ದ್ವೇಷಪೂರಿತ ನಡವಳಿಕೆಯ ನೀತಿ

ದ್ವೇಷಪೂರಿತ ನಡವಳಿಕೆ: ಕುಲ, ಜನಾಂಗೀಯತೆ, ರಾಷ್ಟ್ರೀಯ ಮೂಲ, ಜಾತಿ, ಲೈಂಗಿಕ ಪ್ರವೃತ್ತಿ, ಲಿಂಗ, ಲಿಂಗದ ಗುರುತು, ಧಾರ್ಮಿಕ ಅಸ್ತಿತ್ವತೆ, ವಯಸ್ಸು, ಅಂಗವೈಕಲ್ಯತೆ ಅಥವಾ ಗಂಭೀರ ರೋಗದ ಆಧಾರದಲ್ಲಿ ಇತರ ಜನರ ವಿರುದ್ಧ ಹಿಂಸೆಯನ್ನು ಉತ್ತೇಜಿಸಬಾರದು ಅಥವಾ ನೇರವಾಗಿ ಅವರ ಮೇಲೆ ಆಕ್ರಮಣ ಮಾಡಬಾರದು ಅಥವಾ ಅವರಿಗೆ ಬೆದರಿಸಬಾರದು. ಈ ವರ್ಗಗಳ ಆಧಾರದಲ್ಲಿ ಇತರರತ್ತ ಹಾನಿಯನ್ನು ಪ್ರಚೋದಿಸುವ ಪ್ರಾಥಮಿಕ ಉದ್ದೇಶವನ್ನು ಹೊಂದಿರುವ ಖಾತೆಗಳನ್ನು ಸಹ ನಾವು ಅನುಮತಿಸುವುದಿಲ್ಲ.

ದ್ವೇಷಯುತ ಚಿತ್ರ ಮತ್ತು ಪ್ರದರ್ಶನ ಹೆಸರುಗಳು: ನಿಮ್ಮ ಪ್ರೊಫೈಲ್ ಚಿತ್ರ ಅಥವಾ ಪ್ರೊಫೈಲ್ ಶೀರ್ಷಿಕೆಯಲ್ಲಿ ದ್ವೇಷಯುತ ಚಿತ್ರಗಳು ಅಥವಾ ಚಿಹ್ನೆಗಳನ್ನು ನೀವು ಬಳಸಬಾರದು. ನೀವು ನಿಮ್ಮ ಬಳಕೆದಾರರ ಹೆಸರು, ಪ್ರದರ್ಶನ ಹೆಸರು ಅಥವಾ ಪ್ರೊಫೈಲ್ ಸ್ವವಿವರವನ್ನು ದೌರ್ಜನ್ಯಕಾರಿ ವರ್ತನೆಗಳಾದ ಗುರಿಪಡಿಸಿದ ದೌರ್ಜನ್ಯ ಅಥವಾ ವ್ಯಕ್ತಿ, ಸಮೂಹ ಅಥವಾ ಸಂರಕ್ಷಿತ ವರ್ಗದ ಕಡೆಗೆ ದ್ವೇಷವನ್ನು ಅಭಿವ್ಯಕ್ತಪಡಿಸುವುದಕ್ಕಾಗಿ ಬಳಸಬಾರದು. 
 

ತಾರ್ಕಿಕ ವಿವರಣೆ
 

ಪರಿಕಲ್ಪನೆ ಮತ್ತು ಮಾಹಿತಿಯನ್ನು ರಚಿಸಲು ಮತ್ತು ಹಂಚಿಕೊಳ್ಳಲು ಎಲ್ಲರಿಗೂ ಅಧಿಕಾರ ನೀಡುವುದು ಮತ್ತು ಅವರ ಅಭಿಪ್ರಾಯಗಳು ಮತ್ತು ನಂಬಿಕೆಗಳನ್ನು ಅಡ್ಡಿ ಇಲ್ಲದೇ ಅಭಿವ್ಯಕ್ತಪಡಿಸಲು ಅವಕಾಶ ನೀಡುವುದು Twitter ನ ಧ್ಯೇಯವಾಗಿದೆ. ಮುಕ್ತ ಅಭಿವ್ಯಕ್ತಿಯು ಮಾನವನ ಹಕ್ಕು – ಪ್ರತಿಯೊಬ್ಬರಿಗೂ ಅಭಿಪ್ರಾಯವಿದೆ ಮತ್ತು ಅದನ್ನು ಬಳಸುವ ಹಕ್ಕು ಇದೆ ಎಂದು ನಾವು ನಂಬಿದ್ದೇವೆ. ಸಾರ್ವಜನಿಕ ಸಂವಹನವನ್ನು ನಡೆಸುವುದು ನಮ್ಮ ಪಾತ್ರವಾಗಿದೆ. ಇದಕ್ಕೆ ವೈವಿಧ್ಯಮಯ ಶ್ರೇಣಿಯ ದೃಷ್ಟಿಕೋನಗಳ ಪ್ರತಿನಿಧಿತ್ವವು ಅಗತ್ಯವಿದೆ. 

Twitter ನಲ್ಲಿ ಜನರು ನಿಂದನೆಯನ್ನು ಅನುಭವಿಸಿದರೆ, ಅವರ ಅಭಿವ್ಯಕ್ತಿ ಸಾಮರ್ಥ್ಯವನ್ನು ಇದು ಅಪಾಯಕ್ಕೀಡು ಮಾಡಬಹುದು ಎಂದು ನಾವು ಗುರುತಿಸುತ್ತೇವೆ. ಕೆಲವು ಜನರ ಗುಂಪುಗಳು ಆನ್‌ಲೈನ್‌ನಲ್ಲಿ ನಿಂದನೆಯನ್ನು ಗುರಿಪಡಿಸುತ್ತಿದ್ದಾರೆ ಎಂದು ಸಂಶೋಧನೆಯು ತೋರಿಸಿದೆ. ಇದರಲ್ಲಿ ಇವು ಒಳಗೊಂಡಿರುತ್ತವೆ: ಮಹಿಳೆಯರು, ವರ್ಣದ ಜನರು, ಮಹಿಳಾ ಸಲಿಂಗಿಗಗಳು, ಗಂಡು ಸಲಿಂಗಿಗಳು, ಉಭಯ ಲಿಂಗಿಗಳು, ಲಿಂಗ ಪರಿವರ್ತಿತರು, ಖ್ವೀರ್‌, ಅಂತರಲಿಂಗಿತ್ವ, ಅಲೈಂಗಿಕ ವ್ಯಕ್ತಿಗಳು, ಅಂಚಿಗೆ ತಳ್ಳಲ್ಪಟ್ಟ ಮತ್ತು ಐತಿಹಾಸಿಕವಾಗಿ ಕಡಿಮೆ ಪ್ರತಿನಿಧಿತ್ವ ಹೊಂದಿರುವ ಸಮುದಾಯಗಳು. ಕಡಿಮೆ ಪ್ರತಿನಿಧಿತ್ವ ಹೊಂದಿರುವ ಹಲವು ಸಮುದಾಯಗಳೊಂದಿಗೆ ಗುರುತಿಸಿಕೊಳ್ಳುವವರಲ್ಲಿ ನಿಂದನೆಯು ಹೆಚ್ಚು ಸಹಜವಾಗಿರಬಹುದು, ಹೆಚ್ಚು ತೀವ್ರವಾಗಿರಬಹುದು ಮತ್ತು ಹೆಚ್ಚು ಅಪಾಯಕಾರಿಯಾಗಿರಬಹುದು.

ವಿಶೇಷವಾಗಿ, ಐತಿಹಾಸಿಕವಾಗಿ ಅಂಚಿಗೆ ತಳ್ಳಲ್ಪಟ್ಟವರ ಧ್ವನಿಯನ್ನು ಅಡಗಿಸುವುದಕ್ಕಾಗಿ ದ್ವೇಷ, ಪೂರ್ವಗ್ರಹ ಅಥವಾ ಅಸಹಿಷ್ಣುತೆಯಿಂದ ಪ್ರೇರಿತ ನಿಂದನೆಯನ್ನು ತಡೆಯಲು ನಾವು ಬದ್ಧವಾಗಿದ್ದೇವೆ. ಈ ಕಾರಣಕ್ಕೆ, ಸಂರಕ್ಷಿತ ವಿಭಾಗದಲ್ಲಿ ಅವರು ಭಾವಿಸಿದ ಸದಸ್ಯತ್ವದ ಆಧಾರದಲ್ಲಿ ನಿಂದನೆಗೆ ವ್ಯಕ್ತಿಗಳನ್ನು ಅಥವಾ ಸಮೂಹಗಳನ್ನು ಗುರಿಪಡಿಸುವ ವರ್ತನೆಯನ್ನು ನಾವು ನಿಷೇಧಿಸುತ್ತೇವೆ.  

ನಮ್ಮ ದ್ವೇಷಪೂರಿತ ನಡವಳಿಕೆಯ ನೀತಿಯನ್ನು ಉಲ್ಲಂಘಿಸುತ್ತದೆ ಎಂದು ನೀವು ನಂಬುವ ಏನನ್ನಾದರೂ Twitter ನಲ್ಲಿ ನೀವು ಕಂಡರೆ, ದಯವಿಟ್ಟು ನಮಗೆ ವರದಿ ಮಾಡಿ.

 

ಇದನ್ನು ಅನ್ವಯಿಸಿದಾಗ 
 

ಟ್ವೀಟ್‌ಗಳು ಅಥವಾ ನೇರ ಸಂದೇಶಗಳಲ್ಲಾಗಲೀ, ಈ ಮುಂದಿನ ಯಾವುದೇ ವರ್ತನೆ ಮಾಡಿದ ವ್ಯಕ್ತಿ ಅಥವಾ ವ್ಯಕ್ತಿಗಳ ಸಮೂಹವನ್ನು ಖಾತೆಗಳು ಗುರಿಪಡಿಸಿದ ವರದಿಗಳನ್ನು ನಾವು ಪರಿಶೀಲಿಸುತ್ತೇವೆ ಮತ್ತು ಕ್ರಮ ತೆಗೆದುಕೊಳ್ಳುತ್ತೇವೆ. 
 

ಹಿಂಸೆಯ ಬೆದರಿಕೆಗಳು

ಗುರುತಿಸಬಹುದಾದ ಗುರಿಯ ವಿರುದ್ಧ ಹಿಂಸೆಯ ಬೆದರಿಕೆಗಳನ್ನು ಮಾಡುವ ಕಂಟೆಂಟ್ ಅನ್ನು ನಾವು ನಿಷೇಧಿಸುತ್ತೇವೆ. ಹಿಂಸೆಯ ಬೆದರಿಕೆಗಳು ಗಾಯವನ್ನು ಮಾಡುವ ಉದ್ದೇಶದ ಖಚಿತ ಹೇಳಿಕೆಗಳಾಗಿದ್ದು, ಗಂಭೀರ ಮತ್ತು ದೀರ್ಘಕಾಲೀನ ದೈಹಿಕ ಗಾಯವನ್ನು ಉಂಟು ಮಾಡಬಹುದು. ಇದರಲ್ಲಿ ವ್ಯಕ್ತಿಯು ಸಾಯಬಹುದು ಅಥವಾ ಗಮನಾರ್ಹವಾಗಿ ಗಾಯಗೊಳ್ಳಬಹುದು. ಉದಾ., "ನಾನು ನಿನ್ನನ್ನು ಕೊಲ್ಲುತ್ತೇನೆ."

ಟಿಪ್ಪಣಿ: ಹಿಂಸೆಯ ಬೆದರಿಕೆಗಳಿಗೆ ನಾವು ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದೇವೆ. ಹಿಂಸೆಯ ಬೆದರಿಕೆಗಳನ್ನು ಹಂಚಿಕೊಳ್ಳುವವರ ಖಾತೆಯನ್ನು ತಕ್ಷಣ ಮತ್ತು ಶಾಶ್ವತ ಅಮಾನತಿಗೆ ಒಳಪಡಿಸಲಾಗುತ್ತದೆ. 
 

ವ್ಯಕ್ತಿ ಅಥವಾ ವ್ಯಕ್ತಿಯ ಸಮೂಹಕ್ಕೆ ಗಂಭೀರ ಹಾನಿಯನ್ನು ಕೋರುವುದು, ಆಶಿಸುವುದು ಅಥವಾ ಕರೆಯುವುದು

ಇಡೀ ಸಂರಕ್ಷಿತ ವರ್ಗ ಮತ್ತು/ಅಥವಾ ಆ ವರ್ಗದ ಸದಸ್ಯರಾಗಿರಬಹುದಾದ ವ್ಯಕ್ತಿಗಳಿಗೆ ಮರಣ, ಗಂಭೀರ ದೈಹಿಕ ಹಾನಿ ಅಥವಾ ಗಂಭೀರ ರೋಗ ಉಂಟಾಗಲಿ ಎಂದು ಬಯಸುವುದು, ಆಶಿಸುವುದು, ಪ್ರೋತ್ಸಾಹಿಸುವುದು, ಉತ್ತೇಜಿಸುವುದು ಅಥವಾ ಬಯಕೆ ಅಭಿವ್ಯಕ್ತಿಸುವ ಕಂಟೆಂಟ್ ಅನ್ನು ನಾವು ನಿಷೇಧಿಸುತ್ತೇವೆ. ಇದರಲ್ಲಿ ಇವು ಒಳಗೊಂಡಿರುತ್ತವೆ, ಆದರೆ ಇದಕ್ಕೆ ಸೀಮಿತವಾಗಿರುವುದಿಲ್ಲ: 

 • ಇಡೀ ಸಂರಕ್ಷಿತ ವರ್ಗ ಮತ್ತು/ಅಥವಾ ಆ ವರ್ಗದ ಸದಸ್ಯರಾಗಿರಬಹುದಾದ ವ್ಯಕ್ತಿಗಳು ಗಂಭೀರ ರೋಗದಿಂದಾಗಿ ಸಾವನ್ನಪ್ಪುವುದನ್ನು ಆಶಿಸುವುದು, ಉದಾ., "ಎಲ್ಲ [ರಾಷ್ಟ್ರೀಯರು] ಕೋವಿಡ್ ತಗುಲಿ ಸಾವನ್ನಪ್ಪಲಿ ಎಂದು ನಾನು ಆಶಿಸುತ್ತೇನೆ."
 • ಗಂಭೀರ ಅಪಘಾತಕ್ಕೆ ಬಲಿಯಾಗಲಿ ಎಂದು ಇತರರಿಗೆ ಕೋರುವುದು, ಉದಾ., "ಮುಂದಿನ ಬಾರಿ ನೀನು ಬಾಯಿ ತೆರೆದಾಗ ಕಾರು ಅಪಘಾತವಾಗಲಿ ಎಂದು ನಾನು ಬಯಸುತ್ತೇನೆ".
 • ವ್ಯಕ್ತಿಗಳ ಸಮೂಹಕ್ಕೆ ಗಂಭೀರ ದೈಹಿಕ ಗಾಯ ಉಂಟಾಗಲಿ ಎಂದು ಹೇಳಲಾಗುತ್ತದೆ, ಉದಾ., "ಈ [ನಿಂದನೆ] ಸಮೂಹವು ಸುಮ್ಮನಿರದಿದ್ದರೆ, ಅವರಿಗೆ ಗುಂಡಿಕ್ಕಬೇಕಾಗುತ್ತದೆ."
 • ಸಂರಕ್ಷಿತ ವರ್ಗದಲ್ಲಿ ಸದಸ್ಯತ್ವ ಹೊಂದಿದ್ದಾರೆ ಎಂಬ ಕಾರಣಕ್ಕೆ ವ್ಯಕ್ತಿ ಅಥವಾ ಸಮೂಹದ ವಿರುದ್ಧ ಹಿಂಸೆಯನ್ನು ನಡೆಸಲು ಇತರರಿಗೆ ಪ್ರೋತ್ಸಾಹಿಸುವುದು. ಉದಾ., "ನಾನು [ನಿಂದನೆ] ಗೆ ಗುದ್ದುವ ಮನಸಿನಲ್ಲಿದ್ದೇನೆ, ನನ್ನ ಜೊತೆಗೆ ಯಾರಿದ್ದೀರಿ?"
   

ಸಾಮೂಹಿಕ ಕೊಲೆ, ಹಿಂಸಾತ್ಮಕ ಘಟನೆಗಳು ಅಥವಾ ಸಂರಕ್ಷಿತ ಗುಂಪುಗಳು ಪ್ರಾಥಮಿಕ ಗುರಿಗಳು ಅಥವಾ ಬಲಿಪಶುಗಳಾಗಿರುವ ನಿರ್ದಿಷ್ಟ ಹಿಂಸಾಚಾರದ ಉಲ್ಲೇಖಗಳು

ಸಂರಕ್ಷಿತ ವರ್ಗವು ಪ್ರಾಥಮಿಕ ಗುರಿ ಅಥವಾ ಸಂತ್ರಸ್ತರಾಗಿದ್ದಲ್ಲಿ, ಉದ್ದೇಶವು ದೌರ್ಜನ್ಯ ನಡೆಸುವುದಾಗಿದ್ದು, ಹಿಂಸೆ ಅಥವಾ ಹಿಂಸಾತ್ಮಕ ಘಟನೆಯ ರೂಪವನ್ನು ಉಲ್ಲೇಖಸುವ ಕಂಟೆಂಟ್‌ನೊಂದಿಗೆ ವ್ಯಕ್ತಿಗಳು ಅಥವಾ ಸಮೂಹಗಳನ್ನು ಗುರಿಪಡಿಸುವುದನ್ನು ನಾವು ನಿಷೇಧಿಸುತ್ತೇವೆ. ಇದರಲ್ಲಿ ಇವು ಒಳಗೊಂಡಿರುತ್ತವೆ, ಆದರೆ ಇದನ್ನು ಉಲ್ಲೇಖಿಸುವ ಅಥವಾ ಪ್ರದರ್ಶಿಸುವ ಮಾಧ್ಯಮ ಅಥವಾ ಪಠ್ಯಕ್ಕೆ ಸೀಮಿತವಾಗಿರುವುದಿಲ್ಲ:

 • ನರಹತ್ಯೆ (ಉದಾ., ಹೋಲೋಕಾಸ್ಟ್‌);
 • ಸಾಮೂಹಿಕ ದೌರ್ಜನ್ಯ
   

ಸಂರಕ್ಷಿತ ವರ್ಗಗಳ ವಿರುದ್ಧ ಪ್ರಚೋದನೆ
 

ಸಂರಕ್ಷಿಸಿದ ವರ್ಗಗಳಿಗೆ ಒಳಪಟ್ಟ ವ್ಯಕ್ತಿಗಳು ಅಥವಾ ವ್ಯಕ್ತಿಗಳ ಸಮೂಹಗಳನ್ನು ಗುರಿಪಡಿಸಿದ ಪ್ರಚೋದನಕಾರಿ ವರ್ತನೆಯನ್ನು ನಾವು ನಿಷೇಧಿಸುತ್ತೇವೆ. ಇದು ಉದ್ದೇಶಿತ ಕಂಟೆಂಟ್ ಅನ್ನು ಒಳಗೊಂಡಿದೆ:

 • ಸಂರಕ್ಷಿತ ವರ್ಗದ ಸದಸ್ಯರು ಅಪಾಯಕಾರಿ ಅಥವಾ ಅಕ್ರಮ ಚಟುವಟಿಕೆಗಳನ್ನು ನಡೆಸುವ ಸಾಧ್ಯತೆ ಹೆಚ್ಚಿದೆ ಎಂಬುದನ್ನು ಹೇಳುವುದೂ ಸೇರಿದಂತೆ ಸಂರಕ್ಷಿತ ವರ್ಗದ ಬಗ್ಗೆ ಭೀತಿ ಪ್ರಚೋದಿಸುವುದು ಅಥವಾ ಹೆದರಿಕೆಯ ಪೂರ್ವಗ್ರಹಗಳನ್ನು ಹರಡುವುದು, ಉದಾ., " ಎಲ್ಲರೂ [ಧಾರ್ಮಿಕ ಗುಂಪು] ಉಗ್ರರು."
 • ಪ್ಲಾಟ್‌ಫಾರಂನಲ್ಲಿ ಅಥವಾ ಹೊರಗೆ ಸಂರಕ್ಷಿತ ವರ್ಗದ ಸದಸ್ಯರ ಮೇಲೆ ದೌರ್ಜನ್ಯ ಎಸಗಲು ಇತರರನ್ನು ಪ್ರಚೋದಿಸುವುದು, ಉದಾ., "ಈ [ಧಾರ್ಮಿಕ ಗುಂಪು] ನಮಗಿಂತ ಉತ್ತಮವಾಗಿದ್ದಾರೆ ಎಂಬ ಕಾರಣಕ್ಕೆ ನನಗೆ ಬೇಸರವಾಗಿದೆ. [ಧಾರ್ಮಿಕ ಸಮೂಹದ ಧಾರ್ಮಿಕ ಚಿಹ್ನೆ] ಧರಿಸಿರುವುದನ್ನು ನೀವು ಯಾರಾದರೂ ನೋಡಿದರೆ, ಅದನ್ನು ತೆಗೆದು ಚಿತ್ರ ಪೋಸ್ಟ್‌ ಮಾಡಿ!"
 • ಸಂರಕ್ಷಿತ ವರ್ಗದಲ್ಲಿ ಸದಸ್ಯತ್ವ ಹೊಂದಿದ್ದಾರೆ ಎಂಬ ಕಾರಣಕ್ಕೆ ವ್ಯಕ್ತಿ ಅಥವಾ ಸಮೂಹದ ಆರ್ಥಿಕ ಉದ್ಯಮಕ್ಕೆ ಬೆಂಬಲ ನೀಡಲು ನಿರಾಕರಿಸುವ ರೂಪದಲ್ಲಿ ಇತರರ ಮೇಲೆ ತಾರತಮ್ಯ ಎಸಗಲು ಪ್ರಚೋದಿಸುವುದು, ಉದಾ., "ನೀವು [ಧಾರ್ಮಿಕ ಗುಂಪು] ಸ್ಟೋರ್‌ಗೆ ಹೋದರೆ, ನೀವು ಆ [ನಿಂದನೆ] ಬೆಂಬಲಿಸುತ್ತೀರಿ. ನಮ್ಮ ಹಣವನ್ನು ಈ [ಧಾರ್ಮಿಕ ಗುಂಪು] ಗೆ ನೀಡುವುದನ್ನು ನಿಲ್ಲಿಸೋಣ." ರಾಜಕೀಯ ಕಾಮೆಂಟರಿ ಅಥವಾ ನಿಷೇಧ ಅಥವಾ ಪ್ರತಿಭಟನೆಗಳಂಥದ್ದಕ್ಕೆ ಸಂಬಂಧಿಸಿದ ಕಂಟೆಂಟ್‌ನಂತಹ ರಾಜಕೀಯ ಉದ್ದೇಶದ ಕಂಟೆಂಟ್‌ ಅನ್ನು ಇದು ಒಳಗೊಂಡಿಲ್ಲದಿರಬಹುದು.

ವ್ಯಕ್ತಿ ಅಥವಾ ವ್ಯಕ್ತಿಗಳ ಸಮೂಹಕ್ಕೆ ಗಂಭೀರ ಹಾನಿಯನ್ನು ಬಯಸುವುದು, ಆಶಿಸುವುದು ಅಥವಾ ಕರೆಯುವುದರ ಅಡಿಯಲ್ಲಿ ಸಂರಕ್ಷಿತ ವರ್ಗದ ವಿರುದ್ಧ ಹಿಂಸೆಗೆ ಪ್ರಚೋದಿಸುವ ಉದ್ದೇಶದ ಕಂಟೆಂಟ್ ಅನ್ನು ನಿಷೇಧಿಸಲಾಗಿದೆ ಎಂಬುದನ್ನು ಗಮನಿಸಿ.

ಸಂರಕ್ಷಿತ ವರ್ಗದ ಸದಸ್ಯರು ಅಪಾಯಕಾರಿ ಅಥವಾ ಅಕ್ರಮ ಚಟುವಟಿಕೆಗಳನ್ನು ನಡೆಸುವ ಸಾಧ್ಯತೆ ಹೆಚ್ಚಿದೆ ಎಂಬುದನ್ನು ಹೇಳುವುದೂ ಸೇರಿದಂತೆ ಸಂರಕ್ಷಿತ ವರ್ಗದ ಬಗ್ಗೆ ಭೀತಿ ಪ್ರಚೋದಿಸುವುದು ಅಥವಾ ಹೆದರಿಕೆಯ ಪೂರ್ವಗ್ರಹಗಳನ್ನು ಹರಡುವ ಉದ್ದೇಶದ ಕಂಟೆಂಟ್‌ನೊಂದಿಗೆ ವ್ಯಕ್ತಿಗಳು ಮತ್ತು ಸಮೂಹಗಳನ್ನು ಗುರಿಯಾಗಿಸುವುದನ್ನು ನಾವು ನಿಷೇಧಿಸುತ್ತೇವೆ. ಉದಾ., " ಎಲ್ಲರೂ [ಧಾರ್ಮಿಕ ಗುಂಪು] ಉಗ್ರರು." 
 

ಯಾರನ್ನಾದರೂ ಕೀಳುಮಟ್ಟಕ್ಕೆ ಇಳಿಸುವ ಪುನರಾವರ್ತನೀಯ ಮತ್ತು/ಅಥವಾ ಸಹಮತವಿಲ್ಲದ ನಿಂದೆಗಳು, ವಿಶೇಷಣಗಳು, ಕುಲದ ಮತ್ತು ಲೈಂಗಿಕ ಆಲೋಚನೆಗಳು ಅಥವಾ ಇತರೆ ವಿಷಯ.

ಸಂರಕ್ಷಿತ ವರ್ಗದ ಬಗ್ಗೆ ಪುನರಾವರ್ತಿತ ನಿಂದನೆ, ವ್ಯಂಗ್ಯ ಅಥವಾ ಅಮಾನವೀಯಗೊಳಿಸುವ ಉದ್ದೇಶದ ಇತರ ಕಂಟೆಂಟ್, ಕೀಳಾಗಿಸುವ ಅಥವಾ ಋಣಾತ್ಮಕ ಅಥವಾ ಅಪಾಯಕಾರಿ ಪೂರ್ವಗ್ರಹವನ್ನು ಮರುಜಾರಿಗೊಳಿಸುವ ಮೂಲಕ ಇತರರ ಗುರಿಯಾಗಿಸುವಿಕೆಯನ್ನು ನಾವು ನಿಷೇಧಿಸುತ್ತೇವೆ. ಇದರಲ್ಲಿ ಗುರಿಪಡಿಸಿದ ತಪ್ಪು ಲಿಂಗ ಗುರುತಿಸುವಿಕೆ ಅಥವಾ ಮಂಗಳಮುಖಿಯ ಮೂಲ ಹೆಸರನ್ನು ಉಲ್ಲೇಖಿಸುವುದೂ ಒಳಗೊಂಡಿದೆ. ವ್ಯಕ್ತಿಗಳ ಸಮೂಹವನ್ನು ಅವರ ಧರ್ಮ, ಜಾತಿ, ಅಂಗವೈಕಲ್ಯ, ಗಂಭೀರ ರೋಗ, ರಾಷ್ಟ್ರೀಯ ಮೂಲ, ಜನಾಂಗ, ಜನಾಂಗೀಯತೆ, ಲಿಂಗ, ಲಿಂಗ ಗುರುತು ಅಥವಾ ಲೈಂಗಿಕ ಆದ್ಯತೆ ಆಧಾರದಲ್ಲಿ ಅಮಾನವೀಯಗೊಳಿಸುವುದನ್ನೂ ನಾವು ನಿಷೇಧಿಸುತ್ತೇವೆ. ಕೆಲವು ಪ್ರಕರಣಗಳಲ್ಲಿ, ಇತರರನ್ನು ದೌರ್ಜನ್ಯಗೊಳಿಸುವ ಅಥವಾ ನಿಂದಿಸುವ ಉದ್ದೇಶವನ್ನು ಹೊಂದಿರುವ ನಿಂದನೆ, ಗುಣವಾಚಕ ಅಥವಾ ಜನಾಂಗೀಯ/ಲೈಂಗಿಕ ಮಾತುಗಳ ತೀವ್ರ, ಪುನರಾವರ್ತಿತ ಬಳಕೆ (ಆದರೆ, ಇದಕ್ಕೆ ಸೀಮಿತವಾಗಿಲ್ಲ) ಕಂಡುಬಂದಲ್ಲಿ, ನಾವು ಟ್ವೀಟ್ ತೆಗೆದುಹಾಕಬೇಕಾಗಬಹುದು. ಇತರರನ್ನು ದೌರ್ಜನ್ಯಗೊಳಿಸುವ ಅಥವಾ ನಿಂದಿಸುವ ಉದ್ದೇಶದಿಂದ ಮಧ್ಯಮ ಪ್ರಮಾಣದ, ಅಪರೂಪದ ಬಳಕೆಯಂತಹ ಕೆಲವು ಪ್ರಕರಣಗಳಲ್ಲಿ ಈ ಕೆಳಗೆ ವಿವರಿಸಿದಂತೆ ಟ್ವೀಟ್ ಗೋಚರತೆಯನ್ನು ನಾವು ಮಿತಿಗೊಳಿಸಬಹುದು.
 

ದ್ವೇಷಯುತ ಚಿತ್ರ

ಜನಾಂಗ, ಧರ್ಮ, ಅಂಗವೈಕಲ್ಯ, ಲೈಂಗಿಕ ಆದ್ಯತೆ, ಲಿಂಗ ಗುರುತು ಅಥವಾ ಜನಾಂಗೀಯತೆ/ರಾಷ್ಟ್ರೀಯ ಮೂಲದ ಆಧಾರದಲ್ಲಿ ಹಗೆತನ ಮತ್ತು ದುರುದ್ದೇಶವನ್ನು ಪ್ರಚುರಪಡಿಸುವ ಉದ್ದೇಶದ ಲೋಗೋಗಳು, ಚಿಹ್ನೆಗಳು ಅಥವಾ ಚಿತ್ರಗಳನ್ನು ದ್ವೇಷಯುತ ಚಿತ್ರ ಎಂದು ನಾವು ಪರಿಗಣಿಸಿದ್ದೇವೆ. ದ್ವೇಷಯುತ ಚಿತ್ರದ ಕೆಲವು ಉದಾಹರಣೆಗಳು ಇವುಗಳನ್ನು ಒಳಗೊಂಡಿರಬಹುದು, ಆದರೆ ಇದಕ್ಕೆ ಸೀಮಿತವಾಗಿಲ್ಲ:

 • ದ್ವೇಷ ಸಮೂಹಗಳೊಂದಿಗೆ ಐತಿಹಾಸಿಕವಾಗಿ ಸಂಬಂಧಿಸಿದ ಚಿಹ್ನೆಗಳು, ಉದಾ., ನಾಜಿ ಸ್ವಸ್ತಿಕ;
 • ಇತರರನ್ನು ಮಾನವರಿಗಿಂತ ಕೀಳಾಗಿ ತೋರಿಸುವ ಚಿತ್ರಗಳು ಅಥವಾ ದ್ವೇಷಯುತ ಚಿಹ್ನೆಗಳನ್ನು ಒಳಗೊಳ್ಳುವಂತೆ ತಿದ್ದುಪಡಿ ಮಾಡಿರುವುದು, ಉದಾ., ಪ್ರಾಣಿಯ ಲಕ್ಷಣಗಳನ್ನು ಸೇರಿಸಲು ವ್ಯಕ್ತಿಗಳ ಚಿತ್ರವನ್ನು ತಿದ್ದುಪಡಿ ಮಾಡುವುದು; ಅಥವಾ
 • ಸಂರಕ್ಷಿತ ವರ್ಗವನ್ನು ಗುರಿಪಡಿಸಿದ ಸಾಮೂಹಿಕ ಕೊಲೆಯ ಉಲ್ಲೇಖಗಳು ಅಥವಾ ದ್ವೇಷಯುತ ಚಿಹ್ನೆಗಳನ್ನು ಒಳಗೊಂಡ ತಿದ್ದುಪಡಿ ಮಾಡಿದ ಚಿತ್ರಗಳು, ಉದಾ., ಹೋಲೋಕಾಸ್ಟ್‌ನ ಉಲ್ಲೇಖದಲ್ಲಿ ಹಳದಿ ಸ್ಟಾರ್ ಆಫ್‌ ಡೇವಿಡ್‌ ಬ್ಯಾಡ್ಜ್‌ಗಳನ್ನು ಸೇರಿಸಲು ವ್ಯಕ್ತಿಗಳ ಚಿತ್ರವನ್ನು ತಿದ್ದುಪಡಿ ಮಾಡುವುದು.

ಲೈವ್ ವೀಡಿಯೋ, ಖಾತೆ ಸ್ವವಿವರ, ಪ್ರೊಫೈಲ್‌ ಅಥವಾ ಶೀರ್ಷಿಕೆ ಚಿತ್ರಗಳೊಳಗೆ ಅನುಮತಿಸಿಲ್ಲದ ದ್ವೇಷಯುತ ಚಿತ್ರವನ್ನು ಪ್ರದರ್ಶಿಸುವ ಮಾಧ್ಯಮ. ಎಲ್ಲ ಇತರ ಘಟನೆಗಳನ್ನು ಸೂಕ್ಷ್ಮ ಮಾಧ್ಯಮ ಎಂದು ಗುರುತು ಮಾಡಬೇಕು. ಇದರ ಜೊತೆಗೆ, ವೈಯಕ್ತಿಕ ಅನಪೇಕ್ಷಿತ ದ್ವೇಷಯುತ ಚಿತ್ರವನ್ನು ಕಳುಹಿಸುವುದು ನಮ್ಮ ನಿಂದನೀಯ ವರ್ತನೆ ನೀತಿಯ ಉಲ್ಲಂಘನೆಯಾಗಿದೆ. 
 

Twitter ನಿಯಮಗಳ ಉಲ್ಲಂಘನೆಯಾಗಲು ಈ ಕಂಟೆಂಟ್‌ನ ಗುರಿ ನಾನಾಗಿರಬೇಕೆ?
 

ಕೆಲವು ಟ್ವೀಟ್‌ಗಳನ್ನು ಪ್ರತ್ಯೇಕವಾಗಿ ನೋಡಿದಾಗ ದ್ವೇಷಯುತವಾಗಿ ಕಂಡುಬರಬಹುದು, ಆದರೆ ವ್ಯಾಪಕವಾದ ಸಂಭಾಷಣೆಯ ಪ್ರಸಂಗದಲ್ಲಿ ನೋಡಿದಾಗ ಹಾಗೆ ಕಾಣದೇ ಇರಬಹುದು. ಉದಾಹರಣೆಗೆ, ನಿಂದನೆ ಎಂದು ನಿರ್ದಿಷ್ಟವಾಗಿ ಪರಿಗಣಿಸಿದ ಶಬ್ದಗಳನ್ನು ಬಳಸಿ ಪರಸ್ಪರರನ್ನು ಸಂರಕ್ಷಿತ ವರ್ಗದ ಸದಸ್ಯರು ಉಲ್ಲೇಖಿಸಬಹುದು. ಸಮ್ಮತಿಯುತವಾಗಿ ಬಳಸಿದಾಗ, ಈ ಪದಗಳ ಹಿಂದಿನ ಉದ್ದೇಶವು ನಿಂದನೆಯದಾಗಿರುವುದಿಲ್ಲ. ಆದರೆ, ವ್ಯಕ್ತಿಗಳನ್ನು ಕೀಳಾಗಿಸಲು ಐತಿಹಾಸಿಕವಾಗಿ ಬಳಸಿದ ಪದವನ್ನು ಮರುಪಡೆಯುವ ಉದ್ದೇಶದ್ದಾಗಿರುತ್ತದೆ.  

ಈ ರೀತಿಯ ಕಂಟೆಂಟ್ ಅನ್ನು ನಾವು ಪರಿಶೀಲಿಸಿದಾಗ, ಸಂರಕ್ಷಿತ ಸ್ಥಿತಿಯ ಆಧಾರದಲ್ಲಿ ವ್ಯಕ್ತಿಯ ನಿಂದನೆಯ ಉದ್ದೇಶವನ್ನು ಹೊಂದಿದೆಯೇ ಅಥವಾ ಇದು ಸಮ್ಮತಿಯುತ ಸಂವಾದದ ಭಾಗವಾಗಿದೆಯೇ ಎಂದು ಇದು ಸ್ಪಷ್ಟವಾಗಿಲ್ಲದಿರಬಹುದು. ಸಂದರ್ಭವನ್ನು ನಮ್ಮ ತಂಡಗಳು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದಕ್ಕಾಗಿ, ಯಾವುದೇ ಜಾರಿ ಕ್ರಮವನ್ನು ತೆಗೆದುಕೊಳ್ಳುವುದಕ್ಕೂ ಮೊದಲು ನಾವು ಮಾಹಿತಿ ಹೊಂದಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ಗುರಿಗೆ ಒಳಗಾದ ವ್ಯಕ್ತಿಯಿಂದ ನೇರವಾಗಿ ನಾವು ಕೆಲವು ಬಾರಿ ಕೇಳಬೇಕಾಗುತ್ತದೆ.

ಟಿಪ್ಪಣಿ: ನಾವು ಕ್ರಮ ತೆಗೆದುಕೊಳ್ಳಲು ವ್ಯಕ್ತಿಯು ನಿರ್ದಿಷ್ಟ ಸಂರಕ್ಷಿತ ವರ್ಗದ ಸದಸ್ಯರಾಗಿರಬೇಕಿಲ್ಲ. ಯಾವುದೇ ಸಂರಕ್ಷಿತ ವರ್ಗದಲ್ಲಿ ಸದಸ್ಯತ್ವವನ್ನು ಸಾಬೀತು ಅಥವಾ ಅಲ್ಲಗಳೆಯುವಂತೆ ನಾವು ಎಂದಿಗೂ ಜನರನ್ನು ಕೇಳುವುದಿಲ್ಲ ಮತ್ತು ಈ ಮಾಹಿತಿಯನ್ನು ನಾವು ತನಿಖೆ ನಡೆಸುವುದಿಲ್ಲ. 
 

ಪರಿಣಾಮಗಳು
 

ಈ ನೀತಿ ಅಡಿಯಲ್ಲಿ, ವ್ಯಕ್ತಿಗಳನ್ನು ಗುರಿಪಡಿಸುವ ವರ್ತನೆಯ ವಿರುದ್ಧ ಅಥವಾ ಈ ಮೇಲೆ ವಿವರಿಸಿದಂತೆ ದ್ವೇಷಪೂರಿತ ನಡವಳಿಕೆಯೊಂದಿಗಿನ ಇಡೀ ಸಂರಕ್ಷಿತ ವರ್ಗದ ವಿರುದ್ಧ ನಾವು ಕ್ರಮ ತೆಗೆದುಕೊಳ್ಳುತ್ತೇವೆ. ಗುರಿಪಡಿಸುವಿಕೆಯು ಹಲವು ರೀತಿಯಲ್ಲಿ ನಡೆಯಬಹುದು. ಉದಾಹರಣೆಗೆ, ಒಬ್ಬ ವ್ಯಕ್ತಿಯ ಫೋಟೋ, ವ್ಯಕ್ತಿಯನ್ನು ಅವರ ಸಂಪೂರ್ಣ ಹೆಸರನ್ನು ಹಿಡಿದು ಉಲ್ಲೇಖಿಸುವುದು ಸೇರಿದಂತೆ ಹೆಸರಿಸುವಿಕೆ, ಇತ್ಯಾದಿ.

ಈ ನೀತಿಯ ಉಲ್ಲಂಘನೆಯ ದಂಡವನ್ನು ಗುರುತಿಸುವಾಗ, ಉಲ್ಲಂಘನೆಯ ತೀವ್ರತೆ ಮತ್ತು ಈ ಹಿಂದೆ ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ವ್ಯಕ್ತಿಯ ದಾಖಲೆಗಳು ಸೇರಿದಂತೆ, ಇದಕ್ಕೆ ಸೀಮಿತವಾಗಿಲ್ಲದಂತೆ ಹಲವು ಅಂಶಗಳನ್ನು ನಾವು ಪರಿಗಣಿಸುತ್ತೇವೆ. ಈ ನೀತಿಯನ್ನು ಉಲ್ಲಂಘಿಸುವ ಕಂಟೆಂಟ್‌ಗೆ ಸಂಭಾವ್ಯ ಜಾರಿ ಆಯ್ಕೆಗಳ ಪಟ್ಟಿಯು ಈ ಮುಂದಿನದಾಗಿದೆ:

 • ಟ್ವೀಟ್ ಲೇಖಕರನ್ನು ಬಳಕೆದಾರರು ಹಿಂಬಾಲಿಸುತ್ತಿರುವುದನ್ನು ಹೊರತುಪಡಿಸಿ, ಪ್ರತಿಕ್ರಿಯೆಗಳಲ್ಲಿ ಟ್ವೀಟ್‌ಗಳನ್ನು ಡೌನ್‌ರ್ಯಾಂಕಿಂಗ್ ಮಾಡಿ.
 • ಟ್ವೀಟ್ ಲೇಖಕರನ್ನು ಹಿಂಬಾಲಿಸದ ಬಳಕೆದಾರರಿಗೆ ಅಗ್ರ ಹುಡುಕಾಟ ಫಲಿತಾಂಶಗಳು ಮತ್ತು/ಅಥವಾ ಕಾಲರೇಖೆಯಲ್ಲಿ ವರ್ಧನೆಗೆ ಟ್ವೀಟ್ ಅನ್ನು ಅನರ್ಹಗೊಳಿಸುವುದು.
 • ಇಮೇಲ್ ಅಥವಾ ಉತ್ಪನ್ನದೊಳಗಿನ ಶಿಫಾರಸುಗಳಲ್ಲಿ ಟ್ವೀಟ್‌ಗಳು ಮತ್ತು/ಅಥವಾ ಖಾತೆಗಳನ್ನು ಹೊರಗಿಡುವುದು. 
 • ಟ್ವೀಟ್‌ಗಳನ್ನು ಅಳಿಸುವ ಅಗತ್ಯ.
  • ಉದಾಹರಣೆಗೆ, ಉಲ್ಲಂಘಿಸುತ್ತಿರುವ ಕಂಟೆಂಟ್ ತೆಗೆದುಹಾಕುವಂತೆ ನಾವು ಇತರರನ್ನು ಕೇಳಬಹುದು ಮತ್ತು ಅವರು ಪುನಃ ಟ್ವೀಟ್‌ ಮಾಡಲು ಸಾಧ್ಯವಾಗುವುದಕ್ಕೂ ಮುನ್ನ ಓದಲು ಮಾತ್ರ ಮೋಡ್‌ನಲ್ಲಿ ಸ್ವಲ್ಪ ಸಮಯದವರೆಗೆ ಅವರನ್ನು ಇಡಬಹುದು. ನಂತರದ ಉಲ್ಲಂಘನೆ ಉಂಟಾದಲ್ಲಿ ದೀರ್ಘಕಾಲದವರೆಗೆ ಓದಲು ಮಾತ್ರ ಅವಧಿಗೆ ಕಾರಣವಾಗುತ್ತದೆ ಮತ್ತು ನಂತರದಲ್ಲಿ ಶಾಶ್ವತ ಅಮಾನತಿಗೆ ಕಾರಣವಾಗಬಹುದು.
 • ಈ ನೀತಿಯಲ್ಲಿ ವ್ಯಾಖ್ಯಾನಿಸಿದಂತೆ ದ್ವೇಷಯುತ ವರ್ತನೆಯಲ್ಲಿ ತೊಡಗುವುದು ಪ್ರಾಥಮಿಕ ಬಳಕೆ ಎಂದು ನಾವು ಗುರುತಿಸಿದ ಅಥವಾ ಹಿಂಸಾತ್ಮಕ ಬೆದರಿಕೆಗಳನ್ನು ಹಂಚಿಕೊಂಡಿರುವವರ ಖಾತೆಗಳನ್ನು ಅಮಾನತು ಮಾಡುವುದು.

ನಮ್ಮ ಜಾರಿ ಆಯ್ಕೆಗಳ ಶ್ರೇಣಿಯ ಬಗ್ಗೆ ಇನ್ನಷ್ಟು ತಿಳಿಯಿರಿ. 

ತಮ್ಮ ಖಾತೆಯನ್ನು ದೋಷಯುಕ್ತವಾಗಿ ಅಮಾನತು ಮಾಡಲಾಗಿದೆ ಎಂದು ಯಾರಾದರೂ ಭಾವಿಸಿದರೆ, ಅವರು ಮೇಲ್ಮನವಿ ಸಲ್ಲಿಸಬಹುದು.

ಈ ಲೇಖನ ಹಂಚಿಕೊಳ್ಳಿ