಲು ಆ ಪಟ್ಟಿಯ ರಚನೆಕಾರರನ್ನು ನೀವು ತಡೆಹಿಡಯಬೇಕಾಗುತ್ತದೆ.
ಹಂಚಿಕೊಳ್ಳಲು ಪಟ್ಟಿಯ URL ಕಂಡುಕೊಳ್ಳಿ
- ನೀವು ಹಂಚಿಕೊಳ್ಳಲು ಬಯಸುವ ಪಟ್ಟಿಗೆ ಹೋಗಿ.
- ನಿಮ್ಮ ಬ್ರೌಸರ್ನ ವಿಳಾಸ ಬಾರ್ನಲ್ಲಿ ಕಾಣಿಸುವ URL ನಕಲಿಸಿ. ಇದು ಈ ರೀತಿ ಕಾಣಿಸುತ್ತದೆ: https://twitter.com/username/lists/list_name.
- ಪಟ್ಟಿಯನ್ನು ನೀವು ಯಾರೊಂದಿಗೆ ಹಂಚಿಕೊಳ್ಳಲು ಬಯಸುತ್ತೀರೋ ಅವರಿಗೆ ಕಳುಹಿಸುವ ಸಂದೇಶದಲ್ಲಿ URL ಅನ್ನು ಅಂಟಿಸಿ.
ಪಟ್ಟಿಯಿಂದ ಟ್ವೀಟ್ಗಳನ್ನು ವೀಕ್ಷಿಸಲು
- ನಿಮ್ಮ ಪ್ರೊಫೈಲ್ ಪುಟಕ್ಕೆ ಹೋಗಿ.
- ಪಟ್ಟಿಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ ಅಥವಾ ತಟ್ಟಿ.
- ನೀವು ವೀಕ್ಷಿಸಲು ಬಯಸುವ ಪಟ್ಟಿಯನ್ನು ಕ್ಲಿಕ್ ಮಾಡಿ ಅಥವಾ ತಟ್ಟಿ.
- ಪಟ್ಟಿಯಲ್ಲಿ ಸೇರಿಸಿದ ಖಾತೆಯ ಟ್ವೀಟ್ಗಳನ್ನು ಕಾಲರೇಖೆಯಲ್ಲಿ ನೀವು ನೋಡುತ್ತೀರಿ.
ಪಟ್ಟಿಗಳನ್ನು ಎಡಿಟ್ ಮಾಡಲು ಅಥವಾ ಅಳಿಸಲು
- ನಿಮ್ಮ ಪ್ರೊಫೈಲ್ ಪುಟಕ್ಕೆ ಹೋಗಿ.
- ಪಟ್ಟಿಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ ಅಥವಾ ತಟ್ಟಿ.
- ನೀವು ರಚಿಸಿದ ಪಟ್ಟಿಗಳನ್ನು ಮತ್ತು ನೀವು ಹಿಂಬಾಲಿಸುವ ಇತರ ವ್ಯಕ್ತಿಗಳ ಪಟ್ಟಿಗಳನ್ನು ನೀವು ಸಬ್ಸ್ಕ್ರೈಬ್ ಮಾಡಿದವುಗಳ ಅಡಿಯಲ್ಲಿ ನೋಡುತ್ತೀರಿ.
- ನೀವು ರಚಿಸಿದ ಪಟ್ಟಿಗಳಿಂದ ಎಡಿಟ್ ಅಥವಾ ಅಳಿಸಲು ನೀವು ಬಯಸಿದ ಪಟ್ಟಿಯ ಮೇಲೆ ಕ್ಲಿಕ್ ಮಾಡಿ ಅಥವಾ ತಟ್ಟಿ. ನಿಮ್ಮ ಪಟ್ಟಿ ವಿವರಗಳನ್ನು ಅಪ್ಡೇಟ್ ಮಾಡಲು ಎಡಿಟ್ ಅನ್ನು ಅಥವಾ ಸಂಪೂರ್ಣ ಪಟ್ಟಿಯನ್ನು ತೆಗೆದುಹಾಕಲು ಅಳಿಸಿ ಕ್ಲಿಕ್ ಮಾಡಿ ಅಥವಾ ತಟ್ಟಿ.
- ಈ ಪುಟದಲ್ಲಿ ನೀವು ನಿಮ್ಮ ಪಟ್ಟಿಯಿಂದ ಜನರನ್ನು ಸೇರಿಸಲಾಗದು ಅಥವಾ ತೆಗೆಯಲಾಗದು. ನೀವು ಸೇರಿಸಲು ಅಥವಾ ಅಳಿಸಲು ಬಯಸಿದ ಪ್ರತಿ ವೈಯಕ್ತಿಕ ಪ್ರೊಫೈಲ್ ಪುಟಗಳಿಂದ ನೀವು ಅದನ್ನು ಮಾಡಬೇಕು.
ಇತರ ವ್ಯಕ್ತಿಗಳ ಪಟ್ಟಿಗಳನ್ನು ಸಬ್ಸ್ಕ್ರೈಬ್ ಮಾಡಲು/ಹಿಂಬಾಲಿಸಲು
- ಇತರರ ಪ್ರೊಫೈಲ್ ಅನ್ನು ವೀಕ್ಷಿಸುವಾಗ ಪಟ್ಟಿಗಳು ಅನ್ನು ಕ್ಲಿಕ್ ಮಾಡಿ ಅಥವಾ ತಟ್ಟಿ.
- ನೀವು ಯಾವ ಪಟ್ಟಿಯನ್ನು ಸಬ್ಸ್ಕ್ರೈಬ್ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿ.
- ಪಟ್ಟಿ ಪುಟದಿಂದ, ಪಟ್ಟಿಯನ್ನು ಹಿಂಬಾಲಿಸಲು ಸಬ್ಸ್ಕ್ರೈಬ್ ಅನ್ನು ಕ್ಲಿಕ್ ಮಾಡಿ ಅಥವಾ ತಟ್ಟಿ. ಆ ಪಟ್ಟಿಯಲ್ಲಿ ವೈಯಕ್ತಿಕ ಖಾತೆಗಳನ್ನು ಹಿಂಬಾಲಿಸದೇ ನೀವು ಪಟ್ಟಿಗಳನ್ನು ಹಿಂಬಾಲಿಸಬಹುದು.