ಖಾಸಗಿ ಮಾಹಿತಿ ಮತ್ತು ಮಾಧ್ಯಮ ನೀತಿ

ಮುನ್ನೋಟ
 

ನವೆಂಬರ್ 2021

ಇತರ ವ್ಯಕ್ತಿ ಅಭಿವ್ಯಕ್ತಿಪೂರ್ವಕ ಅಧಿಕಾರ ಮತ್ತು ಅನುಮತಿಯಿಲ್ಲದೇ ಅವರ ಖಾಸಗಿ ಮಾಹಿತಿಯನ್ನು ನೀವು ಪ್ರಕಟಿಸಬಾರದು ಅಥವಾ ಪೋಸ್ಟ್ ಮಾಡಬಾರದು. ಖಾಸಗಿ ಮಾಹಿತಿ ಬಹಿರಂಗಪಡಿಸುವ ಬೆದರಿಕೆ ಒಡ್ಡುವುದು ಅಥವಾ ಹಾಗೆ ಮಾಡುವಂತೆ ಪ್ರೋತ್ಸಾಹಿಸುವುದನ್ನೂ ನಾವು ನಿಷೇಧಿಸುತ್ತೇವೆ.

ಇದರ ಜೊತೆಗೆ, ಇತರರ ಸಮ್ಮತಿ ಇಲ್ಲದೇ ಖಾಸಗಿ ವ್ಯಕ್ತಿಗಳ ಚಿತ್ರಗಳು ಅಥವಾ ವೀಡಿಯೋಗಳಂತಹ ಖಾಸಗಿ ಮಾಧ್ಯಮವನ್ನು ನೀವು ಹಂಚಿಕೊಳ್ಳಬಾರದು. ಆದಾಗ್ಯೂ, ಸುದ್ದಿ ಮೌಲ್ಯದ ಈವೆಂಟ್ ಅಥವಾ ಸಾರ್ವಜನಿಕ ಹಿತಾಸಕ್ತಿಯ ವಿಷಯಗಳು ಅಥವಾ ಘಟನೆಗಳನ್ನು ಸಾರ್ವಜನಿಕಗೊಳಿಸುವುದಕ್ಕಾಗಿ ಸಾರ್ವಜನಿಕ ವ್ಯಕ್ತಿಗಳಲ್ಲದ ಖಾಸಗಿ ವ್ಯಕ್ತಿಗಳ ಚಿತ್ರಗಳು ಅಥವಾ ವೀಡಿಯೋಗಳನ್ನು ಬಳಕೆದಾರರು ಹಂಚಿಕೊಳ್ಳುವ ಸನ್ನಿವೇಶಗಳು ಇರುತ್ತವೆ ಎಂದು ನಾವು ಗುರುತಿಸಿದ್ದೇವೆ. ಇಂತಹ ಪ್ರಕರಣಗಳಲ್ಲಿ, ಪ್ಲಾಟ್‌ಫಾರಂನಲ್ಲಿ ಮಾಧ್ಯಮ ಇರುವುದಕ್ಕೆ ನಾವು ಅನುವು ಮಾಡಬಹುದು. 

ಇತರರ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳುವುದು:

ಇತರರ ಅನುಮತಿ ಇಲ್ಲದೇ ಅವರ ಖಾಸಗಿ ಮಾಹಿತಿಯನ್ನು ಆನ್​ಲೈನ್​ನಲ್ಲಿ ಹಂಚಿಕೊಳ್ಳುವುದನ್ನು ಕೆಲವು ಬಾರಿ ಡಾಕ್ಸಿಂಗ್ ಎಂದು ಕರೆಯಲಾಗುತ್ತಿದ್ದು, ಇದು ಅವರ ಗೌಪ್ಯತೆ ಮತ್ತು Twitter ನಿಯಮಗಳ ಉಲ್ಲಂಘನೆಯಾಗಿದೆ. ಖಾಸಗಿ ಮಾಹಿತಿ ಹಂಚಿಕೊಳ್ಳುವುದರಿಂದ ಬಾಧಿತರಿಗೆ ಗಂಭೀರ ಭದ್ರತೆ ಮತ್ತು ಸುರಕ್ಷತೆ ಅಪಾಯ ಉಂಟಾಗುತ್ತದೆ ಮತ್ತು ಇದು ದೈಹಿಕ, ಮಾನಸಿಕ ಮತ್ತು ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಬಹುದಾಗಿದೆ.

ಈ ಪಾಲಿಸಿ ಅಡಿಯಲ್ಲಿ ವರದಿಗಳನ್ನು ವೀಕ್ಷಿಸುವಾಗ, ನಾವು ಹಲವು ಸಂಗತಿಗಳನ್ನು ಪರಿಗಣಿಸುತ್ತೇವೆ, ಅವುಗಳ ಪೈಕಿ ಕೆಲವು:

ಯಾವ ರೀತಿಯ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ?

 

ಇದನ್ನು ನಾವು ಪರಿಗಣಿಸುತ್ತೇವೆ. ಏಕೆಂದರೆ ಅನುಮತಿ ಇಲ್ಲದೇ ಹಂಚಿಕೊಂಡರೆ ಕೆಲವು ವಿಧದ ಖಾಸಗಿ ಮಾಹಿತಿಯು ಇತರೆಗಿಂತ ಹೆಚ್ಚಿನ ಅಪಾಯಗಳನ್ನು ಹೊಂದಿರುತ್ತವೆ. ವ್ಯಕ್ತಿಯ ಮಾಹಿತಿಯನ್ನು ಹಂಚಿಕೊಂಡಿದ್ದರಿಂದಾಗಿ ಉಂಟಾಗಬಹುದಾದ ಸಂಭಾವ್ಯ ದೈಹಿಕ ಹಾನಿಯನ್ನು ತಡೆಯುವುದು ನಮ್ಮ ಪ್ರಾಥಮಿಕ ಗುರಿಯಾಗಿದೆ. ಹೀಗಾಗಿ ಭೌತಿಕ ಸ್ಥಳ ಮತ್ತು ಫೋನ್ ನಂಬರ್‌ಗಳಂತಹ ಮಾಹಿತಿಯನ್ನು ಇತರ ವಿಧದ ಮಾಹಿತಿಗಿಂತ ಹೆಚ್ಚು ಅಪಾಯಕರ ಎಂದು ನಾವು ಪರಿಗಣಿಸುತ್ತೇವೆ. 

ಮಾಹಿತಿಯನ್ನು ಯಾರು ಹಂಚಿಕೊಳ್ಳುತ್ತಿದ್ದಾರೆ?

ವರದಿ ಮಾಡಿದ ಮಾಹಿತಿಯನ್ನು ಯಾರು ಹಂಚಿಕೊಳ್ಳುತ್ತಿದ್ದಾರೆ ಅಥವಾ ಸಂಬಂಧಿಸಿದ ವ್ಯಕ್ತಿಯ ಸಮ್ಮತಿಯನ್ನು ಅವರು ಹೊಂದಿದ್ದಾರೆಯೇ ಎಂಬುದನ್ನು ಸಹ ನಾವು ಪರಿಗಣಿಸುತ್ತೇವೆ. ಜನರು ತಮ್ಮ ವೈಯಕ್ತಿಕ ಸಂಪರ್ಕ ಮಾಹಿತಿಯ ಕೆಲವು ರೂಪಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಬಯಸುವ ಸಮಯಗಳಿರುತ್ತವೆ ಎಂಬುದು ನಮಗೆ ತಿಳಿದಿರುವ ಕಾರಣದಿಂದ ಹೀಗೆ ಮಾಡುತ್ತೇವೆ. ಉದಾಹರಣೆಗೆ, ವೃತ್ತಿಪರ ನೆಟ್‌ವರ್ಕಿಂಗ್‌ಗಾಗಿ ಅಥವಾ ಸಾಮಾಜಿಕ ಕಾರ್ಯಕ್ರಮಗಳಿಗಾಗಿ ಸಹಕಾರಕ್ಕಾಗಿ ವೈಯಕ್ತಿಕ ಫೋನ್ ನಂಬರ್ ಅಥವಾ ಇಮೇಲ್ ಅನ್ನು ಹಂಚಿಕೊಳ್ಳುವುದು ಅಥವಾ ನೈಸರ್ಗಿಕ ವಿಪತ್ತಿನ ನಂತರ ಸಹಾಯಕ್ಕಾಗಿ ಇತರರ ಮನೆಯ ವಿಳಾಸವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದು. 
 

ಈ ಮಾಹಿತಿ ಆನ್​ಲೈನ್​ನಲ್ಲಿ ಬೇರೆಡೆ ಲಭ್ಯವಿದೆಯೇ?

ವರದಿ ಮಾಡಿದ ಮಾಹಿತಿಯನ್ನು Twitter ಹಂಚಿಕೊಳ್ಳುವುದಕ್ಕಿಂತ ಮೊದಲು ಇತರೆಡೆ ಹಂಚಿಕೊಂಡಿದ್ದರೆ, ಅಂದರೆ ತಮ್ಮ ವೈಯಕ್ತಿಕ ಫೋನ್​ಸಂಖ್ಯೆಯನ್ನು ಸಾರ್ವಜನಿಕವಾಗಿ ಲಭ್ಯ ವೆಬ್​ಸೈಟ್​ನಲ್ಲಿ ಹಂಚಿಕೊಂಡಿದ್ದರೆ, ಮಾಲೀಕರೇ ಇದನ್ನು ಸಾರ್ವಜನಿಕವಾಗಿ ಲಭ್ಯವಾಗಿಸಿದ್ದರಿಂದ ನಾವು ಈ ಮಾಹಿತಿಯನ್ನು ಖಾಸಗಿ ಎಂದು ಪರಿಗಣಿಸದಿರಬಹುದು. ಗಮನಿಸಿ: ಸಾರ್ವಜನಿಕವಾಗಿ ಲಭ್ಯವಿದ್ದರೂ ಮನೆಯ ವಿಳಾಸ ಹಂಚಿಕೊಳ್ಳುವುದರಿಂದ ಸಂಭಾವ್ಯ ದೈಹಿಕ ಹಾನಿ ಉಂಟಾಗುವ ಸಾಧ್ಯತೆ ಇರುವುರಿಂದ, ಇದರ ವಿರುದ್ಧ ನಾವು ಕ್ರಮ ತೆಗೆದುಕೊಳ್ಳಬಹುದಾಗಿದೆ. 
 

ಮಾಹಿತಿಯನ್ನು ಏಕೆ ಹಂಚಿಕೊಳ್ಳಲಾಗುತ್ತಿದೆ?

ಮಾಹಿತಿ ಹಂಚಿಕೊಳ್ಳುವ ವ್ಯಕ್ತಿಯ ಉದ್ದೇಶವನ್ನೂ ನಾವು ಪರಿಗಣಿಸುತ್ತೇವೆ. ಉದಾಹರಣೆಗೆ, ಬೈಗುಳದ ಉದ್ದೇಶದಿಂದ ಅಥವಾ ದೌರ್ಜನ್ಯಕ್ಕಾಗಿ ಅಥವಾ ಇತರ ವ್ಯಕ್ತಿಯ ಮೇಲೆ ದೌರ್ಜನ್ಯ ಎಸಗಲು ಇತರರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಯಾರಾದರೂ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ನಾವು ಭಾವಿಸಿದರೆ, ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಇನ್ನೊಂದೆಡೆ, ಹಿಂಸಾತ್ಮಕ ಘಟನೆಯ ನಂತರದಂತಹ ವಿಪತ್ತಿನ ಸನ್ನಿವೇಶದಲ್ಲಿ ಇತರರಿಗೆ ನೆರವಾಗಲು ಮಾಹಿತಿಯನ್ನು ಹಂಚಿಕೊಂಡಿದ್ದರೆ ನಾವು ಕ್ರಮ ತೆಗೆದುಕೊಳ್ಳದೇ ಇರಬಹುದು. 


ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳುವುದು:

ಚಿತ್ರಗಳನ್ನು ಪೋಸ್ಟ್ ಮಾಡುವುದು Twitter ದಲ್ಲಿ ನಮ್ಮ ಬಳಕೆದಾರರ ಅನುಭವದ ಪ್ರಮುಖ ಭಾಗವಾಗಿದೆ. ಮಾಧ್ಯಮದ ಪ್ರತ್ಯೇಕ ತುಣುಕಿನಲ್ಲಿ ಗೌಪ್ಯತೆಯ ಸಕಾರಣ ನಿರೀಕ್ಷೆಯನ್ನು ವ್ಯಕ್ತಿಗಳು ಹೊಂದಿರುವ ಸಂದರ್ಭದಲ್ಲಿ, ಅದನ್ನು ಹಂಚಿಕೊಳ್ಳಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತದೆ ಎಂದು ನಾವು ನಂಬಿದ್ದೇವೆ. ಇಂತಹ ಮಾಧ್ಯಮವನ್ನು ಹಂಚಿಕೊಳ್ಳುವುದರಿಂದ ಬಳಕೆದಾರರ ಗೌಪ್ಯತೆಯನ್ನು ಸಂಭಾವ್ಯವಾಗಿ ಉಲ್ಲಂಘಿಸಬಹುದು ಮತ್ತು ಭಾವನಾತ್ಮಕ ಅಥವಾ ಭೌತಿಕ ಅಪಾಯಕ್ಕೆ ಕಾರಣ ಉಂಟಾಗಬಹುದು. ಮಾಧ್ಯಮ ಹಂಚಿಕೊಳ್ಳಲು ನಾವು ಸಮ್ಮತಿ ನೀಡಿಲ್ಲ ಎಂದು ವ್ಯಕ್ತಿಗಳಿಂದ ಅಥವಾ ಅವರ ಅಧಿಕೃತ ಪ್ರತಿನಿಧಿಗಳಿಂದ ನಾವು ಸೂಚನೆ ಪಡೆದಾಗ, ಮಾಧ್ಯಮವನ್ನು ನಾವು ತೆಗೆದುಹಾಕುತ್ತೇವೆ. ಈ ನೀತಿಯು ಸಾರ್ವಜನಿಕ ವ್ಯಕ್ತಿಗಳಿಗೆ ಅನ್ವಯವಾಗುವುದಿಲ್ಲ. 

ಯಾವ ಸನ್ನಿವೇಶವು ಈ ನೀತಿಯ ಉಲ್ಲಂಘನೆಯಾಗುತ್ತದೆ?
 

ಈ ನೀತಿ ಅಡಿಯಲ್ಲಿ, ಸಂಬಂಧಿಸಿದ ವ್ಯಕ್ತಿ ಅನುಮತಿ ಇಲ್ಲದೇ ಈ ಮುಂದಿನ ವಿಧದ ಖಾಸಗಿ ಮಾಹಿತಿಯನ್ನು ನೀವು ಹಂಚಿಕೊಳ್ಳುವಂತಿಲ್ಲ:

 • ಖಾಸಗಿ ಎಂದು ಪರಿಗಣಿಸಲಾದ ರಸ್ತೆ ವಿಳಾಸಗಳು, ಜಿಪಿಎಸ್​ಕೋಆರ್ಡಿನೇಟ್​ಗಳು ಅಥವಾ ಸ್ಥಳಕ್ಕೆ ಸಂಬಂಧಿಸಿದ ಇತರ ಗುರುತಿಸಬಹುದಾದ ಮಾಹಿತಿ ಸೇರಿದಂತೆ ಮನೆ ವಿಳಾಸ ಅಥವಾ ಭೌತಿಕ ಸ್ಥಳದ ಮಾಹಿತಿ;
 • ಸರ್ಕಾರ ವಿತರಿಸಿದ ಐಡಿಗಳು ಮತ್ತು ಸಾಮಾಜಿಕ ಭದ್ರತೆ ಅಥವಾ ಇತರೆ ರಾಷ್ಟ್ರೀಯ ಗುರುತು ಸಂಖ್ಯೆಗಳೂ ಸೇರಿದಂತೆ ಗುರುತು ದಾಖಲೆಗಳು - ಗಮನಿಸಿ: ಈ ಮಾಹಿತಿ ಖಾಸಗಿ ಎಂದು ಪರಿಗಣಿಸದ ವಲಯಗಳಲ್ಲಿ ನಾವು ಸೀಮಿತ ವಿನಾಯಿತಿಗಳನ್ನು ನೀಡಬಹುದು;
 • ಸಾರ್ವಜನಿಕವಲ್ಲದ ವೈಯಕ್ತಿಕ ಫೋನ್ ಸಂಖ್ಯೆಗಳು ಅಥವಾ ಇಮೇಲ್​ವಿಳಾಸಗಳೂ ಸೇರಿದಂತೆ ಸಂಪರ್ಕ ಮಾಹಿತಿ; 
 • ಬ್ಯಾಂಕ್ ಖಾತೆ ಮತ್ತು ಕ್ರೆಡಿಟ್ ಕಾರ್ಡ್ ವಿವರಗಳೂ ಸೇರಿದಂತೆ ಹಣಕಾಸು ಖಾತೆ ಮಾಹಿತಿ; ಮತ್ತು
 • ಬಯೋಮೆಟ್ರಿಕ್ ಡೇಟಾ ಅಥವಾ ವೈದ್ಯಕೀಯ ದಾಖಲೆಗಳೂ ಸೇರಿದಂತೆ ಇತರ ಖಾಸಗಿ ಮಾಹಿತಿ.
 • ಪ್ರದರ್ಶಿತವಾಗಿರುವ ವ್ಯಕ್ತಿ(ಗಳ) ಅನುಮತಿ ಇಲ್ಲದೇ ಖಾಸಗಿ ವ್ಯಕ್ತಿಗಳ ಮಾಧ್ಯಮ. 

ಈ ಮುಂದಿನ ವರ್ತನೆಗಳನ್ನೂ ಅನುಮತಿಸಲಾಗಿಲ್ಲ: 

 • ಇತರರ ಖಾಸಗಿ ಮಾಹಿತಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವ ಬೆದರಿಕೆ ಒಡ್ಡುವುದು;
 • ಇತರರ ಖಾಸಗಿ ಮಾಹಿತಿಯನ್ನು ಅವರ ಸಮ್ಮತಿ ಇಲ್ಲದೆ ಪ್ರವೇಶ ಪಡೆಯಲು ಅಥವಾ ಹ್ಯಾಕ್ ಮಾಡಲು ವ್ಯಕ್ತಿಗಳಿಗೆ ಅನುವು ಮಾಡುವ ಮಾಹಿತಿಯನ್ನು ಹಂಚಿಕೊಳ್ಳುವುದು, ಅಂದರೆ ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳ ಸೈನ್ ಇನ್ ವಿವರಗಳು;
 • ಇತರರ ಖಾಸಗಿ ಮಾಹಿತಿಯನ್ನು ಪ್ರಕಟಿಸಲು ಪ್ರತಿಯಾಗಿ ಬಹುಮಾನ ಅಥವಾ ಹಣಕಾಸು ಪುರಸ್ಕಾರವನ್ನು ನೀಡುವುದು ಅಥವಾ ಕೇಳುವುದು;
 • ಇತರರ ಖಾಸಗಿ ಮಾಹಿತಿಯನ್ನು ಪ್ರಕಟಿಸಲು ಪ್ರತಿಯಾಗಿ ಕೊಡುಗೆ ಅಥವಾ ಹಣಕಾಸು ಪುರಸ್ಕಾರವನ್ನು ನೀಡುವುದು ಅಥವಾ ಕೇಳುವುದು;
   

ಯಾವುದು ಈ ನೀತಿಯ ಉಲ್ಲಂಘನೆಯಾಗುವುದಿಲ್ಲ?
 

ಈ ಮುಂದಿನವು ಈ ನೀತಿಯ ಉಲ್ಲಂಘನೆಯಾಗುವುದಿಲ್ಲ:

 • ತಮ್ಮದೇ ಖಾಸಗಿ ಮಾಹಿತಿಯನ್ನು ಜನರು ಹಂಚಿಕೊಳ್ಳುವುದು;
 • ನಿಂದನೆಯಲ್ಲದ ರೀತಿಯಲ್ಲಿ ಸಾರ್ವಜನಿಕವಾಗಿ ಇತರೆಡೆ ಲಭ್ಯವಿರುವ ಮಾಹಿತಿಯನ್ನು ಹಂಚಿಕೊಳ್ಳುವುದು; ಮತ್ತು
 • ಇವುಗಳೂ ಸೇರಿದಂತೆ ನಾವು ಖಾಸಗಿ ಎಂದು ಪರಿಗಣಿಸದ ಮಾಹಿತಿಯನ್ನು ಹಂಚಿಕೊಳ್ಳುವುದು:
  • ಹೆಸರು;
  • ಜನ್ಮದಿನಾಂಕ ಅಥವಾ ವಯಸ್ಸು;
  • ಶಿಕ್ಷಣ ಅಥವಾ ಉದ್ಯೋಗದ ಸ್ಥಳ;
  • ಸಾರ್ವಜನಿಕವಾಗಿ ಲಭ್ಯವಿರುವ ವಾಣಿಜ್ಯ ಸ್ವತ್ತು ಅಥವಾ ವಹಿವಾಟಿನ ಸ್ಥಳಕ್ಕೆ ಸಂಬಂಧಿಸಿದ ಸ್ಥಳೀಯ ಮಾಹಿತಿ;
  • ಭೌತಿಕ ಚಹರೆಯ ವಿವರಣೆಗಳು;
  • ಗಾಸಿಪ್, ಊಹಾಪೋಹಗಳು, ಆರೋಪಗಳು ಮತ್ತು ಆಪಾದನೆಗಳು; ಮತ್ತು
  • ಇತರ ಪ್ಲಾಟ್​ಫಾರಂಗಳ ಪಠ್ಯ ಸಂದೇಶಗಳು ಅಥವಾ ಸಂದೇಶಗಳ ಸ್ಕ್ರೀನ್​ಶಾಟ್​ಗಳು (ಫೋನ್​ಸಂಖ್ಯೆಯಂತಹ ಖಾಸಗಿ ಮಾಹಿತಿಯನ್ನು ಅವುಗಳು ಒಳಗೊಂಡಿರದ ಹೊರತು).
    

ಮಾಧ್ಯಮಕ್ಕೆ, ಈ ಮುಂದಿನವು ಈ ನೀತಿಯ ಉಲ್ಲಂಘನೆಯಾಗುವುದಿಲ್ಲ:

 • ಸಾರ್ವಜನಿಕವಾಗಿ ಲಭ್ಯವಿರುವ ಅಥವಾ ಮುಖ್ಯವಾಹಿನಿ ಮಾಧ್ಯಮವು ಪ್ರಸಾರ ಮಾಡಿರುವ ಮಾಧ್ಯಮ;
 • ಸಾರ್ವಜನಿಕ ಸಂವಹನಕ್ಕೆ ಮೌಲ್ಯ ಒದಗಿಸುವ ಮಾಧ್ಯಮ ಮತ್ತು ಅದರ ಜೊತೆಗಿನ ಟ್ವೀಟ್ ಪಠ್ಯ ಅಥವಾ ಸಾರ್ವನಿಕ ಹಿತಾಸಕ್ತಿಯಲ್ಲಿ ಹಂಚಿಕೊಂಡಿರುವುದು;
 • ಬೆಳವಣಿಗೆಯಾಗುತ್ತಿರುವ ಘಟನೆಗಳಿಂದ ಸಾಕ್ಷಿಗಳ ದೃಷ್ಟಿಕೋನ ಅಥವಾ ಸ್ಥಳದಿಂದ ಮಾಹಿತಿಯನ್ನು ಒಳಗೊಂಡಿರುವುದು; 
 • ಮಾಧ್ಯಮದ ವಿಷಯವು ಸಾರ್ವಜನಿಕ ವ್ಯಕ್ತಿಯಾಗಿರುವುದು. 

ಈ ನೀತಿಯ ಉಲ್ಲಂಘನೆಗಳನ್ನು ಯಾರು ವರದಿ ಮಾಡಬಹುದು?
 

ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳುವುದು

ಸ್ಪಷ್ಟವಾಗಿ ನಿಂದನೀಯ ರೀತಿಯಲ್ಲಿ ಹಂಚಿಕೊಂಡ ಖಾಸಗಿ ಮಾಹಿತಿಯನ್ನು ಯಾರಾದರೂ (Twitter ಖಾತೆ ಹೊಂದಿರಲಿ ಅಥವಾ ಹೊಂದಿಲ್ಲದಿರಲಿ) ವರದಿ ಮಾಡಬಹುದು. ಸ್ಪಷ್ಟವಾಗಿ ನಿಂದನೀಯ ಉದ್ದೇಶದಿಂದ ಈ ಮಾಹಿತಿಯನ್ನು ಹಂಚಿಕೊಂಡಿಲ್ಲದಿರುವ ಪ್ರಸಂಗಗಳಲ್ಲಿ, ಜಾರಿ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೂ ಮೊದಲು ನಾವು ಈ ಮಾಹಿತಿಯ ಮಾಲೀಕರ (ಅಥವಾ ವಕೀಲರಂತಹ ದೃಢೀಕೃತ ಪ್ರತಿನಿಧಿ) ಅಭಿಪ್ರಾಯವನ್ನು ನೇರವಾಗಿ ಕೇಳಲು ಬಯಸುತ್ತೇವೆ. 


ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳುವುದು: 

ಖಾಸಗಿ ಮಾಧ್ಯಮವನ್ನು ವರದಿ ಮಾಡುವಾಗ, ತಮ್ಮ ಅನುಮತಿ ಇಲ್ಲದೇ ಚಿತ್ರ ಅಥವಾ ವೀಡಿಯೋವನ್ನು ಹಂಚಿಕೊಂಡಿರುವ ನಿರ್ಧಾರ ಮಾಡಲು ಮೊದಲ ವ್ಯಕ್ತಿ ವರದಿ ನಮಗೆ ಅಗತ್ಯವಿದೆ. ನಾವು ಇದರಿಂದ ವರದಿಗಳನ್ನು ಸಮ್ಮತಿಸುತ್ತೇವೆ: 

 1. ವರದಿ ಮಾಡಿದ ಮಾಧ್ಯಮದಲ್ಲಿ ಪ್ರದರ್ಶಿಸಲಾಗಿರುವ ವ್ಯಕ್ತಿಗಳು ಅಥವಾ
 2. ಅವರ ಅಧಿಕೃತ ಪ್ರತಿನಿಧಿಗಳಾಗಿರುವಂತಹ:
      ಎ.  ಪಾಲಕರು/ಕಾನೂನಾತ್ಮಕ ಪೋಷಕರು,
      ಬಿ.  ವಕೀಲರು ಅಥವಾ
      ಸಿ.  ಕಾನೂನು ಪ್ರತಿನಿಧಿ

ಈ ನೀತಿಯ ಉಲ್ಲಂಘನೆಗಳನ್ನು ನಾನು ಹೇಗೆ ವರದಿ ಮಾಡಬಹುದು?
 

ಆಪ್​ನಲ್ಲಿ

ಈ ಮುಂದಿನಂತೆ ಆಪ್​ನಲ್ಲಿ ಈ ವಿಷಯದ ಮರುಪರಿಶೀಲನೆಗಾಗಿ ವರದಿ ಮಾಡಬಹುದು:

 1. ಟ್ವೀಟ್ ವರದಿ ಮಾಡಿ ಅನ್ನು  ಐಕಾನ್​ನಿಂದ ಆಯ್ಕೆಮಾಡಿ.
 2. ಇದು ನಿಂದನೀಯ ಅಥವಾ ಅಪಾಯಕಾರಿ ಎಂದು ಆಯ್ಕೆ ಮಾಡಿ.
 3. ಖಾಸಗಿ ಮಾಹಿತಿಯನ್ನು ಒಳಗೊಂಡಿದೆ ಆಯ್ಕೆ ಮಾಡಿ.
 4. ನೀವು ವರದಿ ಮಾಡುತ್ತಿರುವ ಮಾಹಿತಿಯ ವಿಧವನ್ನು ಆಯ್ಕೆ ಮಾಡಿ.
 5. ನೀವು ವರದಿ ಮಾಡುತ್ತಿರುವ ಮಾಹಿತಿಯ ಮಾಲೀಕರು ಯಾರು ಎಂಬುದರ ಆಧಾರದ ಮೇಲೆ ಸೂಕ್ತ ಆಯ್ಕೆಯನ್ನು ಆರಿಸಿ.
 6. ಮರುಪರಿಶೀಲನೆಗಾಗಿ ವರದಿ ಮಾಡಲು ಗರಿಷ್ಠ 5 ಟ್ವೀಟ್​ಗಳನ್ನು ಆಯ್ಕೆ ಮಾಡಿ.
 7. ನಿಮ್ಮ ವರದಿಯನ್ನು ಸಲ್ಲಿಸಿ.
   

ಡೆಸ್ಕ್​ಟಾಪ್

ಈ ಮುಂದಿನಂತೆ ಡೆಸ್ಕ್​ಟಾಪ್​ನಲ್ಲಿ ಈ ವಿಷಯವನ್ನು ಮರುಪರಿಶೀಲನೆಗಾಗಿ ವರದಿ ಮಾಡಬಹುದು:

 1. ಟ್ವೀಟ್ ವರದಿ ಮಾಡಿ ಅನ್ನು  ಐಕಾನ್​ನಿಂದ ಆಯ್ಕೆಮಾಡಿ.
 2. ಇದು ನಿಂದನೀಯ ಅಥವಾ ಅಪಾಯಕಾರಿ ಎಂದು ಆಯ್ಕೆ ಮಾಡಿ.
 3. ಖಾಸಗಿ ಮಾಹಿತಿಯನ್ನು ಒಳಗೊಂಡಿದೆ ಆಯ್ಕೆ ಮಾಡಿ.
 4. ನೀವು ವರದಿ ಮಾಡುತ್ತಿರುವ ಮಾಹಿತಿಯ ವಿಧವನ್ನು ಆಯ್ಕೆ ಮಾಡಿ. 
 5. ನೀವು ವರದಿ ಮಾಡುತ್ತಿರುವ ಮಾಹಿತಿಯ ಮಾಲೀಕರು ಯಾರು ಎಂಬುದರ ಆಧಾರದ ಮೇಲೆ ಸೂಕ್ತ ಆಯ್ಕೆಯನ್ನು ಆರಿಸಿ.
 6. ಮರುಪರಿಶೀಲನೆಗಾಗಿ ವರದಿ ಮಾಡಲು ಗರಿಷ್ಠ 5 ಟ್ವೀಟ್​ಗಳನ್ನು ಆಯ್ಕೆ ಮಾಡಿ.
 7. ನಿಮ್ಮ ವರದಿಯನ್ನು ಸಲ್ಲಿಸಿ.

ನೀವು ವರದಿ ಮಾಡಲು ಬಯಸುವ ಖಾಸಗಿ ಮಾಹಿತಿಯ ವಿಧವನ್ನು ಆಯ್ಕೆ ಮಾಡುವ ಮೂಲಕ ನಮ್ಮ ಖಾಸಗಿ ಮಾಹಿತಿ ವರದಿ ನಮೂನೆ ಮೂಲಕ ಸಹ ಮರುಪರಿಶೀಲನೆಗೆ ಈ ವಿಷಯವನ್ನು ವರದಿ ಮಾಡಬಹುದು.

ಈ ನೀತಿಯನ್ನು ನೀವು ಉಲ್ಲಂಘಿಸಿದರೆ ಏನಾಗುತ್ತದೆ?
 


ಈ ನೀತಿಯ ಉಲ್ಲಂಘನೆಯ ದಂಡವನ್ನು ಗುರುತಿಸುವಾಗ, ಉಲ್ಲಂಘನೆಯ ತೀವ್ರತೆ ಮತ್ತು ಈ ಹಿಂದೆ ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ವ್ಯಕ್ತಿಯ ದಾಖಲೆಗಳು ಸೇರಿದಂತೆ, ಇದಕ್ಕೆ ಸೀಮಿತವಾಗಿಲ್ಲದಂತೆ ಹಲವು ಅಂಶಗಳನ್ನು ನಾವು ಪರಿಗಣಿಸುತ್ತೇವೆ. 

ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳುವುದು

 • ಖಾಸಗಿ ಮಾಹಿತಿಯನ್ನು (ಮನೆ ವಿಳಾಸ, ಗುರುತಿನ ದಾಖಲೆಗಳು ಇತ್ಯಾದಿಯಂತಹ) ಹಂಚಿಕೊಳ್ಳುವ ಮೂಲಕ ಈ ನೀತಿಯನ್ನು ಮೊದಲ ಬಾರಿ ನೀವು ಉಲ್ಲಂಘಿಸಿದರೆ, ಈ ವಿಷಯವನ್ನು ತೆಗೆದುಹಾಕಬೇಕೆಂದು ನಾವು ಸೂಚಿಸುತ್ತೇವೆ. ನೀವು ಪುನಃ ಟ್ವೀಟ್ ಮಾಡುವುದಕ್ಕೂ ಮುನ್ನ ನಿಮ್ಮ ಖಾತೆಯನ್ನು ಸಹ ನಾವು ತಾತ್ಕಾಲಿಕವಾಗಿ ಲಾಕ್ ಮಾಡುತ್ತೇವೆ. ಮೊದಲ ಎಚ್ಚರಿಕೆಯ ನಂತರ ನೀವು ಖಾಸಗಿ ಮಾಹಿತಿಯನ್ನು ಪುನಃ ಪೋಸ್ಟ್ ಮಾಡುವ ಮೂಲಕ ಈ ನೀತಿಯನ್ನು ಉಲ್ಲಂಘಿಸಿದರೆ, ನಿಮ್ಮ ಖಾತೆಯನ್ನು ಶಾಶ್ವತವಾಗಿ ಅಮಾನತು ಮಾಡಲಾಗುತ್ತದೆ. 

ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳುವುದು: 

 • ವ್ಯಕ್ತಿಯ ಸಮ್ಮತಿ ಇಲ್ಲದೇ ಖಾಸಗಿ ಮಾಧ್ಯಮವನ್ನು ಹಂಚಿಕೊಳ್ಳುವ ಮೂಲಕ ಈ ನೀತಿಯನ್ನು ನೀವು ಉಲ್ಲಂಘಿಸಿದರೆ, ನೀವು ವಿಷಯವನ್ನು ತೆಗೆದುಹಾಕಬೇಕಾಗುತ್ತದೆ ಮತ್ತು ನೀವು ಮಾಧ್ಯಮವನ್ನು ತೆಗೆದುಹಾಕುವವರೆಗೆ ನಾವು ನಿಮ್ಮ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸುತ್ತೇವೆ. 

ದೋಷಯುಕ್ತವಾಗಿ ನಿಮ್ಮ ಖಾತೆಯನ್ನು ಅಮಾನತ್ತು ಮಾಡಲಾಗಿದೆ ಎಂದು ನೀವು ಭಾವಿಸಿದರೆ, ನೀವು ಮೇಲ್ಮನವಿಯನ್ನು ಸಲ್ಲಿಸಬಹುದು.

ಹೆಚ್ಚುವರಿ ಸಂಪನ್ಮೂಲಗಳು
 

ಜಾರಿ ಆಯ್ಕೆಗಳ ನಮ್ಮ ಶ್ರೇಣಿ ಮತ್ತು ನೀತಿ ಅಭಿವೃದ್ಧಿ ಮತ್ತು ಜಾರಿ ಕುರಿತು ನಮ್ಮ ಕಾರ್ಯನೀತಿ ಕುರಿತು ಇನ್ನಷ್ಟು ತಿಳಿಯಿರಿ.

ಮಾಲೀಕರ ಸಮ್ಮತಿ ಇಲ್ಲದೇ ಇತರ ಪ್ರಕಾರಗಳ ವಿಷಯದ ವಿತರಣೆಯು ಹ್ಯಾಕ್ ಮಾಡಿದ ಸಾಮಗ್ರಿ ವಿತರಣೆ ನೀತಿಯ ಅಡಿಯಲ್ಲಿ ಕ್ರಮ ಕೈಗೊಳ್ಳಬಹುದಾಗಿದೆ.

ಈ ಲೇಖನ ಹಂಚಿಕೊಳ್ಳಿ