ಖಾತೆ ಭದ್ರತೆ ಕುರಿತು

ನಿಮ್ಮ ಪಾಸ್‌ವರ್ಡ್‌ ಮರುನಿಗದಿತ ಸೆಟ್ಟಿಂಗ್‌ಗಳನ್ನು ಹುಡುಕುವುದು ಹೇಗೆ
 
 

ಹೊಸ ಮತ್ತು ಅನುಮಾನಾಸ್ಪದ ಲಾಗಿನ್ ಎಚ್ಚರಿಕೆಗಳು

ಅನುಮಾನಾಸ್ಪದ ಲಾಗಿನ್ ಅನ್ನು ನಾವು ಗುರುತಿಸಿದರೆ ಅಥವಾ ನಿಮ್ಮ Twitter ಖಾತೆಗೆ ಹೊಸ ಸಾಧನದಿಂದ ಮೊದಲ ಬಾರಿಗೆ ನೀವು ಲಾಗಿನ್ ಮಾಡಿದರೆ, ನಿಮ್ಮ ಖಾತೆಗೆ ಭದ್ರತೆಯ ಹೆಚ್ಚುವರಿ ಪದರವಾಗಿ Twitter ಆಪ್ ಒಳಗೆ ನಾವು ಪುಶ್ ಅಧಿಸೂಚನೆಯನ್ನು ನಿಮಗೆ ಕಳುಹಿಸುತ್ತೇವೆ ಅಥವಾ ಇಮೇಲ್‌ ಮೂಲಕ ಕಳುಹಿಸುತ್ತೇವೆ. iOS ಮತ್ತು Android ಗಾಗಿ Twitter, twitter.com ಮತ್ತು ಮೊಬೈಲ್ ವೆಬ್ ಮೂಲಕ ಲಾಗಿನ್ ಎಚ್ಚರಿಕೆಗಳನ್ನು ಹೊಸ ಲಾಗಿನ್‌ಗಳ ಕುರಿತು ಕಳುಹಿಸಲಾಗುತ್ತದೆ.

ಈ ಎಚ್ಚರಿಕೆಗಳ ಮೂಲಕ, ಸಾಧನದಿಂದ ಲಾಗಿನ್ ಮಾಡಿದವರು ನೀವೇ ಎಂಬುದನ್ನು ನೀವು ಪರಿಶೀಲಿಸಬಹುದು. ಸಾಧನದಿಂದ ನೀವು ಲಾಗಿನ್ ಮಾಡಿಲ್ಲದಿದ್ದರೆ, ನಿಮ್ಮ Twitter ಪಾಸ್‌ವರ್ಡ್ ಅನ್ನು ತಕ್ಷಣ ಬದಲಾವಣೆ ಮಾಡುವುದರಿಂದ ಆರಂಭಿಸಿ ನಿಮ್ಮ ಖಾತೆಯನ್ನು ಸುರಕ್ಷಿತಗೊಳಿಸಿಕೊಳ್ಳಲು ಸೂಚನೆಯಲ್ಲಿ ನೀಡಿದ ಕ್ರಮಗಳನ್ನು ನೀವು ಅನುಸರಿಸಬೇಕು. Twitter ಪ್ರವೇಶಿಸಲು ನೀವು ಬಳಸಿದ ಐಪಿ ವಿಳಾಸದಿಂದ ಪಡೆದ ಅಂದಾಜು ಸ್ಥಳವನ್ನು ಸೂಚನೆಯಲ್ಲಿನ ಸ್ಥಳವನ್ನು ಪಟ್ಟಿ ಮಾಡಲಾಗಿರುತ್ತದೆ ಮತ್ತು ನಿಮ್ಮ ಭೌತಿಕ ಸ್ಥಳದಿಂದ ಇದು ವಿಭಿನ್ನವಾಗಿರಬಹುದು ಎಂಬುದನ್ನು ದಯವಿಟ್ಟು ಗಮನಿಸಿ.

ಗಮನಿಸಿ: ನೀವು ಇನ್‌ಕಾಗ್ನಿಟೋ ಬ್ರೌಸರ್‌ಗಳಿಂದ ಅಥವಾ ಕುಕೀಗಳು ನಿಷ್ಕ್ರಿಯಗೊಳಿಸಿದ ಬ್ರೌಸರ್‌ಗಳಿಂದ ನಿಮ್ಮ Twitter ಖಾತೆಗೆ ಲಾಗಿನ್ ಮಾಡಿದರೆ, ಪ್ರತಿ ಬಾರಿಯೂ ನಿಮಗೆ ಎಚ್ಚರಿಕೆ ಬರುತ್ತದೆ.

ಇಮೇಲ್ ವಿಳಾಸ ಅಪ್‌ಡೇಟ್‌ ಎಚ್ಚರಿಕೆಗಳು

ನಿಮ್ಮ Twitter ಖಾತೆಯೊಂದಿಗೆ ಸಂಬಂಧಿಸಿದ ಇಮೇಲ್ ವಿಳಾಸವು ಯಾವುದೇ ಸಮಯದಲ್ಲಿ ಬದಲಾದರೆ, ನಿಮ್ಮ ಖಾತೆಯಲ್ಲಿ ಈ ಹಿಂದೆ ಬಳಸಿದ ಇಮೇಲ್ ವಿಳಾಸಕ್ಕೆ ನಾವು ಇಮೇಲ್ ಸೂಚನೆಯನ್ನು ಕಳುಹಿಸುತ್ತೇವೆ. ನಿಮ್ಮ ಖಾತೆ ರಾಜಿಯಾದ ಸನ್ನಿವೇಶದಲ್ಲಿ, ಈ ಎಚ್ಚರಿಕೆಗಳು ನಿಮ್ಮ ಖಾತೆಯ ನಿಯಂತ್ರಣವನ್ನು ಮರುಪಡೆಯಲು ಕ್ರಮ ತೆಗೆದುಕೊಳ್ಳುವುದಕ್ಕಾಗಿ ನಿಮಗೆ ಸಹಾಯ ಮಾಡುತ್ತವೆ.
 

Twitter ನಲ್ಲಿ ಲಿಂಕ್‌ಗಳನ್ನು ಮೌಲ್ಯೀಕರಿಸುವುದು

ಟ್ವೀಟ್‌ಗಳಲ್ಲಿ ಹಂಚಿಕೊಳ್ಳಲು ಸುಲಭವಾಗುವ ವಿಶಿಷ್ಟ, ಕಿರಿದಾಗಿಸಿದ ಲಿಂಕ್‌ಗಳನ್ನು bit.ly ಅಥವಾ TinyURL ರೀತಿಯ URL ಕಿರಿದುಗೊಳಿಸುವಿಕೆ ಬಳಸಿ ಹಲವು Twitter ಬಳಕೆದಾರರು ಲಿಂಕ್‌ಗಳನ್ನು ಪೋಸ್ಟ್‌ ಮಾಡುತ್ತಾರೆ. ಆದಾಗ್ಯೂ, URL ಕಿರಿದುಗೊಳಿಸುವಿಕೆಯು ಅಂತಿಮ ಡೊಮೇನ್ ಅನ್ನು ಮರೆ ಮಾಡಬಹುದು. ಇದರಿಂದ ಲಿಂಕ್ ಎಲ್ಲಿಗೆ ಹೋಗುತ್ತದೆ ಎಂಬುದನ್ನು ಹೇಳಲು ಕಷ್ಟವಾಗುತ್ತದೆ.

ಕೆಲವು ಬ್ರೌಸರ್‌ಗಳಾದ Chrome ಮತ್ತು Firefox ನಲ್ಲಿ, ಅವುಗಳ ಮೇಲೆ ಕ್ಲಿಕ್ ಮಾಡದೆಯೇ ವಿಸ್ತರಿಸಿದ URL ಗಳನ್ನು ತೋರಿಸುವ ಉಚಿತ ಪ್ಲಗ್ ಇನ್‌ಗಳು ಇವೆ:

ಸಾಮಾನ್ಯವಾಗಿ, ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವ ಮೂಲಕ ದಯವಿಟ್ಟು ಎಚ್ಚರಿಕೆಯನ್ನು ಬಳಸಿ. ಲಿಂಕ್‌ ಮೇಲೆ ನೀವು ಕ್ಲಿಕ್ ಮಾಡಿ, Twitter ಲಾಗಿನ್‌ ಪುಟವನ್ನೇ ಹೋಲುವ ಪುಟದಲ್ಲಿ ಅನಿರೀಕ್ಷಿತವಾಗಿ ನೀವು ಬಂದಿದ್ದಲ್ಲಿ, ನಿಮ್ಮ ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್‌ ಅನ್ನು ನಮೂದಿಸಬೇಡಿ. ಬದಲಿಗೆ, twitter.com ಗೆ ಹೋಗಿ ಮತ್ತು Twitter ಹೋಮ್‌ಪೇಜ್‌ನಿಂದ ನೇರವಾಗಿ ಲಾಗಿನ್ ಮಾಡಿ.
 

ನಿಮ್ಮ ಕಂಪ್ಯೂಟರ್‌ ಮತ್ತು ಬ್ರೌಸರ್‌ ಅನ್ನು ಅಪ್‌ ಟು ಡೇಟ್‌ ಮತ್ತು ವೈರಸ್ ಮುಕ್ತವಾಗಿ ಇಟ್ಟುಕೊಳ್ಳಿ.

ನಿಮ್ಮ ಬ್ರೌಸರ್ ಮತ್ತು ಆಪರೇಟಿಂಗ್ ಸಿಸ್ಟಂ ಅನ್ನು ಅತ್ಯಂತ ಇತ್ತೀಚಿನ ಆವೃತ್ತಿಗಳು ಮತ್ತು ಪ್ಯಾಚ್‌ಗಳೊಂದಿಗೆ ಅಪ್‌ಡೇಟ್ ಆಗಿಟ್ಟುಕೊಳ್ಳಿ. ನಿರ್ದಿಷ್ಟ ಭದ್ರತೆ ಭೀತಿಗಳನ್ನು ಪರಿಹರಿಸಲು ಆಗಾಗ್ಗೆ ಪ್ಯಾಚ್‌ಗಳನ್ನು ಬಿಡುಗಡೆ ಮಾಡಿ. ವೈರಸ್‌ಗಳು, ಸ್ಪೈವೇರ್ ಮತ್ತು ಆಡ್‌ವೇರ್‌ ಇದೆಯೇ ಎಂದು ಪದೇ ಪದೇ ನಿಮ್ಮ ಕಂಪ್ಯೂಟರ್ ಅನ್ನು ಸ್ಕ್ಯಾನ್ ಮಾಡುತ್ತಿರುತ್ತೀರಿ ಎಂದು ಖಚಿತಪಡಿಸಿಕೊಳ್ಳಿ.

ನೀವು ಸಾರ್ವಜನಿಕ ಕಂಪ್ಯೂಟರ್ ಬಳಸುತ್ತೀರಿ ಎಂದಾದರೆ, ಮುಗಿಸಿದ ತಕ್ಷಣ Twitter ನಿಂದ ಸೈನ್ ಔಟ್ ಆಗುವುದನ್ನು ಖಚಿತಪಡಿಸಿ.

ಎಚ್ಚರಿಕೆಯಿಂದ ಮೂರನೇ ವ್ಯಕ್ತಿ ಅಪ್ಲಿಕೇಶನ್‌ಗಳನ್ನು ಆಯ್ಕೆ ಮಾಡಿ

Twitter ಪ್ಲಾಟ್‌ಫಾರಂನಲ್ಲಿ ಹಲವು ಮೂರನೇ ವ್ಯಕ್ತಿ ಅಪ್ಲಿಕೇಶನ್‌ಗಳನ್ನು ಬಾಹ್ಯ ಡೆವಲಪರ್‌ಗಳು ನಿರ್ಮಿಸಿದ್ದು, ಇದನ್ನು ನೀವು ನಿಮ್ಮ Twitter ಖಾತೆ(ಗಳೊಂದಿಗೆ) ಬಳಸಬಹುದು. ಆದಾಗ್ಯೂ, ನಿಮ್ಮ ಖಾತೆಗೆ ಮೂರನೇ ವ್ಯಕ್ತಿ ಅಪ್ಲಿಕೇಶನ್‌ಗಳ ಪ್ರವೇಶಾವಕಾಶವನ್ನು ನೀಡುವುದಕ್ಕೂ ಮೊದಲು ನೀವು ಎಚ್ಚರಿಕೆ ಹೊಂದಿರಬೇಕು.

ನಿಮ್ಮ ಖಾತೆಗೆ ಮೂರನೇ ವ್ಯಕ್ತಿಯ ಅಪ್ಲಿಕೇಶನ್ ಪ್ರವೇಶವನ್ನು ನೀಡಲು ಬಯಸಿದರೆ, ನೀವು Twitter ನ OAuth ವಿಧಾನವನ್ನು ಬಳಸಿಕೊಂಡು ಮಾತ್ರ ಮಾಡುವಂತೆ ನಾವು ಶಿಫಾರಸು ಮಾಡುತ್ತೇವೆ. OAuth ಎಂಬುದು ಸುರಕ್ಷಿತ ಸಂಪರ್ಕ ವಿಧಾನವಾಗಿದೆ ಮತ್ತು ಮೂರನೇ ವ್ಯಕ್ತಿಗೆ ನಿಮ್ಮ Twitter ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್ ನೀಡುವ ಅಗತ್ಯವಿರುವುದಿಲ್ಲ. Oauth ಮೂಲಕ ನಿಮ್ಮ ಖಾತೆಗೆ ಪ್ರವೇಶವನ್ನು ಮಂಜೂರು ಮಾಡುವುದಕ್ಕೆ ನಿಮ್ಮ ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್‌ ಮೂರನೇ ವ್ಯಕ್ತಿ ಅಪ್ಲಿಕೇಶನ್‌ಗಳಿಗೆ ಅಗತ್ಯವಿಲ್ಲದ್ದರಿಂದ ಒಂದು ಅಪ್ಲಿಕೇಶನ್ ಅಥವಾ ವೆಬ್‌ಸೈಟ್‌ಗೆ ನಿಮ್ಮ ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್‌ ನೀಡುವಂತೆ ನಿಮ್ಮನ್ನು ಕೇಳಿದಾಗ ನೀವು ನಿರ್ದಿಷ್ಟವಾಗಿ ಎಚ್ಚರಿಕೆಯಿಂದ ಇರಬೇಕು. ನಿಮ್ಮ ಬಳಕೆದಾರರ ಹೆಸರು ಮತ್ತು ಪಾಸ್‌ವರ್ಡ್ ಅನ್ನು ನೀವು ಬೇರೆಯವರಿಗೆ ನೀಡಿದಾಗ, ಅವರು ನಿಮ್ಮ ಖಾತೆಯ ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತಾರೆ ಮತ್ತು ನಿಮ್ಮನ್ನು ಹೊರಗಿಡಬಹುದು ಅಥವಾ ನಿಮ್ಮ ಖಾತೆಯು ಅಮಾನತುಪಡಿಸುವ ರೀತಿಯಲ್ಲಿ ಕ್ರಮಗಳನ್ನು ತೆಗೆದುಕೊಳ್ಳಬಹುದು. ಮೂರನೇ ವ್ಯಕ್ತಿ ಅಪ್ಲಿಕೇಶನ್‌ಗಳನ್ನು ಸಂಪರ್ಕಿಸುವುದು ಅಥವಾ ಹಿಂಪಡೆಯುವ ಬಗ್ಗೆ ತಿಳಿಯಿರಿ.

ಕಾಲಕಾಲಕ್ಕೆ ನಿಮ್ಮ ಖಾತೆಗೆ ಪ್ರವೇಶ ಹೊಂದಿರುವ ಮೂರನೇ ವ್ಯಕ್ತಿ ಅಪ್ಲಿಕೇಶನ್‌ಗಳನ್ನು ಪರಿಶೀಲಿಸುವಂತೆ ನಾವು ಸಲಹೆ ಮಾಡುತ್ತೇವೆ. ನೀವು ಗುರುತಿಸದ ಅಥವಾ ನಿಮ್ಮ ಪರವಾಗಿ ಟ್ವೀಟ್ ಮಾಡುತ್ತಿರುವ ಅಪ್ಲಿಕೇಶನ್‌ಗಳಿಗೆ ಪ್ರವೇಶಾವಕಾಶವನ್ನು ನಿಮ್ಮ ಖಾತೆ ಸೆಟ್ಟಿಂಗ್‌ಗಳಲ್ಲಿ ಅಪ್ಲಿಕೇಶನ್‍ಗಳು ಟ್ಯಾಬ್‌ಗೆ ಭೇಟಿ ನೀಡುವ ಮೂಲಕ ಹಿಂಪಡೆಯಬಹುದು.

ಈ ಲೇಖನ ಹಂಚಿಕೊಳ್ಳಿ