ದೌರ್ಜನ್ಯಕರ ವರ್ತನೆಯನ್ನು ವರದಿ ಮಾಡಿ

ಜನರು ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತವಾದ ಭಾವವನ್ನು ಅನುಭವಿಸುವ ವಾತಾವರಣವನ್ನು ಒದಗಿಸಲು Twitter ಪ್ರಯತ್ನಿಸುತ್ತದೆ. ನಿಂದನೀಯ ವರ್ತನೆ ಕಂಡುಬಂದರೆ ನೀವು ಅದರ ಬಗ್ಗೆ ನಮಗೆ ವರದಿ ಮಾಡುವುದು ಸುಲಭವಾಗಬೇಕು ಎಂದು ನಾವು ಬಯಸಿದ್ದೇವೆ. ಹಲವು ಟ್ವೀಟ್‌ಗಳನ್ನು ಒಂದೇ ವರದಿಯಲ್ಲಿ ಸೇರಿಸಬಹುದಾಗಿದ್ದು, ತನಿಖೆಯ ವೇಳೆ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಮತ್ತು ನಾವು ವಿಷಯವ್ಯಾಪ್ತಿಯನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ.

ಗಮನಿಸಿ: ನಮ್ಮ ನಿಂದನೀಯ ವರ್ತನೆ ನೀತಿಯ ಕುರಿತ ವಿವರಗಳಿಗೆ, Twitter ನಿಯಮಗಳು ಮತ್ತು ಸೇವಾ ನಿಯಮಗಳು ಅನ್ನು ದಯವಿಟ್ಟು ಓದಿ.

ನಿಂದನೀಯವಾಗಿರುವ ಒಂದು ಟ್ವೀಟ್ ಅಥವಾ ಒಂದು ಖಾತೆಯನ್ನು ನಾನು ವರದಿ ಮಾಡುವುದು ಹೇಗೆ?

ಟ್ವೀಟ್, ಪ್ರೊಫೈಲ್ ಅಥವಾ ನೇರ ಸಂದೇಶದಿಂದ ನೇರವಾಗಿ ಯಾರಾದರೂ ನಿಂದನೀಯ ವರ್ತನೆಯನ್ನು ವರದಿ ಮಾಡಬಹುದು.

ಟ್ವೀಟ್ ಅನ್ನು ವರದಿ ಮಾಡಲು:

 1. ನೀವು twitter.com ನಲ್ಲಿ ಅಥವಾ iOS ಅಥವಾ Android ಆಪ್‌ಗಾಗಿ Twitter ನಲ್ಲಿ ವರದಿ ಮಾಡಲು ಬಯಸುವ ಟ್ವೀಟ್‌ಗೆ ನ್ಯಾವಿಗೇಟ್ ಮಾಡಿ.
 2. ಪಟ್ಟಿಗಳು  ಐಕಾನ್ ಅನ್ನು ಕ್ಲಿಕ್ ಮಾಡಿ ಅಥವಾ ತಟ್ಟಿ.
 3. ವರದಿ ಮಾಡಿ ಅನ್ನು ಆಯ್ಕೆಮಾಡಿ.
 4. ಇದು ನಿಂದನೀಯ ಅಥವಾ ಅಪಾಯಕಾರಿ ಎಂದು ಆಯ್ಕೆ ಮಾಡಿ.
 5. ಮುಂದೆ, ನೀವು ವರದಿ ಮಾಡುತ್ತಿರುವ ಸಮಸ್ಯೆಯ ಕುರಿತು ಹೆಚ್ಚುವರಿ ಮಾಹಿತಿ ನೀಡುವಂತೆ ನಾವು ನಿಮ್ಮನ್ನು ಕೇಳುತ್ತೇವೆ. ನಿಮ್ಮ ವರದಿಯನ್ನು ಮೌಲ್ಯಮಾಪನ ಮಾಡುವುದಕ್ಕಾಗಿನ ಉತ್ತಮ ಸಂದರ್ಭವನ್ನು ನಾವು ಹೊಂದುವುದಕ್ಕಾಗಿ ನೀವು ವರದಿ ಮಾಡುತ್ತಿರುವ ಖಾತೆಯಿಂದ ಹೆಚ್ಚುವರಿ ಟ್ವೀಟ್‌ಗಳನ್ನು ಆಯ್ಕೆಮಾಡುವಂತೆ ಸಹ ನಾವು ನಿಮ್ಮನ್ನು ಕೇಳಬಹುದು.
 6. ನೀವು ವರದಿ ಮಾಡುತ್ತಿರುವ ಟ್ವೀಟ್‌ಗಳ ಪಠ್ಯವನ್ನು ನಿಮಗೆ ನಾವು ಕಳುಹಿಸುವ ನಮ್ಮ ಅನುಸರಣೆ ಇಮೇಲ್‌ಗಳು ಮತ್ತು ಸೂಚನೆಗಳಲ್ಲಿ ಸೇರಿಸಿಕೊಳ್ಳುತ್ತೇವೆ. ಈ ಮಾಹಿತಿಯನ್ನು ಸ್ವೀಕರಿಸುವುದರಿಂದ ಹೊರಗುಳಿಯಲು, ಈ ವರದಿಯ ಕುರಿತಾದ ನವೀಕರಣಗಳು ಈ ಟ್ವೀಟ್‌ಗಳನ್ನು ತೋರಿಸಬಹುದು ಎಂಬುದರ ಪಕ್ಕದಲ್ಲಿರುವ ಪೆಟ್ಟಿಗೆಯಲ್ಲಿನ ಗುರುತನ್ನು ದಯವಿಟ್ಟು ತೆಗೆಯಿರಿ.
 7. ಒಮ್ಮೆ ನಿಮ್ಮ ವರದಿಯನ್ನು ನೀವು ಸಲ್ಲಿಸಿದಾಗ, ನಿಮ್ಮ Twitter ಅನುಭವವನ್ನು ಸುಧಾರಿಸುವುದಕ್ಕಾಗಿ ನೀವು ತೆಗೆದುಕೊಳ್ಳಬಹುದಾದ ಹೆಚ್ಚುವರಿ ಕ್ರಮಗಳಿಗಾಗಿ ಶಿಫಾರಸುಗಳನ್ನು ನಾವು ಒದಗಿಸುತ್ತೇವೆ.
   
ಖಾತೆಯನ್ನು ವರದಿ ಮಾಡಲು:

 1. ಖಾತೆ ಪ್ರೊಫೈಲ್‌ಗೆ ಹೋಗಿ ಮತ್ತು ಓವರ್‌ಫ್ಲೋ ಐಕಾನ್ ಅನ್ನು  ಕ್ಲಿಕ್ ಮಾಡಿ ಅಥವಾ ತಟ್ಟಿ
 2. ವರದಿ ಮಾಡಿ ಅನ್ನು ಆಯ್ಕೆಮಾಡಿ.
 3. ಅವು ನಿಂದನೀಯ ಅಥವಾ ಅಪಾಯಕಾರಿ ಎಂದು ಆಯ್ಕೆ ಮಾಡಿ.
 4. ಮುಂದೆ, ನೀವು ವರದಿ ಮಾಡುತ್ತಿರುವ ಸಮಸ್ಯೆಯ ಕುರಿತು ಹೆಚ್ಚುವರಿ ಮಾಹಿತಿ ನೀಡುವಂತೆ ನಾವು ನಿಮ್ಮನ್ನು ಕೇಳುತ್ತೇವೆ. ನಿಮ್ಮ ವರದಿಯನ್ನು ಮೌಲ್ಯಮಾಪನ ಮಾಡುವುದಕ್ಕಾಗಿನ ಉತ್ತಮ ಸಂದರ್ಭವನ್ನು ನಾವು ಹೊಂದುವುದಕ್ಕಾಗಿ ಆ ಖಾತೆಯಿಂದ ಹೆಚ್ಚುವರಿ ಟ್ವೀಟ್‌ಗಳನ್ನು ಆಯ್ಕೆಮಾಡುವಂತೆ ಸಹ ನಾವು ನಿಮ್ಮನ್ನು ಕೇಳಬಹುದು.
 5. ನೀವು ವರದಿ ಮಾಡುತ್ತಿರುವ ಟ್ವೀಟ್‌ಗಳ ಪಠ್ಯವನ್ನು ನಿಮಗೆ ನಾವು ಕಳುಹಿಸುವ ನಮ್ಮ ಅನುಸರಣೆ ಇಮೇಲ್‌ಗಳು ಮತ್ತು ಸೂಚನೆಗಳಲ್ಲಿ ಸೇರಿಸಿಕೊಳ್ಳುತ್ತೇವೆ. ಈ ಮಾಹಿತಿಯನ್ನು ಸ್ವೀಕರಿಸುವುದರಿಂದ ಹೊರಗುಳಿಯಲು, ಈ ವರದಿಯ ಕುರಿತಾದ ನವೀಕರಣಗಳು ಈ ಟ್ವೀಟ್‌ಗಳನ್ನು ತೋರಿಸಬಹುದು ಎಂಬುದರ ಪಕ್ಕದಲ್ಲಿರುವ ಪೆಟ್ಟಿಗೆಯಲ್ಲಿನ ಗುರುತನ್ನು ದಯವಿಟ್ಟು ತೆಗೆಯಿರಿ.
 6. ಒಮ್ಮೆ ನಿಮ್ಮ ವರದಿಯನ್ನು ನೀವು ಸಲ್ಲಿಸಿದಾಗ, ನಿಮ್ಮ Twitter ಅನುಭವವನ್ನು ಸುಧಾರಿಸುವುದಕ್ಕಾಗಿ ನೀವು ತೆಗೆದುಕೊಳ್ಳಬಹುದಾದ ಹೆಚ್ಚುವರಿ ಕ್ರಮಗಳಿಗಾಗಿ ಶಿಫಾರಸುಗಳನ್ನು ನಾವು ಒದಗಿಸುತ್ತೇವೆ.

ಗಮನಿಸಿ: ನೀವು ನಿರ್ಬಂಧಿಸಿದ ಅಥವಾ ನಿಮ್ಮನ್ನು ನಿರ್ಬಂಧಿಸಿದ ಖಾತೆಯನ್ನು ನೀವು ವರದಿ ಮಾಡಬಹುದು. ಖಾತೆ ಪ್ರೊಫೈಲ್‌ಗೆ ಹೋಗಿ ಮತ್ತು ಓವರ್‌ಫ್ಲೋ ಐಕಾನ್ ಅನ್ನು ಕ್ಲಿಕ್ ಮಾಡಿ ಅಥವಾ ತಟ್ಟಿ ಮತ್ತು ನಂತರ ವರದಿ ಆಯ್ಕೆ ಮಾಡಿ.

ಪ್ರತ್ಯೇಕ ಸಂದೇಶ ಅಥವಾ ಸಂವಾದವನ್ನು ವರದಿ ಮಾಡುವ ಬಗೆ
ಹಂತ 1

ನೇರ ಸಂದೇಶ ಸಂವಾದವನ್ನು ತಟ್ಟಿ ಮತ್ತು ನೀವು ವರದಿ ಮಾಡಲು ಬಯಸುವ ಸಂದೇಶವನ್ನು ಹುಡುಕಿ.

ಹಂತ 2

ಸಂದೇಶವನ್ನು ತಟ್ಟಿ ಮತ್ತು ಹಿಡಿಯಿರಿ. ಪಾಪ್-ಅಪ್ ಮೆನುವಿನಿಂದ, ಸಂದೇಶ ವರದಿ ಮಾಡಿ ಆಯ್ಕೆಮಾಡಿ. (ಇಡೀ ಸಂವಾದವನ್ನು ವರದಿ ಮಾಡಲು, ಮಾಹಿತಿ ಐಕಾನ್  ತಟ್ಟಿ ನಂತರ ಸಂವಾದ ವರದಿ ಮಾಡಿಅನ್ನು ಆಯ್ಕೆಮಾಡಿ.)

ಹಂತ 3

ಒಂದು ವೇಳೆ ನೀವು ಅವು ನಿಂದನೀಯ ಅಥವಾ ಹಾನಿಕಾರಕವಾಗಿವೆ ಎಂದು ಆಯ್ಕೆಮಾಡಿದರೆ, ನೀವು ವರದಿ ಮಾಡುತ್ತಿರುವ ಸಮಸ್ಯೆಯ ಕುರಿತು ಹೆಚ್ಚುವರಿ ಮಾಹಿತಿ ನೀಡುವಂತೆ ನಾವು ನಿಮ್ಮನ್ನು ಕೇಳುತ್ತೇವೆ. ನಿಮ್ಮ ವರದಿಯನ್ನು ಮೌಲ್ಯಮಾಪನ ಮಾಡುವುದಕ್ಕಾಗಿನ ಉತ್ತಮ ಸಂದರ್ಭವನ್ನು ನಾವು ಹೊಂದುವುದಕ್ಕಾಗಿ ನೀವು ವರದಿ ಮಾಡುತ್ತಿರುವ ಖಾತೆಯಿಂದ ಹೆಚ್ಚುವರಿ ಸಂದೇಶಗಳನ್ನು ಆಯ್ಕೆಮಾಡುವಂತೆ ಸಹ ನಾವು ನಿಮ್ಮನ್ನು ಕೇಳಬಹುದು.

ಹಂತ 4

ಒಮ್ಮೆ ನಿಮ್ಮ ವರದಿಯನ್ನು ನೀವು ಸಲ್ಲಿಸಿದಾಗ, ನಿಮ್ಮ Twitter ಅನುಭವವನ್ನು ಸುಧಾರಿಸುವುದಕ್ಕಾಗಿ ನೀವು ತೆಗೆದುಕೊಳ್ಳಬಹುದಾದ ಹೆಚ್ಚುವರಿ ಕ್ರಮಗಳಿಗಾಗಿ ಶಿಫಾರಸುಗಳನ್ನು ನಾವು ಒದಗಿಸುತ್ತೇವೆ.
ಗಮನಿಸಿ: ಜೊತೆಗೆ, ಗುಂಪು ಸಂದೇಶದಿಂದ ಸಂವಾದವನ್ನು ವರದಿ ಮಾಡುವ ಆಯ್ಕೆಯನ್ನು ನೀವು ಹೊಂದಿದ್ದೀರಿ.

 ನಿಂದನೀಯ ಟ್ವೀಟ್ ವರ್ತನೆಯನ್ನು ವರದಿ ಮಾಡಲು ನೀವು ನಮ್ಮ ನಮೂನೆಯನ್ನೂ ಬಳಸಬಹುದು.

ಹಂತ 1

ನೇರ ಸಂದೇಶ ಸಂವಾದವನ್ನು ತಟ್ಟಿ ಮತ್ತು ನೀವು ವರದಿ ಮಾಡಲು ಬಯಸುವ ಸಂದೇಶವನ್ನು ಹುಡುಕಿ.

ಹಂತ 2

ಸಂದೇಶವನ್ನು ತಟ್ಟಿ ಮತ್ತು ಹಿಡಿಯಿರಿ. ಪಾಪ್-ಅಪ್ ಮೆನುವಿನಿಂದ, ಸಂದೇಶ ವರದಿ ಮಾಡಿ ಆಯ್ಕೆಮಾಡಿ. (ಇಡೀ ಸಂವಾದವನ್ನು ವರದಿ ಮಾಡಲು, ಇನ್ನಷ್ಟು ಐಕಾನ್  ತಟ್ಟಿ ನಂತರ ಸಂವಾದ ವರದಿ ಮಾಡಿಅನ್ನು ಆಯ್ಕೆಮಾಡಿ.)

ಹಂತ 3

ಒಂದು ವೇಳೆ ನೀವು ಅವು ನಿಂದನೀಯ ಅಥವಾ ಹಾನಿಕಾರಕವಾಗಿವೆ ಎಂದು ಆಯ್ಕೆಮಾಡಿದರೆ, ನೀವು ವರದಿ ಮಾಡುತ್ತಿರುವ ಸಮಸ್ಯೆಯ ಕುರಿತು ಹೆಚ್ಚುವರಿ ಮಾಹಿತಿ ನೀಡುವಂತೆ ನಾವು ನಿಮ್ಮನ್ನು ಕೇಳುತ್ತೇವೆ. ನಿಮ್ಮ ವರದಿಯನ್ನು ಮೌಲ್ಯಮಾಪನ ಮಾಡುವುದಕ್ಕಾಗಿನ ಉತ್ತಮ ಸಂದರ್ಭವನ್ನು ನಾವು ಹೊಂದುವುದಕ್ಕಾಗಿ ನೀವು ವರದಿ ಮಾಡುತ್ತಿರುವ ಖಾತೆಯಿಂದ ಹೆಚ್ಚುವರಿ ಸಂದೇಶಗಳನ್ನು ಆಯ್ಕೆಮಾಡುವಂತೆ ಸಹ ನಾವು ನಿಮ್ಮನ್ನು ಕೇಳಬಹುದು.

ಹಂತ 4

ಒಮ್ಮೆ ನಿಮ್ಮ ವರದಿಯನ್ನು ನೀವು ಸಲ್ಲಿಸಿದಾಗ, ನಿಮ್ಮ Twitter ಅನುಭವವನ್ನು ಸುಧಾರಿಸುವುದಕ್ಕಾಗಿ ನೀವು ತೆಗೆದುಕೊಳ್ಳಬಹುದಾದ ಹೆಚ್ಚುವರಿ ಕ್ರಮಗಳಿಗಾಗಿ ಶಿಫಾರಸುಗಳನ್ನು ನಾವು ಒದಗಿಸುತ್ತೇವೆ.
ಗಮನಿಸಿ: ಜೊತೆಗೆ, ಗುಂಪು ಸಂದೇಶದಿಂದ ಸಂವಾದವನ್ನು ವರದಿ ಮಾಡುವ ಆಯ್ಕೆಯನ್ನು ನೀವು ಹೊಂದಿದ್ದೀರಿ. 

 ನಿಂದನೀಯ ಟ್ವೀಟ್ ವರ್ತನೆಯನ್ನು ವರದಿ ಮಾಡಲು ನೀವು ನಮ್ಮ ನಮೂನೆಯನ್ನೂ ಬಳಸಬಹುದು.

ಹಂತ 1

ನೇರ ಸಂದೇಶ ಸಂವಾದವನ್ನು ತಟ್ಟಿ ಮತ್ತು ನೀವು ವರದಿ ಮಾಡಲು ಬಯಸುವ ಸಂದೇಶವನ್ನು ಹುಡುಕಿ. (ಇಡೀ ಸಂವಾದವನ್ನು ವರದಿ ಮಾಡಲು, ಇನ್ನಷ್ಟು ಐಕಾನ್  ಕ್ಲಿಕ್ ಮಾಡಿ)

ಹಂತ 2

ಸಂದೇಶದ ಮೇಲೆ ಹೋವರ್ ಮಾಡಿ ಮತ್ತು ಸಂದೇಶ ವರದಿ ಮಾಡಿ ಕಂಡುಬಂದಾಗ ಅದನ್ನು ಕ್ಲಿಕ್ ಮಾಡಿ.

ಹಂತ 3

ಮಾಹಿತಿ ಐಕಾನ್  ಮೇಲೆ ಕೂಡಾ ನೀವು ಕ್ಲಿಕ್ ಮಾಡಬಹುದು ಮತ್ತು @ಬಳಕೆದಾರರ ಹೆಸರು ವರದಿ ಮಾಡಿ ಆಯ್ಕೆ ಮಾಡಬಹುದು.

ಹಂತ 4

ಒಂದು ವೇಳೆ ನೀವು ಅವು ನಿಂದನೀಯ ಅಥವಾ ಹಾನಿಕಾರಕವಾಗಿವೆ ಎಂದು ಆಯ್ಕೆಮಾಡಿದರೆ, ನೀವು ವರದಿ ಮಾಡುತ್ತಿರುವ ಸಮಸ್ಯೆಯ ಕುರಿತು ಹೆಚ್ಚುವರಿ ಮಾಹಿತಿ ನೀಡುವಂತೆ ನಾವು ನಿಮ್ಮನ್ನು ಕೇಳುತ್ತೇವೆ. ನಿಮ್ಮ ವರದಿಯನ್ನು ಮೌಲ್ಯಮಾಪನ ಮಾಡುವುದಕ್ಕಾಗಿನ ಉತ್ತಮ ಸಂದರ್ಭವನ್ನು ನಾವು ಹೊಂದುವುದಕ್ಕಾಗಿ ನೀವು ವರದಿ ಮಾಡುತ್ತಿರುವ ಖಾತೆಯಿಂದ ಹೆಚ್ಚುವರಿ ಸಂದೇಶಗಳನ್ನು ಆಯ್ಕೆಮಾಡುವಂತೆ ಸಹ ನಾವು ನಿಮ್ಮನ್ನು ಕೇಳಬಹುದು.

ಹಂತ 5

ಒಮ್ಮೆ ನಿಮ್ಮ ವರದಿಯನ್ನು ನೀವು ಸಲ್ಲಿಸಿದಾಗ, ನಿಮ್ಮ Twitter ಅನುಭವವನ್ನು ಸುಧಾರಿಸುವುದಕ್ಕಾಗಿ ನೀವು ತೆಗೆದುಕೊಳ್ಳಬಹುದಾದ ಹೆಚ್ಚುವರಿ ಕ್ರಮಗಳಿಗಾಗಿ ಶಿಫಾರಸುಗಳನ್ನು ನಾವು ಒದಗಿಸುತ್ತೇವೆ.
ಗಮನಿಸಿ: ಜೊತೆಗೆ, ಗುಂಪು ಸಂದೇಶದಿಂದ ಸಂವಾದವನ್ನು ವರದಿ ಮಾಡುವ ಆಯ್ಕೆಯನ್ನು ನೀವು ಹೊಂದಿದ್ದೀರಿ.

ನಿಂದನೀಯ ಟ್ವೀಟ್ ವರ್ತನೆಯನ್ನು ವರದಿ ಮಾಡಲು ನೀವು ನಮ್ಮ ನಮೂನೆಯನ್ನೂ ಬಳಸಬಹುದು.

ಹಿಂಸಾತ್ಮಕ ಬೆದರಿಕೆ ಬಂದರೆ ನಾನು ಏನು ಮಾಡಲಿ?
 
ನೀವು ನಮಗೆ ನೇರವಾಗಿ ಟ್ವೀಟ್‌ಗಳು, ಪ್ರೊಫೈಲ್‌ಗಳು ಅಥವಾ ನೇರ ಸಂದೇಶಗಳನ್ನು ವರದಿ ಮಾಡಬಹುದು (ಈ ಮೇಲೆ ನೋಡಿ). ಬೆದರಿಸುವ ಟ್ವೀಟ್‌, ನೇರ ಸಂದೇಶ ಮತ್ತು/ಅಥವಾ ಜವಾಬ್ದಾರಿಯುತ ಖಾತೆಯ ವಿರುದ್ಧ Twitter ಕ್ರಮ ತೆಗೆದುಕೊಳ್ಳಬಹುದು.

ಆದರೆ, ನಿಮಗೆ ವಿಶ್ವಾಸಯುತ ಎನಿಸಿದ ಹಿಂಸಾತ್ಮಕ ಬೆದರಿಕೆಯನ್ನು ಒಳಗೊಂಡಿರುವ ಟ್ವೀಟ್‌ ಅಥವಾ ಸಂದೇಶ ಕಳುಹಿಸಿದರೆ ನಿಮಗೆ ನಿಮ್ಮ ಬಗ್ಗೆ ಅಥವಾ ಇತರರ ವೈಯಕ್ತಿಕ ಸುರಕ್ಷತೆಯ ಬಗ್ಗೆ ಭೀತಿ ಇದ್ದರೆ, ನಿಮ್ಮ ಸ್ಥಳೀಯ ಕಾನೂನು ಜಾರಿ ದಳವನ್ನು ಸಂಪರ್ಕಿಸಬಹುದು. ಅವರು ಭೀತಿಯ ಮಾನ್ಯತೆಯನ್ನು ನಿಖರವಾಗಿ ವಿಶ್ಲೇಷಿಸಬಹುದು, ಭೀತಿಯ ಮೂಲದ ತನಿಖೆ ಮಾಡಬಹುದು ಮತ್ತು ಭೌತಿಕ ಸುರಕ್ಷತೆಯ ಕುರಿತ ಆತಂಕಗಳಿಗೆ ಪ್ರತಿಕ್ರಿಯಿಸಬಹುದು. ಕಾನೂನು ಜಾರಿ ದಳವನ್ನು ನೇರವಾಗಿ ಸಂಪರ್ಕಿಸಿದರೆ, ನೀವು ಅವರೊಂದಿಗ ಪರಿಶ್ರಮಿಸಿ, ಭೀತಿಯ ತನಿಖೆಗಾಗಿ ಅಗತ್ಯ ಮಾಹಿತಿಯನ್ನು ನೀಡಬಹುದು. ಟ್ವೀಟ್ ವರದಿಗಳಿಗೆ ಮಾತ್ರ:  ನಾವು ನಿಮ್ಮ ವರದಿಯನ್ನು ಸ್ವೀಕರಿಸಿದ್ದೇವೆ ಸ್ಕ್ರೀನ್‌ನಲ್ಲಿರುವ ಇಮೇಲ್ ವರದಿ ಮೇಲೆ ಕ್ಲಿಕ್ ಮಾಡುವ ಮೂಲಕ ಕಾನೂನು ಜಾರಿ ದಳದೊಂದಿಗೆ ಹಂಚಿಕೊಳ್ಳಲು ನಿಮ್ಮ ಹಿಂಸಾತ್ಮಕ ಬೆದರಿಕೆಯ ವರದಿಯ ನಿಮ್ಮದೇ ಪ್ರತಿಯನ್ನು ನೀವು ಪಡೆಯಬಹುದು.

ನಾನು ವರದಿ ಸಲ್ಲಿಸಿದ ನಂತರ ಏನಾಗುತ್ತದೆ?

ನಾನು ವರದಿ ಸಲ್ಲಿಸಿದ ನಂತರ, ನಿಮ್ಮ ವರದಿಯನ್ನು ನಾವು ಸ್ವೀಕರಿಸಿದ್ದೇವೆ ಎಂಬುದನ್ನು ಎಚ್ಚರಿಸಿ ನಮ್ಮಿಂದ ನೀವು ದೃಢೀಕರಣ ಸಂದೇಶವನ್ನು ಸ್ವೀಕರಿಸುತ್ತೀರಿ (ಸಂದೇಶ ನಿಮಗೆ ಬರುವುದಕ್ಕೆ ಗರಿಷ್ಠ 24 ಗಂಟೆಗಳನ್ನು ತೆಗೆದುಕೊಳ್ಳಬಹುದು). ವರದಿ ಮಾಡಿದ ಖಾತೆ ಮತ್ತು/ಅಥವಾ ಟ್ವೀಟ್‌(ಗಳನ್ನು) ಮತ್ತು/ಅಥವಾ ನೇರ ಸಂದೇಶ(ಗಳನ್ನು) ನಾವು ಪರಿಶೀಲಿಸುತ್ತೇವೆ. ಖಾತೆ ಮತ್ತು/ಅಥವಾ ಟ್ವೀಟ್‌(ಗಳು) ಮತ್ತು/ಅಥವಾ ಪಟ್ಟಿ(ಗಳು) ಮತ್ತು/ಅಥವಾ ನೇರ ಸಂದೇಶ(ಗಳು) ನಮ್ಮ ನೀತಿಯನ್ನು ಉಲ್ಲಂಘಿಸಿವೆ ಎಂದು ನಾವು ಕಂಡುಕೊಂಡರೆ ನಾವು ಕ್ರಮ (ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸುವವರೆಗಿನ ಎಚ್ಚರಿಕೆ) ತೆಗೆದುಕೊಳ್ಳುತ್ತೇವೆ. ನಿಮ್ಮಿಂದ ನಮಗೆ ಹೆಚ್ಚಿನ ಮಾಹಿತಿ ಬೇಕಾದರೆ ಅಥವಾ ವರದಿ ಮಾಡಿದ ಖಾತೆ ಮತ್ತು/ಅಥವಾ ಟ್ವೀಟ್‌(ಗಳು) ಮತ್ತು/ಅಥವಾ ನೇರ ಸಂದೇಶ(ಗಳು) ವಿರುದ್ಧ ನಾವು ಕ್ರಮ ತೆಗೆದುಕೊಂಡರೆ ನಮ್ಮಿಂದ ನೀವು ಫಾಲೋ ಅಪ್‌ ಅನ್ನು ಪಡೆಯುತ್ತೀರಿ.

ಇದರ ಜೊತೆಗೆ, ವರದಿ ಮಾಡಲಾದ ಟ್ವೀಟ್‌ಗಳ ಮೂಲ ವಿಷಯವನ್ನು ನೀವು ಅದನ್ನು ವರದಿ ಮಾಡಿದ್ದೀರಿ ಎಂದು ತಿಳಿಸುವ ಸೂಚನೆಯೊಂದಿಗೆ ಬದಲಾಯಿಸಲಾಗುತ್ತದೆ. ನೀವು ಬಯಸಿದರೆ ಟ್ವೀಟ್ ಅನ್ನು ಕ್ಲಿಕ್ ಮಾಡಬಹುದು ಮತ್ತು ಅದನ್ನು ವೀಕ್ಷಿಸಬಹುದು. 

ಗಮನಿಸಿ: ಇದರ ಜೊತೆಗೆ, ನೀವು ಇತ್ತೀಚೆಗೆ ವರದಿ ಮಾಡಿದ ಖಾತೆಯ ವಿರುದ್ಧ ಕ್ರಮ ತೆಗೆದುಕೊಂಡರೆ ಉತ್ಪನ್ನದ ಒಳಗಿನ ಸೂಚನೆಯನ್ನು ನೀವು ಪಡೆಯುತ್ತೀರಿ. ಈ ಕ್ರಮವು ನಿಮ್ಮ ವರದಿಗೆ ಸಂಬಂಧಿಸಿರಬಹುದು ಅಥವಾ ಸಂಬಂಧಿಸಿಲ್ಲದೇ ಇರಬಹುದು.

ಹೊಸ ಖಾತೆ ತೆರೆಯುವುದನ್ನು ಯಾಕೆ Twitter ನಿರ್ಬಂಧಿಸಲಾಗದು?
 
ಅನಿರೀಕ್ಷಿತ ವರ್ತನೆಯನ್ನು ನಿಲ್ಲಿಸಲು ಐಪಿ ನಿರ್ಬಂಧಿಸುವಿಕೆಯು ಸಾಮಾನ್ಯವಾಗಿ ಪರಿಣಾಮಕಾರಿಯಾಗಿರುವುದಿಲ್ಲ ಮತ್ತು ಕಾನೂನುಬದ್ಧ ಖಾತೆಗಳನ್ನು ನಮ್ಮ ಸೇವೆಯನ್ನು ಪ್ರವೇಶಿಸುವುದರಿಂದ ತಪ್ಪಾಗಿ ತಡೆಯುವ ಸಾಧ್ಯತೆಯಿರಬಹುದು.

ಹಲವು ಸ್ಥಳಗಳಲ್ಲಿ ಹಲವು ಖಾತೆಗಳು ಐಪಿ ವಿಳಾಸಗಳನ್ನು ಸಾಮಾನ್ಯವಾಗಿ ಹಂಚಿಕೊಂಡಿರುತ್ತವೆ. ಅಂದರೆ ಒಂದು ಐಪಿ ಅನ್ನು ನಿರ್ಬಂಧಿಸಿದರೆ, ದೊಡ್ಡ ಸಂಖ್ಯೆಯ ಸಂಬಂಧವಿಲ್ಲದ ಖಾತೆಗಳನ್ನು Twitter ಗೆ ಲಾಗಿನ್‌ ಮಾಡುವುದರಿಂದ ತಡೆದಂತಾಗುತ್ತದೆ. ಇದರ ಜೊತೆಗೆ, ಐಪಿ ವಿಳಾಸಗಳನ್ನು ಬದಲಿಸುವುದು ಸುಲಭವಾಗಿದೆ ಮತ್ತು ಬೇರೆ ಸ್ಥಳ, ತೃತೀಯ ಪಕ್ಷದ ಸೇವೆ ಅಥವಾ ಉಚಿತ ವೆಬ್‌ಸೈಟ್‌ಗಳು ಅಥವಾ ಅಪ್ಲಿಕೇಶನ್‌ಗಳಲ್ಲಿ ಒಂದರಿಂದ ಲಾಗಿನ್ ಮಾಡುವ ಮೂಲಕ ನಿರ್ಬಂಧವನ್ನು ತಪ್ಪಿಸಿಕೊಳ್ಳಬಹುದು.

ನನಗೆ ಇನ್ನೊಂದು ಖಾತೆಯ ಮಾಹಿತಿಯನ್ನು Twitter ನೀಡಬಹುದೇ?

ನಮ್ಮ ಗೌಪ್ಯತಾ ನೀತಿ ಪ್ರಕಾರ, ಮಾನ್ಯ ಕಾನೂನು ಪ್ರಕ್ರಿಯೆ ಪ್ರಕಾರ ಅಗತ್ಯವಿರುವುದನ್ನು ಹೊರತುಪಡಿಸಿ ಖಾತೆ ಮಾಹಿತಿಯನ್ನು Twitter ಬಿಡುಗಡೆ ಮಾಡುವುದಿಲ್ಲ. ನೀವು ಪೊಲೀಸ್ ಅಥವಾ ನಿಮ್ಮ ವಕೀಲರನ್ನು ಸಂಪರ್ಕಿಸಿದರೆ, ಇಂತಹ ಮಾಹಿತಿಯನ್ನು ಪಡೆಯುವ ಸೂಕ್ತ ಮತ್ತು ಸರಿಯಾದ ಕಾನೂನು ಪ್ರಕ್ರಿಯೆಯ ಕುರಿತು ನಿಮಗೆ ಸಹಾಯ ಮಾಡಬಹುದು. ಕಾನೂನು ಜಾರಿ ದಳವು ನೇರವಾಗಿ Twitter ಅನ್ನು ಸಂಪರ್ಕಿಸಿದರೆ, ನಾವು ಅವರೊಂದಿಗೆ ಸಹಭಾಗಿತ್ವ ಸಾಧಿಸುತ್ತೇವೆ ಮತ್ತು ಅವರ ತನಿಖೆಗೆ ನೆರವು ನೀಡುತ್ತೇವೆ. ನಮ್ಮ ಕಾನೂನು ಜಾರಿಗೆ ಮಾರ್ಗಸೂಚಿಗಳು ಅನ್ನು ಕಾನೂನು ಜಾರಿ ಅಧಿಕಾರಿಗಳಿಗೆ ನೀವು ಸೂಚಿಸಬಹುದು.

ಈ ಲೇಖನ ಹಂಚಿಕೊಳ್ಳಿ