TweetDeck ಬಳಸುವುದು ಹೇಗೆ

ಒಂದೇ ಸುಲಭ ಇಂಟರ್ಫೇಸ್‌ನಲ್ಲಿ ಹಲವು ಕಾಲರೇಖೆಯನ್ನು ವೀಕ್ಷಿಸಲು ನಿಮಗೆ ಅನುವು ಮಾಡುವ ಮೂಲಕ ಇನ್ನಷ್ಟು ಅನುಕೂಲಕರ Twitter ಅನುಭವವನ್ನು TweetDeck ಒದಗಿಸುತ್ತದೆ. Twitter ನ ಹೆಚ್ಚಿನ ಸೌಲಭ್ಯವನ್ನು ಪಡೆಯಲು ಹಲವು ಸುಧಾರಿತ ಲಕ್ಷಣಗಳನ್ನು ಇದು ಒಳಗೊಂಡಿದೆ: ಹಲವಾರು Twitter ಖಾತೆಗಳನ್ನು ನಿರ್ವಹಿಸಿ, ಭವಿಷ್ಯದಲ್ಲಿ ಪೋಸ್ಟ್ ಮಾಡುವುದಕ್ಕಾಗಿ ಟ್ವೀಟ್‌ಗಳನ್ನು ನಿಗದಿಪಡಿಸಸಿ, ಟ್ವೀಟ್ ಸಂಗ್ರಹಗಳನ್ನು ರಚಿಸಿ ಮತ್ತು ಇನ್ನಷ್ಟು.

TweetDeck ಪ್ರಸ್ತುತ tweetdeck.com ನಲ್ಲಿ ಅಥವಾ ಮ್ಯಾಕ್‌ ಆಪ್‌ ಸ್ಟೋರ್‌ನಲ್ಲಿ ಲಭ್ಯವಿದೆ.

TweetDeck ಬಳಕೆಯನ್ನು ಆರಂಭಿಸುವುದು ಹೇಗೆ

  1. http://tweetdeck.twitter.com ಗೆ ಹೋಗಿ ಅಥವಾ ಮ್ಯಾಕ್‌ನ ಡೆಸ್ಕ್‌ಟಾಪ್‌ ಆಪ್‌ ತೆರೆಯಿರಿ.
  2. ನಿಮ್ಮ Twitter ಖಾತೆಗೆ ಲಾಗ್ ಇನ್ ಮಾಡಿ. ಇತರ ವ್ಯಕ್ತಿಗಳೊಂದಿಗೆ ಹಂಚಿಲ್ಲದ Twitter ಖಾತೆಯನ್ನು ಬಳಸುವಂತೆ ನಾವು ಶಿಫಾರಸು ಮಾಡುತ್ತೇವೆ.
  3. ನೀವು ಲಾಗಿನ್ ಮಾಡಿದ ನಂತರ, ನಿಮ್ಮ TweetDeck ಖಾತೆಗೆ ಹಲವು Twitter ಖಾತೆಗಳನ್ನು ನೀವು ಸಂಪರ್ಕಿಸಬಹುದು.

Note: ಮ್ಯಾಕ್‌ಗೆ ಹಳೆಯ ಡೆಸ್ಕ್​ಟಾಪ್ ಆಪ್‌ ಆವೃತ್ತಿಯನ್ನು (ಮ್ಯಾಕ್: 3.5.0 ಗಿಂತ ಹಳೆಯ) ನೀವು ಬಳಸುತ್ತಿದ್ದರೆ, ಇತ್ತೀಚಿನ ಆವೃತ್ತಿಗೆ ನವೀಕರಿಸದ ಹೊರತು Twitter ಖಾತೆಗೆ ಸೈನ್ ಇನ್ ಮಾಡಲು ಅಥವಾ ಹೊಸ ಖಾತೆಯನ್ನು ರಚಿಸಲು ಸಾಧ್ಯವಾಗುವುದಿಲ್ಲ.

ಕಾರ್ಪೊರೇಟ್‌ ಅಥವಾ ತಂಡ ಪರಿಸರದಲ್ಲಿ ನೀವು TweetDeck ಅನ್ನು ಬಳಸುತ್ತಿದ್ದರೆತಂಡದ ಖಾತೆಯನ್ನು ಸೆಟಪ್‌ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.

ನಿಮ್ಮ TweetDeck ನಲ್ಲಿ ಹಲವು Twitter ಖಾತೆಗಳನ್ನು ಸಂಪರ್ಕಿಸುವುದು ಹೇಗೆ

  1. ನ್ಯಾವಿಗೇಶನ್‌ ಬಾರ್‌ನಲ್ಲಿಖಾತೆಗಳು  ಅನ್ನು ಕ್ಲಿಕ್‌ ಮಾಡಿ.
  2. ನೀವು ಹೊಂದಿರುವ ಇನ್ನೊಂದು ಖಾತೆಯನ್ನು ಲಿಂಕ್ ಮಾಡಿ ಅನ್ನು ಕ್ಲಿಕ್ ಮಾಡಿ.
  3. ನೀವು ಸೇರಿಸುತ್ತಿರುವ ತಂಡ ಸಂಬಂಧಿ ಖಾತೆಯನ್ನು ರಚಿಸುತ್ತಿದ್ದೀರಿ ಎಂಬುದನ್ನು ತಿಳಿದುಕೊಳ್ಳಲು ಸಂದೇಶವನ್ನು ಓದಿ, ನಂತರ ಮುಂದುವರಿಯಲು ಕ್ಲಿಕ್ ಮಾಡಿ.
  4. ಹೊಸ ವಿಂಡೋದಲ್ಲಿ, ಬಳಕೆದಾರರ ಹೆಸರು ಅಥವಾ ಇಮೇಲ್ ಮತ್ತು ಪಾಸ್‌ವರ್ಡ್‌ ಅನ್ನು ಖಾತೆಗೆ ಸೇರಿಸಿ ಮತ್ತು ದೃಢೀಕರಿಸಿ ಎಂಬುದನ್ನು ಕ್ಲಿಕ್ ಮಾಡಿ.
  5. TweetDeck ಬಳಸಲು ನೀವು ಸಿದ್ಧವಾಗಿದ್ದೀರಿ!

TweetDeck ಇಂದ ಖಾತೆಯನ್ನು ತೆಗೆದುಹಾಕುವುದು ಹೇಗೆ

  1. ನ್ಯಾವಿಗೇಶನ್‌ ಬಾರ್‌ನಲ್ಲಿ ಖಾತೆಗಳು ಅನ್ನು ಕ್ಲಿಕ್‌ ಮಾಡಿ.
  2. ಕೆಳ ಬಾಣದ ಗುರುತನ್ನು ಕ್ಲಿಕ್ ಮಾಡುವ ಮೂಲಕ ನೀವು ಅಳಿಸಲು ಬಯಸುವ ಖಾತೆಯನ್ನು ವಿಸ್ತರಿಸಿ.
  3. ತಂಡ ತೊರೆಯಿರಿ ಕ್ಲಿಕ್ ಮಾಡಿ ಮತ್ತು ತೊರೆಯಿರಿ ಕ್ಲಿಕ್ ಮಾಡುವ ಮೂಲಕ ದೃಢೀಕರಿಸಿ.

Note: TweetDeck ಗೆ ನೀವು ಸೈನ್ ಇನ್ ಮಾಡಿದ ಖಾತೆಯನ್ನು TweetDeck ಇಂದ ತೆಗೆದುಹಾಕಲಾಗದು.

TweetDeck ನಲ್ಲಿ ಹಲವು ಖಾತೆಗಳ ನಿರ್ವಹಿಸುವಿಕೆ

ಡೀಫಾಲ್ಟ್ ಖಾತೆಯನ್ನು ಆಯ್ಕೆ ಮಾಡಿ:

ಡೀಫಾಲ್ಟ್ ಖಾತೆಯನ್ನಾಗಿ ನಿಮ್ಮ ಯಾವ ಖಾತೆಯನ್ನು ಬಳಸಬೇಕು ಎಂಬುದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ಇದೇ ಖಾತೆಯಿಂದ ನೀವು ಟ್ವೀಟ್‌ ಕಂಪೋಸ್ ಮಾಡುತ್ತೀರಿ, ಟ್ವೀಟ್‌ ಇಷ್ಟಪಡುತ್ತೀರಿ ಮತ್ತು ಟ್ವೀಟ್‌ಗಳಿಗೆ ಪ್ರತಿಕ್ರಿಯೆ ನೀಡುತ್ತೀರಿ.

  1. ನ್ಯಾವಿಗೇಶನ್‌ ಬಾರ್‌ನಲ್ಲಿ ಖಾತೆಗಳು ಅನ್ನು ಕ್ಲಿಕ್‌ ಮಾಡಿ.
  2. ಕೆಳ ಬಾಣದ ಗುರುತನ್ನು ಕ್ಲಿಕ್ ಮಾಡುವ ಮೂಲಕ ನೀವು ಡೀಫಾಲ್ಟ್ ಆಗಿ ನಿಗದಿಸಲು ಬಯಸುವ ಖಾತೆಯನ್ನು ವಿಸ್ತರಿಸಿ.
  3. ಡೀಫಾಲ್ಟ್ ಖಾತೆ ಆಯ್ಕೆಯ ಮೇಲೆ ಟಾಗಲ್ ಮಾಡಿ.

ಹಲವು ಖಾತೆಗಳಿಂದ ಟ್ವೀಟ್‌ ಮಾಡುವುದು:

ಹಲವು ಖಾತೆಗಳಿಂದ ಸುಲಭವಾಗಿ ಟ್ವೀಟ್‌ ಮಾಡಲು ನಿಮಗೆ TweetDeck ಅನುವು ಮಾಡುತ್ತದೆ. ನೀವು ಯಾವ ಖಾತೆಗಳಿಂದ ಟ್ವೀಟ್ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಲು:

  1. ನ್ಯಾವಿಗೇಶನ್ ಬಾರ್‌ನ ಮೇಲಿರುವ ಟ್ವೀಟ್ ಬಟನ್‌ ಮೇಲೆ ಕ್ಲಿಕ್ ಮಾಡಿ; ನೀವು ದೃಢೀಕರಿಸಿದ ಖಾತೆಗಳನ್ನು ಮೇಲೆ ಪಟ್ಟಿ ಮಾಡಿರಲಾಗುತ್ತದೆ (ಖಾತೆಯ ಬಳಕೆದಾರರನ್ನು ನೋಡಲು ಐಕಾನ್‌ ಮೇಲೆ ನೀವು ಮೌಸ್ ಓಡಾಡಿಸಬಹುದು).
  2. ನೀವು ಯಾವ ಖಾತೆಯಿಂದ ಟ್ವೀಟ್‌ ಮಾಡಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿ (ಖಾತೆಯನ್ನು ಆಯ್ಕೆ ಮಾಡಿದರೆ, ಹಸಿರು ಚೆಕ್‌ಮಾರ್ಕ್‌ ಮೂಲಕ ಹೈಲೈಟ್‌ ಮಾಡಲಾಗಿರುತ್ತದೆ).
    ಸಲಹೆ: ನಿಮ್ಮ TweetDeck ಗೆ ಸಂಪರ್ಕಿಸಿದ ಯಾವುದೇ ಖಾತೆಗೆ ಮುಂಗಡವಾಗಿ ಟ್ವೀಟ್‌ಗಳನ್ನು ಶೆಡ್ಯೂಲ್ ಮಾಡಿ (ಸ್ವತ್ತು ಸಹಿತ ಅಥವಾ ರಹಿತ).

ಹಲವು ಖಾತೆಗಳಿಂದ ಇಷ್ಟಪಡುವುದು:

ಹಲವು ಖಾತೆಗಳಿಂದ ಸುಲಭವಾಗಿ ಟ್ವೀಟ್‌ ಇಷ್ಟಪಡಲು ನಿಮಗೆ TweetDeck ಅನುವು ಮಾಡುತ್ತದೆ.

  1. ಟ್ವೀಟ್‌ ಮೇಲಿನ ಇನ್ನಷ್ಟು ಐಕಾನ್  ಮೇಲೆ ಕ್ಲಿಕ್ ಮಾಡಿ.
  2. ಕಾಣಿಸಿಕೊಳ್ಳುವ ಮೆನುವಿನಿಂದ, ಖಾತೆಗಳಿಂದ ಇಷ್ಟಪಡಿ... ಕ್ಲಿಕ್ ಮಾಡಿ
  3. ನೀವು ಇಷ್ಟಪಡಲು ಬಯಸುವ ಖಾತೆ(ಗಳ) ಪಕ್ಕದಲ್ಲಿರುವ ಇಷ್ಟ ಕ್ಲಿಕ್ ಮಾಡಿ.

ಹಲವು ಖಾತೆಗಳಿಂದ ಹಿಂಬಾಲಿಸುವುದು:

ಹಲವು ಖಾತೆಗಳಿಂದ ಯಾರನ್ನಾದರೂ ಹಿಂಬಾಲಿಸಲು ನಿಮಗೆ TweetDeck ಅನುವು ಮಾಡುತ್ತದೆ. ಇತರರ ಪ್ರೊಫೈಲ್ ಮೇಲಿನ ಹಿಂಬಾಲಿಸಿ ಕ್ಲಿಕ್ ಮಾಡುವ ಮೂಲಕ ಇತರರನ್ನು ನೀವು ಹಿಂಬಾಲಿಸಬಹುದು, ಆದರೆ ನಿಮ್ಮ ಡೀಫಾಲ್ಟ್‌ ಖಾತೆ ಮಾತ್ರ ಅವರನ್ನು ಹಿಂಬಾಲಿಸುತ್ತದೆ.

  1. ನೀವು ಹಿಂಬಾಲಿಸಲು ಬಯಸುವ ಖಾತೆಯ ಮೇಲೆ ಕ್ಲಿಕ್ ಮಾಡಿ; ಒಂದು ಪ್ರೊಫೈಲ್‌ ಕಾಣಿಸಿಕೊಳ್ಳುತ್ತದೆ.
  2. ಇನ್ನಷ್ಟು ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ಖಾತೆಗಳಿಂದ ಹಿಂಬಾಲಿಸಿ... ಆಯ್ಕೆ ಮಾಡಿ
  3. ಯಾವ ಖಾತೆಯಿಂದ ಹಿಂಬಾಲಿಸಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿ.
    ಟಿಪ್ಪಣಿ: ಖಾತೆಯನ್ನು ಹಿಂಬಾಲಿಸದಿರುವಲ್ಲಿಯೂ ಇದೇ ಸೂಚನೆಗಳು ಅನ್ವಯಿಸುತ್ತವೆ.

ವೈಯಕ್ತಿಕ Twitter ಬಳಕೆದಾರರ ಹೆಸರಿನೊಂದಿಗೆ ಲಾಗಿನ್ ಮಾಡುವುದು ಏಕೆ ಹೆಚ್ಚು ಸುರಕ್ಷಿತವಾಗಿರುತ್ತದೆ?

ನೀವು ಪಾಸ್ವರ್ಡ್ ಹೊಂದಿರುವ ವೈಯಕ್ತಿಕ ಬಳಕೆದಾರರ ಹೆಸರನ್ನು ಮಾತ್ರ ಬಳಸಿಕೊಂಡು ಲಾಗ್ ಇನ್ ಮಾಡಿದರೆ, ಖಾತೆಯ ಭದ್ರತೆಗೆ ಯಾವುದೇ ಸಮಸ್ಯೆ ಇಲ್ಲದೆ ನಿಮ್ಮ ತಂಡದ ಖಾತೆಗಳನ್ನು ನೀವು ಸುರಕ್ಷಿತವಾಗಿ ಪ್ರವೇಶಿಸಬಹುದು. ಹೆಚ್ಚುವರಿ ಸುರಕ್ಷತೆಗಾಗಿ ನೀವು ಲಾಗಿನ್ ಪರಿಶೀಲನೆಯನ್ನು ಬಳಸುವಂತೆ ನಾವು ಶಿಫಾರಸು ಮಾಡುತ್ತೇವೆ.

TweetDeck ನಲ್ಲಿ ಟ್ವೀಟ್ ರಚಿಸುವುದು ಹೇಗೆ

ಶಬ್ದಗಳು, ಚಿತ್ರಗಳು, ಜಿಫ್‌ಗಳು, ಎಮೋಜಿಗಳು, ಥ್ರೆಡ್‌ಗಳು, ಪೋಲ್‌ಗಳು ಮತ್ತು ಇನ್ನಷ್ಟರೊಂದಿಗೆ ಏನು ನಡೆಯುತ್ತಿದೆ ಎಂಬುದ್ನು ಹಂಚಿಕೊಳ್ಳುವುದು ಅಥವಾ ಸಂವಾದದಲ್ಲಿ ಸೇರಿಕೊಳ್ಳುವುದು TweetDeck ನಲ್ಲಿನ ಟ್ವೀಟ್ ಕಂಪೋಸರ್ ಸುಲಭಗೊಳಿಸುತ್ತದೆ.

  1. ನಿಮ್ಮ Twitter ಖಾತೆಗೆ ಲಾಗಿನ್ ಮಾಡಿರುವಾಗ ಟ್ವೀಟ್‌ ಮೇಲೆ ಕ್ಲಿಕ್ ಮಾಡಿ.
  2. ನೀವು ಹಲವು ಖಾತೆಗಳಿಗೆ ಲಾಗಿನ್ ಮಾಡಿದ್ದರೆ, ನೀವು ಯಾವ ಖಾತೆಯಿಂದ ಟ್ವೀಟ್‌ ಮಾಡಲು ಬಯಸಿದ್ದೀರೋ ಅದು ಆಯ್ಕೆಯಾಗಿದೆ ಎಂದು ಖಚಿತಪಡಿಸಿಕೊಳ್ಳಿ.
  3. ಪಠ್ಯದೊಂದಿಗೆ ನಿಮ್ಮ ಟ್ವೀಟ್‌ ಕಂಪೋಸ್ ಮಾಡಿ. ಮೇಲೆ ಕ್ಲಿಕ್ ಮಾಡುವ ಮೂಲಕ ಎಮೋಜಿ ಸೇರಿಸಿ.   ಆಯ್ಕೆ ಮಾಡುವ ಮೂಲಕ ಚಿತ್ರ ಅಥವಾ ವೀಡಿಯೋ ಸೇರಿಸಿ, ತಟ್ಟುವ ಮೂಲಕ ಜಿಫ್‌ ಸೇರಿಸಿ ಅಥವಾ  ಮೂಲಕ ಒಂದು ಪೋನ್ ಸೇರಿಸಿ.
  4. ಥ್ರೆಡ್ ರಚಿಸಲು, ನಿಮ್ಮ ಥ್ರೆಡ್‌ನಲ್ಲಿ ಮುಂದಿನ ಟ್ವೀಟ್‌ ಸೇರಿಸಲು  ಮೇಲೆ ಕ್ಲಿಕ್ ಮಾಡಿ.
  5. ಹಂಚಿಕೊಳ್ಳಲು ಟ್ವೀಟ್ ಕ್ಲಿಕ್ ಮಾಡಿ.

TweetDeck ಕಾಲಂಗಳ ಬಳಕೆ

ಒಂದೇ ಟೈಮ್‌ಲೈನ್ ಬದಲಿಗೆ, ನಿಮಗೆ ಆಸಕ್ತಿ ಇರುವ ನಿಗದಿತ ಕಂಟೆಂಟ್ ಅನ್ನು ಪ್ರದರ್ಶಿಸಲು ಮತ್ತು ಪಕ್ಕದಲ್ಲಿ ವೀಕ್ಷಿಸಲು ಕಾಲಂಗಳನ್ನು ಸೇರಿಸುವುದಕ್ಕಾಗಿ TweetDeck ನಿಮಗೆ ಅನುವು ಮಾಡುತ್ತದೆ. ನಿಮ್ಮ ಎಲ್ಲ ನಮೂದುಗಳು, ಹುಡುಕಾಟ ವಿಚಾರಣೆಯ ಫಲಿತಾಂಶಗಳು, ಇಷ್ಟಗಳ ಪಟ್ಟಿ, ಹ್ಯಾಶ್ ಟ್ಯಾಗ್ ಅಥವಾ ಟ್ರೆಂಡ್‌ನಿಂದ ಇತ್ತೀಚಿನ ಟ್ವೀಟ್‌ಗಳು ಇತ್ಯಾದಿಯನ್ನು ತೋರಿಸುವ ಕಾಲಂಗಳನ್ನು ಸೇರಿಸಿ.

ಕಾಲಂ ಸೇರಿಸಲು:

  1. ನ್ಯಾವಿಗೇಶನ್‌ ಬಾರ್‌ನಿಂದ, ಕಾಲಂ ಸೇರಿಸಿ ಆಯ್ಕೆ ಮಾಡಲು ಪ್ಲಸ್ ಐಕಾನ್‌  ಮೇಲೆ ಕ್ಲಿಕ್ ಮಾಡಿ. 
  2. ನೀವು ಸೇರಿಸಲು ಬಯಸುವ ಕಾಲಂ ವಿಧವನ್ನು ಆಯ್ಕೆ ಮಾಡಿ.
  3. ನಿಮ್ಮ ಖಾತೆಗಳ ಅಡಿಯಲ್ಲಿ, ಕಾಲಂ ಅನ್ನು ರಚಿಸಲು ನಿಮ್ಮ ಖಾತೆಯನ್ನು ಆಯ್ಕೆ ಮಾಡಿ.

Note: ಇತರ ಖಾತೆಗಳಿಂದ ಕ್ರಮಗಳ ಆಧಾರದಲ್ಲಿ ಮಾಹಿತಿಯನ್ನು ಬಳಸಿ ನೀವು ಕಾಲಂಗಳನ್ನೂ ರಚಿಸಬಹುದು. ಖಾತೆ ಬಳಕೆದಾರರ ಹೆಸರಿನ ಮೇಲೆ ಕ್ಲಿಕ್ ಮಾಡಿ ಮತ್ತು ನಮೂದುಗಳು, ಪಟ್ಟಿಗಳು, ಸಂಗ್ರಹಗಳು ಅಥವಾ ಇಷ್ಟಗಳಂತಹ ಕ್ರಮಗಳಿಂದ ಆಯ್ಕೆ ಮಾಡಿ.

ಕಾಲಂ ತೆಗೆದುಹಾಕಲು:

  1. ಕಾಲಂ ಶೀರ್ಷಿಕೆಯ ಪಕ್ಕದಲ್ಲಿರುವ ಕಾಲಂ ಹೆಡರ್‌ನಲ್ಲಿ ಫಿಲ್ಟರ್ ಐಕಾನ್‌  ಕ್ಲಿಕ್ ಮಾಡಿ.
  2. ಕಾಲಂ ಅಳಿಸಲು ತೆಗೆದುಹಾಕಿ ಬಟನ್‌ ಮೇಲೆ ಕ್ಲಿಕ್ ಮಾಡಿ.

ಕಾಲಂ ಫಿಲ್ಟರುಗಳು:

ನಿಮ್ಮ ಪ್ರತಿ ಕಾಲಂನಲ್ಲೂ ಪ್ರದರ್ಶಿಸಲು ನೀವು ಬಯಸುವ ಟ್ವೀಟ್‌ಗಳ ವಿಧವನ್ನು ನೀವು ಸುಲಭವಾಗಿ ನಿಯಂತ್ರಿಸಬಹುದು. ನೀವು ಕಂಟೆಂಟ್, ಸ್ಥಳ,  ಬಳಕೆದಾರರು, ಎಂಗೇಜ್‍ಮೆಂಟ್ ಅಥವಾ ಎಚ್ಚರಿಕೆಗಳು ಅಥವಾ ಮೂರರ ಸಂಯೋಜನೆಯಿಂದ ಆಯ್ಕೆ ಮಾಡಬಹುದು. 

  1. ರಿಟ್ವೀಟ್‌ಗಳು, ನಿರ್ದಿಷ್ಟ ಶಬ್ದ ಅಥವಾ ಪದಗುಚ್ಛಗಳನ್ನು ಹೊಂದಿರುವ ಟ್ವೀಟ್‌ಗಳು ಅಥವಾ ಫೋಟೋಗಳನ್ನು ಹೊಂದಿರುವ ಟ್ವೀಟ್‌ಗಳಂತಹ ಕೆಲವು ವಿಧದ ಟ್ವೀಟ್‌ಗಳ ಮೂಲಕ ಕಾಲಂ ಅನ್ನು ಫಿಲ್ಟರ್ ಮಾಡಲು ಕಂಟೆಂಟ್ ಫಿಲ್ಟರಿಂಗ್ ಅನುವು ಮಾಡುತ್ತದೆ. 
  2. ಸ್ಥಳ ಫಿಲ್ಟರ್ ನಿಮಗೆ ನಿರ್ದಿಷ್ಟ ಸ್ಥಳಗಳಿಗೆ ಟ್ವೀಟ್‌ಗಳನ್ನು ಜಿಯೋಟ್ಯಾಗ್ ಮಾಡಲು ಅನುವು ಮಾಡುತ್ತದೆ.
  3. ಕೆಲವರು ಬರೆಯುವ ಮತ್ತು ನಮೂದು ಮಾಡುವವರ ಟ್ವೀಟ್‌ಗಳನ್ನು ನಿರ್ದಿಷ್ಟ ಕಾಲಂನಲ್ಲಿ ಫಿಲ್ಟರ್ ಮಾಡಲು ಬಳಕೆದಾರರ ಫಿಲ್ಟರ್ ಅನುವು ಮಾಡುತ್ತದೆ. 
  4. ಕನಿಷ್ಠ ಸಂಖ್ಯೆ ರಿಟ್ವೀಟ್‌ಗಳು, ಇಷ್ಟಗಳು ಅಥವಾ ಪ್ರತಿಕ್ರಿಯೆಗಳೊಂದಿಗೆ ಟ್ವೀಟ್‌ಗಳನ್ನು ಫಿಲ್ಟರ್ ಮಾಡಲು ಎಂಗೇಜ್‌ಮೆಂಟ್‌ ಫಿಲ್ಟರ್‌ ಅನುವು ಮಾಡುತ್ತದೆ.
  5. ಪಾಪ್‌ ಅಪ್‌ಗಳು ಮತ್ತು ನಿರ್ದಿಷ್ಟ ಕಾಲಂಗೆ ಧ್ವನಿಗಳನ್ನು ಸಕ್ರಿಯಗೊಳಿಸಲು ಅಲರ್ಟ್‌ ಫಿಲ್ಟರ್ ಅನುವು ಮಾಡುತ್ತದೆ.
  6. ಟಿಪ್ಪಣಿ: ನೀವು ಹುಡುಕಾಟ ಕಾಲಂ ಅನ್ನು ರಚಿಸಿದರೆ, ಸ್ಥಳ, ದಿನಾಂಕ ಮತ್ತು ಎಂಗೇಜ್ಮೆಂಟ್ ಮೂಲಕ ಫಲಿತಾಂಶಗಳನ್ನು ನೀವು ಫಿಲ್ಟರ್ ಮಾಡಬಹದು. ನೀವು ಆಸಕ್ತಿ ಹೊಂದಿರುವ ಕ್ಷೇತ್ರಗಳಿಗೆ ಸೂಕ್ತವಾದ ಕಂಟೆಂಟ್ ಅನ್ನು ಕಂಡುಕೊಳ್ಳಲು ನಿಮ್ಮ ಹುಡುಕಾಟ ಫಲಿತಾಂಶಗಳನ್ನು ಸುಲಭವಾಗಿ ಸಂಕುಚಿತಗೊಳಿಸಲು ಸ್ಥಳ ಫಿಲ್ಟರ್ ಅನುವು ಮಾಡುತ್ತದೆ. ಸ್ಥಳ ಫಿಲ್ಟರ್ ಅನ್ನು ಅನ್ವಯಿಸಿದಾಗ ಸ್ಥಳದೊಂದಿಗೆ ಜಿಯೋಟ್ಯಾಗ್ ಮಾಡಲಾದ ಅಸುರಕ್ಷಿತ ಟ್ವೀಟ್‌ಗಳು ಮಾತ್ರ ಹುಡುಕಾಟ ಫಲಿತಾಂಶಗಳಲ್ಲಿ ಕಾಣಿಸುತ್ತದೆ.

ಫಿಲ್ಟರ್ ರಚಿಸಲು:

  1. ಕಾಲಂ ಶೀರ್ಷಿಕೆಯ ಪಕ್ಕದಲ್ಲಿರುವ ಕಾಲಂ ಹೆಡರ್‌ನಲ್ಲಿ ಫಿಲ್ಟರ್ ಐಕಾನ್‌  ಕ್ಲಿಕ್ ಮಾಡಿ.
  2. ಕಾಲಂಗೆ ಯಾವ ರೀತಿಯ ಫಿಲ್ಟರ್‌(ಗಳನ್ನು) ಅನ್ವಯಿಸಲು ನೀವು ಬಯಸುತ್ತೀರಿ ಎಂದು ಆಯ್ಕೆ ಮಾಡಿ (ಕಂಟೆಂಟ್, ಬಳಕೆದಾರರು ಅಥವಾ ಎಚ್ಚರಿಕೆಗಳು).
  3. ಕಾಲಂ ಸೆಟ್ಟಿಂಗ್‌ಗಳನ್ನು ಮುಚ್ಚಲು ಪುನಃ ಫಿಲ್ಟರ್ ಐಕಾನ್‌   ಮೇಲೆ ಕ್ಲಿಕ್ ಮಾಡಿ.
    ಟಿಪ್ಪಣಿ: ಕಸ್ಟಮ್ ಫಿಲ್ಟರಿಂಗ್ ಹೊಂದಿರುವ ಕಾಲಂಗಳು ನೀವು ಸಕ್ರಿಯಗೊಳಿಸಿದ ಫಿಲ್ಟರ್‌ನ ಐಕಾನ್‌ ಪಕ್ಕದಲ್ಲಿ ಫಿಲ್ಟರ್ ಮಾಡಿರುವುದು ಎಂಬುದರೊಂದಿಗೆ ಪ್ರದರ್ಶನವಾಗುತ್ತದೆ.

ಕಾಲಂ ಮರುಅನುಕ್ರಮಗೊಳಿಸುವಿಕೆ:

ಕೆಲವೇ ತ್ವರಿತ ಕ್ಲಿಕ್‌ಗಳ ಮೂಲಕ TweetDeck ನಲ್ಲಿ ಕಾಲಂಗಳನ್ನು ಸುಲಭವಾಗಿ ಪುನಃ ಅನುಕ್ರಮಗೊಳಿಸಿ.

  1. ಕಾಲಂ ಶೀರ್ಷಿಕೆಯ ಪಕ್ಕದಲ್ಲಿರುವ ಕಾಲಂ ಹೆಡರ್‌ನಲ್ಲಿ ಫಿಲ್ಟರ್ ಐಕಾನ್‌  ಕ್ಲಿಕ್ ಮಾಡಿ.
  2. ಕಾಲಂ ಅನ್ನು ಯಾವ ದಿಕ್ಕಿಗೆ ಸ್ಥಳಾಂತರಿಸಲು ನೀವು ಬಯಸುತ್ತೀರಿ ಎಂಬುದನ್ನು ಆಧರಿಸಿ ಎಡ ಅಥವಾ ಬಲ ಬಾಣದ ಗುರುತಿನ ಮೇಲೆ ಕ್ಲಿಕ್ ಮಾಡಿ.
    ಟಿಪ್ಪಣಿ: ನಿಮ್ಮ ಕಾಲಂಗಳನ್ನು ಪುನಃ ಅನುಕ್ರಮಗೊಳಿಸಲು ನ್ಯಾವಿಗೇಶನ್‌ ಬಾರ್‌ನಿಂದ ಸಂಬಂಧಿತ ಐಕಾನ್‌ಗಳ ಮೂಲಕ ಕಾಲಂಗಳನ್ನು ನೀವು ಎಳೆದು ಬಿಡಲೂಬಹುದು.

TweetDeck ಕಾಲಂಗಳ ವಿಧಗಳು ಮತ್ತು ಅವು ಏನ್ನು ಪ್ರದರ್ಶಿಸುತ್ತವೆ

  • ಹೋಮ್: ಯಾವುದೇ ನಿಗದಿತ ಖಾತೆಗೆ ಹೋಮ್ ಕಾಲರೇಖೆ.
  • ಬಳಕೆದಾರರು: ನಿಗದಿತ ಖಾತೆಯಿಂದ ಟ್ವೀಟ್‌ಗಳು.
  • ಸೂಚನೆಗಳು: ಯಾವಾಗ ಖಾತೆಯು ಟ್ವೀಟ್ ಮಾಡುತ್ತದೆ, ರಿಟ್ವೀಟ್‌ ಮಾಡುತ್ತದೆ, ಇಷ್ಟಪಡುತ್ತದೆ ಅಥವಾ ನಮೂದಿಸಲ್ಪಡುತ್ತದೆ ಮತ್ತು ಯಾರಾದರೂ ಖಾತೆಯನ್ನು ಹಿಂಬಾಲಿಸುತ್ತಾರೆ ಎಂಬುದೂ ಸೇರಿದಂತೆ ನಿಗದಿತ ಖಾತೆಗೆ ಸೂಚನೆಗಳು.
  • ಹುಡುಕಾಟ: ಒಂದು ನಿರ್ದಿಷ್ಟ ಹುಡುಕಾಟ ಪದ.
  • ಪಟ್ಟಿಗಳು: ನೀವು ಈಗಾಗಲೇ ಹಿಂಬಾಲಿಸುತ್ತಿರುವ ಪಟ್ಟಿಯನ್ನು ರಚಿಸಿ ಅಥವಾ ಸಂಪರ್ಕಿಸಿ.
  • ಸಂಗ್ರಹ: ರೂಪಿಸಿದ ಟ್ವೀಟ್‌ಗಳು, ನೀವು ಕೈಯಿಂದ ಆಯ್ಕೆ ಮಾಡಿರುವುದು, ಇತರರೊಂದಿಗೆ ಹಂಚಿಕೊಳ್ಳುವ ಕಾಲರೇಖೆ.
  • ಚಟುವಟಿಕೆ: ನೀವು ಹಿಂಬಾಲಿಸುವ ಖಾತೆಗಳೊಂದಿಗೆ ಏನಾಗುತ್ತಿದೆ.
  • ಇಷ್ಟಗಳು: ನಿಗದಿತ ಖಾತೆಯಿಂದ ಇಷ್ಟಗಳು ಎಂದು ಗುರುತು ಮಾಡಿದ ಟ್ವೀಟ್‌ಗಳು.
  • ಸಂದೇಶಗಳು (ಒಂದು ಖಾತೆ): ನಿಗದಿತ ಖಾತೆಗೆ ನೇರ ಸಂದೇಶಗಳು.
  • ನಮೂದುಗಳು (ಒಂದು ಖಾತೆ): ನಿಗದಿತ ಖಾತೆಯನ್ನು ಯಾರಾದರೂ ನಮೂದು ಮಾಡಿದಾಗ.
  • ಹಿಂಬಾಲಕರು: ನಿಗದಿತ ಖಾತೆಗೆ ಹಿಂಬಾಲಿಸುವ ಚಟುವಟಿಕೆ.
  • ಶೆಡ್ಯೂಲ್‌ ಮಾಡಿದ: ನಿಮ್ಮ ಶೆಡ್ಯೂಲ್‌ ಮಾಡಿದ ಟ್ವೀಟ್‌ಗಳು.
  • ಸಂದೇಶಗಳು (ಎಲ್ಲ ಖಾತೆಗಳು): ಸರಾಸರಿಯಾಗಿ ನಿಮ್ಮ ಎಲ್ಲ ದೃಢೀಕೃತ ಖಾತೆಗಳಿಂದ ನೇರ ಸಂದೇಶಗಳು.
  • ನಮೂದುಗಳು (ಎಲ್ಲ ಖಾತೆಗಳು): ಎಲ್ಲ ಖಾತೆಗಳಿಂದ ನಮೂದುಗಳು.
  • ಪ್ರವೃತ್ತಿ: ನಿರ್ದಿಷ್ಟ ಜಾಗತಿಕ ಪ್ರವೃತ್ತಿಗಳು.

 

Bookmark or share this article