ಆಂಡ್ರಾಯ್ಡ್‌ಗಾಗಿ Twitter ಆಗಾಗ್ಗೆ ಕೇಳಲಾದ ಪ್ರಶ್ನೆಗಳು

ಆಂಡ್ರಾಯ್ಡ್‌ನ ನನ್ನ ಆವೃತ್ತಿಗೆ ಆಪ್ ಲಭ್ಯವಿದೆಯೇ?

  • ಆಂಡ್ರಾಯ್ಡ್‌ ಒಎಸ್ ಆವೃತ್ತಿ 2.3+ ಚಾಲ್ತಿಯಲ್ಲಿರುವ ಫೋನ್‌ಗಳಲ್ಲಿ ಆಂಡ್ರಾಯ್ಡ್‌ಗಾಗಿ Twitter ಆಪ್ ಲಭ್ಯವಿದೆ
    ಗಮನಿಸಿ: Google Play Store ನಲ್ಲಿ ನಾವು ಇನ್ನು ಆಂಡ್ರಾಯ್ಡ್‌ 2.3 ಇಂದ 4.1 ಆವೃತ್ತಿಯವರೆಗೆ ನಾವು ಬೆಂಬಲಿಸುವುದಿಲ್ಲ. ಇನ್ನೂ ನೀವು ಈ ಆವೃತ್ತಿಯಲ್ಲಿದ್ದರೆ, ಅವು ಅಪ್‌ಡೇಟ್ ಪಡೆಯುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಅತ್ಯಂತ ಅಪ್‌ ಟು ಡೇಟ್ ಆಂಡ್ರಾಯ್ಡ್‌ಗಾಗಿ Twitter ಅನುಭವವನ್ನು ಪಡೆಯಲು, ಸ್ಟೋರ್‌ನಿಂದ ಇತ್ತೀಚಿನ ಆವೃತ್ತಿಯನ್ನು ಡೌನ್‌ಲೋಡ್ ಮಾಡಿ ಅಥವಾ ನಿಮ್ಮ ಬ್ರೌಸರ್‌ನಲ್ಲಿ twitter.com ಗೆ ಭೇಟಿ ನೀಡಿ.
  • Kindle Fire
  • B&N Nooks

ನನ್ನ ಬಳಿ ಹಲವು ಖಾತೆಗಳಿವೆ. ಎಲ್ಲದರಲ್ಲೂ ನಾನು ಒಮ್ಮೆಗೇ ಲಾಗ್ ಇನ್ ಮಾಡಬಹುದೇ?

ಹೌದು! ಆಂಡ್ರಾಯ್ಡ್‌ಗಾಗಿ Twitter ಹಲವು ಖಾತೆಗಳನ್ನು ಬೆಂಬಲಿಸುತ್ತದೆ. ನೀವು ಒಂದಕ್ಕಿಂತ ಹೆಚ್ಚು ಖಾತೆಯನ್ನು ಸೇರಿಸಿದರೆ, ನ್ಯಾವಿಗೇಶನ್ ಮೆನು ಐಕಾನ್  ಅಥವಾ ಮೇಲಿನ ಮೆನುವಿನಲ್ಲಿ ನಿಮ್ಮ ಪ್ರೊಫೈಲ್ ಐಕಾನ್‌ ತಟ್ಟಿ ನಂತರ, ನಿಮ್ಮ ಖಾತೆಗಳನ್ನು ಪ್ರವೇಶಿಸಲು ಶೀರ್ಷಿಕೆಯಲ್ಲಿರುವ ಕೆಳಮುಖದ ಬಾಣದ ಗುರುತನ್ನು  ತಟ್ಟಿ. ಹಲವು Twitter ಖಾತೆಗಳನ್ನು ನಿರ್ವಹಿಸುವ ಕುರಿತು ಇನ್ನಷ್ಟು ತಿಳಿಯಿರಿ.

ನನ್ನ ಟ್ವೀಟ್​ಗಳನ್ನು ಸಂರಕ್ಷಿಸಲಾಗಿದೆ. ನನ್ನ ಹಿಂಬಾಲಕರ ವಿನಂತಿಗಳನ್ನು ನೋಡುವುದು ಹೇಗೆ?

ಆಪ್‌ನಲ್ಲಿ ನೀವು ಹಿಂಬಾಲಕರ ವಿನಂತಿಗಳನ್ನು ಅನುಮೋದಿಸಬಹುದು/ನಿರಾಕರಿಸಬಹುದು:

  1. ನಿಮ್ಮ ಪ್ರೊಫೈಲ್ ಪುಟಕ್ಕೆ ಹೋಗಿ.
  2. ನಿಮ್ಮ ವಿನಂತಿಗಳ ಪಟ್ಟಿಯನ್ನು ನೋಡಲು ಮೆನುವಿನಿಂದ ಹಿಂಬಾಲಕರ ವಿನಂತಿಗಳು ತಟ್ಟಿ.
  3. ಚೆಕ್‌ಮಾರ್ಕ್ ತಟ್ಟುವ ಮೂಲಕ ವಿನಂತಿಯನ್ನು ಸಮ್ಮತಿಸಿ ಅಥವಾ X ತಟ್ಟುವ ಮೂಲಕ ವಿನಂತಿಯನ್ನು ನಿರಾಕರಿಸಿ.

ಆಪ್ ಅನ್ನು ನಾನು ತೆಗೆಯುವುದು ಹೇಗೆ ಅಥವಾ ನನ್ನ ಎಸ್‌ಡಿ ಕಾರ್ಡ್‌ಗೆ ಸಾಗಿಸುವುದು ಹೇಗೆ?

  • ಬಂಡಲ್ ಮಾಡಿದ ಅಪ್ಲಿಕೇಶನ್ ಆಗಿ ಆಂಡ್ರಾಯ್ಡ್‌ಗಾಗಿ Twitter ಅನ್ನು ನಿಮ್ಮ ಸಾಧನವು ಒಳಗೊಂಡಿದ್ದರೆ, ಇದನ್ನು ಅನ್‌ಇನ್‌ಸ್ಟಾಲ್ ಮಾಡಲಾಗದು ಅಥವಾ ಎಸ್‌ಡಿ ಕಾರ್ಡ್‌ಗೆ ಸಾಗಿಸಲಾಗದು.
  • ಎಸ್‌ಡಿಗೆ ಸಾಗಿಸುವ ಆಯ್ಕೆಯಿಂದ ಸ್ವತಃ ಅಪ್ಲಿಕೇಶನ್‌ (1.89mb) ಸಾಗುತ್ತದೆ, ಆಪ್ ಬಳಸುವಾಗ ಡೇಟಾ ಸಾಗುವುದಿಲ್ಲ. ಎಸ್‌ಡಿ ಇಲ್ಲದಿದ್ದರೆ, ಆಪ್ ನಿಮ್ಮ ಲಾಗಿನ್ ಮಾಹಿತಿಯನ್ನು ಕಳೆದುಕೊಳ್ಳುತ್ತದೆ.

ನಾನು ಆಪ್ ತೆರೆದಾಗ ಯಾಕೆ ನನ್ನ ಕಾಲರೇಖೆ ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುವುದಿಲ್ಲ?

  • ಆಪ್ ತೆರೆದಿದ್ದರೆ ಅಥವಾ ಹಿನ್ನೆಲೆಯಲ್ಲಿ ಚಾಲ್ತಿಯಲ್ಲಿದ್ದರೆ ನಿಮ್ಮ ಕಾಲರೇಖೆ
  • ನೀವು ಆಪ್ ತೊರೆದರೆ ಮತ್ತು ಪುನಃ ತೆರೆದರೆ, ಕಾಲರೇಖೆಯನ್ನು ರಿಫ್ರೆಶ್ ಮಾಡಲು ಕೆಳಕ್ಕೆ ಎಳೆಯಿರಿ.
  • ಈ ಸೌಲಭ್ಯವು ನೀವು ಮುಚ್ಚಿ ಪುನಃ ತೆರೆದಾಗ ಕಾಲರೇಖೆ ಸ್ಥಾನವನ್ನು ರಕ್ಷಿಸಲು ಸಹಾಯ ಮಾಡುತ್ತದೆ

ಆಂಡ್ರಾಯ್ಡ್‌ಗಾಗಿ Twitter ನಲ್ಲಿ ಡಾರ್ಕ್‌ ಮೋಡ್ ಲಭ್ಯವಿದೆ.

ಹೌದು, ಆಂಡ್ರಾಯ್ಡ್‌ಗಾಗಿ Twitter ಡಾರ್ಕ್‌ ಮೋಡ್ ಅನ್ನು ಬೆಂಬಲಿಸುತ್ತದೆ. ಈ ಸೌಲಭ್ಯವನ್ನು ಸಕ್ರಿಯಗೊಳಿಸಲು:

  1. ಮೇಲ್ಭಾಗದ ಮೆನುವಿನಲ್ಲಿ, ನಿಮ್ಮ ಪ್ರೊಫೈಲ್ ಐಕಾನ್ ತಟ್ಟಿ.
  2. ಸೆಟ್ಟಿಂಗ್‌ಗಳು ಮತ್ತು ಗೌಪ್ಯತೆ ಅನ್ನು ತಟ್ಟಿ.
  3. ಡಿಸ್‌ಪ್ಲೇ ಮತ್ತು ಧ್ವನಿ ಟ್ಯಾಬ್ ಅನ್ನು ತಟ್ಟಿ.
  4. ಸೌಲಭ್ಯವನ್ನು ಆನ್ ಮಾಡಲು ಡಾರ್ಕ್ ಮೋಡ್ ಸ್ಲೈಡರ್ ಅನ್ನು ತಟ್ಟಿ
  5. ಡಾರ್ಕ್‌ ಮೋಡ್‌ ಅಪಿಯರೆನ್ಸ್‌ನಲ್ಲಿ ನಿಮ್ಮ ಆದ್ಯತೆಯನ್ನು ತಟ್ಟುವ ಮೂಲಕ ಡಿಮ್ ಅಥವಾ ಲೈಟ್ಸ್‌ ಔಟ್‌ ಅನ್ನು ಆಯ್ಕೆ ಮಾಡಿ.
  6. ಸೌಲಭ್ಯವನ್ನು ಆಫ್‌ ಮಾಡಲು, ಡಾರ್ಕ್‌ ಮೋಡ್ ಆಯ್ಕೆಯನ್ನು ಪುನಃ ತಟ್ಟಿ.

ಆಂಡ್ರಾಯ್ಡ್‌ಗಾಗಿ Twitter ಫಾಂಟ್ ಗಾತ್ರವನ್ನು ನಾನು ಬದಲಿಸಬಹುದೇ?

ಹೌದು, ನಿಮ್ಮ ಆಂಡ್ರಾಯ್ಡ್‌ ಸಾಧನ ಸೆಟ್ಟಿಂಗ್‌ಗಳ ಮೂಲಕ ನಿಮ್ಮ ಆಂಡ್ರಾಯ್ಡ್‌ಗಾಗಿ Twitter ಆಪ್ ನಲ್ಲಿ ಪ್ರದರ್ಶಿಸಿದ ಫಾಂಟ್ ಗಾತ್ರವನ್ನು ಹೊಂದಿಸಬಹುದು. ನಿಮ್ಮ ಸಾಧನ ಸೆಟ್ಟಿಂಗ್‌ಗಳ ಮೂಲಕ ನೀವು ಫಾಂಟ್ ಗಾತ್ರವನ್ನು ಅಪ್‌ಡೇಟ್ ಮಾಡಿದರೆ ಮತ್ತು ಅಪ್‌ಡೇಟ್‌ ತಕ್ಷಣ ಕಾಣಿಸದಿದ್ದರೆ, ನಿಮ್ಮ ಆಪ್ ಮರುಆರಂಭಿಸಿ ಪ್ರಯತ್ನಿಸಿ. ದಯವಿಟ್ಟು ಗಮನಿಸಿ: ನಿಮ್ಮ ಆಂಡ್ರಾಯ್ಡ್‌ಗಾಗಿ Twitter ಆಪ್ ಮೂಲಕ ನೇರವಾಗಿ ಫಾಂಟ್ ಗಾತ್ರವನ್ನು ಅಪ್‌ಡೇಟ್ ಮಾಡಲು ಇನ್ನು ಮುಂದೆ ಸಾಧ್ಯವಿಲ್ಲ.

Bookmark or share this article