ಸೂಕ್ಷ್ಮ ಮಾಧ್ಯಮವನ್ನು ವರದಿ ಮಾಡುವುದು

Twitter ನ ಮಾಧ್ಯಮ ನೀತಿ, ಯ ಅಡಿಯಲ್ಲಿ ಸೂಕ್ಷ್ಮ ಎಂಬುದಾಗಿ ಪರಿಗಣಿಸಬೇಕು ಎಂದು ನೀವು ಭಾವಿಸುವ ಟ್ವೀಟ್‌ಗಳಲ್ಲಿ ಮಾಧ್ಯಮವು ನಿಮಗೆ ಎದುರಾದರೆ, ಕೆಳಗೆ ವಿವರಿಸಲಾಗಿರುವ ಪ್ರಕ್ರಿಯೆಯನ್ನು ಬಳಸಿಕೊಂಡು ದಯವಿಟ್ಟು ಅದನ್ನು ವರದಿ ಮಾಡಿ.

ಟ್ವೀಟ್‌ಗಳಲ್ಲಿ ಮಾಧ್ಯಮವವನ್ನು ಹೇಗೆ ವರದಿ ಮಾಡುವುದು
  1. ನೀವು twitter.com ನಲ್ಲಿ ಅಥವಾ iOS ಅಥವಾ Android ಆಪ್‌ಗಾಗಿ Twitter ನಲ್ಲಿ ವರದಿ ಮಾಡಲು ಬಯಸುವ ಟ್ವೀಟ್‌ಗೆ ನ್ಯಾವಿಗೇಟ್ ಮಾಡಿ.
  2. ಪಟ್ಟಿಗಳು  ಐಕಾನ್ ಅನ್ನು ಕ್ಲಿಕ್ ಮಾಡಿ ಅಥವಾ ತಟ್ಟಿ. 
  3. ಟ್ವೀಟ್ ವರದಿ ಮಾಡಿ ಅನ್ನು ಆಯ್ಕೆಮಾಡಿ.
  4. ಅದು ಸೂಕ್ಷ್ಮ ಚಿತ್ರವನ್ನು ಪ್ರದರ್ಶಿಸುತ್ತದೆ ಅನ್ನು ಆಯ್ಕೆಮಾಡಿ.
  5. ಮುಂದೆ ನಾವು ನಿಮ್ಮ Twitter ಅನುಭವವನ್ನು ಸುಧಾರಿಸುವುದಕ್ಕಾಗಿ ನೀವು ತೆಗೆದುಕೊಳ್ಳಬಹುದಾದ ಹೆಚ್ಚುವರಿ ಕ್ರಮಗಳಿಗಾಗಿ ಶಿಫಾರಸುಗಳನ್ನು ನಾವು ಒದಗಿಸುತ್ತೇವೆ.
     

ನೀವು ಇಷ್ಟಪಡದ ಏನನ್ನಾದರೂ ನೀವು ನೋಡುತ್ತಿದ್ದರೆ ಮತ್ತು ಅದರ ಮೊದಲು ಎಚ್ಚರಿಕೆಯ ಲೇಬಲ್ ಅನ್ನು Twitter ಇರಿಸದೇ ಇದ್ದರೆ, ಅದು ಮಾಧ್ಯಮದಲ್ಲಿ ಎಚ್ಚರಿಕೆಗಾಗಿ ನಮ್ಮ ಥ್ರೆಶೋಲ್ಡ್ ಅನ್ನು ಪೂರೈಸದೇ ಇರುವ ಸಾಧ್ಯತೆ ಇರುತ್ತದೆ.


ನಾನು ವರದಿ ಮಾಡುವ ಸೂಕ್ಷ್ಮ ಮಾಧ್ಯಮಕ್ಕೆ ಏನಾಗುತ್ತದೆ?

 

Twitter ನ ಮಾಧ್ಯಮ ನೀತಿಗಳೊಂದಿಗೆ ಅನುಸರಣೆ ಮಾಡಲು ಮಾಧ್ಯಮಕ್ಕೆ ಎಚ್ಚರಿಕೆಯ ಸಂದೇಶ ಅಗತ್ಯವಿದೆಯೇ ಎಂಬುದನ್ನು ನಿರ್ಣಯಿಸುವುದಕ್ಕಾಗಿ ಬಳಕೆದಾರರು ಫ್ಲ್ಯಾಗ್ ಮಾಡಿದ ಮಾಧ್ಯಮವನ್ನು Twitter ಪರಿಶೀಲಿಸುತ್ತದೆ. ಮಾಧ್ಯಮವನ್ನು ಫ್ಲ್ಯಾಗ್ ಮಾಡುವ ಮೂಲಕ ಅದನ್ನು Twitter ತಂಡದ ಗಮನಕ್ಕೆ ತರುತ್ತಿರುವಿರಿ ಎಂಬುದನ್ನು ದಯವಿಟ್ಟು ನೆನಪಿಡಿ. ಫ್ಲ್ಯಾಗ್ ಮಾಡಲಾದ ವಿಷಯವು ಸ್ವಯಂಚಾಲಿತವಾಗಿ ಎಚ್ಚರಿಕೆಯ ಸಂದೇಶ ಸ್ವೀಕರಿಸುವುದಿಲ್ಲ ಅಥವಾ ಅದನ್ನು ಸೈಟ್‌ನಿಂದ ತೆಗೆದುಹಾಕಲಾಗುವುದಿಲ್ಲ.

ನಿಮ್ಮ ವಿಷಯವನ್ನು ಸೂಕ್ಷ್ಮ ಎಂಬುದಾಗಿ ವರದಿ ಮಾಡಲಾಗಿದ್ದರೆ ನೀವೇನು ಮಾಡಬಹುದು ಎಂಬ ಕುರಿತು ಹೆಚ್ಚಿನ ಮಾಹಿತಿಗಾಗಿ, Twitter ನ ಮಾಧ್ಯಮ ನೀತಿ ನೋಡಿ.

ನೀವು ಟ್ವೀಟ್‌ಗಳಲ್ಲಿ ಸೂಕ್ಷ್ಮ ಮಾಧ್ಯಮವನ್ನು ನೋಡುತ್ತೀರಾ ಎಂಬುದನ್ನು ಹೇಗೆ ನಿಯಂತ್ರಿಸುವುದು

Twitter.com ಗೆ ಲಾಗ್ ಇನ್ ಮಾಡುವ ಮೂಲಕ ನಿಮ್ಮ ಟ್ವೀಟ್ ಮಾಧ್ಯಮ ಸೆಟ್ಟಿಂಗ್‌ಗಳನ್ನು ಸರಿಹೊಂದಿಸಿ. ಡೆಸ್ಕ್‌ಟಾಪ್ ಕಂಪ್ಯೂಟರ್ ಐಕಾನ್ ಆಯ್ಕೆಮಾಡುವ ಮೂಲಕ twitter.com ಗಾಗಿ ಸೂಚನೆಗಳನ್ನು ವೀಕ್ಷಿಸಿ. 

ಹಂತ 1

ಮೇಲ್ಭಾಗದ ಮೆನುವಿನಲ್ಲಿ, ನೀವು ನ್ಯಾವಿಗೇಶನ್ ಮೆನು ಐಕಾನ್  ಅಥವಾ ನಿಮ್ಮ ಪ್ರೊಫೈಲ್ ಐಕಾನ್ ನೋಡುತ್ತೀರಿ. ನೀವು ಹೊಂದಿರುವ ಯಾವುದೇ ಐಕಾನ್ ಅನ್ನು ತಟ್ಟಿ ಮತ್ತು ಸೆಟ್ಟಿಂಗ್​ಗಳು ಹಾಗೂ ಗೌಪ್ಯತೆ ಅನ್ನು ಆಯ್ಕೆಮಾಡಿ.

ಹಂತ 2

ಗೌಪ್ಯತೆ ಮತ್ತು ಸುರಕ್ಷತೆ ಅನ್ನು ತಟ್ಟಿ.

ಹಂತ 3

ಸುರಕ್ಷತೆ ಅಡಿಯಲ್ಲಿ, ಸೂಕ್ಷ್ಮ ವಿಷಯವನ್ನು ಒಳಗೊಂಡಿರಬಹುದಾದ ಮಾಧ್ಯಮವನ್ನು ಪ್ರದರ್ಶಿಸಿ ಪಕ್ಕದಲ್ಲಿರುವ ಪೆಟ್ಟಿಗೆಯಲ್ಲಿ ಗುರುತು ಮಾಡಿ.

ಹಂತ 1

ಇನ್ನಷ್ಟು ಐಕಾನ್ ಮೇಲೆ ಕ್ಲಿಕ್ ಮಾಡಿ ಮತ್ತು ಗೌಪ್ಯತೆ ಮತ್ತು ಸುರಕ್ಷತೆ ಸೆಟ್ಟಿಂಗ್‌ಗಳಿಗೆ ಹೋಗಿ.

ಹಂತ 2

 ನಿಮಗೆ ಕಾಣುವ ಕಂಟೆಂಟ್‌ ವಿಭಾಗವನ್ನು ಹುಡುಕಿ ಮತ್ತು ಸೂಕ್ಷ್ಮ ವಿಷಯವನ್ನು ಒಳಗೊಂಡಿರಬಹುದಾದ ಮಾಧ್ಯಮವನ್ನು ಪ್ರದರ್ಶಿಸಿ ಪಕ್ಕದಲ್ಲಿರುವ ಪೆಟ್ಟಿಗೆಯಲ್ಲಿ ಗುರುತು ಮಾಡಿ.

ಹಂತ 3

ಸೆಟ್ಟಿಂಗ್‌ಗಳನ್ನು ಸ್ವಯಂಚಾಲಿತವಾಗಿ ಉಳಿಸಲಾಗಿದೆ.


ಗಮನಿಸಿ: ನಿಮ್ಮ Twitter ಅನುಭವಕ್ಕೆ ಅಡ್ಡಿಪಡಿಸುತ್ತಿರುವ ಖಾತೆಗಳನ್ನು ಸಹ ನೀವು ಹಿಂಬಾಲಿಸದಿರಬಹುದು ಅಥವಾ ತಡೆಹಿಡಿಯಬಹುದು.
 

ಕಾನೂನುಬಾಹಿರ ಆಗಿರುವ ಅಥವಾ Twitter ನಿಯಮಗಳನ್ನು ಉಲ್ಲಂಘಿಸುವ ವಿಷಯವನ್ನು ಹೇಗೆ ವರದಿ ಮಾಡುವುದು


ಇತರ ಪ್ರಕಾರಗಳ ಉಲ್ಲಂಘನೆಗಳನ್ನು ತಿಳಿಸುವ ಮತ್ತು ಅವುಗಳನ್ನು ನೀವು ನಮಗೆ ಹೇಗೆ ವರದಿ ಮಾಡಬಹುದು ಎಂಬ ಕುರಿತಾದ ಮಾಹಿತಿಗೆ, ಉಲ್ಲಂಘನೆಗಳನ್ನು ಹೇಗೆ ವರದಿ ಮಾಡುವುದು ಎಂಬ ಕುರಿತಾದ ಈ ಲೇಖನವನ್ನು ದಯವಿಟ್ಟು ನೋಡಿ.

ಈ ಲೇಖನ ಹಂಚಿಕೊಳ್ಳಿ