Twitter ನಲ್ಲಿ ಪೋಸ್ಟ್ ಮಾಡಲಾದ ಖಾಸಗಿ ಮಾಹಿತಿಯನ್ನು ವರದಿ ಮಾಡುವುದು

ಮತ್ತೊಬ್ಬ ವ್ಯಕ್ತಿಯ ಖಾಸಗಿ ಮತ್ತು ಗೌಪ್ಯ ಮಾಹಿತಿಯನ್ನು ಪೋಸ್ಟ್ ಮಾಡುವುದು Twitter ನಿಯಮಗಳ ಉಲ್ಲಂಘನೆಯಾಗಿದೆ. ನಮ್ಮ Twitter ನಲ್ಲಿ ಪೋಸ್ಟ್ ಮಾಡಲಾದ ಖಾಸಗಿ ಮಾಹಿತಿ ಕುರಿತಾದ ನೀತಿ ಕುರಿತು ಓದಿ. 

ವರದಿಯನ್ನು ಮಾಡಲು ನಾನು Twitter ಖಾತೆಯನ್ನು ಹೊಂದಿರಬೇಕೇ?

ಇಲ್ಲ, Twitter ನಲ್ಲಿ ನಿಮ್ಮ ಖಾಸಗಿ ಮತ್ತು ಗೌಪ್ಯ ಮಾಹಿತಿಯನ್ನು ಪೋಸ್ಟ್ ಮಾಡಲಾಗಿದೆ ಎಂಬುದರ ವರದಿ ಸಲ್ಲಿಸಲು ನೀವು Twitter ಖಾತೆಯನ್ನು ಹೊಂದಿರಬೇಕಾಗಿಲ್ಲ.

ಕೃತಿಸ್ವಾಮ್ಯದ ವಿಷಯದ ಅನಧಿಕೃತ ಪೋಸ್ಟಿಂಗ್ ಅನ್ನು ನಾನು ವರದಿ ಮಾಡಬಹುದೇ?

ನಿಮ್ಮ ಕೃತಿಸ್ವಾಮ್ಯದ ವಿಷಯವನ್ನು ನಿಮ್ಮ ಅನುಮತಿ ಇಲ್ಲದೆಯೇ ಟ್ವೀಟ್ ಮಾಡಿದ್ದರೆ, ದಯವಿಟ್ಟು ನಮ್ಮ ಕೃತಿಸ್ವಾಮ್ಯ ಮತ್ತು DMCA ನೀತಿಯನ್ನು ಪರಿಶೀಲಿಸಿ.  

ನನ್ನ ಮಾಹಿತಿಯನ್ನು ಇತರೆ ವೆಬ್‌ಸೈಟ್‌ಗಳಲ್ಲಿ ಪೋಸ್ಟ್ ಮಾಡಿದ್ದರೆ ನಾನೇನು ಮಾಡಬಹುದು?

Twitter ಹೊರತುಪಡಿಸಿದ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಲಾದ ಯಾವುದೇ ಮಾಹಿತಿಯನ್ನು ನಮಗೆ ತೆಗೆದುಹಾಕಲಾಗುವುದಿಲ್ಲ. ನಿಮ್ಮ ಮಾಹಿತಿಯನ್ನು ಮತ್ತೊಂದು ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ್ದರೆ, ದಯವಿಟ್ಟು ಸಹಾಯ ಕೇಂದ್ರವನ್ನು ಅಥವಾ ನಿಮ್ಮ ಮಾಹಿತಿಯನ್ನು ಪೋಸ್ಟ್ ಮಾಡಲಾಗಿರುವ ವೆಬ್‌ಸೈಟ್‌ನ ಬೆಂಬಲ ಸಿಬ್ಬಂದಿಯನ್ನು ಸಂಪರ್ಕಿಸಿ.

ನನ್ನ ಖಾಸಗಿ ಮಾಹಿತಿಯನ್ನು Twitter ನಲ್ಲಿ ಪೋಸ್ಟ್ ಮಾಡಲಾಗಿದೆ ಎಂಬುದನ್ನು ನಾನು ಹೇಗೆ ವರದಿ ಮಾಡಬೇಕು?

ನಿಮ್ಮ ಖಾಸಗಿ ಮಾಹಿತಿಯನ್ನು ನೇರವಾಗಿ ಉಲ್ಲಂಘನೀಯ ಟ್ವೀಟ್(ಗಳಿಂದ)ನಿಂದ Twitter ನಲ್ಲಿ ಪೋಸ್ಟ್ ಮಾಡಲಾಗಿದೆ ಎಂಬುದನ್ನು ನೀವು ವರದಿ ಮಾಡಬಹುದು. ವೈಯಕ್ತಿಕ ಟ್ವೀಟ್‌ಗಳನ್ನು ಹೇಗೆ ವರದಿ ಮಾಡುವುದು ಎಂಬುದನ್ನು ತಿಳಿಯಿರಿ.

ಬೇರೊಬ್ಬರು ನಿಮ್ಮ ಖಾಸಗಿ ಮಾಹಿತಿಯನ್ನು ಪೋಸ್ಟ್ ಮಾಡಿದ್ದಾರೆ ಎಂಬುದಾಗಿ ವರದಿಯನ್ನು ಸಲ್ಲಿಸಿ

ಮಾನ್ಯವಾದ ವರದಿಯನ್ನು Twitter ಸ್ವೀಕರಿಸಿದಾಗ ಏನಾಗುತ್ತದೆ?

Twitter ನಲ್ಲಿ ಖಾಸಗಿ ಮಾಹಿತಿಯನ್ನು ಪೋಸ್ಟ್ ಮಾಡಲಾಗಿದೆ ಎಂಬುದಾಗಿ ನಾವು ಸಂಪೂರ್ಣವಾದ ಮತ್ತು ಮಾನ್ಯವಾದ ವರದಿಯನ್ನು ಸ್ವೀಕರಿಸಿದಾಗ, ನಾವು ವರದಿ ಮಾಡಲಾದ ಖಾತೆ ಮತ್ತು ಟ್ವೀಟ್‌ಗಳ ತನಿಖೆ ಮಾಡುತ್ತೇವೆ. ಖಾತೆ ಅಥವಾ ಟ್ವೀಟ್‌ಗಳ ಕುರಿತಾಗಿ ಕ್ರಮ ತೆಗೆದುಕೊಳ್ಳುವ ಮೊದಲು ಎಲ್ಲಿ ಸಾರ್ವಜನಿಕವಾಗಿ ಲಭ್ಯವಾಗಿಸಲಾದ ಮಾಹಿತಿ ಇದೆಯೋ ಅದನ್ನು ನಾವು ಪರಿಶೀಲಿಸುತ್ತೇವೆ.  ನೀವು ವರದಿ ಮಾಡಿದ ಮಾಹಿತಿಯನ್ನು ಇಂಟರ್ನೆಟ್‌ನಲ್ಲಿ ಬೇರೊಂದೆಡೆ ಈ ಹಿಂದೆ ಪೋಸ್ಟ್ ಮಾಡಲಾಗಿದ್ದರೆ, ಅದು ನಮ್ಮ ನೀತಿಯ ಉಲ್ಲಂಘನೆಯಲ್ಲ ಮತ್ತು ನಾವು ಕ್ರಮ ತೆಗೆದುಕೊಳ್ಳುವುದಿಲ್ಲ.

Twitter ಮತ್ತು ಇತರೆ ವೆಬ್‌ಸೈಟ್‌ಗಳಲ್ಲಿ ನಿಮ್ಮ ಖಾಸಗಿ ಮಾಹಿತಿ ರಕ್ಷಿಸುವ ಕುರಿತು ಇನ್ನಷ್ಟು ತಿಳಿಯಿರಿ.

Twitter ನಲ್ಲಿ ಪೋಸ್ಟ್ ಮಾಡಲಾದ ಖಾಸಗಿ ಮಾಹಿತಿ ಕುರಿತಾದ ನಮ್ಮ ನೀತಿ ಕುರಿತು ಓದಿ.

Bookmark or share this article