ಹ್ಯಾಕ್ ಮಾಡಿದ ನನ್ನ ಖಾತೆಯ ಕುರಿತು ಸಹಾಯ
ನಿಮ್ಮನ್ನು ಹ್ಯಾಕ್ ಮಾಡಲಾಗಿದೆ ಎಂದು ನೀವು ಭಾವಿಸಿದರೆ ಮತ್ತು ನಿಮ್ಮ ಬಳಕೆದಾರರ ಹೆಸರು ಮತ್ತು ಪಾಸ್ವರ್ಡ್ನೊಂದಿಗೆ ಲಾಗಿನ್ ಮಾಡಲು ನಿಮಗೆ ಸಾಧ್ಯವಾಗದಿದ್ದರೆ, ಈ ಕೆಳಗಿನ ಎರಡು ಕ್ರಮಗಳನ್ನು ದಯವಿಟ್ಟು ತೆಗೆದುಕೊಳ್ಳಿ:
1. ಪಾಸ್ವರ್ಡ್ ಮರುನಿಗದಿ ವಿನಂತಿಸಿ
ಪಾಸ್ವರ್ಡ್ ಮರುನಿಗದಿ ನಮೂನೆಯಿಂದ ಇಮೇಲ್ ವಿನಂತಿಸುವ ಮೂಲಕ ನಿಮ್ಮ ಪಾಸ್ವರ್ಡ್ ಮರುನಿಗದಿ ಮಾಡಿ. ನಿಮ್ಮ ಬಳಕೆದಾರರ ಹೆಸರು ಮತ್ತು ಇಮೇಲ್ ವಿಳಾಸವೆರಡನ್ನೂ ನಮೂದಿಸಲು ಪ್ರಯತ್ನಿಸಿ ಮತ್ತು ನಿಮ್ಮ Twitter ಖಾತೆಯೊಂದಿಗೆ ಸಂಬಂಧಿಸಿದ ವಿಳಾಸಕ್ಕೆ ಇಮೇಲ್ ಬಂದಿದೆಯೇ ಎಂದು ಪರಿಶೀಲನೆ ಮಾಡುವುದನ್ನು ಖಚಿತಪಡಿಸಿ.
ಪಾಸ್ವರ್ಡ್ ಮರುನಿಗದಿಯ ನಂತರ ನಿಮಗೆ ಲಾಗ್ ಇನ್ ಮಾಡಲು ಸಾಧ್ಯವಾದರೆ, ನಿಮ್ಮ ಖಾತೆ ರಾಜಿಯಾಗಿದೆಯೇ ಎಂದು ದಯವಿಟ್ಟು ಪರಿಶೀಲಿಸಿ ಮತ್ತು ನಿಮ್ಮ ಖಾತೆಯನ್ನು ಪುನಃ ಸುರಕ್ಷಿತಗೊಳಿಸಿ.
2. ನಿಮಗೆ ಇನ್ನೂ ಸಹಾಯ ಬೇಕಿದ್ದಲ್ಲಿ ಬೆಂಬಲವನ್ನು ಸಂಪರ್ಕಿಸಿ
ನಿಮಗೆ ಇನ್ನೂ ಲಾಗಿನ್ ಮಾಡಲು ಸಾಧ್ಯವಾಗದಿದ್ದರೆ, ಬೆಂಬಲ ವಿನಂತಿ ಸಲ್ಲಿಸುವ ಮೂಲಕ ನಮ್ಮನ್ನು ಸಂಪರ್ಕಿಸಿ. ಹ್ಯಾಕ್ ಮಾಡಿದ Twitter ಖಾತೆಯೊಂದಿಗೆ ನೀವು ಸಂಬಂಧಿಸಿದ ಇಮೇಲ್ ವಿಳಾಸವನ್ನು ಪರಿಶೀಲಿಸುವುದನ್ನು ಖಚಿತಪಡಿಸಿ; ನಂತರ ನಾವು ಹೆಚ್ಚುವರಿ ಮಾಹಿತಿಯನ್ನು ಮತ್ತು ಸೂಚನೆಗಳನ್ನು ಆ ಇಮೇಲ್ ವಿಳಾಸಕ್ಕೆ ಕಳುಹಿಸುತ್ತೇವೆ. ನಿಮ್ಮ ಬೆಂಬಲ ವಿನಂತಿಯನ್ನು ಸಲ್ಲಿಸುವಾಗ, ನಿಮ್ಮ ಬಳಕೆದಾರರ ಹೆಸರು ಮತ್ತು ನಿಮ್ಮ ಖಾತೆಯನ್ನು ಕೊನೆಯದಾಗಿ ಪ್ರವೇಶಿಸಿದ ದಿನಾಂಕವನ್ನು ದಯವಿಟ್ಟು ಸೇರಿಸಿ.
ನಿಮ್ಮ Twitter ಖಾತೆಯೊಂದಿಗೆ ಸಂಬಂಧಿಸಿದ ಇಮೇಲ್ ಖಾತೆಗೆ ಪ್ರವೇಶವನ್ನು ನೀವು ಕಳೆದುಕೊಂಡರೆ, ನೀವು ಏನು ಮಾಡಬಹುದು ಎಂಬ ಬಗ್ಗೆ ಇನ್ನಷ್ಟನ್ನು ತಿಳಿಯಿರಿ.