ರಾಜಿಯಾದ ನನ್ನ ಖಾತೆಯ ಕುರಿತು ಸಹಾಯ

ನಿಮ್ಮ ಖಾತೆಯು ರಾಜಿಯಾಗಿದ್ದು, ಇನ್ನೂ ಲಾಗಿನ್ ಮಾಡಲು ಸಾಧ್ಯವಾದರೆ, ನಿಮ್ಮ ಖಾತೆಯನ್ನು ಸುರಕ್ಷಿತಗೊಳಿಸಲು ಮತ್ತು ಅನಪೇಕ್ಷಿತ ವರ್ತನೆಗಳನ್ನು ನಿಲ್ಲಿಸಲು ಈ ಪುಟವು ನಿಮಗೆ ಸಹಾಯ ಮಾಡುತ್ತದೆ. 

 

ನನ್ನ ಖಾತೆಯನ್ನು ರಾಜಿ ಮಾಡಲಾಗಿದೆಯೇ?


ನೀವು:

  • ನಿಮ್ಮ ಖಾತೆಯಿಂದ ಅನಿರೀಕ್ಷಿತ ಟ್ವೀಟ್‌ಗಳನ್ನು ಗಮನಿಸಿದ್ದೀರಿ
  • ನಿಮ್ಮ ಖಾತೆಯಿಂದ ಅನಪೇಕ್ಷಿತ ನೇರ ಸಂದೇಶಗಳ ಕಳುಹಿಸಿರುವುದನ್ನು ನೋಡಿದ್ದೀರಿ
  • ನೀವು ಮಾಡದ ಅಥವಾ ಅನುಮೋದಿಸದ ಇತರ ಖಾತೆ ವರ್ತನೆಗಳನ್ನು ಗಮನಿಸಿದ್ದೀರಿ (ಹಿಂಬಾಲಿಸುವುದು, ಹಿಂಬಾಲಿಸುವಿಕೆ ರದ್ದು ಅಥವಾ ತಡೆಹಿಡಿಯುವುದು ಇತ್ಯಾದಿ)
  • ನಿಮ್ಮ ಖಾತೆ ರಾಜಿಯಾಗಿರಬಹುದು ಎಂದು ತಿಳಿಸುವ ಸೂಚನೆಯನ್ನು ನಮ್ಮಿಂದ ಸ್ವೀಕರಿಸಿದ್ದೀರಿ
  • ನೀವು ಬದಲಾವಣೆ ಮಾಡಿಲ್ಲದ ಖಾತೆ ಮಾಹಿತಿಯು ಬದಲಾಗಿದೆ ಎಂದು ತಿಳಿಸುವ ಸೂಚನೆಯನ್ನು ನಮ್ಮಿಂದ ಸ್ವೀಕರಿಸಿದ್ದೀರಿ
  • ನಿಮ್ಮ ಪಾಸ್‌ವರ್ಡ್‌ ಇನ್ನು ಕೆಲಸ ಮಾಡುತ್ತಿಲ್ಲ ಮತ್ತು ಮರುನಿಗದಿ ಮಾಡುವುದಕ್ಕೆ ನಿಮ್ಮನ್ನು ಪ್ರಾಂಪ್ಟ್‌ ಮಾಡಲಾಗುತ್ತಿದೆ ಎಂಬುದನ್ನು ಗಮನಿಸಿದ್ದೇವೆ

 

ಈ ಮೇಲಿನ ಯಾವುದೇ ಒಂದಕ್ಕೆ ನೀವು ಹೌದು ಎಂದು ಉತ್ತರಿಸಿದರೆ, ದಯವಿಟ್ಟು ಈ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಿ:


1. ನಿಮ್ಮ ಪಾಸ್‌ವರ್ಡ್‌ ಬದಲಿಸಿ

ಸೆಟ್ಟಿಂಗ್‌ಗಳಲ್ಲಿ ಪಾಸ್‌ವರ್ಡ್‌ ಟ್ಯಾಬ್‌ನಿಂದ ತಕ್ಷಣವೇ ನಿಮ್ಮ ಪಾಸ್‌ವರ್ಡ್‌ ಬದಲಿಸಿ. ನೀವು ಲಾಗ್ ಔಟ್ ಆಗಿದ್ದರೆ, ಲಾಗಿನ್‌ಗೆ ಹೋಗಿ ಮತ್ತು ನಿಮ್ಮ ಪಾಸ್‌ವರ್ಡ್ ಅನ್ನು ಮರುಹೊಂದಿಸಲು ಪಾಸ್‌ವರ್ಡ್ ಮರೆತುಹೋಗಿದೆ ಅನ್ನು ಕ್ಲಿಕ್ ಮಾಡಿ. ದಯವಿಟ್ಟು ನೀವು ಮೊದಲು ಬಳಸದೆ ಇರುವ ಬಲವಾದ ಪಾಸ್‌ವರ್ಡ್ ಅನ್ನು ಆಯ್ಕೆಮಾಡಿ. 

2. ನಿಮ್ಮ ಇಮೇಲ್ ವಿಳಾಸ ಸುರಕ್ಷಿತವಾಗಿದೆಯೆ ಎಂದು ಖಚಿತಪಡಿಸಿಕೊಳ್ಳಿ

ನಿಮ್ಮ ಖಾತೆಗೆ ಲಗತ್ತಿಸಿದ ಇಮೇಲ್ ವಿಳಾಸವು ಸುರಕ್ಷಿತವಾಗಿದೆ ಮತ್ತು ಇದನ್ನು ಪ್ರವೇಶ ಮಾಡುವವರು ನೀವು ಮಾತ್ರ ಎಂಬುದನ್ನು ಖಚಿತಪಡಿಸಿಕೊಳ್ಳಿ. X ಆಪ್‌ನಿಂದ ಅಥವಾ X.com ನಲ್ಲಿ ಲಾಗಿನ್ ಮಾಡುವುದು ಮತ್ತು ಖಾತೆ ಸೆಟ್ಟಿಂಗ್‌ಗಳ ಟ್ಯಾಬ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಇಮೇಲ್ ವಿಳಾಸವನ್ನು ನೀವು ಬದಲಿಸಬಹುದು. ನಿಮ್ಮ ಇಮೇಲ್ ವಿಳಾಸವನ್ನು ನವೀಕರಿಸಲು ಸೂಚನೆಗಳು ಎಂಬುದಕ್ಕಾಗಿ ಈ ಲೇಖನವನ್ನು ಭೇಟಿ ಮಾಡಿ ಮತ್ತು ಹೆಚ್ಚುವರಿ ಇಮೇಲ್ ಖಾತೆ ಸುರಕ್ಷತೆ ಸಲಹೆಗಳಿಗಾಗಿ ಈ ಲೇಖನ ನೋಡಿ.

3. ಮೂರನೇ ವ್ಯಕ್ತಿ ಅಪ್ಲಿಕೇಶನ್‌ಗಳಿಗೆ ಸಂಪರ್ಕಗಳನ್ನು ಹಿಂಪಡೆಯಿರಿ

ಲಾಗ್ ಇನ್ ಮಾಡಿರುವಾಗ, ನಿಮ್ಮ ಸೆಟ್ಟಿಂಗ್‌ಗಳಲ್ಲಿ ಆಪ್‌ಗಳು ಗೆ ಭೇಟಿ ನೀಡಿ. ನೀವು ಗುರುತಿಸದ ಯಾವುದೇ ಮೂರನೇ ವ್ಯಕ್ತಿ ಅಪ್ಲಿಕೇಶನ್‌ಗೆ ಪ್ರವೇಶವನ್ನು ಹಿಂಪಡೆಯಿರಿ.

4. ನಿಮ್ಮ ವಿಶ್ವಾಸಾರ್ಹ ಮೂರನೇ ವ್ಯಕ್ತಿ ಅಪ್ಲಿಕೇಶನ್‌ಗಳಲ್ಲಿ ನಿಮ್ಮ ಪಾಸ್‌ವರ್ಡ್‌ ನವೀಕರಿಸಿ

ವಿಶ್ವಾಸಾರ್ಹ ಬಾಹ್ಯ ಅಪ್ಲಿಕೇಶನ್ ನಿಮ್ಮ X ಪಾಸ್‌ವರ್ಡ್‌ ಬಳಸುತ್ತಿದ್ದರೆ, ಆ ಅಪ್ಲಿಕೇಶನ್‌ನಲ್ಲಿ ನಿಮ್ಮ ಪಾಸ್‌ವರ್ಡ್‌ ನವೀಕರಿಸುವುದನ್ನು ಖಚಿತಪಡಿಸಿ. ಇಲ್ಲವಾದರೆ, ವಿಫಲವಾದ ಲಾಗಿನ್ ಪ್ರಯತ್ನಗಳಿಂದಾಗಿ ನಿಮ್ಮನ್ನು ತಾತ್ಕಾಲಿಕವಾಗಿ ನಿಮ್ಮ ಖಾತೆಯಿಂದ ಲಾಕ್ ಔಟ್ ಮಾಡಲಾಗುತ್ತದೆ.

ನಿಮ್ಮ ಖಾತೆ ಈಗ ಸುರಕ್ಷಿತವಾಗಿರಬೇಕು ಮತ್ತು ಮುಂದೆ ಸಾಗಿದಂತೆ ಅನಿರೀಕ್ಷಿತ ಖಾತೆ ವರ್ತನೆಗಳು ನಿಮಗೆ ಕಂಡುಬರುವುದಿಲ್ಲ. ಇನ್ನೂ ನೀವು ಸಮಸ್ಯೆಗಳನ್ನು ಅನುಭವಿಸುತ್ತಿದ್ದರೆ, ಸಹಾಯಕ್ಕಾಗಿ ದಯವಿಟ್ಟು ಬೆಂಬಲ ವಿನಂತಿ ಅನ್ನು ಸಲ್ಲಿಸಿ.
 

5. ನಿಮಗೆ ಇನ್ನೂ ಸಹಾಯ ಬೇಕಿದ್ದಲ್ಲಿ ಬೆಂಬಲವನ್ನು ಸಂಪರ್ಕಿಸಿ

ಪಾಸ್‌ವರ್ಡ್ ಮರುಹೊಂದಿಸಲು ಪ್ರಯತ್ನಿಸಿದ ನಂತರವೂ ನೀವು ಲಾಗ್ ಇನ್ ಆಗಲು ಸಾಧ್ಯವಾಗದಿದ್ದರೆ, ಬೆಂಬಲ ವಿನಂತಿ ಸಲ್ಲಿಸುವ ಮೂಲಕ ನಮ್ಮನ್ನು ಸಂಪರ್ಕಿಸಿ. ರಾಜಿಯಾದ  X ಖಾತೆಯೊಂದಿಗೆ ನೀವು ಸಂಬಂಧಿಸಿದ ಇಮೇಲ್ ವಿಳಾಸವನ್ನು ಪರಿಶೀಲಿಸುವುದನ್ನು ಖಚಿತಪಡಿಸಿ; ನಂತರ ನಾವು ಹೆಚ್ಚುವರಿ ಮಾಹಿತಿಯನ್ನು ಮತ್ತು ಸೂಚನೆಗಳನ್ನು ಆ ಇಮೇಲ್ ವಿಳಾಸಕ್ಕೆ ಕಳುಹಿಸುತ್ತೇವೆ. ನಿಮ್ಮ ಬೆಂಬಲ ವಿನಂತಿಯನ್ನು ಸಲ್ಲಿಸುವಾಗ, ನಿಮ್ಮ ಬಳಕೆದಾರರ ಹೆಸರು ಮತ್ತು ನಿಮ್ಮ ಖಾತೆಯನ್ನು ಕೊನೆಯದಾಗಿ ಪ್ರವೇಶಿಸಿದ ದಿನಾಂಕವನ್ನು ದಯವಿಟ್ಟು ಸೇರಿಸಿ.


ನಿಮ್ಮ X ಖಾತೆಯೊಂದಿಗೆ ಸಂಬಂಧಿಸಿದ ಇಮೇಲ್‌ ಖಾತೆಗೆ ಪ್ರವೇಶವನ್ನು ನೀವು ಕಳೆದುಕೊಂಡರೆ, ನೀವು ಏನು ಮಾಡಬಹುದು ಎಂಬ ಬಗ್ಗೆ ಇನ್ನಷ್ಟನ್ನು ತಿಳಿಯಿರಿ.

 

ಸರಳ ಮುನ್ನೆಚ್ಚರಿಕೆಗಳೊಂದಿಗೆ ನಿಮ್ಮ ಖಾತೆಯನ್ನು ರಕ್ಷಿಸಿ


ನಿಮ್ಮ ಖಾತೆ ರಾಜಿಯಾಗಿದ್ದರೆ, ಈ ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ:

  • ನಿಮ್ಮ ಖಾತೆ ರಾಜಿಯಾಗಿದ್ದಾಗ ಪೋಸ್ಟ್‌ ಮಾಡಿದ ಯಾವುದೇ ಅನೇಪಕ್ಷಿತ ಟ್ವೀಟ್‌ಗಳನ್ನು ಅಳಿಸಿ.
  • ವಿಶೇಷವಾಗಿ ಪಾಸ್‌ವರ್ಡ್‌ ಅನ್ನು ನೀವು ಬದಲಿಸಿದ ನಂತರವೂ ಅನಧಿಕೃತ ಖಾತೆ ವರ್ತನೆಗಳು ಪೋಸ್ಟ್‌ ಆಗುತ್ತಿದ್ದರೆ, ವೈರಸ್‌ಗಳು ಮತ್ತು ಮಾಲ್‌ವೇರ್‌ ಇದೆಯೇ ಎಂದು ನಿಮ್ಮ ಕಂಪ್ಯೂಟರ್‌ಗಳನ್ನು ಸ್ಕ್ಯಾನ್ ಮಾಡಿ.
  • ನಿಮ್ಮ ಆಪರೇಟಿಂಗ್‌ ಸಿಸ್ಟಮ್ ಮತ್ತು ಅಪ್ಲಿಕೇಶನ್‌ಗಳಿಗೆ ಭದ್ರತಾ ಪ್ಯಾಚ್‌ಗಳನ್ನು ಇನ್‌ಸ್ಟಾಲ್ ಮಾಡಿ
  • ಎಂದಿಗೂ ಬಲವಾದ, ಬೇರೆಡೆ ನೀವು ಬಳಸದ ಹಾಗೂ ಊಹಿಸಲು ನಿಮಗೆ ಕಷ್ಟವಾಗುವ ಹೊಸ ಪಾಸ್‌ವರ್ಡ್‌ ಅನ್ನು ಬಳಸಿ.
  • ಎರಡು ಅಂಶದ ದೃಢೀಕರಣ ಬಳಸುವುದನ್ನು ಪರಿಗಣಿಸಿ. ಪಾಸ್‌ವರ್ಡ್ ಮೇಲೆ ಮಾತ್ರ ಅವಲಂಬಿಸುವುದರ ಬದಲಿಗೆ, ಕೇವಲ ನೀವು ಮಾತ್ರ ನಿಮ್ಮ X ಖಾತೆಗೆ ಪ್ರವೇಶ ಪಡೆಯಬಹುದು ಎಂಬುದನ್ನು ಖಚಿತಪಡಿಸಲು ಲಾಗಿನ್ ಪರಿಶೀಲನೆಯು ಎರಡನೇ ತಪಾಸಣೆಯನ್ನು ಪರಿಚಯಿಸುತ್ತದೆ.  ಇದು ನಿಮ್ಮ ಖಾತೆಗೆ ಹೆಚ್ಚುವರಿ ರಕ್ಷಣೆಯ ಪದರವನ್ನು ಸೇರಿಸುವ ಮತ್ತು ಅನಧಿಕೃತ ಪ್ರವೇಶದ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುವ ನಿರ್ಣಾಯಕ ಭದ್ರತಾ ವೈಶಿಷ್ಟ್ಯವಾಗಿದೆ.
  • ಉತ್ತಮ ಅಭ್ಯಾಸವಾಗಿ ಖಾತೆ ರಾಜಿ ಅಪಾಯವನ್ನು ಕಡಿಮೆ ಮಾಡಲು ನಿಮ್ಮ ಲಾಗಿನ್ ರುಜುವಾತುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.

ನಮ್ಮ ಖಾತೆ ಭದ್ರತೆ ಟಿಪ್ಸ್‌ಗಳಲ್ಲಿ ಹೆಚ್ಚಿನ ಮಾಹಿತಿಯನ್ನು ನೀವು ಕಂಡುಕೊಳ್ಳಬಹುದು.

 

ಖಾತೆಗಳು ಹೇಗೆ ರಾಜಿಯಾಗುತ್ತವೆ? 


ದುರುದ್ದೇಶಪೂರಿತ ಮೂರನೇ ವ್ಯಕ್ತಿ ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ಗೆ ನಿಮ್ಮ ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್‌ ಅನ್ನು ನೀವು ವಿಶ್ವಾಸಾರ್ಹಗೊಳಿಸಿದರೆ, ಬಲಹೀನ ಪಾಸ್‌ವರ್ಡ್‌ನಿಂದಾಗಿ ನಿಮ್ಮ X ಖಾತೆಯು ಭೇದ್ಯವಾಗಿದ್ದರೆ, ನಿಮ್ಮ ಕಂಪ್ಯೂಟರ್‌ನಲ್ಲಿನ ವೈರಸ್‌ಗಳು ಅಥವಾ ಮಾಲ್‌ವೇರ್‌ ಪಾಸ್‌ವರ್ಡ್‌ಗಳನ್ನು ಸಂಗ್ರಹಿಸುತ್ತಿದ್ದರೆ ಅಥವಾ ನೀವು ರಾಜಿಯಾದ ನೆಟ್‌ವರ್ಕ್‌ನಲ್ಲಿದ್ದರೆ ಖಾತೆಗಳು ರಾಜಿಯಾಗಬಹುದು.

ಅನಿರೀಕ್ಷಿತ ಅಪ್‌ಡೇಟ್‌ಗಳು ಎಂದಿಗೂ ನಿಮ್ಮ ಖಾತೆ ರಾಜಿಯಾಗಿದೆ ಎಂದು ಅರ್ಥ ನೀಡುವುದಿಲ್ಲ. ಆಗಾಗ್ಗೆ, ಅನಿರೀಕ್ಷಿತ ವರ್ತನೆಯನ್ನು ತೋರಿಸುವ ದೋಷವನ್ನು ಮೂರನೇ ವ್ಯಕ್ತಿ ಅಪ್ಲಿಕೇಶನ್ ಹೊಂದಿರಬಹುದು. ನಿಮಗೆ ವಿಚಿತ್ರ ವರ್ತನೆ ಕಂಡುಬಂದರೆ, ನಿಮ್ಮ ಪಾಸ್‌ವರ್ಡ್‌ ಬದಲಿಸಬಹುದು ಮತ್ತು/ಅಥವಾ ಸಂಪರ್ಕಗಳನ್ನು ಹಿಂಪಡೆಯುವುದರಿಂದ ಇದು ನಿಲ್ಲುತ್ತದೆ. ಯಾಕೆಂದರೆ, ಅಪ್ಲಿಕೇಶನ್‌ ಇನ್ನು ಮುಂದೆ ನಿಮ್ಮ ಖಾತೆಗೆ ಪ್ರವೇಶ ಹೊಂದಿರುವುದಿಲ್ಲ.

ನೀವು ಪೋಸ್ಟ್ ಮಾಡದ ಅಥವಾ ಅನುಮತಿ ನೀಡದ ನಿಮ್ಮ ಖಾತೆಯಲ್ಲಿ ಅಪ್‌ಡೇಟ್‌ಗಳು ಕಾಣಿಸುತ್ತಿದ್ದರೆ, ಸಾಧ್ಯವಾದಷ್ಟು ಬೇಗ ಕ್ರಮ ತೆಗೆದುಕೊಳ್ಳುವುದು ಉತ್ತಮ. 

ಈ ಲೇಖನ ಹಂಚಿಕೊಳ್ಳಿ