ಪ್ಲಾಟ್‌ಫಾರಂ ದುರ್ಬಳಕೆ ಮತ್ತು ಸ್ಪ್ಯಾಮ್ ನೀತಿ

ಮುನ್ನೋಟ


ಏಪ್ರಿಲ್ 2022

Twitter ನಲ್ಲಿ ಜನರ ಅಭಿವ್ಯಕ್ತಿಯನ್ನು ದುರ್ಬಳಕೆ ಮಾಡುವ ಅಥವಾ ವ್ಯತ್ಯಯಗೊಳಿಸುವ ವರ್ತನೆಯಲ್ಲಿ ನೀವು ತೊಡಗಿಸಿಕೊಳ್ಳುವುದು ಅಥವಾ ಮಾಹಿತಿಯನ್ನು ಹತ್ತಿಕ್ಕುವುದು ಅಥವಾ ಕೃತಕವಾಗಿ ವರ್ಧಿಸುವ ಉದ್ದೇಶದಿಂದ Twitter ಸೇವೆಗಳನ್ನು ನೀವು ಬಳಸಬಾರದು.

ಜನರು ಮಾನವ ಸಂಪರ್ಕವನ್ನು ಸಾಧಿಸುವ ಮತ್ತು ವಿಶ್ವಾಸಾರ್ಹ ಮಾಹಿತಿಯನ್ನು ಜನರು ಕಂಡುಕೊಳ್ಳುವ ಹಾಗೂ ಮುಕ್ತ ಮತ್ತು ಸುರಕ್ಷಿತವಾಗಿ ಅಭಿವ್ಯಕ್ತಿಸುವ ಸ್ಥಳವನ್ನಾಗಿ Twitter ಅನ್ನು ನಾವು ಮಾಡಲು ಬಯಸುತ್ತೇವೆ. ಅದನ್ನು ಸಾಧ್ಯವಾಗಿಸಲು, ಸ್ಪ್ಯಾಮ್ ಅಥವಾ ಇತರ ವಿಧದ ಪ್ಲಾಟ್‌ಫಾರಂ ದುರ್ಬಳಕೆಯನ್ನು ನಾವು ಅನುಮತಿಸುವುದಿಲ್ಲ. ಇತರರನ್ನು ತಪ್ಪುದಾರಿಗೆಳೆಯುವ ಮತ್ತು/ಅಥವಾ ಅವರ ಅನುಭವಕ್ಕೆ ಅಡ್ಡಿಪಡಿಸುವ ಸಾಮೂಹಿಕ, ಆಕ್ರಮಣಶೀಲ ಅಥವಾ ವಂಚಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು Twitter ಬಳಸುವುದು ಎಂಬುದಾಗಿ ಪ್ಲಾಟ್‌ಫಾರಂ ದುರ್ಬಳಕೆಯನ್ನು ನಾವು ವ್ಯಾಖ್ಯಾನಿಸುತ್ತೇವೆ.

ಪ್ಲಾಟ್‌ಫಾರಂ ದುರ್ಬಳಕೆಯು ಹಲವು ರೂಪಗಳನ್ನು ಹೊಂದಿರಬಹುದು ಮತ್ತು ಇವುಗಳೂ ಸೇರಿದಂತೆ ವಿಶಾಲ ಶ್ರೇಣಿಯ ನಿಷೇಧಿತ ವರ್ತನೆಯನ್ನು ಪರಿಹರಿಸಲು ನಮ್ಮ ನಿಯಮಗಳು ಉದ್ದೇಶಿಸಿವೆ:

 • ಖಾತೆಗಳು, ವೆಬ್‌ಸೈಟ್‌ಗಳು, ಉತ್ಪನ್ನಗಳು, ಸೇವೆಗಳು ಅಥವಾ ಉಪಕ್ರಮಗಳಿಗೆ Twitter ನಲ್ಲಿ ಸಂವಾದದಿಂದ ದಟ್ಟಣೆ ಅಥವಾ ಗಮನ ಕೇಂದ್ರೀಕರಿಸುವಿಕೆಯನ್ನು ಉದ್ದೇಶಿಸಿದ ವಾಣಿಜ್ಯಿಕವಾಗಿ ಪ್ರಭಾವಿತ ಸ್ಪ್ಯಾಮ್‌;
 • ವಾಸ್ತವಕ್ಕಿಂತಲೂ ಹೆಚ್ಚು ಜನಪ್ರಿಯ ಅಥವಾ ಸಕ್ರಿಯ ಎಂದು ಕಾಣಿಸುವಂತೆ ಖಾತೆಗಳು ಅಥವಾ ಕಂಟೆಂಟ್‌ ಅನ್ನು ಮಾಡಲು ಪ್ರಯತ್ನಿಸುವ ಅಪ್ರಾಮಾಣಿಕ ಎಂಗೇಜ್‌ಮೆಂಟ್‌;
 • ಹಲವು ಖಾತೆಗಳು, ನಕಲಿ ಖಾತೆಗಳು, ಸ್ವಯಂಚಾಲಿತ ಮತ್ತು/ಅಥವಾ ಸ್ಕ್ರಿಪ್ಟಿಂಗ್‌ ಬಳಕೆಯ ಮೂಲಕ ಸಂವಾದಗಳನ್ನು ಕೃತಕವಾಗಿ ಪ್ರಭಾವಿಸಲು ಪ್ರಯತ್ನಿಸುವ ಸಂಯೋಜಿತ ಚಟುವಟಿಕೆ; ಮತ್ತು
 • Twitter ನಿಯಮಗಳನ್ನು ಉಲ್ಲಂಘಿಸುವ ವರ್ತನೆಯನ್ನು ಪ್ರೋತ್ಸಾಹಿಸುವ ಅಥವಾ ಉತ್ತೇಜಿಸುವ ಅಪಾಯಕಾರಿ ಚಟುವಟಿಕೆಗಳನ್ನು ಸಂಯೋಜಿಸುವುದು.
   

ಯಾವ ಸನ್ನಿವೇಶವು ಈ ನೀತಿಯ ಉಲ್ಲಂಘನೆಯಾಗುತ್ತದೆ?


ಈ ನೀತಿಯ ಅಡಿಯಲ್ಲಿ, ಈ ವಲಯಗಳಲ್ಲಿ ವರ್ತನೆಗಳ ಶ್ರೇಣಿಯನ್ನು ನಾವು ನಿಷೇಧಿಸುತ್ತೇವೆ:
 

ಹಲವು ಖಾತೆಗಳು ಮತ್ತು ಸಮನ್ವಯ

Twitter ಖಾತೆಗಳನ್ನು ನೀವು ಸಾಮೂಹಿಕವಾಗಿ ನೋಂದಣಿ ಮಾಡಲಾಗದು ಅಥವಾ Twitter ಖಾತೆಗಳನ್ನು ರಚಿಸಲು ಆಟೋಮೇಶನ್ ಬಳಸಲಾಗದು.

ಹಲವು ಖಾತೆಗಳನ್ನು ಬಳಸಿ ನೀವು ಕೃತಕವಾಗಿ ಸಂವಾದಗಳನ್ನು ನೀವು ವರ್ಧಿಸಲು ಅಥವಾ ಅಡ್ಡಿಪಡಿಸಬಾರದು ಅಥವಾ Twitter ನಿಯಮಗಳನ್ನು ಉಲ್ಲಂಘಿಸಲು ಇತರರೊಂದಿಗೆ ಸಮನ್ವಯ ಸಾಧಿಸಬಾರದು. ಇದರಲ್ಲಿ ಇದೂ ಒಳಗೊಂಡಿರುತ್ತದೆ:

 • ಸಮವ್ಯಾಪ್ತಿ ಖಾತೆಗಳು - ಒಂದೇ ರೀತಿಯ ಅಥವಾ ಅದೇ ರೀತಿಯ ವ್ಯಕ್ತಿಗಳು ಅಥವಾ ಗಣನೀಯವಾಗಿ ಒಂದೇ ರೀತಿಯ ಕಂಟೆಂಟ್‌ಗಳಂತಹವುಗಳನ್ನು ಹೊಂದಿರುವ ಸಮವ್ಯಾಪ್ತಿ ಬಳಕೆ ಪ್ರಕರಣಗಳೊಂದಿಗೆ ಹಲವು ಖಾತೆಗಳನ್ನು ನಿರ್ವಹಿಸುವುದು;
 • ಪರಸ್ಪರ ಸಂವಹನ ಖಾತೆಗಳು - ನಿರ್ದಿಷ್ಟ ಟ್ವೀಟ್‌ಗಳು ಅಥವಾ ಖಾತೆಗಳ ಪ್ರಾಮುಖ್ಯತೆಯನ್ನು ವರ್ಧಿಸುವುದು ಅಥವಾ ದುರ್ಬಳಕೆ ಮಾಡಲು ಪರಸ್ಪರ ಸಂವಹನ ನಡೆಸುವ ಹಲವು ಖಾತೆಗಳನ್ನು ನಿರ್ವಹಿಸುವುದು; ಮತ್ತು
 • ಸಹಕಾರ - ಈ ಕೆಳಗಿನವುಗಳನ್ನೂ ಸೇರಿದಂತೆ ನಕಲಿ ಕಂಟೆಂಟ್ ಪೋಸ್ಟ್ ಮಾಡಲು ಅಥವಾ ನಕಲಿ ಎಂಗೇಜ್‌ಮೆಂಟ್‌ ರಚಿಸಲು ಹಲವು ಖಾತೆಗಳನ್ನು ರಚಿಸುವುದು:
  • ಒಂದೇ ರೀತಿಯ ಅಥವಾ ಗಣನೀಯವಾಗಿ ಸಮಾನ ಟ್ವೀಟ್‌ಗಳು ಅಥವಾ ಹ್ಯಾಶ್‌ಟ್ಯಾಗ್‌ಗಳನ್ನು ನೀವು ನಿರ್ವಹಿಸುವ ಹಲವು ಖಾತೆಗಳಿಂದ ಪೋಸ್ಟ್ ಮಾಡುವುದು; 
  • ನೀವು ನಿರ್ವಹಿಸುವ ಹಲವು ಖಾತೆಗಳಿಂದ ಅದೇ ಟ್ವೀಟ್ಗಳು ಅಥವಾ ಖಾತೆಗಳೊಂದಿಗೆ ಪದೇ ಪದೇ ತೊಡಗಿಸಿಕೊಳ್ಳುವುದು (ರಿಟ್ವೀಟ್ಗಳು, ಲೈಕ್ಗಳು, ನಮೂದುಗಳು, Twitter ಸಮೀಕ್ಷೆ ಮತಗಳು);
  • ತೊಡಗಿಸಿಕೊಂಡಿರುವ ವ್ಯಕ್ತಿಗಳು ಒಂದೇ ಖಾತೆಯನ್ನು ಬಳಸುತ್ತಿದ್ದರೂ, ಕೃತಕ ಎಂಗೇಜ್‍ಮೆಂಟ್ ಅಥವಾ ವರ್ಧನೆಯಲ್ಲಿ ತೊಡಗಿಸಿಕೊಳ್ಳಲು ಇತರರೊಂದಿಗೆ ಸಹಕಾರ ಸಾಧಿಸುವುದು ಅಥವಾ ಪ್ರತಿಫಲ ನೀಡುವುದು; ಮತ್ತು
  • ನಮ್ಮ ನಿಂದನೀಯ ವರ್ತನೆ ನೀತಿಯ ಉಲ್ಲಂಘನೆಗಳು ಸೇರಿದಂತೆ Twitter ನಿಯಮಗಳ ಉಲ್ಲಂಘನೆಗಳಲ್ಲಿ ತೊಡಗಿಸಿಕೊಳ್ಳಲು ಇತರರೊಂದಿಗೆ ಸಮನ್ವಯ ಸಾಧಿಸುವುದು ಅಥವಾ ಉಲ್ಲಂಘನೆಗಳನ್ನು ಉತ್ತೇಜಿಸುವುದು.
    

ಎಂಗೇಜ್‍ಮೆಂಟ್ ಮತ್ತು ಮೆಟ್ರಿಕ್ಸ್


ನಿಮ್ಮ ಸ್ವಂತದ ಅಥವಾ ಇತರರ ಹಿಂಬಾಲಕರು ಅಥವಾ ಎಂಗೇಜ್‌ಮೆಂಟ್‌ ಅನ್ನು ನೀವು ಕೃತಕವಾಗಿ ವರ್ಧಿಸಬಾರದು.
ಇದರಲ್ಲಿ ಇವು ಒಳಗೊಂಡಿರುತ್ತವೆ:

 • ಟ್ವೀಟ್‌ ಮಾರಾಟ/ಖರೀದಿ ಅಥವಾ ಖಾತೆ ಮೆಟ್ರಿಕ್ ವರ್ಧನೆ - ಹಿಂಬಾಲಕರು ಅಥವಾ ಎಂಗೇಜ್‍ಮೆಂಟ್‌ಗಳನ್ನು ಮಾರಾಟ ಮಾಡುವುದು ಅಥವಾ ಖರೀದಿಸುವುದು (ರಿಟ್ವೀಟ್‌ಗಳು, ಲೈಕ್‌ಗಳು, ನಮೂದುಗಳು, Twitter ಸಮೀಕ್ಷೆ ಮತಗಳು);
 • ಆಪ್‌ಗಳು - ಹಿಂಬಾಲಕರನ್ನು ಸೇರಿಸುವುದಾಗಿ ಅಥವಾ ಟ್ವೀಟ್‌ಗಳಿಗೆ ಎಂಗೇಜ್‍ಮೆಂಟ್‌ಗಳನ್ನು ಸೇರಿಸುವುದಾಗಿ ಹೇಳಿಕೊಳ್ಳುವ ತೃತೀಯ ಪಕ್ಷದ ಸೇವೆಗಳು ಅಥವಾ ಆಪ್‌ಗಳನ್ನು ಬಳಸುವುದು ಅಥವಾ ಪ್ರಚಾರ ಮಾಡುವುದು;
 • ಪರಸ್ಪರ ವರ್ಧನೆ - ಹಿಂಬಾಲಕರು ಅಥವಾ ಟ್ವೀಟ್‌ ಎಂಗೇಜ್‍ಮೆಂಟ್‌ಗಳ ವಿನಿಮಯಕ್ಕೆ ವಹಿವಾಟು ನಡೆಸುವುದು ಅಥವಾ ಸಹಕರಿಸುವುದು ("ಫಾಲೋ ಟ್ರೇನ್‌ಗಳು" "ಡೆಕ್‌ಗಳು" ಮತ್ತು "ರಿಟ್ವೀಟ್‌ಗಾಗಿ ರಿಟ್ವೀಟ್‌" ವರ್ತನೆಯಲ್ಲಿ ಭಾಗವಹಿಸುವುದೂ ಸೇರಿದಂತೆ, ಆದರೆ ಇದಕ್ಕೆ ಸೀಮಿತವಾಗದಂತೆ); ಮತ್ತು
 • ಖಾತೆ ವರ್ಗಾವಣೆ ಅಥವಾ ಮಾರಾಟ - Twitter ಖಾತೆಗಳು, ಬಳಕೆದಾರರ ಹೆಸರು ಅಥವಾ Twitter ಖಾತೆಗಳ ತಾತ್ಕಾಲಿಕ ಪ್ರವೇಶಾವಕಾಶವನ್ನು ಮಾರಾಟ ಮಾಡುವುದು, ಖರೀದಿ ಮಾಡುವುದು, ವಹಿವಾಟು ನಡೆಸುವುದು ಅಥವಾ ಮಾರಾಟ, ಖರೀದಿ ಅಥವಾ ವಹಿವಾಟು ಪ್ರಸ್ತಾಪಿಸುವುದು.
   

Twitter ಉತ್ಪನ್ನ ವೈಶಿಷ್ಟ್ಯಗಳ ದುರ್ಬಳಕೆ


ಇತರರ ಅನುಭವವನ್ನು ಅಡ್ಡಿಪಡಿಸಲು Twitter ಉತ್ಪನ್ನ ವೈಶಿಷ್ಟ್ಯಗಳನ್ನು ನೀವು ದುರ್ಬಳಕೆ ಮಾಡಲಾಗದು.
ಇದರಲ್ಲಿ ಇವು ಒಳಗೊಂಡಿರುತ್ತವೆ:
 

ಟ್ವೀಟ್‌ಗಳು ಮತ್ತು ನೇರ ಸಂದೇಶಗಳು

 • ಸಮೂಹ, ಆಕ್ರಮಣಶೀಲ, ಅಧಿಕ ಪ್ರಮಾಣದ ಅನಿರೀಕ್ಷಿತ ಪ್ರತಿಕ್ರಿಯೆಗಳು, ನಮೂದುಗಳು ಅಥವಾ ನೇರ ಸಂದೇಶಗಳನ್ನು ಕಳುಹಿಸುವುದು;
 • ಪದೇ ಪದೇ ಒಂದೇ ಕಂಟೆಂಟ್‌ ಅನ್ನು ಪೋಸ್ಟ್ ಮಾಡುವುದು ಮತ್ತು ಅಳಿಸುವುದು;
 • ಒಂದೇ ರೀತಿಯ ಅಥವಾ ಬಹುತೇಕ ಒಂದೇ ರೀತಿಯ ಟ್ವೀಟ್‌ಗಳನ್ನು ಪದೇ ಪದೇ ಪೋಸ್ಟ್ ಮಾಡುವುದು ಅಥವಾ ಒಂದೇ ರೀತಿಯ ನೇರ ಸಂದೇಶಗಳನ್ನು ಪದೇ ಪದೆ ಕಳುಹಿಸುವುದು;
 • ನಿಮ್ಮ ಟ್ವೀಟ್‌/ನೇರ ಸಂದೇಶ ಚಟುವಟಿಕೆಯ ಸಮೂಹದಲ್ಲಿ ಒಳಗೊಳ್ಳುವಂತೆ, ಪದೇ ಪದೇ ಟಿಪ್ಪಣಿ ಇಲ್ಲದೇ ಲಿಂಕ್‌ಗಳನ್ನು ಒಳಗೊಂಡ ನೇರ ಸಂದೇಶಗಳನ್ನು ಕಳುಹಿಸುವುದು ಅಥವಾ ಟ್ವೀಟ್‌ಗಳನ್ನು ಪೋಸ್ಟ್ ಮಾಡುವುದು; ಮತ್ತು
 • ಇತರ ಖಾತೆಗಳೊಂದಿಗೆ ಪ್ರತ್ಯೇಕವಾಗಿಯಾಗಲೀ ಅಥವಾ ಕಾನ್ಸರ್ಟ್‌ನಲ್ಲಾಗಲೀ ಈಗಾಗಲೇ ಇರುವ ಪದಗುಚ್ಛವನ್ನು ಅಥವಾ ಕಂಟೆಂಟ್ ಅನ್ನು ನಕಲು ರೂಪದಲ್ಲಿ ಟ್ವೀಟ್‌ ಮಾಡುವುದು. ನಕಲಿಸಿ ಅಂಟಿಸುವುದು ಮತ್ತು ನಕಲು ಕಂಟೆಂಟ್ ಕುರಿತ ಪಾಲಿಸಿ ಬಗ್ಗೆ ಇನ್ನಷ್ಟು ತಿಳಿಯಿರಿ.

ಹಿಂಬಾಲಿಸುತ್ತಿರುವವರು

 • "ಫಾಲೋ ಚರ್ನ್‌" - ಸ್ವಂತ ಹಿಂಬಾಲಕರ ಲೆಕ್ಕವನ್ನು ವರ್ಧಿಸುವ ಯತ್ನವಾಗಿ ಭಾರಿ ಸಂಖ್ಯೆಯ ಖಾತೆಗಳನ್ನು ಹಿಂಬಾಲಿಸುವುದು ಮತ್ತು ನಂತರ ಹಿಂಬಾಲಿಸದಿರುವುದು;
 • ತಾರತಮ್ಯದ ಹಿಂಬಾಲಿಸುವಿಕೆ - ಅಲ್ಪಾವಧಿಯಲ್ಲಿ ಭಾರಿ ಸಂಖ್ಯೆಯ ಖಾತೆಗಳನ್ನು ವಿಶೇಷವಾಗಿ ಸ್ವಯಂಚಾಲಿತ ವಿಧಾನದಲ್ಲಿ ಹಿಂಬಾಲಿಸುವುದು ಮತ್ತು/ಅಥವಾ ಹಿಂಬಾಲಿಸುವಿಕೆ ರದ್ದು ಮಾಡುವುದು; ಮತ್ತು
 • ವಿಶೇಷವಾಗಿ ಸ್ವಯಂಚಾಲಿತ ವಿಧಾನವನ್ನು ಬಳಸಿ ಇನ್ನೊಬ್ಬರ ಖಾತೆಯ ಹಿಂಬಾಲಕರನ್ನು ನಕಲಿಸುವುದು.
   

ಎಂಗೇಜ್‍ಮೆಂಟ್

 • ಖಾತೆಗಳು, ವೆಬ್‌ಸೈಟ್‌ಗಳು, ಉತ್ಪನ್ನಗಳು, ಸೇವೆಗಳು ಅಥವಾ ಉಪಕ್ರಮಗಳಿಗೆ ದಟ್ಟಣೆ ಅಥವಾ ಗಮನ ಕೇಂದ್ರೀಕರಿಸುವಿಕೆಗಾಗಿ ಟ್ವೀಟ್‌ಗಳೊಂದಿಗೆ ಆಕ್ರಮಣಶೀಲವಾಗಿ ಅಥವಾ ಸ್ವಯಂಚಾಲಿತವಾಗಿ ತೊಡಗಿಸಿಕೊಳ್ಳುವುದು.
 • ಪಟ್ಟಿಗಳು ಅಥವಾ ಕ್ಷಣಗಳಿಗೆ ಬಳಕೆದಾರರನ್ನು ಆಕ್ರಮಣಶೀಲವಾಗಿ ಸೇರಿಸುವುದು.
   

ಹ್ಯಾಶ್‌ಟ್ಯಾಗ್‌ಗಳು 

 • ಸಂವಾದವನ್ನು ಬುಡಮೇಲು ಮಾಡುವುದು ಅಥವಾ ದುರ್ಬಳಕೆ ಮಾಡುವ ಉದ್ದೇಶದಿಂದ ಅಥವಾ ಖಾತೆಗಳು, ವೆಬ್‌ಸೈಟ್‌ಗಳು, ಉತ್ಪನ್ನಗಳು, ಸೇವೆಗಳು ಅಥವಾ ಉಪಕ್ರಮಗಳಿಗೆ ದಟ್ಟಣೆ ಅಥವಾ ಗಮನ ಕೇಂದ್ರೀಕರಿಸುವಿಕೆ ಉದ್ದೇಶದಿಂದ ಟ್ರೆಂಡ್ ಆಗುತ್ತಿರುವ ಅಥವಾ ಜನಪ್ರಿಯ ಹ್ಯಾಶ್‌ಟ್ಯಾಗ್‌ಗಳನ್ನು ಬಳಸುವುದು; ಮತ್ತು
 • ಒಂದು ಅಥವಾ ಹಲವು ಟ್ವೀಟ್‌ಗಳಲ್ಲಿ ವಿಪರೀತ, ಸಂಬಂಧವಿಲ್ಲದ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಟ್ವೀಟ್‌ ಮಾಡುವುದು.
   

URL‌ ಗಳು

 • ಇತರ ವ್ಯಕ್ತಿಯ ಬ್ರೌಸರ್ (ಮಾಲ್‌ವೇರ್) ಅಥವಾ ಕಂಪ್ಯೂಟರ್ ಅನ್ನು ಹಾಳು ಮಾಡುವ ಅಥವಾ ವಿಚ್ಛಿದ್ರಗೊಳಿಸುವ ಉದ್ದೇಶದಿಂದ ಅಥವಾ ವ್ಯಕ್ತಿಯ ಗೌಪ್ಯತೆಗೆ ರಾಜಿ ಮಾಡುವ ಉದ್ದೇಶದಿಂದ (ಫಿಶಿಂಗ್) ದುರುದ್ದೇಶಕರ ಕಂಟೆಂಟ್ ಅನ್ನು ಪ್ರಕಟಿವುದು ಅಥವಾ ಲಿಂಕ್ ಮಾಡುವುದು; ಮತ್ತು 
 • ತಪ್ಪುದಾರಿಗೆಳೆಯವು ಅಥವಾ ವಂಚಕ ಲಿಂಕ್‌ಗಳನ್ನು ಪೋಸ್ಟ್ ಮಾಡುವುದು; ಉದಾಹರಣೆಗೆ ಅಫಿಲಿಯೇಟ್‌ ಲಿಂಕ್‌ಗಳು ಮತ್ತು ಕ್ಲಿಕ್‌ಜಾಕಿಂಗ್‌ ಲಿಂಕ್‌ಗಳು.
   

ಯಾವುದು ಈ ನೀತಿಯ ಉಲ್ಲಂಘನೆಯಾಗುವುದಿಲ್ಲ?


ಈ ಮುಂದಿನವು ಈ ನೀತಿಯ ಉಲ್ಲಂಘನೆಯಾಗುವುದಿಲ್ಲ:

 • ಆಗಾಗ್ಗೆ ಕಾಮೆಂಟರಿ ಇಲ್ಲದೇ ಲಿಂಕ್‌ಗಳನ್ನು ಪೋಸ್ಟ್ ಮಾಡುವುದು;
 • ಐಡಿಯಾಗಳು, ದೃಷ್ಟಿಕೋನಗಳು, ಬೆಂಬಲ ಅಥವಾ ಕಾರಣಕ್ಕೆ ವಿರೋಧವನ್ನು ವ್ಯಕ್ತಪಡಿಸಲು ಇತರರೊಂದಿಗೆ ಸಮನ್ವಯ ಸಾಧಿಸುವುದು, ಇಂತಹ ವರ್ತನೆಗಳು Twitter ನಿಯಮಗಳನ್ನು ಉಲ್ಲಂಘಿಸದಿದ್ದಲ್ಲಿ; ಮತ್ತು
 • ವಿಭಿನ್ನ ಗುರುತು, ಉದ್ದೇಶಗಳು ಅಥವಾ ಬಳಕೆ ಪ್ರಕರಣಗಳೊಂದಿಗೆ ಹಲವು ಖಾತೆಗಳನ್ನು ನಿರ್ವಹಿಸುವುದು. ಇತರ ನೀತಿಗಳನ್ನು ಉಲ್ಲಂಘಿಸದಂತೆ ಈ ಖಾತೆಗಳು ಒಂದಕ್ಕೊಂದು ಸಂವಹನ ನಡೆಸಬಹುದು. ಕೆಲವು ಉದಾಹರಣೆಗಳೆಂದರೆ:
  • ಸಂಬಂಧ ಹೊಂದಿದ, ಆದರೆ ಬೇರೆ ಬೇರೆ ಸ್ಥಳಗಳಲ್ಲಿನ ವಹಿವಾಟುಗಳಂತಹ ಪ್ರತ್ಯೇಕ ವಿಭಾಗ ಅಥವ ಶಾಖೆಗಳನ್ನು ಹೊಂದಿರುವ ಸಂಸ್ಥೆಗಳು;
  • ಕಲ್ಪನೆ ಹೆಸರಿನ ಖಾತೆಗಳು ಅಥವಾ ನಿಮ್ಮ ಹವ್ಯಾಸ ಅಥವಾ ಉಪಕ್ರಮಗಳೊಂದಿಗೆ ಸಂಬಂಧಿಸಿದ ಖಾತೆಗಳೊಂದಿಗೆ ವೈಯಕ್ತಿಕ ಖಾತೆಯನ್ನು ನಿರ್ವಹಿಸುವುದು; ಮತ್ತು
  • ಹವ್ಯಾಸ/ಕಲಾತ್ಮಕ ಬೋಟ್‌ಗಳು.
    

ಈ ನೀತಿಯ ಉಲ್ಲಂಘನೆಗಳನ್ನು ಯಾರು ವರದಿ ಮಾಡಬಹುದು?


ನಿಗದಿತ ವರದಿ ಮಾಡುವಿಕೆ ಹರಿವಿನ ಮೂಲಕ ಖಾತೆಗಳು ಅಥವಾ ಟ್ವೀಟ್‌ಗಳನ್ನು ಯಾರಾದರೂ ವರದಿ ಮಾಡಬಹುದು. ನಮ್ಮ ಜಾರಿ ವ್ಯವಸ್ಥೆಯನ್ನು ಸಂಸ್ಕರಿಸುವುದಕ್ಕಾಗಿ ಮತ್ತು ಹೊಸ ಹಾಗೂ ಎದುರಾಗುವ ಟ್ರೆಂಡ್‌ಗಳು ಮತ್ತು ವರ್ತನೆಗಳ ವಿಧಾನವನ್ನು ಗುರುತಿಸುವುದಕ್ಕಾಗಿ ಸಹಾಯ ಮಾಡಲು ಈ ವರದಿಗಳನ್ನು ಸರಾಸರಿಯಾಗಿ ಬಳಸಲಾಗುತ್ತದೆ. 
 

ಈ ನೀತಿಯ ಉಲ್ಲಂಘನೆಗಳನ್ನು ನಾನು ಹೇಗೆ ವರದಿ ಮಾಡಬಹುದು?


ಆಪ್​ನಲ್ಲಿ

ಈ ಮುಂದಿನಂತೆ ಆಪ್​ನಲ್ಲಿ ಈ ವಿಷಯದ ವರದಿ ಮಾಡಬಹುದು:

 1. ಟ್ವೀಟ್ ವರದಿ ಮಾಡಿ ಅನ್ನು  ಐಕಾನ್​ನಿಂದ ಆಯ್ಕೆಮಾಡಿ.
 2. ಇದು ಅನುಮಾನಾಸ್ಪದ ಅಥವಾ ಸ್ಪ್ಯಾಮ್‌ ಆಗಿದೆಯೇ ಎಂದು ಆಯ್ಕೆ ಮಾಡಿ. 
 3. ಟ್ವೀಟ್‌ ಹೇಗೆ ಅನುಮಾನಾಸ್ಪದ ಅಥವಾ ಸ್ಪ್ಯಾಮ್‌ ಅನ್ನು ಹರಡುತ್ತಿದೆ ಎಂಬುದಾಗಿ ಉತ್ತಮವಾಗಿ ವಿವರಿಸುವ ಆಯ್ಕೆಯನ್ನು ಆರಿಸಿ.
 4. ನಿಮ್ಮ ವರದಿಯನ್ನು ಸಲ್ಲಿಸಿ.
   

ಡೆಸ್ಕ್​ಟಾಪ್

ಈ ಮುಂದಿನಂತೆ ಡೆಸ್ಕ್​ಟಾಪ್​ನಲ್ಲಿ ಈ ವಿಷಯವನ್ನು ವರದಿ ಮಾಡಬಹುದು:

 1. ಟ್ವೀಟ್ ವರದಿ ಮಾಡಿ ಅನ್ನು  ಐಕಾನ್​ನಿಂದ ಆಯ್ಕೆಮಾಡಿ.
 2. ಇದು ಅನುಮಾನಾಸ್ಪದ ಅಥವಾ ಸ್ಪ್ಯಾಮ್‌ ಆಗಿದೆಯೇ ಎಂದು ಆಯ್ಕೆ ಮಾಡಿ.
 3. ಟ್ವೀಟ್‌ ಹೇಗೆ ಅನುಮಾನಾಸ್ಪದ ಅಥವಾ ಸ್ಪ್ಯಾಮ್‌ ಅನ್ನು ಹರಡುತ್ತಿದೆ ಎಂಬುದಾಗಿ ಉತ್ತಮವಾಗಿ ವಿವರಿಸುವ ಆಯ್ಕೆಯನ್ನು ಆರಿಸಿ.
 4. ನಿಮ್ಮ ವರದಿಯನ್ನು ಸಲ್ಲಿಸಿ.

ವರದಿ ನಮೂನೆ

Twitter ನಲ್ಲಿ ನಾನು ಸ್ಪ್ಯಾಮ್‌ ವರದಿ ಮಾಡಲು ಬಯಸುತ್ತೇನೆ ಆಯ್ಕೆಯನ್ನು ಆರಿಸುವ ಮೂಲಕ ನಮ್ಮ ಸ್ಪ್ಯಾಮ್‌ ವರದಿ ಮಾಡುವಿಕೆ ನಮೂನೆಯನ್ನು ಬಳಸಿ ಮರುಪರಿಶೀಲನೆಗಾಗಿ ನೀವು ಈ ಕಂಟೆಂಟ್‌ ಅನ್ನೂ ವರದಿ ಮಾಡಬಹುದು.

ಈ ನೀತಿಯನ್ನು ನೀವು ಉಲ್ಲಂಘಿಸಿದರೆ ಏನಾಗುತ್ತದೆ?


ಉಲ್ಲಂಘನೆಯ ತೀವ್ರತೆ ಹಾಗೂ ಉಲ್ಲಂಘನೆಗಳ ಹಿಂದಿನ ಇತಿಹಾಸದ ಮೇಲೆ ಈ ನೀತಿಯ ಉಲ್ಲಂಘನೆಯ ಪರಿಣಾಮಗಳು ಅವಲಂಬಿಸಿರುತ್ತವೆ. ನಾವು ಗುರುತಿಸಿದ ಸ್ಪ್ಯಾಮ್ ಚಟುವಟಿಕೆಯ ವಿಧದ ಮೂಲಕವೂ ನಮ್ಮ ಕ್ರಮದ ಮಾಹಿತಿ ನೀಡಲಾಗಿದೆ. ನಾವು ಗುರುತಿಸಿದ ಸ್ಪ್ಯಾಮ್ ಚಟುವಟಿಕೆಯ ವಿಧದ ಮೂಲಕವೂ ನಮ್ಮ ಕ್ರಮದ ಮಾಹಿತಿ ನೀಡಲಾಗಿದೆ.
 

ಸ್ಪ್ಯಾಮ್‌ ವಿರೋಧಿ ಸವಾಲುಗಳು

ಚಟುವಟಿಕೆಯ ಅನುಮಾನಾಸ್ಪದ ಹಂತವನ್ನು ನಾವು ಗುರುತಿಸಿದಾಗ, ಖಾತೆಗಳನ್ನು ನಿರ್ಬಂಧಿಸಬಹುದು ಮತ್ತು ಹೆಚ್ಚುವರಿ ಮಾಹಿತಿಯನ್ನು ಒದಗಿಸಲು (ಉದಾ., ಫೋನ್‌ ಸಂಖ್ಯೆ) ಅಥವಾ ರಿಕ್ಯಾಪ್ಚಾ ಪರಿಹರಿಸಲು ಸೂಚಿಸಬಹುದು. 
 

URL ‌ಗಳನ್ನು ನಿರಾಕರಣೆ ಪಟ್ಟಿಗೆ ಸೇರಿಸುವುದು

ಅಸುರಕ್ಷಿತ ಎಂದು ನಾವು ಭಾವಿಸುವ URL ‌ಗಳನ್ನು ನಿರಾಕರಣೆ ಪಟ್ಟಿಗೆ ಸೇರಿಸುತ್ತೇವೆ ಅಥವಾ ಎಚ್ಚರಿಕೆಗಳನ್ನು ನೀಡುತ್ತೇವೆ. ನಿಮ್ಮ ಯುಆರ್‌ಎಲ್‌ ಅನ್ನು ನಾವು ತಪ್ಪಾಗಿ ಅಸುರಕ್ಷಿತ ಎಂದು ಗುರುತಿಸಿದ್ದರೆ, ಮೇಲ್ಮನವಿ ಸಲ್ಲಿಸುವುದು ಹೇಗೆ ಎಂಬುದೂ ಸೇರಿದಂತೆ ಅಸುರಕ್ಷಿತ ಲಿಂಕ್​ಗಳ ಬಗ್ಗೆ ಇನ್ನಷ್ಟು ಓದಿ.
 

ಟ್ವೀಟ್‌ ಅಳಿಸುವುದು ಮತ್ತು ತಾತ್ಕಾಲಿಕ ಖಾತೆ ನಿರ್ಬಂಧಗಳು

 • ಪ್ಲಾಟ್‌ಫಾರಂ ದುರ್ಬಳಕೆ ಅಥವಾ ಸ್ಪ್ಯಾಮ್ ನಿಂದನೆಯು ಏಕೈಕ ಘಟನೆಯಾಗಿದ್ದರೆ ಅಥವಾ ಮೊದಲ ಅಪರಾಧವಾಗಿದ್ದರೆ, ಒಂದು ಅಥವಾ ಹೆಚ್ಚು ಟ್ವೀಟ್‌ಗಳನ್ನು ಅಳಿಸುವ ಅಗತ್ಯದಿಂದ ತಾತ್ಕಾಲಿಕವಾಗಿ ಖಾತೆ(ಗಳನ್ನು) ನಿರ್ಬಂಧಿಸುವವರೆಗೆ ಹಲವು ಕ್ರಮಗಳನ್ನು ನಾವು ತೆಗೆದುಕೊಳ್ಳಬಹುದು. ನಂತರ ಯಾವುದೇ ಪ್ಲಾಟ್‌ಫಾರಂ ದುರ್ಬಳಕೆ ಅಪರಾಧಗಳು ನಡೆದರೆ ಶಾಶ್ವತ ಅಮಾನತಿಗೆ ಕಾರಣವಾಗುತ್ತದೆ.
 • ಹಲವು ಖಾತೆಗಳನ್ನು ಕೇಂದ್ರವಾಗಿಸಿಕೊಂಡು ಉಲ್ಲಂಘನೆ ನಡೆದ ಪ್ರಕರಣದಲ್ಲಿ, ನೀವು ಒಂದು ಖಾತೆಯನ್ನು ಇಟ್ಟುಕೊಳ್ಳಲು ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಉಳಿದ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗುತ್ತದೆ.

ಶಾಶ್ವತ ಅಮಾನತು

ತೀವ್ರ ಉಲ್ಲಂಘನೆಗಳಿಗೆ, ಮೊದಲ ಬಾರಿ ಗುರುತಿಸಿದಾಗಲೇ ಖಾತೆಗಳನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗುತ್ತದೆ. ತೀವ್ರ ಉಲ್ಲಂಘನೆಗಳ ಉದಾಹರಣೆಗಳು ಇವುಗಳನ್ನು ಒಳಗೊಂಡಿವೆ:

 • ಈ ಮೇಲೆ ವಿವರಿಸಿದ ನೀತಿಗಳಿಗೆ ಬಹುತೇಕ ವರ್ತನೆಗಳು ಉಲ್ಲಂಘಿಸುವಂತಿರುವ ಖಾತೆಗಳನ್ನು ನಿರ್ವಹಿಸುವುದು;
 • ಚುನಾವಣೆಗಳ ಪ್ರಾಮಾಣಿಕತೆಯನ್ನು ಬುಡಮೇಲು ಮಾಡಲು ಈ ಪುಟದಲ್ಲಿ ವಿವರಿಸಲಾದ ಯಾವುದೇ ತಂತ್ರಗಳನ್ನು ಬಳಸುವುದು;
 • ಖಾತೆಗಳನ್ನು ಖರೀದಿಸುವುದು/ಮಾರಾಟ ಮಾಡುವುದು;
 • ಅಮಾನತುಗೊಂಡ ಖಾತೆಯ ಬದಲಿಗೆ ಅಥವಾ ಅನುಕರಿಸುವ ಖಾತೆಗಳನ್ನು ರಚಿಸುವುದು; ಮತ್ತು
 • Twitter ನಿಯಮಗಳು ಉಲ್ಲಂಘಿಸಿದೆ ಎಂದು Twitter ಗೆ ವಿಶ್ವಾಸಾರ್ಹವಾಗಿ ತಿಳಿದುಬರುವ ಕಾರ್ಯನಿರ್ವಹಿಸುವ ಖಾತೆಗಳನ್ನೂ ನಾವು ತೆಗೆದುಹಾಕಬಹುದು.

ದೋಷಯುಕ್ತವಾಗಿ ನಿಮ್ಮ ಖಾತೆಯನ್ನು ನಿರ್ಬಂಧಿಸಲಾಗಿದೆ ಅಥವಾ ಅಮಾನತು ಮಾಡಲಾಗಿದೆ ಎಂದು ನೀವು ಭಾವಿಸಿದರೆ, ನೀವು ಮೇಲ್ಮನವಿಯನ್ನು ಸಲ್ಲಿಸಬಹುದು.

ಹೆಚ್ಚುವರಿ ಸಂಪನ್ಮೂಲಗಳು


ಡೆವಲಪರ್‌ಗಳಿಗೆ ನಮ್ಮ ಸ್ವಯಂಚಾಲನೆ ನಿಯಮಗಳು, ನಮ್ಮ ಚುನಾವಣೆ ಸಮಗ್ರತೆ ಪ್ರಯತ್ನಗಳು, ನಮ್ಮ ಹಣಕಾಸು ಮೋಸದ ನೀತಿ, ನಮ್ಮ ಹ್ಯಾಕ್ ಮಾಡಿದ ಸಾಮಗ್ರಿಗಳ ನೀತಿ, ಸಮನ್ವಯದ ಅಪಾಯಕಾರಿ ಚಟುವಟಿಕೆಗೆ ನಮ್ಮ ಅನುಸಂಧಾನ ಮತ್ತು ಪ್ರಚಾರ ಮತ್ತು ಸ್ಪರ್ಧೆಗಳಿಗಾಗಿ ನಮ್ಮ ನೀತಿಗಳ ಕುರಿತು ಇನ್ನಷ್ಟು ತಿಳಿಯಿರಿ.

ಜಾರಿ ಆಯ್ಕೆಗಳ ನಮ್ಮ ಶ್ರೇಣಿ ಮತ್ತು ನೀತಿ ಅಭಿವೃದ್ಧಿ ಮತ್ತು ಜಾರಿ ಕುರಿತು ನಮ್ಮ ಕಾರ್ಯನೀತಿ ಕುರಿತು ಇನ್ನಷ್ಟು ತಿಳಿಯಿರಿ.

ಈ ಲೇಖನ ಹಂಚಿಕೊಳ್ಳಿ