ಟ್ವೀಟ್‌ಗೆ ನಿಮ್ಮ ಸ್ಥಳವನ್ನು ಸೇರಿಸುವ ಬಗೆ

ಗಮನಿಸಿ: ಈ ಲಕ್ಷಣವನ್ನು ಸಕ್ರಿಯಗೊಳಿಸುವ ಮೂಲಕ ನೀವು ಟ್ವೀಟ್‌ ಮಾಡುತ್ತಿರುವ ಸ್ಥಳವನ್ನು ನಿಮ್ಮ ಟ್ವೀಟ್‌ನ ಭಾಗವಾಗಿ Twitter ತೋರಿಸುತ್ತದೆ.

Android ಗಾಗಿ Twitter, iOS ಗಾಗಿ Twitter, twitter.com ಅಥವಾ ಇತರ ಮೊಬೈಲ್‌ ಅಪ್ಲಿಕೇಶನ್‍ಗಳನ್ನು ಬಳಸಿ ನಿಮ್ಮ ಟ್ವೀಟ್‌ಗಳಿಗೆ ಸ್ಥಳವನ್ನು ಸೇರಿಸಲು ಆಯ್ಕೆ ಮಾಡಿಕೊಳ್ಳಬಹುದು. ಉದಾಹರಣೆಗೆ: ನಿಮ್ಮ ಟ್ವೀಟ್‌ಗೆ ಹೆಚ್ಚುವರಿ ಸ್ಥಳ ವಿಷಯವನ್ನು ನೀಡುವುದಕ್ಕಾಗಿ, "ಸೋಮಾ, ಸ್ಯಾನ್ ಫ್ರಾನ್ಸಿಸ್ಕೋ" ದಂತಹ ಸಾಮಾನ್ಯ ಸ್ಥಳ ಲೇಬಲ್‌ ಅನ್ನು ನೀವು ಸೇರಿಸಬಹುದು. ಸ್ಥಳಗಳ ಆಯ್ಕೆಯಲ್ಲಿ Android ಗಾಗಿ Twitter, iOS ಗಾಗಿ Twitter ನಲ್ಲಿ, ನಿಗದಿತ ವಹಿವಾಟು, ಲ್ಯಾಂಡ್‌ಮಾರ್ಕ್ ಅಥವಾ ಇತರ ಹಿತಾಸಕ್ತಿಯ ಹೆಸರಿನೊಂದಿಗೆ ನಿಮ್ಮ ಟ್ವೀಟ್‌ ಅನ್ನು ಲೇಬಲ್ ಮಾಡಬಹುದು. ಈ ಸ್ಥಳಗಳನ್ನು Foursquare ಮತ್ತು Yelp ನಿಂದ ನೀಡಲಾಗಿರುತ್ತದೆ.

Android ಗಾಗಿ Twitter, iOS ಗಾಗಿ Twitter ಅನ್ನು ನೀವು ಬಳಸುತ್ತಿದ್ದರೆ, ನೀವು ಆಯ್ಕೆ ಮಾಡುವ ಸ್ಥಳ ಲೇಬಲ್‌ಗೆ ಹೆಚ್ಚುವರಿಯಾಗಿ ಟ್ವೀಟ್‌ ನಿಮ್ಮ ನಿಖರ ಸ್ಥಳವನ್ನೂ ಒಳಗೊಂಡಿರಬಹುದು (ಅಂದರೆ ನೀವು ಟ್ವೀಟ್‌ ಮಾಡಿದಲ್ಲಿಂದ ಜಿಪಿಎಸ್‌ ಕೋಆರ್ಡಿನೇಟ್‌ಗಳು), ಇದನ್ನು Twitter API ಮೂಲಕ ಕಂಡುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೋಡಿ.

ನಿಮ್ಮ ಸ್ಥಳದೊಂದಿಗೆ ಟ್ವೀಟ್ ಮಾಡುವುದು
ನಿಮ್ಮ ಟ್ವೀಟ್‌ಗಳಿಗೆ ಸ್ಥಳವನ್ನು ಸೇರಿಸಲು:
ಹಂತ 1

ನಿಮ್ಮ ಸಾಧನದಲ್ಲಿ ನಿಖರ ಸ್ಥಳವನ್ನು ಸಕ್ರಿಯಗೊಳಿಸಿದಾಗ, ನೀವು ಸಾಮಾನ್ಯವಾಗಿ ಮಾಡುವಂತೆ ಟ್ವೀಟ್‌ ಸಂಯೋಜನೆ ಮಾಡಿ. ನಿಮ್ಮ ಟ್ವೀಟ್‌ಗಳಿಗೆ ಈಗಾಗಲೇ ನೀವು ಸ್ಥಳವನ್ನು ಲಗತ್ತಿಸಿಲ್ಲದಿದ್ದರೆ, ನಿಖರ ಸ್ಥಳವನ್ನು ನೀವು ಸಕ್ರಿಯಗೊಳಿಸಲು ಬಯಸಿದ್ದೀರೇ ಎಂಬುದನ್ನು ಕೇಳುವ ಸೂಚನೆಯನ್ನು ನೀವು ನೋಡಬಹುದು.

ಹಂತ 2

ನೀವು ಆಯ್ಕೆ ಮಾಡುವ ಸ್ಥಳಗಳ ಪಟ್ಟಿಯನ್ನು ತೆರೆಯಲು ಟ್ವೀಟ್‌ ಸಂಯೋಜನೆ ಬಾಕ್ಸ್‌ನಲ್ಲಿನ ಸ್ಥಳ ಐಕಾನ್  ತಟ್ಟಿ.

ಹಂತ 3

ನಿಮ್ಮ ಟ್ವೀಟ್‌ಗೆ ನೀವು ಸೇರಿಸಲು ಬಯಸುವ ಸ್ಥಳವನ್ನು ಆಯ್ಕೆ ಮಾಡಿ.  

ಹಂತ 4

ಆಪ್‌ ಒಳಗಿನ ಕ್ಯಾಮೆರಾದಲ್ಲಿ ಸೆರೆಹಿಡಿದ ನಿಮ್ಮ ಟ್ವೀಟ್‌ನ ಫೋಟೋವನ್ನು ನೀವು ಲಗತ್ತಿಸುತ್ತಿದ್ದರೆ, ಸ್ಥಳ ಐಕಾನ್ ತಟ್ಟಿ ಮತ್ತು ನಿಮ್ಮ ನಿಖರ ಸ್ಥಳವು (ರೇಖಾಂಶ ಮತ್ತು ಅಕ್ಷಾಂಶ) ಟ್ವೀಟ್‌ಗೆ ಲಗತ್ತಿಸುತ್ತದೆ ಮತ್ತು API ಮೂಲಕ ಹುಡುಕಬಹುದಾಗಿರುತ್ತದೆ. 

ಹಂತ 5

ನೀವು ಟ್ವೀಟ್‌ ಮಾಡಿದಾಗ iOS ಗಾಗಿ Twitter ನ ಹಿಂದಿನ ಆವೃತ್ತಿಗಳಿಗೆ ನಿಮ್ಮ ಆಯ್ದ ಸ್ಥಳದ ಹೆಸರು ಮತ್ತು ನಿಮ್ಮ ಸಾಧನದ (ಇದನ್ನು API ಮೂಲಕ ಕಂಡುಕೊಳ್ಳಬಹುದು) ನಿಖರ ಸ್ಥಳಗಳೆರಡನ್ನೂ ನಿಮ್ಮ ಟ್ವೀಟ್ ಒಳಗೊಂಡಿರುತ್ತದೆ. 

ಹಂತ 6

ಇದೇ ಸಾಧನದಲ್ಲಿ Twitter ಆಪ್ ಬಳಸಿ ನೀವು ಮುಂದಿನ ಬಾರಿ ಟ್ವೀಟ್‌ ಮಾಡುವಾಗ, ನಿಮ್ಮ ಪ್ರಸ್ತುತ ಸ್ಥಳವನ್ನು ಬಳಸಿ ನಿಮ್ಮ ಸಾಮಾನ್ಯ ಸ್ಥಳವು ನಿಮ್ಮ ಟ್ವೀಟ್‌ನೊಂದಿಗೆ ಸ್ವಯಂಚಾಲಿತವಾಗಿ ಪ್ರದರ್ಶಿಸಲಾಗುತ್ತದೆ. iOS ಗಾಗಿ Twitter 6.26 ಕ್ಕೂ ಮೊದಲಿನ ಆವೃತ್ತಿಯಲ್ಲಿ ಸಾಮಾನ್ಯ ಸ್ಥಳದೊಂದಿಗೆ ನಿಮ್ಮ ನಿಖರ ಸ್ಥಳವನ್ನು ಸ್ವಯಂಚಾಲಿತವಾಗಿ ಟ್ವೀಟ್‌ನೊಂದಿಗೆ (ಮತ್ತು API ಮೂಲಕ ಕಂಡುಕೊಳ್ಳಬಹುದಾದ) ಲಗತ್ತಿಸಲ್ಪಡುತ್ತದೆ. 

ನಿಮ್ಮ ಟ್ವೀಟ್‌ಗಳಲ್ಲಿ ನಿಮ್ಮ ಸ್ಥಳವನ್ನೂ ಸೇರಿಸುವುದನ್ನು ನಿಲ್ಲಿಸಲು:
ಹಂತ 1

ಟ್ವೀಟ್‌ ಸಂಯೋಜನೆ ಐಕಾನ್‌ ತಟ್ಟಿ.

ಹಂತ 2

ಸ್ಥಳಗಳ ಡ್ರಾಪ್‌ಡೌನ್ ಪಟ್ಟಿಯನ್ನು ತೆರೆಯಲು ಸ್ಥಳ ಐಕಾನ್‌ ತಟ್ಟಿ  

ಹಂತ 3

ನಿಮ್ಮ ಪ್ರಸ್ತುತ ಸ್ಥಳವನ್ನು ಹೈಲೈಟ್‌ ಮಾಡಲಾಗುತ್ತದೆ. ಟ್ವೀಟ್‌ನಿಂದ ನಿಮ್ಮ ಸ್ಥಳ ಮಾಹಿತಿಯನ್ನು ತೆಗೆಯಲು ಎಡ ಮೇಲ್ಭಾಗದಲ್ಲಿರುವ X ತಟ್ಟಿ. ಟ್ವೀಟ್‌ಗೆ ಸ್ಥಳವನ್ನು ಸೇರಿಸಿ ಆಯ್ಕೆ ಮಾಡುವವರೆಗೂ ಭವಿಷ್ಯದ ಟ್ವೀಟ್‌ಗಳಲ್ಲಿ ಸ್ಥಳ ಮಾಹಿತಿಯು ಕಾಣಿಸಿಕೊಳ್ಳುವುದಿಲ್ಲ. 

ನಿಮ್ಮ ಟ್ವೀಟ್‌ಗಳಿಗೆ ಸ್ಥಳವನ್ನು ಸೇರಿಸಲು:
ಹಂತ 1

ನಿಮ್ಮ ಸಾಧನದಲ್ಲಿ ನಿಖರ ಸ್ಥಳವನ್ನು ಸಕ್ರಿಯಗೊಳಿಸಿದಾಗ, ನೀವು ಸಾಮಾನ್ಯವಾಗಿ ಮಾಡುವಂತೆ ಟ್ವೀಟ್‌ ಸಂಯೋಜನೆ ಮಾಡಿ. ನಿಮ್ಮ ಟ್ವೀಟ್‌ಗಳಿಗೆ ಈಗಾಗಲೇ ನೀವು ಸ್ಥಳವನ್ನು ಲಗತ್ತಿಸಿಲ್ಲದಿದ್ದರೆ, ನಿಖರ ಸ್ಥಳವನ್ನು ನೀವು ಸಕ್ರಿಯಗೊಳಿಸಲು ಬಯಸಿದ್ದೀರೇ ಎಂಬುದನ್ನು ಕೇಳುವ ಸೂಚನೆಯನ್ನು ನೀವು ನೋಡಬಹುದು.

ಹಂತ 2

ನೀವು ಆಯ್ಕೆ ಮಾಡುವ ಸ್ಥಳಗಳ ಪಟ್ಟಿಯನ್ನು ತೆರೆಯಲು ಟ್ವೀಟ್‌ ಸಂಯೋಜನೆ ಬಾಕ್ಸ್‌ನಲ್ಲಿನ ಸ್ಥಳ ಐಕಾನ್  ತಟ್ಟಿ.

ಹಂತ 3

ನಿಮ್ಮ ಟ್ವೀಟ್‌ಗೆ ನೀವು ಸೇರಿಸಲು ಬಯಸುವ ಸ್ಥಳವನ್ನು ಆಯ್ಕೆ ಮಾಡಿ.  

ಹಂತ 4

ಆಪ್‌ ಒಳಗಿನ ಕ್ಯಾಮೆರಾದಲ್ಲಿ ಸೆರೆಹಿಡಿದ ನಿಮ್ಮ ಟ್ವೀಟ್‌ನ ಫೋಟೋವನ್ನು ನೀವು ಲಗತ್ತಿಸುತ್ತಿದ್ದರೆ, ಸ್ಥಳ ಐಕಾನ್ ತಟ್ಟಿ ಮತ್ತು ನಿಮ್ಮ ನಿಖರ ಸ್ಥಳವು (ರೇಖಾಂಶ ಮತ್ತು ಅಕ್ಷಾಂಶ) ಟ್ವೀಟ್‌ಗೆ ಲಗತ್ತಿಸುತ್ತದೆ ಮತ್ತು API ಮೂಲಕ ಹುಡುಕಬಹುದಾಗಿರುತ್ತದೆ. 

ಹಂತ 5

ನೀವು ಟ್ವೀಟ್‌ ಮಾಡಿದಾಗ Android ಗಾಗಿ Twitter ನ ಹಿಂದಿನ ಆವೃತ್ತಿಗಳಿಗೆ ನಿಮ್ಮ ಆಯ್ದ ಸ್ಥಳದ ಹೆಸರು ಮತ್ತು ನಿಮ್ಮ ಸಾಧನದ (ಇದನ್ನು API ಮೂಲಕ ಕಂಡುಕೊಳ್ಳಬಹುದು) ನಿಖರ ಸ್ಥಳಗಳೆರಡನ್ನೂ ನಿಮ್ಮ ಟ್ವೀಟ್ ಒಳಗೊಂಡಿರುತ್ತದೆ. 

ಹಂತ 6

ಇದೇ ಸಾಧನದಲ್ಲಿ Twitter ಆಪ್ ಬಳಸಿ ನೀವು ಮುಂದಿನ ಬಾರಿ ಟ್ವೀಟ್‌ ಮಾಡುವಾಗ, ನಿಮ್ಮ ಪ್ರಸ್ತುತ ಸ್ಥಳವನ್ನು ಬಳಸಿ ನಿಮ್ಮ ಸಾಮಾನ್ಯ ಸ್ಥಳವು ನಿಮ್ಮ ಟ್ವೀಟ್‌ನೊಂದಿಗೆ ಸ್ವಯಂಚಾಲಿತವಾಗಿ ಪ್ರದರ್ಶಿಸಲಾಗುತ್ತದೆ. Android ಗಾಗಿ Twitter 5.55 ಕ್ಕೂ ಮೊದಲಿನ ಆವೃತ್ತಿಯಲ್ಲಿ ಸಾಮಾನ್ಯ ಸ್ಥಳದೊಂದಿಗೆ ನಿಮ್ಮ ನಿಖರ ಸ್ಥಳವನ್ನು ಸ್ವಯಂಚಾಲಿತವಾಗಿ ಟ್ವೀಟ್‌ನೊಂದಿಗೆ (ಮತ್ತು API ಮೂಲಕ ಕಂಡುಕೊಳ್ಳಬಹುದಾದ) ಲಗತ್ತಿಸಲ್ಪಡುತ್ತದೆ. 

ನಿಮ್ಮ ಟ್ವೀಟ್‌ಗಳಲ್ಲಿ ನಿಮ್ಮ ಸ್ಥಳವನ್ನೂ ಸೇರಿಸುವುದನ್ನು ನಿಲ್ಲಿಸಲು:
ಹಂತ 1

ಟ್ವೀಟ್‌ ಸಂಯೋಜನೆ ಐಕಾನ್‌ ತಟ್ಟಿ.

ಹಂತ 2

ಸ್ಥಳಗಳ ಡ್ರಾಪ್‌ಡೌನ್ ಪಟ್ಟಿಯನ್ನು ತೆರೆಯಲು ಸ್ಥಳ ಐಕಾನ್‌ ತಟ್ಟಿ  

ಹಂತ 3

ನಿಮ್ಮ ಪ್ರಸ್ತುತ ಸ್ಥಳವನ್ನು ಹೈಲೈಟ್‌ ಮಾಡಲಾಗುತ್ತದೆ. ಟ್ವೀಟ್‌ನಿಂದ ನಿಮ್ಮ ಸ್ಥಳ ಮಾಹಿತಿಯನ್ನು ತೆಗೆಯಲು ಎಡ ಮೇಲ್ಭಾಗದಲ್ಲಿರುವ "X" ತಟ್ಟಿ. ಟ್ವೀಟ್‌ಗೆ ಸ್ಥಳವನ್ನು ಸೇರಿಸಿ ಆಯ್ಕೆ ಮಾಡುವವರೆಗೂ ಭವಿಷ್ಯದ ಟ್ವೀಟ್‌ಗಳಲ್ಲಿ ಸ್ಥಳ ಮಾಹಿತಿಯು ಕಾಣಿಸಿಕೊಳ್ಳುವುದಿಲ್ಲ. 

ನಿಮ್ಮ ಟ್ವೀಟ್‌ಗಳಿಗೆ ಸ್ಥಳವನ್ನು ಸೇರಿಸಲು:
ಹಂತ 1

ಎಡ ನ್ಯಾವಿಗೇಶನ್‌ ಮೆನುವಿನಲ್ಲಿ, ಇನ್ನಷ್ಟು  ಐಕಾನ್‌ ಆಯ್ಕೆ ಮಾಡಿ. 

ಹಂತ 2

ಸೆಟ್ಟಿಂಗ್‌ಗಳು ಮತ್ತು ಸುರಕ್ಷತೆ, ನಂತರ ಗೌಪ್ಯತೆ ಮತ್ತು ಸುರಕ್ಷತೆಗೆ ಹೋಗಿ.

ಹಂತ 3

ಡೇಟಾ ಹಂಚಿಕೆ ಮತ್ತು Twitter ಹೊರಗಿನ ಚಟುವಟಿಕೆ ಅಡಿಯಲ್ಲಿ, ಸ್ಥಳ ಮಾಹಿತಿಗೆ ಹೋಗಿ.

ಹಂತ 4

ನಿಮ್ಮ ಟ್ವೀಟ್‌ಗೆ ಸ್ಥಳ ಮಾಹಿತಿ ಸೇರಿಸಿ ಎಂಬುದಕ್ಕೆ ಹೋಗಿ.

ಹಂತ 5

ಬಾಕ್ಸ್ ಅನ್ನು ಗುರುತು ಮಾಡಿದರೆ, ನಿಮ್ಮ ಟ್ವೀಟ್‌ಗೆ ಲಗತ್ತಿಸಿದ ನಿಮ್ಮ ಸ್ಥಳ ಮಾಹಿತಿಯನ್ನು ಆನ್ ಮಾಡಲಾಗಿದೆ ಎಂದರ್ಥ. ಟ್ವೀಟ್ ಸ್ಥಳವನ್ನು ಆಫ್‌ ಮಾಡಲು, ಬಾಕ್ಸ್‌ ಗುರುತು ತೆಗೆಯಿರಿ.

ನಿಮ್ಮ ಟ್ವೀಟ್‌ಗಳಿಗೆ ಲಗತ್ತಿಸಿದ ಎಲ್ಲ ಸ್ಥಳ ಮಾಹಿತಿಯನ್ನು ತೆಗೆದುಹಾಕಲು, ಬಾಕ್ಸ್‌ ಕೆಳಗಿನ ಕೆಂಪು ಪಠ್ಯವನ್ನು ಕ್ಲಿಕ್ ಮಾಡಿ ಅಥವಾ ತಟ್ಟಿ ಮತ್ತು ಅಳಿಸಿ ಎಂಬುದನ್ನು ಆಯ್ಕೆ ಮಾಡುವ ಮೂಲಕ ನೀವು ಮುಂದುವರಿಯಲು ಬಯಸಿದ್ದೀರಿ ಎಂಬುದನ್ನು ದೃಢೀಕರಿಸಿ.

ಗಮನಿಸಿ: Twitter ನಲ್ಲಿ ಸ್ಥಳ ಮಾಹಿತಿಯನ್ನು ಅಳಿಸಿದರೆ ತೃತೀಯ ಪಕ್ಷದ ಅಪ್ಲಿಕೇಶನ್‌ಗಳು ಅಥವಾ ಬಾಹ್ಯ ಹುಡುಕಾಟ ಫಲಿತಾಂಶಗಳಲ್ಲಿ ಡೇಟಾದ ಎಲ್ಲ ಪ್ರತಿಗಳಿಂದ ಮಾಹಿತಿಯನ್ನು ತೆಗೆದುಹಾಕಲಾಗುತ್ತದೆ ಎಂಬುದನ್ನು ಖಚಿತಪಡಿಸುವುದಿಲ್ಲ ಎಂದು ಗಮನಿಸುವುದು ಮುಖ್ಯವಾಗಿದೆ. ಹೆಚ್ಚುವರಿಯಾಗಿ, ನೇರ ಸಂದೇಶಗಳ ಮೂಲಕ ಹಂಚಿಕೊಂಡ ಸ್ಥಳಗಳನ್ನು ಈ ಸೆಟ್ಟಿಂಗ್‌ ತೆಗೆದುಹಾಕುವುದಿಲ್ಲ.

ಕೆಲವು ಕ್ಷೇತ್ರಗಳಲ್ಲಿ, ನಿಗದಿತ ವ್ಯವಹಾರ, ಲ್ಯಾಂಡ್‌ಮಾರ್ಕ್ ಅಥವಾ ಹಿತಾಸಕ್ತಿ ಅಂಶದೊಂದಿಗೆ ನಿಮ್ಮ ಟ್ವೀಟ್‌ ಅನ್ನು ಲೇಬಲ್‌ ಮಾಡುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ. ಈ ಸ್ಥಳಗಳನ್ನು Foursquare ಮತ್ತು Yelp ಇಂದ ಪಡೆಯಲಾಗಿರುತ್ತದೆ. ನಿರ್ದಿಷ್ಟ ಟ್ವೀಟ್‌ ಅವಹೇಳನಕಾರಿ ಎಂದು ನೀವು ನಂಬಿದ್ದರೆ, ಇಲ್ಲಿನ ಸೂಚನೆಗಳನ್ನು ಅನುಸರಿಸುವ ಮೂಲಕ ದಯವಿಟ್ಟು Twitter ಗೆ ವರದಿ ಮಾಡಿ.

ಈ ಲೇಖನ ಹಂಚಿಕೊಳ್ಳಿ