TweetDeck ನಲ್ಲಿ ತಂಡಗಳ ಸೌಲಭ್ಯವನ್ನು ಬಳಸುವ ಬಗೆ

ಪಾಸ್‌ವರ್ಡ್ ಅನ್ನು ಹಂಚಿಕೊಳ್ಳುವ ಅಗತ್ಯವಿಲ್ಲದೇ Twitter ಖಾತೆಯನ್ನು ಹಂಚಿಕೊಳ್ಳಲು ಹಲವು ವ್ಯಕ್ತಿಗಳಿಗೆ TweetDeck ತಂಡಗಳ ಸೌಲಭ್ಯವು ಅನುವು ಮಾಡುತ್ತದೆ.

ತನ್ನದೇ Twitter ಖಾತೆಯೊಂದಿಗೆ TweetDeck ಗೆ ತಂಡದ ಸದಸ್ಯರು ಲಾಗಿನ್ ಮಾಡಿದಾಗ ತಮ್ಮ ಖಾತೆಗಳ ಟ್ಯಾಬ್‌ನಲ್ಲಿ ಮತ್ತು ತಮ್ಮ ಹೊಸ ಟ್ವೀಟ್ ಪ್ಯಾನೆಲ್ನಲ್ಲಿ ಹಂಚಿದ ಖಾತೆ ಕಾಣಿಸುತ್ತದೆ. ತಮ್ಮ ಖಾತೆಯನ್ನು (ಹಾಗೂ ಅವರ TweetDeck ನಲ್ಲಿನ ಯಾವುದೇ ಹೆಚ್ಚುವರಿ ಖಾತೆಗಳನ್ನು) ಸುರಕ್ಷಿತಗೊಳಿಸುವ ಲಾಗಿನ್ ಪರಿಶೀಲನೆಯನ್ನು ತಮ್ಮ ಖಾತೆಗಳಿಗೆ ತಂಡದ ಸದಸ್ಯರು ಸಕ್ರಿಯಗೊಳಿಸಬಹುದು.

ತಂಡಗಳ ಸೌಲಭ್ಯದಿಂದ, ಇತರ ವ್ಯಕ್ತಿಗೆ ತಮ್ಮ ಪಾಸ್‌ವರ್ಡ್ಅನ್ನು ಹಂಚಿಕೊಳ್ಳದೆಯೇ ವ್ಯಕ್ತಿಯ ಖಾತೆ ಪ್ರವೇಶವನ್ನು ಖಾತೆ ಮಾಲೀಕರು ಪಡೆಯಬಹುದು:

ಮಾಲೀಕರು

  • ಪಾಸ್‌ವರ್ಡ್, ಫೋನ್ ನಂಬರ್‌ ಮತ್ತು ಲಾಗಿನ್ ಪರಿಶೀಲನೆ ಸೆಟ್ಟಿಂಗ್‌ಗಳನ್ನು ನಿರ್ವಹಿಸಬಹುದು.
  • ಅಡ್ಮಿನ್‌ಗಳು ಅಥವಾ ಕೊಡುಗೆದಾರರಾಗಿ ಖಾತೆಗೆ ಪ್ರವೇಶ ಪಡೆಯಲು ಇತರರನ್ನು ಆಹ್ವಾನಿಸಬಹುದಾಗಿದೆ.
  • ತಂಡದ ಖಾತೆ (ಟ್ವೀಟ್, ಮರುಟ್ವೀಟ್‌, ನೇರ ಸಂದೇಶ, ಇಷ್ಟ ಇತ್ಯಾದಿ) ಪರವಾಗಿ ಕ್ರಮ ತೆಗೆದುಕೊಳ್ಳಬಹುದು, ಟ್ವೀಟ್‌ಗಳನ್ನು ಶೆಡ್ಯೂಲ್ಮಾಡಬಹುದು, ಪಟ್ಟಿ ರಚಿಸಬಹುದು ಮತ್ತು ಕಲೆಕ್ಷನ್‌ಗಳನ್ನು ನಿರ್ಮಿಸಬಹುದು.

ಅಡ್ಮಿನ್

  • ಅಡ್ಮಿನ್‌ಗಳು ಅಥವಾ ಕೊಡುಗೆದಾರರಾಗಿ ಖಾತೆಗೆ ಪ್ರವೇಶ ಪಡೆಯಲು ಇತರರನ್ನು ಆಹ್ವಾನಿಸಬಹುದಾಗಿದೆ.
  • ತಂಡದ ಖಾತೆ (ಟ್ವೀಟ್, ಮರುಟ್ವೀಟ್‌, ನೇರ ಸಂದೇಶ, ಇಷ್ಟ ಇತ್ಯಾದಿ) ಪರವಾಗಿ ಕ್ರಮ ತೆಗೆದುಕೊಳ್ಳಬಹುದು, ಟ್ವೀಟ್‌ಗಳನ್ನು ಶೆಡ್ಯೂಲ್ಮಾಡಬಹುದು, ಪಟ್ಟಿ ರಚಿಸಬಹುದು ಮತ್ತು ಕಲೆಕ್ಷನ್‌ಗಳನ್ನು ನಿರ್ಮಿಸಬಹುದು.

ಕೊಡುಗೆದಾರರು

  • ತಂಡದ ಖಾತೆ (ಟ್ವೀಟ್, ಮರುಟ್ವೀಟ್‌, ನೇರ ಸಂದೇಶ, ಇಷ್ಟ ಇತ್ಯಾದಿ) ಪರವಾಗಿ ಕ್ರಮ ತೆಗೆದುಕೊಳ್ಳಬಹುದು, ಟ್ವೀಟ್‌ಗಳನ್ನು ಶೆಡ್ಯೂಲ್ಮಾಡಬಹುದು, ಪಟ್ಟಿ ರಚಿಸಬಹುದು ಮತ್ತು ಕಲೆಕ್ಷನ್‌ಗಳನ್ನು ನಿರ್ಮಿಸಬಹುದು.

ಖಾತೆ ಕ್ರಮಗಳು ಕ್ಲೈಂಟ್‌ನಿಂದ ಸ್ವಲ್ಪ ಮಟ್ಟಿಗೆ ಬದಲಾಗಬಹುದು. TweetDeck ಮೂಲಕ ಹೇಗೆ ಆರಂಭಿಸುವುದು ಎಂಬುದರ ಸೂಚನೆಗಳಿಗಾಗಿ, ಈ ಮುಂದಿನ ಲೇಖನಗಳನ್ನು ಓದಿ:

Note: ದೃಢೀಕೃತ ಅಡ್ಮಿನ್‌ಗಳು ಮತ್ತು ಕೊಡುಗೆದಾರರಿಂದ ತಮ್ಮ ಖಾತೆಗಳಲ್ಲಿ ಪೋಸ್ಟ್ ಆದ ಕಂಟೆಂಟ್‌ಗೆ ಖಾತೆ ಮಾಲೀಕರು ಜವಾಬ್ದಾರರಾಗಿರುತ್ತಾರೆ.

ಖಾತೆಗೆ ಹಂಚಿಕೆ ಪ್ರವೇಶಾವಕಾಶ

ನಿಮ್ಮ ತಂಡವನ್ನು ಸೆಟಪ್‌ ಮಾಡಲು:

  1. ನೀವು ಪ್ರವೇಶಾವಕಾಶವನ್ನು ಹಂಚಿಕೊಳ್ಳಲು ಬಯಸುವ ಖಾತೆಯೊಂದಿಗೆ TweetDeck ಗೆ ಲಾಗಿನ್‌ ಮಾಡಿ
  2. ನ್ಯಾವಿಗೇಶನ್‌ ಬಾರ್‌ನಲ್ಲಿ ಖಾತೆಗಳು ಮೇಲೆ ಕ್ಲಿಕ್ ಮಾಡಿ.
  3. ನೀವು ಪ್ರವೇಶಾವಕಾಶ ಹಂಚಲು ಬಯಸುವ ಖಾತೆಯನ್ನು ಆಯ್ಕೆ ಮಾಡಿ ಮತ್ತು ತಂಡ ನಿರ್ವಹಿಸಿ ಬಟನ್ ಕ್ಲಿಕ್ ಮಾಡಿ.
  4. ನೀವು ಆಹ್ವಾನಿಸಲು ಬಯಸುವ ವ್ಯಕ್ತಿಯ ಹೆಸರು ಅಥವಾ @ಬಳಕೆದಾರರಹೆಸರನ್ನು ತಂಡದ ಸದಸ್ಯರನ್ನು ಸೇರಿಸಿ ಕ್ಷೇತ್ರದಲ್ಲಿ ಟೈಪ್‌ಮಾಡಿ
  5. ದೃಢೀಕರಿಸಿ ಕ್ಲಿಕ್ ಮಾಡಿ. ಯಾರನ್ನಾದರೂ ನೀವು ಒಮ್ಮೆ ದೃಢೀಕರಿಸಿದರೆ, ಒಂದು ಇಮೇಲ್ ಅವರ TweetDeck ನ ಖಾತೆಗಳ ಪ್ಯಾನೆಲ್‌ನಲ್ಲಿ ಆಹ್ವಾನ ಮತ್ತು ಪುಶ್ ಅಧಿಸೂಚನೆಯನ್ನು ಅವರು ಸ್ವೀಕರಿಸುತ್ತಾರೆ.
  6. ಹಂಚಿಕೊಂಡ ಖಾತೆಯ ಬಳಕೆ ಆರಂಭಿಸಲು ಆಹ್ವಾನವನ್ನು ಹೊಸ ತಂಡದ ಸದಸ್ಯರು ಸಮ್ಮತಿಸಬೇಕು.

Note: ನಿಮ್ಮದೇ TweetDeck ಇಂದ ತಂಡವನ್ನು ನಿರ್ವಹಿಸಲು ಸಾಧ್ಯವಾಗುವಂತೆ ಅಡ್ಮಿನ್ ಆಗಿ ನೀವು ನಿಮ್ಮದೇ ಟ್ವಿಟರ್ ಖಾತೆಯನ್ನು ನೀವು ಸೇರಿಸಬೇಕಾಗಬಹುದು. ನೀವು ಗರಿಷ್ಠ 200 ತಂಡದ ಸದಸ್ಯರನ್ನು ಸೇರಿಸಬಹುದು.

ತಂಡ ನಿರ್ವಹಣೆ

ಹಂಚಿದ ಖಾತೆಯ ಮಾಲೀಕರು ಮಾತ್ರ ಪಾಸ್‌ವರ್ಡ್‌ ಫೋನ್‌ ನಂಬರ್‌ ಮತ್ತು ಲಾಗಿನ್‌ ಪರಿಶೀಲನೆ ಸೆಟ್ಟಿಂಗ್‌ಗಳನ್ನು ನಿರ್ವಹಿಸುತ್ತಾರೆ.

ಮಾಲೀಕರು ಮತ್ತು ಅಡ್ಮಿನ್‌ಗಳಿಬ್ಬರೂ ತಂಡವನ್ನು ನಿರ್ವಹಿಸಬಹುದಾಗಿದೆ.

TweetDeck ಮೂಲಕ ಪಾತ್ರವನ್ನು ಬದಲಿಸಲು ಅಥವಾ ತಂಡದ ಸದಸ್ಯರನ್ನು ತೆಗೆದುಹಾಕಲು:

  1. ನ್ಯಾವಿಗೇಶನ್‌ ಬಾರ್‌ನಲ್ಲಿ ಖಾತೆಗಳ ಮೇಲೆ ಕ್ಲಿಕ್ ಮಾಡಿ.
  2. ನೀವು ನಿರ್ವಹಿಸಲು ಬಯಸುವ ಖಾತೆ ಆಯ್ಕೆ ಮಾಡಿ.
  3. ತಂಡದ ಸದಸ್ಯರ ಪಟ್ಟಿಯನ್ನು ತೆರೆಯಲು ತಂಡ ನಿರ್ವಹಣೆ ಮೇಲೆ ಕ್ಲಿಕ್ ಮಾಡಿ.
  4. ನೀವು ಪಾತ್ರ ಬದಲಾವಣೆ ಮಾಡಲು ಬಯಸುವ ವ್ಯಕ್ತಿಯನ್ನು ಹುಡುಕಿ ಮತ್ತು ಪಾತ್ರ ಬದಲಾವಣೆ ಮೇಲೆ ಕ್ಲಿಕ್ ಮಾಡಿ.
  5. ಕೊಡುಗೆದಾರ, ಅಡ್ಮಿನ್ ಅಥವಾ ತಂಡದಿಂದ ತೆಗೆದುಹಾಕಿ ಆಯ್ಕೆ ಮಾಡಿ.
  6. ನಿಮ್ಮ ಆಯ್ಕೆಯನ್ನು ದೃಢೀಕರಿಸಿ.

Note: ಕೊಡುಗೆದಾರರು ತಂಡದ ಖಾತೆಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿಲ್ಲ. ಕೇವಲ ಅಡ್ಮಿನ್‌ಗಳು ತಂಡವನ್ನು ನಿರ್ವಹಿಸಬಹುದು.

View instructions for:

ತಂಡವನ್ನು ಸೇರುವುದು

ತಂಡವನ್ನು ಸೇರಲು ನಿಮ್ಮನ್ನು ಆಹ್ವಾನಿಸಿದಾಗ, ಇಮೇಲ್ ಅಧಿಸೂಚನೆ ಮತ್ತು ನಿಮ್ಮ TweetDeck ಖಾತೆಯಲ್ಲಿ ಅಧಿಸೂಚನೆಯನ್ನು ಪಡೆಯುತ್ತೀರಿ. 

  1. ಮೇಲಿನ ಮೆನುವಿನಲ್ಲಿ, ನಿಮ್ಮ ಪ್ರೊಫೈಲ್ ಐಕಾನ್ ಮೇಲೆ ತಟ್ಟಿ.
  2. ತಂಡದ ವಿನಂತಿಗಳನ್ನು ತಟ್ಟಿ.
  3. ತಂಡದ ವಿನಂತಿಗಳ ಅಡಿಯಲ್ಲಿ, ಸಮ್ಮತಿಸಲು ಗುರುತು ಐಕಾನ್  ತಟ್ಟಿ ಅಥವಾ ಆಹ್ವಾನವನ್ನು ನಿರಾಕರಿಸಲು ಅಳಿಸಿ ಐಕಾನ್  ತಟ್ಟಿ

ತಂಡದ ಸದಸ್ಯರಾಗಿ, ನೀವು ಟ್ವೀಟ್‌, ನೇರ ಸಂದೇಶ ಪೋಸ್ಟ್ ಮಾಡಬಹುದು, ಇಷ್ಟಪಡಬಹುದು ಮತ್ತು ಮರುಟ್ವೀಟ್‌ ಮಾಡಬಹುದು. ನೀವು ಪಾಸ್‌ವರ್ಡ್ ಬದಲಾವಣೆ ಮಾಡಲಾಗದು ಅಥವಾ ಖಾತೆಯ ಸೆಟ್ಟಿಂಗ್‌ಗಳನ್ನು ನಿರ್ವಹಿಸಲಾಗದು.

ತಂಡವನ್ನು ಸೇರುವುದು

ತಂಡವನ್ನು ಸೇರಲು ನಿಮ್ಮನ್ನು ಆಹ್ವಾನಿಸಿದಾಗ, ಇಮೇಲ್ ಅಧಿಸೂಚನೆ ಮತ್ತು ನಿಮ್ಮ TweetDeck ಖಾತೆಯಲ್ಲಿ ಅಧಿಸೂಚನೆಯನ್ನು ಪಡೆಯುತ್ತೀರಿ. 

  1. ಮೇಲಿನ ಮೆನುವಿನಲ್ಲಿ, ನ್ಯಾವಿಗೇಶನ್ ಮೆನು ಐಕಾನ್  ಅಥವಾ ನಿಮ್ಮ ಪ್ರೊಫೈಲ್ ಐಕಾನ್‌ ಕಾಣಿಸುತ್ತದೆ. ಯಾವ ಐಕಾನ್ ಇದ್ದರೂ ಅದನ್ನು ತಟ್ಟಿ.
  2. ತಂಡದ ವಿನಂತಿಗಳ ಮೇಲೆ ತಟ್ಟಿ.
  3. ತಂಡದ ವಿನಂತಿಗಳ ಅಡಿಯಲ್ಲಿ, ಸಮ್ಮತಿಸಲು ಗುರುತು ಐಕಾನ್  ತಟ್ಟಿ ಅಥವಾ ಆಹ್ವಾನವನ್ನು ನಿರಾಕರಿಸಲು ಅಳಿಸಿ ಐಕಾನ್  ತಟ್ಟಿ

ತಂಡದ ಸದಸ್ಯರಾಗಿ, ನೀವು ಟ್ವೀಟ್‌, ನೇರ ಸಂದೇಶ ಪೋಸ್ಟ್ ಮಾಡಬಹುದು, ಇಷ್ಟಪಡಬಹುದು ಮತ್ತು ಮರುಟ್ವೀಟ್‌ ಮಾಡಬಹುದು. ನೀವು ಪಾಸ್‌ವರ್ಡ್ ಬದಲಾವಣೆ ಮಾಡಲಾಗದು ಅಥವಾ ಖಾತೆಯ ಸೆಟ್ಟಿಂಗ್‌ಗಳನ್ನು ನಿರ್ವಹಿಸಲಾಗದು.

ತಂಡವನ್ನು ಸೇರುವುದು

ತಂಡವನ್ನು ಸೇರಲು ನಿಮ್ಮನ್ನು ಆಹ್ವಾನಿಸಿದಾಗ, ಇಮೇಲ್ ಅಧಿಸೂಚನೆ ಮತ್ತು ನಿಮ್ಮ TweetDeck ಖಾತೆಯಲ್ಲಿ ಅಧಿಸೂಚನೆಯನ್ನು ಪಡೆಯುತ್ತೀರಿ. 

  1. TweetDeck ಇಂದ: ನ್ಯಾವಿಗೇಶನ್‌ ಬಾರ್‌ನಲ್ಲಿ ಖಾತೆಗಳ ಮೇಲೆ ಕ್ಲಿಕ್ ಮಾಡಿ. ಸೇರುವಂತೆ ನಿಮ್ಮನ್ನು ಆಹ್ವಾನಿಸಿದ ತಂಡದ Twitter ಖಾತೆ ನಿಮಗೆ ಕಾಣಿಸುತ್ತದೆ.
  2. ಸಮ್ಮತಿ ಅಥವಾ ನಿರಾಕರಣೆ ಕ್ಲಿಕ್ ಮಾಡಿ.
  3. ನೀವು ಸಮ್ಮತಿಸಿದರೆ, ಖಾತೆಗಳು ಟ್ಯಾಬ್‌ನಲ್ಲಿ ಮತ್ತು ನಿಮ್ಮ ಹೊಸ ಟ್ವೀಟ್ ಪ್ಯಾನೆಲ್‌ನಲ್ಲಿ ಖಾತೆಯು ಕಾಣಿಸುತ್ತದೆ.

ತಂಡದ ಸದಸ್ಯರಾಗಿ, ನೀವು ಟ್ವೀಟ್‌, ನೇರ ಸಂದೇಶ ಪೋಸ್ಟ್ ಮಾಡಬಹುದು, ಇಷ್ಟಪಡಬಹುದು ಮತ್ತು ಮರುಟ್ವೀಟ್‌ ಮಾಡಬಹುದು. ನೀವು ಪಾಸ್‌ವರ್ಡ್ ಬದಲಾವಣೆ ಮಾಡಲಾಗದು ಅಥವಾ ಖಾತೆಯ ಸೆಟ್ಟಿಂಗ್‌ಗಳನ್ನು ನಿರ್ವಹಿಸಲಾಗದು.

ನಿಮ್ಮನ್ನು ತಂಡದಿಮದ ತೆಗೆದುಹಾಕುವುದು

ನೀವು ತಂಡದಲ್ಲಿ ಇರಲು ಬಯಸದಿದ್ದರೆ, ತಂಡದಿಂದ ನಿಮ್ಮನ್ನು ನೀವು ತೆಗೆದುಹಾಕಿಕೊಳ್ಳಬಹುದು.

TweetDeck ಮೂಲಕ ನಿಮ್ಮನ್ನು ತಂಡದಿಂದ ತೆಗೆದುಹಾಕಿಕೊಳ್ಳಲು:

  1. ನ್ಯಾವಿಗೇಶನ್‌ ಬಾರ್‌ನಲ್ಲಿ ಖಾತೆಗಳ ಮೇಲೆ ಕ್ಲಿಕ್ ಮಾಡಿ.
  2. ನಿಮ್ಮನ್ನು ನೀವು ತೆಗೆದುಹಾಕಿಕೊಳ್ಳಲು ಬಯಸಿದ ತಂಡದ ಖಾತೆಯನ್ನು ಆಯ್ಕೆ ಮಾಡಿ.
  3. ತಂಡ ತೊರೆಯಿರಿ ಮೇಲೆ ಕ್ಲಿಕ್ ಮಾಡಿ.
  4. ತೊರೆ ಎಂಬುದನ್ನು ಕ್ಲಿಕ್ ಮಾಡುವ ಮೂಲಕ ನಿಮ್ಮ ಆಯ್ಕೆಯನ್ನು ದೃಢೀಕರಿಸಿ.

ತಂಡಗಳನ್ನು ಸೇರಲು ನಾನು ಆಹ್ವಾನ ಸ್ವೀಕರಿಸಲು ಬಯಸುವುದಿಲ್ಲ. ನನ್ನ ಸೆಟ್ಟಿಂಗ್‌ಗ್ಳನ್ನು ನಾನು ಬದಲಿಸುವುದು ಹೇಗೆ?

ನಿಮ್ಮನ್ನು ತಂಡಗಳಿಗೆ ಯಾರು ಆಹ್ವಾನಿಸಬಹುದು ಎಂಬುದನ್ನು ಹೊಂದಿಸಲು twitter.com ನಲ್ಲಿ ನಿಮ್ಮ ಗೌಪ್ಯತೆ ಮತ್ತು ಸುರಕ್ಷತೆ ತಂಡದ ತಂಡಗಳಿಗಾಗಿ Twitter ವಿಭಾಗದಲ್ಲಿ ನಿಮ್ಮ ಸೆಟ್ಟಿಂಗ್‌ಗಳಲ್ಲಿ ನೀವು ಬದಲಿಸಬಹುದು.

ಒಂದು ಖಾತೆಗೆ ನಾನು ಈ ಹಿಂದೆ ಪಾಸ್ವರ್ಡ್ನೀಡಿದ್ದೇನೆ. ಈಗ ಪ್ರವೇಶಾವಕಾಶ ಹೊಂದಿರುವವರನ್ನು ನಾನು ನಿರ್ವಹಿಸುವುದು ಹೇಗೆ?

ತುಂಬಾ ಹಿಂದೆ ಪಾಸ್‌ವರ್ಡ್ಅನ್ನು ಪಡೆದವರು ಹಾಗೂ ಕೊಡುಗೆದಾರರು ಅಥವಾ ಅಡ್ಮಿನ್‌ಗಳಾಗಿ ಸೇರಿಸಲ್ಪಟ್ಟವರು ಸೇರಿದಂತೆ TweetDeck ನಲ್ಲಿ ಈ ಖಾತೆಗೆ ಪ್ರಸ್ತುತ ಪ್ರವೇಶಾವಕಾಶ ಹೊಂದಿರುವ ಎಲ್ಲರನ್ನೂ ತಂಡದ ಸದಸ್ಯರ ಪಟ್ಟಿಯಲ್ಲಿ ತೋರಿಸಲಾಗಿರುತ್ತದೆ.

ಪ್ರವೇಶಾವಕಾಶ ಹೊಂದಬಾರದ ವ್ಯಕ್ತಿಯನ್ನು ಪಟ್ಟಿಯಲ್ಲಿ ತೋರಿಸಲಾಗಿದ್ದರೆ, ವ್ಯಕ್ತಿಯ ಪಕ್ಕದಲ್ಲಿರುವ ಪಾತ್ರ ಬದಲಿಸಿ ಮೇಲೆ ಕ್ಲಿಕ್ ಮಾಡಿ ಮತ್ತು ತಂಡದಿಂದ ತೆಗೆಯಿರಿ ಆಯ್ಕೆ ಮಾಡಿ. ಇದರಿಂದ TweetDeck ನಲ್ಲಿ ಆ ವ್ಯಕ್ತಿಯ ಪ್ರವೇಶಾವಕಾಶವನ್ನು ಹಿಂಪಡೆಯಲಾಗುತ್ತದೆ. ಹೆಚ್ಚುವರಿ ಸುರಕ್ಷತೆಗೆ, ನಿಮ್ಮ ಪಾಸ್ವರ್ಡ್‌ ಬದಲಿಸಿ ಮತ್ತು ನಿಮ್ಮ ಖಾತೆಯ ಪ್ರವೇಶಾವಕಾಶಕ್ಕೆ ಯಾವ ಅಪ್ಲಿಕೇಶನ್‌ಗಳು ದೃಢೀಕರಿಸಲ್ಪಟ್ಟಿವೆ ಎಂಬುದನ್ನು twitter.com/settings/applications ಇಲ್ಲಿ ಮರುಪರಿಶೀಲಿಸಿ.

TweetDeck ನಲ್ಲಿ ನಾನು ಬಳಸುವ ಇತರ ಖಾತೆಗಳನ್ನೂ ನಾನು ಹೊಂದಿದ್ದೇನೆ. ತಂಡವನ್ನು ನಾನು ನಿರ್ವಹಿಸುವುದು ಹೇಗೆ?

ನೀವು ಕೂಡ ಉಪ ಖಾತೆಯನ್ನು ಹೊಂದಲು ಬಯಸಿದರೆ ಮತ್ತು ತಂಡದ ಸದಸ್ಯರ ಪಟ್ಟಿಯನ್ನು ವೀಕ್ಷಿಸಲು ಮತ್ತು ನಿರ್ವಹಿಸಲು ಬಯಸಿದರೆ, ನೀವು ಪ್ರಸ್ತುತ ಲಾಗಿನ್ ಆಗಿರುವ ಖಾತೆಯಿಂದ ಲಾಗ್ ಔಟ್ಆಗಿ ಮತ್ತು ನಂತರ ನಿರೀಕ್ಷಿತ ಖಾತೆಗೆ ಪುನಃ ಲಾಗಿನ್‌ ಮಾಡಿ.

ನನ್ನ Twitter ಖಾತೆಗೆ TweetDeck ಪ್ರವೇಶಾವಕಾಶವನ್ನು ಹಿಂಪಡೆದರೆ ನನ್ನ ತಂಡದ ಸದಸ್ಯರಿಗೆ ಏನಾಗುತ್ತದೆ?

TweetDeck ನಲ್ಲಿ ತಂಡದ ಪಟ್ಟಿಯಿಂದ ತಂಡದ ಸದಸ್ಯರನ್ನು ತೆಗೆಯುವವರೆಗೂ ನಿಮ್ಮ Twitterಖಾತೆಗೆ ಅವರ ಪ್ರವೇಶಾವಕಾಶವನ್ನು ಕಳೆದುಕೊಳ್ಳುವುದಿಲ್ಲ. TweetDeck ಗೆ ಅಪ್ಲಿಕೇಶನ್‌ ಪ್ರವೇಶಾವಕಾಶ ಹಿಂಪಡೆದರೆ ತಂಡದ ಸದಸ್ಯರ ಪಟ್ಟಿಯನ್ನು ಬಾಧಿಸುವುದಿಲ್ಲ.

ನನ್ನ Twitter ಖಾತೆಯ ಪಾಸ್‌ವರ್ಡ್ ಬದಲಿಸಿದರೆ ನನ್ನ ತಂಡದ ಸದಸ್ಯರಿಗೆ ಏನಾಗುತ್ತದೆ?

ನೀವು ಪಾಸ್‌ವರ್ಡ್‌ ಬದಲಿಸಿದರೆ ನಿಮ್ಮ ತಂಡದ ಸದಸ್ಯರು ಖಾತೆಯ ಪ್ರವೇಶಾವಕಾಶವನ್ನು ಕಳೆದುಕೊಳ್ಳುವುದಿಲ್ಲ. ನೀವು ಮಾತ್ರ (ಮಾಲೀಕರು ಅಥವಾ ಖಾತೆಯನ್ನು ನಿರ್ವಹಿಸುವ ವ್ಯಕ್ತಿ) ನಿಮ್ಮ ಪಾಸ್‌ವರ್ಡ್‌ ತಿಳಿದಿರುವಂತೆ ನೀವು ಪಾಸ್‌ವರ್ಡ್ಅನ್ನು ಅಪ್‌ಡೇಟ್‌ ಮಾಡಲುಡಲು ನಿಮ್ಮನ್ನು ನಾವು ಪ್ರೋತ್ಸಾಹಿಸುತ್ತೇವೆ.

TweetDeck ಹೊರಗೆ ನಾನು ತಂಡಗಳನ್ನು ಬಳಸಬಹುದೇ?

ತಂಡಗಳ ಸೌಲಭ್ಯವು ಕೇವಲ TweetDeck ನಲ್ಲಿ ಲಭ್ಯವಿದೆ.

TweetDeck ಬಳಸದೇ ನಾನು ತಂಡವನ್ನು ನಿರ್ವಹಿಸಬಹುದೇ?

ತಂಡ ನಿರ್ವಹಣೆ ಸೌಲಭ್ಯಗಳು ಕೇವಲ TweetDeck ನಲ್ಲಿ ಲಭ್ಯವಿದೆ ಹೊಸ ಸದಸ್ಯರನ್ನು ಸೇರಿಸಲು ಅಥವಾ ಪ್ರಸ್ತುತ ಸದಸ್ಯರ ಪಾತ್ರವನ್ನು ಬದಲಿಸಲು, TweetDeck ಗೆ ನೀವು ಲಾಗಿನ್‌ ಮಾತಾಡಬೇಕು.

ನನ್ನ ತಂಡದ ಸದಸ್ಯರು ತಮ್ಮ ಖಾತೆಯನ್ನು ಸುರಕ್ಷಿತವಾಗಿ ಇಡುವಂತೆ ಖಚಿತಪಡಿಸಿಕೊಳ್ಳುವುದು ಹೇಗೆ

ತಂಡಗಳ ಸೌಲಭ್ಯವನ್ನು ಬಳಸುವುದು ಎಂದರೆ, ನಿಮ್ಮ ತಂಡದ ಸದಸ್ಯರು TweetDeck ಗೆ ತಮ್ಮ Twitter ಖಾತೆಯಿಂದ ಲಾಗಿನ್‌ ಮಾಡುವುದು ಎಂದಾಗಿದೆ. ಎಲ್ಲ ಹಂಚಿದ ಖಾತೆಗಳನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುವುದಕ್ಕಾಗಿ TweetDeck ಗೆ ಅವರು ಲಾಗಿನ್‌ ಮಾಡುವ ಖಾತೆಗೆ ಲಾಗಿನ್ ಪರಿಶೀಲನೆಯನ್ನು ಅವರು ಸಕ್ರಿಯಗೊಳಿಸಬಹುದು.

ತಂಡದ ಖಾತೆಗಳ ಇಮೇಲ್ಅಧಿಸೂಚನೆಗಳ ಚಂದಾದಾರಿಕೆಯನ್ನು ನಾನು ರದ್ದುಗೊಳಿಸುವುದು ಹೇಗೆ?

ತಂಡದ ಖಾತೆಗೆ ನಿಮ್ಮನ್ನು ಆಹ್ವಾನಿಸಿದಾಗ ಮತ್ತು ನಿಮ್ಮ ಒಂದು ಖಾತೆಯ ತಂಡದಲ್ಲಿ ಒಬ್ಬರಾಗುವಂತೆ ಯಾರನ್ನೋ ಆಹ್ವಾನಿಸಿದಾಗ ಇಮೇಲ್ಅಧಿಸೂಚನೆಯನ್ನು Twitter ಕಳುಹಿಸುತ್ತದೆ. ನಿಮ್ಮ ತಂಡದ ಬಗ್ಗೆ ಇದೊಂದು ಪ್ರಮುಖ ಅಧಿಸೂಚನೆಯಾಗಿದ್ದು, ಇದಕ್ಕೆ ಚಂದಾದಾರಿಕೆ ರದ್ದು ಆಯ್ಕೆ ಇರಬಾರದು ಎಂದು ನಾವು ಭಾವಿಸಿದ್ದೇವೆ. “ನಿಮ್ಮನ್ನು ಆಹ್ವಾನಿಸಲಾಗಿದೆ” ಇಮೇಲ್ ಅಧಿಸೂಚನೆಗಳನ್ನು ಸ್ವೀಕರಿಸಲು ನೀವು ಬಯಸಿದರೆ, twitter.com ನಲ್ಲಿ ಗೌಪ್ಯತೆ ಮತ್ತು ಸುರಕ್ಷತೆ ಸೆಟ್ಟಿಂಗ್ಗಗಳನ್ನು ಭೇಟಿ ಮಾಡುವ ಮೂಲಕ ತಂಡಕ್ಕೆ ಯಾರು ನಿಮ್ಮನ್ನು ಆಹ್ವಾನಿಸಬೇಕು ಎಂಬುದರ ಸೆಟ್ಟಿಂಗ್‌ಗಳನ್ನು ನೀವು ಬದಲಿಸಬಹುದು.

ನನ್ನ ತಂಡಕ್ಕೆ ಯಾವುದೇ ನಿರ್ದಿಷ್ಟ ವ್ಯಕ್ತಿಯನ್ನು ನಾನು ಸೇರಿಸಲಾಗುತ್ತಿಲ್ಲ. ನಾನು ಏನು ಮಾಡಲಿ?

ವ್ಯಕ್ತಿಯನ್ನು ತಂಡಕ್ಕೆ ಸೇರಿಸುವುದರಿಂದ ತಡೆಯುವ ಗೌಪ್ಯತೆ ಸೆಟ್ಟಿಂಗ್ಗಳನ್ನು ಅವರು ಸಕ್ರಿಯಗೊಳಿಸಿರಬಹುದು. ಇದೇ ಕಾರಣವಾಗಿದೆಯೇ ಎಂಬುದನ್ನು ಪರಿಶೀಲಿಸಲು ತಂಡದ ಸದಸ್ಯರೊಂದಿಗೆ ಮಾತನಾಡಿ. ಹೊಸ ಆಹ್ವಾನವನ್ನು ಸಮ್ಮತಿಸಲು twitter.com ರಲ್ಲಿನ ಗೌಪ್ಯತೆ ಮತ್ತು ಸುರಕ್ಷತೆ ಸೆಟ್ಟಿಂಗ್ಸ್‌ ಪುಟದಲ್ಲಿ ತಂಡಗಳಿಗಾಗಿ Twitter ವಿಭಾಗದಲ್ಲಿ ಸೆಟ್ಟಿಂಗ್ ಅನ್ನು ಅವರು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಬಹುದು.

Bookmark or share this article