ಕಾನೂನು ಜಾರಿಗೆ ಮಾರ್ಗಸೂಚಿಗಳು

Twitter ಖಾತೆಗಳ ಬಗ್ಗೆ ಮಾಹಿತಿ ಕೇಳುವ ಕಾನೂನು ಜಾರಿ ಅಧಿಕಾರಿಗಳನ್ನು ಈ ಮಾರ್ಗಸೂಚಿಗಳು ಉದ್ದೇಶಿಸಿದೆ. Twitter ನಲ್ಲಿ ಕಂಟೆಂಟ್ ತಡೆಹಿಡಿಯುವುದಕ್ಕಾಗಿನ ವಿನಂತಿ ಸಂಬಂಧಿಸಿದ ಮಾಹಿತಿಯು ಲಭ್ಯವಿದೆ. ನಮ್ಮ ಗೌಪ್ಯತೆ ನೀತಿ, ಸೇವೆ ನಿಯಮಗಳು ಮತ್ತು Twitter ನಿಯಮಗಳಲ್ಲಿ ಇನ್ನಷ್ಟು ಸಾಮಾನ್ಯ ಮಾಹಿತಿ ಲಭ್ಯವಿದೆ.   

 

ಒಳಗೊಂಡ ವಿಷಯಗಳು:

 

Twitter ಎಂದರೇನು?


Twitter ಎಂಬುದು ನೈಜ ಸಮಯದ ಜಾಗತಿಕ ಮಾಹಿತಿ ನೆಟ್​ವರ್ಕ್ ಆಗಿದ್ದು, ಸಾರ್ವಜನಿಕ ಸಂವಾದವನ್ನು ಒದಗಿಸುವುದಕ್ಕಾಗಿ ಇದು ಆಲೋಚನೆಗಳು ಮತ್ತು ಮಾಹಿತಿಯನ್ನು ತ್ವರಿತವಾಗಿ ರಚಿಸಲು ಮತ್ತು ಹಂಚಿಕೊಳ್ಳಲು ಬಳಕೆದಾರರಿಗೆ ಅನುವು ಮಾಡುತ್ತದೆ. Twitter ಎಂಬುದು ವಿಶ್ವದಲ್ಲಿ ಏನಾಗುತ್ತಿದೆ ಮತ್ತು ಈಗ ಜನರು ಯಾವುದರ ಬಗ್ಗೆ ಮಾತನಾಡುತ್ತಿದ್ದಾರೆ ಎಂಬುದಾಗಿದೆ. ವಾಸ್ತವದಲ್ಲಿ ಘಟನೆ ನಡೆದಾಗ, ಅದು Twitter ನಲ್ಲಿ ನಡೆಯುತ್ತದೆ.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಭೇಟಿ ನೀಡಿ about.twitter.com. ಇತ್ತೀಚಿನ Twitter ಲಕ್ಷಣಗಳು ಮತ್ತು ಕಾರ್ಯನಿರ್ವಹಣೆಗಳಿಗಾಗಿ ದಯವಿಟ್ಟು ನಮ್ಮ ಸಹಾಯ ಕೇಂದ್ರಕ್ಕೆ ಭೇಟಿ ನೀಡಿ.
 

 

ಖಾತೆ ಮಾಹಿತಿ ವಿನಂತಿಗಳು

 

ಯಾವ ಖಾತೆ ಮಾಹಿತಿಯನ್ನು Twitter ಹೊಂದಿರುತ್ತದೆ?


Twitter ಖಾತೆ ಪ್ರೊಫೈಲ್​ನಲ್ಲಿ ಸಾಮಾನ್ಯವಾಗಿ ಪ್ರೊಫೈಲ್ ಫೋಟೋ, ಶೀರ್ಷಿಕೆ ಫೋಟೊ, ಹಿನ್ನೆಲೆ ಚಿತ್ರ ಮತ್ತು ಟ್ವೀಟ್​ಗಳು ಎಂದು ಕರೆಯಲಾಗುವ ಸ್ಥಿತಿ ಅಪ್​ಡೇಟ್​ಗಳು ಇವೆ. ಇದರ ಜೊತೆಗೆ, ಖಾತೆದಾರರಿಗೆ ಸ್ಥಳ (ಉದಾ., ಸ್ಯಾನ್ ಫ್ರಾನ್ಸಿಸ್ಕೋ), ಒಂದು ಯುಆರ್​ಎಲ್ (ಉದಾ., twitter.com) ಮತ್ತು ತಮ್ಮ ಸಾರ್ವಜನಿಕ ಪ್ರೊಫೈಲ್​ನಲ್ಲಿ ಪ್ರದರ್ಶಿಸಲು ಖಾತೆಯ ಬಗ್ಗೆ ಒಂದು ಸಣ್ಣ “ಬಯೋ” ವಿಭಾಗ ಇರುತ್ತದೆ. ಎಲ್ಲರಿಗೂ ಬಲಿಷ್ಠ ಗೌಪ್ಯತೆ ನಿಯಂತ್ರಣವನ್ನು ನಾವು ಒದಗಿಸುತ್ತೇವೆ. ಬಳಕೆದಾರರಿಂದ ಮತ್ತು ಬಳಕೆದಾರರ ಬಗ್ಗೆ ನಾವು ಸಂಗ್ರಹಿಸುವ ಡೇಟಾ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮ ಗೌಪ್ಯತಾ ನೀತಿಯನ್ನು ದಯವಿಟ್ಟು ನೋಡಿ.

 

ಬಳಕೆದಾರರು ಜನರೇಟ್ ಮಾಡಿದ ಫೋಟೋಗಳು ಅಥವಾ ವೀಡಿಯೋಗಳಿಗೆ Twitter ಪ್ರವೇಶಾವಕಾಶ ಹೊಂದಿರುತ್ತದೆಯೇ?


ಕೆಲವು ಇಮೇಜ್ ಅಪ್​ಲೋಡ್​ಗಳಿಗೆ ಫೋಟೋ ಹೋಸ್ಟಿಂಗ್ ಅನ್ನು Twitter ಒದಗಿಸುತ್ತದೆ (ಉದಾಹರಣೆಗೆ pic.twitter.com ಚಿತ್ರಗಳು) ಹಾಗೂ Twitter ಖಾತೆ ಪ್ರೊಫೈಲ್ ಫೋಟೋಗಳು ಮತ್ತು ಶೀರ್ಷಿಕೆ ಫೋಟೋಗಳನ್ನು ಒದಗಿಸುತ್ತದೆ. ಆದಾಗ್ಯೂ, Twitter ಪ್ಲಾಟ್​ಫಾರಂನಲ್ಲಿ ಕಾಣಿಸುವ ಚಿತ್ರಗಳಿಗೆ Twitter ಏಕೈಕ ಫೋಟೋ ಪೂರೈಕೆದಾರರಲ್ಲ. Twitter ನಲ್ಲಿ ಫೋಟೋಗಳನ್ನು ಪೋಸ್ಟ್ ಮಾಡುವ ಬಗ್ಗೆ ಇನ್ನಷ್ಟು ಮಾಹಿತಿ.

Twitter ಗೆ (ಅಂದರೆ pic.twitter.com ವೀಡಿಯೋಗಳು) ಅಪ್​ಲೋಡ್ ಮಾಡಿದ ಹಾಗೂ ಪೆರಿಸ್ಕೋಪ್​ಗೆ ಪೋಸ್ಟ್ ಮಾಡಿದ ಕೆಲವು ವೀಡಿಯೋಗಳಿಗೆ ವೀಡಿಯೋ ಹೋಸ್ಟಿಂಗ್​ಅನ್ನು Twitter ಒದಗಿಸುತ್ತದೆ. Twitter ಪ್ಲಾಟ್​ಫಾರಂನಲ್ಲಿ ಕಾಣಿಸಿಕೊಳ್ಳುವ ವೀಡಿಯೋಗಳಿಗೆ Twitter ಏಕೈಕ ವೀಡಿಯೋ ಪೂರೈಕೆದಾರನಲ್ಲ ಎಂಬುದನ್ನು ದಯವಿಟ್ಟು ಗಮನಿಸಿ.

Twitter ನಲ್ಲಿ ಹಂಚಿಕೊಂಡ ಲಿಂಕ್​ಗಳು ಹಾಗೂ ನೇರ ಸಂದೇಶಗಳಲ್ಲಿ ಹಂಚಿಕೊಂಡ ಲಿಂಕ್​ಗಳು ಸ್ವಯಂಚಾಲಿತವಾಗಿ https://t.co ಲಿಂಕ್​ಗೆ ಪ್ರಕ್ರಿಯೆಗೊಳಿಸಲಾಗುತ್ತದೆ ಮತ್ತು ಸಣ್ಣದಾಗಿಸಲಾಗುತ್ತದೆ. ನೀವು https://t.co ಲಿಂಕ್ ಅನ್ನು ನೋಡಿದಾಗ, ವೀಡಿಯೋ ಅಥವಾ ಚಿತ್ರವನ್ನು Twitter ಹೋಸ್ಟ್ ಮಾಡಿದೆ ಎಂದರ್ಥವಲ್ಲ.

 

Periscope ಎಂದರೇನು?

Periscope ಎಂಬುದು, ನೈಜ ಸಮಯದ ವೀಡಿಯೋ ಬ್ರಾಡ್​ಕಾಸ್ಟ್​ಗಳನ್ನು ಬಳಕೆದಾರರು ರಚಿಸಲು ಮತ್ತು ಹಂಚಿಕೊಳ್ಳುವುದಕ್ಕಾಗಿ ಇರುವ ಸ್ವತಂತ್ರ ಮೊಬೈಲ್ ಸೇವೆಯಾಗಿದೆ. Periscope ಬಳಕೆದಾರರಿಂದ ಮತ್ತು ಬಳಕೆದಾರರ ಬಗ್ಗೆ ನಾವು ಸಂಗ್ರಹಿಸುವ ಡೇಟಾ ಬಗ್ಗೆ ಹೆಚ್ಚಿನ ಮಾಹಿತಿಗಾಗಿ Periscope ಗೌಪ್ಯತೆ ಹೇಳಿಕೆಯನ್ನು ದಯವಿಟ್ಟು ನೋಡಿ ಮತ್ತು Periscope ಬಗ್ಗೆ ಹೆಚ್ಚಿನ ಮಾಹಿತಿಗಾಗಿ Periscope ಸಹಾಯ ಕೇಂದ್ರವನ್ನು ಭೇಟಿ ಮಾಡಿ. Twitter ಖಾತೆ ಇಲ್ಲದೇ ಬಳಕೆದಾರರು Periscope ಖಾತೆಗೆ ಸೈನ್ ಅಪ್ ಮಾಡಬಹುದು.

Periscope ಬಳಕೆದಾರರ ಹೆಸರನ್ನು ಕಂಡುಕೊಳ್ಳುವುದು ಹೇಗೆ ಎಂಬ ಬಗ್ಗೆ ನಮ್ಮ ಸೂಚನೆಗಳನ್ನು ಓದಿ.

 

ಡೇಟಾ ತಡೆಹಿಡಿಯುವ ಮಾಹಿತಿ


Twitter

ವಿಭಿನ್ನ ಕಾಲಾವಧಿಗೆ ವಿಭಿನ್ನ ರೀತಿಯ ಮತ್ತು ನಮ್ಮ ಸೇವೆ ನಿಯಮಗಳು ಮತ್ತು ಗೌಪ್ಯತೆ ನಿಯಮಗಳಿಗೆ ಅನುಗುಣವಾಗಿ ಮಾಹಿತಿಯನ್ನು Twitter ತಡೆಹಿಡಿಯುತ್ತದೆ. Twitter ನ ನೈಜ ಸಮಯದ ರೀತಿಯನ್ನು ಆಧರಿಸಿ, ಕೆಲವು ಮಾಹಿತಿಯನ್ನು (ಉದಾ., ಐಪಿ ಲಾಗ್​ಗಳು) ಅತ್ಯಂತ ಕಡಿಮೆ ಅವಧಿಗೆ ಸಂಗ್ರಹಿಸಬಹುದಾಗಿದೆ.

ನಾವು ಸಂಗ್ರಹಿಸುವ ಕೆಲವು ಮಾಹಿತಿಯನ್ನು ಸ್ವಯಂಚಾಲಿತವಾಗಿ ಸಂಗ್ರಹಿಸಬಹುದಾಗಿದೆ ಮತ್ತು ಇತರ ಮಾಹಿತಿಯನ್ನು ಬಳಕೆದಾರರ ನಿರ್ಧಾರಕ್ಕೆ ಬಿಡಲಾಗುತ್ತದೆ. ನಾವು ಈ ಮಾಹಿತಿಯನ್ನು ಸಂಗ್ರಹಿಸಿದರೂ, ಇದರ ನಿಖರತೆಯನ್ನು ನಾವು ಖಚಿತಪಡಿಸುವುದಿಲ್ಲ. ಉದಾಹರಣೆಗೆ, ಬಳಕೆದಾರರು ನಕಲಿ ಅಥವಾ ಅನಾಮಿಕ ಪ್ರೊಫೈಲ್ ಅನ್ನು ರಚಿಸಿರಬಹುದು. ನೈಜ ಹೆಸರಿನ ಬಳಕೆ, ಇಮೇಲ್ ತಪಾಸಣೆ ಅಥವಾ ಗುರುತು ದೃಢೀಕರಣವು Twitter ಗೆ ಅಗತ್ಯವಿರುವುದಿಲ್ಲ. Twitter ನ ತಡೆಹಿಡಿಯುವ ನೀತಿಗಳ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಗೌಪ್ಯತೆ ನೀತಿಯಲ್ಲಿ ಕಂಡುಕೊಳ್ಳಬಹುದು.

ಗಮನಿಸಿ: ಒಮ್ಮೆ ಖಾತೆಯನ್ನು ನಿಷ್ಕ್ರಿಯಗೊಳಿಸಿದರೆ, ಅತ್ಯಂತ ಕೆಲವೇ ಸಮಯದವರೆಗೆ ನಾವು ಟ್ವೀಟ್​ಗಳೂ ಸೇರಿದಂತೆ ಖಾತೆ ಮಾಹಿತಿಯ ಪ್ರವೇಶಾವಕಾಶ ಪಡೆಯಬಹುದಾಗಿದೆ. ನಿಷ್ಕ್ರಿಯಗೊಳಿಸಿದ ಖಾತೆಗಳ ಬಗ್ಗೆ ಇನ್ನಷ್ಟು ಮಾಹಿತಿಯು ಇಲ್ಲಿ ಲಭ್ಯವಿವೆ. ಖಾತೆದಾರರು (ಉದಾ., ಟ್ವೀಟ್​ಗಳು) ತೆಗೆದುಹಾಕಿದ ಕಂಟೆಂಟ್ ಸಾಮಾನ್ಯವಾಗಿ ಲಭ್ಯವಿರುವುದಿಲ್ಲ.
 

Periscope

ವಿಭಿನ್ನ ಅವಧಿಗೆ ವಿಭಿನ್ನ ಮಾಹಿತಿಯನ್ನು Periscope ಇರಿಸಿಕೊಳ್ಳುತ್ತದೆ. ಬ್ರಾಡ್​ಕಾಸ್ಟ್​ಗಳು ಮತ್ತು ಬ್ರಾಡ್​ಕಾಸ್ಟ್ ಮಾಹಿತಿಯನ್ನು ಅತ್ಯಂತ ಕಡಿಮೆ ಅವಧಿಗೆ ಸಂಗ್ರಹಿಸಬಹುದಾಗಿದೆ. ಬ್ರಾಡ್​ಕಾಸ್ಟ್​ಗಳ ಲಭ್ಯತೆ ಮಾಹಿತಿಯನ್ನು Periscope ಸಹಾಯ ಕೇಂದ್ರದಲ್ಲಿ ಕಂಡುಕೊಳ್ಳಬಹುದಾಗಿದೆ. ನಮ್ಮ ಇರಿಸಿಕೊಳ್ಳುವ ನೀತಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು Periscope ಗೌಪ್ಯತೆ ನೀತಿಯಲ್ಲಿ ಕಂಡುಕೊಳ್ಳಬಹುದು.

 

ಡೇಟಾ ನಿಯಂತ್ರಕ


ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿರುವ ಅಥವಾ ಯುರೋಪಿಯನ್ ಯೂನಿಯನ್ ಅಥವಾ ಯುರೋಪಿಯನ್ ಆರ್ಥಿಕ ಪ್ರದೇಶದ ಹೊರಗಿನ ಯಾವುದೇ ದೇಶದಲ್ಲಿ ವಾಸಿಸುತ್ತಿರುವವರಿಗೆ, ವೈಯಕ್ತಿಕ ಡೇಟಾ ನಿಯಂತ್ರಕ ಜವಾಬ್ದಾರಿಯನ್ನು ಕ್ಯಾಲಿಫೋರ್ನಿಯಾದ ಸ್ಯಾನ್‌ ಫ್ರಾನ್ಸಿಸ್ಕೋದಲ್ಲಿರುವ Twitter ಇಂಕ್‌ ಆಗಿರುತ್ತದೆ. ಯುರೋಪಿಯನ್ ಯೂನಿಯನ್ ಅಥವಾ ಯುರೋಪಿಯನ್ ಆರ್ಥಿಕ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ, ಡೇಟಾ ನಿಯಂತ್ರಕವು ಐರ್ಲೆಂಡ್‌ನ ಡಬ್ಲಿನ್‌ನಲ್ಲಿರುವ Twitter ಅಂತಾರಾಷ್ಟ್ರೀಯ ಅನ್‌ಲಿಮಿಟೆಡ್‌ ಕಂಪನಿಯಾಗಿದೆ.

 

ಸಂರಕ್ಷಣೆ ವಿನಂತಿಗಳು


ಕಾನೂನಾತ್ಮಕವಾಗಿ ಸೂಕ್ತವಾಗಿದ್ದಲ್ಲಿ, ಕಾನೂನು ಕ್ರಮಗಳಲ್ಲಿ ಸಂಭಾವ್ಯ ಪ್ರಮುಖ ಸಾಕ್ಷಿಯಾಗುವ ದಾಖಲೆಗಳನ್ನು ರಕ್ಷಿಸಲು ಕಾನೂನು ಜಾರಿ ಸಂಸ್ಥೆಗಳಿಂದ ವಿನಂತಿಯನ್ನು ನಾವು ಸಮ್ಮತಿಸುತ್ತೇವೆ. ಮಾನ್ಯ ಕಾನೂನು ಪ್ರಕ್ರಿಯೆ ಬಾಕಿ ಇದ್ದಾಗ 90 ದಿನಗಳವರೆಗೆ ಸಂಬಂಧಿತ ಖಾತೆಯ ತಾತ್ಕಾಲಿಕ ಸ್ನ್ಯಾಪ್​ಶಾಟ್​ಗಳನ್ನು ನಾವು ರಕ್ಷಿಸುತ್ತೇವೆ, ಆದರೆ ಬಹಿರಂಗಗೊಳಿಸುವುದಿಲ್ಲ. 

ಸಂರಕ್ಷಣೆ ವಿನಂತಿಗಳು ಅನ್ವಯಿಕ ಕಾನೂನಿಗೆ ಅನುಗುಣವಾಗಿ ಹೀಗಿರಬೇಕು:

 • ವಿನಂತಿ ಮಾಡುವ ಅಧಿಕಾರಿಯಿಂದ ಸಹಿ ಮಾಡಿದ;
 • ಮಾನ್ಯ ರಿಟರ್ನ್ ಅಧಿಕಾರಿಯ ಇಮೇಲ್ ವಿಳಾಸ ಹೊಂದಿರಬೇಕು;
 • ಕಾನೂನು ಜಾರಿ ಸಂಸ್ಥೆಯ ಲೆಟರ್​ಹೆಡ್​ನಲ್ಲಿ ಕಳುಹಿಸಿರಬೇಕು;
 • ಆರೋಪಿಯ Twitter ಪ್ರೊಫೈಲ್ (ಉದಾ. https://twitter.com/twittersafety (@twittersafety) ಯುಆರ್​ಎಲ್ ಮತ್ತು @username ಅನ್ನು ಒಳಗೊಂಡಿರಬೇಕು ಮತ್ತು/ಅಥವಾ Twitter ಖಾತೆಯ ವಿಶಿಷ್ಟ, ಸಾರ್ವಜನಿಕ ಬಳಕೆದಾರರ ಗುರುತಿನ ಸಂಖ್ಯೆ (ಯುಐಡಿ) ಅಥವಾ Periscope ಬಳಕೆದಾರರ ಹೆಸರು ಮತ್ತು ಯುಆರ್​ಎಲ್​(ಉದಾ., @twittersafety ಮತ್ತು https://periscope.tv/twittersafety) ಹೊಂದಿರಬೇಕು. Twitter ಯುಐಡಿ ಕಂಡುಕೊಳ್ಳಲು ಇಲ್ಲಿ ನೋಡಿ ಅಥವಾ Periscope ಬಳಕೆದಾರರ ಹೆಸರನ್ನು ಕಂಡುಕೊಳ್ಳಲು ಇಲ್ಲಿ ನೋಡಿ.
   

ನಾವು ರಕ್ಷಣೆ ವಿನಂತಿಗಳಿಗೆ ವಿಸ್ತರಣೆಯ ವಿನಂತಿಯನ್ನು ಗೌರವಿಸುತ್ತೇವೆ, ಆದರೆ ವಿನಂತಿ ಮಾಡಿದ ಮಾಹಿತಿಯು ಲಭ್ಯವಿರುತ್ತದೆ ಎಂದು ನಾವು ಗ್ಯಾರಂಟಿ ನೀಡದಿರುವುದರಿಂದ ಸಮಯಕ್ಕೆ ಸರಿಯಾಗಿ ಸೂಕ್ತ ಚಾನೆಲ್​ಗಳ ಮೂಲಕ ದಾಖಲೆಗಳನ್ನು ಪಡೆಯುವಂತೆ ನಾವು ಕಾನೂನು ಜಾರಿ ಸಂಸ್ಥೆಗಳಿಗೆ ಪ್ರೋತ್ಸಾಹಿಸುತ್ತೇವೆ.

ನೀವು ಸಂರಕ್ಷಣೆ ವಿಸ್ತರಣೆ ವಿನಂತಿಯನ್ನು ಸಲ್ಲಿಸುತ್ತಿದ್ದರೆ, ಸೂಕ್ತ ಪ್ರಕ್ರಿಯೆಗೊಳಿಸುವ ಸಮಯಕ್ಕೆ ಅನುವು ಮಾಡುವುದಕ್ಕಾಗಿ ಸಂರಕ್ಷಣೆ ಅವಧಿ ಮುಕ್ತಾಯಕ್ಕೂ ಕನಿಷ್ಠ ಒಂದು ವಾರ (7 ದಿನಗಳು) ಮೊದಲು ಸಲ್ಲಿಸುವಂತೆ ನಾವು ಶಿಫಾರಸು ಮಾಡುತ್ತೇವೆ.

ಬಳಕೆದಾರರ ಮಾಹಿತಿಗಾಗಿ ಕಾನೂನು ಜಾರಿ ಸಂಸ್ಥೆ ಮತ್ತು ಸರ್ಕಾರಿ ರಕ್ಷಣೆ ವಿನಂತಿಗಳನ್ನು ನಮ್ಮ ಕಾನೂನು ವಿನಂತಿ ಸಲ್ಲಿಕೆಗಳ ಸೈಟ್ (t.co/lr ಅಥವಾ http://legalrequests.twitter.com) ಮೂಲಕ ಸಲ್ಲಿಸಬಹುದಾಗಿದೆ. ಸಂರಕ್ಷಣೆ ವಿನಂತಿಯನ್ನು ಪ್ರತ್ಯೇಕ ವಿನಂತಿಯಾಗಿ ದಯವಿಟ್ಟು ಸಲ್ಲಿಸಿ. ಹೆಚ್ಚಿನ ಸೂಚನೆಗಳನ್ನು ನೀವು ಈ ಕೆಳಗೆ ಕಂಡುಕೊಳ್ಳಬಹುದಾಗಿದೆ.

 

Twitter ಖಾತೆ ಮಾಹಿತಿಗಾಗಿ ವಿನಂತಿಗಳು


ಕಾನೂನು ಜಾರಿ ಸಂಸ್ಥೆಗಳಿಂದ ಬಳಕೆದಾರರ ಖಾತೆ ಮಾಹಿತಿಗೆ ವಿನಂತಿಗಳನ್ನು Twitter, Inc, ಸ್ಯಾನ್ ಫ್ರಾನ್ಸಿಸ್ಕೋ, ಕ್ಯಾಲಿಫೋರ್ನಿಯಾ ಅಥವಾ ಐರ್ಲೆಂಡ್​ನ ಡಬ್ಲಿನ್​ನಲ್ಲಿರುವ Twitter ಇಂಟರ್ನ್ಯಾಷನಲ್ ಅನ್‌ಲಿಮಿಟೆಡ್‌ ಕಂಪನಿಗೆ ಕಳುಹಿಸಬೇಕು. ಅನ್ವಯಿಸುವ ಕಾನೂನಿಗೆ ಬದ್ಧವಾಗಿ ನೀಡಲಾದ ಮಾನ್ಯ ಕಾನೂನು ಪ್ರಕ್ರಿಯೆಗೆ Twitter ಪ್ರತಿಕ್ರಿಯಿಸುತ್ತದೆ.

 

ವಿಚಾರಣೆಗೆ ಹಾಜರಾತಿ ಅಥವಾ ಕೋರ್ಟ್ ಆದೇಶ ಬಯಸುವ ಖಾಸಗಿ ಮಾಹಿತಿ

Twitter ಬಳಕೆದಾರರ ಬಗೆಗಿನ ಸಾರ್ವಜನಿಕೇತರ ಮಾಹಿತಿಯನ್ನು ಕಾನೂನು ಜಾರಿ ಸಂಸ್ಥೆಗಳಿಗೆ ಬಿಡುಗಡೆ ಮಾಡಲಾಗುವುದಿಲ್ಲ. ನೋಟಿಸ್, ಕೋರ್ಟ್ ಆರ್ಡರ್, ಇತರ ಮಾನ್ಯ ಕಾನೂನು ಪ್ರಕ್ರಿಯೆಗಳಾದ ಸೂಕ್ತ ಕಾನೂನು ಪ್ರಕ್ರಿಯೆಗಳಿಗೆ ಮಾತ್ರ ಅಥವಾ ಈ ಕೆಳಗೆ ವಿವರಿಸಿದಂತೆ ಮಾನ್ಯ ತುರ್ತು ವಿನಂತಿಗೆ ಪ್ರತಿಕ್ರಿಯೆಯಾಗಿ ಮಾತ್ರ ಇದನ್ನು ಬಿಡುಗಡೆ ಮಾಡಲಾಗುತ್ತದೆ.

 

ಸಂವಹನಗಳ ಕಂಟೆಂಟ್​ಗಳಿಗೆ ಸರ್ಚ್ ವಾರಂಟ್ ಅಗತ್ಯವಿರುತ್ತದೆ

ಸಂವಹನಗಳ ಕಂಟೆಂಟ್​ಗೆ ವಿನಂತಿ ಮಾಡಿದಾಗ (ಉದಾ, ಟ್ವೀಟ್​ಗಳು, ನೇರ ಸಂದೇಶಗಳು, ಫೋಟೋಗಳು) ಮಾನ್ಯ ಸರ್ಚ್ ವಾರಂಟ್ ಅಥವಾ Twitter ಗೆ ಸೂಕ್ತ ನ್ಯಾಯವ್ಯಾಪ್ತಿಯನ್ನು ಹೊಂದಿರುವ ಏಜೆನ್ಸಿಯಿಂದ ತತ್ಸಮಾನವಾದವು ಅಗತ್ಯವಿರುತ್ತದೆ.

 

ಖಾತೆ ಮಾಹಿತಿಯ ವಿನಂತಿಯ ಬಗ್ಗೆ ಬಳಕೆದಾರರಿಗೆ Twitter ಸೂಚನೆ ನೀಡುತ್ತದೆಯೇ?

ಹೌದು. ಪಾರದರ್ಶಕತೆ ಮತ್ತು ಸೂಕ್ತ ಪ್ರಕ್ರಿಯೆಯ ಉದ್ದೇಶಕ್ಕಾಗಿ, ವಿನಂತಿಯ ಪ್ರತಿ ಸೇರಿದಂತೆ ತಮ್ಮ Twitter ಅಥವಾ Periscope ಖಾತೆ ಮಾಹಿತಿಗೆ ವಿನಂತಿ ಕುರಿತು ಬಳಕೆದಾರರಿಗೆ ಸೂಚನೆ ನೀಡುವುದರಿಮದ ನಮ್ಮನ್ನು ನಿಷೇಧಿಸಿಲ್ಲದಿದ್ದಲ್ಲಿ (ಉದಾ., 18 ಯು.ಎಸ್‌.ಸಿ. § 2705(b)ಅಡಿಯಲ್ಲಿ) Twitter ನ ನೀತಿಯಾಗಿದೆ. ಯಾವುದೇ ಬಹಿರಂಗಗೊಳಿಸದಿರುವ ಸೌಲಭ್ಯವು, ಬಳಕೆದಾರರಿಗೆ ಸೂಚನೆ ನೀಡುವುದರಿಂದ Twitter ಅನ್ನು ನಿರ್ಬಂಧಿಸುವ ನಿರ್ದಿಷ್ಟ ಅವಧಿಯನ್ನು (ಉದಾ., 90 ದಿನಗಳು) ಒಳಗೊಂಡಿರುವಂತೆ ನಾವು ಕೇಳುತ್ತೇವೆ. ನಮ್ಮ ಬಳಕೆದಾರರ ನೋಟಿಸ್ ನೀತಿಗೆ ವಿನಾಯಿತಿಯು ಜೀವನಕ್ಕೆ ಮಾರಣಾಂತಿಕ ಅಪಾಯ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಅಥವಾ ಭಯೋತ್ಪಾದನೆಗೆ ಸಂಬಂಧಿಸಿದ ತುರ್ತುಗಳಾದ ಅಗತ್ಯದ ಅಥವಾ ಪ್ರತ್ಯುತ್ಪಾದಕ ಸನ್ನಿವೇಶಗಳನ್ನು ಒಳಗೊಂಡಿರಬಹುದು.

 

ಖಾತೆ ಮಾಹಿತಿ ವಿನಂತಿಗಳಲ್ಲಿ ಯಾವ ವಿವರಗಳು ಒಳಗೊಂಡಿರಬೇಕು?

ಅನ್ವಯಿಸುವ ಕಾನೂನಿಗೆ ಅನುಗುಣವಾಗಿ ಬಳಕೆದಾರರ ಖಾತೆ ಮಾಹಿತಿ ವಿನಂತಿಗಳು, ಈ ಮುಂದಿನ ಮಾಹಿತಿಯನ್ನು ಒಳಗೊಂಡಿರಬೇಕು:

 • ಅಭ್ಯರ್ಥಿಯ Twitter @username ಮತ್ತು Twitter ಖಾತೆಯ ಯುಆರ್​ಎಲ್ (ಉದಾ., https://twitter.com/twittersafety (@twittersafety) ಅಥವಾ ಖಾತೆಯ ವಿಶಿಷ್ಟ, ಸಾರ್ವಜನಿಕ ಬಳಕೆದಾರರ ಗುರುತಿನ ಸಂಖ್ಯೆ ಅಥವಾ ಯುಐಡಿಯನ್ನು ಒಳಗೊಂಡಿರಬೇಕು.
 • ಮತ್ತು/ಅಥವಾ ಮಾನ್ಯ Periscope ಬಳಕೆದಾರರ ಹೆಸರು ಮತ್ತು ಯುಆರ್​ಎಲ್ ಅನ್ನು ಒಳಗೊಂಡಿರಬೇಕು (ಉದಾ., @twittersafety ಮತ್ತು https://periscope.tv/twittersafety).  Periscope ಬಳಕೆದಾರರ ಹೆಸರನ್ನು ಗುರುತಿಸಲು ಇಲ್ಲಿರುವ ಸೂಚನೆಗಳನ್ನು ಕಂಡುಕೊಳ್ಳಿ;
 • ಯಾವ ನಿಗದಿತ ಮಾಹಿತಿಯನ್ನು ವಿನಂತಿಸಲಾಗಿದೆ (ಉದಾ., ಪ್ರಾಥಮಿಕ ಚಂದಾದಾರರ ಮಾಹಿತಿ) ಮತ್ತು ನಿಮ್ಮ ತನಿಖೆಗೆ ಇದು ಹೇಗೆ ಸಂಬಂಧಿಸಿದೆ ಎಂಬ ವಿವರಗಳನ್ನು ನೀಡಿ;
  • ಗಮನಿಸಿ: ನೀವು ಕೇಳಿದ ಮಾಹಿತಿಯು ಸಾರ್ವಜನಿಕವಾಗಿ ಲಭ್ಯವಿಲ್ಲ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ (ಉದಾ., ರಕ್ಷಿಸಿಲ್ಲದ ಟ್ವೀಟ್​ಗಳು). ವಿಶಾಲ ಅಥವಾ ವಿಚಿತ್ರ ವಿನಂತಿಗಳನ್ನು ಪ್ರಕ್ರಿಯೆಗೊಳಿಸಲು ನಮಗೆ ಸಾಧ್ಯವಿಲ್ಲ.
 • ನಿಮ್ಮ ಕಾನೂನು ಪ್ರಕ್ರಿಯೆಯ ವಿನಂತಿಗೆ ಸಂಬಂಧಿಸಿದಂತೆ ನಾವು ನಿಮ್ಮನ್ನು ಸಂಪರ್ಕಿಸುವುದಕ್ಕಾಗಿ ಮಾನ್ಯವಾದ ಕಚೇರಿ ಇಮೇಲ್ ವಿಳಾಸವನ್ನು (ಉದಾ., name@agency.gov) ಸೇರಿಸಿ.
 • ಕಾನೂನು ಜಾರಿ ಸಂಸ್ಥೆ ಲೆಟರ್​ಹೆಡ್​ನಲ್ಲಿ ನೀಡಿ.
   

ಬಳಕೆದಾರರ ಮಾಹಿತಿಗಾಗಿ ಕಾನೂನು ಜಾರಿ ಸಂಸ್ಥೆ ಮತ್ತು ಸರ್ಕಾರಿ ವಿನಂತಿಗಳನ್ನು ನಮ್ಮ ಕಾನೂನು ವಿನಂತಿ ಸಲ್ಲಿಕೆಗಳ ಸೈಟ್ ಮೂಲಕ ಸಲ್ಲಿಸಬಹುದಾಗಿದೆ (https://t.co/lr ಅಥವಾ https://legalrequests.twitter.com). ಹೆಚ್ಚಿನ ಸೂಚನೆಗಳನ್ನು ನೀವು ಈ ಕೆಳಗೆ ಕಂಡುಕೊಳ್ಳಬಹುದಾಗಿದೆ.

 

ದಾಖಲೆಗಳನ್ನು ಸಲ್ಲಿಸುವುದು

ನಾವು ಸಮ್ಮತಿಸಿರುವುದರ ಹೊರತಾಗಿ, ಎಲೆಕ್ಟ್ರಾನಿಕ್ ನಮೂನೆಯಲ್ಲಿ ಪ್ರತಿಕ್ರಿಯಾತ್ಮಕ ದಾಖಲೆಗಳನ್ನು ನಾವು ಒದಗಿಸುತ್ತೇವೆ (ಉದಾ., ವರ್ಡ್ ಅಥವಾ ಟೆಕ್ಸ್ಟ್ ಎಡಿಟ್​ನಂತಹ ವರ್ಡ್ ಪ್ರೋಸೆಸಿಂಗ್ ಸಾಫ್ಟ್​ವೇರ್​ನಿಂದ ತೆರೆಯಬಹುದಾದ ಪಠ್ಯ ಫೈಲ್​ಗಳು).

 

ದೃಢೀಕರಣದ ದಾಖಲೆಗಳು

ನಾವು ಉತ್ಪಾದನೆ ಮಾಡುವುದಕ್ಕೆ, ಉತ್ಪಾದನೆಯ ಸಮಯದಲ್ಲಿ ದಾಖಲೆಗಳ ಸಮಗ್ರತೆಯನ್ನು ಖಚಿತಪಡಿಸಲು ಎಲೆಕ್ಟ್ರಾನಿಕ್ ರೂಪದಲ್ಲಿ ಸಹಿ ಮಾಡಲಾಗಿರುತ್ತವೆ. ನಿಮಗೆ ಘೋಷಣೆ ಅಗತ್ಯವಿದ್ದರೆ, ನಿಮ್ಮ ಸಲ್ಲಿಕೆಯಲ್ಲಿ ಅದನ್ನು ದಯವಿಟ್ಟು ಸೂಚಿಸಿ.

 

ವೆಚ್ಚ ಮರುಬಟವಾಡೆ

ಕಾನೂನು ಪ್ರಕ್ರಿಯೆ ಮತ್ತು ಕಾನೂನು ಅನುಮತಿಯ ಪ್ರಕಾರ ಉತ್ಪಾದಿಸಿದ ಮಾಹಿತಿಗೆ ಸಂಬಂಧಿಸಿದ ವೆಚ್ಚಗಳಿಗೆ Twitter ಮರುಬಟವಾಡೆಯನ್ನು ಆಗ್ರಹಿಸಬಹುದಾಗಿದೆ (ಉದಾ., 18 ಯು.ಎಸ್‌ಸಿ. §2706 ಅಡಿಯಲ್ಲಿ).

 

ತುರ್ತು ಬಹಿರಂಗ ವಿನಂತಿಗಳು


ನಮ್ಮ ಗೌಪ್ಯತೆ ನೀತಿಗಳಿಗೆ ಅನುಗುಣವಾಗಿ, ಮಾನ್ಯ ತುರ್ತು ಬಹಿರಂಗ ವಿನಂತಿಗೆ ಪ್ರತಿಕ್ರಿಯೆಯಾಗಿ ಕಾನೂನು ಜಾರಿ ಸಂಸ್ಥೆಗೆ ಖಾತೆ ಮಾಹಿತಿಯನ್ನು ಬಹಿರಂಗಗೊಳಿಸಬಹುದಾಗಿದೆ.

ಸಂಬಂಧಿತ ಕಾನೂನಿಗೆ ಬದ್ಧವಾಗಿ ಪ್ರಕರಣವನ್ನು ಆಧರಿಸಿ ತುರ್ತು ಬಹಿರಂಗ ವಿನಂತಿಗಳನ್ನು Twitter ಮೌಲೀಕರಣ ನಡೆಸುತ್ತದೆ. ವ್ಯಕ್ತಿಯು ಸಾವು ಅಥವಾ ಗಂಭೀರ ದೈಹಿಕ ಗಾಯದ ಅಪಾಯವನ್ನು ಒಳಗೊಂಡಿರುವ ತೀವ್ರ ತುರ್ತು ಇದೆ ಎಂದು ನಮಗೆ ನಂಬಿಕೆಯಾಗುವಂತೆ ಮಾಹಿತಿಯನ್ನು ನಾವು ಸ್ವೀಕರಿಸಿದರೆ, ಆ ಅಪಾಯವನ್ನು ತಡೆಯಲು ಯಾವುದೇ ಲಭ್ಯವಿರುವ ಅಗತ್ಯ ಮಾಹಿತಿಯನ್ನು ನಾವು ಒದಗಿಸಬಹುದಾಗಿದೆ.

 

ತುರ್ತು ಬಹಿರಂಗ ವಿನಂತಿಯನ್ನು ಮಾಡುವುದು ಹೇಗೆ

ವ್ಯಕ್ತಿಗೆ ಮರಣದ ಅಪಾಯ ಅಥವಾ ಗಂಭೀರ ದೈಹಿಕ ಗಾಯವನ್ನು ಒಳಗೊಂಡ ತೀವ್ರ ತುರ್ತು ಇದ್ದಲ್ಲಿ, ಅದನ್ನು ತಡೆಯಲು ಅಗತ್ಯ ಮಾಹಿತಿಯನ್ನು Twitter ಹೊಂದಿದ್ದರೆ, ನಮ್ಮ ಕಾನೂನು ವಿನಂತಿ ಸಲ್ಲಿಕೆಗಳ ಸೈಟ್ಮೂಲಕ (ತ್ವರಿತ ಮತ್ತು ಅತ್ಯಂತ ದಕ್ಷ ವಿಧಾನ) ಕಾನೂನು ಜಾರಿ ಅಧಿಕಾರಿಗಳು ತುರ್ತು ಬಹಿರಂಗಗೊಳಿಸುವಿಕೆ ವಿನಂತಿಯನ್ನು ಸಲ್ಲಿಸಬಹುದಾಗಿದೆ.
 

ದಯವಿಟ್ಟು ಈ ಕೆಳಗಿನ ಎಲ್ಲ ಮಾಹಿತಿಯನ್ನು ಸೇರಿಸಿ:

 • ಕಾನೂನು ಜಾರಿ ಸಂಸ್ಥೆಯ ಲೆಟರ್​ಹೆಡ್​ನಲ್ಲಿ ನಿಮ್ಮ ಕವರ್ ಶೀಟ್​ನಲ್ಲಿ, ನೀವು ತುರ್ತು ಬಹಿರಂಗಗೊಳಿಸುವಿಕೆ ವಿನಂತಿಯನ್ನು ಸಲ್ಲಿಸುತ್ತಿದ್ದೀರಿ ಎಂಬುದರ ಸೂಚನೆ;
 • ಮರಣ ಅಥವಾ ಗಂಭೀರ ದೈಹಿಕ ಗಾಯದ ಅಪಾಯದಲ್ಲಿರುವ ವ್ಯಕ್ತಿಯ ಗುರುತು;
 • ತುರ್ತು ಸ್ಥಿತಿಯ ರೀತಿ (ಉದಾ., ಆತ್ಮಹತ್ಯೆ, ಉಗ್ರ ದಾಳಿ, ಬಾಂಬ್ ಭೀತಿಯ ವರದಿ)
 • ತುರ್ತನ್ನು ತಡೆಯುವುದು ಅಗತ್ಯವಿರುವ ಅಭ್ಯರ್ಥಿಯ ಖಾತೆ(ಗಳ) ಯುಆರ್​ಎಲ್ (ಉದಾ, https://twitter.com/TwitterSafety (@twittersafety) ಮತ್ತು Twitter @ಬಳಕೆದಾರರ ಹೆಸರು;
 • ನಾವು ಮರುಪರಿಶೀಲನೆ ಮಾಡಬೇಕೆಂದು ನೀವು ಬಯಸುವ ಯಾವುದೇ ನಿರ್ದಿಷ್ಟ ಟ್ವೀಟ್​ಗಳು;
 • ವಿನಂತಿಸಿದ ನಿಗದಿತ ಮಾಹಿತಿ ಮತ್ತು ತುರ್ತನ್ನು ತಡೆಯಲು ಈ ಮಾಹಿತಿ ಯಾಕೆ ಪ್ರಮುಖವಾಗಿದೆ ಎಂಬ ವಿವರ;
 • ಸಲ್ಲಿಸುವ ಕಾನೂನು ಜಾರಿ ಅಧಿಕಾರಿಯ ಸಹಿ; ಮತ್ತು
 • ಎಲ್ಲ ಇತರ ಲಭ್ಯ ಮಾಹಿತಿ ಅಥವಾ ನಿರ್ದಿಷ್ಟ ಸನ್ನಿವೇಶಕ್ಕೆ ಸಂಬಂಧಿಸಿದ ವಿಷಯವಸ್ತು.
 

ಪರಸ್ಪರ ಕಾನೂನು ನೆರವು ಒಪ್ಪಂದಗಳು


ಸರಿಯಾದ ಪ್ರಕ್ರಿಯೆ ಸೇವೆಯ ಆಧಾರದಲ್ಲಿ ಪರಸ್ಪರ ಕಾನೂನು ನೆರವು ಒಪ್ಪಂದಗಳು (“ಎಂಎಲ್​ಟಿ”) ಅಥವಾ ವಿನಂತಿ ದಾಖಲೆಯ ಮೂಲಕ ಸೂಕ್ತವಾಗಿ ನೀಡಿದ ವಿನಂತಿಗಳಿಗೆ Twitter ಸೂಕ್ತವಾಗಿ ಪ್ರತಿಕ್ರಿಯಿಸುತ್ತದೆ. ಎಂಎಲ್​ಎಟಿ ಕ್ರಮದ ಮೂಲಕ ವಿನಂತಿಗಳನ್ನು ಸಲ್ಲಿಸುವಾಗ, ಎಂಎಲ್​ಎಟಿ ವಿಧಾನದ ಮೂಲಕ ವಿನಂತಿಗಳು ಬರುತ್ತವೆ ಮತ್ತು ಮೂಲ ದೇಶದ ಹೆಸರನ್ನು ಒಳಗೊಂಡಿರುತ್ತದೆ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

 

ಕಂಟೆಂಟ್ ತೆಗೆದುಹಾಕುವ ವಿನಂತಿಗಳು


ಸೇವೆ ನಿಯಮ ಮರುಪರಿಶೀಲನೆ ವಿನಂತಿಯನ್ನು ಮಾಡುವುದು ಹೇಗೆ

ನೀವು ಕಾನೂನು ಜಾರಿ ಏಜೆಂಟ್ ಅಥವಾ ಸರ್ಕಾರಿ ಅಧಿಕಾರಿಯಾಗಿದ್ದರೆ, ಸ್ಥಳೀಯ ಕಾನೂನು(ಗಳನ್ನು) ಉಲ್ಲಂಘಿಸುವ ಸಂಭಾವ್ಯ ಅಕ್ರಮ ಕಂಟೆಂಟ್ ಅನ್ನು Twitter ನಿಂದ ತೆಗೆದುಹಾಕಲು ಬಯಸಿದರೆ, ಮೊದಲು Twitter ನಿಯಮಗಳನ್ನು ದಯವಿಟ್ಟು ಓದಿಕೊಳ್ಳಿ ಮತ್ತು ಅನ್ವಯಿಸುವಂತಿದ್ದರೆ, ನಮ್ಮ ಸೇವೆ ನಿಯಮಗಳ ಸಂಭಾವ್ಯ ಉಲ್ಲಂಘನೆಗಾಗಿ ಕಂಟೆಂಟ್ ಮರುಪರಿಶೀಲನೆ ಮಾಡುವುದಕ್ಕಾಗಿ ವಿನಂತಿ ಸಲ್ಲಿಸಿ. Twitter ನಿಯಮಗಳು ಮತ್ತು ಸೇವೆ ನಿಯಮಗಳ ಸಂಭಾವ್ಯ ಉಲ್ಲಂಘನೆಗಳನ್ನು ವರದಿ ಮಾಡುವುದು ಹೇಗೆ ಎಂಬ ಮುನ್ನೋಟವು ಇಲ್ಲಿದೆ. ನಮ್ಮ ಸೇವೆ ನಿಯಮಗಳ ಸಂಭಾವ್ಯ ಉಲ್ಲಂಘನೆಯ ಬಗ್ಗೆ ವರದಿ ಮಾಡುವುದರಿಂದ, ನಿಮ್ಮ ವಿನಂತಿಯನ್ನು ಸೂಕ್ತ ತಂಡಕ್ಕೆ ಕಳುಹಿಸಲಾಗಿದೆ ಮತ್ತು ತ್ವರಿತವಾಗಿ ಪ್ರಕ್ರಿಯೆಗೊಳಿಸಲಾಗುತ್ತದೆ ಎಂಬುದನ್ನು ಖಚಿತವಾಗುತ್ತದೆ. Twitter ಪಾರದರ್ಶಕತೆ ವರದಿಯಲ್ಲಿ ಪ್ರತಿ ಆರು ತಿಂಗಳಿಗೆ ನಾವು ಈ ಡೇಟಾ ಬಹಿರಂಗಗೊಳಿಸುತ್ತೇವೆ.
 

ಕಂಟೆಂಟ್ ತಡೆಹಿಡಿಯುವ ಕಾನೂನಾತ್ಮಕ ವಿನಂತಿಯನ್ನು ಸಲ್ಲಿಸುವುದು ಹೇಗೆ

ನಮ್ಮ ಸೇವೆ ನಿಯಮಗಳ ಸಂಭಾವ್ಯ ಉಲ್ಲಂಘನೆಗಾಗಿ ಕಂಟೆಂಟ್ ಪರಿಶೀಲಿಸಲು ನೀವು ಈಗಾಗಲೇ ವಿನಂತಿಯನ್ನು ಸಲ್ಲಿಸಿದ್ದು, ವರದಿ ಮಾಡಿದ ಕಂಟೆಂಟ್ ಪ್ರಸ್ತುತ ನಮ್ಮ ಸೇವೆ ನಿಯಮಗಳನ್ನು ಉಲ್ಲಂಘಿಸುವುದಿಲ್ಲ ಎಂದು ಸೂಚಿಸಿ Twitter ನಿಂದ ಪ್ರತಿಕ್ರಿಯೆಯನ್ನು ನೀವು ಸ್ವೀಕರಿಸಿದ್ದರೆ, ನಮ್ಮ ಕಾನೂನು ವಿನಂತಿ ಸಲ್ಲಿಕೆಗಳ ಸೈಟ್ ಮೂಲಕ ತಡೆಹಿಡಿಯುವಂತೆ ಕೇಳಿ ಮಾನ್ಯವಾದ ಮತ್ತು ಸೂಕ್ತವಾಗಿ ವ್ಯಾಪ್ತಗೊಳಿಸಿದ ಕಾನೂನು ವಿನಂತಿಯನ್ನು ನೀವು ಸಲ್ಲಿಸಬಹುದಾಗಿದೆ. ಸ್ಥಳೀಯ ಕಾನೂನು(ಗಳು) ಆಧಾರದಲ್ಲಿ ಕಂಟೆಂಟ್ ತಡೆಯುವುದಕ್ಕಾಗಿ ವಿನಂತಿಯನ್ನು ಸಲ್ಲಿಸಲು ಇದು ತ್ವರಿತ ಮತ್ತು ಅತ್ಯಂತ ದಕ್ಷ ವಿಧಾನವಾಗಿದೆ. ನಮ್ಮ ಸೇವಾ ನಿಯಮಗಳು ಸಂಭಾವ್ಯ ಉಲ್ಲಂಘನೆಯ ಪರಿಶೀಲನೆಗಾಗಿ ಮೊದಲು ನೀವು ವರದಿ ಮಾಡಿಲ್ಲದಿದ್ದರೆ, ಕಂಟೆಂಟ್ ಹಿಡಿದಿಟ್ಟುಕೊಳ್ಳಲು ವಿನಂತಿಯನ್ನು ದಯವಿಟ್ಟು ಸಲ್ಲಿಸಬೇಡಿ.

ನಿರ್ದಿಷ್ಟ ಟ್ವೀಟ್​(ಗಳು) ಅಥವಾ ಖಾತೆ(ಗಳು) ಅನ್ನು ಗುರುತಿಸುವುದರ ಜೊತೆಗೆ, ವರದಿ ಮಾಡಿದ ಕಂಟೆಂಟ್​ನಿಂದ ಉಲ್ಲಂಘನೆಯಾಗಿದೆ ಎಂದು ಹೇಳಲಾದ ಸ್ಥಳೀಯ ಕಾನೂನು(ಗಳ)ನ್ನೂ ದಯವಿಟ್ಟು ಗುರುತಿಸಿ. ನೀವು ಕೋರ್ಟ್ ಆದೇಶ ಅಥವಾ ಇತರ ಸೂಕ್ತ ಕಾನೂನು ದಾಖಲೆಯನ್ನು ಹೊಂದಿದ್ದರೆ, ದಯವಿಟ್ಟು ನಿಮ್ಮ ವಿನಂತಿ ಸಲ್ಲಿಕೆ ಮಾಡುವಾಗ ಅದರ ಪ್ರತಿಯನ್ನೂ ಲಗತ್ತಿಸಿ (“ಫೈಲ್ ಅಟ್ಯಾಚ್​ಮೆಂಟ್ಸ್​" ವಿಭಾಗವನ್ನು ನೋಡಿ) ಅಲ್ಲದೆ, ಕಾನೂನು ದಾಖಲೆಗಳು ಇಂಗ್ಲಿಷ್‌ನಲ್ಲಿ ಇಲ್ಲದಿದ್ದರೆ ಅದರ ಯಾವುದೇ ಅನುವಾದಗಳು ಸೇರಿದಂತೆ ನಿಮ್ಮ ವಿನಂತಿಯ ಮರುಪರಿಶೀಲನೆಯನ್ನು ತ್ವರಿತಗೊಳಿಸಲು ನೆರವಾಗುವ ಹೆಚ್ಚುವರಿ ಸಂಭಾವ್ಯ ಸಹಾಯಕ ವಿಷಯವಸ್ತುವನ್ನೂ ಒದಗಿಸಿ. ನಮಗೆ ಅಧಿಕೃತ ಸರ್ಕಾರಿ ಅಥವಾ ಕಾನೂನು ಜಾರಿ ಸಂಸ್ಥೆಯ ಇಮೇಲ್ ವಿಳಾಸ ಬೇಕಾಗುತ್ತದೆ (ಉದಾ., name@agency.gov), ಇದರಿಂದಾಗಿ ಅಗತ್ಯವಿದ್ದಲ್ಲಿ ಸೂಕ್ತ ತಂಡವು ನಿಮ್ಮನ್ನು ಪುನಃ ಸಂಪರ್ಕಿಸಬಹುದು. ಸಾಧ್ಯವಾದಷ್ಟೂ ಬೇಗನೆ ನಿಮ್ಮ ವಿನಂತಿಯನ್ನು ನಾವು ಪ್ರಕ್ರಿಯೆಗೊಳಿಸುತ್ತೇವೆ. ಆದರೆ, ನಿಮ್ಮ ನಕಲಿಗಳನ್ನು ಕಳುಹಿಸುವುದರಿಂದ ನಿಮ್ಮ ವಿನಂತಿ(ಗಳನ್ನು) ದಕ್ಷವಾಗಿ ಪ್ರಕ್ರಿಯೆಗೊಳಿಸುವ ನಮ್ಮ ಸಾಮರ್ಥ್ಯವನ್ನು ವಿಳಂಬಗೊಳಿಸಬಹುದು.

ಕಂಟೆಂಟ್ ಅನ್ನು ತಡೆಹಿಡಿಯುವ ಕಾನೂನಾತ್ಮಕ ವಿನಂತಿಗಳ ಬಗ್ಗೆ ಬಾಧಿತ ಬಳಕೆದಾರರಿಗೆ ಸೂಚಿಸುವುದನ್ನು ಕಾನೂನಾತ್ಮಕವಾಗಿ ನಿಷೇಧಿಸಿಲ್ಲದಿದ್ದರೆ, ಮೂಲ ವಿನಂತಿಯ ಪ್ರತಿಯನ್ನೂ ಒಳಗೊಂಡಂತೆ Twitter ಸೂಕ್ತವಾಗಿ ಸೂಚನೆ ನೀಡುತ್ತದೆ. ಬಳಕೆದಾರರಿಗೆ ಸೂಚಿಸುವುದಕ್ಕಾಗಿ Twitter ನಿರ್ಬಂಧಿಸಲ್ಪಟ್ಟಿದೆ ಎಂದು ನೀವು ನಂಬಿದ್ದರೆ, ಕಾನೂನಿನಲ್ಲಿನ ಸೂಕ್ತ ಉಲ್ಲೇಖ (ಅನ್ವಯಿಸುವಂತಿದ್ದರೆ)ದೊಂದಿಗೆ ನಿಮ್ಮ ವಿನಂತಿಗೆ ದಯವಿಟ್ಟು ಕಾರಣವನ್ನು ನೀಡಿ ಮತ್ತು/ಅಥವಾ “ಫೈಲ್ ಅಟ್ಯಾಚ್​ಮೆಂಟ್ಸ್​" ವಿಭಾಗದಲ್ಲಿ ಈ ನಿರ್ಬಂಧಕ್ಕೆ ಬೆಂಬಲಿಸುವ ಯಾವುದೇ ದಾಖಲೆಗಳು ಲಭ್ಯವಿದ್ದರೆ ಅದನ್ನು ಅಪ್​ಲೋಡ್ ಮಾಡಿ.

ಸರ್ಕಾರ ಮತ್ತು ಕಾನೂನು ಜಾರಿ ಸಂಸ್ಥೆಯಿಂದ ವರದಿ ಮಾಡುವವರು ಕೂಡ ತಮ್ಮ ವಿನಂತಿಯನ್ನು ಈ ಕೆಳಗೆ ಪಟ್ಟಿ ಮಾಡಲಾದ ಸಂಪರ್ಕ ಮಾಹಿತಿಗೆ ವಿನಂತಿಯ ಮುದ್ರಿತ ಪ್ರತಿಯನ್ನು ಕಳುಹಿಸುವ ಮೂಲಕ ತಮ್ಮ ನ್ಯಾಯವ್ಯಾಪ್ತಿಯಲ್ಲಿ ಅಕ್ರಮ ಎಂದು ಗುರುತಿಸಲಾದ ಕಂಟೆಂಟ್ ತಡೆಹಿಡಿಯುವ ವಿನಂತಿಯನ್ನು ಸಲ್ಲಿಸಬಹುದಾಗಿದೆ. ಐರೋಪ್ಯ ಒಕ್ಕೂಟ ಅಥವಾ ಐರೋಪ್ಯ ಆರ್ಥಿಕ ಪ್ರದೇಶದ ಹೊರಗಿರುವವರಾದರೆ, ಐರ್ಲೆಂಡ್​ನಲ್ಲಿರುವ Twitter ಇಂಟರ್ನ್ಯಾಷನಲ್ ಅನ್‌ಲಿಮಿಟೆಡ್‌ ಕಂಪನಿಗೆ ದಯವಿಟ್ಟು ನಿಮ್ಮ ವಿನಂತಿಯನ್ನು ಕಳುಹಿಸಿ (ಈ ಕೆಳಗಿನ “ಕಂಟೆಂಟ್ ಮಾಹಿತಿ” ವಿಭಾಗ ನೋಡಿ). ಮೇಲ್ ಮೂಲಕ ಸಲ್ಲಿಸಿದ ವಿನಂತಿಗಳಿಗೆ ಹೆಚ್ಚು ಪ್ರತಿಕ್ರಿಯೆ ಸಮಯವನ್ನು ನಿರೀಕ್ಷಿಸಬೇಕಾಗುತ್ತದೆ. 

ನಮ್ಮ ಕಂಟೆಂಟ್ ತಡೆಹಿಡಿಯುವ ದೇಶೀಯ ನೀತಿ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಕಂಡುಕೊಳ್ಳಿ.

 

Twitter ಬಳಕೆದಾರರಿಗೆ ನೆರವಾಗುವುದು


ತಮ್ಮ Twitter ಖಾತೆಗೆ ಪೋಸ್ಟ್‌ ಮಾಡಿದ ಟ್ವೀಟ್‌ಗಳೂ ಸೇರಿದಂತೆ ತಮ್ಮದೇ ಖಾತೆ ಮಾಹಿತಿಯ ಡೌನ್‌ಲೋಡ್‌ ಅನ್ನು ನೋಂದಾಯಿತ Twitter ಬಳಕೆದಾರರು ಪಡೆಯಬಹುದು. ಆ ಮಾಹಿತಿಯನ್ನು ಬಳಕೆದಾರರು ಹೇಗೆ ವಿನಂತಿ ಮಾಡಬಹುದು ಎಂಬ ನಿರ್ದೇಶನಗಳು ನಮ್ಮ ಸಹಾಯ ಕೇಂದ್ರದಲ್ಲಿ ಲಭ್ಯವಿವೆ.

ನಮ್ಮ ಸಹಾಯ ಕೇಂದ್ರದಲ್ಲಿ ವಿವರಿಸಿದಂತೆ ತನ್ನ Twitter ಖಾತೆಯ ಮೂಲಕ ನೇರವಾಗಿ ಐಪಿ ಲಾಗ್​ಗಳು ಮತ್ತು ಇತರ ಡೇಟಾವನ್ನು ಬಳಕೆದಾರರು ಪಡೆಯಬಹುದು. ತಾವು ಬಯಸಿದ ಡೇಟಾ ಸ್ವಯಂ ಡೌನ್‌ಲೋಡ್ ಮಾಡುವ Twitter ಬಳಕೆದಾರರ ಪ್ರಯತ್ನ ಯಶಸ್ವಿಯಾಗಿಲ್ಲದಿದ್ದರೆ, ನಮ್ಮ ಗೌಪ್ಯತೆ ನಮೂನೆಯ ಮೂಲಕ Twitter ಗೆ ವಿನಂತಿಯನ್ನು ಕಳುಹಿಸಲು ಬಳಕೆದಾರರನ್ನು ದಯವಿಟ್ಟು ನಿರ್ದೇಶಿಸಿ.
 

ಇತರ ಸಮಸ್ಯೆಗಳು

ಬಹುತೇಕ ಸಮಸ್ಯೆಗಳನ್ನು ನಮ್ಮ ಸಹಾಯ ಕೇಂದ್ರದ ಮೂಲಕ ನೇರವಾಗಿ ವಿಚಾರಣೆಗಳನ್ನು Twitter ಖಾತೆದಾರರು ಸಲ್ಲಿಸುವ ಮೂಲಕ ಪರಿಹರಿಸಿಕೊಳ್ಳಬಹುದು. ಉಲ್ಲಂಘನೆಗಳನ್ನು ವರದಿ ಮಾಡುವುದು ಹೇಗೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿಯು ಇಲ್ಲಿ ಲಭ್ಯವಿದೆ.
 

ಸಾಮಾನ್ಯ ವಿಚಾರಣೆಗಳು

ಕಾನೂನು ಜಾರಿ ಸಂಸ್ಥೆ ಅಥವಾ ಸರ್ಕಾರಿ ಅಧಿಕಾರಿಗಳಿಂದ (ಬಳಕೆದಾರರ ಡೇಟಾ ವಿನಂತಿ ಅಥವಾ ಕಂಟೆಂಟ್ ತೆಗೆದುಹಾಕುವಿಕೆ ವಿನಂತಿ ಮಾಡದ) ಸಾಮಾನ್ಯ ವಿಚಾರಣೆಗಳನ್ನು ನಮ್ಮ ವೆಬ್ ನಮೂನೆಯ ಮೂಲಕ ಸಲ್ಲಿಸಬಹುದಾಗಿದೆ.

 

ವಿನಂತಿಗಳನ್ನು ಸಲ್ಲಿಸುವುದು ಎಲ್ಲಿ


ಸಂರಕ್ಷಣೆಗಳು, ಖಾತೆ ಮಾಹಿತಿಗೆ ವಿನಂತಿಗಳು (ನಿತ್ಯದ ಮತ್ತು ತುರ್ತಿನ) ಹಾಗೂ ಕಂಟೆಂಟ್ ತೆಗೆದುಹಾಕುವ ವಿನಂತಿಗಳು ಸೇರಿದಂತೆ ಎಲ್ಲ ವಿನಂತಿಗಳನ್ನು t.co/lr ಅಥವಾ legalrequests.twitter.com ನಲ್ಲಿ ಲಭ್ಯವಿರುವ Twitter ನ ಕಾನೂನಾತ್ಮಕ ವಿನಂತಿ ಸಲ್ಲಿಕೆಗಳ ಮೂಲಕ ಸಲ್ಲಿಸಬಹುದಾಗಿದೆ.

ನೀವು ನಮ್ಮ ಕಾನೂನಾತ್ಮಕ ವಿನಂತಿ ಸಲ್ಲಿಕೆಗಳಲ್ಲಿ ಸಮಸ್ಯೆಯನ್ನು ಎದುರಿಸಿದರೆ, ವಿನಂತಿಯ ವಿಧಕ್ಕೆ "ಇತರ ವಿನಂತಿಗಳನ್ನು" ಆಯ್ಕೆ ಮಾಡುವ ಮೂಲಕ ನಮ್ಮ ವೆಬ್ ನಮೂನೆಯ ಮೂಲಕ ನೆರವನ್ನು ಕೇಳಬಹುದು.  

ಈ ವಿಧಾನದ ಮೂಲಕ ಸಂವಹನವು ಅನುಕೂಲದ ಉದ್ದೇಶಕ್ಕೆ ಮಾತ್ರ ಮತ್ತು ನ್ಯಾಯವ್ಯಾಪ್ತಿಯ ಅಥವಾ ಸೂಕ್ತ ಸೇವೆಯ ಕೊರತೆ ಸೇರಿದಂತೆ ಯಾವುದೇ ಆಕ್ಷೇಪಣೆಗಳನ್ನು ಇದು ನಿವಾರಿಸುವುದಿಲ್ಲ.

ಕಾನೂನೇತರ ಜಾರಿ ಸಂಸ್ಥೆ ವಿನಂತಿಗಳನ್ನು ನಮ್ಮ ಸಹಾಯ ಕೇಂದ್ರದ ಮೂಲಕ ಸಲ್ಲಿಸಬಹುದಾಗಿದೆ.

 

ಸಂಪರ್ಕ ಮಾಹಿತಿ


ನಮ್ಮ ವಿಳಾಸ ವಿವರಗಳು:

Twitter, Inc.
ಸಿ/ಒ ಟ್ರಸ್ಟ್ ಮತ್ತು ಸೇಫ್ಟಿ – ಲೀಗಲ್ ಪಾಲಿಸಿ
1355 ಮಾರ್ಕೆಟ್ ಸ್ಟ್ರೀಟ್, ಸೂಟ್ 900
ಸ್ಯಾನ್ ಫ್ರಾನ್ಸಿಸ್ಕೋ, ಸಿಎ 94103

Twitter ಇಂಟರ್​ನ್ಯಾಷನಲ್ ಅನ್‌ಲಿಮಿಟೆಡ್‌ ಕಂಪನಿ
ಸಿ/ಒ ಟ್ರಸ್ಟ್ ಮತ್ತು ಸೇಫ್ಟಿ – ಲೀಗಲ್ ಪಾಲಿಸಿ
ಒನ್ ಕಂಬರ್ಲ್ಯಾಂಡ್ ಪ್ಲೇಸ್
ಫೆನಿಯನ್ ಸ್ಟ್ರೀಟ್
ಡಬ್ಲಿನ್ 2
D02 AX07
ಐರ್ಲೆಂಡ್

ಈ ವಿಧಾನದ ಮೂಲಕ ಸಂವಹನವು ಅನುಕೂಲದ ಉದ್ದೇಶಕ್ಕೆ ಮಾತ್ರ ಮತ್ತು ನ್ಯಾಯವ್ಯಾಪ್ತಿಯ ಅಥವಾ ಸೂಕ್ತ ಸೇವೆಯ ಕೊರತೆ ಸೇರಿದಂತೆ ಯಾವುದೇ ಆಕ್ಷೇಪಣೆಗಳನ್ನು ಇದು ನಿವಾರಿಸುವುದಿಲ್ಲ. ಕಾನೂನು ವಿನಂತಿ ಸಲ್ಲಿಕೆಗಳ ಸೈಟ್ ಮೂಲಕ ಕಾನೂನು ವಿನಂತಿಗಳನ್ನು ಸಲ್ಲಿಸದ ಸರ್ಕಾರಿ ಸಂಸ್ಥೆಗಳು ದೀರ್ಘ ಪ್ರತಿಕ್ರಿಯೆ ಸಮಯವನ್ನು ನಿರೀಕ್ಷಿಸಬೇಕು.

ಈ ಲೇಖನ ಹಂಚಿಕೊಳ್ಳಿ