ನಿಮ್ಮ Twitter ಅನುಭವವನ್ನು ನಿಯಂತ್ರಿಸುವುದು ಹೇಗೆ

Twitter ಎನ್ನುವುದು ಆಲೋಚನೆಗಳು ಮತ್ತು ಮಾಹಿತಿಯನ್ನು ಹಂಚಿಕೊಳ್ಳಲು, ನಿಮ್ಮ ಸಮುದಾಯಗಳ ಜೊತೆಗೆ ಸಂಪರ್ಕಗೊಳ್ಳಲು ಮತ್ತು ನಿಮ್ಮ ಸುತ್ತಲಿನ ಪ್ರಪಂಚವನ್ನು ನೋಡಲು ಸ್ಥಳವಾಗಿದೆ. ಆ ಅನುಭವದ ತೀರಾ ಅತ್ಯುತ್ತಮ ಭಾಗಗಳನ್ನು ರಕ್ಷಿಸುವುದಕ್ಕಾಗಿ, ನೀವು ಏನು ನೋಡುತ್ತೀರಿ ಮತ್ತು ನಿಮ್ಮ ಕುರಿತು ಇತರರು ಏನನ್ನು ನೋಡಬಹುದು ಎಂಬುದನ್ನು ನಿಯಂತ್ರಿಸಲು ನಿಮಗೆ ಸಹಾಯ ಮಾಡುವುದಕ್ಕಾಗಿ ಪರಿಕರಗಳನ್ನು ನಾವು ಒದಗಿಸುತ್ತೇವೆ, ಇದರಿಂದ ನೀವು Twitter ನಲ್ಲಿ ಆತ್ಮವಿಶ್ವಾಸದಿಂದ ನಿಮ್ಮನ್ನು ವ್ಯಕ್ತಪಡಿಸಬಹುದು.

 

ಟ್ವೀಟ್ ಕುರಿತು ನೀವು ಕ್ರಮ ತೆಗೆದುಕೊಳ್ಳುವುದನ್ನು ನಾವು ಸುಲಭಗೊಳಿಸುತ್ತೇವೆ. ಹಿಂಬಾಲಿಸದಿರುವಿಕೆ, ಸದ್ದಡಿಸುವಿಕೆ, ತಡೆಹಿಡಿಯುವಿಕೆ, ವರದಿ ಮಾಡುವಿಕೆ ಹಾಗೂ ಹೆಚ್ಚಿನವುಗಳಂತಹ ಆಯ್ಕೆಗಳನ್ನು ತ್ವರಿತವಾಗಿ ಪ್ರವೇಶಿಸಲು, ನಿಮ್ಮ ಹೋಮ್ ಕಾಲರೇಖೆಯಿಂದಲೇ ಯಾವುದೇ ಟ್ವೀಟ್‌ನ ಮೇಲ್ಭಾಗದಲ್ಲಿ  ಐಕಾನ್ ಅನ್ನು ತಟ್ಟಿ. 
 

ಹಿಂಬಾಲಿಸದಿರುವಿಕೆ

ಹಿಂಬಾಲಿಸದಿರುವಿಕೆ ಎನ್ನುವುದು ನಿಮ್ಮ ಹೋಮ್ ಕಾಲರೇಖೆಯಲ್ಲಿ ಬೇರೊಬ್ಬರ ಟ್ವೀಟ್‌ಗಳನ್ನು ನೋಡುವುದನ್ನು ನಿಲ್ಲಿಸಲು ನೀವು ತೆಗೆದುಕೊಳ್ಳಬಹುದಾದ ಅತ್ಯಂತ ಸರಳವಾದ ಕ್ರಿಯೆಯಾಗಿದೆ. ನಿಮ್ಮ ಮನಸ್ಸನ್ನು ಬದಲಾಯಿಸಿದರೆ ನೀವು ಯಾವಾಗಲೂ ಮತ್ತೊಮ್ಮೆ ಖಾತೆಯನ್ನು ಹಿಂಬಾಲಿಸಬಹುದು. ನೀವು ಟ್ವೀಟ್‌ನಲ್ಲಿ  ಐಕಾನ್‌ನಿಂದ ಈ ಆಯ್ಕೆಯನ್ನು ಪ್ರವೇಶಿಸಬಹುದು.

ಜನರನ್ನು ಹಿಂಬಾಲಿಸದಿರುವುದು ಹೇಗೆ ಎಂಬ ಕುರಿತು ಇನ್ನಷ್ಟು ಓದಿ.

ಫಿಲ್ಟರ್ ಸೂಚನೆಗಳು

ನಿಮ್ಮ ಸೂಚನೆಗಳ ಕಾಲರೇಖೆಯು ಇತರ Twitter ಖಾತೆಗಳ ಜೊತೆಗೆ ನಿಮ್ಮ ಸಂವಹನಗಳನ್ನು ಪ್ರದರ್ಶಿಸುತ್ತದೆ, ಉದಾಹರಣೆಗೆ, ಪ್ರಸ್ತಾಪಗಳು, ಇಷ್ಟಗಳು, ಮರುಟ್ವೀಟ್‌ಗಳು ಮತ್ತು ಯಾರು ಇತ್ತೀಚಿಗೆ ನಿಮ್ಮನ್ನು ಹಿಂಬಾಲಿಸಿದ್ದಾರೆ. ನೀವು ಹಿಂಬಾಲಿಸದೇ ಇರುವ ಖಾತೆಗಳಿಂದ ಅನಪೇಕ್ಷಿತ ಪ್ರತಿಕ್ರಿಯೆಗಳು ಅಥವಾ ಪ್ರಸ್ತಾಪಗಳನ್ನು ನೀವು ಸ್ವೀಕರಿಸುತ್ತಿದ್ದರೆ, ನೀವು ಸ್ವೀಕರಿಸುವ ಸೂಚನೆಗಳ ಪ್ರಕಾರಗಳನ್ನು ನೀವು ಫಿಲ್ಟರ್ ಮಾಡಬಹುದು.

ನಿಮ್ಮ ಸೂಚನೆಗಳ ಕಾಲರೇಖೆಯನ್ನು ಸರಿಹೊಂದಿಸುವುದಕ್ಕಾಗಿನ ಸೂಚನೆಗಳನ್ನು ಓದಿ.

ಆಗಾಗ್ಗೆ ಕಡಿಮೆ ತೋರಿಸಿ 

ನೀವು ಟ್ವೀಟ್ ಅನ್ನು ಆಗಾಗ್ಗೆ ಕಡಿಮೆ ತೋರಿಸಿ ಎಂಬುದಾಗಿ ಗುರುತು ಮಾಡಿದಾಗ, ಅದು ನಿಮ್ಮ ಹೋಮ್ ಕಾಲರೇಖೆಯಲ್ಲಿ ನೀವು ಕಡಿಮೆ ನೋಡಲು ಬಯಸುವ ಟ್ವೀಟ್‌ಗಳ ಪ್ರಕಾರಗಳನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳಲು Twitter ಗೆ ಸಹಾಯ ಮಾಡುತ್ತದೆ. ನಾವು ಈ ಮಾಹಿತಿಯನ್ನು ಭವಿಷ್ಯದಲ್ಲಿ ನಿಮ್ಮ ಅನುಭವವನ್ನು ಆಪ್ಟಿಮೈಸ್ ಮಾಡಲು ಮತ್ತು ರೂಪಿಸಲು ಬಳಸಬಹುದು. ನೀವು ಟ್ವೀಟ್‌ನಲ್ಲಿ  ಐಕಾನ್‌ನಿಂದ ಈ ಆಯ್ಕೆಯನ್ನು ಪ್ರವೇಶಿಸಬಹುದು.
 

ಸದ್ದಡಗಿಸುವುದು

ಮತ್ತೊಂದು Twitter ಖಾತೆಯನ್ನು ಸದ್ದಡಗಿಸುವುದು ಎಂದರೆ ನೀವು ಆ ಖಾತೆಯ ಟ್ವೀಟ್‌ಗಳನ್ನು ನಿಮ್ಮ ಕಾಲರೇಖೆಯಲ್ಲಿ ನೋಡುವುದಿಲ್ಲ. ಇದು ನಿಮ್ಮ ಸ್ನೇಹಿತರ ಎಲ್ಲಾ ಟ್ವೀಟ್‌ಗಳನ್ನು ನೋಡಲು ಆಸಕ್ತಿ ಹೊಂದಿರದೇ ಇದ್ದರೂ ಅವರೊಂದಿಗೆ ಸಂಪರ್ಕದಲ್ಲಿರಲು ಅತ್ಯುತ್ತಮ ವಿಧಾನವಾಗಿದೆ. ನೀವು ಅವರನ್ನು ಸದ್ದಡಗಿಸಿರುವುದಾಗಿ ಸದ್ದಡಗಿಸಿದ ಖಾತೆಗಳಿಗೆ ತಿಳಿಸುವುದಿಲ್ಲ ಮತ್ತು ಅವರು ನಿಮ್ಮನ್ನು ಟ್ವೀಟ್‌ಗಳಲ್ಲಿ ಪ್ರಸ್ತಾಪಿಸಿದಾಗ ಮತ್ತು ನಿಮಗೆ ನೇರ ಸಂದೇಶಗಳನ್ನು ಕಳುಹಿಸಿದಾಗ ನೀವು ಇನ್ನೂ ಸಹ ಸೂಚನೆಗಳನ್ನು ಪಡೆಯುತ್ತೀರಿ. ನೀವು ಹಿಂಬಾಲಿಸಿದ ಖಾತೆಗಳನ್ನು ಸಹ ನೀವು ಸದ್ದಡಗಿಸಬಹುದು, ಇದರಿಂದ ನಿಮ್ಮ ಸೂಚನೆಗಳ ಕಾಲರೇಖೆಯಲ್ಲಿ ಅವರ ಟ್ವೀಟ್‌ಗಳನ್ನು ನೀವು ನೋಡುವುದಿಲ್ಲ.

ತಡೆಹಿಡಿಯುವುದು ಅಥವಾ ಹಿಂಬಾಲಿಸದೇ ಇರುವುದಕ್ಕಿಂತ ಸದ್ದಡಗಿಸುವುದು ಬೇರೆಯಾಗಿದೆ: ನೀವು ಸದ್ದಡಗಿಸಿದ ಖಾತೆಗಳು ನೀವು ಅವುಗಳನ್ನು ಸದ್ದಡಗಿಸುತ್ತಿರುವಿರಿ ಎಂಬುದಾಗಿ ಎಂದಿಗೂ ತಿಳಿಸುವುದಿಲ್ಲ. ನೀವು ಟ್ವೀಟ್‌ನಲ್ಲಿ  ಐಕಾನ್‌ನಿಂದ ಈ ಆಯ್ಕೆಯನ್ನು ಪ್ರವೇಶಿಸಬಹುದು.

ಖಾತೆಗಳನ್ನು ಸದ್ದಡಗಿಸುವುದು ಕುರಿತು ಇನ್ನಷ್ಟು ಓದಿ.

ನೀವು ನಿರ್ದಿಷ್ಟ ಪದಗಳು, ನುಡಿಗಟ್ಟುಗಳು, ಬಳಕೆದಾರರ ಹೆಸರುಗಳು, ಎಮೋಜಿಗಳು ಅಥವಾ ಹ್ಯಾಶ್ ಟ್ಯಾಗ್‌ಗಳನ್ನು ಒಳಗೊಂಡಿರುವ ಟ್ವೀಟ್‌ಗಳನ್ನು ಸಹ ಸದ್ದಡಗಿಸಬಹುದು
 

ತಡೆಹಿಡಿಯುವುದು

ನೀವು Twitter ನಲ್ಲಿ ಖಾತೆಯೊಂದನ್ನು ತಡೆಹಿಡಿದಾಗ, ನಿಮ್ಮ ಖಾತೆಯ ಜೊತೆಗೆ ಸಂವಹನ ಮಾಡುವ ಆ ಖಾತೆಯ ಸಾಮರ್ಥ್ಯವನ್ನು ನೀವು ನಿರ್ಬಂಧಿಸುತ್ತೀರಿ. ನೀವು ತೊಡಗಿಸಿಕೊಳ್ಳಲು ಬಯಸದ ಖಾತೆಗಳಿಂದ ಅನಪೇಕ್ಷಿತ ಸಂವಹನಗಳನ್ನು ನಿರ್ವಹಣೆ ಮಾಡಲು ಇದು ಪರಿಣಾಮಕಾರಿ ವಿಧಾನವಾಗಿರಬಹುದು.

ನೀವು Twitter ಗೆ ಲಾಗ್ ಇನ್ ಮಾಡಿರುವಾಗ ನೀವು ನಿರ್ಬಂಧಿಸಿದ ಖಾತೆಗಳಿಗೆ ನಿಮ್ಮ ಟ್ವೀಟ್‌ಗಳನ್ನು, ಹಿಂಬಾಲಿಸುವಿಕೆಗಳು ಅಥವಾ ಹಿಂಬಾಲಿಸುವವರ ಪಟ್ಟಿಗಳನ್ನು, ಇಷ್ಟಗಳು ಅಥವಾ ಪಟ್ಟಿಗಳನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ ಮತ್ತು ಈ ಖಾತೆಗಳಿಂದ ನೇರವಾಗಿ ಪ್ರಸ್ತಾಪಗಳ ಸೂಚನೆಗಳನ್ನು ನೀವು ಸ್ವೀಕರಿಸುವುದಿಲ್ಲ. ನಿಮ್ಮ ಕಾಲರೇಖೆಯಲ್ಲಿ ನಿಮಗೆ ಅವರ ಟ್ವೀಟ್‌ಗಳನ್ನು ಸಹ ನೋಡಲು ಸಾಧ್ಯವಾಗುವುದಿಲ್ಲ.

ತಡೆಹಿಡಿಯಲಾದ ಖಾತೆಯು ನಿಮ್ಮ ಪ್ರೊಫೈಲ್‌ಗೆ ಭೇಟಿ ನೀಡಲು ಅಥವಾ ನಿಮ್ಮನ್ನು ಹಿಂಬಾಲಿಸಲು ಪ್ರಯತ್ನಿಸಿದರೆ ಅದನ್ನು ನೀವು ತಡೆಹಿಡಿದಿರುವಿರಿ ಎಂಬುದಾಗಿ ಅವರು ಗಮನಿಸಬಹುದು, ಆದರೆ ಅವರನ್ನು ನೀವು ತಡೆಹಿಡಿದಿರುವ ಕುರಿತು ಅವರು ಯಾವುದೇ ಸೂಚನೆಗಳನ್ನು ಸ್ವೀಕರಿಸುವುದಿಲ್ಲ. ನೀವು ಟ್ವೀಟ್‌ನಲ್ಲಿ  ಐಕಾನ್‌ನಿಂದ ಈ ಆಯ್ಕೆಯನ್ನು ಪ್ರವೇಶಿಸಬಹುದು.

ಖಾತೆಗಳನ್ನು ತಡೆಹಿಡಿಯುವುದು ಕುರಿತು ಇನ್ನಷ್ಟು ಓದಿ.

ವರದಿ ಮಾಡುವುದು

ಖಾತೆ ಅಥವಾ ಟ್ವೀಟ್ Twitter ನಿಯಮಗಳು ಅಥವಾ ನಮ್ಮ ಸೇವಾ ನಿಯಮಗಳನ್ನು ಉಲ್ಲಂಘಿಸುತ್ತಿದೆ ಎಂಬುದಾಗಿ ನೀವು ಭಾವಿಸಿದರೆ, ಖಾತೆ ಅಥವಾ ಟ್ವೀಟ್ ಅನ್ನು ನಮಗೆ ವರದಿ ಮಾಡುವ ಮೂಲಕ ಅದರ ಕುರಿತು ನಮಗೆ ತಿಳಿಸಿ. ನೀವು ವರದಿ ಮಾಡಬಹುದಾದ ಕೆಲವು ಉಲ್ಲಂಘನೆಗಳು ಇವುಗಳನ್ನು ಒಳಗೊಂಡಿರುತ್ತವೆ: ನಿಂದನೆ, ಸೂಕ್ಷ್ಮ ಮಾಧ್ಯಮ, ಸುಳ್ಳುಗುರುತು ಮತ್ತು ಸ್ಪ್ಯಾಮ್. ವರದಿಯನ್ನು ಸಲ್ಲಿಸುವುದಕ್ಕೆ ಕೆಲವು ಹಂತಗಳನ್ನು ತೆಗೆದುಕೊಳ್ಳುತ್ತದೆ, ಆದರೆ ನಿಮ್ಮ ವರದಿಯು ನಮಗೆ ಪ್ರತಿಯೊಬ್ಬರಿಗೂ Twitter ಅನ್ನು ಉತ್ತಮ ಸ್ಥಳವಾಗಿಸಲು ಸಹಾಯ ಮಾಡುತ್ತದೆ. ನೀವು ಟ್ವೀಟ್‌ನಲ್ಲಿ  ಐಕಾನ್‌ನಿಂದ ಈ ಆಯ್ಕೆಯನ್ನು ಪ್ರವೇಶಿಸಬಹುದು.

Twitter ಗೆ ನೀವು ಏನನ್ನು ವರದಿ ಮಾಡಬಹುದು ಎಂಬ ಕುರಿತು ಇನ್ನಷ್ಟು ಓದಿ.

ನೀವು ಟ್ವೀಟ್‌ಗಳಲ್ಲಿ ನೋಡುವ ಮಾಧ್ಯಮವನ್ನು ನಿಯಂತ್ರಿಸಿ

ಸೂಕ್ಷ್ಮ ವಿಷಯವನ್ನು ಒಳಗೊಂಡಿರಬಹುದಾದ ಟ್ವೀಟ್‌ಗಳಲ್ಲಿನ ಮಾಧ್ಯಮದಲ್ಲಿ ಎಚ್ಚರಿಕೆಯನ್ನು ನೋಡಲು ನೀವು ಬಯಸುತ್ತೀರಿ ಎಂಬುದಾಗಿ ನೀವು ನಿರ್ಧರಿಸಿದರೆ, ನಿಮ್ಮ ಗೌಪ್ಯತೆ ಮತ್ತು ಸುರಕ್ಷತೆ ಸೆಟ್ಟಿಂಗ್‌ಗಳು ಟ್ವೀಟ್ ಮಾಧ್ಯಮ ಆಯ್ಕೆಗಳನ್ನು ಒಳಗೊಂಡಿರುತ್ತವೆ. ನಿಮ್ಮ ಸೆಟ್ಟಿಂಗ್‌ಗಳ ಡೀಫಾಲ್ಟ್ ಎಚ್ಚರಿಕೆಯನ್ನು ನೀಡಲು ಆಗಿದೆ, ಆದರೆ ಯಾವುದೇ ಸಮಯದಲ್ಲಿ ನೀವು ಸೆಟ್ಟಿಂಗ್ ಅನ್ನು ಬದಲಾಯಿಸಬಹುದು.

ಹೇಗೆ ನೀವು ಟ್ವೀಟ್‌ಗಳಲ್ಲಿ ನೋಡುವ ಮಾಧ್ಯಮವನ್ನು ನಿಯಂತ್ರಿಸುವುದು ಎಂಬ ಕುರಿತು ಇನ್ನಷ್ಟು ಓದಿ

ನಿಮ್ಮ ಕುರಿತು ಇತರರು ಏನನ್ನು ನೋಡುತ್ತಾರೆಂದು ನಿಯಂತ್ರಿಸಿ

ನಿಮ್ಮ ಟ್ವೀಟ್‌ಗಳನ್ನು ರಕ್ಷಿಸಿ

ನಿಮ್ಮ ಟ್ವೀಟ್‌ಗಳನ್ನು ರಕ್ಷಿಸುವುದು ಎಂದರೆ ನಿಮ್ಮ ಟ್ವೀಟ್‌ಗಳು ನಿಮ್ಮ ಹಿಂಬಾಲಕರಿಗೆ ಮಾತ್ರ ಲಭ್ಯವಿರುತ್ತವೆ ಎಂದರ್ಥ. ನಿಮ್ಮ ಟ್ವೀಟ್‌ಗಳನ್ನು ರಕ್ಷಿಸಲಾಗಿರುವುದರಿಂದ, ನೀವು ನಿಮ್ಮ Twitter ಅನುಭವದ ನಿಯಂತ್ರಣದಲ್ಲಿರುತ್ತೀರಿ: ಪ್ರತಿ ಬಾರಿ ಯಾರಾದರೂ ನಿಮ್ಮ ಖಾತೆಯನ್ನು ಹಿಂಬಾಲಿಸಲು ಬಯಸಿದಾಗ, ಅವರ ವಿನಂತಿಯನ್ನು ಸ್ವೀಕರಿಸುವ ಅಥವಾ ನಿರಾಕರಿಸುವ ಆಯ್ಕೆ ನಿಮಗಿರುತ್ತದೆ.

ಟ್ವೀಟ್‌ಗಳನ್ನು ರಕ್ಷಿಸುವುದಕ್ಕೂ ಮೊದಲು ನಿಮ್ಮ ಹಿಂಬಾಲಿಸುತ್ತಿದ್ದ ಯಾವುದೇ ಖಾತೆಗಳು ನಿಮ್ಮನ್ನು ಹಿಂಬಾಲಿಸುವುದನ್ನು ಮುಂದುವರಿಸುತ್ತವೆ (ಇದರರ್ಥ ನೀವು ಅವುಗಳನ್ನು ಮತ್ತೊಮ್ಮೆ ಅನುಮೋದಿಸುವ ಅಗತ್ಯವಿರುವುದಿಲ್ಲ), ಆದರೆ ಅವುಗಳನ್ನು ತಡೆಹಿಡಿಯುವ ಮೂಲಕ ನಿಮ್ಮ ಹಿಂಬಾಲಿಸದಂತೆ ಅವುಗಳನ್ನು ನಿಲ್ಲಿಸಬಹುದು.

ಸಾರ್ವಜನಿಕ ಮತ್ತು ಸಂರಕ್ಷಿಸಿದ ಟ್ವೀಟ್‌ಗಳ ಕುರಿತು ಇನ್ನಷ್ಟು ಓದಿ.
 

ಫೋಟೋ ಟ್ಯಾಗಿಂಗ್

ಫೋಟೋಗಳಲ್ಲಿ ಸ್ನೇಹಿತರನ್ನು ಟ್ಯಾಗ್ ಮಾಡುವುದು ಸಂಪರ್ಕದಲ್ಲಿರುವುದಕ್ಕಾಗಿ ಅತ್ಯುತ್ತಮ ವಿಧಾನವಾಗಿದೆ, ಆದರೆ ನಿಮ್ಮ Twitter ಅನುಭವವು ಹೆಚ್ಚು ಖಾಸಗಿಯಾಗಿರುವಂತೆ ನೀವು ಬಯಸಲು ನಿರ್ಧರಿಸಬಹುದು. ಯಾರನ್ನಾದರೂ ಅನುಮತಿಸುವುದು, ಕೇವಲ ಸ್ನೇಹಿತರಾಗಿರುವುದು ಅಥವಾ ಫೋಟೋಗಳಲ್ಲಿ ಯಾರೂ ನಿಮ್ಮನ್ನು ಟ್ಯಾಗ್ ಮಾಡದಿರುವ ನಡುವೆ ನೀವು ಆರಿಸಿಕೊಳ್ಳಬಹುದು.

ನಿಮ್ಮ ಫೋಟೋ ಟ್ಯಾಗಿಂಗ್ ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಕುರಿತು ಓದಿ.

ಪರಿಶೋಧಿಸಲ್ಪಡುವ ಸಾಮರ್ಥ್ಯ

Twitter ನಲ್ಲಿ ನೀವು ಕಾಳಜಿ ವಹಿಸುವ ಸ್ನೇಹಿತರು ಮತ್ತು ಜನರನ್ನು ಹುಡುಕುವುದು ಅತ್ಯುತ್ತಮ ಅನುಭವಕ್ಕೆ ಕಾರಣವಾಗಬಹುದು ಮತ್ತು ನಿಮ್ಮ ಇಮೇಲ್ ವಿಳಾಸ ಅಥವಾ ಪೋನ್ ಸಂಖ್ಯೆಯನ್ನು ಬಳಸುವ ಮೂಲಕ ನಾವು ನಿಮಗೆ ಸುಲಭವಾಗಿ ಆ ಸಂಪರ್ಕಗಳನ್ನು ಮಾಡಿಕೊಳ್ಳಲು ಸಹಾಯ ಮಾಡಬಹುದು.

ಆದರೆ, ನಮ್ಮ ಸಹಾಯವಿಲ್ಲದೆಯೇ ಸ್ನೇಹಿತರು ಮತ್ತು ಸಂಪರ್ಕಗಳನ್ನು ಹುಡುಕುವುದಕ್ಕೆ ನೀವು ಆದ್ಯತೆ ನೀಡಬಹುದು ಮತ್ತು ಈ ರೀತಿಯಲ್ಲಿ ನಿಮ್ಮ ಖಾತೆಯನ್ನು ಪರಿಶೋಧಿಸಲ್ಪಡದಂತೆ ಇರಿಸಿಕೊಳ್ಳಲು ಸೆಟ್ಟಿಂಗ್‌ಗಳನ್ನು ಸರಿಹೊಂದಿಸುವುದು ಸುಲಭವಾಗಿದೆ. ಪರಿಶೋಧಿಸಲ್ಪಡುವ ಸಾಮರ್ಥ್ಯ ಸೆಟ್ಟಿಂಗ್‌ಗಳು ಮತ್ತು ನಿಮ್ಮ ಪರಿಶೋಧಿಸಲ್ಪಡುವ ಸಾಮರ್ಥ್ಯವನ್ನು ಹೇಗೆ ಬದಲಾಯಿಸುವುದು ಎಂಬ ಕುರಿತು ಇನ್ನಷ್ಟು ಓದಿ.

ಟ್ವೀಟ್‌ಗಳಲ್ಲಿ ನಿಮ್ಮ ಸ್ಥಳವನ್ನು ಹಂಚಿಕೊಳ್ಳುವುದು

Twitter ನಿಮಗೆ ಪ್ರತಿ ಪ್ರತ್ಯೇಕ ಟ್ವೀಟ್‌ಗಳಲ್ಲಿ ನಿಮ್ಮ ಸ್ಥಳವನ್ನು ಸೇರಿಸಿಕೊಳ್ಳಬೇಕೇ ಎಂಬುದನ್ನು ಆಯ್ಕೆಮಾಡಲು ಅವಕಾಶ ನೀಡುತ್ತದೆ. ನಿಮ್ಮ ಸ್ಥಳವನ್ನು ಹಂಚಿಕೊಳ್ಳುವುದು ನಿಮ್ಮ ಹಿಂಬಾಲಕರಿಗೆ ಮಾಡಬೇಕಾದ ಸಂಗತಿಗಳು ಅಥವಾ ಹೋಗಬೇಕಾದ ಸ್ಥಳಗಳ ಕುರಿತು ಕಾಮೆಂಟ್ ಮಾಡಲು ಮತ್ತು ಶಿಫಾರಸುಗಳನ್ನು ಮಾಡಲು ಅನುಮತಿಸುವುದಾದರೂ, ನಿಮ್ಮ ಸ್ಥಳವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದರಲ್ಲಿ ಅಪಾಯಗಳು ಸಹ ಒಳಗೊಂಡಿವೆ. ನಿಮ್ಮ ಎಲ್ಲಾ ಹಿಂಬಾಲಕರು ನಿಮಗೆ ತಿಳಿಯದೇ ಇರಬಹುದಾದ್ದರಿಂದ, ನೀವು ಏನನ್ನು ಹಂಚಿಕೊಳ್ಳಲು ಆಯ್ದುಕೊಳ್ಳುತ್ತಿರುವಿರಿ ಎಂಬ ಕುರಿತು ವಿವೇಚನೆಯಿಂದ ಇರುವುದು ಉತ್ತಮವಾದ ಆಲೋಚನೆಯಾಗಿದೆ.

ನಿಮ್ಮ ಸ್ಥಳವನ್ನು ಟ್ವೀಟ್ ಮಾಡುವ ಕುರಿತು ಇನ್ನಷ್ಟು ತಿಳಿಯಿರಿ. ಮೊಬೈಲ್ ಸಾಧನಗಳಲ್ಲಿ ಸ್ಥಳ ವೈಶಿಷ್ಟ್ಯವನ್ನು ಹೇಗೆ ಬಳಸುವುದು ಎಂಬ ಕುರಿತು ಸಹ ನೀವು ಇನ್ನಷ್ಟು ತಿಳಿಯಬಹುದು.

ಮಾಧ್ಯಮ ಸೆಟ್ಟಿಂಗ್‌ಗಳು

ಮಾಧ್ಯಮವು ಪ್ರದರ್ಶಿತವಾಗುವುದಕ್ಕೂ ಮೊದಲು ಇತರ ಜನರು ಎಚ್ಚರಿಕೆಯನ್ನು ನೋಡಲಾಗುವಂತೆ ನಿಮ್ಮ ಸ್ವಂತ ಟ್ವೀಟ್‌ಗಳನ್ನು ನೀವು ಸಂಭಾವ್ಯವಾಗಿ ಸೂಕ್ಷ್ಮ ಮಾಧ್ಯಮವನ್ನು ಒಳಗೊಂಡಿರುವುದಾಗಿ ಫ್ಲ್ಯಾಗ್ ಮಾಡಬಹುದು.

ನಿಮ್ಮ ಟ್ವೀಟ್‌ಗಳಲ್ಲಿರುವ ಮಾಧ್ಯಮವನ್ನು ಸೂಕ್ಷ್ಮ ವಿಷಯವನ್ನು ಒಳಗೊಂಡಿರುವುದಾಗಿ ಹೇಗೆ ಗುರುತು ಮಾಡುವುದು ಎಂಬ ಕುರಿತು ಇನ್ನಷ್ಟು ಓದಿ.

ಮೂರನೇ ವ್ಯಕ್ತಿ ಅಪ್ಲಿಕೇಶನ್‌ಗಳಿಗೆ ನೀವು ಯಾವ ಮಾಹಿತಿಯನ್ನು ಒದಗಿಸುತ್ತಿರುವಿರಿ ಎಂಬುದನ್ನು ತಿಳಿಯಿರಿ

ನಿಮ್ಮ Twitter ಅನುಭವವನ್ನು ವಿಸ್ತರಿಸಲು ಇತರೆ ಕಂಪನಿಗಳು ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಗೊಳಿಸಿವೆ. ಮೂರನೇ ವ್ಯಕ್ತಿ ಅಪ್ಲಿಕೇಶನ್‌ಗೆ ಸಂಪರ್ಕಿಸುವ ಮೊದಲು, ವೆಬ್‌ಸೈಟ್‌ಗೆ ಭೇಟಿ ನೀಡುವುದನ್ನು ಮತ್ತು ಅದರ ಸೇವಾ ನಿಯಮಗಳನ್ನು ಪರಿಚಯ ಮಾಡಿಕೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳಿ. ಮೂರನೇ ವ್ಯಕ್ತಿ ಅಪ್ಲಿಕೇಶನ್‌ಗೆ ಅಧಿಕಾರ ನೀಡುವುದು ಮತ್ತು ಸಂಪರ್ಕಿಸುವುದರ ಕುರಿತು ಇನ್ನಷ್ಟು ತಿಳಿಯಿರಿ.

 

ಈ ಲೇಖನ ಹಂಚಿಕೊಳ್ಳಿ