ನೇರ ಸಂದೇಶಗಳ ಕುರಿತು

ನೇರ ಸಂದೇಶಗಳು Twitter ನ ಖಾಸಗಿ ಭಾಗವಾಗಿದೆ. ಟ್ವೀಟ್‌ಗಳು ಮತ್ತು ಇತರ ಕಂಟೆಂಟ್ ಕುರಿತಂತೆ ಜನರೊಂದಿಗೆ ನೀವು ಖಾಸಗಿ ಸಂವಾದಗಳನ್ನು ಮಾಡಲು ನೇರ ಸಂದೇಶಗಳನ್ನು ಬಳಸಬಹುದು.

 

ಪ್ರಾಥಮಿಕ ಅಂಶಗಳು

iOS ಗಾಗಿ Twitter ಇಂದ ನೇರ ಸಂದೇಶ ಕಳುಹಿಸಲು

Android ಗಾಗಿ Twitter ಇಂದ ನೇರ ಸಂದೇಶಗಳನ್ನು ಕಳುಹಿಸಲು

ವೆಬ್‌ ಮೂಲಕ ನೇರ ಸಂದೇಶಗಳನ್ನು ಕಳುಹಿಸಲು

ನೇರ ಸಂದೇಶ ಸೂಚನೆಗಳನ್ನು ಸದ್ದಡಗಿಸಲು

ನೇರ ಸಂದೇಶ ಅಥವಾ ಸಂವಾದವನ್ನು ವರದಿ ಮಾಡಲು

ನೇರ ಸಂದೇಶದ ಮೂಲಕ ಟ್ವೀಟ್‌ ಹಂಚಲು

ಯಾರಿಂದಲಾದರೂ ನೇರ ಸಂದೇಶಗಳನ್ನು ಸ್ವೀಕರಿಸಲು

ನೇರ ಸಂದೇಶ ವಿನಂತಿಗಳನ್ನು ಪರಿಶೀಲಿಸಲು

ನೇರ ಸಂದೇಶ ಓದಿದ ರಸೀದಿಗಳನ್ನು ನಿಷ್ಕ್ರಿಯಗೊಳಿಸಲು

ನಿಮ್ಮ ಫೋನ್‌ನಲ್ಲಿ ಎಸ್ಎಮ್ಎಸ್ ಮೂಲಕ ನೇರ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು

ನೇರ ಸಂದೇಶಗಳ ಕುರಿತು ತಿಳಿದುಕೊಳ್ಳಬೇಕಿರುವ ಕೆಲವು ಪ್ರಮುಖ ಸಂಗತಿಗಳು:

 

ಪ್ರಾಥಮಿಕ ಅಂಶಗಳು

 • ನಿಮ್ಮನ್ನು ಹಿಂಬಾಲಿಸುವ ಯಾರೊಂದಿಗಾದರೂ ನೀವು ಖಾಸಗಿ ಸಂವಾದ ನಡೆಸಬಹುದು ಅಥವಾ ಸಮೂಹ ಸಂವಾದವನ್ನು ಆರಂಭಿಸಬಹುದು.
 • ನೀವು ಹಿಂಬಾಲಿಸದ ಯಾರಾದರೂ ನಿಮಗೆ ಈ ಸನ್ನಿವೇಶದಲ್ಲಿ ನೇರ ಸಂದೇಶ ಕಳುಹಿಸಬಹುದು:
  • ಯಾರಿಂದಲಾದರೂ ನೇರ ಸಂದೇಶಗಳನ್ನು ಸ್ವೀಕರಿಸಲು ನೀವು ಆಯ್ಕೆ ಮಾಡಿಕೊಂಡಿದ್ದೀರಿ;
  • ನೀವು ಆ ವ್ಯಕ್ತಿಗೆ ಈ ಹಿಂದೆ ನೇರ ಸಂದೇಶ ಕಳುಹಿಸಿದ್ದೀರಿ.
 • ಸಂವಾದದಲ್ಲಿರುವ ಯಾರಾದರೂ ಸಮೂಹಕ್ಕೆ ನೇರ ಸಂದೇಶಗಳನ್ನು ಕಳುಹಿಸಬಹುದು. ಪ್ರತಿಯೊಬ್ಬರೂ ಪರಸ್ಪರ ಹಿಂಬಾಲಿಸದೇ ಇದ್ದರೂ ಸಮೂಹದಲ್ಲಿರುವ ಎಲ್ಲರೂ ಎಲ್ಲ ಸಂದೇಶಗಳನ್ನು ನೋಡಬಹುದು.
 • ಸಮೂಹ ಸಂವಾದದಲ್ಲಿ, ಸಂವಾದದಲ್ಲಿರುವ ಯಾರಾದರೂ ಇತರ ಅಭ್ಯರ್ಥಿಗಳನ್ನು ಸೇರಿಸಬಹುದು. ಹೊಸದಾಗಿ ಸೇರಿದ ಅಭ್ಯರ್ಥಿಗಳು ಸಂವಾದದ ಇತಿಹಾಸವನ್ನು ನೋಡಲಾಗದು.
 • ಕೆಲವು ಖಾತೆಗಳು, ಅದರಲ್ಲೂ ವಿಶೇಷವಾಗಿ Twitter ನಲ್ಲಿ ವಹಿವಾಟುದಾರರು, ಯಾರಿಂದಲಾದರೂ ನೇರ ಸಂದೇಶಗಳನ್ನು ಸ್ವೀಕರಿಸಲು ಸೆಟ್ಟಿಂಗ್‌ನಲ್ಲಿ ಸಕ್ರಿಯಗೊಳಿಸಿರುತ್ತಾರೆ. ಈ ಖಾತೆಗಳು ನಿಮ್ಮ ಹಿಂಬಾಲಿಸದೇ ಇದ್ದರೂ ಇವುಗಳಿಗೆ ನೀವು ನೇರ ಸಂದೇಶವನ್ನು ಕಳುಹಿಸಬಹುದು.
 • ಸಮೂಹ ಮತ್ತು ಏಕ ಸಂವಾದಗಳೆರಡರಲ್ಲೂ, ನೀವು ನಿರ್ಬಂಧಿಸಿದ ಖಾತೆಯೊಂದಿಗೆ ಸಂವಾದವನ್ನು ನಡೆಸಲಾಗದು.

iOS ಗಾಗಿ Twitter ಇಂದ ನೇರ ಸಂದೇಶ ಕಳುಹಿಸಲು

 1. ಎನ್ವೆಲಪ್‌ ಐಕಾನ್ ತಟ್ಟಿ. ನಿಮ್ಮ ಸಂದೇಶಗಳಿಗೆ ನಿಮ್ಮನ್ನು ನಿರ್ದೇಶಿಸಲಾಗುತ್ತದೆ.
 2. ಹೊಸ ಸಂದೇಶವನ್ನು ರಚಿಸಲು ಸಂದೇಶ ಐಕಾನ್   ತಟ್ಟಿ.
 3. ವಿಳಾಸ ಬಾಕ್ಸ್‌ನಲ್ಲಿ, ಸಂದೇಶವನ್ನು ನೀವು ಯಾರಿಗೆ ಕಳುಹಿಸಲು ಬಯಸುತ್ತೀರೋ ಆ ವ್ಯಕ್ತಿಯ ಹೆಸರು(ಗಳು) ಅಥವಾ @ಬಳಕೆದಾರರ ಹೆಸರು(ಗಳನ್ನು) ಬರೆಯಿರಿ. ಸಮೂಹ ಸಂದೇಶದಲ್ಲಿ 50 ಜನರನ್ನು ಸೇರಿಸಬಹುದು.
 4. ನಿಮ್ಮ ಸಂದೇಶ ನಮೂದಿಸಿ.
 5. ಪಠ್ಯದ ಜೊತೆಗೆ, ನೀವು ಫೋಟೋ, ವೀಡಿಯೋ ಅಥವಾ ಜಿಫ್‌ ಅನ್ನು ನೀವು ನೇರ ಸಂದೇಶದಲ್ಲಿ ಸೇರಿಸಬಹುದು. ಸಂದೇಶ ರಚನೆ ಪಟ್ಟಿಯಿಂದ ಅಥವಾ ಕೂಡಿಸು ಐಕಾನ್‌ನಿಂದ  ಈ ಮುಂದಿನ ಆಯ್ಕೆಗಳಿಗೆ ಪ್ರವೇಶ ಪಡೆಯಬಹುದು:
  • ಫೋಟೋ ತೆಗೆಯಲು ಅಥವಾ ವೀಡಿಯೋ ರೆಕಾರ್ಡ್ ಮಾಡಲು ಅಥವಾ ನಿಮ್ಮ ಸಾಧನದ ಗ್ಯಾಲರಿಯಿಂದ ಒಂದನ್ನು ಲಗತ್ತಿಸಲು ಫೋಟೋ ಐಕಾನ್ ತಟ್ಟಿ. ನಿಮ್ಮ ಸಂದೇಶವನ್ನು ಕಳುಹಿಸುವುದಕ್ಕೂ ಮೊದಲು ನಿಮ್ಮ ಫೋಟೋ ಎಡಿಟ್‌ ಮಾಡಲು ನೀವು ಆಯ್ಕೆ ಹೊಂದಿದ್ದೀರಿ. ನೀವು ಫೋಟೋವನ್ನು ವರ್ಧಿಸುವ, ಕತ್ತರಿಸುವ ಮತ್ತು ಫಿಲ್ಟರುಗಳನ್ನು ಸೇರಿಸಬಹುದಾದ ಎಡಿಟಿಂಗ್ ಸ್ಕ್ರೀನ್‌ ಕಾಣಿಸಿಕೊಳ್ಳಲು ಫೋಟೋ ಮೇಲೆ ತಟ್ಟಿ. ಎಡಿಟಿಂಗ್ ಮುಗಿದ ನಂತರ, ಉಳಿಸಿ ತಟ್ಟಿ. ಸುಧಾರಿತ ಫೋಟೋ ಆಯ್ಕೆಗಳ ಕುರಿತು ಇನ್ನಷ್ಟು  ತಿಳಿಯಿರಿ.
  • ನಿಮ್ಮ ಸಂದೇಶದಲ್ಲಿ ಆನಿಮೇಟೆಡ್‌ ಜಿಫ್‌ ಸೇರಿಸುವುದಕ್ಕಾಗಿ, ಮೀಡಿಯಾ ಲೈಬ್ರರಿಯಿಂದ ಹುಡುಕಲು ಮತ್ತು ಒಂದು ಫೈಲ್ ಅನ್ನು ಆಯ್ಕೆ ಮಾಡಲು ಜಿಫ್‌ ಐಕಾನ್‌  ತಟ್ಟಿ.
 6. ನಿಮ್ಮ ಸಂದೇಶವನ್ನು ಕಳುಹಿಸಲು, ಕಾಗದದ ವಿಮಾನದ ಐಕಾನ್ ತಟ್ಟಿ 

ನೇರ ಸಂದೇಶ ಅಥವಾ ಸಂವಾದವನ್ನು ಅಳಿಸಲು:

 • ಒಂದು ನೇರ ಸಂದೇಶವನ್ನು ಅಳಿಸಲು, ಸಂದೇಶವನ್ನು ತಟ್ಟಿ ಮತ್ತು ಹಿಡಿಯಿರಿ ಮತ್ತು ಕಾಣಿಸಿಕೊಳ್ಳುವ ಮೆನುವಿನಿಂದ ಸಂದೇಶ ಅಳಿಸು ಆಯ್ಕೆ ಮಾಡಿ.
 • ನಿಮ್ಮ ಇನ್‌ಬಾಕ್ಸ್‌ನಿಂದ ಇಡೀ ಸಂವಾದವನ್ನು ಅಳಿಸಲು, ಸಂವಾದದ ಮೇಲೆ ಎಡಕ್ಕೆ ಉಜ್ಜಿ ಮತ್ತು ಕಸದ ಡಬ್ಬಿ ಐಕಾನ್ ಅನ್ನು ತಟ್ಟಿ  ಮಾಹಿತಿ ಐಕಾನ್  ತಟ್ಟಿ ಸಂವಾದ ಮಾಹಿತಿ ಪುಟದಿಂದ ಸಂವಹನ ಅಳಿಸಿ ಆಯ್ಕೆ ಮಾಡುವ ಮೂಲಕ ಇಡೀ ಸಂವಾದವನ್ನುಕೂಡ ನೀವು ಅಳಿಸಬಹುದು.
 • ನೀವು ನೇರ ಸಂದೇಶವನ್ನು ಅಥವಾ ಸಂವಾದವನ್ನು (ಕಳುಹಿಸಿದ ಅಥವಾ ಸ್ವೀಕರಿಸಿದ) ಅಳಿಸಿದಾಗ ನಿಮ್ಮ ಖಾತೆಯಿಂದ ಮಾತ್ರ ಇದು ಅಳಿಸಲ್ಪಡುತ್ತದೆ. ನೀವು ಅಳಿಸಿದ ನೇರ ಸಂದೇಶಗಳು ಅಥವಾ ಸಂವಾದಗಳು ಸಂವಾದದಲ್ಲಿನ ಇತರರಿಗೆ ಕಾಣಿಸುತ್ತಲೇ ಇರುತ್ತದೆ.

ಸಮೂಹ ಸಂವಾದವನ್ನು ನಿರ್ವಹಿಸಲು:

 • ಸಂವಾದ ಪಾಲುದಾರರ ಪಟ್ಟಿಯನ್ನು ತ್ವರಿತವಾಗಿ ಪ್ರವೇಶಿಸಲು, ನಿಮ್ಮ ಇನ್‌ಬಾಕ್ಸ್‌ನಿಂದ ಸಮೂಹ ಸಂವಹನ ಪ್ರೊಫೈಲ್ ಫೋಟೋ ಅನ್ನು ತಟ್ಟಿ. 
 • ಸಮೂಹ ಸಂವಹನದೊಳಗಿನಿಂದ, ಸೆಟ್ಟಿಂಗ್ಸ್‌ ಪುಟವನ್ನು ಮೇಲೆ ತರುವುದಕ್ಕಾಗಿ ಮಾಹಿತಿ ಐಕಾನ್  ಮೇಲೆ ತಟ್ಟಿ.
 • ಸೆಟ್ಟಿಂಗ್‌ಗಳ‌ ವಿವರಗಳು:
  • ಸಮೂಹ ಸಂವಾದ ಪ್ರೊಫೈಲ್ ಫೋಟೋ ಮತ್ತು ಹೆಸರನ್ನು ಅಪ್‌ಡೇಟ್‌ ಮಾಡಲು ಎಡಿಟ್ ತಟ್ಟಿ. ಫೋಟೋ ಬದಲಿಸಲು, ಲೈಬ್ರರಿಯಿಂದ ಆಯ್ಕೆ ಮಾಡಿಕೊಳ್ಳಲು ಅಥವಾ ಹೊಸ ಫೋಟೋ ತೆಗೆಯಲು ಫೋಟೋದಲ್ಲಿನ ಕ್ಯಾಮೆರಾ ಐಕಾನ್ ತಟ್ಟಿ. ಅಪ್‌ಡೇಟ್ ಮಾಡಲು ಉಳಿಸಿ ತಟ್ಟಿ. 
   ಗಮನಿಸಿ: ನೀವು ಫೋಟೋವನ್ನು ಅಪ್‌ಡೇಟ್‌ ಮಾಡಿದಾಗ, ಪ್ರಸ್ತುತ ಫೋಟೋ ತೆಗೆದುಹಾಕುವುದು, ಪ್ರಸ್ತುತ ಫೋಟೋ ವೀಕ್ಷಣೆ, ಲೈಬ್ರರಿಯಿಂದ ಆಯ್ಕೆ ಅಥವಾ ಹೊಸ ಫೋಟೋ ತೆಗೆದುಕೊಳ್ಳುವುದು ಆಯ್ಕೆಯನ್ನು ನೀವು ಹೊಂದಿರುತ್ತೀರಿ.
  • ಸಂವಾದಕ್ಕೆ ಜನರನ್ನು ಸೇರಿಸಲು ಸದಸ್ಯರನ್ನು ಸೇರಿಸಿ ತಟ್ಟಿ.
  • ಸಂವಾದಗಳನ್ನು 1 ಗಂಟೆ, 8 ಗಂಟೆಗಳು, 1 ವಾರ ಅಥವಾ ಎಂದಿಗೂ ಸದ್ದಡಗಿಸಲು ಸಂವಾದ ಸದ್ದಡಗಿಸು ಎಂಬುದರ ಪಕ್ಕ ಇರುವ ಸ್ಲೈಡರ್ ಅನ್ನು ಎಳೆಯಿರಿ. 
  • ಸಮೂಹ ಸಂವಹನದಲ್ಲಿ ನಿಮ್ಮನ್ನು ಹೆಸರಿಸಿದಾಗ ನೀವು ಸೂಚನೆಗಳನ್ನು ಪಡೆಯಬೇಕೆ ಎಂಬುದನ್ನು ನಿಯಂತ್ರಿಸಲು ಸಂವಾದಗಳ ಸದ್ದಡಗಿಸು ಎಂಬುದರ ಪಕ್ಕದಲ್ಲಿರುವ ಸ್ಲೈಡರ್ ಅನ್ನು ಎಳೆಯಿರಿ. ದಯವಿಟ್ಟು ಗಮನಿಸಿ, ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸದ ಹೊರತು, ಸಂವಾದ ಸದ್ದಡಗಿಸು ಎಂಬ ಲಕ್ಷಣವನ್ನು ಸಕ್ರಿಯಗೊಳಿಸಿದ್ದರೂ ಸಂವಾದದಲ್ಲಿ ನಿಮ್ಮನ್ನು ನೇರವಾಗಿ ಹೆಸರಿಸಿದಾಗ ನೀವು ಸೂಚನೆಗಳನ್ನು ಪಡೆಯುವುದಿಲ್ಲ. ಹೆಚ್ಚುವರಿಯಾಗಿ, ಆ ಸಂವಾದಕ್ಕೆ ಹೆಸರಿಸುವಿಕೆ ಸೂಚನೆಗಳನ್ನು ಸ್ವೀಕರಿಸಲು ಸಮೂಹ ಸಂವಾದದಲ್ಲಿ ನೀವು ಭಾಗಹಿಸಿರಬೇಕು.
  • ಸಮೂಹ ಸಂವಾದವನ್ನು ವರದಿ ಮಾಡಲು ಸಂವಾದ ವರದಿ ಮಾಡಿ ಎಂಬುದನ್ನು ತಟ್ಟಿ.
  • ಸಮೂಹ ಸಂವಾದದಿಂದ ನಿಮ್ಮನ್ನು ತೆಗೆಯುವುದಕ್ಕಾಗಿ, ಸಂವಾದ ತೊರೆಯಿರಿ ತಟ್ಟಿ. 

Android ಗಾಗಿ Twitter ಇಂದ ನೇರ ಸಂದೇಶಗಳನ್ನು ಕಳುಹಿಸಲು

 1. ಎನ್ವೆಲಪ್‌ ಐಕಾನ್ ತಟ್ಟಿ. ನಿಮ್ಮ ಸಂದೇಶಗಳಿಗೆ ನಿಮ್ಮನ್ನು ನಿರ್ದೇಶಿಸಲಾಗುತ್ತದೆ.
 2. ಹೊಸ ಸಂದೇಶವನ್ನು ರಚಿಸಲು ಸಂದೇಶ ಐಕಾನ್  ತಟ್ಟಿ.
 3. ವಿಳಾಸ ಬಾಕ್ಸ್‌ನಲ್ಲಿ, ಸಂದೇಶವನ್ನು ನೀವು ಯಾರಿಗೆ ಕಳುಹಿಸಲು ಬಯಸುತ್ತೀರೋ ಆ ವ್ಯಕ್ತಿಯ ಹೆಸರು(ಗಳು) ಅಥವಾ @ಬಳಕೆದಾರರ ಹೆಸರು(ಗಳನ್ನು) ಬರೆಯಿರಿ. ಸಮೂಹ ಸಂದೇಶದಲ್ಲಿ 50 ಜನರನ್ನು ಸೇರಿಸಬಹುದು.
 4. ನಿಮ್ಮ ಸಂದೇಶ ನಮೂದಿಸಿ.
 5. ಪಠ್ಯದ ಜೊತೆಗೆ, ನೀವು ಫೋಟೋ, ವೀಡಿಯೋ ಅಥವಾ ಜಿಫ್‌ ಅನ್ನು ನೇರ ಸಂದೇಶದ ಮೂಲಕ ಸೇರಿಸಬಹುದು.
  • ಫೋಟೋ ತೆಗೆಯಲು ಅಥವಾ ವೀಡಿಯೋ ರೆಕಾರ್ಡ್ ಮಾಡಲು ಅಥವಾ ನಿಮ್ಮ ಸಾಧನದ ಗ್ಯಾಲರಿಯಿಂದ ಒಂದನ್ನು ಲಗತ್ತಿಸಲು ಫೋಟೋ ಐಕಾನ್  ತಟ್ಟಿ. ನಿಮ್ಮ ಸಂದೇಶವನ್ನು ಕಳುಹಿಸುವುದಕ್ಕೂ ಮುನ್ನ iOS ಗಾಗಿ Twitter ಅಥವಾ ಆಂಡ್ರಾಯ್ಡ್​ಗಾಗಿ Twitter ಮೂಲಕ ನಿಮ್ಮ ಫೋಟೋವನ್ನು ಎಡಿಟ್ ಮಾಡಲು ನೀವು ಆಯ್ಕೆ ಹೊಂದಿರುತ್ತೀರಿ. ನೀವು ಫೋಟೋವನ್ನು ವರ್ಧಿಸುವ, ಕತ್ತರಿಸುವ ಮತ್ತು ಫಿಲ್ಟರುಗಳನ್ನು ಸೇರಿಸಬಹುದಾದ ಎಡಿಟಿಂಗ್ ಸ್ಕ್ರೀನ್‌ ಕಾಣಿಸಿಕೊಳ್ಳಲು ಫೋಟೋ ಮೇಲೆ ತಟ್ಟಿ. ಎಡಿಟಿಂಗ್ ಮುಗಿದ ನಂತರ, ಉಳಿಸಿ ತಟ್ಟಿ.  ಸುಧಾರಿತ ಫೋಟೋ ಆಯ್ಕೆಗಳ ಕುರಿತು ಇನ್ನಷ್ಟು ತಿಳಿಯಿರಿ. 
  • ನಿಮ್ಮ ಸಂದೇಶದಲ್ಲಿ ಆನಿಮೇಟೆಡ್‌ ಜಿಫ್‌ ಸೇರಿಸುವುದಕ್ಕಾಗಿ, ಮೀಡಿಯಾ ಲೈಬ್ರರಿಯಿಂದ ಹುಡುಕಲು ಮತ್ತು ಒಂದು ಫೈಲ್ ಅನ್ನು ಆಯ್ಕೆ ಮಾಡಲು ಜಿಫ್‌ ಐಕಾನ್‌  ತಟ್ಟಿ.
 6. ಕಳುಹಿಸಿ ಐಕಾನ್ ತಟ್ಟಿ.

ನೇರ ಸಂದೇಶ ಅಥವಾ ಸಂವಾದವನ್ನು ಅಳಿಸಲು:

 • ಒಂದು ನೇರ ಸಂದೇಶವನ್ನು ಅಳಿಸಲು, ಸಂದೇಶವನ್ನು ತಟ್ಟಿ ಮತ್ತು ಹಿಡಿಯಿರಿ ಮತ್ತು ಕಾಣಿಸಿಕೊಳ್ಳುವ ಮೆನುವಿನಿಂದ ಸಂದೇಶ ಅಳಿಸು ಆಯ್ಕೆ ಮಾಡಿ.
 • ನಿಮ್ಮ ಇನ್‌ಬಾಕ್ಸ್‌ನಿಂದ ಇಡೀ ಸಂವಾದವನ್ನು ಅಳಿಸಲು, ಸಂವಾದವನ್ನು ತಟ್ಟಿ ಮತ್ತು ಹಿಡಿದುಕೊಳ್ಳಿ ಮತ್ತು ಸಂವಾದ ಅಳಿಸಿ ಆಯ್ಕೆ ಮಾಡಿ. ಮಾಹಿತಿ ಐಕಾನ್  ತಟ್ಟಿ ಸಂವಾದ ಮಾಹಿತಿ ಪುಟದಿಂದ ಸಂವಾದ ಅಳಿಸಿ ಆಯ್ಕೆ ಮಾಡುವ ಮೂಲಕ ಇಡೀ ಸಂವಾದವನ್ನು ಕೂಡ ನೀವು ಅಳಿಸಬಹುದು.
 • ನೀವು ನೇರ ಸಂದೇಶವನ್ನು ಅಥವಾ ಸಂವಾದವನ್ನು (ಕಳುಹಿಸಿದ ಅಥವಾ ಸ್ವೀಕರಿಸಿದ) ಅಳಿಸಿದಾಗ ನಿಮ್ಮ ಖಾತೆಯಿಂದ ಮಾತ್ರ ಇದು ಅಳಿಸಲ್ಪಡುತ್ತದೆ. ನೀವು ಅಳಿಸಿದ ನೇರ ಸಂದೇಶಗಳು ಅಥವಾ ಸಂವಾದಗಳು ಸಂವಾದದಲ್ಲಿನ ಇತರರಿಗೆ ಕಾಣಿಸುತ್ತಲೇ ಇರುತ್ತದೆ.

ಸಮೂಹ ಸಂವಾದವನ್ನು ನಿರ್ವಹಿಸಲು:

 • ಸಂವಾದ ಪಾಲುದಾರರ ಪಟ್ಟಿಯನ್ನು ತ್ವರಿತವಾಗಿ ಪ್ರವೇಶಿಸಲು, ನಿಮ್ಮ ಇನ್‌ಬಾಕ್ಸ್‌ನಿಂದ ಸಮೂಹ ಸಂವಹನ ಪ್ರೊಫೈಲ್ ಫೋಟೋ ಅನ್ನು ತಟ್ಟಿ.
 • ಸಮೂಹ ಸಂವಾದದೊಳಗಿನಿಂದ, ಸೆಟ್ಟಿಂಗ್ಸ್‌ ಪುಟವನ್ನು ಮೇಲೆ ತರುವುದಕ್ಕಾಗಿ ಮಾಹಿತಿ ಐಕಾನ್  ಮೇಲೆ ತಟ್ಟಿ.
 • ಸೆಟ್ಟಿಂಗ್‌ಗಳ‌ ವಿವರಗಳು:
  • ಸಮೂಹ ಸಂವಾದ ಪ್ರೊಫೈಲ್ ಫೋಟೋ ಮತ್ತು ಹೆಸರನ್ನು ಅಪ್‌ಡೇಟ್‌ ಮಾಡಲು ಎಡಿಟ್ ತಟ್ಟಿ. ಈ ಮುಂದಿನ ಫೋಟೋ ಆಯ್ಕೆಗಳನ್ನು ಮೇಲೆ ತರಲು ಕ್ಯಾಮೆರಾ ಐಕಾನ್ ತಟ್ಟಿ: ಫೋಟೋ, ಕ್ಯಾಮೆರಾ, ಫೊಟೋ ಗ್ಯಾಲರಿ, ಅಥವಾ ಫೋಟೋ ತೆಗೆಯಿರಿ ವೀಕ್ಷಿಸಿ. ಅಪ್‌ಡೇಟ್ ಮಾಡಲು ಉಳಿಸಿ ತಟ್ಟಿ.
  • ಸಂವಾದಕ್ಕೆ ಜನರನ್ನು ಸೇರಿಸಲು ಸದಸ್ಯರನ್ನು ಸೇರಿಸಿ ತಟ್ಟಿ.  ಸಮೂಹದ ರಚನೆಕಾರರು ಡೀಫಾಲ್ಟ್‌ ಆಗಿ ನಿರ್ವಾಹಕರಾಗಿರುತ್ತಾರೆ. ಸಮೂಹದಲ್ಲಿ ರಚನೆಕಾರರು ಇಲ್ಲದಿದ್ದರೆ, ನಿರ್ವಾಹಕರ ನಂತರ ಸಮೂಹಕ್ಕೆ ಸೇರಿದ ಮೊದಲ ಸದಸ್ಯರು ನಿರ್ವಾಹಕರಾಗುತ್ತಾರೆ. ಸಮೂಹ ನಿರ್ವಾಹಕರಂತೆಯೇ ನೀವು ಸಮೂಹದಿಂದ ಸದಸ್ಯರನ್ನು ತೆಗೆಯಲು ನೀವು ಅರ್ಹರಾಗಿರುತ್ತೀರಿ.
  • ಸಂವಾದಗಳನ್ನು 1 ಗಂಟೆ, 8 ಗಂಟೆಗಳು, 1 ವಾರ ಅಥವಾ ಎಂದಿಗೂ ಸದ್ದಡಗಿಸಲು ಸಂವಾದ ಸದ್ದಡಗಿಸು ಎಂಬುದನ್ನು ತಟ್ಟಿ. 
  • ಸಮೂಹ ಸಂವಹನದಲ್ಲಿ ನಿಮ್ಮನ್ನು ಹೆಸರಿಸಿದಾಗ ನೀವು ಸೂಚನೆಗಳನ್ನು ಪಡೆಯಬೇಕೆ ಎಂಬುದನ್ನು ನಿಯಂತ್ರಿಸಲು ಸಂವಾದಗಳ ಸದ್ದಡಗಿಸು ಎಂಬುದರ ಪಕ್ಕದಲ್ಲಿರುವ ಬಾಕ್ಸ್‌ ಅನ್ನು ಗುರುತು ಮಾಡಿ. ದಯವಿಟ್ಟು ಗಮನಿಸಿ, ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸದ ಹೊರತು, ಸಂವಾದ ಸದ್ದಡಗಿಸು ಎಂಬ ಲಕ್ಷಣವನ್ನು ಸಕ್ರಿಯಗೊಳಿಸಿದ್ದರೂ ಸಂವಾದದಲ್ಲಿ ನಿಮ್ಮನ್ನು ನೇರವಾಗಿ ಹೆಸರಿಸಿದಾಗ ನೀವು ಸೂಚನೆಗಳನ್ನು ಪಡೆಯುವುದಿಲ್ಲ ಹೆಚ್ಚುವರಿಯಾಗಿ, ಆ ಸಂವಾದಕ್ಕೆ ಹೆಸರಿಸುವಿಕೆ ಸೂಚನೆಗಳನ್ನು ಸ್ವೀಕರಿಸಲು ಸಮೂಹ ಸಂವಹನದಲ್ಲಿ ನೀವು ಭಾಗಿಯಾಗಿರಬೇಕು.
  • ಸಮೂಹ ಸಂವಾದವನ್ನು ವರದಿ ಮಾಡಲು ಸಂವಾದ ವರದಿ ಮಾಡಿ ಎಂಬುದನ್ನು ತಟ್ಟಿ.
  • ಸಮೂಹ ಸಂವಾದದಿಂದ ನಿಮ್ಮನ್ನು ತೆಗೆಯುವುದಕ್ಕಾಗಿ, ಸಂವಾದ ತೊರೆಯಿರಿ ತಟ್ಟಿ.

ವೆಬ್‌ ಮೂಲಕ ನೇರ ಸಂದೇಶಗಳನ್ನು ಕಳುಹಿಸಲು

 1. ಎಡ ನ್ಯಾವಿಗೇಶನ್‌ ಪಟ್ಟಿಯಲ್ಲಿನ ಸಂದೇಶಗಳನ್ನು ಕ್ಲಿಕ್ ಮಾಡಿ.
 2. ನಿಮ್ಮ ನೇರ ಸಂದೇಶದ ಇತಿಹಾಸವನ್ನು ನೀವು ನೋಡಬಹುದು. ಮೇಲ್ಭಾಗದಲ್ಲಿನ ಹೊಸ ಸಂದೇಶ ಐಕಾನ್‌ ಕ್ಲಿಕ್ ಮಾಡಿ.
 3. ವಿಳಾಸ ಬಾಕ್ಸ್‌ನಲ್ಲಿ, ಸಂದೇಶವನ್ನು ನೀವು ಯಾರಿಗೆ ಕಳುಹಿಸಲು ಬಯಸುತ್ತೀರೋ ಆ ವ್ಯಕ್ತಿಯ ಹೆಸರು(ಗಳು) ಅಥವಾ @ಬಳಕೆದಾರರ ಹೆಸರು(ಗಳನ್ನು) ಬರೆಯಿರಿ. ಸಮೂಹ ಸಂದೇಶದಲ್ಲಿ 50 ಜನರನ್ನು ಸೇರಿಸಬಹುದು.
 4. ಮುಂದೆ ಕ್ಲಿಕ್‌ ಮಾಡಿ
 5. ಸಂದೇಶ ಬಾಕ್ಸ್‌ನಲ್ಲಿ, ನೀವು ಫೋಟೋ, ವೀಡಿಯೋ ಅಥವಾ ಜಿಫ್‌ ಅನ್ನು ನೇರ ಸಂದೇಶದ ಮೂಲಕ ಸೇರಿಸಬಹುದು:
 • ಫೋಟೋ ಅಥವಾ ವೀಡಿಯೋ ಅಪ್‌ಲೋಡ್‌ ಮಾಡಲು ಫೋಟೋ ಐಕಾನ್ ಮೇಲೆ ಕ್ಲಿಕ್ ಮಾಡಿ.
 • ನಿಮ್ಮ ಸಂದೇಶದಲ್ಲಿ ಆನಿಮೇಟೆಡ್‌ ಜಿಫ್‌ ಸೇರಿಸಲು, ಮಾಧ್ಯಮ ಲೈಬ್ರರಿಯಲ್ಲಿ ಹುಡುಕಲು ಮತ್ತು ಫೈಲ್‌ ಆಯ್ಕೆ ಮಾಡಲು ಜಿಫ್‌ ಐಕಾನ್‌ ತಟ್ಟಿ.
 • ಕಳುಹಿಸಲು ಕಳುಹಿಸಿ ಬಟನ್‌ ಕ್ಲಿಕ್ ಮಾಡಿ ಅಥವಾ ಎಂಟರ್ ಕೀ ಕ್ಲಿಕ್ ಮಾಡಿ. 

ಗಮನಿಸಿ: ಸಂದೇಶದಲ್ಲಿ ಹೊಸ ಸಾಲನ್ನು ಆರಂಭಿಸಲು, ಶಿಫ್ಟ್‌ ಮತ್ತು ಎಂಟರ್‌ ಕೀಗಳನ್ನು ಒಟ್ಟಿಗೆ ಒತ್ತಿ. ಕೇವಲ ಎಂಟರ್‌ ಕೀ ಒತ್ತಿದರೆ ನಿಮ್ಮ ಸಂದೇಶ ಕಳುಹಿಸಲ್ಪಡುತ್ತದೆ.

ನೇರ ಸಂದೇಶ ಅಥವಾ ಸಂವಾದವನ್ನು ಅಳಿಸಲು:

 • ನೇರ ಸಂದೇಶವನ್ನು ಅಳಿಸಲು, ಸಂದೇಶದ ಮೇಲೆ ಕ್ಲಿಕ್ ಮಾಡಿ ಮತ್ತು ಅಳಿಸಿ ಆಯ್ಕೆ ಮಾಡಿ.
 • ಸಂವಾದವನ್ನು ತೊರೆಯಲು, ಸಂವಾದವನ್ನು ಕಂಡುಕೊಳ್ಳಿ ಮತ್ತು ತೆರೆಯಲು ಕ್ಲಿಕ್ ಮಾಡಿ. ಮಾಹಿತಿ  ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ಸಂವಾದ ತೊರೆಯಿರಿ ಆಯ್ಕೆ ಮಾಡಿ.
 • ನೀವು ಒಂದು ನೇರ ಸಂದೇಶವನ್ನು ಅಳಿಸಿದಾಗ ಅಥವಾ ಸಂವಾದವನ್ನು ತೊರೆದಾಗ (ಕಳುಹಿಸಿದ ಅಥವಾ ಸ್ವೀಕರಿಸಿದ), ಇದನ್ನು ನಿಮ್ಮ ಖಾತೆಯಿಂದ ಮಾತ್ರ ಅಳಿಸಲಾಗುತ್ತದೆ. ನೀವು ಅಳಿಸಿದ ನೇರ ಸಂದೇಶಗಳು ಅಥವಾ ಸಂವಾದಗಳು ಸಂವಾದದಲ್ಲಿನ ಇತರರಿಗೆ ಕಾಣಿಸುತ್ತಲೇ ಇರುತ್ತದೆ.

ಸಮೂಹ ಸಂವಾದವನ್ನು ನಿರ್ವಹಿಸಲು:

 • ಸಮೂಹ ಸಂವಹನದೊಳಗೆ, ಸಂವಾದ ಸೆಟ್ಟಿಂಗ್‌ಗಳಿಗೆ ಪ್ರವೇಶಾವಕಾಶ ಪಡೆಯಲು ಮಾಹಿತಿ ಐಕಾನ್‌  ಮೇಲೆ ಕ್ಲಿಕ್ ಮಾಡಿ.
  • ಸಮೂಹ ಮಾಹಿತಿ ಪುಟದಲ್ಲಿ, ಡ್ರಾಪ್ ಡೌನ್ ಮೆನು ಪ್ರವೇಶಾವಕಾಶ ಪಡೆಯಲು ಇನ್ನಷ್ಟು ಐಕಾನ್  ಕ್ಲಿಕ್ ಮಾಡಿ. ಸಮೂಹ ಹೆಸರು ಎಡಿಟ್, ಹೊಸ ಫೋಟೋ ಅಪ್‌ಲೋಡ್‌, ಫೋಟೋ ವೀಕ್ಷಣೆ ಅಥವಾ ಫೋಟೋ ತೆಗೆಯುವುದು ಅನ್ನು ನೀವು ಆಯ್ಕೆ ಮಾಡಬಹುದು.
   ಗಮನಿಸಿ: ಸಮೂಹ ಸಂದೇಶ ಫೋಟೋವನ್ನು ಅಪ್‌ಲೋಡ್ ಮಾಡಿದ್ದರೆ ಮಾತ್ರ ಫೋಟೋವನ್ನು ವೀಕ್ಷಿಸಲು ಮತ್ತು ತೆಗೆಯಲು ಲಭ್ಯವಿರುತ್ತದೆ.
 • ಸೂಚನೆಗಳು ಅಡಿಯಲ್ಲಿ, ನೀವು ಇದನ್ನು ಆಯ್ಕೆ ಮಾಡಬಹುದು: 
  • ಸೂಚನೆಗಳನ್ನು 1 ಗಂಟೆ, 8 ಗಂಟೆಗಳು, 1 ವಾರ ಅಥವಾ ಎಂದಿಗೂ ಸದ್ದಡಗಿಸಲು ಸೂಚನೆಗಳನ್ನು ಸದ್ದಡಗಿಸು ಎಂಬುದನ್ನು ಕ್ಲಿಕ್ ಮಾಡಿ. 
  • ಸಮೂಹ ಸಂವಹನದಲ್ಲಿ ನಿಮ್ಮನ್ನು ಹೆಸರಿಸಿದಾಗ ನೀವು ಸೂಚನೆಗಳನ್ನು ಪಡೆಯಬೇಕೆ ಎಂಬುದನ್ನು ನಿಯಂತ್ರಿಸಲು ಹೆಸರಿಸುವಿಕೆ ಸದ್ದಡಗಿಸು ಎಂಬುದನ್ನು ಕ್ಲಿಕ್ ಮಾಡಿ. ದಯವಿಟ್ಟು ಗಮನಿಸಿ, ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸದ ಹೊರತು, ಸಂವಾದ ಸದ್ದಡಗಿಸು ಎಂಬ ಲಕ್ಷಣವನ್ನು ಸಕ್ರಿಯಗೊಳಿಸಿದ್ದರೂ ಸಂವಾದದಲ್ಲಿ ನಿಮ್ಮನ್ನು ನೇರವಾಗಿ ಹೆಸರಿಸಿದಾಗ ನೀವು ಸೂಚನೆಗಳನ್ನು ಪಡೆಯುವುದಿಲ್ಲ ಹೆಚ್ಚುವರಿಯಾಗಿ, ಆ ಸಂವಾದಕ್ಕೆ ಹೆಸರಿಸುವಿಕೆ ಸೂಚನೆಗಳನ್ನು ಸ್ವೀಕರಿಸಲು ಸಮೂಹ ಸಂವಹನದಲ್ಲಿ ನೀವು ಭಾಗಿಯಾಗಿರಬೇಕು.
 • ಸಮೂಹ ಸಂವಹನಕ್ಕೆ ವರದಿ ಮಾಡಲು, ಸಂವಾದ ವರದಿ ಮಾಡಿ ಕ್ಲಿಕ್ ಮಾಡಿ.
 • ಸಮೂಹ ಸಂವಹನದಿಂದ ನಿಮ್ಮನ್ನು ನೀವು ತೆಗೆಯಲು, ಸಂವಾದ ತೊರೆಯಿರಿ ಕ್ಲಿಕ್ ಮಾಡಿ.

ನೇರ ಸಂದೇಶ ಸೂಚನೆಗಳನ್ನು ಸದ್ದಡಗಿಸಲು

ನೇರ ಸಂದೇಶಗಳಿಗೆ ಸೂಚನೆಗಳನ್ನು 1 ಗಂಟೆ, 8 ಗಂಟೆಗಳು, 1 ವಾರ ಅಥವಾ ಎಂದಿಗೂ ಸದ್ದಡಗಿಸಬಹುದು. ನೀವು ನೇರ ಸಂದೇಶ ಸಂವಾದವನ್ನು ಸದ್ದಡಗಿಸಿದಾಗಲೂ ನೀವು ಹೊಸ ಸಂದೇಶಗಳನ್ನು ಸ್ವೀಕರಿಸುತ್ತೀರಿ, ಆದರೆ ಪ್ರತಿ ಬಾರಿಯೂ ಸೂಚನೆಗಳನ್ನು ನೀವು ಸ್ವೀಕರಿಸುವುದಿಲ್ಲ. ಗಮನಿಸಿ: ಹೆಸರಿಸುವಿಕೆ ಸದ್ದಡಗಿಸು ಸೆಟ್ಟಿಂಗ್‌ಅನ್ನು ಸಕ್ರಿಯಗೊಳಿಸದಿದ್ದರೆ, ನೀವು ಭಾಗವಾಗಿರುವ ಸಮೂಹದ ಸಂವಹನದಲ್ಲಿ ನಿಮ್ಮನ್ನು ನೇರವಾಗಿ ಹೆಸರಿಸಿದಾಗ ನೀವು ಸೂಚನೆಗಳನ್ನು ಸ್ವೀಕರಿಸುತ್ತೀರಿ.

twitter.com, iOS ಗಾಗಿ Twitter ಮತ್ತು Android ಗಾಗಿ Twitter ನಲ್ಲಿ ನೇರ ಸಂದೇಶ ಸಂವಾದದಲ್ಲಿ ಸದ್ದಡಗಿಸುವ ಬಗೆ:

 1. ನೀವು ಸದ್ದಡಗಿಸಲು ಬಯಸುವ ನೇರ ಸಂದೇಶಕ್ಕೆ ನ್ಯಾವಿಗೇಟ್ ಮಾಡಿ.
 2. ಸಂದೇಶ ಸೆಟ್ಟಿಂಗ್‌ಗಳಿಗಾಗಿ ಕ್ಲಿಕ್ ಮಾಡಿ ಅಥವಾ ತಟ್ಟಿ.
 3. ಮಾಹಿತಿ ಐಕಾನ್ ಅನ್ನು  ಕ್ಲಿಕ್ ಮಾಡಿ ಅಥವಾ ತಟ್ಟಿ ನಂತರ ಸೂಚನೆಗಳ ಸದ್ದಡಗಿಸಿ ಆಯ್ಕೆ ಮಾಡಿ. 
 4. ಪಾಪ್ ಅಪ್‌ ಮೆನುವಿನಿಂದ, ನೀವು ಬಯಸಿದ ಸದ್ದಡಗಿಸುವ ಸಮಯ ಅಂತರವನ್ನು ಆಯ್ಕೆ ಮಾಡಿ: 1 ಗಂಟೆ, 8 ಗಂಟೆಗಳು, 1 ವಾರ ಅಥವಾ ಎಂದಿಗೂ
 5. ಸದ್ದಡಗಿಸು ರದ್ದು ಮಾಡಲು ಮಾಹಿತಿ ಐಕಾನ್ ಅನ್ನು ಕ್ಲಿಕ್ ಮಾಡಿ ಅಥವಾ ತಟ್ಟಿ ನಂತರ ಸೂಚನೆಗಳ ಸದ್ದಡಗಿಸಿ ಅನ್ನು ಕ್ಲಿಕ್ ಮಾಡಿ ಅಥವಾ ತಟ್ಟಿ.

iOS ಗಾಗಿ Twitter ನಲ್ಲಿ ನಿಮ್ಮ ನೇರ ಸಂದೇಶ ಇನ್‌ಬಾಕ್ಸ್‌ನಿಂದ ಸದ್ದಡಗಿಸುವ ಬಗೆ:

 1. ನಿಮ್ಮ ನೇರ ಸಂದೇಶ ಇನ್‌ಬಾಕ್ಸ್‌ಗೆ ನ್ಯಾವಿಗೇಟ್ ಮಾಡಿ.
 2. ನೀವು ಸದ್ದಡಗಿಸಲು ಬಯಸಿರುವ ಸಂವಾದವನ್ನು ಕಂಡುಕೊಳ್ಳಿ.
 3. ಸಂದೇಶದ ಮೇಲೆ ಎಡಕ್ಕೆ ಸರಿಸಿರಿ ಮತ್ತು ಸೂಚನೆ ಐಕಾನ್  ತಟ್ಟಿ
  ಗಮನಿಸಿ: ನೀವು ಎಡಕ್ಕೆ ಸರಿಸಿದಾಗ ಒಂದು ಸಂವಾದವನ್ನು ವರದಿ  ಮಾಡಲು ಅಥವಾ ಅಳಿಸಲು  ನೀವು ಆಯ್ಕೆ ಮಾಡಿಕೊಳ್ಳಬಹುದು.
 4. ಪಾಪ್ ಅಪ್‌ ಮೆನುವಿನಿಂದ, ನೀವು ಬಯಸಿದ ಸದ್ದಡಗಿಸುವ ಸಮಯ ಅಂತರವನ್ನು ಆಯ್ಕೆ ಮಾಡಿ: 1 ಗಂಟೆ, 8 ಗಂಟೆಗಳು, 1 ವಾರ ಅಥವಾ ಎಂದಿಗೂ
 5. ಸದ್ದಡಗಿಸುವುದನ್ನು ರದ್ದು ಮಾಡಲು, ಎಡಕ್ಕೆ ಸರಿಸಿರಿ ಮತ್ತು ಸದ್ದಡಗಿಸಿದ ಸೂಚನೆಗಳು ಐಕಾನ್ ಅನ್ನು  ತಟ್ಟಿ

Android ಗಾಗಿ Twitter ನಲ್ಲಿ ನಿಮ್ಮ ನೇರ ಸಂದೇಶ ಇನ್‌ಬಾಕ್ಸ್‌ನಿಂದ ಸದ್ದಡಗಿಸುವ ಬಗೆ:

 1. ನಿಮ್ಮ ನೇರ ಸಂದೇಶ ಇನ್‌ಬಾಕ್ಸ್‌ಗೆ ನ್ಯಾವಿಗೇಟ್ ಮಾಡಿ.
 2. ನೀವು ಸದ್ದಡಗಿಸಲು ಬಯಸಿರುವ ಸಂವಾದವನ್ನು ಕಂಡುಕೊಳ್ಳಿ.
 3. ಸಂದೇಶದ ಮೇಲೆ ದೀರ್ಘವಾಗಿ ಒತ್ತಿ ಮತ್ತು ಸೂಚನೆಗಳನ್ನು ಸದ್ದಡಗಿಸಿ ಒತ್ತಿ.
 4. ಪಾಪ್ ಅಪ್‌ ಮೆನುವಿನಿಂದ, ನೀವು ಬಯಸಿದ ಸದ್ದಡಗಿಸುವ ಸಮಯ ಅಂತರವನ್ನು ಆಯ್ಕೆ ಮಾಡಿ: 1 ಗಂಟೆ, 8 ಗಂಟೆಗಳು, 1 ವಾರ ಅಥವಾ ಎಂದಿಗೂ
 5. ಸದ್ದಡಗಿಸಿರುವುದನ್ನು ರದ್ದುಗೊಳಿಸಲು, ಸಂದೇಶವನ್ನು ದೀರ್ಘವಾಗಿ ಒತ್ತಿ ಮತ್ತು ಸೂಚನೆಗಳ ಸದ್ದಡಗಿಸಿರುವಿಕೆ ರದ್ದು ತಟ್ಟಿ.

ನೇರ ಸಂದೇಶ ಪುಶ್ ಸೂಚನೆಯಿಂದ ಸದ್ದಡಗಿಸುವ ಬಗೆ:

 1. ನೀವು ಸದ್ದಡಗಿಸಲು ಬಯಸುವ ನಿಮ್ಮ ಮೊಬೈಲ್‌ ಸಾಧನದ ಲಾಕ್‌ ಸ್ಕ್ರೀನ್‌ನಲ್ಲಿ ನೇರ ಸಂದೇಶ ಪುಶ್ ಸೂಚನೆಯನ್ನು ಕಂಡುಕೊಳ್ಳಿ:
  1. iOS ಗಾಗಿ Twitter ಆಪ್‌ನಿಂದ: ಲಾಕ್ ಸ್ಕ್ರೀನ್ ಪುಶ್ ಸೂಚನೆಯ ಮೇಲೆ ಎಡಕ್ಕೆ ಸರಿಸಿ, ವೀಕ್ಷಿಸಿ ತಟ್ಟಿ, ನಂತರ 1 ಗಂಟೆ ಸದ್ದಡಗಿಸಿ ತಟ್ಟಿ.
  2. Android ಗಾಗಿ Twitter ಆಪ್‌ನಿಂದ: ಲಾಕ್ ಸ್ಕ್ರೀನ್ ಪುಶ್ ಸೂಚನೆಯ ಮೇಲೆ ಕೆಳಕ್ಕೆ ಎಳೆಯಿರಿ, ನಂತರ ಸದ್ದಡಗಿಸಿ ತಟ್ಟಿ. 
 2. ಸಂವಾದ ಸೂಚನೆಗಳನ್ನು ಒಂದು ಗಂಟೆಯವರೆಗೆ ಸದ್ದಡಗಿಸಲಾಗುತ್ತದೆ. 

ನೇರ ಸಂದೇಶ ಅಥವಾ ಸಂವಾದವನ್ನು ವರದಿ ಮಾಡಲು

ನೀವು ಒಂದು ಸಂದೇಶ ಅಥವಾ ಇಡೀ ಸಂವಾದವನ್ನು ವರದಿ ಮಾಡಬಹುದು. ಉಲ್ಲಂಘನೆಗಳಿಗಾಗಿ ಒಂದು ಟ್ವೀಟ್ ಅಥವಾ ನೇರ ಸಂದೇಶವನ್ನು ವರದಿ ಮಾಡುವುದು ಹೇಗೆ ಎಂದು ತಿಳಿಯಿರಿ.

ನೇರ ಸಂದೇಶದ ಮೂಲಕ ಟ್ವೀಟ್‌ ಹಂಚಲು

ನೇರ ಸಂದೇಶದ ಮೂಲಕ ಟ್ವೀಟ್‌ ಹಂಚಿಕೊಳ್ಳುವುದು ಸ್ನೇಹಿತರ ಸಮೂಹದೊಂದಿಗೆ ಸಂವಾದವನ್ನು ಆರಂಭಿಸಲು ಉತ್ತಮ ವಿಧಾನವಾಗಿದೆ. 

ಯಾರಿಂದಲಾದರೂ ನೇರ ಸಂದೇಶಗಳನ್ನು ಸ್ವೀಕರಿಸಲು

twitter.com ನಲ್ಲಿ ನಿಮ್ಮ ಗೌಪ್ಯತೆ ಮತ್ತು ಸುರಕ್ಷತೆ ಸೆಟ್ಟಿಂಗ್‌ಗಳಲ್ಲಿ ಯಾರಿಂದಲಾದರೂ ನೇರ ಸಂದೇಶಗಳನ್ನು ಸ್ವೀಕರಿಸಿ ಪಕ್ಕದ ಬಾಕ್ಸ್‌ ಅನ್ನು ಗುರುತು ಮಾಡಿದರೆ ಯಾರಿಂದಲಾದರೂ ನೀವು ನೇರ ಸಂದೇಶಗಳನ್ನು ಸ್ವೀಕರಿಸಬಹುದು. iOS ಗಾಗಿ Twitter ಅಥವಾ ಆಂಡ್ರಾಯ್ಡ್​ಗಾಗಿ Twitter ಮೂಲಕವೂ ನೀವು ಈ ಸೆಟ್ಟಿಂಗ್‌ ಅನ್ನು ಹೊಂದಿಸಬಹುದು. ಈ ಆಯ್ಕೆಯನ್ನು ನೀವು ಸಕ್ರಿಯಗೊಳಿಸಿದರೆ, ಸಮೂಹ ಸಂವಾದಗಳಿಗೆ ಯಾರಾದರೂ ನಿಮ್ಮನ್ನು ಸೇರಿಸಬಹುದು.

iOS ಗಾಗಿ Twitter ಬಳಸಿ ನಿಮ್ಮ ಸೆಟ್ಟಿಂಗ್‌ಗಳನ್ನು ಬದಲಿಸಲು:

 1. ಮೇಲಿನ ಮೆನುವಿನಲ್ಲಿ, ನಿಮ್ಮ ಪ್ರೊಫೈಲ್ ಐಕಾನ್ ತಟ್ಟಿ.
 2. ಸೆಟ್ಟಿಂಗ್​ಗಳು ಮತ್ತು ಗೌಪ್ಯತೆ ಆಯ್ಕೆಮಾಡಿ.
 3. ಗೌಪ್ಯತೆ ಮತ್ತು ಸುರಕ್ಷತೆ ತಟ್ಟಿ.
 4. ನೇರ ಸಂದೇಶಗಳು ಅಡಿಯಲ್ಲಿ ಮತ್ತು ಯಾರಿಂದಲಾದರೂ ಸಂದೇಶಗಳನ್ನು ಸ್ವೀಕರಿಸಿ ಪಕ್ಕದಲ್ಲಿನ ಸ್ಲೈಡರ್‌ ಅನ್ನು ಎಳೆದು ನೇರ ಸಂದೇಶಗಳನ್ನು ಯಾರಿಂದಲಾದರೂ ಸ್ವೀಕರಿಸಲು ಅನುಮತಿಸಿ.

Android ಗಾಗಿ Twitter ಬಳಸಿ ನಿಮ್ಮ ಸೆಟ್ಟಿಂಗ್‌ಗಳನ್ನು ಬದಲಿಸಲು:

 1. ಮೇಲ್ಭಾಗದ ಮೆನುವಿನಲ್ಲಿ, ನೀವು ನ್ಯಾವಿಗೇಶನ್ ಮೆನು ಐಕಾನ್  ಅಥವಾ ನಿಮ್ಮ ಪ್ರೊಫೈಲ್ ಐಕಾನ್ ನೋಡುತ್ತೀರಿ. ನೀವು ಹೊಂದಿರುವ ಯಾವುದೇ ಐಕಾನ್ ಅನ್ನು ತಟ್ಟಿ.
 2. ಸೆಟ್ಟಿಂಗ್​ಗಳು ಮತ್ತು ಗೌಪ್ಯತೆ ಆಯ್ಕೆಮಾಡಿ.
 3. ಗೌಪ್ಯತೆ ಮತ್ತು ಸುರಕ್ಷತೆ ತಟ್ಟಿ.
 4. ನೇರ ಸಂದೇಶಗಳು ಅಡಿಯಲ್ಲಿ ಮತ್ತು ಯಾರಿಂದಲಾದರೂ ಸಂದೇಶಗಳನ್ನು ಸ್ವೀಕರಿಸಿ ಪಕ್ಕದಲ್ಲಿನ ಬಾಕ್ಸ್‌ ಕ್ಲಿಕ್‌ ಮಾಡಿ ನೇರ ಸಂದೇಶಗಳನ್ನು ಯಾರಿಂದಲಾದರೂ ಸ್ವೀಕರಿಸಲು ಅನುಮತಿಸಿ.

twitter.com ಗಾಗಿ Twitter ಬಳಸಿ ನಿಮ್ಮ ಸೆಟ್ಟಿಂಗ್‌ಗಳನ್ನು ಬದಲಿಸಲು:

 1. ನ್ಯಾವಿಗೇಶನ್ ಬಾರ್​ನಲ್ಲಿರುವ ಇನ್ನಷ್ಟು  ಐಕಾನ್‌ ಕ್ಲಿಕ್ ಮಾಡಿ.
 2. ಸೆಟ್ಟಿಂಗ್​ಗಳು ಮತ್ತು ಗೌಪ್ಯತೆ ಆಯ್ಕೆಮಾಡಿ.
 3. ಗೌಪ್ಯತೆ ಮತ್ತು ಸುರಕ್ಷತೆ ತಟ್ಟಿ.
 4. ನೇರ ಸಂದೇಶಗಳು ಅಡಿಯಲ್ಲಿ ಮತ್ತು ಯಾರಿಂದಲಾದರೂ ಸಂದೇಶಗಳನ್ನು ಸ್ವೀಕರಿಸಿ ಪಕ್ಕದಲ್ಲಿನ ಬಾಕ್ಸ್‌ ಕ್ಲಿಕ್‌ ಮಾಡಿ ನೇರ ಸಂದೇಶಗಳನ್ನು ಯಾರಿಂದಲಾದರೂ ಸ್ವೀಕರಿಸಲು ಅನುಮತಿಸಿ.

Note:  ಯಾರಿಂದಲಾದರೂ ಸಂದೇಶ ಸ್ವೀಕರಿಸುವಿಕೆ ಸೆಟ್ಟಿಂಗ್ ಅನ್ನು ನಿಷ್ಕ್ರಿಯಗೊಳಿಸಿದರೂ ನೀವು ಹಿಂಬಾಲಿಸದ ವ್ಯಕ್ತಿಯೊಂದಿಗೆ ಈಗಾಗಲೇ ಸಂವಾದ ನಡೆಸಿದ್ದರೆ ಅಂತಹ ವ್ಯಕ್ತಿಯಿಂದ ನೇರ ಸಂದೇಶಗಳ ಸ್ವೀಕರಿಸುವಿಕೆ ಮುಂದುವರಿಸುವುದನ್ನು ತಡೆಯುವುದಿಲ್ಲ. ಆ ವ್ಯಕ್ತಿಯಿಂದ ನೇರ ಸಂದೇಶಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಲು ಸಂವಾದವನ್ನು ನೀವು ವರದಿ ಮಾಡಬೇಕು ಅಥವಾ ಖಾತೆಯನ್ನು ತಡೆಹಿಡಿಯಬೇಕು .

ನೇರ ಸಂದೇಶ ವಿನಂತಿಗಳನ್ನು ಪರಿಶೀಲಿಸಲು

ಯಾರಿಂದಲಾದರೂ ಸಂದೇಶಗಳನ್ನು ಸ್ವೀಕರಿಸಿ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದ್ದರೆ, ನೀವು ಹಿಂಬಾಲಿಸದ ವ್ಯಕ್ತಿಗಳ ಒಳಬರುವ ಸಂದೇಶಗಳು ಸಂದೇಶಗಳ ಟ್ಯಾಬ್‌ನಲ್ಲಿ ವಿನಂತಿಗಳ ರೀತಿ ಕಾಣಿಸುತ್ತದೆ. ನೀವು ಹಿಂಬಾಲಿಸದ ಜನರಿಂದ ನಿಮ್ಮನ್ನು ಸೇರಿಸಲ್ಪಟ್ಟ ಹೊಸ ಸಮೂಹ ಸಂವಾದಗಳು ಕೂಡ ವಿನಂತಿಗಳಲ್ಲಿ ಕಾಣಿಸಿಕೊಳ್ಳುತ್ತವೆ. ಸಂವಾದವನ್ನು ಪ್ರವೇಶಿಸಿದಾಗ ಸಂದೇಶವನ್ನು ಅಳಿಸಲು ಅಥವಾ ಸಮ್ಮತಿಸಲು ನಿಮ್ಮನ್ನು ಕೇಳಲಾಗುತ್ತದೆ. ಸಂದೇಶವನ್ನು ಸಮ್ಮತಿಸಿದರೆ, ಆ ವ್ಯಕ್ತಿಯೊಂದಿಗೆ ನೀವು ಸಂವಾದ ನಡೆಸಲು ಸಮ್ಮತಿಸಿದಂತಾಗುತ್ತದೆ ಮತ್ತು ಸಂದೇಶವನ್ನು ನಿಮ್ಮ ಇನ್‌ಬಾಕ್ಸ್‌ಗೆ ಸ್ಥಳಾಂತರಿಸಲಾಗುತ್ತದೆ. ಅವರ ವಿನಂತಿಯನ್ನು ಸ್ವೀಕರಿಸುವವರೆಗೂ ಸಂದೇಶವನ್ನು ನೀವು ನೋಡಿದ್ದೀರೋ ಇಲ್ಲವೋ ಎಂಬುದು ಅವರಿಗೆ ತಿಳಿಯುವುದಿಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.

ಸಂದೇಶವನ್ನು ಅಳಿಸಿದರೆ, ಅದು ನಿಮ್ಮ ಇನ್‌ಬಾಕ್ಸ್‌ನಿಂದ ಅಳಿಸುತ್ತದೆ. ಗಮನಿಸಿ: ಒಂದು ಸಂದೇಶವನ್ನು ಅಳಿಸಿದರೆ, ಆ ಖಾತೆಯಿಂದ ನಿಮಗೆ ಭವಿಷ್ಯದಲ್ಲಿ ಸಂದೇಶ ಕಳುಹಿಸುವುದು ತಡೆಯುವುದಿಲ್ಲ. ಖಾತೆಯನ್ನು ತಡೆಹಿಡಿಯುವ ಅಥವಾ ಸಂವಾದವನ್ನು ವರದಿ ಮಾಡುವ ಆಯ್ಕೆಯನ್ನು ನೀವು ಎಂದಿಗೂ ಹೊಂದಿರುತ್ತೀರಿ. ನೀವು ಖಾತೆಯ ತಡೆತೆರವುಗೊಳಿಸದ ಹೊರತು ತಡೆಹಿಡಿದ ಖಾತೆಯು ನಿಮಗೆ ಸಂದೇಶಗಳನ್ನು ಕಳುಹಿಸಲಾಗದು.

ಸಂದೇಶವನ್ನು ಸಮ್ಮತಿಸಿದರೆ, ಆ ವ್ಯಕ್ತಿಯೊಂದಿಗೆ ಸಂವಹನ ನಡೆಸಲು ಅನುವಾಗುತ್ತದೆ. ಸಂದೇಶವನ್ನು ಸಮ್ಮತಿಸುವುದಕ್ಕೂ ಮೊದಲು ಎಲ್ಲ ಮಾಧ್ಯವನ್ನು ಮರೆ ಮಾಡಲಾಗುತ್ತದೆ. ಮರೆ ಮಾಡಿದ ಮಾಧ್ಯಮವನ್ನು ನೀವು ವೀಕ್ಷಿಸಲುಬಯಸಿದರೆ, ಮಾಧ್ಯಮ ವೀಕ್ಷಿಸಿ ಕ್ಲಿಕ್ ಮಾಡಿ ಅಥವಾ ತಟ್ಟಿ.

Note: ನೀವು ಹಿಂಬಾಲಿಸದ ಹೊಸಬರಿಂದ ಸಂದೇಶಗಳನ್ನು ಸಮ್ಮತಿಸುವುದು ಅಥವಾ ಅಳಿಸುವುದು ಮತ್ತು ಮಾಧ್ಯಮ ವೀಕ್ಷಿಸುವ ಆಯ್ಕೆಯು iOS ಗಾಗಿ Twitter ಮತ್ತು ಆಂಡ್ರಾಯ್ಡ್‌ ಆಪ್‌ಗಳು ಹಾಗೂ twitter.com ನಲ್ಲಿ ಮಾತ್ರ ಲಭ್ಯವಿದೆ.

ಹೆಚ್ಚುವರಿಯಾಗಿ, iOS ಗಾಗಿ Twitter ಮತ್ತು ಆಂಡ್ರಾಯ್ಡ್‌ ಆಪ್‌ಗೆ ನಿಮ್ಮ ಇನ್‌ಬಾಕ್ಸ್‌ನ ವಿನಂತಿಗಳ ವಿಭಾಗದಿಂದ ಕಡಿಮೆ ಗುಣಮಟ್ಟದ ವಿನಂತಿಗಳನ್ನು ನಾವು ಡೀಫಾಲ್ಟ್ ಆಗಿ ಫಿಲ್ಟರ್ ಮಾಡುತ್ತೇವೆ. ಸಕ್ರಿಯಗೊಳಿಸಿದಾಗ, ಕಡಿಮೆ ಗುಣಮಟ್ಟದ್ದು ಎಂದು ನಾವು ಭಾವಿಸುವ ಸಂವಾದ ವಿನಂತಿಗಳನ್ನು ಸಂದೇಶ ವಿನಂತಿಗಳ ಗುಣಮಟ್ಟ ಫಿಲ್ಟರ್ ಮಾಡುತ್ತದೆ. ನಿಮ್ಮ ಇನ್‌ಬಾಕ್ಸ್‌ನ ವಿನಂತಿಗಳ ವಿಭಾಗದಲ್ಲಿ ಫಿಲ್ಟರ್ ಮಾಡಿದ ವಿನಂತಿಗಳು ಕಾಣಿಸುವುದಿಲ್ಲ ಮತ್ತು ಈ ವಿನಂತಿಗಳ ಕುರಿತು ನೀವು ಸೂಚನೆಯನ್ನು ಸ್ವೀಕರಿಸುವುದಿಲ್ಲ. ಗುಣಮಟ್ಟ ಫಿಲ್ಟರ್ ಅನ್ನು ನೀವು ನಿಷ್ಕ್ರಿಯಗೊಳಿಸಲು ಆಯ್ಕೆ ಮಾಡಿಕೊಂಡರೆ, ಈ ಹಿಂದೆ ಮರೆ ಮಾಡಿದ ಹಳೆಯ ಸಂವಾದ ವಿನಂತಿಗಳು ಹೊಸ, ಒಳಬರುವ ವಿನಂತಿಗಳಿಗೆ ಹೆಚ್ಚುವರಿಯಾಗಿ ವಿನಂತಿಗಳ ವಿಭಾಗದಲ್ಲಿ ಲಭ್ಯವಾಗುತ್ತವೆ.

ಸಂದೇಶ ವಿನಂತಿಗಳಿಗೆ ಗುಣಮಟ್ಟ ಫಿಲ್ಟರ್ ಅನ್ನು ನಿಷ್ಕ್ರಿಯಗೊಳಿಸಲು ಅಥವಾ ಸಕ್ರಿಯಗೊಳಿಸಲು:

 • ನಿಮ್ಮ ವಿನಂತಿಗಳ ಟ್ಯಾಬ್‌ನ ಮೇಲ್ಭಾಗದಲ್ಲಿ, ಸೆಟ್ಟಿಂಗ್‌ಗಳನ್ನು ಬದಲಿಸಿ ತಟ್ಟಿ. 
 • ನಿಮ್ಮ ಸಂದೇಶ ಸೆಟ್ಟಿಂಗ್‌ಗಳ ಗೌಪ್ಯತೆ ವಿಭಾಗದಲ್ಲಿ, ಗುಣಮಟ್ಟ ಫಿಲ್ಟರ್ ಪಕ್ಕ ಇರುವ ಸ್ಲೈಡರ್ ಅನ್ನು ಎಳೆಯಿರಿ.

Note: ನಿಮ್ಮ ಗೌಪ್ಯತೆ ಮತ್ತು ಸುರಕ್ಷತೆ ಸೆಟ್ಟಿಂಗ್‌ಗಳ ನೇರ ಸಂದೇಶಗಳ ವಿಭಾಗದ ಅಡಿಯಲ್ಲಿ ಯಾರಿಂದಲಾದರೂ ಸಂದೇಶ ಸ್ವೀಕರಿಸಿ ಸೆಟ್ಟಿಂಗ್ ಅನ್ನು ನೀವು ಸಕ್ರಿಯಗೊಳಿಸಿದ್ದರೆ, ನಿಮ್ಮ ಗೌಪ್ಯತೆ ಸೆಟ್ಟಿಂಗ್‌ಗಳಿಂದ ಗುಣಮಟ್ಟ ಫಿಲ್ಟರ್ ಅನ್ನು ನಿಷ್ಕ್ರಿಯಗೊಳಿಸಲು ಮತ್ತು ಸಕ್ರಿಯಗೊಳಿಸಲು ಸಾಧ್ಯವಿದೆ.

ನೇರ ಸಂದೇಶ ಓದಿದ ರಸೀದಿಗಳನ್ನು ನಿಷ್ಕ್ರಿಯಗೊಳಿಸಲು

ನೇರ ಸಂದೇಶಗಳು ಓದಿದ ರಸೀದಿಗಳನ್ನು ಹೊಂದಿರುತ್ತದೆ, ಇದರಿಂದ ನೀವು ಯಾವ ನಿಮ್ಮ ಸಂದೇಶಗಳನ್ನು ಜನರು ಓದಿದ್ದಾರೆ ಎಂಬುದನ್ನು ತಿಳಿಯಬಹುದು. ಯಾರಾದರೂ ನೇರ ಸಂದೇಶ ಕಳುಹಿಸಿದಾಗ ನಿಮ್ಮ ಓದಿದ ರಸೀದಿಗಳನ್ನು ತೋರಿಸಿ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿದ್ದರೆ, ಸಂವಾದದಲ್ಲಿರುವ ಪ್ರತಿಯೊಬ್ಬರೂ ನೀವು ಯಾವಾಗ ನೋಡಿದ್ದೀರಿ ಎಂಬುದನ್ನು ತಿಳಿಯುತ್ತಾರೆ. ಈ ಸೆಟ್ಟಿಂಗ್ ಅನ್ನು ಡೀಫಾಲ್ಟ್ ಆಗಿ ಸಕ್ರಿಯಗೊಳಿಸಲಾಗಿದೆ, ಆದರೆ ಯಾವುದೇ ಸಮಯದಲ್ಲಿ ನಿಮ್ಮ ಸೆಟ್ಟಿಂಗ್‌ಗಳ ಮೂಲಕ ನೀವು ಆಫ್ ಮಾಡಬಹುದು (ಅಥವಾ ಮರಳಿ ಆನ್ ಮಾಡಬಹುದು). ನೀವು ಓದಿದ ರಸೀದಿಗಳನ್ನು ತೋರಿಸಿ ಸೆಟ್ಟಿಂಗ್ ಅನ್ನು ನೀವು ಆಫ್‌ ಮಾಡಿದರೆ, ಇತರ ವ್ಯಕ್ತಿಗಳಿಂದ ಓದಿದ ರಸೀದಿಗಳನ್ನು ನೋಡಲು ನಿಮಗೆ ಸಾಧ್ಯವಾಗುವುದಿಲ್ಲ.

iOSಗಾಗಿ Twitter ಮತ್ತು Android ಆಪ್​ಗಳು ಹಾಗೂ twitter.com ನಲ್ಲಿ ಮಾತ್ರ ಓದಿದ ರಸೀದಿಗಳನ್ನು ನೋಡಬಹುದು. ದಯವಿಟ್ಟು ಗಮನಿಸಿ, ಮೊಬೈಲ್ ವೆಬ್‌ನಲ್ಲಿ ನೇರ ಸಂದೇಶಗಳನ್ನು ವೀಕ್ಷಿಸಿದಾಗಲೂ ಓದಿದ ರಸೀದಿಗಳು ರವಾನೆಯಾಗುತ್ತವೆ.

iOSಗಾಗಿ Twitter ಬಳಸಿ ನಿಷ್ಕ್ರಿಯಗೊಳಿಸಲು ಅಥವಾ ಸಕ್ರಿಯಗೊಳಿಸಲು:

 1. ಮೇಲಿನ ಮೆನುವಿನಲ್ಲಿ, ನಿಮ್ಮ ಪ್ರೊಫೈಲ್ ಐಕಾನ್ ತಟ್ಟಿ.
 2. ಸೆಟ್ಟಿಂಗ್​ಗಳು ಮತ್ತು ಗೌಪ್ಯತೆ ಆಯ್ಕೆಮಾಡಿ.
 3. ಗೌಪ್ಯತೆ ಮತ್ತು ಸುರಕ್ಷತೆ ತಟ್ಟಿ.
 4. ನೇರ ಸಂದೇಶಗಳು ಅಡಿಯಲ್ಲಿ ಮತ್ತು ಓದಿದ ರಸೀದಿಗಳನ್ನು ತೋರಿಸಿ ಪಕ್ಕದಲ್ಲಿ, ಲಕ್ಷಣವನ್ನು ಆಫ್‌ ಅಥವಾ ಪುನಃ ಆನ್ ಮಾಡಲು ಸ್ಲೈಡರ್ ಅನ್ನು ಎಳೆಯಿರಿ. 

Android ಗಾಗಿ Twitter ಬಳಸಿ ನಿಷ್ಕ್ರಿಯಗೊಳಿಸಲು ಅಥವಾ ಸಕ್ರಿಯಗೊಳಿಸಲು:

 1. ಮೇಲ್ಭಾಗದ ಮೆನುವಿನಲ್ಲಿ, ನೀವು ನ್ಯಾವಿಗೇಶನ್ ಮೆನು ಐಕಾನ್  ಅಥವಾ ನಿಮ್ಮ ಪ್ರೊಫೈಲ್ ಐಕಾನ್ ನೋಡುತ್ತೀರಿ. ನೀವು ಹೊಂದಿರುವ ಯಾವುದೇ ಐಕಾನ್ ಅನ್ನು ತಟ್ಟಿ.
 2. ಸೆಟ್ಟಿಂಗ್​ಗಳು ಮತ್ತು ಗೌಪ್ಯತೆ ಆಯ್ಕೆಮಾಡಿ.
 3. ಗೌಪ್ಯತೆ ಮತ್ತು ಸುರಕ್ಷತೆ ತಟ್ಟಿ.
 4. ನೇರ ಸಂದೇಶಗಳು ಅಡಿಯಲ್ಲಿ ಮತ್ತು ಓದಿದ ರಸೀದಿಗಳನ್ನು ತೋರಿಸಿ ಪಕ್ಕದಲ್ಲಿ, ಲಕ್ಷಣವನ್ನು ಆಫ್‌ ಮಾಡಲು ಬಾಕ್ಸ್‌ ಗುರುತು ತೆಗೆಯಿರಿ ಅಥವಾ ಪುನಃ ಆನ್ ಮಾಡಲು ಬಾಕ್ಸ್‌ ಗುರುತು ಮಾಡಿ.

twitter.com ಮೂಲಕ ನಿಷ್ಕ್ರಿಯಗೊಳಿಸಲು ಅಥವಾ ಸಕ್ರಿಯಗೊಳಿಸಲು:

 1. ಇನ್ನಷ್ಟು   ಐಕಾನ್ ಕ್ಲಿಕ್ ಮಾಡಿ, ನಂತರ ಗೌಪ್ಯತೆ ಮತ್ತು ಸುರಕ್ಷತೆ ಕ್ಲಿಕ್ ಮಾಡಿ.
 2. ಗೌಪ್ಯತೆ ಮತ್ತು ಸುರಕ್ಷತೆ ಅಡಿಯಲ್ಲಿ ಮತ್ತು ಓದಿದ ರಸೀದಿಗಳನ್ನು ತೋರಿಸಿ ಪಕ್ಕದಲ್ಲಿ, ಲಕ್ಷಣವನ್ನು ಆಫ್‌ ಮಾಡಲು ಬಾಕ್ಸ್‌ ಕ್ಲಿಕ್ ಮಾಡಿ ಮತ್ತು ಪುನಃ ಆನ್ ಮಾಡಲು ಬಾಕ್ಸ್ ಕ್ಲಿಕ್ ಮಾಡಿ.

Note:  ವಿನಂತಿಗಳ ಅಡಿಯಲ್ಲಿ ಕಾಣಿಸಿಕೊಳ್ಳುವ ಸಂವಾದಗಳಿಗೆ, ಸಂವಾದವನ್ನು ನೀವು ಸಮ್ಮತಿಸದ ಹೊರತು ಅವರ ನೇರ ಸಂದೇಶಗಳನ್ನು ಓದಿದ್ದೀರಾ ಎಂಬುದನ್ನು ಕಳುಹಿಸಿದವರು ವೀಕ್ಷಿಸಲು ಸಾಧ್ಯವಾಗುವುದಿಲ್ಲ.

ನಿಮ್ಮ ಫೋನ್‌ನಲ್ಲಿ ಎಸ್‌ಎಮ್ಎಸ್ ಮೂಲಕ ನೇರ ಸಂದೇಶಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು

ನಿಮ್ಮ ಮೊಬೈಲ್ ಫೋನ್‌ಗೆ ನಿಮ್ಮ Twitter ಖಾತೆಯನ್ನು ಸಂಪರ್ಕಿಸಿದರೆ, ಎಸ್ಎಮ್ಎಸ್ ಮೂಲಕ ನೀವು ನೇರ ಸಂದೇಶಗಳನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು.

Note: ನೇರ ಸಂದೇಶ ವೈಫಲ್ಯಗಳ ಬಗ್ಗೆ ಒಂದು ಟಿಪ್ಪಣಿ: ಎಸ್ಎಮ್ಎಸ್ ಮೂಲಕ ನೀವು ಕಳುಹಿಸುವ ನೇರ ಸಂದೇಶಗಳು ಡಿ ಕಮಾಂಡ್ ಮತ್ತು ಬಳಕೆದಾರರ ಹೆಸರನ್ನೂ ಒಳಗೊಂಡು 160 ಅಕ್ಷರಗಳನ್ನು ಹೊಂದಿರಬೇಕು ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ. 160 ಅಕ್ಷರಗಳಿಗಿಂತ ಹೆಚ್ಚು ಉದ್ದದ ಎಸ್ಎಮ್ಎಸ್ ಸಂದೇಶಗಳನ್ನು ಹಲವು ಎಸ್ಎಮ್ಎಸ್ ಸಂದೇಶಗಳನ್ನಾಗಿ ನಿಮ್ಮ ಸೇವೆ ಪೂರೈಕೆದಾರರು ವಿಭಜಿಸಬಹುದು. ಈ ಪ್ರಕರಣದಲ್ಲಿ, ಎರಡನೆಯ ಮತ್ತು ಯಾವುದೇ ನಂತರದ ಎಸ್ಎಮ್ಎಸ್ ಸಂದೇಶಗಳನ್ನು ಸಾರ್ವಜನಿಕ ಟ್ವೀಟ್‌ಗಳನ್ನಾಗಿ ಪೋಸ್ಟ್ ಮಾಡಲಾಗುತ್ತದೆ, ಯಾಕೆಂದರೆ ಮೊದಲ ಎಸ್ಎಂಎಸ್‌ನಂತೆ ನೇರ ಸಂದೇಶಗಳು ಎಂದು Twitter ಗೆ ಹೇಳುವ ಸರಿಯಾದ ಪಠ್ಯ ಆಜ್ಞೆಯಿಂದ (ಡಿ ಬಳಕೆದಾರರ ಹೆಸರು) ಇವು ಆರಂಭವಾಗಿರುವುದಿಲ್ಲ.

ನೇರ ಸಂದೇಶಗಳ ಕುರಿತು ತಿಳಿದುಕೊಳ್ಳಬೇಕಿರುವ ಕೆಲವು ಪ್ರಮುಖ ಸಂಗತಿಗಳು:

 • ನೀವು ನೇರ ಸಂದೇಶವನ್ನು ಅಥವಾ ಸಂವಾದವನ್ನು (ಕಳುಹಿಸಿದ ಅಥವಾ ಸ್ವೀಕರಿಸಿದ) ಅಳಿಸಿದಾಗ ನಿಮ್ಮ ಖಾತೆಯಿಂದ ಮಾತ್ರ ಇದು ಅಳಿಸಲ್ಪಡುತ್ತದೆ. ನೀವು ಅಳಿಸಿದ ನೇರ ಸಂದೇಶಗಳು ಅಥವಾ ಸಂವಾದಗಳು ಸಂವಾದದಲ್ಲಿನ ಇತರರಿಗೆ ಕಾಣಿಸುತ್ತಲೇ ಇರುತ್ತದೆ. ನೀವು ಸಮೂಹ ಸಂವಾದವನ್ನು ಅಳಿಸಿದಾಗ, ಆ ಸಮೂಹವನ್ನು ನೀವು ತೊರೆಯುತ್ತೀರಿ ಮತ್ತು ನಂತರ ನಿಮಗೆ ಭಾಗವಹಿಸಲು ಸಾಧ್ಯವಾಗುವುದಿಲ್ಲ.
 • ನೇರ ಸಂದೇಶದಲ್ಲಿ ಲಿಂಕ್ ಹಂಚಿಕೊಳ್ಳುವಾಗ, ಇದನ್ನು ಸ್ವಯಂಚಾಲಿತವಾಗಿ ಸಂಸ್ಕರಿಸಲಾಗುತ್ತದೆ ಮತ್ತು t.co ಲಿಂಕ್ ಎಂಬುದಾಗಿ ಸಂಕ್ಷೇಪಗೊಳಿಸಲಾಗುತ್ತದೆ. ಲಿಂಕ್ ಸಂಕ್ಷೇಪಗೊಳಿಸುವಿಕೆ ಕುರಿತು ಇನ್ನಷ್ಟು ತಿಳಿಯಿರಿ. t.co ಸಂಕ್ಷೇಪ ಲಿಂಕ್ ಹೊಂದಿದ ಯಾರಾದರೂ ಗಮ್ಯ ಯುಆರ್‌ಎಲ್‌ಗೆ ನ್ಯಾವಿಗೇಟ್ ಮಾಡಬಹುದು ಎಂಬುದನ್ನು ದಯವಿಟ್ಟು ಗಮನಿಸಿ.
 • ನೇರ ಸಂದೇಶದಲ್ಲಿ ನೀವು ಮಾಧ್ಯಮವನ್ನು ಹಂಚಿಕೊಂಡಾಗ, ಸಂವಾದದಲ್ಲಿನ ಎಲ್ಲರೂ ಇದನ್ನು ನೋಡಬಹುದಾಗಿದೆ. ನೇರ ಸಂದೇಶದಲ್ಲಿ ನೀವು ಹಂಚಿಕೊಳ್ಳುವ ಮಾಧ್ಯಮಗಳಿಗೆ ಲಿಂಕ್‌ಗಳನ್ನು ಸ್ವೀಕರಿಸುವವರು ಡೌನ್‌ಲೋಡ್‌ ಮಾಡಬಹುದು ಅಥವಾ ಮರುಹಂಚಬಹುದು ಎಂಬುದನ್ನು ದಯವಿಟ್ಟು ಗಮನಿಸಿ. ನೇರ ಸಂದೇಶದಲ್ಲಿ ಹಂಚಿಕೊಂಡಿರುವ ಮಾಧ್ಯಮಕ್ಕೆ ಲಿಂಕ್‌ ಹೊಂದಿರುವ ಯಾರಾದರೂ ವಿಷಯವನ್ನು ವೀಕ್ಷಿಸಬಹುದು.

ಇನ್ನೂ ಹೆಚ್ಚಿನ ಮಾಹಿತಿ ಬೇಕೇ?

ನೇರ ಸಂದೇಶಗಳ ಕುರಿತು ಆಗಾಗ್ಗೆ ಕೇಳಿದ ಪ್ರಶ್ನೆಗಳನ್ನು ನೋಡಿ

Bookmark or share this article