ಆಂಡ್ರಾಯ್ಡ್ಗಾಗಿ Twitter ಬಳಸುವುದು ಹೇಗೆ
ಹೊಸ ಖಾತೆಗೆ ಸೈನ್ ಅಪ್ ಮಾಡುವುದು ಹೇಗೆ
- ಆಪ್ ತೆರೆಯಿರಿ ಮತ್ತು ಸೈನ್ ಅಪ್ ಮೇಲೆ ತಟ್ಟಿ.
- ನಮ್ಮ ಸೈನ್ ಅಪ್ ಅನುಭವದ ಮೂಲಕ ನಿಮ್ಮನ್ನು ಮಾರ್ಗದರ್ಶ ನೀಡಲಾಗುತ್ತದೆ ಮತ್ತು ನಿಮ್ಮ ಹೆಸರು ಮತ್ತು ಇಮೇಲ್ ವಿಳಾಸದಂತಹ ಮಾಹಿತಿಯನ್ನು ನಮೂದಿಸಲು ಸೂಚಿಸಲಾಗುತ್ತದೆ.
- ನೀವು ಸೈನ್ ಅಪ್ ಮಾಡುವಾಗ ಇಮೇಲ್ ವಿಳಾಸವನ್ನು ನೀವು ನೀಡಿದರೆ, ನಿಮ್ಮ ಇಮೇಲ್ ವಿಳಾಸವನ್ನು ಪರಿಶೀಲಿಸುವುದಕ್ಕಾಗಿ ಸೂಚನೆಗಳನ್ನು ಒಳಗೊಂಡ ಇಮೇಲ್ ಅನ್ನು ನಾವು ನಿಮಗೆ ತಕ್ಷಣವೇ ಕಳುಹಿಸುತ್ತೇವೆ.
- ಸೈನ್ ಅಪ್ ಮಾಡುವಾಗ ನೀವು ಫೋನ್ ಸಂಖ್ಯೆಯನ್ನು ನೀಡಿದರೆ, ನಿಮ್ಮ ಸಂಖ್ಯೆಯನ್ನು ಪರಿಶೀಲಿಸುವುದಕ್ಕಾಗಿ ತಕ್ಷಣವೇ ಕೋಡ್ ಹೊಂದಿರುವ ಪಠ್ಯ ಸಂದೇಶವನ್ನು ನಾವು ನಿಮಗೆ ಕಳುಹಿಸುತ್ತೇವೆ.
- ನಿಮ್ಮ ಹೊಸ ಖಾತೆಗೆ ಸೆಟ್ಟಿಂಗ್ಗಳನ್ನು ಕಸ್ಟಮೈಸ್ ಮಾಡುವುದು ಹೇಗೆ ಎಂದು ತಿಳಿಯಿರಿ.
- ನಿಮ್ಮ ಆಪ್ ಮೂಲಕ ಹಲವು Twitter ಖಾತೆಗಳನ್ನು ನಿರ್ವಹಿಸುವುದು ಹೇಗೆ ಎಂದು ಕಲಿಯಿರಿ.
ಗಮನಿಸಿ: Google Play Store ನಲ್ಲಿ ನಾವು ಇನ್ನು ಆಂಡ್ರಾಯ್ಡ್ 2.3 ಇಂದ 4.1 ಆವೃತ್ತಿಯವರೆಗೆ ನಾವು ಬೆಂಬಲಿಸುವುದಿಲ್ಲ. ಇನ್ನೂ ನೀವು ಈ ಆವೃತ್ತಿಯಲ್ಲಿದ್ದರೆ, ಅವು ಅಪ್ಡೇಟ್ ಪಡೆಯುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ. ಅತ್ಯಂತ ಅಪ್ ಟು ಡೇಟ್ ಆಂಡ್ರಾಯ್ಡ್ಗಾಗಿ Twitter ಅನುಭವವನ್ನು ಪಡೆಯಲು, ಸ್ಟೋರ್ನಿಂದ ಇತ್ತೀಚಿನ ಆವೃತ್ತಿಯನ್ನು ಡೌನ್ಲೋಡ್ ಮಾಡಿ ಅಥವಾ ನಿಮ್ಮ ಬ್ರೌಸರ್ನಲ್ಲಿ twitter.com ಗೆ ಭೇಟಿ ನೀಡಿ.
ನಿಮ್ಮ ಪ್ರೊಫೈಲ್ ಎಡಿಟ್ ಮಾಡುವುದು
- ಮೇಲ್ಭಾಗದ ಮೆನುವಿನಲ್ಲಿ, ನೀವು ನ್ಯಾವಿಗೇಶನ್ ಮೆನು ಐಕಾನ್ ಅಥವಾ ನಿಮ್ಮ ಪ್ರೊಫೈಲ್ ಐಕಾನ್ ನೋಡುತ್ತೀರಿ. ನೀವು ಹೊಂದಿರುವ ಯಾವುದೇ ಐಕಾನ್ ಅನ್ನು ತಟ್ಟಿ.
- ಪ್ರೊಫೈಲ್ ತಟ್ಟಿ.
- ಪ್ರೊಫೈಲ್ ಎಡಿಟ್ ತಟ್ಟಿ.
- ನೀವು ಬಯಸಿದ ಬದಲಾವಣೆಗಳನ್ನು ಮಾಡಿ, ನಂತರ ಉಳಿಸಿ ತಟ್ಟಿ.
- ನಿಮ್ಮ ಆಪ್ ಮೂಲಕ ಹಲವು Twitter ಖಾತೆಗಳನ್ನು ನಿರ್ವಹಿಸುವುದು ಹೇಗೆ ಎಂದು ಕಲಿಯಿರಿ.
ನಿಮ್ಮ ಖಾತೆ ಸೆಟ್ಟಿಂಗ್ಗಳನ್ನು ಅಪ್ಡೇಟ್ ಮಾಡುವುದು
- ಮೇಲ್ಭಾಗದ ಮೆನುವಿನಲ್ಲಿ, ನೀವು ನ್ಯಾವಿಗೇಶನ್ ಮೆನು ಐಕಾನ್ ಅಥವಾ ನಿಮ್ಮ ಪ್ರೊಫೈಲ್ ಐಕಾನ್ ನೋಡುತ್ತೀರಿ. ನೀವು ಹೊಂದಿರುವ ಯಾವುದೇ ಐಕಾನ್ ಅನ್ನು ತಟ್ಟಿ.
- ಸೆಟ್ಟಿಂಗ್ಗಳು ಮತ್ತು ಗೌಪ್ಯತೆ ಅನ್ನು ತಟ್ಟಿ.
- ಮೆನು ಮೂಲಕ ಸ್ಕ್ರೋಲ್ ಮಾಡಿ ಮತ್ತು ನೀವು ವೀಕ್ಷಿಸಲು/ಎಡಿಟ್ ಮಾಡಲು ಬಯಸಿದ ಖಾತೆ ಸೆಟ್ಟಿಂಗ್ ನ್ನು ಆಯ್ಕೆ ಮಾಡಿ.
ನಿಮ್ಮ ಡೇಟಾ ಬಳಕೆಯನ್ನು ಕಡಿಮೆ ಮಾಡುವುದು ಹೇಗೆ
Twitter ಬಳಸುವ ಡೇಟಾದ ಪ್ರಮಾಣವನ್ನು ಡೇಟಾ ಸೇವರ್ ಮೋಡ್ ಅನ್ನು ಸಕ್ರಿಯಗೊಳಿಸುವ ಮೂಲಕ ಕಡಿಮೆ ಮಾಡಬಹುದು. ಡೇಟಾ ಉಳಿಸಲು ನೆರವಾಗುವುದಕ್ಕಾಗಿ ನೈಜ ಸಮಯದಲ್ಲಿ ಯಾವ ಮಾಧ್ಯಮವನ್ನು ನೀವು ಡೌನ್ಲೋಡ್ ಮಾಡಬೇಕು ಎಂಬುದನ್ನು ನಿಯಂತ್ರಿಸಿ.
- ಮೇಲ್ಭಾಗದ ಮೆನುವಿನಲ್ಲಿ, ನೀವು ನ್ಯಾವಿಗೇಶನ್ ಮೆನು ಐಕಾನ್ ಅಥವಾ ನಿಮ್ಮ ಪ್ರೊಫೈಲ್ ಐಕಾನ್ ನೋಡುತ್ತೀರಿ. ನೀವು ಹೊಂದಿರುವ ಯಾವುದೇ ಐಕಾನ್ ಅನ್ನು ತಟ್ಟಿ.
- ಸೆಟ್ಟಿಂಗ್ಗಳು ಮತ್ತು ಗೌಪ್ಯತೆ ಅನ್ನು ತಟ್ಟಿ.
- ಸಾಮಾನ್ಯ, ಅಡಿಯಲ್ಲಿ,, ಡೇಟಾ ಬಳಕೆ ತಟ್ಟಿ.
- ಆನ್ ಮಾಡಲು ಡೇಟಾ ಸೇವರ್ ಪಕ್ಕ ಇರುವ ಟಾಗಲ್ ಅನ್ನು ತಟ್ಟಿ.
ಈ ಮೋಡ್ನಲ್ಲಿ, ಚಿತ್ರಗಳು ಕಡಿಮೆ ಗುಣಮಟ್ಟದಲ್ಲಿ ಲೋಡ್ ಆಗುತ್ತವೆ ಮತ್ತು ವೀಡಿಯೋಗಳ ಸ್ವಯಂಚಾಲಿವಾಗಿ ಪ್ಲೇ ಆಗುವುದಿಲ್ಲ. ಡೇಟಾ ಸೇವರ್ ಆನ್ ಆಗಿದ್ದಾಗಚಿತ್ರವನ್ನು ಉನ್ನತ ಗುಣಮಟ್ಟದಲ್ಲಿ ವೀಕ್ಷಿಸಲು, ಇನ್ನಷ್ಟು ಐಕಾನ್ ತಟ್ಟಿ ಮತ್ತು ಅಧಿಕ ಗುಣಮಟ್ಟವನ್ನು ಲೋಡ್ ಮಾಡಿ ಆಯ್ಕೆ ಮಾಡಿ.
ಟ್ವೀಟ್ ಪೋಸ್ಟ್ ಮಾಡುವುದು ಮತ್ತು ಅಳಿಸುವುದು ಹೇಗೆ
ಟ್ವೀಟ್ ಪೋಸ್ಟ್ ಮಾಡಲು:
- ಟ್ವೀಟ್ ಐಕಾನ್ ತಟ್ಟಿ
- ನಿಮ್ಮ ಸಂದೇಶ ನಮೂದಿಸಿ ಮತ್ತು ನಂತರ ಟ್ವೀಟ್ ತಟ್ಟಿ.
- ನಿಮ್ಮ ಸಾಧನದ ಮೇಲಿನ ಸ್ಟೇಟಸ್ ಬಾರ್ನಲ್ಲಿ ಒಂದು ನೊಟಿಫಿಕೇಶನ್ ಕಾಣಿಸಿಕೊಳ್ಳುತ್ತದೆ ಮತ್ತು ಒಮ್ಮೆ ಟ್ವೀಟ್ ಅನ್ನು ಯಶಸ್ವಿಯಾಗಿ ಕಳುಹಿಸಿದ ನಂತರ ಇದು ಹೊರಟುಹೋಗುತ್ತದೆ.
ಒಂದು ಟ್ವೀಟ್ ಅನ್ನು ಕರಡು ರೀತಿ ಉಳಿಸಲು:
- ನಿಮ್ಮ ಟ್ವೀಟ್ ಅನ್ನು ಕರಡು ರೀತಿ ಉಳಿಸಲು, ಟ್ವೀಟ್ ಕಂಪೋಸ್ ವಿಂಡೋದಲ್ಲಿ X ತಟ್ಟಿ.
- ಕರಡು ರೀತಿ ಉಳಿಸಲು ನೀವು ಆಯ್ಕೆಯನ್ನು ನೋಡುತ್ತೀರಿ. ನೀವು ಉಳಿಸಿದ ಕರಡನ್ನು ಪ್ರವೇಶಿಸಲು, ನಿಮ್ಮ ಪ್ರೊಫೈಲ್ಗೆ ಹೋಗಿ ಮತ್ತು ಓವರ್ಫ್ಲೋ ಐಕಾನ್ ತಟ್ಟಿ ಮತ್ತು ನಂತರ ಕರಡು ಆಯ್ಕೆ ಮಾಡಿ.
- ಕಂಪೋಸರ್ ಬಾಕ್ಸ್ನಲ್ಲಿ ತಟ್ಟುವ ಮೂಲಕ ನಿಮ್ಮ ಕರಡುಗಳನ್ನು ಕೂಡ ನೀವು ಪ್ರವೇಶಿಸಬಹುದು, ನಂತರ ಬಾಕ್ಸ್ನಲ್ಲಿ ಕರಡು icon ಐಕಾನ್ ತಟ್ಟಬಹುದು. ನೀವುಕರಡುಗಳನ್ನು ಹೊಂದಿದ್ದಾಗ ಮಾತ್ರ ಈ ಐಕಾನ್ ಕಾಣಿಸುತ್ತದೆ.
ನಿಮ್ಮ ಟ್ವೀಟ್ನಲ್ಲಿ ಫೋಟೋ ಅಥವಾ ಜಿಐಎಫ್ ಪೋಸ್ಟ್ ಮಾಡಲು:
- Twitter ನಲ್ಲಿ ಫೋಟೋಗಳು ಅಥವಾ ಜಿಐಎಫ್ಗಳನ್ನು ಪೋಸ್ಟ್ ಮಾಡುವ ಕುರಿತು ಓದಿ.
- ನೇರ ಸಂದೇಶಗಳಲ್ಲಿ ಫೋಟೋಗಳನ್ನು ಕಳುಹಿಸುವುದು ಹೇಗೆ ಎಂಬುದರ ಕುರಿತು ಓದಿ.
ನಿಮ್ಮ ಟ್ವೀಟ್ನೊಂದಿಗೆ ವೀಡಿಯೋ ಪೋಸ್ಟ್ ಮಾಡುವುದು:
- Twitter ನಲ್ಲಿ ವೀಡಿಯೋ ವೀಕ್ಷಿಸುವುದು ಮತ್ತು ಹಂಚಿಕೊಳ್ಳುವುದರ ಕುರಿತು ಓದಿ. (ವೀಡಿಯೋ ಸೌಲಭ್ಯವನ್ನು ಬಳಸಲು ಆಂಡ್ರಾಯ್ಡ್ ಒಎಸ್ 4.1 ಮತ್ತು ಅದಕ್ಕಿಂತ ಅಧಿಕ ಆವೃತ್ತಿಯನ್ನು ಬಳಸಬೇಕು.)
ಪ್ರತಿಕ್ರಿಯೆ ಪೋಸ್ಟ್ ಮಾಡಲು:
- ನೀವು ಪ್ರತಿಕ್ರಿಯೆ ನೀಡಲು ಬಯಸಿದ ಟ್ವೀಟ್ ಕಂಡುಕೊಳ್ಳಿ.
- ಪ್ರತಿಕ್ರಿಯೆ ಐಕಾನ್ ಕ್ಲಿಕ್ ಮಾಡಿ
- ಒಂದು ಕಂಪೋಸ್ ಬಾಕ್ಸ್ ಪಾಪ್ ಅಪ್ ಆಗುತ್ತದೆ, ನಿಮ್ಮ ಸಂದೇಶ ನಮೂದಿಸಿ ಮತ್ತು ಪೋಸ್ಟ್ ಮಾಡಲು ಪ್ರತಿಕ್ರಿಯೆ ಕ್ಲಿಕ್ ಮಾಡಿ ಅಥವಾ ತಟ್ಟಿ.
ಹೆಸರಿಸುವಿಕೆ ಪೋಸ್ಟ್ ಮಾಡುವುದು ಹೇಗೆ:
- ಟ್ವೀಟ್ ಬಾಕ್ಸ್ನಲ್ಲಿ ನಿಮ್ಮ ಸಂದೇಶವನ್ನು ಟೈಪ್ ಮಾಡಿ.
- ನಿರ್ದಿಷ್ಟ ಖಾತೆಯನ್ನು ಸೂಚಿಸುತ್ತಿರುವಾಗ ಬಳಕೆದಾರರ ಹೆಸರಿಗೂ ಮೊದಲು @ ಚಿಹ್ನೆಯನ್ನು ಟೈಪ್ ಮಾಡಿ.
- ಪೋಸ್ಟ್ ಮಾಡಲು ಟ್ವೀಟ್ ಕ್ಲಿಕ್ ಮಾಡಿ ಅಥವಾ ತಟ್ಟಿ.
- ಪ್ರತಿಕ್ರಿಯೆಗಳು ಮತ್ತು ಹೆಸರಿಸುವಿಕೆ ಕುರಿತು ಇನ್ನಷ್ಟು ಓದಿ.
ನಿಮ್ಮ ಸ್ಥಳದೊಂದಿಗೆ ಟ್ವೀಟ್ ಮಾಡಲು:
- ನಿಮ್ಮ ಸ್ಥಳವನ್ನು ಸೇರಿಸಲು ಸ್ಥಳ ಐಕಾನ್ ತಟ್ಟಿ, ನಿಮ್ಮ ಟ್ವೀಟ್ಗೆ ಸೇರಿಸಿ.
- ಮೊಬೈಲ್ ಸಾಧನಗಳಲ್ಲಿ ಸ್ಥಳ ಸೌಲಭ್ಯಗಳು ಹೇಗೆ ಬಳಸುವುದು ಎಂಬ ಕುರಿತು ಇನ್ನಷ್ಟು ತಿಳಿಯಿರಿ.
ಟ್ವೀಟ್ನಲ್ಲಿ URL ಸೇರಿಸಲು:
- ಲಿಂಕ್ಗಳನ್ನು ಸ್ವಯಂಚಾಲಿತವಾಗಿ Twitter ನ ಸ್ವಂತ t.co ಸೇವೆ ಬಳಸಿ ಸಣ್ಣದಾಗಿಸಲಾಗುತ್ತದೆ.
- URL ಅನ್ನು ಟೈಪ್ ಮಾಡಿದರೆ ಅಥವಾ ಅಂಟಿಸಿದರೆ, ಮೂಲ ಲಿಂಕ್ ಎಷ್ಟೇ ಉದ್ದವಿದ್ದರೂ ನಿಮ್ಮ ಅಕ್ಷರ ಮಿತಿಯಿಂದ ಸ್ವಯಂಚಾಲಿತವಾಗಿ ಅಕ್ಷರಗಳನ್ನು ಕಡಿತಗೊಳಿಸುತ್ತದೆ.
ಟ್ವೀಟ್ ಅಳಿಸಲು:
- ಮೇಲ್ಭಾಗದ ಮೆನುವಿನಲ್ಲಿ, ನೀವು ನ್ಯಾವಿಗೇಶನ್ ಮೆನು ಐಕಾನ್ ಅಥವಾ ನಿಮ್ಮ ಪ್ರೊಫೈಲ್ ಐಕಾನ್ ನೋಡುತ್ತೀರಿ. ನೀವು ಹೊಂದಿರುವ ಯಾವುದೇ ಐಕಾನ್ ಅನ್ನು ತಟ್ಟಿ.
- ಮೆನುವಿನಿಂದ ಪ್ರೊಫೈಲ್. ತಟ್ಟಿ
- ನೀವು ಅಳಿಸಲು ಬಯಸುವ ಟ್ವೀಟ್ ಗುರುತಿಸಿ.
- ಟ್ವೀಟ್ನ ಮೇಲ್ಭಾಗದಲ್ಲಿ ಇರುವ ಐಕಾನ್ ಅನ್ನು ತಟ್ಟಿ.
- ಅಳಿಸಿ ತಟ್ಟಿ.
- ದೃಢೀಕರಿಸಲು ಹೌದು ತಟ್ಟಿ.
ಡಾರ್ಕ್ ಮೋಡ್ ಸಕ್ರಿಯಗೊಳಿಸುವುದು ಹೇಗೆ
- ಮೇಲ್ಭಾಗದ ಮೆನುವಿನಲ್ಲಿ, ನಿಮ್ಮ ಪ್ರೊಫೈಲ್ ಐಕಾನ್ ತಟ್ಟಿ.
- ಸೆಟ್ಟಿಂಗ್ಗಳು ಮತ್ತು ಗೌಪ್ಯತೆ ಅನ್ನು ತಟ್ಟಿ.
- ಡಿಸ್ಪ್ಲೇ ಮತ್ತು ಧ್ವನಿ ಟ್ಯಾಬ್ ಅನ್ನು ತಟ್ಟಿ.
- ಸೌಲಭ್ಯವನ್ನು ಆನ್ ಮಾಡಲು ಡಾರ್ಕ್ ಮೋಡ್ ಸ್ಲೈಡರ್ ಅನ್ನು ತಟ್ಟಿ
ಡಾರ್ಕ್ ಮೋಡ್ ಅಪಿಯರೆನ್ಸ್ನಲ್ಲಿ ನಿಮ್ಮ ಆದ್ಯತೆಯನ್ನು ತಟ್ಟುವ ಮೂಲಕ ಡಿಮ್ ಅಥವಾ ಲೈಟ್ಸ್ ಔಟ್ ಅನ್ನು ಆಯ್ಕೆ ಮಾಡಿ.
- ಸೌಲಭ್ಯವನ್ನು ಆಫ್ ಮಾಡಲು, ಡಾರ್ಕ್ ಮೋಡ್ ಆಯ್ಕೆಯನ್ನು ಪುನಃ ತಟ್ಟಿ.
ಮೆನುವಿನಿಂದ ಡಾರ್ಕ್ ಮೋಡ್ ಸಕ್ರಿಯಗೊಳಿಸುವುದು ಹೇಗೆ
- ನಿಮ್ಮ ಪ್ರೊಫೈಲ್ ಐಕಾನ್ ತಟ್ಟಿ.
- ಡಾರ್ಕ್ ಮೋಡ್ ಆನ್ ಮಾಡಲು ಲೈಟ್ ಬಲ್ಬ್ ಅನ್ನು ತಟ್ಟಿ.
- ಡಿಮ್ ಅಥವಾ ಲೈಟ್ಸ್ ಔಟ್ ಮಧ್ಯೆ ಬದಲಾವಣೆ ಮಾಡಲು ಸೆಟ್ಟಿಂಗ್ಸ್ಗೆ ಹೋಗಿ.
ಸ್ವಯಂಚಾಲಿತ ಡಾರ್ಕ್ ಮೋಡ್ ಸಕ್ರಿಯಗೊಳಿಸುವುದು ಹೇಗೆ
- ಮೇಲ್ಭಾಗದ ಮೆನುವಿನಲ್ಲಿ, ನಿಮ್ಮ ಪ್ರೊಫೈಲ್ ಐಕಾನ್ ತಟ್ಟಿ.
- ಸೆಟ್ಟಿಂಗ್ಗಳು ಮತ್ತು ಗೌಪ್ಯತೆ ಅನ್ನು ತಟ್ಟಿ.
- ಡಿಸ್ಪ್ಲೇ ಮತ್ತು ಧ್ವನಿ ಟ್ಯಾಬ್ ಅನ್ನು ತಟ್ಟಿ.
- ಸೌಲಭ್ಯವನ್ನು ಆನ್ ಮಾಡಲು ಸ್ವಯಂಚಾಲಿತ ಡಾರ್ಕ್ ಮೋಡ್ ಸ್ಲೈಡರ್ ಅನ್ನು ತಟ್ಟಿ.
- ಇದನ್ನು ಆಫ್ ಮಾಡಲು ಸ್ವಯಂಚಾಲಿತ ಡಾರ್ಕ್ ಮೋಡ್ ಸ್ವಿಚ್ ಅನ್ನು ಪುನಃ ತಟ್ಟಿ.