ಸುಧಾರಿತ ಹುಡುಕಾಟಗಳನ್ನು ಬಳಸುವ ಬಗೆ

ನೀವು ಹುಡುಕುತ್ತಿರುವುದನ್ನು ಹುಡುಕಾಟ ಬಳಸಿ ಕಂಡುಕೊಳ್ಳಿ

ನೀವು twitter.com ನಲ್ಲಿ ಲಾಗ್ ಇನ್ ಮಾಡಿದಾಗ ಸುಧಾರಿತ ಹುಡುಕಾಟ ಲಭ್ಯವಿರುತ್ತದೆ. ನಿಗದಿತ ದಿನಾಂಕ ಶ್ರೇಣಿಗಳು, ಜನರು ಮತ್ತು ಇನ್ನಷ್ಟಕ್ಕೆ ಹುಡಕಾಟ ಫಲಿತಾಂಶಗಳನ್ನು ನಿಗದಿಸಲು ಇದು ಅನುವು ಮಾಡುತ್ತದೆ. ನಿಗದಿತ ಟ್ವೀಟ್‌ಗಳನ್ನು ಕಂಡುಕೊಳ್ಳಲು ಇದು ಸುಲಭವಾಗಿಸುತ್ತದೆ.

ಸುಧಾರಿತ ಹುಡುಕಾಟಗಳನ್ನು ಬಳಸುವ ಬಗೆ

  1. twitter.com ನಲ್ಲಿ ಹುಡುಕಾಟ ಬಾರ್‌ನಲ್ಲಿ ನಿಮ್ಮ ಹುಡುಕಾಟವನ್ನು ನಮೂದಿಸಿ.
  2. ನಿಮ್ಮ ಫಲಿತಾಂಶ ಪುಟದ ಬಲ ಮೇಲ್ಭಾಗದಲ್ಲಿನ ಹುಡುಕಾಟ ಫಿಲ್ಟರುಗಳ ಕೆಳಗಿರುವ ಸುಧಾರಿತ ಹುಡುಕಾಟವನ್ನು ಕ್ಲಿಕ್ ಮಾಡಿ ಅಥವಾ ಇನ್ನಷ್ಟು ಆಯ್ಕೆಗಳನ್ನು ಕ್ಲಿಕ್ ಮಾಡಿ ಮತ್ತು ನಂತರ ಸುಧಾರಿತ ಹುಡುಕಾಟ ಕ್ಲಿಕ್ ಮಾಡಿ.
  3. ನಿಮ್ಮ ಹುಡುಕಾಟ ಫಲಿತಾಂಶಗಳನ್ನು ಪರಿಷ್ಕರಿಸಲು ಸೂಕ್ತ ಕ್ಷೇತ್ರಗಳಲ್ಲಿ ಭರ್ತಿ ಮಾಡಿ (ಕೆಲವು ಸಹಾಯಕ ಸಲಹೆಗಳಿಗೆ ಈ ಕೆಳಗೆ ನೋಡಿ).
  4. ನಿಮ್ಮ ಫಲಿತಾಂಶಗಳನ್ನು ನೋಡಲು ಹುಡುಕಾಟ ಕ್ಲಿಕ್ ಮಾಡಿ.

ನಿಮ್ಮ ಸುಧಾರಿತ ಹುಡುಕಾಟವನ್ನು ಸಂಸ್ಕರಿಸುವ ಬಗೆ

ಸುಧಾರಿತ ಹುಡುಕಾಟವನ್ನು ಬಳಸಿ, ಈ ಕೆಳಗಿನ ಯಾವುದೇ ಸಂಯೋಜನೆಯನ್ನು ಬಳಸಿ ನಿಮ್ಮ ಹುಡುಕಾಟ ಫಲಿತಾಂಶಗಳನ್ನು ಸಂಸ್ಕರಿಸಬಹುದು:

ಶಬ್ದಗಳು

  • ಯಾವುದೇ ಸ್ಥಾನದಲ್ಲಿ ಎಲ್ಲ ಶಬ್ದಗಳನ್ನು ಹೊಂದಿರುವ ಟ್ವೀಟ್‌ಗಳು (“Twitter” ಮತ್ತು “ಹುಡುಕಾಟ”)  
  • ನಿಖರ ಪದಗುಚ್ಛಗಳನ್ನು ಹೊಂದಿರುವ ಟ್ವೀಟ್‌ಗಳು (“Twitter ಹುಡುಕಾಟ”)
  • ಯಾವುದೇ ಶಬ್ದಗಳನ್ನು ಒಳಗೊಂಡಿರುವ ಟ್ವೀಟ್‌ಗಳು (“Twitter” or “ಹುಡುಕು”)
  • ನಿಗದಿತ ಶಬ್ದಗಳನ್ನು ಹೊರತಾಗಿಸಿರುವ ಟ್ವೀಟ್‌ಗಳು (“Twitter” but not “ಹುಡುಕು”)
  • ನಿಗದಿತ ಹ್ಯಾಶ್‌ಟ್ಯಾಗ್ ಹೊಂದಿರುವ ಟ್ವೀಟ್‌ಗಳು (#twitter)
  • ನಿಗದಿತ ಭಾಷೆಯಲ್ಲಿ ಟ್ವೀಟ್‌ಗಳು (ಇಂಗ್ಲಿಷ್‌ನಲ್ಲಿ ಬರೆದಿರುವ)

ಜನರು

  • ನಿಗದಿತ ಖಾತೆಯಿಂದ ಟ್ವೀಟ್‌ಗಳು (“@TwitterComms” ಇಂದ ಮಾಡಿದ ಟ್ವೀಟ್‌)
  • ನಿಗದಿತ ಖಾತೆಗೆ ಪ್ರತಿಕ್ರಿಯೆಯಾಗಿ ಕಳುಹಿಸಿದ ಟ್ವೀಟ್‌ಗಳು (“@TwitterComms” ಗೆ ನೀಡಿದ ಪ್ರತಿಕ್ರಿಯೆ)
  • ನಿಗದಿತ ಖಾತೆಯನ್ನು ನಮೂದು ಮಾಡಿದ ಟ್ವೀಟ್‌ಗಳು (“@TwitterComms” ಅನ್ನು ಒಳಗೊಂಡಿರುವ ಟ್ವೀಟ್).

ಸ್ಥಳಗಳು

  • ಭೌಗೋಳಿಕ ಸ್ಥಳದಿಂದ ಕಳುಹಿಸಿದ ಟ್ವೀಟ್‌ಗಳು ಉ.ದಾ. ನಿಗದಿತ ನಗರ, ರಾಜ್ಯ, ದೇಶ
    • ಭೌಗೋಳಿಕ ಸ್ಥಳ ಆಯ್ಕೆ ಮಾಡಲು ಸ್ಥಳ ಡ್ರಾಪ್‌ಡೌನ್‌ ಬಳಸಿ

ದಿನಾಂಕಗಳು

  • ನಿಗದಿತ ದಿನಾಂಕಕ್ಕೂ ಮೊದಲು, ನಿಗದಿತ ದಿನಾಂಕದ ನಂತರ ಅಥವಾ ದಿನಾಂಕ ಶ್ರೇಣಿಯೊಳಗೆ ಕಳುಹಿಸಿದ ಟ್ವೀಟ್‌ಗಳು
    • "ಇಂದ" ದಿನಾಂಕ, "ಗೆ" ದಿನಾಂಕ ಅಥವಾ ಎರಡನ್ನೂ ಆಯ್ಕೆ ಮಾಡಲು ಕ್ಯಾಲೆಂಡರ್ ಡ್ರಾಪ್‌ಡೌನ್‌ ಬಳಸಿ
  • ಮೊದಲ ಸಾರ್ವಜನಿಕ ಟ್ವೀಟ್‌ನಿಂದ ಯಾವುದೇ ಇಂದ ದಿನಾಂಕದ ಟ್ವೀಟ್‌ಗಳಿಗಾಗಿ ಹುಡುಕಿ

ಸುಧಾರಿತ ಹುಡುಕಾಟದಲ್ಲಿ ಕ್ಷೇತ್ರಗಳನ್ನು ಸಂಯೋಜಿಸುವ ಮೂಲಕ, ಪರಿಣಾಮಕಾರಿ ವಿಧಾನದಲ್ಲಿ ನಿಮ್ಮ ಹುಡುಕಾಟ ಫಲಿತಾಂಶಗಳನ್ನು ರೂಪಿಸಬಹುದು. ಉದಾಹರಣೆಗೆ, ಡಿಸೆಂಬರ್ 30, 2013 ಮತ್ತು ಜನವರಿ 2, 2014ರ ಮಧ್ಯೆ "ಹೊಸ ವರ್ಷ" ಹೊಂದಿರುವ, ಆದರೆ "ನಿಲುವಳಿ" ಅನ್ನು ಹೊಂದಿಲ್ಲದ ಟ್ವೀಟ್‌ಗಳನ್ನು ಹುಡುಕಬಹುದು. ಅಥವಾ 2014 ಜುಲೈನಲ್ಲಿ ಬ್ರೆಜಿಲ್‌ನಿಂದ ಕಳುಹಿಸಿದ '#ವಿಶ್ವಕಪ್' ಹ್ಯಾಶ್‌ಟ್ಯಾಗ್‌ನೊಂದಿಗೆ ಇಂಗ್ಲಿಷ್‌ನಲ್ಲಿನ ಟ್ವೀಟ್‌ಗಳನ್ನು ನೀವು ಹುಡುಕಬಹುದು.

Bookmark or share this article