ಅಸುರಕ್ಷಿತ ಲಿಂಕ್​ಗಳ ಬಗ್ಗೆ

Twitter ನಲ್ಲಿ ಎಚ್ಚರಿಕೆಯ ಲಿಂಕ್ ಅನ್ನು ನೀವು ನೋಡಿದ್ದೀರಿ ಎಂದರೆ ಫಿಶಿಂಗ್, ಮಾಲ್ವೇರ್ ಅಥವಾ ಸ್ಪ್ಯಾಮ್ ಸೈಟ್ ಅಥವಾ Twitter ಸೇವಾ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದ ಸೈಟ್​ಗಳಿಗೆ ಕರೆದೊಯ್ಯುವ ಸಂಭಾವ್ಯ ಅಪಾಯಕಾರಿ ಯುಆರ್​ಎಲ್​ಗಳ ಡೇಟಾಬೇಸ್​ಗೆ ಈ ಯುಆರ್​ಎಲ್​ಗಳು ಹೋಲುತ್ತವೆ ಎಂದರ್ಥ. ಈ ಸಂದರ್ಭದಲ್ಲಿ ನೀವು ಈ ಎಚ್ಚರಿಕೆಯನ್ನು ನೋಡಬಹುದು:

  • ನೀವು ನಿರ್ದಿಷ್ಟ ಲಿಂಕ್ ಟ್ವೀಟ್ ಮಾಡುವಾಗ
  • ನಿಮ್ಮ ಪ್ರೊಫೈಲ್​ಗೆ ಒಂದು ನಿರ್ದಿಷ್ಟ ಲಿಂಕ್ ಅನ್ನು ಸೇರಿಸುವಾಗ
  • Twitter ನ ಲಿಂಕ್ ಸೇವೆಯ ಮೂಲಕ ನಿರ್ದಿಷ್ಟ ಲಿಂಕ್ ಅನ್ನು ಭೇಟಿ ಮಾಡಿದಾಗ http://t.co

ಸಂಭಾವ್ಯ ಅಸುರಕ್ಷಿತ ಸೈಟ್ ಯಾವುದು?

ನಿಮ್ಮ ಲಾಗಿನ್ ಮಾಹಿತಿ ಮತ್ತು ಪಾಸ್​ವರ್ಡ್ ಅನ್ನು ಕಳ್ಳತನ ಮಾಡಲು ಪ್ರಯತ್ನಿಸುವ, ನಿಮ್ಮ ಕಂಪ್ಯೂಟರಿಗೆ ಅಪಾಯಕಾರಿ ಸಾಫ್ಟ್​ವೇರ್ ಅನ್ನು ಡೌನ್​ಲೋಡ್ ಮಾಡುವ, ವೈಯಕ್ತಿಕ ಮಾಹಿತಿಯನ್ನು ವಿನಂತಿಸುವ ಸ್ಪ್ಯಾಮ್ ಸೈಟ್​ಗಳು ಅಥವಾ Twitter ಸೇವೆ ನೀತಿಗಳ ಇತರ ಉಲ್ಲಂಘನೆಯೊಂದಿಗೆ ಸಂಬಂಧಿಸಿರುವ ಸೈಟ್​ಗಳನ್ನು ಅಸುರಕ್ಷಿತ ಸೈಟ್​ಗಳು ಒಳಗೊಂಡಿರಬಹುದು. ಕೆಲವು ಸಂದರ್ಭದಲ್ಲಿ ವೆಬ್​ಸೈಟ್ ರಾಜಿಗೊಂಡಿದೆ ಮತ್ತು ವೆಬ್​ಸೈಟ್​ಗೆ ಮಾಲ್ವೇರ್ ಅನ್ನು ಎಂಬೆಡ್ ಮಾಡಲಾಗಿದೆ ಎಂಬುದಾಗಿಯೂ ಅರ್ಥೈಸಬಹುದು.

ನನ್ನ ವೆಬ್​ಸೈಟನ್ನು ಅಸುರಕ್ಷಿತ ಎಂದು ಗುರುತಿಸಲಾಗಿದೆ

ಅಸುರಕ್ಷಿತ ಎಂದು ಗುರುತಿಸಲಾದ ಯುಅರ್​ಎಲ್​ನ ವೆಬ್​ಸೈಟನ್ನು ನೀವು​ನಿರ್ವಹಿಸುತ್ತಿದ್ದರೆ, Twitter ಬೆಂಬಲವನ್ನು ಸಂಪರ್ಕಿಸಿ. ನೀವು ನಿರ್ವಹಿಸುತ್ತಿರುವ ಸೈಟ್​ನ ಯುಆರ್​ಎಲ್ ಅನ್ನು ನಿರ್ಬಂಧಿಸಲಾಗಿದ್ದರೆ, ಮಾಲ್ವೇರ್, ಫಿಶಿಂಗ್, ಸ್ಪ್ಯಾಮ್ ಅಥವಾ ಇತರ Twitter ಸೇವಾ ನಿಯಮಗಳ ಉಲ್ಲಂಘನೆಗಾಗಿ Twitter ನಲ್ಲಿ ಸೈಟ್ ಅನ್ನು ಬಳಕೆ ಮಾಡುತ್ತಿಲ್ಲ ಎಂಬುದು ನಿಮಗೆ ಖಚಿತವಿದ್ದರೆ ಇಲ್ಲಿ ಒಂದು ಪ್ರಕರಣವನ್ನು ಭರ್ತಿ ಮಾಡುವ ಮೂಲಕ ನಮ್ಮ ಬೆಂಬಲವನ್ನು ನೀವು ಸಂಪರ್ಕಿಸಬಹುದು. ಸಮಸ್ಯಾತ್ಮಕ ಲಿಂಕ್ ಕ್ಷೇತ್ರದಲ್ಲಿ, ಸಂಕ್ಷೇಪಗೊಳಿಸಿದ ಆವೃತ್ತಿಯ ಬದಲಿಗೆ ಸಮಸ್ಯೆ ಹೊಂದಿರುವ ವಿಸ್ತರಿಸಿದ ಯುಆರ್​ಎಲ್ ಅನ್ನು ದಯವಿಟ್ಟು ಸೇರಿಸಿ. Twitter ನಲ್ಲಿ ಸಂಭಾವ್ಯ ಉಲ್ಲಂಘನೆಗಳನ್ನು ಎದುರಿಸಿದರೆ ಸ್ಪ್ಯಾಮ್‌ ಅನ್ನು ವರದಿ ಮಾಡಲು ನೀವು ನಮ್ಮ ನಮೂನೆಗಳನ್ನೂ ಬಳಸಬಹುದು. ಈ ನೀತಿಯ ಬಗ್ಗೆ ಈ ಕೆಳಗೆ ಇನ್ನಷ್ಟು ವಿವರಗಳನ್ನು ಕಂಡುಕೊಳ್ಳಿ.

ಯುಆರ್​ಎಲ್​ಗಳನ್ನು ಯಾಕೆ ಅಸುರಕಕ್ಷಿತ ಎಂದು Twitter ಯಾಕೆ ಗುರುತಿಸುತ್ತದೆ?

ಖಾತೆ ಭದ್ರತೆ, ಬಳಕೆದಾರ ಸುರಕ್ಷತೆ ಹಾಗೂ ನಮ್ಮ ಸೇವಾ ನಿಯಮಗಳು ಉಲ್ಲಂಘನೆಗಾಗಿ ಯುಆರ್​ಎಲ್​ಗಳನ್ನು Twitter ಗುರುತು ಮಾಡುತ್ತದೆ. Twitter ಅನ್ನು ಹೆಚ್ಚು ಸುರಕ್ಷಿತ​ಗೊಳಿಸಲು, ಫಿಶಿಂಗ್ ಮತ್ತು ಸ್ಕ್ಯಾಮ್​ಗಳನ್ನು ತಡೆಯಲು ಮತ್ತು ನಮ್ಮ ಸೇವಾ ನಿಯಮಗಳನ್ನು ಜಾರಿಗೊಳಿಸಲು ಸಂಭಾವ್ಯ ಅಸುರಕ್ಷಿತ ಯುಆರ್​ಎಲ್​ಗಳನ್ನು Twitter ಗುರುತು ಮಾಡುತ್ತದೆ. ಕೆಲವು ಸನ್ನಿವೇಶಗಳಲ್ಲಿ ಸಂಭಾವ್ಯ ಅಸುರಕ್ಷಿತ ಯುಆರ್​ಎಲ್​ಗಳ ಪೋಸ್ಟ್ ಮಾಡುವುದನ್ನು Twitter ನಿರ್ಬಂಧಿಸಬಹುದು. ಲಿಂಕ್​ಗಳನ್ನು ಮೌಲೀಕರಿಸಲು ಮತ್ತು ಅವು ಸುರಕ್ಷಿತವಾಗಿವೆಯೇ ಅಥವಾ ಇಲ್ಲವೇ ಎಂಬುದಕ್ಕಾಗಿ ವಿವಿಧ ಬಾಹ್ಯ ಪಾಲುದಾರರೊಂದಿಗೆ Twitter ಕೆಲಸ ಮಾಡುತ್ತದೆ. ನಿಮ್ಮ ಖಾತೆಯನ್ನು ಸುರಕ್ಷಿತವಾಗಿಡುವಲ್ಲಿ ಇನ್ನಷ್ಟು ಸಾಮಾನ್ಯ ಮಾಹಿತಿಯನ್ನು ನಮ್ಮ ಖಾತೆ ಸುರಕ್ಷತೆ ಸಲಹೆಗಳ ಲೇಖನಗಳು ಹೊಂದಿವೆ.

ನಿಮಗೆ ಸ್ಪ್ಯಾಮ್ ಅಥವಾ ಮಾಲ್ವೇರ್ ಲಿಂಕ್​ಗಳು ಎದುರಾದರೆ

ಮುಜುಗರಕ್ಕೀಡುಮಾಡುವ ಖಾತೆಯ ಪ್ರೊಫೈಲ್ ಅಥವಾ ಟ್ವೀಟ್​ಗಳಿಂದಲೇ ನೇರವಾಗಿ ಸ್ಪ್ಯಾಮ್ ಅಥವಾ ಲಿಂಕ್​ಗಳನ್ನು ವರದಿ ಮಾಡುವ ಮೂಲಕ Twitter ಅನ್ನು ಸ್ಪ್ಯಾಮ್ ಮುಕ್ತವಾಗಿಸಲು ಸಹಾಯ ಮಾಡಿ. ಹೆಚ್ಚಿನ ಮಾಹಿತಿ ಮತ್ತು ಸೂಚನೆಗಳಿಗೆ ನಮ್ಮ ಸ್ಪ್ಯಾಮ್ ಮತ್ತು ನಕಲಿ ಖಾತೆಗಳು ವಿಭಾಗವನ್ನು ಭೇಟಿ ಮಾಡಿ.

Bookmark or share this article