ನೇರ ಸಂದೇಶ ಸಂವಾದವನ್ನು ತಟ್ಟಿ ಮತ್ತು ನೀವು ವರದಿ ಮಾಡಲು ಬಯಸುವ ಸಂದೇಶವನ್ನು ಹುಡುಕಿ.
ಸಂದೇಶವನ್ನು ತಟ್ಟಿ ಮತ್ತು ಹಿಡಿಯಿರಿ. ಪಾಪ್-ಅಪ್ ಮೆನುವಿನಿಂದ, ಸಂದೇಶ ವರದಿ ಮಾಡಿ ಆಯ್ಕೆಮಾಡಿ.
ಒಂದು ವೇಳೆ ನೀವು ಅವು ನಿಂದನೀಯ ಅಥವಾ ಹಾನಿಕಾರಕವಾಗಿವೆ ಎಂದು ಆಯ್ಕೆಮಾಡಿದರೆ, ನೀವು ವರದಿ ಮಾಡುತ್ತಿರುವ ಸಮಸ್ಯೆಯ ಕುರಿತು ಹೆಚ್ಚುವರಿ ಮಾಹಿತಿ ನೀಡುವಂತೆ ನಾವು ನಿಮ್ಮನ್ನು ಕೇಳುತ್ತೇವೆ. ನಿಮ್ಮ ವರದಿಯನ್ನು ಮೌಲ್ಯಮಾಪನ ಮಾಡುವುದಕ್ಕಾಗಿನ ಉತ್ತಮ ಸಂದರ್ಭವನ್ನು ನಾವು ಹೊಂದುವುದಕ್ಕಾಗಿ ನೀವು ವರದಿ ಮಾಡುತ್ತಿರುವ ಖಾತೆಯಿಂದ ಹೆಚ್ಚುವರಿ ಸಂದೇಶಗಳನ್ನು ಆಯ್ಕೆಮಾಡುವಂತೆ ಸಹ ನಾವು ನಿಮ್ಮನ್ನು ಕೇಳಬಹುದು.
ಒಮ್ಮೆ ನಿಮ್ಮ ವರದಿಯನ್ನು ನೀವು ಸಲ್ಲಿಸಿದಾಗ, ನಿಮ್ಮ Twitter ಅನುಭವವನ್ನು ಸುಧಾರಿಸುವುದಕ್ಕಾಗಿ ನೀವು ತೆಗೆದುಕೊಳ್ಳಬಹುದಾದ ಹೆಚ್ಚುವರಿ ಕ್ರಮಗಳಿಗಾಗಿ ಶಿಫಾರಸುಗಳನ್ನು ನಾವು ಒದಗಿಸುತ್ತೇವೆ.
ಗಮನಿಸಿ: ಜೊತೆಗೆ, ಗುಂಪು ಸಂವಾದದಿಂದ ಸಂದೇಶವನ್ನು ವರದಿ ಮಾಡುವ ಆಯ್ಕೆಯನ್ನು ನೀವು ಹೊಂದಿದ್ದೀರಿ.