ಜನರಿಗೆ ಚಿತ್ರಗಳು ಪ್ರವೇಶಿಸುವಂತೆ ಮಾಡುವ ಬಗೆ

iOS ಅಥವಾ Android ಗಾಗಿ Twitter ಆಪ್‌ ಅಥವಾ twitter.com ಬಳಸಿ ಫೋಟೋಗಳನ್ನು ನೀವು ಟ್ವೀಟ್‌ ಮಾಡುವಾಗ, ದೃಶ್ಯ ವೈಕಲ್ಯ ಹೊಂದಿರುವವರಿಗೆ ಕಂಟೆಂಟ್‌ ಲಭ್ಯವಾಗುವಂತೆ ಮಾಡಲು ವಿವರಣೆಯನ್ನು ಸಂಯೋಜಿಸುವ ಆಯ್ಕೆಯನ್ನು ನೀವು ಹೊಂದಿರುತ್ತೀರಿ.

ಚಿತ್ರ ವಿವರಣೆ ಸಂಯೋಜಿಸಿ ಸೆಟ್ಟಿಂಗ್‌ ಸಕ್ರಿಯಗೊಳಿಸುವುದು ಮತ್ತು ಇವುಗಳನ್ನು ಬಳಸಿ ಚಿತ್ರ ವಿವರಗಳನ್ನು ಸಂಯೋಜಿಸಲು ಸೂಚನೆಗಳ ಬಗ್ಗೆ ಈ ಲೇಖನವು ಮಾಹಿತಿಯನ್ನು ಒಳಗೊಂಡಿದೆ:

View instructions for:

ಚಿತ್ರ ವಿವರಣೆಗಳನ್ನು ಹೊಂದಿಸುವ ಬಗೆ

iOS ಗಾಗಿ Twitter ಇಂದ ಚಿತ್ರ ವಿವರಗಳನ್ನು ಸಂಯೋಜಿಸುವ ಬಗೆ 

 1. ಮೇಲಿನ ಮೆನುವಿನಲ್ಲಿ, ನಿಮ್ಮ ಪ್ರೊಫೈಲ್ ಐಕಾನ್ ಅನ್ನು ತಟ್ಟಿ, ನಂತರ ಸೆಟ್ಟಿಂಗ್​ಗಳು ಮತ್ತು ಗೌಪ್ಯತೆ ಅನ್ನು ತಟ್ಟಿ.
 2. ಸಾಮಾನ್ಯ ಅಡಿಯಲ್ಲಿ ಪ್ರವೇಶಿಸುವಿಕೆ ತಟ್ಟಿ.
 3. ಸೆಟ್ಟಿಂಗ್ ಆನ್ ಅಥವಾ ಆಫ್‌ ಮಾಡಲು ಚಿತ್ರ ವಿವರಣೆ ಸಂಯೋಜಿಸಿ ಪಕ್ಕದಲ್ಲಿರುವ ಸ್ಲೈಡರ್ ಅನ್ನು ಎಳೆಯಿರಿ.

iOS ಗಾಗಿ Twitter ಇಂದ ಚಿತ್ರ ವಿವರಗಳನ್ನು ಸೇರಿಸುವ ಬಗೆ 

 1. ಟ್ವೀಟ್ ಸಂಯೋಜನೆ  ಐಕಾನ್ ತಟ್ಟುವ ಮೂಲಕ ಆರಂಭಿಸಿ ಮತ್ತು ನಿಮ್ಮ ಫೋಟೋ(ಗಳನ್ನು) ಲಗತ್ತಿಸಿ.
  ಗಮನಿಸಿ: ನಿಮ್ಮ ಟ್ವೀಟ್‌ಗಳಿಗೆ ಫೋಟೋಗಳನ್ನು ಸೇರಿಸುವ ಬಗ್ಗೆ ವಿವರವಾದ ಸೂಚನೆಗಳಿಗಾಗಿ, ಈ ಲೇಖನ ಓದಿ.
 2. ಚಿತ್ರದಲ್ಲಿ, ವಿವರಣೆ ಪಠ್ಯ ಸೇರಿಸಲು ವಿವರಣೆ ಸೇರಿಸಿ ತಟ್ಟಿ.
 3. ಚಿತ್ರದ ವಿವರಣೆಯನ್ನು ಟೈಪ್ ಮಾಡಿ ಮತ್ತು ಅನ್ವಯಿಸು ತಟ್ಟಿ. ಟ್ವೀಟ್ ಪೋಸ್ಟ್ ಮಾಡುವುದಕ್ಕೂ ಮೊದಲು ಎಡಿಟ್ ಮಾಡಲು ಪುನಃ ವಿವರಣೆ ತಟ್ಟಿ. (420 ಅಕ್ಷರಗಳ ಮಿತಿ ಇದೆ.)
 4. ಒಂದು ಟ್ವೀಟ್‌ನಲ್ಲಿ ಪ್ರತಿ ಚಿತ್ರಕ್ಕೂ ನೀವು ವಿವರಣೆ ಸೇರಿಸಬಹುದು.
  ಗಮನಿಸಿ: GIFಗಳು ಅಥವಾ ವೀಡಿಯೋಗಳಿಗೆ ಚಿತ್ರ ವಿವರಣೆಗಳನ್ನು ಸೇರಿಸಲಾಗದು.

ಚಿತ್ರ ವಿವರಣೆಗಳನ್ನು ಹೊಂದಿಸುವ ಬಗೆ

Android ಗಾಗಿ Twitter ಇಂದ ಚಿತ್ರ ವಿವರಗಳ ಸಂಯೋಜನೆ ಸಕ್ರಿಯಗೊಳಿಸುವ ಬಗೆ

 1. ಮೇಲ್ಭಾಗದ ಮೆನುವಿನಲ್ಲಿ, ನೀವು ನ್ಯಾವಿಗೇಶನ್ ಮೆನು ಐಕಾನ್  ಅಥವಾ ನಿಮ್ಮ ಪ್ರೊಫೈಲ್ ಐಕಾನ್ ನೋಡುತ್ತೀರಿ. ನೀವು ಹೊಂದಿರುವ ಯಾವುದೇ ಐಕಾನ್ ಅನ್ನು ತಟ್ಟಿ.
 2. ಸೆಟ್ಟಿಂಗ್​ಗಳು ಮತ್ತು ಗೌಪ್ಯತೆ ತಟ್ಟಿ.
 3. ಸಾಮಾನ್ಯ ಅಡಿಯಲ್ಲಿ ಪ್ರವೇಶಿಸುವಿಕೆ ತಟ್ಟಿ.
 4. ಸೆಟ್ಟಿಂಗ್ ಆನ್ ಅಥವಾ ಆಫ್‌ ಮಾಡಲು ಚಿತ್ರ ವಿವರಣೆ ಸಂಯೋಜಿಸಿ ಪಕ್ಕದಲ್ಲಿರುವ ಬಾಕ್ಸ್‌ ಗುರುತು ಮಾಡಿ.

Android ಗಾಗಿ Twitter ಇಂದ ಚಿತ್ರ ವಿವರಗಳನ್ನು ಸೇರಿಸುವ ಬಗೆ

 1. ಟ್ವೀಟ್ ಐಕಾನ್  ತಟ್ಟುವ ಮೂಲಕ ಆರಂಭಿಸಿ ಮತ್ತು ನಿಮ್ಮ ಫೋಟೋ(ಗಳನ್ನು) ಲಗತ್ತಿಸಿ.
  ಗಮನಿಸಿ: ನಿಮ್ಮ ಟ್ವೀಟ್‌ಗಳಿಗೆ ಫೋಟೋಗಳನ್ನು ಸೇರಿಸುವ ಬಗ್ಗೆ ವಿವರವಾದ ಸೂಚನೆಗಳಿಗಾಗಿ, ಈ ಲೇಖನ ಓದಿ.
 2. ಚಿತ್ರದಲ್ಲಿ, ವಿವರಣೆ ಪಠ್ಯ ಸೇರಿಸಲು ವಿವರಣೆ ಸೇರಿಸಿ ತಟ್ಟಿ.
 3. ಚಿತ್ರದ ವಿವರಣೆಯನ್ನು ಟೈಪ್ ಮಾಡಿ ಮತ್ತು ಅನ್ವಯಿಸು ತಟ್ಟಿ. ಟ್ವೀಟ್ ಪೋಸ್ಟ್ ಮಾಡುವುದಕ್ಕೂ ಮೊದಲು ಎಡಿಟ್ ಮಾಡಲು ಪುನಃ ವಿವರಣೆ ತಟ್ಟಿ. (420 ಅಕ್ಷರಗಳ ಮಿತಿ ಇದೆ.)
 4. ಒಂದು ಟ್ವೀಟ್‌ನಲ್ಲಿ ಪ್ರತಿ ಚಿತ್ರಕ್ಕೂ ನೀವು ವಿವರಣೆ ಸೇರಿಸಬಹುದು.
  ಗಮನಿಸಿ: GIF‌ಗಳು ಅಥವಾ ವೀಡಿಯೋಗಳಿಗೆ ಚಿತ್ರ ವಿವರಣೆಗಳನ್ನು ಸೇರಿಸಲಾಗದು.

ಚಿತ್ರ ವಿವರಣೆಗಳನ್ನು ಹೊಂದಿಸುವ ಬಗೆ

twitter.com ಇಂದ ಚಿತ್ರ ವಿವರಗಳ ಸಂಯೋಜನೆ ಸಕ್ರಿಯಗೊಳಿಸುವ ಬಗೆ

 1. ಇನ್ನಷ್ಟು ಐಕಾನ್  ಮೇಲೆ ಕ್ಲಿಕ್ ಮಾಡಿ ಮತ್ತು ಡ್ರಾಪ್‌ಡೌನ್‌ನಿಂದ (ಅಥವಾ “g” ಕೀ ಒತ್ತಿ, ನಂತರ ತಕ್ಷಣವೇ “s” ಕೀ ಒತ್ತಿ) ಸೆಟ್ಟಿಂಗ್​ಗಳು ಮತ್ತು ಗೌಪ್ಯತೆ ಆಯ್ಕೆ ಮಾಡಿ.
 2. ಸೆಟ್ಟಿಂಗ್‌ಗಳ ಪಟ್ಟಿಯಿಂದ ಪ್ರವೇಶಿಸುವಿಕೆ ಕ್ಲಿಕ್ ಮಾಡಿ.
 3. ಚಿತ್ರ ವಿವರಣೆಗಳನ್ನು ಸಂಯೋಜಿಸಿ ಚೆಕ್‌ಬಾಕ್ಸ್‌ ಕಂಡುಕೊಳ್ಳಿ.
 4. ಸೆಟ್ಟಿಂಗ್ ಆನ್ ಅಥವಾ ಆಫ್‌ ಮಾಡಲು ಬಾಕ್ಸ್‌ ಗುರುತು ಮಾಡಿ.

twitter.com ಇಂದ ಟ್ವೀಟ್‌ಗಳಲ್ಲಿ ಚಿತ್ರ ವಿವರಣೆಗಳನ್ನು ಸೇರಿಸುವ ಬಗೆ

 1. ಟ್ವೀಟ್ ಸಂಯೋಜನೆ ಬಟನ್‌ ಮೇಲೆ ಕ್ಲಿಕ್ ಮಾಡಿ ಅಥವಾ ಕೀಬೋರ್ಡ್‌ ಶಾರ್ಟ್‌ಕಟ್‌ ಬಳಸುವುದಾದರೆ “n” ಕೀ ಒತ್ತಿ.
 2. ನಿಮ್ಮ ಫೋಟೋ(ಗಳನ್ನು) ಲಗತ್ತಿಸಿ.
  ಗಮನಿಸಿ: ನಿಮ್ಮ ಟ್ವೀಟ್‌ಗಳಿಗೆ ಫೋಟೋಗಳನ್ನು ಸೇರಿಸುವ ಬಗ್ಗೆ ವಿವರವಾದ ಸೂಚನೆಗಳಿಗಾಗಿ, ಈ ಲೇಖನ ಓದಿ.
 3. ವಿವರಣೆ ಪಠ್ಯ ಸೇರಿಸಲು ವಿವರಣೆ ಸೇರಿಸಿ ಕ್ಲಿಕ್ ಮಾಡಿ.
 4. ಚಿತ್ರಕ್ಕೆ ನಿಮ್ಮ ವಿವರಣೆಯನ್ನು ಟೈಪ್ ಮಾಡಿ ಮತ್ತು ಮುಗಿದಿದೆ ಬಟನ್ ಕ್ಲಿಕ್ ಮಾಡಿ. ವಿವರಣೆಯನ್ನು ಎಡಿಟ್ ಮಾಡಲು, ಟ್ವೀಟ್ ಪೋಸ್ಟ್ ಮಾಡುವುದಕ್ಕೂ ಮುನ್ನ ವಿವರಣೆ ಸೇರಿಸಿ ಡೈಲಾಗ್ ಅನ್ನು ಪುನಃ ತೆರೆಯಿರಿ. (420 ಅಕ್ಷರಗಳ ಮಿತಿ ಇದೆ.)
 5. ಒಂದು ಟ್ವೀಟ್‌ನಲ್ಲಿ ಪ್ರತಿ ಚಿತ್ರಕ್ಕೂ ನೀವು ವಿವರಣೆ ಸೇರಿಸಬಹುದು.
  ಗಮನಿಸಿ: GIFಗಳು ಅಥವಾ ವೀಡಿಯೋಗಳಿಗೆ ಚಿತ್ರ ವಿವರಣೆಗಳನ್ನು ಸೇರಿಸಲಾಗದು.
View instructions for:

iOS ಗಾಗಿ Twitter ನಲ್ಲಿ ಹಿನ್ನೆಲೆ ಧ್ವನಿ

ಹಿನ್ನೆಲೆ ಧ್ವನಿ ಬಳಸಿ ಚಿತ್ರ ವಿವರಗಳ ಸಂಯೋಜನೆ ಸಕ್ರಿಯಗೊಳಿಸುವ ಬಗೆ

 1. ಟಚ್ ಎಕ್ಸ್‌ಪ್ಲೊರೇಶನ್‌ ಬಳಸಿ ಸ್ಕ್ರೀನ್‌ನ ಬಲ ಮೇಲ್ಭಾಗದಲ್ಲಿನ ಬಳಕೆದಾರರ ಮೆನು ಬಟನ್ ಅನ್ನು ಕಂಡುಕೊಳ್ಳಿ.
 2. ಬಳಕೆದಾರರ ಮೆನು ಬಟನ್ ಅನ್ನು ಎರಡು ಬಾರಿ ತಟ್ಟಿ.
 3. ಟಚ್ ಎಕ್ಸ್‌ಪ್ಲೊರೇಶನ್ ಅಥವಾ ಎಡ/ಬಲ ಫ್ಲಿಕ್ ಸನ್ನೆ ಬಳಸಿ ಸ್ಕ್ರೀನ್‌ನ ಮಧ್ಯದಲ್ಲಿ ಸೆಟ್ಟಿಂಗ್ಸ್‌ ಮತ್ತು ಗೌಪ್ಯತೆ ಬಟನ್‌ ಅನ್ನು ಕಂಡುಕೊಳ್ಳಿ.
 4. ಸೆಟ್ಟಿಂಗ್​ಗಳು ಮತ್ತು ಗೌಪ್ಯತೆ ಬಟನ್ ಅನ್ನು ಎರಡು ಬಾರಿ ತಟ್ಟಿ.
 5. ಟಚ್ ಎಕ್ಸ್‌ಪ್ಲೊರೇಶನ್ ಅಥವಾ ಎಡ/ಬಲ ಫ್ಲಿಕ್ ಸನ್ನೆ ಬಳಸಿ ಸ್ಕ್ರೀನ್‌ನ ಮಧ್ಯದಲ್ಲಿ ಗ್ರಾಹ್ಯತೆ ಐಟಂ ಅನ್ನು ಕಂಡುಕೊಳ್ಳಿ.
 6. ಪ್ರವೇಶಿಸುವಿಕೆ ಅನ್ನು ಎರಡು ಬಾರಿ ತಟ್ಟಿ.
 7. ಚಿತ್ರ ವಿವರಣೆಗಳನ್ನು ಸಂಯೋಜಿಸಿ ಸ್ವಿಚ್ ಬಟನ್ ಅನ್ನು ಟಚ್ ಎಕ್ಸ್‌ಪ್ಲೊರೇಶನ್ ಅಥವಾ ಎಡ/ಬಲ ಫ್ಲಿಕ್ ಸನ್ನೆಯನ್ನು ಬಳಸಿ ಕಂಡುಕೊಳ್ಳಿ.
 8. ಸೆಟ್ಟಿಂಗ್ ಆನ್ ಅಥವಾ ಆಫ್ ಮಾಡಲು ಬಟನ್ ಅನ್ನು ಎರಡು ಬಾರಿ ತಟ್ಟಿ.

ಹಿನ್ನೆಲೆ ಧ್ವನಿ ಬಳಸಿ ಟ್ವೀಟ್‌ಗಳಲ್ಲಿ ಚಿತ್ರ ವಿವರಣೆಗಳನ್ನು ಸೇರಿಸುವ ಬಗೆ

 1. ಟಚ್ ಎಕ್ಸ್‌ಪ್ಲೊರೇಶನ್‌ ಬಳಸಿ ಸ್ಕ್ರೀನ್‌ನ ಬಲ ಮೇಲ್ಭಾಗದಲ್ಲಿನ ಟ್ವೀಟ್ ಸಂಯೋಜಿಸಿ ಬಟನ್ ಅನ್ನು ಕಂಡುಕೊಳ್ಳಿ.
 2. ಟ್ವೀಟ್ ಸಂಯೋಜಿಸಿ ಬಟನ್ ಎರಡು ಬಾರಿ ತಟ್ಟಿ.
 3. ಟಚ್ ಎಕ್ಸ್‌ಪ್ಲೊರೇಶನ್ ಅಥವಾ ಎಡ/ಬಲ ಫ್ಲಿಕ್ ಸನ್ನೆ ಬಳಸಿ ಫೋಟೋ ಲೈಬ್ರರಿ ಬಟನ್‌ ಕಂಡುಕೊಳ್ಳಿ.
 4. ಚಿತ್ರ ಸೇರಿಸಲು ಫೋಟೋ ಲೈಬ್ರರಿ ಬಟನ್‌ ಅನ್ನು ಎರಡು ಬಾರಿ ತಟ್ಟಿ.
 5. ಸೇರಿಸುವ ಚಿತ್ರವನ್ನು ಕಂಡುಕೊಳ್ಳಲು ಟಚ್ ಎಕ್ಸ್‌ಪ್ಲೊರೇಶನ್ ಅಥವಾ ಎಡ/ಬಲ ಫ್ಲಿಕ್ ಸನ್ನೆ ಬಳಸಿ.
 6. ಚಿತ್ರ ಸೇರಿಸಲು ಎರಡು ಬಾರಿ ತಟ್ಟಿ ಮತ್ತು ಸಂಯೋಜಕಕ್ಕೆ ವಾಪಸಾಗಿ.
 7. ಸಂಯೋಜಕದಲ್ಲಿ, ಟಚ್ ಎಕ್ಸ್‌ಪ್ಲೊರೇಶನ್ ಅಥವಾ ಎಡ/ಬಲ ಫ್ಲಿಕ್ ಸನ್ನೆ ಬಳಸಿ ಚಿತ್ರವನ್ನು ಕಂಡುಕೊಳ್ಳಿ.
 8. ಚಿತ್ರದ ಮೇಲೆ ಗಮನ ಕೇಂದ್ರೀಕರಿಸಿರುವಾಗ, "ಫೋಟೋಗೆ ವಿವರಣೆ ಸೇರಿಸಿ" ಎಂಬುದು ಕೇಳಿಸುವವರೆಗೂ ಮೇಲೆ ಅಥವಾ ಕೆಳಗೆ ಎಳೆಯಿರಿ ಮತ್ತು ನಂತರ ಚಿತ್ರಕ್ಕೆ ವಿವರಣೆ ಸೇರಿಸಲು ಎರಡು ಬಾರಿ ತಟ್ಟಿ.
 9. ಚಿತ್ರದ ವಿವರಣೆಯನ್ನು ಟೈಪ್ ಮಾಡಿ. (420 ಅಕ್ಷರಗಳ ಮಿತಿ ಇದೆ.)
 10. ಟಚ್ ಎಕ್ಸ್‌ಪ್ಲೊರೇಶನ್ ಅಥವಾ ಎಡ/ಬಲ ಫ್ಲಿಕ್ ಸನ್ನೆ ಬಳಸಿ ಸ್ಕ್ರೀನ್‌ನ ಬಲ ಮೇಲ್ಭಾಗದಲ್ಲಿ ಅನ್ವಯಿಸು ಬಟನ್‌ ಅನ್ನು ಕಂಡುಕೊಳ್ಳಿ.
 11. ವಿವರಣೆ ಸೇರಿಸಲು ಅನ್ವಯಿಸು ಬಟನ್‌ ಅನ್ನು ಎರಡು ಬಾರಿ ತಟ್ಟಿ ಮತ್ತು ಸಂಯೋಜಕಕ್ಕೆ ವಾಪಸಾಗಿ.

ಹಿನ್ನೆಲೆ ಧ್ವನಿ ಬಳಸಿ ಟ್ವೀಟ್‌ಗಳಲ್ಲಿ ಚಿತ್ರ ವಿವರಣೆಗಳನ್ನು ಎಡಿಟ್ ಮಾಡುವ ಬಗೆ

 1. ಟ್ವೀಟ್ ಪೋಸ್ಟ್ ಮಾಡುವುದಕ್ಕೂ ಮುನ್ನ ನಿಮ್ಮ ಚಿತ್ರ ವಿವರಣೆಯನ್ನು ನೀವು ಎಡಿಟ್ ಮಾಡಬಹುದು. ಸಂಯೋಜಕದಲ್ಲಿ, ಟಚ್ ಎಕ್ಸ್‌ಪ್ಲೊರೇಶನ್ ಅಥವಾ ಎಡ/ಬಲ ಫ್ಲಿಕ್ ಸನ್ನೆ ಬಳಸಿ ಚಿತ್ರವನ್ನು ಕಂಡುಕೊಳ್ಳಿ.
 2. ಚಿತ್ರದ ಮೇಲೆ ಗಮನ ಕೇಂದ್ರೀಕರಿಸಿರುವಾಗ, "ಫೋಟೋಗೆ ವಿವರಣೆ ಎಡಿಟ್ ಮಾಡಿ" ಎಂಬುದು ಕೇಳಿಸುವವರೆಗೂ ಮೇಲೆ ಅಥವಾ ಕೆಳಗೆ ಎಳೆಯಿರಿ ಮತ್ತು ನಂತರ ಚಿತ್ರಕ್ಕೆ ವಿವರಣೆ ಸೇರಿಸಲು ಎರಡು ಬಾರಿ ತಟ್ಟಿ.
 3. ಚಿತ್ರದ ವಿವರಣೆಯನ್ನು ಬದಲಿಸಿ. (420 ಅಕ್ಷರಗಳ ಮಿತಿ ಇದೆ.)
 4. ಟಚ್ ಎಕ್ಸ್‌ಪ್ಲೊರೇಶನ್ ಅಥವಾ ಎಡ/ಬಲ ಫ್ಲಿಕ್ ಸನ್ನೆ ಬಳಸಿ ಸ್ಕ್ರೀನ್‌ನ ಬಲ ಮೇಲ್ಭಾಗದಲ್ಲಿ ಅನ್ವಯಿಸು ಬಟನ್‌ ಅನ್ನು ಕಂಡುಕೊಳ್ಳಿ.
 5. ವಿವರಣೆ ಸೇರಿಸಲು ಅನ್ವಯಿಸು ಬಟನ್‌ ಅನ್ನು ಎರಡು ಬಾರಿ ತಟ್ಟಿ ಮತ್ತು ಸಂಯೋಜಕಕ್ಕೆ ವಾಪಸಾಗಿ.

Android ಗಾಗಿ Twitter ನಲ್ಲಿ TalkBack

TalkBack ಬಳಸಿ ಚಿತ್ರ ವಿವರಗಳ ಸಂಯೋಜನೆ ಸಕ್ರಿಯಗೊಳಿಸುವ ಬಗೆ

 1. ಟಚ್ ಎಕ್ಸ್‌ಪ್ಲೊರೇಶನ್ ಅಥವಾ ಎಡ/ಬಲ ಫ್ಲಿಕ್ ಸನ್ನೆ ಬಳಸಿ ಸ್ಕ್ರೀನ್‌ನ ಬಲ ಮೇಲ್ಭಾಗದಲ್ಲಿ ನ್ಯಾವಿಗೇಶನ್ ಡ್ರಾಯರ್‌ ಬಟನ್‌ ಅನ್ನು ಕಂಡುಕೊಳ್ಳಿ.
 2. ಮೆನು ತೆರೆಯಲು ನ್ಯಾವಿಗೇಶನ್ ಡ್ರಾಯರ್ ಬಟನ್‌ ಅನ್ನು ಎರಡು ಬಾರಿ ತಟ್ಟಿ.
 3. ಮೆನುವಿನಲ್ಲಿ, ಟಚ್ ಎಕ್ಸ್‌ಪ್ಲೊರೇಶನ್ ಅಥವಾ ಎಡ/ಬಲ ಫ್ಲಿಕ್ ಸನ್ನೆ ಬಳಸಿ ಸೆಟ್ಟಿಂಗ್ಸ್ ಮತ್ತು ಗೌಪ್ಯತೆ ಐಟಂ ಅನ್ನು ಕಂಡುಕೊಳ್ಳಿ.
 4. ಸೆಟ್ಟಿಂಗ್​ಗಳು ಮತ್ತು ಗೌಪ್ಯತೆ ಬಟನ್ ಅನ್ನು ಎರಡು ಬಾರಿ ತಟ್ಟಿ.
 5. ಪ್ರವೇಶಿಸುವಿಕೆ ಐಟಂ ಅನ್ನು ಎಡ/ಬಲ ಫ್ಲಿಕ್ ಸನ್ನೆ ಬಳಸಿ ಕಂಡುಕೊಳ್ಳಿ.
 6. ಪ್ರವೇಶಿಸುವಿಕೆ ಅನ್ನು ಎರಡು ಬಾರಿ ತಟ್ಟಿ.
 7. ಚಿತ್ರ ವಿವರಣೆಗಳನ್ನು ಸಂಯೋಜಿಸಿ ಚೆಕ್‌ ಬಾಕ್ಸ್‌ ಅನ್ನು ಟಚ್ ಎಕ್ಸ್‌ಪ್ಲೊರೇಶನ್ ಅಥವಾ ಎಡ/ಬಲ ಫ್ಲಿಕ್ ಸನ್ನೆಯನ್ನು ಬಳಸಿ ಕಂಡುಕೊಳ್ಳಿ.
 8. ಸೆಟ್ಟಿಂಗ್ ಆನ್ ಅಥವಾ ಆಫ್‌ ಮಾಡಲು ಚೆಕ್‌ಬಾಕ್ಸ್ ಎರಡು ಬಾರಿ ತಟ್ಟಿ.

TalkBack ಬಳಸಿ ಟ್ವೀಟ್‌ಗಳಲ್ಲಿ ಚಿತ್ರ ವಿವರಣೆಗಳನ್ನು ಸೇರಿಸುವ ಬಗೆ

 1. ಟಚ್ ಎಕ್ಸ್‌ಪ್ಲೊರೇಶನ್‌ ಬಳಸಿ ಸ್ಕ್ರೀನ್‌ನ ಕೆಳ ಎಡಭಾಗದಲ್ಲಿನ ಬರೆಯಿರಿ ಬಟನ್ ಅನ್ನು ಕಂಡುಕೊಳ್ಳಿ.
 2. ಬರೆಯಿರಿ ಬಟನ್‌ ಅನ್ನು ಎರಡು ಬಾರಿ ತಟ್ಟಿ.
 3. ಟಚ್ ಎಕ್ಸ್‌ಪ್ಲೊರೇಶನ್ ಅಥವಾ ಎಡ/ಬಲ ಫ್ಲಿಕ್ ಸನ್ನೆ ಬಳಸಿ ಫೋಟೋಗಳು ಬಟನ್‌ ಕಂಡುಕೊಳ್ಳಿ.
 4. ಚಿತ್ರವನ್ನು ಸೇರಿಸಲು ಫೋಟೋಗಳು ಬಟನ್‌ ಅನ್ನು ಎರಡು ಬಾರಿ ತಟ್ಟಿ.
 5. ಸೇರಿಸುವ ಚಿತ್ರ ಕಂಡುಕೊಳ್ಳಲು ಟಚ್ ಎಕ್ಸ್‌ಪ್ಲೊರೇಶನ್ ಅಥವಾ ಎಡ/ಬಲ ಫ್ಲಿಕ್ ಸನ್ನೆ ಬಳಸಿ.
 6. ಚಿತ್ರ ಸೇರಿಸಲು ಎರಡು ಬಾರಿ ತಟ್ಟಿ ಮತ್ತು ಸಂಯೋಜಕಕ್ಕೆ ವಾಪಸಾಗಿ.
 7. ಸಂಯೋಜಕದಲ್ಲಿ, ಟಚ್ ಎಕ್ಸ್‌ಪ್ಲೊರೇಶನ್ ಅಥವಾ ಎಡ/ಬಲ ಫ್ಲಿಕ್ ಸನ್ನೆ ಬಳಸಿ ವಿವರಣೆ ಸೇರಿಸಿ ಬಟನ್‌ ಕಂಡುಕೊಳ್ಳಿ.
 8. ವಿವರಣೆ ಸೇರಿಸಿ ಬಟನ್‌ ಎರಡು ಬಾರಿ ತಟ್ಟಿ.
 9. ಚಿತ್ರದ ವಿವರಣೆಯನ್ನು ಟೈಪ್ ಮಾಡಿ. (420 ಅಕ್ಷರಗಳ ಮಿತಿ ಇದೆ.)
 10. ಟಚ್ ಎಕ್ಸ್‌ಪ್ಲೊರೇಶನ್ ಅಥವಾ ಎಡ/ಬಲ ಫ್ಲಿಕ್ ಸನ್ನೆ ಬಳಸಿ ಸ್ಕ್ರೀನ್‌ನ ಬಲ ಮೇಲ್ಭಾಗದಲ್ಲಿ ಅನ್ವಯಿಸು ಬಟನ್‌ ಅನ್ನು ಕಂಡುಕೊಳ್ಳಿ.
 11. ವಿವರಣೆ ಸೇರಿಸಲು ಅನ್ವಯಿಸು ಬಟನ್‌ ಅನ್ನು ಎರಡು ಬಾರಿ ತಟ್ಟಿ ಮತ್ತು ಸಂಯೋಜಕಕ್ಕೆ ವಾಪಸಾಗಿ. (ಗಮನಿಸಿ: ವಿವರಣೆಯನ್ನು ಸೇರಿಸಿದ ನಂತರ, ವಿವರಣೆಗೆ ಹೋಲಿಕೆಯಾಗುವಂತೆ ವಿವರಣೆ ಸೇರಿಸಿ ಬಟನ್‌ನ ಲೇಬಲ್‌ ಬದಲಾಗುತ್ತದೆ.)

TalkBack ಬಳಸಿ ಟ್ವೀಟ್‌ಗಳಲ್ಲಿ ಚಿತ್ರ ವಿವರಣೆಗಳನ್ನು ಎಡಿಟ್ ಮಾಡುವ ಬಗೆ

 1. ಟ್ವೀಟ್ ಪೋಸ್ಟ್ ಮಾಡುವುದಕ್ಕೂ ಮುನ್ನ ನಿಮ್ಮ ಚಿತ್ರ ವಿವರಣೆಯನ್ನು ನೀವು ಎಡಿಟ್ ಮಾಡಬಹುದು. ಟಚ್ ಎಕ್ಸ್‌ಪ್ಲೊರೇಶನ್ ಅಥವಾ ಎಡ/ಬಲ ಫ್ಲಿಕ್ ಸನ್ನೆ ಬಳಸಿ ಪ್ರಸ್ತುತ ವಿವರಣೆಯ ಲೇಬಲ್‌ ಹೊಂದಿರುವ ಬಟನ್‌ ಅನ್ನು ಕಂಡುಕೊಳ್ಳಿ.
 2. ಬಟನ್ ಅನ್ನು ಎರಡು ಬಾರಿ ತಟ್ಟಿ.
 3. ಚಿತ್ರದ ವಿವರಣೆಯನ್ನು ಬದಲಿಸಿ. (420 ಅಕ್ಷರಗಳ ಮಿತಿ ಇದೆ.)
 4. ಟಚ್ ಎಕ್ಸ್‌ಪ್ಲೊರೇಶನ್ ಅಥವಾ ಎಡ/ಬಲ ಫ್ಲಿಕ್ ಸನ್ನೆ ಬಳಸಿ ಸ್ಕ್ರೀನ್‌ನ ಬಲ ಮೇಲ್ಭಾಗದಲ್ಲಿ ಅನ್ವಯಿಸು ಬಟನ್‌ ಅನ್ನು ಕಂಡುಕೊಳ್ಳಿ.
 5. ವಿವರಣೆ ಸೇರಿಸಲು ಅನ್ವಯಿಸು ಬಟನ್‌ ಅನ್ನು ಎರಡು ಬಾರಿ ತಟ್ಟಿ ಮತ್ತು ಸಂಯೋಜಕಕ್ಕೆ ವಾಪಸಾಗಿ. (ಗಮನಿಸಿ: ವಿವರಣೆಯನ್ನು ಸೇರಿಸಿದ ನಂತರ, ವಿವರಣೆಗೆ ಹೋಲಿಕೆಯಾಗುವಂತೆ ವಿವರಣೆ ಸೇರಿಸಿ ಬಟನ್‌ನ ಲೇಬಲ್‌ ಬದಲಾಗುತ್ತದೆ.)

ಹಿನ್ನೆಲೆ ಧ್ವನಿ ಬಳಸಿ Mac ನಲ್ಲಿ twitter.com

twitter.com ಇಂದ ಚಿತ್ರ ವಿವರಗಳ ಸಂಯೋಜನೆ ಸಕ್ರಿಯಗೊಳಿಸುವ ಬಗೆ

 1. “g” ಕೀ ಒತ್ತಿ, ನಂತರ ತಕ್ಷಣವೇ “s” ಕೀ ಒತ್ತುವ ಮೂಲಕ ಸೆಟ್ಟಿಂಗ್‌ಗಳು ಮತ್ತು ಗೌಪ್ಯತೆಗೆ ನ್ಯಾವಿಗೇಟ್ ಮಾಡಿ.
 2. ವೆಬ್ ರೋಟರ್ ಅನ್ನು ಮೇಲೆ ತರಲು "ಕಂಟ್ರೋಲ್ + ಆಪ್ಷನ್ + u" ಕೀಗಳನ್ನು ಒಟ್ಟಿಗೆ ಒತ್ತಿ.
 3. ವೆಬ್ ರೋಟರ್‌ನಲ್ಲಿ ಲಿಂಕ್‌ಗಳನ್ನು ಆಯ್ಕೆ ಮಾಡಲು ಬಾಣದ ಗುರುತಿನ ಕೀ ಒತ್ತಿ.
 4. ಪ್ರವೇಶಿಸುವಿಕೆ ಐಟಂ ಅನ್ನು ಕಂಡುಕೊಳ್ಳಲು ಕೆಳ ಬಾಣದ ಗುರುತಿನ ಕೀ ಬಳಸಿ ಮತ್ತು "ಎಂಟರ್" ಕೀ ಒತ್ತಿ.
 5. ಪ್ರವೇಶಿಸುವಿಕೆ ಸೆಟ್ಟಿಂಗ್‌ಗಳಿಗೆ ನ್ಯಾವಿಗೇಟ್ ಮಾಡಲು "ಎಂಟರ್" ಒತ್ತಿ.
 6. ವೆಬ್ ರೋಟರ್ ಅನ್ನು ಮೇಲೆ ತರಲು "ಕಂಟ್ರೋಲ್ + ಆಪ್ಷನ್ + u" ಕೀಗಳನ್ನು ಒಟ್ಟಿಗೆ ಒತ್ತಿ.
 7. ವೆಬ್ ರೋಟರ್‌ನಲ್ಲಿ ಫಾರಂ ಕಂಟ್ರೋಲ್‌ಗಳನ್ನು ಆಯ್ಕೆ ಮಾಡಲು ಬಲ ಬಾಣದ ಗುರುತಿನ ಕೀ ಒತ್ತಿ.
 8. ಚಿತ್ರ ವಿವರಣೆ ಸಂಯೋಜಿಸಿ ಕಂಡುಕೊಳ್ಳಲು ಕೆಳ ಬಾಣದ ಗುರುತಿನ ಕೀ ಬಳಸಿ ಮತ್ತು "ಎಂಟರ್" ಕೀ ಒತ್ತಿ.
 9. ಸೆಟ್ಟಿಂಗ್ ಆನ್ ಅಥವಾ ಆಫ್‌ ಮಾಡಲು ಸ್ಪೇಸ್‌ಬಾರ್ ಬಳಸಿ.
 10. ವೆಬ್ ರೋಟರ್ ಅನ್ನು ಮೇಲೆ ತರಲು "ಕಂಟ್ರೋಲ್ + ಆಪ್ಷನ್ + u" ಕೀಗಳನ್ನು ಒತ್ತಿ.
 11. ಬದಲಾವಣೆಗಳನ್ನು ಉಳಿಸಿ ಕಂಡುಕೊಳ್ಳಲು ಕೆಳ ಬಾಣದ ಗುರುತಿನ ಕೀ ಬಳಸಿ ಮತ್ತು "ಎಂಟರ್" ಕೀ ಒತ್ತಿ.

twitter.com ಇಂದ ಟ್ವೀಟ್‌ಗಳಲ್ಲಿ ಚಿತ್ರ ವಿವರಣೆಗಳನ್ನು ಸೇರಿಸುವ ಬಗೆ

 1. ಟ್ವೀಟ್ ಸಂಯೋಜನೆ ಬಟನ್‌ ಅನ್ನು ಅಥವಾ ಕೀಬೋರ್ಡ್‌ ಶಾರ್ಟ್‌ಕಟ್‌ ಬಳಸಿ (“n” ಕೀ ಒತ್ತಿ) ತೆರೆಯಿರಿ.
 2. ಫೊಟೋಗಳು ಅಥವಾ ವೀಡಿಯೋ ಸೇರಿಸಿ ಬಟನ್‌ಗೆ ನ್ಯಾವಿಗೇಟ್ ಮಾಡಲು "ಟ್ಯಾಬ್" ಕೀ ಅನ್ನು ಬಳಸಿ ಮತ್ತು "ಎಂಟರ್" ಒತ್ತಿ.
 3. ಸೇರಿಸುವ ಚಿತ್ರವನ್ನು ಆಯ್ಕೆ ಮಾಡಲು ಫೈಲ್ ಸಿಸ್ಟಂ ಡೈಲಾಗ್ ಬಳಸಿ.
 4. ಸಂಯೋಜಕದಲ್ಲಿ, "ಟ್ಯಾಬ್" ಕೀ ಬಳಸಿ ನೀವು ಸೇರಿಸಿದ ಚಿತ್ರವನ್ನು ಕಂಡುಕೊಳ್ಳಿ. ಚಿತ್ರವನ್ನು ಸೇರಿಸಿದ ಅನುಕ್ರಮದ ಆಧಾರದಲ್ಲಿ ಲೇಬಲ್ ಮಾಡಲಾಗುತ್ತದೆ (ಉದಾ., "Image1")
 5. ವಿವರಣೆ ಪಠ್ಯವನ್ನು ಸೇರಿಸಲು, ಚಿತ್ರದ ಮೇಲೆ ಗಮನ ಕೇಂದ್ರೀಕರಿಸುತ್ತಲೇ "ಎಂಟರ್" ಕೀ ಒತ್ತುವ ಮೂಲಕ ಥಂಬ್‌ನೇಲ್ ಮುನ್ನೋಟ ಡೈಲಾಗ್ ಅನ್ನು ತೆರೆಯಿರಿ.
 6. ಚಿತ್ರದ ವಿವರಣೆಯನ್ನು ಟೈಪ್ ಮಾಡಿ. (420 ಅಕ್ಷರಗಳ ಮಿತಿ ಇದೆ.)
 7. "ಟ್ಯಾಬ್" ಕೀ ಒತ್ತಿ "ಎಂಟರ್" ಒತ್ತುವ ಮೂಲಕ ಅನ್ವಯಿಸು ಬಟನ್‌ ಕಂಡುಕೊಳ್ಳಿ ಮತ್ತು ಅಥವಾ "ಕಮಾಂಡ್" ಕೀ ಒತ್ತಿ ಹಿಡಿದುಕೊಂಡು ಕೇವಲ "ಎಂಟರ್" ಒತ್ತಿ.
 8. ವಿವರಣೆಯನ್ನು ಎಡಿಟ್ ಮಾಡಲು, ಟ್ವೀಟ್ ಪೋಸ್ಟ್ ಮಾಡುವುದಕ್ಕೂ ಮೊದಲು ಥಂಬ್‌ನೇಲ್ ಮುನ್ನೋಟ ಡೈಲಾಗ್ ಅನ್ನು ಪುನಃ ತೆರೆಯಿರಿ.

twitter.com ನಲ್ಲಿ Windows ಸ್ಕ್ರೀನ್ ರೀಡರ್‌ಗೆ JAWS ಬಳಕೆ

twitter.com ಇಂದ ಚಿತ್ರ ವಿವರಗಳ ಸಂಯೋಜನೆ ಸಕ್ರಿಯಗೊಳಿಸುವ ಬಗೆ

 1. JAWS ವರ್ಚುವಲ್ ನ್ಯಾವಿಗೇಶನ್ ‌ಅನ್ನು ತಾತ್ಕಾಲಿಕವಾಗಿ ಬೈಪಾಸ್ ಮಾಡಲು "ಇನ್ಸರ್ಟ್" ಮತ್ತು "3" ಕೀಗಳನ್ನು ಒಟ್ಟಿಗೆ ಒತ್ತಿ.
 2. ಮುಂದೆ ಸಾಗಲು ಕೀ ನಮೂದಿಸಿ ಎಂಬುದನ್ನು ನೀವು ಕೇಳಿಸಿಕೊಂಡ ನಂತರ, ಕೀಬೋರ್ಡ್ ಶಾರ್ಟ್‌ಕಟ್‌ ಬಳಸಿ ಸೆಟ್ಟಿಂಗ್ಸ್‌ಗೆ ನ್ಯಾವಿಗೇಟ್ ಮಾಡಿ (“g” ಕೀ ಒತ್ತಿ, ನಂತರ ತಕ್ಷಣವೇ “s” ಕೀ ಒತ್ತಿ).
 3. ಪುಟಕ್ಕೆ ಲಿಂಕ್‌ಗಳ ಪಟ್ಟಿಯನ್ನು ಮೇಲೆ ತರಲು "ಇನ್ಸರ್ಟ್" ಮತ್ತು “F7” ಕೀಗಳನ್ನು ಒತ್ತಿ.
 4. ಪ್ರವೇಶಿಸುವಿಕೆ ಐಟಂ ಅನ್ನು ಕಂಡುಕೊಳ್ಳಲು ಕೆಳ ಬಾಣದ ಗುರುತಿನ ಕೀ ಬಳಸಿ ಮತ್ತು "ಎಂಟರ್" ಕೀ ಒತ್ತಿ.
 5. ಚಿತ್ರ ವಿವರಣೆಗಳನ್ನು ಸಂಯೋಜಿಸಿ ಐಟಂ ಅನ್ನು ಕಂಡುಕೊಳ್ಳಲು “f” ಕೀ ಒತ್ತಿ.
 6. ಸೆಟ್ಟಿಂಗ್ ಆನ್ ಅಥವಾ ಆಫ್‌ ಮಾಡಲು ಸ್ಪೇಸ್‌ಬಾರ್ ಬಳಸಿ.
 7. ಬದಲಾವಣೆಗಳನ್ನು ಉಳಿಸಿ ಬಟನ್‌ ಕಂಡುಕೊಳ್ಳಲು “f” ಕೀ ಬಳಸಿ ಮತ್ತು "ಎಂಟರ್" ಕೀ ಒತ್ತಿ.

twitter.com ಇಂದ ಟ್ವೀಟ್‌ಗಳಲ್ಲಿ ಚಿತ್ರ ವಿವರಣೆಗಳನ್ನು ಸೇರಿಸುವ ಬಗೆ

 1. JAWS ವರ್ಚುವಲ್ ನ್ಯಾವಿಗೇಶನ್‌ ಅನ್ನು ತಾತ್ಕಾಲಿಕವಾಗಿ ಬೈಪಾಸ್ ಮಾಡಲು "ಇನ್ಸರ್ಟ್" ಮತ್ತು "3" ಕೀಗಳನ್ನು ಒಟ್ಟಿಗೆ ಒತ್ತಿ.
 2. ಟ್ವೀಟ್ ಸಂಯೋಜನೆ ಬಟನ್‌ ಅನ್ನು ಅಥವಾ ಕೀಬೋರ್ಡ್‌ ಶಾರ್ಟ್‌ಕಟ್‌ ಬಳಸಿ (“n” ಕೀ ಒತ್ತಿ) ತೆರೆಯಿರಿ.
 3. ಫೊಟೋಗಳು ಅಥವಾ ವೀಡಿಯೋ ಸೇರಿಸಿ ಬಟನ್‌ಗೆ ನ್ಯಾವಿಗೇಟ್ ಮಾಡಲು "ಟ್ಯಾಬ್" ಕೀ ಅನ್ನು ಬಳಸಿ ಮತ್ತು "ಎಂಟರ್" ಒತ್ತಿ.
 4. ಸೇರಿಸುವ ಚಿತ್ರವನ್ನು ಆಯ್ಕೆ ಮಾಡಲು ಫೈಲ್ ಸಿಸ್ಟಂ ಡೈಲಾಗ್ ಬಳಸಿ.
 5. ಸಂಯೋಜಕದಲ್ಲಿ, "ಟ್ಯಾಬ್" ಕೀ ಬಳಸಿ ನೀವು ಸೇರಿಸಿದ ಚಿತ್ರವನ್ನು ಕಂಡುಕೊಳ್ಳಿ. ಚಿತ್ರವನ್ನು ಸೇರಿಸಿದ ಅನುಕ್ರಮದ ಆಧಾರದಲ್ಲಿ ಲೇಬಲ್ ಮಾಡಲಾಗುತ್ತದೆ (ಉದಾ., "Image1")
 6. ವಿವರಣೆ ಪಠ್ಯವನ್ನು ಸೇರಿಸಲು, ಚಿತ್ರದ ಮೇಲೆ ಗಮನ ಕೇಂದ್ರೀಕರಿಸುತ್ತಲೇ "ಎಂಟರ್" ಕೀ ಒತ್ತುವ ಮೂಲಕ ಥಂಬ್‌ನೇಲ್ ಮುನ್ನೋಟ ಡೈಲಾಗ್ ಅನ್ನು ತೆರೆಯಿರಿ.
 7. ಚಿತ್ರದ ವಿವರಣೆಯನ್ನು ಟೈಪ್ ಮಾಡಿ. (420 ಅಕ್ಷರಗಳ ಮಿತಿ ಇದೆ.)
 8. "ಟ್ಯಾಬ್" ಕೀ ಒತ್ತಿ "ಎಂಟರ್" ಒತ್ತುವ ಮೂಲಕ ಅನ್ವಯಿಸು ಬಟನ್‌ ಕಂಡುಕೊಳ್ಳಿ ಮತ್ತು ಅಥವಾ "ಕಂಟ್ರೋಲ್‌" ಕೀ ಒತ್ತಿ ಹಿಡಿದುಕೊಂಡು ಕೇವಲ "ಎಂಟರ್" ಒತ್ತಿ.
 9. ವಿವರಣೆಯನ್ನು ಎಡಿಟ್ ಮಾಡಲು, ಟ್ವೀಟ್ ಪೋಸ್ಟ್ ಮಾಡುವುದಕ್ಕೂ ಮೊದಲು ಥಂಬ್‌ನೇಲ್ ಮುನ್ನೋಟ ಡೈಲಾಗ್ ಅನ್ನು ಪುನಃ ತೆರೆಯಿರಿ.

Twitter.com ನಲ್ಲಿ Windows ಗೆ NVDA ಸ್ಕ್ರೀನ್ ರೀಡರ್‌ ಬಳಸಿ

twitter.com ಇಂದ ಚಿತ್ರ ವಿವರಗಳ ಸಂಯೋಜನೆ ಸಕ್ರಿಯಗೊಳಿಸುವ ಬಗೆ

 1. ಫಾರ್ಮ್‌ಗಳ ಮೋಡ್‌ಗೆ ಪ್ರವೇಶಿಸಲು "ಇನ್ಸರ್ಟ್" ಮತ್ತು "ಸ್ಪೇಸ್" ಕೀಗಳನ್ನು ಒಟ್ಟಿಗೆ ಒತ್ತಿ.
 2. “g” ಕೀ ಒತ್ತಿ, ನಂತರ ತಕ್ಷಣವೇ “s” ಕೀ ಒತ್ತುವ ಮೂಲಕ ಸೆಟ್ಟಿಂಗ್‌ಗಳು ಮತ್ತು ಗೌಪ್ಯತೆಗೆ ನ್ಯಾವಿಗೇಟ್ ಮಾಡಿ.
 3. ಫಾರ್ಮ್‌ಗಳ ಮೋಡ್‌ನಿಂದ ತೊರೆಯಲು "ಇನ್ಸರ್ಟ್" ಮತ್ತು "ಸ್ಪೇಸ್" ಕೀಗಳನ್ನು ಒಟ್ಟಿಗೆ ಒತ್ತಿ.
 4. ಪುಟಕ್ಕೆ ಲಿಂಕ್‌ಗಳ ಪಟ್ಟಿಯನ್ನು ಮೇಲೆ ತರಲು "ಇನ್ಸರ್ಟ್" ಮತ್ತು “F7” ಕೀಗಳನ್ನು ಒಟ್ಟಿಗೆ ಒತ್ತಿ.
 5. ಪ್ರವೇಶಿಸುವಿಕೆ ಐಟಂ ಅನ್ನು ಕಂಡುಕೊಳ್ಳಲು ಕೆಳ ಬಾಣದ ಗುರುತಿನ ಕೀ ಬಳಸಿ ಮತ್ತು "ಎಂಟರ್" ಕೀ ಒತ್ತಿ.
 6. ಚಿತ್ರ ವಿವರಣೆಗಳನ್ನು ಸಂಯೋಜಿಸಿ ಐಟಂ ಅನ್ನು ಕಂಡುಕೊಳ್ಳಲು “f” ಕೀ ಒತ್ತಿ.
 7. ಸೆಟ್ಟಿಂಗ್ ಆನ್ ಅಥವಾ ಆಫ್‌ ಮಾಡಲು ಸ್ಪೇಸ್‌ಬಾರ್ ಬಳಸಿ.
 8. ಬದಲಾವಣೆಗಳನ್ನು ಉಳಿಸಿ ಬಟನ್‌ ಕಂಡುಕೊಳ್ಳಲು “f” ಕೀ ಬಳಸಿ ಮತ್ತು "ಎಂಟರ್" ಕೀ ಒತ್ತಿ.

twitter.com ಇಂದ ಟ್ವೀಟ್‌ಗಳಲ್ಲಿ ಚಿತ್ರ ವಿವರಣೆಗಳನ್ನು ಸೇರಿಸುವ ಬಗೆ

 1. ಫಾರ್ಮ್‌ಗಳ ಮೋಡ್‌ಗೆ ಪ್ರವೇಶಿಸಲು "ಇನ್ಸರ್ಟ್" ಮತ್ತು ಸ್ಪೇಸ್ ಕೀಗಳನ್ನು ಒಟ್ಟಿಗೆ ಒತ್ತಿ.
 2. ಟ್ವೀಟ್ ಸಂಯೋಜನೆ ಬಟನ್‌ ಅನ್ನು ಅಥವಾ ಕೀಬೋರ್ಡ್‌ ಶಾರ್ಟ್‌ಕಟ್‌ ಬಳಸಿ (“n” ಕೀ ಒತ್ತಿ) ತೆರೆಯಿರಿ.
 3. ಫೊಟೋಗಳು ಅಥವಾ ವೀಡಿಯೋ ಸೇರಿಸಿ ಬಟನ್‌ಗೆ ನ್ಯಾವಿಗೇಟ್ ಮಾಡಲು "ಟ್ಯಾಬ್" ಕೀ ಅನ್ನು ಬಳಸಿ ಮತ್ತು "ಎಂಟರ್" ಒತ್ತಿ.
 4. ಸೇರಿಸುವ ಚಿತ್ರವನ್ನು ಆಯ್ಕೆ ಮಾಡಲು ಫೈಲ್ ಸಿಸ್ಟಂ ಡೈಲಾಗ್ ಬಳಸಿ.
 5. ಸಂಯೋಜಕದಲ್ಲಿ, "ಟ್ಯಾಬ್" ಕೀ ಬಳಸಿ ನೀವು ಸೇರಿಸಿದ ಚಿತ್ರವನ್ನು ಕಂಡುಕೊಳ್ಳಿ. ಚಿತ್ರವನ್ನು ಸೇರಿಸಿದ ಅನುಕ್ರಮದ ಆಧಾರದಲ್ಲಿ ಲೇಬಲ್ ಮಾಡಲಾಗುತ್ತದೆ (ಉದಾ., "Image1")
 6. ವಿವರಣೆ ಪಠ್ಯವನ್ನು ಸೇರಿಸಲು, ಚಿತ್ರದ ಮೇಲೆ ಗಮನ ಕೇಂದ್ರೀಕರಿಸುತ್ತಲೇ "ಎಂಟರ್" ಕೀ ಒತ್ತುವ ಮೂಲಕ ಥಂಬ್‌ನೇಲ್ ಮುನ್ನೋಟ ಡೈಲಾಗ್ ಅನ್ನು ತೆರೆಯಿರಿ.
 7. ಚಿತ್ರದ ವಿವರಣೆಯನ್ನು ಟೈಪ್ ಮಾಡಿ. (420 ಅಕ್ಷರಗಳ ಮಿತಿ ಇದೆ.)
 8. "ಟ್ಯಾಬ್" ಕೀ ಒತ್ತಿ "ಎಂಟರ್" ಒತ್ತುವ ಮೂಲಕ ಅನ್ವಯಿಸು ಬಟನ್‌ ಕಂಡುಕೊಳ್ಳಿ ಮತ್ತು ಅಥವಾ "ಕಂಟ್ರೋಲ್‌" ಕೀ ಒತ್ತಿ ಹಿಡಿದುಕೊಂಡು ಕೇವಲ "ಎಂಟರ್" ಒತ್ತಿ.
 9. ವಿವರಣೆಯನ್ನು ಎಡಿಟ್ ಮಾಡಲು, ಟ್ವೀಟ್ ಪೋಸ್ಟ್ ಮಾಡುವುದಕ್ಕೂ ಮೊದಲು ಥಂಬ್‌ನೇಲ್ ಮುನ್ನೋಟ ಡೈಲಾಗ್ ಅನ್ನು ಪುನಃ ತೆರೆಯಿರಿ.

Note: ಪೋಸ್ಟ್ ಮಾಡಿದ ನಂತರ, ಚಿತ್ರಕ್ಕೆ ಅನ್ವಯಿಸಿದ ವಿವರಣೆಯು ಕಾಣಿಸುವುದಿಲ್ಲ, ಆದರೆ ದೃಶ್ಯ ಅಂಗವಿಕಲ ವ್ಯಕ್ತಿಗಳು ತಮ್ಮ ಸಹಾಯಕ ತಂತ್ರಜ್ಞಾನದ ಮೂಲಕ (ಉದಾ., ಸ್ಕ್ರೀನ್‌ ರೀಡರುಗಳು ಮತ್ತು ಬ್ರೇಲ್ ಡಿಸ್‌ಪ್ಲೇಗಳು) ವಿವರಣೆಗೆ ಪ್ರವೇಶಾವಕಾಶ ಹೊಂದಿರುತ್ತಾರೆ

Bookmark or share this article