Twitter ವಹಿವಾಟು ಪಾಲುದಾರರೊಂದಿಗೆ ನಿಮ್ಮ ಡೇಟಾ ಹಂಚಿಕೊಳ್ಳುವುದು

ನಿಮ್ಮ ಕುರಿತು Twitter ಮಾಹಿತಿಯನ್ನು ಸ್ವೀಕರಿಸಿದಾಗ, ನಮ್ಮ ಸೇವೆಗಳನ್ನು ಸುಧಾರಿಸಲು, ನಿಮ್ಮ Twitter ಅನುಭವವನ್ನು ವೈಯಕ್ತಿಕಗೊಳಿಸಲು ಮತ್ತು ಗೌಪ್ಯತಾ ನೀತಿಯಲ್ಲಿ ವಿವರಿಸಿದ ಇತರ ಉದ್ದೇಶಗಳಿಗಾಗಿ ಆ ಮಾಹಿತಿಯನ್ನು ನಾವು ಬಳಸುತ್ತೇವೆ. ಕೆಲವು ಪ್ರಕರಣಗಳಲ್ಲಿ ನಮ್ಮ ಪಾಲುದಾರರೊಂದಿಗೆ ಸಾರ್ವಜನಿಕವಲ್ಲದ ಮಾಹಿತಿ ಹಂಚಿಕೆಯೂ ಒಳಗೊಂಡಿರುತ್ತದೆ.

ಈ ಕೆಳಗೆ ಪಟ್ಟಿ ಮಾಡಿದ ಪಾಲುದಾರಿಕೆಗಳಿಗೆ, ಬಳಕೆದಾರರ ಡೇಟಾವನ್ನು ಹಂಚಿಕೊಳ್ಳಬಹುದೇ ಎಂಬುದರ ಕುರಿತು ಹೆಚ್ಚಿನ ನಿಯಂತ್ರಣವನ್ನು ಅವರಿಗೆ ನಾವು ಒದಗಿಸುತ್ತೇವೆ. ವೈಯಕ್ತಿಕಗೊಳಿಸುವಿಕೆ ಮತ್ತು ಡೇಟಾ ಸೆಟ್ಟಿಂಗ್ಸ್‌ನಲ್ಲಿನ "Twitter ನ ವಹಿವಾಟು ಪಾಲುದಾರರೊಂದಿಗೆ ನಿಮ್ಮ ಡೇಟಾ ಹಂಚಿಕೊಳ್ಳಿ" ಸೆಟ್ಟಿಂಗ್‌ ಅನ್ನು ಬಳಸಿ ಈ ನಿಯಂತ್ರಣವನ್ನು ನೀವು ಮಾಡಬಹುದು. ಈ ಸೆಟ್ಟಿಂಗ್‌ಗೆ ಮಾಡುವ ಬದಲಾವಣೆಗಳು ಜಾರಿಗೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಸೆಟ್ಟಿಂಗ್ ಕೇವಲ ಈ ಕೆಳಗೆ ಪಟ್ಟಿ ಮಾಡಿದ ನಿರ್ದಿಷ್ಟ ವಿಧಗಳ ಪಾಲುದಾರಿಕೆಗಳು ಮತ್ತು ಪಾಲುದಾರರಿಗೆ ಅನ್ವಯಿಸುತ್ತವೆ: ನಮ್ಮ ಸೇವಾ ಪಾಲುದಾರರಂತಹ ಇತರ ಪಾಲುದಾರರೊಂದಿಗೆ ಅಥವಾ ಈ ಕೆಳಗೆ ಪಟ್ಟಿ ಮಾಡಿದವರುಗಳನ್ನು ಹೊರತುಪಡಿಸಿ ಪಾಲುದಾರಿಕೆ ಹೊಂದಾಣಿಕೆ ಮೂಲಕ ಅದೇ ಪಾಲುದಾರರೊಂದಿಗೆ Twitter ಹೇಗೆ ಡೇಟಾ ಹಂಚಿಕೊಳ್ಳುತ್ತದೆ ಎಂಬುದಕ್ಕೆ ಇದು ಬಾಧಿಸುವುದಿಲ್ಲ.


ಪಾಲುದಾರಿಕೆಗಳ ಪಟ್ಟಿ, ಕೊನೆಯದಾಗಿ ಅಪ್‌ಡೇಟ್ ಮಾಡಿರುವುದು, ಆಗಸ್ಟ್‌ 3, 2019:

ನೈಜ ಸಮಯದ ಬಿಡ್ಡಿಂಗ್ (ಆರ್‌ಟಿಬಿ): Twitter ನಲ್ಲಿ ಜಾಹೀರಾತುಗಳ ಖರೀದಿ ಮತ್ತು ಸೇವೆಗಳಿಗಾಗಿ ಪಾಲುದಾರರ ವ್ಯವಸ್ಥೆಯನ್ನು ಜಾಹೀರಾತುದಾರರು ಬಳಸಲು ಈ ಪಾಲುದಾರಿಕೆಯು ಅನುವು ಮಾಡುತ್ತದೆ. ಯಾವಾಗ ಜಾಹೀರಾತುಗಳನ್ನು ಖರೀದಿಸಬೇಕು ಮತ್ತು ಯಾವ ಜಾಹೀರಾತುಗಳನ್ನು ನೀಡಬೇಕು ಎಂಬುದನ್ನು ಜಾಹೀರಾತುದಾರರು ನಿರ್ಧರಿಸಲು ಸಹಾಯ ಮಾಡಲು, ಈ ಪಾಲುದಾರಿಕೆಗಳ ಮೂಲಕ ಜನಸಂಖ್ಯಾ ಡೇಟಾ ಸೇರಿದಂತೆ ಸಾಧನ ಮಟ್ಟದ ಡೇಟಾವನ್ನು Twitter ಹಂಚಿಕೊಳ್ಳುತ್ತದೆ. ಉದಾಹರಣೆಗೆ, 25-34 ವಯಸ್ಸಿನ ಪುರುಷ ಬಳಕೆದಾರರಿಗೆ ಉತ್ತಮವಾಗಿ ಸೂಕ್ತವಾಗುವ ಜಾಹೀರಾತುಗಳನ್ನು ಒದಗಿಸುವುದಕ್ಕಾಗಿ ಜಾಹೀರಾತುದಾರರಿಗೆ ನೆರವಾಗಲು ಆ ಮೊಬೈಲ್ ಸಾಧನ ಗುರುತುಕಾರಕ ಸಂವಾಹಕಗಳನ್ನು Twitter ಹಂಚಿಕೊಳ್ಳಬಹುದು. ನಿಮ್ಮ ಹೆಸರು, ಇಮೇಲ್, ಫೋನ್ ನಂಬರ್‌ ಅಥವಾ Twitter ಬಳಕೆದಾರರ ಹೆಸರನ್ನು ಆರ್‌ಟಿಬಿ ಪಾಲುದಾರರೊಂದಿಗೆ Twitter ಹಂಚಿಕೊಳ್ಳುವುದಿಲ್ಲ. ಆದಾಗ್ಯೂ, ಪಾಲುದಾರರ ಸ್ವಾಧೀನದಲ್ಲಿರುವ (ಉದಾಹರಣೆಗೆ ಪಾಲುದಾರರ ಸೇವೆಯೊಂದಿಗೆ ಖಾತೆಗೆ ಬಳಕೆದಾರರು ಸೈನ್‌ ಅಪ್‌ ಮಾಡಿದ್ದರೆ) ಇತರ ಮಾಹಿತಿಯನ್ನು ಆಧರಿಸಿ ಬಳಕೆದಾರರ ಹೆಸರು, ಇಮೇಲ್, ಫೋನ್‌ ಸಂಖ್ಯೆ ಅಥವಾ ಇತರ ವೈಯಕ್ತಿಕ ಡೇಟಾಗೆ ನಾವು ಹಂಚಿಕೊಳ್ಳುವ ಸಾಧನ ಮಟ್ಟದ ಡೇಟಾವನ್ನು ಪಾಲುದಾರರು ಸಂಪರ್ಕಿಸಹುದು. ಹಾಗೆ ಮಾಡುವ ಮುನ್ನ ಈ ಪಾಲುದಾರಿಕೆಯು ನಿಮ್ಮ ಅನುಮತಿಯನ್ನು ಪಡೆಯಬೇಕಾಗುತ್ತದೆ. ನಿಮ್ಮ Twitter ಡೇಟಾ ಮೂಲಕ ನಿಮ್ಮ ಜನಸಂಖ್ಯಾ ಡೇಟಾವನ್ನು ನೋಡಬಹುದು ಮತ್ತು ಎಡಿಟ್‌ ಮಾಡಬಹುದು. 

ಆರ್‌ಟಿಬಿ ಪಾಲುದಾರ(ರು):


ಪರಿವರ್ತನೆ ಟ್ರ್ಯಾಕಿಂಗ್‌: ಜಾಹೀರಾತುದಾರರಿಗೆ ಮಾಪನ ಮತ್ತು ಅನಾಲಿಟಿಕ್ಸ್ ಪರಿಕರಗಳನ್ನು ಒದಗಿಸುವ ಪಾಲುದಾರರೊಂದಿಗೆ ಮಾಹಿತಿ ಹಂಚಿಕೊಳ್ಳಲು Twitterಗೆ ಈ ಪಾಲುದಾರಿಕೆಯು ಅನುಮತಿಸುತ್ತದೆ. ನಿರ್ದಿಷ್ಟ ಬ್ರೌಸರ್ ಅಥವಾ ಸಾಧನವು ಯಾವ ಜಾಹೀರಾತನ್ನು ನೋಡಿದೆ, ವೀಕ್ಷಿಸಿದೆ ಅಥವಾ ಸಂವಹನ ನಡೆಸಿದೆ ಎಂಬುದನ್ನೂ ಈ ಮಾಹಿತಿಯು ಒಳಗೊಂಡಿರುತ್ತದೆ. Twitter ಮೂಲಕ ನಡೆಸಲಾಗುವ ಮೊಬೈಲ್ ಜಾಹೀರಾತು ಕ್ಯಾಂಪೇನ್‌ಗಳ ಪರಿಣಾಮಕಾರಿತ್ವವನ್ನು ವಿಶ್ಲೇಷಿಸಲು ಮತ್ತು ಮೌಲೀಕರಿಸಲು ಈ ಪರಿಕರಗಳು ಜಾಹೀರಾತುದಾರರಿಗೆ ನೆರವಾಗುತ್ತದೆ. ಉದಾಹರಣೆಗೆ, ನಿರ್ದಿಷ್ಟ ಮೊಬೈಲ್‌ ಅಪ್ಲಿಕೇಶನ್‌ನಲ್ಲಿ ಒಂದು ಜಾಹೀರಾತನ್ನು ಮೊಬೈಲ್ ಸಾಧನ ಗುರುತುಕಾರಕವು ವೀಕ್ಷಿಸಿದೆ ಎಂಬುದನ್ನು Twitter ಹಂಚಿಕೊಳ್ಳಬಹುದು. ಈ ಜಾಹೀರಾತನ್ನು ಚಲಾವಣೆ ಮಾಡಿದ ಜಾಹೀರಾತುದಾರರಿಗೆ ಪಾಲುದಾರರು ನಂತರ ಈ ಮಾಹಿತಿಯನ್ನು ಒದಗಿಸಬಹುದು, ಇದರಿಂದ ಮೊಬೈಲ್ ಅಪ್ಲಿಕೇಶನ್ ಅನ್ನು ಸಾಧನದಲ್ಲಿ ನಂತರ ಇನ್‌ಸ್ಟಾಲ್ ಮಾಡಿದರೆ Twitter ನಲ್ಲಿನ ಜಾಹೀರಾತು ಪರಿಣಾಮಕಾರಿ ಎಂದು ಜಾಹೀರಾತುದಾರರು ತಿಳಿಯುತ್ತಾರೆ. ಈ ಪಾಲುದಾರರೊಂದಿಗೆ ನಿಮ್ಮ ಹೆಸರು, ಇಮೇಲ್‌, ಫೋನ್‌ ಸಂಖ್ಯೆ ಅಥವಾ Twitter ಬಳಕೆದಾರರ ಹೆಸರನ್ನು Twitter ಹಂಚಿಕೊಳ್ಳುವುದಿಲ್ಲ. Twitter ನಲ್ಲಿ ನೀವು ವೀಕ್ಷಿಸುವ ಜಾಹೀರಾತು, ನಿಮ್ಮ ವೈಯಕ್ತಿಕಗೊಳಿಸಿದ ಜಾಹೀರಾತು ಸೆಟ್ಟಿಂಗ್ ಬಳಸಿ ನಮ್ಮ ಪಾಲುದಾರರಿಂದ ಅಥವಾ ನಿಮ್ಮ ಇತರ ಆನ್‌ಲೈನ್‌ ಚಟುವಟಿಕೆಯಿಂದ ಮಾಹಿತಿಯ ಆಧಾರದಲ್ಲಿ ವೈಯಕ್ತಿಕಗೊಳಿಸಲಾಗಿದೆಯೇ ಎಂಬುದನ್ನು ನೀವು ನಿಯಂತ್ರಿಸಹುದು.


ಪರಿವರ್ತನೆ ಟ್ರ್ಯಾಕಿಂಗ್ ಪಾಲುದಾರ(ರು)‌:

 

Bookmark or share this article