ನೀತಿ ಅಭಿವೃದ್ಧಿ ಮತ್ತು ಜಾರಿಯ ತತ್ವಶಾಸ್ತ್ರದ ಕುರಿತು ನಮ್ಮ ಕಾರ್ಯನೀತಿ

Twitter ಎನ್ನುವುದು ಪ್ರಪಂಚದಲ್ಲಿ ನಡೆಯುತ್ತಿರುವ ನೈಜ ಸಂಭಾಷಣೆಗಳ ಪ್ರತಿಬಿಂಬವಾಗಿದೆ ಅದು ಕೆಲವೊಮ್ಮೆ ನಿಂದನೀಯವಾಗಿರುವ, ವಿವಾದಾತ್ಮಕವಾಗಿರುವ ಮತ್ತು/ಅಥವಾ ಇತರರ ಕುರಿತು ದೊಡ್ಡದಾಗಿಸಿದ ದೃಷ್ಟಿಕೋನಗಳನ್ನು ಒಳಗೊಂಡಿರುತ್ತದೆ. ನಮ್ಮ ಸೇವೆಯ ಕುರಿತು ಸ್ವತಃ ವ್ಯಕ್ತಪಡಿಸಲು ಪ್ರತಿಯೊಬ್ಬರನ್ನೂ ಸ್ವಾಗತಿಸುವುದಾದರೂ, ಇತರರ ಅಭಿಪ್ರಾಯಗಳನ್ನು ಅಡಗಿಸಲು ಆ ಕಿರುಕುಳ, ಬೆದರಿಕೆಗಳು ಅಥವಾ ಭಯಗಳನ್ನು ಬಳಸುವ ನಡವಳಿಕೆಯನ್ನು ನಾವು ಸಹಿಸುವುದಿಲ್ಲ.

ಪ್ರತಿಯೊಬ್ಬರೂ ತಮ್ಮ ನಂಬಿಕೆಗಳನ್ನು ವ್ಯಕ್ತಪಡಿಸಲು ಸುರಕ್ಷಿತ ಎಂಬುದಾಗಿ ಭಾವಿಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು Twitter ನಿಯಮಗಳನ್ನು ಜಾರಿಗೊಳಿಸಿದ್ದೇವೆ ಮತ್ತು ಅವುಗಳನ್ನು ಸ್ಥಿರವಾಗಿ ಜಾರಿಗೊಳಿಸಲು ಪ್ರಯತ್ನ ಪಡುತ್ತೇವೆ.  ವಿಭಿನ್ನ ಜಾರಿಯ ಕ್ರಮಗಳ ಕುರಿತು ಇನ್ನಷ್ಟು ತಿಳಿಯಿರಿ.

 

ನಮ್ಮ ನೀತಿ ಅಭಿವೃದ್ಧಿಯ ಪ್ರಕ್ರಿಯೆ
 

ಹೊಸ ನೀತಿಯನ್ನು ರಚಿಸುವುದಕ್ಕೆ ಅಥವಾ ನೀತಿಯನ್ನು ಬದಲಾಯಿಸುವುದಕ್ಕೆ ಆನ್​ಲೈನ್ ನಡವಳಿಕೆಯಲ್ಲಿನ ಟ್ರೆಂಡ್​ಗಳ ಕುರಿತಾಗಿನ ಆಳವಾದ ಸಂಶೋಧನೆ ಮಾಡುವುದು, ಏನನ್ನು ಅನುಮತಿಸಲಾಗುತ್ತದೆ ಎಂಬ ಕುರಿತಾಗಿನ ನಿರೀಕ್ಷೆಗಳನ್ನು ಹುಟ್ಟಿಹಾಕುವ ಸ್ಪಷ್ಟವಾದ ಬಾಹ್ಯ ಭಾಷೆಯನ್ನು ಅಭಿವೃದ್ಧಿಗೊಳಿಸುವುದು ಮತ್ತು ಲಕ್ಷಾಂತರ ಟ್ವೀಟ್​ಗಳಾದ್ಯಂತ ಮಾಪನ ಮಾಡಬಹುದಾದ ಜಾರಿಯ ಮಾರ್ಗದರ್ಶನವನ್ನು ವಿಮರ್ಶಕರಿಗೆ ರಚಿಸುವುದು ಅಗತ್ಯವಿರುತ್ತದೆ.

ನೀತಿ ಭಾಷೆಯ ಕರಡನ್ನು ರಚಿಸುವಾಗ, ನಾವು ಸಾಕಷ್ಟು ಆಂತರಿಕ ತಂಡಗಳು ಮತ್ತು ಜೊತೆಗೆ ನಮ್ಮ ನಂಬಿಕೆ ಮತ್ತು ಸುರಕ್ಷತೆಯ ಕೌನ್ಸಿಲ್​ನಿಂದ ಪ್ರತಿಕ್ರಿಯೆಯನ್ನು ಪಡೆಯುತ್ತೇವೆ. ಇದು ವಿಭಿನ್ನ ಸಂಸ್ಕೃತಿಗಳು ಮತ್ತು ಸಾಮಾಜಿಕ ಸಂದರ್ಭಗಳಲ್ಲಿ ನಮ್ಮ ನಿಯಮಗಳನ್ನು ಹೇಗೆ ಅನ್ವಯಿಸಲಾಗುತ್ತದೆ ಮತ್ತು ವ್ಯಾಖ್ಯಾನಿಸಲಾಗುತ್ತದೆ ಎಂಬುದನ್ನು ಒಳಗೊಂಡಂತೆ ಆನ್​ಲೈನ್ ಮಾತಿನ ಬದಲಾಗುತ್ತಿರುವ ಸ್ವರೂಪದ ಕುರಿತಾಗಿನ ಜಾಗತಿಕ ದೃಷ್ಟಿಕೋನಗಳನ್ನು ನಾವು ಪರಿಗಣಿಸುತ್ತಿದ್ದೇವೆ ಎಂಬುದನ್ನು ಖಾತ್ರಿಪಡಿಸಲು ಪ್ರಮುಖವಾಗಿದೆ. ಅಂತಿಮವಾಗಿ, ನಮ್ಮ ಜಾಗತಿಕ ಪರಿಶೀಲನೆ ತಂಡಗಳಿಗೆ ನಾವು ತರಬೇತಿ ನೀಡುತ್ತೇವೆ, Twitter ನಿಯಮಗಳನ್ನು ನವೀಕರಿಸುತ್ತೇವೆ ಮತ್ತು ಹೊಸ ನೀತಿಯನ್ನು ಜಾರಿಗೊಳಿಸುವುದನ್ನು ಪ್ರಾರಂಭಿಸುತ್ತೇವೆ.

 

ನಮ್ಮ ಜಾರಿಯ ತತ್ವಶಾಸ್ತ್ರ
 

ಸಮಸ್ಯೆಯ ವಿವಿಧ ಭಾಗಗಳನ್ನು ಅರ್ಥಮಾಡಿಕೊಳ್ಳಲು ಜನರನ್ನು ನಾವು ಶಕ್ತರನ್ನಾಗಿ ಮಾಡುತ್ತೇವೆ ಮತ್ತು ಮುಕ್ತವಾಗಿ ಅಸಮ್ಮತಿಯ ಅಭಿಪ್ರಾಯಗಳು ಮತ್ತು ದೃಷ್ಟಿಕೋನಗಳನ್ನು ಚರ್ಚಿಸಲು ಉತ್ತೇಜಿಸುತ್ತೇವೆ. ಈ ಕಾರ್ಯನೀತಿಯು ನಮ್ಮ ವೇದಿಕೆಯಲ್ಲಿ ಹಲವು ರೂಪಗಳ ಮಾತು ಅಸ್ತಿತ್ವದಲ್ಲಿರಿಸಲು ಅವಕಾಶ ನೀಡುತ್ತದೆ ಮತ್ತು ನಿರ್ದಿಷ್ಟವಾಗಿ, ಪ್ರತಿಮಾತಿಗೆ ಉತ್ತೇಜಿಸುತ್ತದೆ: ಇದು ತಪ್ಪಾದ ಹೇಳಿಕೆಗಳು ಅಥವಾ ತಪ್ಪಾದ ಭಾವನೆಗಳನ್ನು ಸರಿಪಡಿಸಿಕೊಳ್ಳುವುದಕ್ಕಾಗಿ ಅಂಕಿಅಂಶಗಳನ್ನು ಪ್ರಸ್ತುತಪಡಿಸುತ್ತದೆ, ವಿರೋಧಾಭಾಸಗಳ ಬೂಟಾಟಿಕೆಯನ್ನು ಸೂಚಿಸುತ್ತದೆ, ಆಫ್​ಲೈನ್ ಅಥವಾ ಆನ್​ಲೈನ್ ಪರಿಣಾಮಗಳ ಕುರಿತು ಎಚ್ಚರಿಸುತ್ತದೆ, ದ್ವೇಷಪೂರಿತ ಅಥವಾ ಅಪಾಯಕಾರಿ ಮಾತನ್ನು ಖಂಡಿಸುತ್ತದೆ ಅಥವಾ ಮನಸ್ಸುಗಳನ್ನು ಬದಲಾಯಿಸಲು ಮತ್ತು ನಿರಾಯುಧರಾಗಿರಲು ಸಹಾಯ ಮಾಡುತ್ತದೆ.

ಆದ್ದರಿಂದ, ಸಂದರ್ಭವು ಪ್ರಮುಖವಾಗಿರುತ್ತದೆ. ಜಾರಿಯ ಕ್ರಮವನ್ನು ತೆಗೆದುಕೊಳ್ಳಬೇಕೇ ಎಂಬುದನ್ನು ನಿರ್ಣಯಿಸುವಾಗ, ನಾವು ಇವುಗಳನ್ನು ಒಳಗೊಂಡಂತೆ (ಆದರೆ ಸೀಮಿತವಾಗಿರುವುದಿಲ್ಲ) ಸಾಕಷ್ಟು ಅಂಶಗಳನ್ನು ಪರಿಗಣಿಸುತ್ತೇವೆ:

  • ನಡವಳಿಕೆಯನ್ನು ವ್ಯಕ್ತಿ, ಗುಂಪು ಅಥವಾ ಸಂರಕ್ಷಿಸಿದ ವರ್ಗದ ಜನರತ್ತ ಗುರಿಯಾಗಿಸಲಾಗಿದೆಯೇ:
  • ವರದಿಯನ್ನು ನಿಂದನಗೆ ಗುರಿಯಾದವರು ಅಥವಾ ದಾರಿಹೋಕರು ದಾಖಲಿಸಿದ್ದಾರೆಯೇ;
  • ಬಳಕೆದಾರರು ನಮ್ಮ ನೀತಿಗಳನ್ನು ಉಲ್ಲಂಘಿಸಿದ ಇತಿಹಾಸ ಹೊಂದಿದ್ದಾರೆಯೇ;
  • ಉಲ್ಲಂಘನೆಯ ತೀವ್ರತೆ;
  • ವಿಷಯವು ಕಾನೂನುಬದ್ಧ ಸಾರ್ವಜನಿಕ ಆಸಕ್ತಿಯ ಸಂಗತಿಯಾಗಿರಬಹುದು.


ನಡವಳಿಕೆಯನ್ನು ವ್ಯಕ್ತಿ ಅಥವಾ ಜನರ ಗುಂಪಿನತ್ತ ಗುರಿಯಾಗಿಸಲಾಗಿದೆಯೇ?

ವೇದಿಕೆಯಲ್ಲಿ ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದಕ್ಕೆ ಅನುಮತಿಸುವುದು ಮತ್ತು ನಮ್ಮ ಬಳಕೆದಾರರನ್ನು ರಕ್ಷಿಸುವುದು ಹೀಗೆ ಇವರೆಡರ ನಡುವೆ ಸಮತೋಲವನ್ನು ಕಾಯ್ದುಕೊಳ್ಳಲು, ಯಾರಾದರೂ ನಿರ್ದಿಷ್ಟ ವ್ಯಕ್ತಿ ಅಥವಾ ಜನರ ಗುಂಪನ್ನು ಗುರಿಯಾಗಿಸಿರುವ ನಿಂದನೀಯ ನಡವಳಿಕೆಯನ್ನು ವರದಿ ಮಾಡಿದಾಗ ನಾವು ನೀತಿಗಳನ್ನು ಜಾರಿಗೊಳಿಸುತ್ತೇವೆ. ಈ ಗುರಿಪಡಿಸುವಿಕೆಯು ಸಾಕಷ್ಟು ರೀತಿಯಲ್ಲಿ ಸಂಭವಿಸಬಹುದು (ಉದಾಹರಣೆಗೆ, @ಪ್ರಸ್ತಾಪಗಳು, ಫೋಟೋ ಟ್ಯಾಗ್ ಮಾಡುವುದು, ಹೆಸರಿನ ಮೂಲಕ ಅವರನ್ನು ಪ್ರಸ್ತಾಪಿಸುವುದು ಹಾಗೂ ಮತ್ತಷ್ಟು).


ವರದಿಯನ್ನು ಸಂಭಾವ್ಯ ನಿಂದನೆಗೆ ಗುರಿಯಾದವರು ಅಥವಾ ದಾರಿಹೋಕರು ದಾಖಲಿಸಿದ್ದಾರೆಯೇ?

ಕೆಲವು ಟ್ವೀಟ್​ಗಳನ್ನು ಪ್ರತ್ಯೇಕವಾಗಿ ನೋಡಿದಾಗ ನಿಂದನೀಯವಾಗಿ ಕಂಡುಬರಬಹುದು, ಆದರೆ ವ್ಯಾಪಕವಾದ ಸಂಭಾಷಣೆಯ ಅಥವಾ ವೇದಿಕೆಯಲ್ಲಿರುವ ಜನರ ನಡುವಿನ ಐತಿಹಾಸಿಕ ಸಂಬಂಧದ ಪ್ರಸಂಗದಲ್ಲಿ ನೋಡಿದಾಗ ಹಾಗೆ ಕಾಣದೇ ಇರಬಹುದು. ಉದಾಹರಣೆಗೆ, ಸ್ನೇಹಿತರ ನಡುವಿನ ಸ್ನೇಹದ ಹಾಸ್ಯವು ದಾರಿಹೋಕರಿಗೆ ಮನನೋಯಿಸುವಂತೆ ಕಂಡುಬರಬಹುದು ಮತ್ತು ಒಂದು ಸಂಸ್ಕೃತಿ ಅಥವಾ ದೇಶದಲ್ಲಿ ಸ್ವೀಕಾರಾರ್ಹವಾಗಿರುವ ಟೀಕೆಟಿಪ್ಪಣಿಗಳು ಮತ್ತೊಂದರಲ್ಲಿ ಸ್ವೀಕಾರಾರ್ಹವಾಗಿರದೇ ಇರಬಹುದು. ತಪ್ಪನ್ನು ಮಾಡದಂತೆ ಮತ್ತು ಸಮ್ಮತದ ಸಂವಹನಗಳನ್ನು ತೆಗೆದುಹಾಕದಂತೆ ನಮ್ಮ ತಂಡಗಳನ್ನು ತಡೆಗಟ್ಟುವುದಕ್ಕಾಗಿ ಸಹಾಯ ಮಾಡಲು, ಕೆಲವು ಸನ್ನಿವೇಶಗಳಲ್ಲಿ ನಮಗೆ ಯಾವುದೇ ಜಾರಿಯ ಕ್ರಮವನ್ನು ತೆಗೆದುಕೊಳ್ಳುವುದಕ್ಕೂ ಮೊದಲು ನಿಜವಾಗಿ ತುತ್ತಾದವರಿಂದ (ಅಥವಾ ಅವರ ಅಧಿಕೃತ ಪ್ರತಿನಿಧಿಗಳು) ವರದಿ ಅಗತ್ಯವಿರುತ್ತದೆ.


ಬಳಕೆದಾರರು ನಮ್ಮ ನೀತಿಗಳನ್ನು ಉಲ್ಲಂಘಿಸಿದ ಇತಿಹಾಸ ಹೊಂದಿದ್ದಾರೆಯೇ?

ಜನರು ನಮ್ಮ ನಿಯಮಗಳನ್ನು ಉಲ್ಲಂಘಿಸುವ ಉದ್ದೇಶ ಹೊಂದಿಲ್ಲ ಎಂಬುದಾಗಿ ಭಾವಿಸುವ ಸ್ಥಿತಿಯಿಂದ ನಾವು ಪ್ರಾರಂಭಿಸುತ್ತೇವೆ. ನಾವು ತಕ್ಷಣವೇ ಖಾತೆಯನ್ನು ಅಮಾನತ್ತು ಮಾಡಬೇಕು ಎಂಬಷ್ಟು ಮಟ್ಟಿಗೆ ಉಲ್ಲಂಘನೆಯು ತೀಕ್ಷ್ಣವಾಗಿದ್ದರೆ, ನಾವು ಮೊದಲು ನಮ್ಮ ನಿಯಮಗಳ ಕುರಿತು ಜನರಿಗೆ ಶಿಕ್ಷಣ ನೀಡಲು ಪ್ರಯತ್ನಿಸುತ್ತೇವೆ ಮತ್ತು ಅವರ ನಡವಳಿಕೆಯನ್ನು ಸರಿಪಡಿಸಿಕೊಳ್ಳಲು ಅವರಿಗೆ ಅವಕಾಶ ನೀಡುತ್ತೇವೆ. ನಾವು ಉಲ್ಲಂಘಿತರಿಗೆ ಉಲ್ಲಂಘನೆಯ ಟ್ವೀಟ್(ಗಳನ್ನು) ಅನ್ನು ತೋರಿಸುತ್ತೇವೆ, ಯಾವ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದು ವಿವರಿಸುತ್ತೇವೆ ಮತ್ತು ಅವರು ಮತ್ತೊಮ್ಮೆ ಟ್ವೀಟ್ ಮಾಡುವ ಮೊದಲು ವಿಷಯವನ್ನು ಅಳಿಸುವಂತೆ ಮಾಡುತ್ತೇವೆ. ಯಾರಾದರೂ ನಮ್ಮ ನಿಯಮಗಳನ್ನು ಪುನರಾವರ್ತಿತವಾಗಿ ಉಲ್ಲಂಘಿಸಿದರೆ ಆಗ ನಮ್ಮ ಜಾರಿಯ ಕ್ರಮಗಳು ಬಲಶಾಲಿಯಾಗಿರುತ್ತವೆ. ಇದು ಉಲ್ಲಂಘಿತರು ಟ್ವೀಟ್(ಗಳನ್ನು) ಅನ್ನು ತೆಗೆದುಹಾಕುವಂತೆ ಮಾಡುವುದು ಮತ್ತು ಖಾತೆಯ ಮಾಲೀಕತ್ವವನ್ನು ಪರಿಶೀಲಿಸುವುದು ಮತ್ತು/ಅಥವಾ ನಿರ್ದಿಷ್ಟ ಸಮಯಾವಧಿಯವರೆಗೆ ಅವರು ಟ್ವೀಟ್ ಮಾಡುವ ಸಾಮರ್ಥ್ಯವನ್ನು ತಾತ್ಕಾಲಿಕವಾಗಿ ಮಿತಿಗೊಳಿಸುವುದನ್ನು ಒಳಗೊಂಡಿರುತ್ತದೆ. ಯಾರಾದರೂ ಈ ಮಿತಿಗಿಂತ ಹೆಚ್ಚಿನ ಮಟ್ಟಿಗೆ ನಿಯಮಗಳನ್ನು ಉಲ್ಲಂಘಿಸುವುದನ್ನು ಮುಂದುವರಿಸಿದರೆ ಆಗ ಅವರ ಖಾತೆಯನ್ನು ತಾತ್ಕಾಲಿಕವಾಗಿ ಅಮಾನತ್ತು ಮಾಡಬಹುದು.


ಉಲ್ಲಂಘನೆಯ ತೀವ್ರತೆಯೇನು?

ಕೆಲವು ಪ್ರಕಾರಗಳ ನಡವಳಿಕೆಯು ಗಂಭೀರವಾದ ಸುರಕ್ಷತೆ ಮತ್ತು ಭದ್ರತೆಯ ಅಪಾಯಗಳನ್ನು ಒಡ್ಡಬಹುದು ಮತ್ತು/ಅಥವಾ ಒಳಗೊಂಡಿರುವ ಜನರಿಗೆ ದೈಹಿಕ, ಭಾವನಾತ್ಮಕ ಮತ್ತು ಹಣಕಾಸು ಕಠಿಣತೆಗೆ ಕಾರಣವಾಗಬಹುದು. ಹಿಂಸಾತ್ಮಕ ಬೆದರಿಕೆಗಳು, ಸಮ್ಮತವಲ್ಲದ ಆತ್ಮೀಯತೆಯ ಮಾಧ್ಯಮ ಅಥವಾ ಮಕ್ಕಳನ್ನು ಲೈಂಗಿಕವಾಗಿ ಶೋಷಣೆ ಮಾಡುವ ವಿಷಯವನ್ನು ಪೋಸ್ಟ್ ಮಾಡುವಂತಹ Twitter ನಿಯಮಗಳ ತೀರಾ ಅಧಿಕ ಮಟ್ಟದ ಉಲ್ಲಂಘನೆಗಳು ಖಾತೆಯ ತಕ್ಷಣದ ಮತ್ತು ಶಾಶ್ವತವಾದ ಅಮಾನತ್ತಿಗೆ ಕಾರಣವಾಗುತ್ತದೆ. ಇತರೆ ಉಲ್ಲಂಘನೆಗಳು ಯಾರಾದರೂ ಉಲ್ಲಂಘನೆಯ ಟ್ವೀಟ್(ಗಳನ್ನು) ಅನ್ನು ತೆಗೆದುಹಾಕುವ ಅಗತ್ಯತೆ ಮತ್ತು/ಅಥವಾ ಹೊಸ ಟ್ವೀಟ್​ಗಳನ್ನು ಪೋಸ್ಟ್ ಮಾಡುವ ಅವರ ಸಾಮರ್ಥ್ಯವನ್ನು ತಾತ್ಕಾಲಿಕವಾಗಿ ಮಿತಿಗೊಳಿಸುವುದಂತಹ ಸಾಕಷ್ಟು ವಿಭಿನ್ನ ಕ್ರಮಗಳ ತೆಗೆದುಕೊಳ್ಳುವಿಕೆಗೆ ಕಾರಣವಾಗಬಹುದು.


ವರ್ತನೆಯು ಸುದ್ದಿಯೋಗ್ಯವಾಗಿದೆಯೇ ಮತ್ತು ನ್ಯಾಯಯುತವಾದ ಸಾರ್ವಜನಿಕ ಹಿತಾಸಕ್ತಿಯಲ್ಲಿದೆಯೇ?

ಸಾರ್ವಜನಿಕ ವಿವೇಚನೆಗಳ ವೇಗದಲ್ಲಿ Twitter ಚಲಿಸುತ್ತದೆ ಮತ್ತು ವಿಷಯಗಳ ಕುರಿತು ಮಾಹಿತಿ ಪಡೆದುಕೊಳ್ಳಲು ಜನರು ಸೇವೆಯನ್ನು ಅಪೇಕ್ಷಿಸುತ್ತಾರೆ. ವಿಭಿನ್ನ ಅಭಿಪ್ರಾಯಗಳನ್ನು ತಿಳಿದುಕೊಳ್ಳುವುದರಿಂದ ಜನರಿಗೆ ಮತ್ತೊಬ್ಬರಿಂದ ಕಲಿಯಲು, ಹೆಚ್ಚು ಸಹನಶೀಲರಾಗಲು ಮತ್ತು ನಾವು ಜೀವಿಸಲು ಬಯಸುವ ಪ್ರಕಾರದ ಸಮಾಜದ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

ಸಮಸ್ಯೆಯ ಪ್ರತಿ ಮುಖವನ್ನು ನೋಡುವ ಅವಕಾಶವನ್ನು ಜನರು ಹೊಂದಿದ್ದಾರೆಂಬುದನ್ನು ಖಾತ್ರಿಪಡಿಸಿಕೊಳ್ಳಲು ಸಹಾಯಕ್ಕಾಗಿ, ನಾವು ವಿವಾದಾತ್ಮಕ ವಿಷಯವನ್ನು ಅಥವಾ ನಡವಳಿಕೆಯನ್ನು ಅನುಮತಿಸುವ ಅಪರೂಪದ ಅವಕಾಶವಿರಬಹುದು, ಇದು ಇಲ್ಲದಿದ್ದರೆ ಸೇವೆಯಲ್ಲಿರುವುದಕ್ಕಾಗಿನ ನಮ್ಮ ನಿಯಮಗಳನ್ನು ಉಲ್ಲಂಘಿಸಬಹುದು, ಏಕೆಂದರೆ ಅದರ ಲಭ್ಯತೆಯಲ್ಲಿ ನ್ಯಾಯಸಮ್ಮತ ಸಾರ್ವಜನಿಕ ಹಿತಾಸಕ್ತಿಯಿರುತ್ತದೆ ಎಂಬುದಾಗಿ ನಾವು ಭಾವಿಸುತ್ತೇವೆ. ಪ್ರತಿ ಸನ್ನಿವೇಶವನ್ನು ಪ್ರಕರಣದಿಂದ ಪ್ರಕರಣದ ಪ್ರಕಾರ ನಾವು ಮೌಲ್ಯಮಾಪನ ಮಾಡುತ್ತೇವೆ ಮತ್ತು ಅಂತಿಮವಾಗಿ ಕ್ರಾಸ್-ಫಂಕ್ಷನಲ್ ತಂಡವು ನಿರ್ಧರಿಸುತ್ತದೆ.

ವಿಷಯದ ಕುರಿತು ನಮ್ಮ ನಿರ್ಧಾರ-ತೆಗೆದುಕೊಳ್ಳುವಿಕೆಯ ಮಾಹಿತಿಗೆ ಸಹಾಯ ಮಾಡುವ ಕೆಲವು ಅಂಶಗಳಲ್ಲಿ ಅದು ಸಾರ್ವಜನಿಕರ ಮೇಲೆ ಹೊಂದಿರಬಹುದಾದ ಪರಿಣಾಮ, ವಿಷಯದ ಮೂಲ ಮತ್ತು ಈವೆಂಟ್​ನ ಪರ್ಯಾಯ ಕವರೇಜ್​ನ ಲಭ್ಯತೆ ಆಗಿರುತ್ತದೆ.

ವಿಷಯದ ಸಾರ್ವಜನಿಕ ಪರಿಣಾಮ: ನ್ಯಾಯಸಮ್ಮತ ಸಾರ್ವಜನಿಕ ಆಸಕ್ತಿಯ ವಿಷಯವು ಸಾರ್ವಜನಿಕರು ಆಸಕ್ತಿಕರವಾಗಿರಬಹುದಾದ ವಿಷಯಕ್ಕಿಂತ ಭಿನ್ನವಾಗಿರುತ್ತದೆ. ನಾಗರಿಕರಿಗೆ ಈ ವಿಷಯದ ಕುರಿತು ತಿಳಿಯದೇ ಇದ್ದರೆ ಅವರಿಗಾಗುವ ಪರಿಣಾಮದ ಕುರಿತು ನಾವು ಪರಿಗಣಿಸುತ್ತೇವೆ. ದೊಡ್ಡ ಸಂಖ್ಯೆಯ ಜನರ ಬದುಕಿನಲ್ಲಿ, ದೇಶದ ಆಡಳಿತದಲ್ಲಿ ಪರಿಣಾಮವನ್ನು ಉಂಟುಮಾಡುವ ಸಾಮರ್ಥ್ಯವನ್ನು ಟ್ವೀಟ್ ಹೊಂದಿರದೇ ಇದ್ದರೆ ಮತ್ತು/ಅಥವಾ ಅದು ಪ್ರಮುಖ ಸಾಮಾಜಿಕ ಸಮಸ್ಯೆಯ ಕುರಿತು ಮಾತನಾಡುತ್ತಿದ್ದರೆ, ಆಗ ವಿಷಯವು ಸೇವೆಯಲ್ಲಿರಲು ನಾವು ಅನುಮತಿಸಬಹುದು. ಇದರಂತೆ, ಒಂದು ವೇಳೆ ಸಾರ್ವಜನಿಕರ ಮೇಲೆ ಪರಿಣಾಮವು ಕನಿಷ್ಠವಾಗಿದ್ದರೆ ನಾವು ನಮ್ಮ ನೀತಿಗಳ ಉಲ್ಲಂಘನೆಯಲ್ಲಿರುವ ವಿಷಯವನ್ನು ತೆಗೆದುಹಾಕುವ ಸಾಧ್ಯತೆ ಹೆಚ್ಚು.

ವಿಷಯದ ಮೂಲ: ಕೆಲವು ಜನರು, ಗುಂಪುಗಳು, ಸಂಸ್ಥೆಗಳು ಮತ್ತು ಅವರು Twitter ನಲ್ಲಿ ಪೋಸ್ಟ್ ಮಾಡುವ ವಿಷಯವನ್ನು ಅವುಗಳು ಸಾರ್ವಜನಿಕ ವಿವೇಚನೆಯಲ್ಲಿರುವ ಆಧಾರದಲ್ಲಿ ನ್ಯಾಯಸಮ್ಮತ ಸಾರ್ವಜನಿಕ ಆಸಕ್ತಿಯ ವಿಷಯ ಎಂಬುದಾಗಿ ಪರಿಗಣಿಸಬಹುದು. ಅದರರ್ಥ ಅವರ ಟ್ವೀಟ್​ಗಳು ಯಾವಾಗಲೂ ಸೇವೆಯಲ್ಲಿರುತ್ತವೆ ಎಂಬುದಲ್ಲ. ಬದಲಿಗೆ, ಮುಕ್ತವಾಗಿ ಚರ್ಚಿಸಲಾಗುವಂತೆ ನಿರ್ದಿಷ್ಟ ಟ್ವೀಟ್ ಇರಬೇಕೆನ್ನುವ ನ್ಯಾಯಸಮ್ಮತ ಸಾರ್ವಜನಿಕ ಆಸಕ್ತಿ ಇದ್ದಲ್ಲಿ ನಾವು ಅದನ್ನು ಪರಿಗಣಿಸುತ್ತೇವೆ.

ವ್ಯಾಪ್ತಿಯ ಲಭ್ಯತೆ: ಪ್ರಪಂಚದಲ್ಲಿ ಏನಾಗುತ್ತಿದೆ ಎಂಬುದರ ಮಾಹಿತಿಯನ್ನು ನೀಡುವ ಮೂಲಕ, ಸ್ಥಾಪಿತ ಅಭಿಪ್ರಾಯಗಳಿಗೆ ಪ್ರತಿ ಅಭಿಪ್ರಾಯಗಳನ್ನು ನೀಡುವ ಮೂಲಕ ಮತ್ತು ಕೆಲವೊಂದು ಪ್ರಕರಣಗಳಲ್ಲಿ ಅಧಿಕಾರದಲ್ಲಿರುವ ಯಾರಾದರೂ ಒಬ್ಬರ ಅಧಿಕಾರದ ದುರ್ಬಳತೆಯನ್ನು ಬಹಿರಂಗಪಡಿಸುವ ಮೂಲಕ ಜನರು ಪ್ರತಿದಿನವೂ ಪ್ರಮುಖ ಪಾತ್ರ ವಹಿಸುತ್ತಾರೆ. ಸನ್ನಿವೇಶವು ಹೊರಹೊಮ್ಮಿದಂತೆ, ಕೆಲವು ಮಾಹಿತಿಗೆ ಪ್ರವೇಶವು ಅಜಾಗರೂಕತೆಯಿಂದ ಸಂದರ್ಭವನ್ನು ಮರೆಮಾಡಬಹುದು ಮತ್ತು/ಅಥವಾ ಸಮಸ್ಯೆಗಳ ಪ್ರತಿ ಭಾಗವನ್ನು ನೋಡದಂತೆ ಜನರನ್ನು ತಡೆಗಟ್ಟಬಹುದು. ಆದ್ದರಿಂದ, ಸಂಭಾವ್ಯವಾಗಿ ಉಲ್ಲಂಘಿಸುತ್ತಿರುವ ಟ್ವೀಟ್ ಕುರಿತು ಕ್ರಮ ತೆಗೆದುಕೊಳ್ಳುವುದಕ್ಕೂ ಮೊದಲು, ನಾವು ಅದು ವ್ಯಾಪಕ ರೀತಿಯಲ್ಲಿ ವಿಷಯವನ್ನು ತೋರಿಸುವಲ್ಲಿ ವಹಿಸುವ ಪಾತ್ರವನ್ನು ಮತ್ತು ಆ ವಿಷಯವನ್ನು ಬೇರೆಡೆ ಕಾಣಬಹುದೇ ಎಂಬ ಸಂಗತಿಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತೇವೆ.

ಈ ಲೇಖನ ಹಂಚಿಕೊಳ್ಳಿ