ಟ್ವೀಟ್ ಮಾಡುವ ಬಗೆ
ಫೋಟೋಗಳು, ಜಿಫ್ಗಳು, ವೀಡಿಯೋಗಳು, ಲಿಂಕ್ಗಳು ಮತ್ತು ಪಠ್ಯವನ್ನು ಟ್ವೀಟ್ ಹೊಂದಿರಬಹುದು.
ಇದಕ್ಕಾಗಿ ಸೂಚನೆಗಳನ್ನು ವೀಕ್ಷಿಸಿ:
ಟ್ವೀಟ್ ಮೂಲ ಲೇಬಲ್ಗಳು
ಟ್ವೀಟ್ ಅನ್ನು ಹೇಗೆ ಪೋಸ್ಟ್ ಮಾಡಲಾಗಿದೆ ಎಂಬುದನ್ನು ಉತ್ತಮವಾಗಿ ತಿಳಿದುಕೊಳ್ಳಲು ನಿಮಗೆ ಟ್ವೀಟ್ ಮೂಲ ಲೇಬಲ್ಗಳು ನೆರವಾಗುತ್ತವೆ. ಟ್ವೀಟ್ ಮತ್ತು ಅದರ ಲೇಖಕರ ಕುರಿತು ಪಠ್ಯವನ್ನು ಈ ಹೆಚ್ಚುವರಿ ಮಾಹಿತಿ ಒದಗಿಸುತ್ತದೆ. ನೀವು ಮೂಲವನ್ನು ಗುರುತಿಸದೇ ಇದ್ದರೆ, ಕಂಟೆಂಟ್ ಮೇಲೆ ನೀವು ಎಷ್ಟು ವಿಶ್ವಾಸ ಹೊಂದಿದ್ದೀರಿ ಎಂಬುದನ್ನು ಗುರುತಿಸಲು ಇನ್ನಷ್ಟು ತಿಳಿಯಲು ನೀವು ಬಯಸಬಹುದು.
- ಟ್ವೀಟ್ ವಿವರಗಳ ಪುಟಕ್ಕೆ ತೆರಳಲು ಟ್ವೀಟ್ ಮೇಲೆ ಕ್ಲಿಕ್ ಮಾಡಿ.
- ಟ್ವೀಟ್ನ ಕೆಳಭಾಗದಲ್ಲಿ, ಖಾತೆಯ ಟ್ವೀಟ್ನ ಮೂಲಕ್ಕೆ ಲೇಬಲ್ ಅನ್ನುನೀವು ನೋಡುತ್ತೀರಿ. ಉದಾಹರಣೆಗೆ, "iPhone ಗಾಗಿ Twitter", " Android ಗಾಗಿ Twitter" ಅಥವಾ "ವೆಬ್ಗಾಗಿ Twitter".
- ಕೆಲವು ಪ್ರಕರಣಗಳಲ್ಲಿ ನೀವು ತೃತೀಯ ಪಕ್ಷದ ಕ್ಲೈಂಟ್ ಹೆಸರನ್ನು ನೀವು ನೋಡಬಹುದು, ಇದು Twitter ಹೊರತಾದ ಅಪ್ಲಿಕೇಶನ್ನಿಂದ ಟ್ವೀಟ್ ಮಾಡಲಾಗಿದೆ ಎಂಬುದನ್ನು ಸೂಚಿಸುತ್ತದೆ. ಲೇಖಕರು ಕೆಲವು ಬಾರಿ ತಮ್ಮ ಟ್ವೀಟ್ಗಳನ್ನು ನಿರ್ವಹಿಸಲು, ಮಾರ್ಕೆಟಿಂಗ್ ಕ್ಯಾಂಪೇನ್ಗಳನ್ನು ನಿರ್ವಹಿಸಲು, ಜಾಹೀರಾತು ಕಾರ್ಯಕ್ಷಮತೆಯನ್ನು ಅಳೆಯಲು, ಗ್ರಾಹಕ ಬೆಂಬಲ ಒದಗಿಸಲು ಮತ್ತು ಜಾಹೀರಾತು ನೀಡಲು ಕೆಲವು ವ್ಯಕ್ತಿಗಳ ಸಮೂಹವನ್ನು ಗುರಿಪಡಿಸಲು ತೃತೀಯ ಪಕ್ಷ ಕ್ಲೈಂಟ್ ಅಪ್ಲಿಕೇಶನ್ಗಳನ್ನು ಬಳಸುತ್ತಾರೆ. ಟ್ವೀಟ್ಗಳು ಮತ್ತು ಕ್ಯಾಂಪೇನ್ಗಳು ನೇರವಾಗಿ ಮಾನವರು ರಚಿಸಿರಬಹುದು ಅಥವಾ ಕೆಲವು ಸನ್ನಿವೇಶಗಳಲ್ಲಿ ಅಪ್ಲಿಕೇಶನ್ನಿಂದ ಸ್ವಯಂಚಾಲಿತವಾಗಿ ರಚಿಸಿರಬಹುದು. ಸಾಮಾನ್ಯ ತೃತೀಯ ಪಕ್ಷದ ಮೂಲಗಳ ಪಟ್ಟಿಗಾಗಿ ನಮ್ಮ ಪಾಲುದಾರರ ಪುಟಕ್ಕೆ ಭೇಟಿ ನೀಡಿ.
ಟ್ವೀಟ್ಗಳನ್ನು ಅಳಿಸುವುದು
- ಟ್ವೀಟ್ ಅಳಿಸುವ ಕುರಿತು ಓದಿ.
- ನೀವು ನಿಮ್ಮ ಟ್ವೀಟ್ಗಳನ್ನು ಮಾತ್ರ ಅಳಿಸಬಹುದು ಎಂಬುದನ್ನು ಗಮನಿಸಿ.
- ಇತರ ಖಾತೆಗಳು ಪೋಸ್ಟ್ ಮಾಡಿದ ಟ್ವೀಟ್ಗಳನ್ನು ನೀವು ಅಳಿಸಲಾಗದು. ಬದಲಿಗೆ, ನೀವು ಸ್ವೀಕರಿಸಲು ಬಯಸದ ಟ್ವೀಟ್ಗಳ ಖಾತೆಗಳನ್ನು ನೀವು ಹಿಂಬಾಲಿಸದಿರಬಹುದು, ತಡೆಹಿಡಿಯಬಹುದು ಅಥವಾ ಸದ್ದಡಗಿಸಬಹುದು .
- ಮರುಟ್ವೀಟ್ ಅನ್ನು ಅಳಿಸುವುದು ಅಥವಾ ರದ್ದುಗೊಳಿಸುವುದು ಹೇಗೆ ಎಂದು ಓದಿ.
ಕೀಬೋರ್ಡ್ ಶಾರ್ಟ್ಕಟ್ಗಳು
twitter.com ನಲ್ಲಿ ಬಳಸಲು ಈ ಕೆಳಗೆ ಕೀಬೋರ್ಡ್ ಶಾರ್ಟ್ಕಟ್ಗಳ ಪಟ್ಟಿ ಇವೆ.
ಕ್ರಮಗಳು
- n = ಹೊಸ ಟ್ವೀಟ್
- l = ಇಷ್ಟಪಡಿ
- r = ಪ್ರತಿಕ್ರಿಯಿಸಿ
- t = ಮರುಟ್ವೀಟ್
- m = ನೇರ ಸಂದೇಶ
- u = ಖಾತೆ ಸದ್ದಡಗಿಸಿ
- b = ಖಾತೆ ತಡೆಹಿಡಿಯಿರಿ
- enter = ಟ್ವೀಟ್ ವಿವರಗಳನ್ನು ತೆರೆಯಿರಿ
- o = ಫೋಟೋ ವಿಸ್ತರಿಸಿ
- / = ಹುಡುಕಾಟ
- cmd-enter | ctrl-enter = ಟ್ವೀಟ್ ಕಳುಹಿಸಿ
ನ್ಯಾವಿಗೇಶನ್
- ? = ಸಂಪೂರ್ಣ ಕೀಬೋರ್ಡ್ ಮೆನು
- j = ಮುಂದಿನ ಟ್ವೀಟ್
- k = ಹಿಂದಿನ ಟ್ವೀಟ್
- space = ಪೇಜ್ ಡೌನ್
- . = ಹೊಸ ಟ್ವೀಟ್ಗಳನ್ನು ಲೋಡ್ ಮಾಡಿ
ಕಾಲರೇಖೆಗಳು
- g ಮತ್ತು h = ಹೋಮ್ ಕಾಲರೇಖೆ
- g ಮತ್ತು o = ಕ್ಷಣಗಳು
- g ಮತ್ತು n = ಸೂಚನೆಗಳ ಟ್ಯಾಬ್
- g ಮತ್ತು r = ಹೆಸರಿಸುವಿಕೆಗಳು
- g ಮತ್ತು p = ಪ್ರೊಫೈಲ್
- g ಮತ್ತು l = ಇಷ್ಟಪಡಿ ಟ್ಯಾಬ್
- g ಮತ್ತು i = ಲಿಸ್ಟ್ಗಳ ಟ್ಯಾಬ್
- g ಮತ್ತು m = ನೇರ ಸಂದೇಶಗಳು
- g ಮತ್ತು s = ಸೆಟ್ಟಿಂಗ್ಗಳು ಮತ್ತು ಗೌಪ್ಯತೆ
- g ಮತ್ತು u = ಇತರರ ಪ್ರೊಫೈಲ್ಗೆ ಹೋಗಿ