Twitter ನಲ್ಲಿ ಸ್ಪ್ಯಾಮ್ ವರದಿ ಮಾಡಿ

ಸ್ಪ್ಯಾಮ್ ಎಂದರೇನು?

"ಸ್ಪ್ಯಾಮ್" ಎನ್ನುವುದು Twitter ನಿಯಮಗಳನ್ನು ಉಲ್ಲಂಘಿಸುವ ವಿವಿಧ ನಿಷೇಧಿತ ನಡವಳಿಕೆಗಳನ್ನು ಉಲ್ಲೇಖಿಸುತ್ತದೆ. ಸ್ಪ್ಯಾಮ್ ಅನ್ನು ಸಾಮಾನ್ಯವಾಗಿ ಇತರ ಜನರಿಗೆ ಋಣಾತ್ಮಕವಾಗಿ ಪರಿಣಾಮ ಬೀರುವ ಅನಪೇಕ್ಷಿತ, ಪುನರಾವರ್ತಿತ ಕ್ರಿಯೆಗಳು ಎಂಬುದಾಗಿ ವಿವರಿಸಲಾಗುತ್ತದೆ. ಇದು ಹಲವು ಪ್ರಕಾರಗಳ ಸ್ವಯಂಚಾಲಿತ ಖಾತೆ ಸಂವಹನಗಳು ಮತ್ತು ನಡವಳಿಕೆಗಳು ಜೊತೆಗೆ ಜನರನ್ನು ಹಾದಿ ತಪ್ಪಿಸುವ ಅಥವ ಮೋಸ ಮಾಡುವ ಪ್ರಯತ್ನಗಳನ್ನು ಒಳಗೊಂಡಿರುತ್ತದೆ. Twitter ನಲ್ಲಿ "ಸ್ಪ್ಯಾಮಿಂಗ್" ಅನ್ನು ಒಳಗೊಂಡಿರುವ ನಡವಳಿಕೆಗಳು ರೂಪುಗೊಳ್ಳುವುದು ಮುಂದುವರಿಯುತ್ತದೆ.

Twitter ನಿಯಮಗಳಲ್ಲಿ "ಸ್ಪ್ಯಾಮಿಂಗ್" ಅನ್ನು ಒಳಗೊಳ್ಳುವ ಉದಾಹರಣೆಗಳ ಪಟ್ಟಿ ಇದೆ. ಸ್ಪ್ಯಾಮ್ ಖಾತೆಗಳು ಆಗಾಗ್ಗೆ ಬಳಸುವ ಕೆಲವು ಸಾಮಾನ್ಯ ತಂತ್ರಗಳು ಇಲ್ಲಿವೆ:

  • ಹಾನಿಕಾರಕ ಲಿಂಕ್‌ಗಳನ್ನು ಪೋಸ್ಟ್ ಮಾಡುವುದು (ಫಿಶಿಂಗ್ ಅಥವಾ ಮಾಲ್‌ವೇರ್ ಸೈಟ್‌ಗಳಿಗೆ ಲಿಂಕ್‌ಗಳನ್ನು ಒಳಗೊಂಡು)
  • ಆಕ್ರಮಣಶೀಲ ಹಿಂಬಾಲಿಸುವಿಕೆಯ ನಡವಳಿಕೆ (ಗಮನಕ್ಕಾಗಿ ದೊಡ್ಡ ಪ್ರಮಾಣದಲ್ಲಿ ಹಿಂಬಾಲಿಸುವಿಕೆ ಮತ್ತು ದೊಡ್ಡ ಪ್ರಮಾಣದಲ್ಲಿ ಹಿಂಬಾಲಿಸದಿರುವಿಕೆ)
  • ಖಾತೆಗಳಿಗೆ ಅನಪೇಕ್ಷಿತ ಸಂದೇಶಗಳನ್ನು ಪೋಸ್ಟ್ ಮಾಡಲು ಪ್ರತಿಕ್ರಿಯೆ ಅಥವಾ ಪ್ರಸ್ತಾಪಗಳ ಕಾರ್ಯಗಳನ್ನು ನಿಂದಿಸುವುದು
  • ಅನೇಕ ಖಾತೆಗಳನ್ನು ರಚಿಸುವುದು (ಹಸ್ತಚಾಲಿತವಾಗಿ ಅಥವಾ ಸ್ವಯಂಪ್ರೇರಿತ ಪರಿಕರಗಳನ್ನು ಬಳಸಿಕೊಂಡು)
  • ಗಮನವನ್ನು ಸೆಳೆಯುವುದಕ್ಕಾಗಿ ಟ್ರೆಂಡಿಂಗ್ ವಿಷಯಕ್ಕೆ ಪುನರಾವರ್ತಿತವಾಗಿ ಪೋಸ್ಟ್ ಮಾಡುವುದು
  • ನಕಲು ನವೀಕರಣಗಳನ್ನು ಪುನರಾವರ್ತಿತವಾಗಿ ಪೋಸ್ಟ್ ಮಾಡುವುದು
  • ಸಂಬಂಧವಿಲ್ಲದ ಟ್ವೀಟ್‌ಗಳ ಜೊತೆಗೆ ಲಿಂಕ್‌ಗಳನ್ನು ಪೋಸ್ಟ್ ಮಾಡುವುದು
View instructions for:

ಸ್ಪ್ಯಾಮಿಂಗ್‌ಗಾಗಿ ಪ್ರೊಫೈಲ್ ಅನ್ನು ಹೇಗೆ ವರದಿ ಮಾಡುವುದು

  1. ಖಾತೆಯ ಪ್ರೊಫೈಲ್‌ಗೆ ಭೇಟಿ ನೀಡಿ.
  2. ಗೇರ್ ಐಕಾನ್ ಅನ್ನು  ತಟ್ಟಿ
  3. ಮೆನುವಿನಿಂದ ವರದಿ ಮಾಡು ಅನ್ನು ಆಯ್ಕೆಮಾಡಿ.
  4. ನಿಮ್ಮ ವರದಿಯನ್ನು ಸಲ್ಲಿಸಲು ಅವರು ಸ್ಪ್ಯಾಮ್ ಅನ್ನು ಪೋಸ್ಟ್ ಮಾಡುತ್ತಿದ್ದಾರೆ ಅನ್ನು ಆಯ್ಕೆಮಾಡಿ.
  5. ಮುಂದೆ ನಾವು ನಿಮ್ಮ Twitter ಅನುಭವವನ್ನು ಸುಧಾರಿಸುವುದಕ್ಕಾಗಿ ನೀವು ತೆಗೆದುಕೊಳ್ಳಬಹುದಾದ ಹೆಚ್ಚುವರಿ ಕ್ರಮಗಳಿಗಾಗಿ ಶಿಫಾರಸುಗಳನ್ನು ನಾವು ಒದಗಿಸುತ್ತೇವೆ.

ಸ್ಪ್ಯಾಮಿಂಗ್‌ಗಾಗಿ ಪ್ರೊಫೈಲ್ ಅನ್ನು ಹೇಗೆ ವರದಿ ಮಾಡುವುದು

  1. ಖಾತೆಯ ಪ್ರೊಫೈಲ್‌ಗೆ ಭೇಟಿ ನೀಡಿ.
  2. ಓವರ್‌ಫ್ಲೋ ಐಕಾನ್ ಅನ್ನು  ತಟ್ಟಿ

  2. ಓವರ್‌ಫ್ಲೋ ಐಕಾನ್ ಅನ್ನು ಕ್ಲಿಕ್ ಮಾಡಿ 
  3. ಮೆನುವಿನಿಂದ ವರದಿ ಮಾಡು ಅನ್ನು ಆಯ್ಕೆಮಾಡಿ.
  4. ನಿಮ್ಮ ವರದಿಯನ್ನು ಸಲ್ಲಿಸಲು ಅವರು ಸ್ಪ್ಯಾಮ್ ಅನ್ನು ಪೋಸ್ಟ್ ಮಾಡುತ್ತಿದ್ದಾರೆ ಅನ್ನು ಆಯ್ಕೆಮಾಡಿ.
  5. ಮುಂದೆ ನಾವು ನಿಮ್ಮ Twitter ಅನುಭವವನ್ನು ಸುಧಾರಿಸುವುದಕ್ಕಾಗಿ ನೀವು ತೆಗೆದುಕೊಳ್ಳಬಹುದಾದ ಹೆಚ್ಚುವರಿ ಕ್ರಮಗಳಿಗಾಗಿ ಶಿಫಾರಸುಗಳನ್ನು ನಾವು ಒದಗಿಸುತ್ತೇವೆ.

ವೈಯಕ್ತಿಕ ಟ್ವೀಟ್‌ಗಳನ್ನು ಹೇಗೆ ವರದಿ ಮಾಡುವುದು

Twitter ನಿಯಮಗಳು ಅಥವಾ ನಮ್ಮ ಸೇವಾ ನಿಯಮಗಳು ಉಲ್ಲಂಘಿಸುವ ವೈಯಕ್ತಿಕ ಟ್ವೀಟ್‌ಗಳನ್ನು ಸಹ ನೀವು ವರದಿ ಮಾಡಬಹುದು. 

ಸ್ಪ್ಯಾಮಿಂಗ್‌ಗಾಗಿ ಟ್ವೀಟ್ ಅನ್ನು ವರದಿ ಮಾಡಲು:

  1. ನೀವು ವರದಿ ಮಾಡಲು ಬಯಸುವ ಟ್ವೀಟ್‌ಗೆ ನ್ಯಾವಿಗೇಟ್ ಮಾಡಿ.
  2.   ಐಕಾನ್ ಕ್ಲಿಕ್ ಮಾಡಿ ಅಥವಾ ತಟ್ಟಿ.
  3. ಟ್ವೀಟ್ ವರದಿ ಮಾಡಿ ಅನ್ನು ಆಯ್ಕೆಮಾಡಿ. 
  4. ನಿಮ್ಮ ವರದಿಯನ್ನು ಸಲ್ಲಿಸಲು ಅದು ಸ್ಪ್ಯಾಮ್ ಅನ್ನು ಆಯ್ಕೆಮಾಡಿ
  5. ಮುಂದೆ ನಾವು ನಿಮ್ಮ Twitter ಅನುಭವವನ್ನು ಸುಧಾರಿಸುವುದಕ್ಕಾಗಿ ನೀವು ತೆಗೆದುಕೊಳ್ಳಬಹುದಾದ ಹೆಚ್ಚುವರಿ ಕ್ರಮಗಳಿಗಾಗಿ ಶಿಫಾರಸುಗಳನ್ನು ನಾವು ಒದಗಿಸುತ್ತೇವೆ.

Twitter ನಲ್ಲಿ ನೀವು ಇತರೆ ಹಾನಿಕಾರಕ, ಕಿರಿಕಿರಿಯ ಅಥವಾ ಕಾನೂನುಬಾಹಿರ ವಿಷಯವನ್ನು ಹುಡುಕಿದರೆ, ಇತರೆ ಸಂಭಾವ್ಯ ಉಲ್ಲಂಘನೆಗಳನ್ನು ಹೇಗೆ ವರದಿ ಮಾಡುವುದು ಅನ್ನು ಹುಡುಕಿ.

Twitter ನಲ್ಲಿ ಸ್ಪ್ಯಾಮ್‌ನಿಂದ ನನ್ನನ್ನು ರಕ್ಷಿಸಿಕೊಳ್ಳಲು ನಾನೇನು ಮಾಡಬಹುದು?

ಖಾತೆ ಸುರಕ್ಷತೆ ಸಲಹೆಗಳು ಕುರಿತು ಈ ಲೇಖನದಲ್ಲಿ ಚರ್ಚಿಸಲಾಗಿರುವ ಕೆಲವು ಸುಲಭ ಮುನ್ನೆಚ್ಚರಿಕೆಗಳನ್ನು ಹಿಂಬಾಲಿಸುವ ಮೂಲಕ ನಿಮ್ಮ ಖಾತೆಯನ್ನು ರಕ್ಷಿಸಲು ನೀವು ಸಹಾಯ ಮಾಡಬಹುದು.

Twitter ನಲ್ಲಿ ಸ್ಪ್ಯಾಮ್ ಹರಡಲು ಯಾವುದು ಕಾರಣವಾಗಬಹುದು?

  • ಹಾನಿಕಾರಕ ಲಿಂಕ್‌ಗಳು (ಫಿಶಿಂಗ್ ಅಥವಾ ಮಾಲ್‌ವೇರ್ ಸೈಟ್‌ಗಳಿಗೆ ಲಿಂಕ್‌ಗಳನ್ನು ಒಳಗೊಂಡು)
  • ಹಾನಿಕಾರಕ ಲಿಂಕ್‌ಗಳನ್ನು ಸ್ವಯಂಚಾಲಿತವಾಗಿ ಪೋಸ್ಟ್ ಮಾಡುವ ಅಥವಾ ಸ್ಪ್ಯಾಮ್ ಆಗಿರುವ ಕ್ರಿಯೆಗಳನ್ನು ನೀಡುವ (ಹಿಂಬಾಲಿಸುವಿಕೆಗಳು, ಇಷ್ಟಗಳು, ಮರುಟ್ವೀಟ್‌ಗಳು, ಇತ್ಯಾದಿ) ದುರುದ್ದೇಶಿತ 3 ನೇ ಪಾರ್ಟಿ ಆಪ್‌ಗಳು
  • ಸ್ಪ್ಯಾಮ್ ಆಗಿರುವ ಚಟುವಟಿಕೆಗಳು ಅಥವಾ ಕ್ರಿಯೆಗಳಿಗೆ ಬಳಸಲಾಗುವ ರಾಜಿಯಾಗಿರುವ ಅಥವಾ ಹ್ಯಾಕ್ ಆಗಿರುವ ಖಾತೆಗಳು

ಸ್ಪ್ಯಾಮ್ ನಿಲ್ಲಿಸಲು Twitter ಏನು ಮಾಡುತ್ತಿದೆ?

ಸ್ಪ್ಯಾಮ್ ವಿರುದ್ಧ ಹೋರಾಡುವುದನ್ನು Twitter ಗಂಭೀರವಾಗಿ ಪರಿಗಣಿಸುತ್ತದೆ ಮತ್ತು ಸ್ಪ್ಯಾಮ್ ಕುರಿತು ಚಿಂತಿತರಾಗದೆಯೇ ಸೇವೆಯನ್ನು ನಮ್ಮ ಬಳಕೆದಾರರು ಬಳಸುವುದನ್ನು ನಾವು ಬಯಸುತ್ತೇವೆ. Twitter ನಲ್ಲಿ ಸ್ಪ್ಯಾಮ್-ಮುಕ್ತ ವಾತಾವರಣವನ್ನು ಸಕ್ರಿಯಗೊಳಿಸುವುದಕ್ಕಾಗಿ ಸ್ಪ್ಯಾಮ್‌ನ ಹೊಸ ರೂಪುಗಳನ್ನು ರೂಪಿಸುವುದು ಮತ್ತು ಪ್ರತಿಕ್ರಿಯಿಸುವುದು ನಮ್ಮ ಆಂಟಿ-ಸ್ಪ್ಯಾಮ್ ತಂಡವು ಮುಂದುವರಿಸುತ್ತದೆ.

Twitter ನಲ್ಲಿ ಸ್ಪ್ಯಾಮ್ ಅನ್ನು ಪತ್ತೆಹಚ್ಚಲು ನಮ್ಮ ಬಳಿ ಸಿಸ್ಟಂಗಳು ಮತ್ತು ಪರಿಕರಗಳು ಇದ್ದರೂ, ಸ್ಪ್ಯಾಮ್ ಅನ್ನು ವರದಿ ಮಾಡುವ ಮೂಲಕ ಸಹಾಯ ಮಾಡುವುದಕ್ಕಾಗಿ ನಿಮ್ಮ ಮೇಲೆಯೂ ನಾವು ಅವಲಂಬಿತರಾಗಿದ್ದೇವೆ.

Bookmark or share this article