ಹಕ್ಕುಸ್ವಾಮ್ಯ ನೀತಿ

ಯಾವ ರೀತಿಯ ಹಕ್ಕುಸ್ವಾಮ್ಯ ದೂರುಗಳಿಗೆ Twitter ಪ್ರತಿಕ್ರಿಯಿಸುತ್ತದೆ?

ಡಿಜಿಟಲ್ ಮಿಲೆನಿಯಮ್ ಕಾಪಿರೈಟ್ ಆಕ್ಟ್ (“ಡಿಎಂಸಿಎ”) ಅಡಿಯಲ್ಲಿ ಸಲ್ಲಿಸಿದ ಹಕ್ಕುಸ್ವಾಮ್ಯ ದೂರುಗಳಿಗೆ Twitter ಪ್ರತಿಕ್ರಿಯಿಸುತ್ತದೆ. ಡಿಎಂಸಿಎ ವಿಭಾಗ 512ರಲ್ಲಿ ಹಕ್ಕುಸ್ವಾಮ್ಯ ಉಲ್ಲಂಘನೆಯನ್ನು ಔಪಚಾರಿಕವಾಗಿ ವರದಿ ಮಾಡುವ ಶಾಸನಾತ್ಮಕ ಅಗತ್ಯವನ್ನು ನಮೂದಿಸಲಾಗಿದೆ ಹಾಗೂ ದೂರು ಪ್ರತಿ ನೋಟಿಸ್ ಸಲ್ಲಿಸುವ ಮೂಲಕ ಬಾಧಿತ ಪಕ್ಷವು ತೆಗೆದುಹಾಕುವುದರ ವಿರುದ್ಧ ಮೇಲ್ಮನವಿಯನ್ನು ಹೇಗೆ ಸಲ್ಲಿಸಬೇಕು ಎಂಬ ಸೂಚನೆಯನ್ನೂ ನೀಡಲಾಗಿದೆ.

ಆರೋಪಿತ ಹಕ್ಕುಸ್ವಾಮ್ಯ ಉಲ್ಲಂಘನೆಗಳಾದ ಪ್ರೊಫೈಲ್ ಅಥವಾ ಶೀರ್ಷಿಕೆ ಫೋಟೋದಲ್ಲಿ ಹಕ್ಕುಸ್ವಾಮ್ಯದ ಚಿತ್ರವನ್ನು ಅನಧಿಕೃತವಾಗಿ ಬಳಸಿದ ಬಗೆಗಿನ ಆರೋಪಗಳು, ನಮ್ಮ ಮೀಡಿಯಾ ಹೋಸ್ಟಿಂಗ್ ಸೇವೆಗಳ ಮೂಲಕ ಹಕ್ಕುಸ್ವಾಮ್ಯದ ವೀಡಿಯೋ ಅಥವಾ ಚಿತ್ರವನ್ನು ಅನಧಿಕೃತವಾಗಿ ಬಳಸಿರುವುದಕ್ಕೆ ಸಂಬಂಧಿಸಿದ ಆರೋಪಗಳು ಅಥವಾ ಆರೋಪಿತ ಉಲ್ಲಂಘನೆ ಸಾಮಗ್ರಿಗಳಿಗೆ ಲಿಂಕ್​ಗಳನ್ನು ಒಳಗೊಂಡಿರುವ ಟ್ವೀಟ್​ಗಳಿಗೆ Twitter ಪ್ರತಿಕ್ರಿಯಿಸುತ್ತದೆ. ಹಕ್ಕುಸ್ವಾಮ್ಯದ ಸಾಮಗ್ರಿಗಳ ಎಲ್ಲ ಅನಧಿಕೃತ ಬಳಕೆಯೂ ಉಲ್ಲಂಘನೆಯಲ್ಲ ಎಂಬುದನ್ನು ಗಮನಿಸಿ (ಹೆಚ್ಚಿನ ಮಾಹಿತಿಗಾಗಿ ನಮ್ಮ ಪಾರದರ್ಶಕ ಬಳಕೆ ಲೇಖನವನ್ನು ನೋಡಿ)

ನಿಮ್ಮ ಬ್ರಾಂಡ್ ಅಥವಾ ಸಂಸ್ಥೆಯ ಹೆಸರಿನ ಬಳಕೆಯ ಬಗ್ಗೆ ನಿಮಗೆ ಕಾಳಜಿ ಇದ್ದರೆ, Twitter ಟ್ರೇಡ್​ಮಾರ್ಕ್ ನೀತಿ ಅನ್ನು ದಯವಿಟ್ಟು ಪರಿಶೀಲಿಸಿ. ಪರೋಡಿ, ನ್ಯೂಸ್​ಫೀಡ್, ಕಾಮೆಂಟರಿ ಅಥವಾ ಅಭಿಮಾನಿ ಖಾತೆಯ ಬಗ್ಗೆ ಕಾಳಜಿ ಇದ್ದಲ್ಲಿ, ಸಂಬಂಧಿತ ನೀತಿಯನ್ನು ದಯವಿಟ್ಟು ಇಲ್ಲಿ ಓದಿ. ಇವು ಸಾಮಾನ್ಯವಾಗಿ ಹಕ್ಕುಸ್ವಾಮ್ಯ ಸಮಸ್ಯೆಗಳಲ್ಲ.

ನಾನು ಹಕ್ಕುಸ್ವಾಮ್ಯ ಹೊಂದಿದ್ದೇನೆಯೆ? ನಾನು ತಿಳಿದುಕೊಳ್ಳುವುದು ಹೇಗೆ?

ನಿರ್ದಿಷ್ಟ ಕೆಲಸದ ಹಕ್ಕುಗಳನ್ನು ನೀವು ಹೊಂದಿದ್ದೀರಿ ಎಂಬುದರ ಬಗ್ಗೆ ನಿಮಗೆ ಖಚಿತವಿಲ್ಲದಿದ್ದರೆ, ದಯವಿಟ್ಟು ವಕೀಲರು ಅಥವಾ ಇತರ ಸಲಹೆಗಾರರನ್ನು ಸಂಪರ್ಕಿಸಿ, Twitter ಕಾನೂನು ಸಲಹೆಯನ್ನು ನೀಡುವುದಿಲ್ಲ. ಹಕ್ಕುಸ್ವಾಮ್ಯ ಕಾನೂನು ಬಗ್ಗೆ ಹೆಚ್ಚು ತಿಳಿಯಲು ಸಾಕಷ್ಟು ಸಂಪನ್ಮೂಲಗಳಿವೆ, ಈ ಪೈಕಿ ಕೆಲವನ್ನು ಇಲ್ಲಿ ನೀಡಲಾಗಿದೆ http://copyright.govhttps://lumendatabase.org/, ಮತ್ತು http://www.eff.org/issues/bloggers/legal/liability/IP

ಹಕ್ಕುಸ್ವಾಮ್ಯ ದೂರು ದಾಖಲಿಸುವುದಕ್ಕೂ ಮುನ್ನ ಏನನ್ನು ಪರಿಗಣಿಸಬೇಕು

ನಮಗೆ ಹಕ್ಕುಸ್ವಾಮ್ಯ ದೂರನ್ನು ಸಲ್ಲಿಸುವುದಕ್ಕೂ ಮುನ್ನ, ಬಳಕೆಯನ್ನು ಪಾರದರ್ಶಕ ಬಳಕೆ ಎಂದು ಪರಿಗಣಿಸಬಹುದೇ ಅಥವಾ ಇಲ್ಲವೇ ಎಂದು ನೋಡಿ.

ನೀವು ಪಾರದರ್ಶಕ ಬಳಕೆ ಎಂದು ಪರಿಗಣಿಸಿದರೆ ಮತ್ತು ಆಗಲೂ ಹಕ್ಕುಸ್ವಾಮ್ಯ ದೂರು ಸಲ್ಲಿಕೆ ಮಾಡಲು ಬಯಸಿದರೆ, ಬಳಕೆದಾರರೊಂದಿಗೆ ನೇರವಾಗಿ ವಿಷಯವನ್ನು ಪರಿಹರಿಸಬಹುದೇ ಎಂದು ನೋಡಲು ಆ ಬಳಕೆದಾರರನ್ನು ಮೊದಲು ನೀವು ಸಂಪರ್ಕಿಸಲು ಬಯಸಬಹುದಾಗಿದೆ. ನೀವು ಬಳಕೆದಾರರ ಟ್ವೀಟ್​ಗೆ ಪ್ರತಿಕ್ರಿಯೆ ನೀಡಬಹುದು ಅಥವಾ ಬಳಕೆದಾರರಿಗೆ ನೇರ ಸಂದೇಶ ಕಳುಹಿಸಬಹುದು ಮತ್ತು Twitter ಅನ್ನು ಸಂಪರ್ಕಿಸದೆಯೇ ಹಕ್ಕುಸ್ವಾಮ್ಯ ಕಂಟೆಂಟ್ ತೆಗೆದುಹಾಕುವಂತೆ ಅವರನ್ನು ಕೇಳಬಹುದು. 

Twitter ನಲ್ಲಿ ಔಪಚಾರಿಕ ದೂರು ಸಲ್ಲಿಸುವುದಕ್ಕೂ ಮೊದಲು, 17 ಯು.ಎಸ್‌ಸಿ § 512(ಎಫ್) ಅಡಿಯಲ್ಲಿ, ಸಾಮಗ್ರಿ ಅಥವಾ ಚಟುವಟಿಕೆ ಉಲ್ಲಂಘನೆಯಾಗಿದೆ ಎಂದು ನಿಮಗೆ ತಿಳಿದಿದ್ದೂ ವಸ್ತುವನ್ನು ತಪ್ಪಾಗಿ ಪ್ರತಿನಿಧಿಸಿದರೆ, ನಮಗೆ ಅಥವಾ ನಮ್ಮ ಬಳಕೆದಾರರಿಗೆ ಉಂಟಾದ ವೆಚ್ಚಗಳು ಮತ್ತು ಅಟಾರ್ನಿ ಶುಲ್ಕಗಳೂ ಸೇರಿದಂತೆ ಯಾವುದೇ ಹಾನಿಗಳಿಗೆ ನೀವು ಬಾಧ್ಯರಾಗಬಹುದು ಎಂದು ದಯವಿಟ್ಟು ತಿಳಿಯಿರಿ. ನೀವು ವರದಿ ಮಾಡುತ್ತಿರುವ ವಿಷಯ ಉಲ್ಲಂಘನೆಯಾಗಿದೆಯೇ ಎಂಬುದು ನಿಮಗೆ ಖಚಿತವಿಲ್ಲದಿದ್ದರೆ, ನಮ್ಮಲ್ಲಿ ನೊಟಿಫಿಕೇಶನ್ ಸಲ್ಲಿಸುವುದಕ್ಕೂ ಮೊದಲು ವಕೀಲರನ್ನು ನೀವು ಸಂಪರ್ಕಿಸಬಹುದಾಗಿದೆ.

ಗಮನಿಸಿ: ಸಾಮಾನ್ಯವಾಗಿ, ಫೋಟೋಗ್ರಾಫ್ ಹಕ್ಕುಸ್ವಾಮ್ಯದಲ್ಲಿ ಫೋಟೋದ ವಿಷಯವಸ್ತುವು ಹಕ್ಕುಸ್ವಾಮ್ಯಕ್ಕೆ ಒಳಪಟ್ಟಿರುವುದಿಲ್ಲ, ಬದಲಿಗೆ ಫೋಟೋಗ್ರಾಫರ್ ಒಳಪಟ್ಟಿರುತ್ತಾರೆ. ವಿಷಯಕ್ಕೆ ಹಕ್ಕುಸ್ವಾಮ್ಯವನ್ನು ನೀವು ಹೊಂದಿದ್ದೀರೋ ಅಥವಾ ಇಲ್ಲವೋ ಎಂಬುದು ಖಚಿತವಿಲ್ಲದಿದ್ದರೆ ಅಥವಾ ಇತರರ ವಿಷಯವನ್ನು ನೀವು ಉಲ್ಲಂಘಿಸುತ್ತಿದ್ದರೆ, ಒಬ್ಬ ವಕೀಲರು ಅಥವಾ ಸಲಹೆಗಾರರನ್ನು ಸಂಪರ್ಕಿಸಿ.

ಹಕ್ಕುಸ್ವಾಮ್ಯ ದೂರು ಪ್ರಕ್ರಿಯೆ ಮಾಡಲು ಯಾವ ಮಾಹಿತಿ ಅಗತ್ಯವಿದೆ?

ಕ್ಲೇಮ್ ಮಾಡಿದ ಹಕ್ಕುಸ್ವಾಮ್ಯ ಉಲ್ಲಂಘನೆಗೆ ನೋಟಿಸ್ ನೀಡಲು, ಈ ಕೆಳಗಿನ ಮಾಹಿತಿಯನ್ನು ನೀವು ನಮಗೆ ನೀಡಬೇಕು:

 1. ತಮ್ಮ ಪರವಾಗಿ ಕರ್ತವ್ಯವೆಸಗಲು ಹಕ್ಕುಸ್ವಾಮ್ಯ ಮಾಲೀಕರು ಅಥವಾ ವ್ಯಕ್ತಿಗೆ ದೃಢೀಕರಿಸುವ (ನಿಮ್ಮ ಸಂಪೂರ್ಣ ಹೆಸರನ್ನು ಟೈಪ್ ಮಾಡುವುದೇ ಸಾಕಾಗುತ್ತದೆ) ಭೌತಿಕ ಅಥವಾ ಎಲೆಕ್ಟ್ರಾನಿಕ್ ಸಹಿ;
 2. ಉಲ್ಲಂಘನೆಗೆ ಒಳಗಾಗಿದೆ ಎಂದು ಕ್ಲೇಮ್ ಮಾಡಲಾದ ಹಕ್ಕುಸ್ವಾಮ್ಯದ ಕೃತಿಯ ಗುರುತು (ಉದಾ, ನಿಮ್ಮ ಮೂಲ ಕೃತಿಯ ಲಿಂಕ್ ಅಥವಾ ಉಲ್ಲಂಘನೆಯಾಗಿದೆ ಎಂದು ಆರೋಪಿಸಿದ ಸಾಮಗ್ರಿಯ ಸ್ಪಷ್ಟ ವಿವರಣೆ);
 3. ನಮ್ಮ ವೆಬ್​ಸೈಟ್ ಅಥವಾ ಸೇವೆಗಳಲ್ಲಿ ಸಾಮಗ್ರಿಯನ್ನು Twitter ಗುರುತಿಸಲು ಅನುಮತಿಸಲು ಸಕಾರಣವಾಗಿ ಸೂಕ್ತವಾದ ಉಲ್ಲಂಘಿಸಿದ ಸಾಮಗ್ರಿಯ ಗುರುತು ಮತ್ತು ಮಾಹಿತಿ;
 4. ನಿಮ್ಮ ವಿಳಾಸ, ಟೆಲಿಫೋನ್ ಸಂಖ್ಯೆ ಮತ್ತು ಇಮೇಲ್ ವಿಳಾಸ ಸೇರಿದಂತೆ ನಿಮ್ಮ ಸಂಪರ್ಕ ಮಾಹಿತಿ;
 5. ಸಾಮಗ್ರಿಯನ್ನು ಈ ವಿಧವಾಗಿ ಬಳಕೆ ಮಾಡುವುದು ಹಕ್ಕುಸ್ವಾಮ್ಯ ಮಾಲೀಕರು, ಅದರ ಏಜೆಂಟ್ ಅಥವಾ ಕಾನೂನು ಮೂಲಕ ದೃಢೀಕರಿಸಲ್ಪಟ್ಟಿಲ್ಲ ಎಂಬ ನಂಬಿಕೆಯನ್ನು ನೀವು ಹೊಂದಿದ್ದೀರಿ ಎಂಬುದರ ಹೇಳಿಕೆ; ಮತ್ತು
 6. ದೂರಿನಲ್ಲಿರುವ ಮಾಹಿತಿ ನಿಖರವಾಗಿದೆ ಮತ್ತು ಉಲ್ಲಂಘನೆಗೆ ದಂಡ ವಿಧಿಸಬಹುದಾಗಿದೆ ಹಾಗೂ ಹಕ್ಕುಸ್ವಾಮ್ಯ ಮಾಲೀಕರ ಪರವಾಗಿ ಕ್ರಮ ಕೈಗೊಳ್ಳಲು ನೀವು ಅಧಿಕಾರ ಹೊಂದಿದ್ದೀರಿ ಎಂಬ ಹೇಳಿಕೆ.
   

ನೀವು ಟ್ವೀಟ್​ನ ಕಂಟೆಂಟ್ ಅನ್ನು ವರದಿ ಮಾಡುತ್ತಿದ್ದೀರೆಂದಾದರೆ, ಟ್ವೀಟ್​ಗೆ ನೇರ ಲಿಂಕ್ ಅನ್ನು ದಯವಿಟ್ಟು ನೀಡಿ. ಅಥವಾ ಆರೋಪಿಸಿದ ಉಲ್ಲಂಘನೆಯು ಶೀರ್ಷಿಕೆ, ಅವತಾರ್ ಇತ್ಯಾದಿಯಲ್ಲಿದೆಯೇ ಎಂದು ದಯವಿಟ್ಟು ಸ್ಪಷ್ಟಪಡಿಸಿ. ಉಲ್ಲಂಘಿಸಿದ ಸಾಮಗ್ರಿಯನ್ನು ಗುರುತಿಸಲು ಪ್ರೊಫೈಲ್ ಪುಟದ ಲಿಂಕ್ Twitter ಗೆ ಸಾಕು.

ಹಕ್ಕುಸ್ವಾಮ್ಯ ದೂರನ್ನು ನಾನು ಹೇಗೆ ದಾಖಲಿಸಬೇಕು?

Twitter ನ ಸಹಾಯ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಅಥವಾ ಹಕ್ಕುಸ್ವಾಮ್ಯ ದೂರನ್ನು ದಾಖಲಿಸುವ ಮೂಲಕ ನೀವು ಶಂಕಿತ ಹಕ್ಕುಸ್ವಾಮ್ಯ ಉಲ್ಲಂಘನೆಯ ವರದಿ ಮಾಡಬಹುದಾಗಿದೆ. ನೀವು twitter.com ಗೆ ಲಾಗಿನ್ ಮಾಡಿದರೆ, ಸೈಡ್​ಬಾರ್​ನಲ್ಲಿ ಇರುವ ‘ಸಹಾಯ’ ಲಿಂಕ್ ಕ್ಲಿಕ್ ಮಾಡುವ ಮೂಲಕ ನಿಮ್ಮ Twitter ಖಾತೆಯಿಂದ ನೇರವಾಗಿ Twitter ಸಹಾಯ ಕೇಂದ್ರಕ್ಕೆ ಭೇಟಿ ಮಾಡಬಹುದಾಗಿದೆ.

ಡಿಎಂಸಿಎ ದೂರು ದಾಖಲಿಸುವುದು ಪೂರ್ವ ನಿಗದಿತ ಕಾನೂನು ಪ್ರಕ್ರಿಯೆಯ ಆರಂಭವಾಗಿರುತ್ತದೆ. ನಿಮ್ಮ ದೂರನ್ನು ನಿಖರತೆ, ಮಾನ್ಯತೆ ಮತ್ತು ಪೂರ್ಣತೆಗಾಗಿ ಪರಿಶೀಲನೆ ನಡೆಸಲಾಗುತ್ತದೆ. ನಿಮ್ಮ ದೂರು ಈ ಅಗತ್ಯಗಳನ್ನು ಪೂರೈಸಿದರೆ, ನಿಮ್ಮ ವಿನಂತಿಯ ಮೇರೆಗೆ ನಾವು ಕ್ರಮ ತೆಗೆದುಕೊಳ್ಳುತ್ತೇವೆ ಮತ್ತು ಇದು ಶಂಕಿತ ಉಲ್ಲಂಘನೆ ಸಾಮಗ್ರಿಯನ್ನು ಪ್ರಕಟಿಸಿದ ಬಳಕೆದಾರ(ರಿಗೆ) ನಿಮ್ಮ ನೋಟಿಸ್​ನ ಸಂಪೂರ್ಣ ಪ್ರತಿಯನ್ನು (ನಿಮ್ಮ ಹೆಸರು, ವಿಳಾಸ, ಫೋನ್ ಮತ್ತು ಇಮೇಲ್ ವಿಳಾಸವೂ ಸೇರಿದಂತೆ) ಫಾರ್ವರ್ಡ್ ಮಾಡುವುದೂ ಒಳಗೊಂಡಿರುತ್ತದೆ.

ನಿಮ್ಮ ಸಂಪರ್ಕ ಮಾಹಿತಿಯನ್ನು ಫಾರ್ವರ್ಡ್ ಮಾಡಲಾಗುತ್ತದೆ ಎಂಬ ಬಗ್ಗೆ ನಿಮಗೆ ಕಾಳಜಿ ಇದ್ದಲ್ಲಿ, ನಿಮಗಾಗಿ ವರದಿ ಮಾಡಲು ಒಬ್ಬ ಏಜೆಂಟರನ್ನು ನೀವು ಬಳಸಬಹುದಾಗಿದೆ.

17 ಯು.ಎಸ್‌ಸಿ § 512(ಎಫ್) ಅಡಿಯಲ್ಲಿ, ಸಾಮಗ್ರಿ ಅಥವಾ ಚಟುವಟಿಕೆ ಉಲ್ಲಂಘನೆಯಾಗಿದೆ ಎಂದು ನಿಮಗೆ ತಿಳಿದಿದ್ದೂ ವಸ್ತುವನ್ನು ತಪ್ಪಾಗಿ ಪ್ರತಿನಿಧಿಸಿದರೆ, ನಮಗೆ ಅಥವಾ ನಮ್ಮ ಬಳಕೆದಾರರಿಗೆ ಉಂಟಾದ ವೆಚ್ಚಗಳು ಮತ್ತು ಅಟಾರ್ನಿ ಶುಲ್ಕಗಳೂ ಸೇರಿದಂತೆ ಯಾವುದೇ ಹಾನಿಗಳಿಗೆ ನೀವು ಬಾಧ್ಯರಾಗಬಹುದು ಎಂದು ದಯವಿಟ್ಟು ತಿಳಿಯಿರಿ. ನೀವು ವರದಿ ಮಾಡುತ್ತಿರುವ ಸಾಮಗ್ರಿಯ ವಾಸ್ತವ ಉಲ್ಲಂಘನೆಯಾಗಿದೆ ಎಂದು ನಿಮಗೆ ಖಚಿತವಿಲ್ಲದಿದ್ದರೆ, ಹಕ್ಕುಸ್ವಾಮ್ಯ ದೂರನ್ನು ದಾಖಲಿಸುವುದಕ್ಕೂ ಮುನ್ನ ನೀವು ವಕೀಲರನ್ನು ಸಂಪರ್ಕಿಸಬಹುದಾಗಿದೆ.

ಕ್ಲೇಮ್​ಗಳನ್ನು ಹೇಗೆ ಪ್ರಕ್ರಿಯೆಗೊಳಿಸಲಾಗುತ್ತದೆ?

ಹಕ್ಕುಸ್ವಾಮ್ಯ ದೂರುಗಳನ್ನು ಸ್ವೀಕರಿಸಿದ ರೀತಿಯಲ್ಲೇ ನಾವು ಪ್ರಕ್ರಿಯೆಗೊಳಿಸುತ್ತೇವೆ. ನಿಮ್ಮ ಟಿಕೆಟ್ ಅನ್ನು ನೀವು ಸಲ್ಲಿಸಿದ ನಂತರ, ನಾವು ನಿಮಗೆ ಟಿಕೆಟ್ ದೃಢೀಕರಣವನ್ನು ಇಮೇಲ್ ಮೂಲಕ ಕಳುಹಿಸುತ್ತೇವೆ. ನೀವು ಟಿಕೆಟ್ ದೃಢೀಕರಣ ಸ್ವೀಕರಿಸಿಲ್ಲದಿದ್ದರೆ ನಾವು ನಿಮ್ಮ ದೂರನ್ನು ಸ್ವೀಕರಿಸಿಲ್ಲ ಎಂದರ್ಥ ಮತ್ತು ನೀವು ನಿಮ್ಮ ದೂರನ್ನು ಪುನಃ ಸಲ್ಲಿಸಬೇಕು. ಆದಾಗ್ಯೂ, ನಕಲು ಹಕ್ಕುಸ್ವಾಮ್ಯ ದೂರುಗಳನ್ನು ಸಲ್ಲಿಸುವುದರಿಂದ ಪ್ರಕ್ರಿಯೆಗೊಳಿಸುವಲ್ಲಿ ವಿಳಂಬವಾಗುತ್ತದೆ ಎಂಬುದನ್ನು ದಯವಿಟ್ಟು ಗಮನದಲ್ಲಿರಿಸಿ.

ಸಾಮಗ್ರಿಯ ಪ್ರವೇಶಾವಕಾಶವನ್ನು ನಾವು ತೆಗೆದುಹಾಕಲು ಅಥವಾ ನಿಷ್ಕ್ರಿಯಗೊಳಿಸಲು ನಾವು ನಿರ್ಧರಿಸಿದರೆ, ಬಾಧಿತ ಬಳಕೆದಾರ(ರಿಗೆ) ನಾವು ಸೂಚನೆ ನೀಡುತ್ತೇವೆ ಮತ್ತು ಪ್ರತಿ ನೋಟಿಸ್ ದಾಖಲಿಸುವುದು ಹೇಗೆ ಎಂಬ ಸೂಚನೆಯ ಜೊತೆಗೆ ವರದಿ ಮಾಡಿದವರ ದೂರಿನ ಸಂಪೂರ್ಣ ಪ್ರತಿಯನ್ನು ನಾವು ಅವರಿಗೆ ನೀಡುತ್ತೇವೆ (ಒದಗಿಸಲಾದ ಸಂಪರ್ಕ ಮಾಹಿತಿಯನ್ನೂ ಒಳಗೊಂಡಂತೆ). ನಿಮ್ಮ ವೈಯಕ್ತಿಕ ಮಾಹಿತಿಯನ್ನು ತೆಗೆದುಹಾಕಿ ದೂರಿನ ತಿದ್ದುಪಡಿ ಮಾಡಿದ ಪ್ರತಿಯನ್ನು ಲುಮೆನ್​ಗೆ ನಾವು ಫಾರ್ವರ್ಡ್ ಮಾಡುತ್ತೇವೆ.

ವರದಿ ಮಾಡಿದ ಬಳಕೆದಾರ(ರಿಗೆ) ಯಾವ ಮಾಹಿತಿಯನ್ನು ಫಾರ್ವರ್ಡ್ ಮಾಡಬೇಕು?

ಹಕ್ಕುಸ್ವಾಮ್ಯ ದೂರಿನಲ್ಲಿ ವರದಿ ಮಾಡಿದ ವಿಷಯಗಳ ಪ್ರವೇಶಾವಕಾಶವನ್ನು ತೆಗೆದುಹಾಕಿದರೆ ಅಥವಾ ನಿಷ್ಕ್ರಿಯಗೊಳಿಸಿದರೆ, ವರದಿ ಮಾಡಿದವರ ಸಂಪೂರ್ಣ ಹೆಸರು, ಇಮೇಲ್, ಬೀದಿ ವಿಳಾಸ ಮತ್ತು ದೂರಿನಲ್ಲಿ ಸೇರಿಸಲಾದ ಯಾವುದೇ ಇತರ ಮಾಹಿತಿಯನ್ನು ಒಳಗೊಂಡ ದೂರಿನ ಪ್ರತಿಯನ್ನು ವರದಿಗೆ ಒಳಗಾದ ಬಳಕೆದಾರ(ರು) ಸ್ವೀಕರಿಸುತ್ತಾರೆ. 

ವರದಿಗೆ ಒಳಗಾದ ಬಳಕೆದಾರ(ರಿಗೆ) ನಿಮ್ಮ ಸಂಪರ್ಕ ಮಾಹಿತಿಯನ್ನು ಹಂಚಿಕೊಳ್ಳಲು ನಿಮಗೆ ಅನಾನುಕೂಲಕರವಾಗಿದ್ದರೆ, ನಿಮ್ಮ ಪರವಾಗಿ ಡಿಎಂಸಿಎ ನೋಟಿಸ್ ಸಲ್ಲಿಸಲು ಏಜೆಂಟರನ್ನು ನೀವು ನೇಮಕ ಮಾಡಿಕೊಳ್ಳಬಹುದಾಗಿದೆ. ಮಾನ್ಯ ಸಂಪರ್ಕ ಮಾಹಿತಿಯೊಂದಿಗೆ ಡಿಎಂಸಿಎ ನೋಟಿಸ್ ಅನ್ನು ನಿಮ್ಮ ಏಜೆಂಟ್ ಸಲ್ಲಿಸಬೇಕಾಗುತ್ತದೆ ಮತ್ತು ಅವರು ಪ್ರತಿನಿಧಿಸುವ ವಿಷಯದ ಮಾಲೀಕರು ನೀವು ಎಂದು ಗುರುತಿಸಬೇಕಾಗುತ್ತದೆ. 

ನಂತರ ಏನಾಗುತ್ತದೆ?

ಹಕ್ಕುಸ್ವಾಮ್ಯ ದೂರುಗಳಿಗೆ ಪ್ರತಿಕ್ರಿಯೆಯಾಗಿ ಆರೋಪಿತ ಉಲ್ಲಂಘನೆ ಸಾಮಗ್ರಿಗನ್ನು ತೆಗೆದುಹಾಕುವುದು ಅಥವಾ ಪ್ರವೇಶಕ್ಕೆ ನಿರ್ಬಂಧವನ್ನು Twitter ವಿಧಿಸಬಹುದು. ಹಕ್ಕುಸ್ವಾಮ್ಯದ ದೂರಿಗೆ ಪ್ರತಿಕ್ರಿಯೆಯಾಗಿ ನಾವು ಬಳಕೆದಾರರ ವಿಷಯವನ್ನು ತೆಗೆದುಹಾಕಿದರೆ ಅಥವಾ ಪ್ರವೇಶ ನಿರ್ಬಂಧಿಸಿದರೆ, ದೂರಿನ ಸಂಪೂರ್ಣ ಪ್ರತಿ ಹಾಗೂ ಪ್ರತಿ ನೋಟಿಸ್ ಸಲ್ಲಿಸುವ ಸೂಚನೆಯೊಂದಿಗೆ ತೆಗೆದುಹಾಕುವ ಅಥವಾ ಪ್ರವೇಶ ನಿರ್ಬಂಧಕ್ಕೆ ಸಂಬಂಧಿಸಿದ ಮಾಹಿತಿಯೊಂದಿಗೆ ಬಾಧಿತ ಖಾತೆದಾರರನ್ನು ಸಂಪರ್ಕಿಸಲು Twitter ಉತ್ತಮ ನಂಬಿಕೆಯಲ್ಲಿ ಪ್ರಯತ್ನ ನಡೆಸುತ್ತದೆ.

ನಿಮ್ಮ ಖಾತೆಯಿಂದ ತೆಗೆದುಹಾಕಲಾದ ವಿಷಯಕ್ಕೆ ಸಂಬಂಧಿಸಿದಂತೆ ಹಕ್ಕುಸ್ವಾಮ್ಯ ದೂರಿನ ಪ್ರತಿಯನ್ನು ನೀವು ಇನ್ನೂ ಸ್ವೀಕರಿಸಿಲ್ಲದಿದ್ದರೆ, ದಯವಿಟ್ಟು ನಾವು ಕಳುಹಿಸಿದ ಬೆಂಬಲ ಟಿಕೆಟ್​ಗೆ ಪ್ರತಿಕ್ರಿಯಿಸಿ.

ಬಳಕೆದಾರರು ಪೋಸ್ಟ್ ಮಾಡಿದ ವಿಷಯ ತೆಗೆದುಹಾಕುವುದು ಅಥವಾ ಪ್ರವೇಶ ನಿರ್ಬಂಧ ವಿಧಿಸುವುದಕ್ಕೆ ಸಂಬಂಧಿಸಿದಂತೆ ಸಾಧ್ಯವಾದಷ್ಟೂ ಪಾರದರ್ಶಕವಾಗಿರುವ ಪ್ರಯತ್ನದಲ್ಲಿ, ಯಾವಾಗ ವಿಷಯವನ್ನು ತಡೆಹಿಡಿಯಲಾಗಿದೆ ಎಂದು ವೀಕ್ಷಕರಿಗೆ ಸೂಚಿಸಲು ತಡೆಹಿಡಿದ ಟ್ವೀಟ್ ಮತ್ತು ಮಾಧ್ಯಮಗಳನ್ನು ನಾವು ಸ್ಪಷ್ಟವಾಗಿ ಗುರುತು ಮಾಡುತ್ತೇವೆ (ಉದಾಹರಣೆ ಕೆಳಗಿದೆ). ಪ್ರತಿ ಹಕ್ಕುಸ್ವಾಮ್ಯ ದೂರಿನ ತಿದ್ದುಪಡಿ ಮಾಡಿದ ಪ್ರತಿಯನ್ನು ಹಾಗೂ ಸಾರ್ವಜನಿಕ ವೆಬ್​ಸೈಟ್​ಗೆ ಪ್ರಕಟಿಸಲಾಗುವ (ನಿಮ್ಮ ವೈಯಕ್ತಿಕ ಮಾಹಿತಿಯನ್ನು ತೆಗೆದುಹಾಕಿ) ಲುಮೆನ್​ಗೆ ನಾವು ಪ್ರಕ್ರಿಯೆ ಮಾಡುವ ಪ್ರತಿ ನೋಟಿಸ್ ಪ್ರತಿಯನ್ನು ನಾವು ಕಳುಹಿಸುತ್ತೇವೆ.

ನನ್ನ ವಿಷಯವನ್ನು Twitter ನಿಂದ ತೆಗೆದುಹಾಕಲಾಗಿದೆ.

ಹಕ್ಕುಸ್ವಾಮ್ಯ ದೂರನ್ನು ನಾನು ಏಕೆ ಸ್ವೀಕರಿಸಿದ್ದೇನೆ?

ನೀವು ಹಕ್ಕುಸ್ವಾಮ್ಯ ದೂರನ್ನು ಸ್ವೀಕರಿಸಿದರೆ, ದೂರಿನಲ್ಲಿ ವಿವರಿಸಿದ ವಿಷಯಕ್ಕೆ ಪ್ರವೇಶಾವಕಾಶವನ್ನು ನಿರ್ಬಂಧಿಸಲಾಗಿದೆ ಎಂದರ್ಥ. ನಿಮಗೆ ನಾವು ಕಳುಹಿಸಿದ ಸಂವಹನವನ್ನು ಓದಲು ದಯವಿಟ್ಟು ಸಮಯ ಮೀಸಲಿಡಿ. ನಾವು ಸ್ವೀಕರಿಸಿದ ದೂರಿನ ಮಾಹಿತಿ ಮತ್ತು ಪ್ರತಿ ನೋಟಿಸ್ ಸಲ್ಲಿಸುವುದು ಹೇಗೆ ಎಂಬ ಸೂಚನೆಗಳನ್ನು ಇದು ಒಳಗೊಂಡಿರುತ್ತದೆ. ನಿಮ್ಮ Twitter ಖಾತೆಯೊಂದಿಗೆ ಸಂಬಂಧಿಸಿದ ಇಮೇಲ್ ವಿಳಾಸವನ್ನು ನೀವು ಮಾನಿಟರ್ ಮಾಡುತ್ತಿದ್ದೀರಿ ಎಂದು ದಯವಿಟ್ಟು ಖಚಿತಪಡಿಸಿಕೊಳ್ಳಿ.

ಸಲಹೆ: ವರದಿ ಮಾಡಿದ ಹಕ್ಕುಸ್ವಾಮ್ಯ ದೂರಿನ ವಿಷಯವನ್ನು ತೆಗೆದುಹಾಕುವುದರಿಂದ ದೂರು ಪರಿಹಾರವಾಗುವುದಿಲ್ಲ.

ತೆಗೆದುಹಾಕುವುದನ್ನು ನಾನು ವಿರೋಧಿಸಿದರೆ ಏನು ಮಾಡಲಾಗುತ್ತದೆ?

ಹಕ್ಕುಸ್ವಾಮ್ಯ ದೂರಿನಲ್ಲಿ ವರದಿ ಮಾಡಲಾದ ಅಂಶವು
ತಪ್ಪಾಗಿ ಗುರುತಿಸಲ್ಪಟ್ಟಿದೆ ಅಥವಾ ದೋಷಯುಕ್ತವಾಗಿ ತೆಗದುಹಾಕಲಾಗಿದೆ ಎಂದು ನೀವು ಭಾವಿಸಿದರೆ, ನಮ್ಮ ಸಹಾಯ ಕೇಂದ್ರದ ಮೂಲಕ ಪ್ರತಿ ಅಧಿಸೂಚನೆ(ಗಳನ್ನು) ನೀವು ಕಳುಹಿಸಬಹುದು. ತೆಗೆದು ಹಾಕಿ ಸಾಮಗ್ರಿಯನ್ನು ಮರುಜಾರಿಗೊಳಿಸಲು Twitter ಅನ್ನು ವಿನಂತಿಸಿಕೊಳ್ಳುವುದೇ ಪ್ರತಿ ನೋಟಿಸ್ ಆಗಿದ್ದು, ಇದು ಕಾನೂನು ಸನ್ನಿವೇಶಗಳನ್ನು ಒಳಗೊಂಡಿರುತ್ತದೆ. ಪರ್ಯಾಯವಾಗಿ, ವರದಿ ಮಾಡಿದವರಿಂದ ಹಕ್ಕುಸ್ವಾಮ್ಯ ದೂರು ಹಿಂಪಡೆಯುವಂತೆ ನೀವು ಬಯಸಬಹುದಾಗಿದೆ.

ನಾನು ಹಿಂಪಡೆಯುವಂತೆ ಹೇಗೆ ಕೇಳಬಹುದು?

ನೀವು ಸ್ವೀಕರಿಸಿದ ಡಿಎಂಸಿಎ ದೂರು ವರದಿ ಮಾಡಿದವರ ಸಂಪರ್ಕ ಮಾಹಿತಿಯನ್ನು ಒಳಗೊಂಡಿರುತ್ತದೆ. ನಮ್ಮ ಹಿಂಪಡೆಯುವಿಕೆ ನಮೂನೆ ಬಳಸಿ ತಮ್ಮ ನೋಟಿಸ್ ಅನ್ನು ಹಿಂಪಡೆಯುವಂತೆ ನೀವು ಅವರನ್ನು ಸಂಪರ್ಕಿಸಿ ಕೇಳಬಹುದು. ಪರಿಹಾರವಾಗದ ಹಕ್ಕುಸ್ವಾಮ್ಯ ದೂರನ್ನು ಪರಿಹರಿಸುವ ಅತ್ಯಂತ ತ್ವರಿತ ಮತ್ತು ಹೆಚ್ಚು ದಕ್ಷ ವಿಧಾನ ಇದಾಗಿದೆ. ಪರ್ಯಾಯವಾಗಿ, copyright@twitter.com ಗೆ ಕೂಡ ವರದಿ ಮಾಡುವವರು ಹಿಂಪಡೆಯುವಿಕೆ ನೋಟಿಸ್ ಅನ್ನು ಕಳುಹಿಸಬಹುದು.  ಇಂತಹ ನೋಟಿಸ್ ಇದನ್ನು ಒಳಗೊಂಡಿರಬೇಕು: (1) ನಿಷ್ಕ್ರಿಯಗೊಳಿಸಲಾದ ವಿಷಯದ ಗುರುತಿಸುವಿಕೆ ಮತ್ತು (2) ತಮ್ಮ ಡಿಎಂಸಿಎ ನೋಟಿಸ್ ಹಿಂಪಡೆಯಲು ಬಯಸುವ ವರದಿ ಮಾಡಿದವರ ಹೇಳಿಕೆ.  ಹಿಂಪಡೆಯುವಿಕೆಯು ಮೂಲ ವರದಿ ಮಾಡುವವರ ಏಕಸ್ವಾಮ್ಯ ನಿರ್ಧಾರಕ್ಕೆ ಒಳಪಟ್ಟಿದೆ ಮತ್ತು ಆ ವರದಿ ಮಾಡುವವರು ಮಾತ್ರವೇ ಹಿಂಪಡೆಯುವಿಕೆಯನ್ನು ವಿತರಿಸಬಹುದು.  ನಿಮ್ಮ ಟ್ವೀಟ್‌ನ ಒಂದು ಭಾಗವನ್ನು ತಡೆಹಿಡಿದುಕೊಂಡಿದ್ದರೆ, ಉಳಿದ ಭಾಗವನ್ನು ಅಳಿಸುವ ಮೂಲಕ ಮಾತ್ರವೇ ಉಲ್ಲಂಘನೆಯನ್ನು ಪರಿಹರಿಸಲಾಗುವುದಿಲ್ಲ.

ನಾನು ಪ್ರತಿ ನೋಟಿಸ್ ಅನ್ನು ಯಾವಾಗ ಸಲ್ಲಿಸಬೇಕು?

ತೆಗೆದುಹಾಕಿದ ಅಂಶವನ್ನು ಮರುಸ್ಥಾಪನೆ ಮಾಡಲು Twitter ಗೆ ವಿನಂತಿ ಮಾಡುವುದೇ ಪ್ರತಿ ನೋಟಿಸ್ ಆಗಿದೆ ಮತ್ತು ಇದು ಕಾನೂನು ಸನ್ನಿವೇಶಗಳನ್ನು ಒಳಗೊಂಡ ಕಾನೂನು ಪ್ರಕ್ರಿಯೆಯ ಆರಂಭವಾಗಿರುತ್ತದೆ.  ಉದಾಹರಣೆಗೆ, ಪ್ರತಿ ನೋಟಿಸ್ ಅನ್ನು ನೀವು ಸಲ್ಲಿಸಿದ್ದೀರಿ ಎಂದರೆ ಯು.ಎಸ್. ಫೆಡರಲ್ ಕೋರ್ಟ್​ನ ನ್ಯಾಯವ್ಯಾಪ್ತಿಗೆ ನೀವು ಸಮ್ಮತಿಸಿದ್ದೀರಿ ಮತ್ತು ವರದಿ ಮಾಡಿದವರು ಮತ್ತು ಲುಮೆನ್ ವೆಬ್​ಸೈಟ್​ಗೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಬಹಿರಂಗಗೊಳಿಸಲು ನೀವು ಸಮ್ಮತಿಸಿದ್ದೀರಿ ಎಂದರ್ಥ.

ಈ ಪರಿಗಣನೆಯನ್ನು ಗಮನದಲ್ಲಿಟ್ಟುಕೊಂಡು, ನಿಮ್ಮ ವಿಷಯವನ್ನು ತಪ್ಪಾಗಿ ಗುರುತಿಸಲಾಗಿದೆ ಅಥವಾ ವಿಷಯವನ್ನು ತೆಗೆದುಹಾಕಬಾರದು ಎಂಬ ಉತ್ತಮ ನಂಬಿಕೆಯನ್ನು ನೀವು ಹೊಂದಿದ್ದಲ್ಲಿ ನೀವು ಪ್ರತಿ ನೋಟಿಸ್ ಅನ್ನು ಸಲ್ಲಿಸಬಹುದಾಗಿದೆ.  ಪ್ರತಿ ನೋಟಿಸ್ ಅನ್ನು ನೀವು ಸಲ್ಲಿಸಬೇಕೆ ಅಥವಾ ಇಲ್ಲವೇ ಎಂಬ ಬಗ್ಗೆ ನಿಮಗೆ ಖಚಿತವಿಲ್ಲದಿದ್ದರೆ, ನೀವು ವಕೀಲರ ಸಲಹೆ ಪಡೆಯಬಹುದಾಗಿದೆ.

ಸಲಹೆ: ಹಕ್ಕುಸ್ವಾಮ್ಯ ದೂರಿಗೆ ಪ್ರತಿಯಾಗಿ ತೆಗೆದುಹಾಕಲಾದ ವಿಷಯವನ್ನು ಪುನಃ ಪೋಸ್ಟ್ ಮಾಡುವುದರಿಂದ ಖಾತೆಯನ್ನು ಶಾಶ್ವತವಾಗಿ ಅಮಾನತು ಮಾಡುವುದಕ್ಕೆ ಕಾರಣವಾಗಬಹುದು. ವಿಷಯವನ್ನು ದೋಷಯುಕ್ತವಾಗಿ ತೆಗೆದುಹಾಕಲಾಗಿದೆ ಎಂದು ನೀವು ಭಾವಿಸಿದರೆ, ವಿಷಯವನ್ನು ಪುನಃ ಪೋಸ್ಟ್ ಮಾಡುವುದರ ಬದಲಿಗೆ ದಯವಿಟ್ಟು ಪ್ರತಿ ನೋಟಿಸ್ ದಾಖಲಿಸಿ. 

ಪ್ರತಿ ನೋಟಿಸ್ ಪ್ರಕ್ರಿಯೆಗೊಳಿಸಲು ಯಾವ ಮಾಹಿತಿ ನಿಮಗೆ ಬೇಕಿದೆ?

ಪ್ರತಿ ನೋಟಿಸ್ ಸಲ್ಲಿಸಲು ಈ ಮುಂದಿನ ಮಾಹಿತಿಯನ್ನು ನೀವು ನಮಗೆ ಸಲ್ಲಿಸಬೇಕಾಗುತ್ತದೆ:

 1. ಭೌತಿಕ ಅಥವಾ ಎಲೆಕ್ಟ್ರಾನಿಕ್ ಸಹಿ (ನಿಮ್ಮ ಸಂಪೂರ್ಣ ಹೆಸರನ್ನು ಟೈಪ್ ಮಾಡುವುದು ಸಾಕಾಗುತ್ತದೆ);
 2. ನಿಮ್ಮ ಸಂಪೂರ್ಣ ಹೆಸರು, ವಿಳಾಸ (ದೇಶವೂ ಸೇರಿದಂತೆ), ಟೆಲಿಫೋನ್‌ ನಂಬರ್ ಮತ್ತು ಪರಿಶೀಲನೆಯ ಉದ್ದೇಶಗಳಿಗೆ ನಿಮ್ಮ Twitter ಬಳಕೆದಾರರ ಹೆಸರು ಮತ್ತು ಸಂಬಂಧಿಸಿದ ಇಮೇಲ್‌;
 3. ತೆಗೆದುಹಾಕಲಾದ ವಿಷಯ ಅಥವಾ ಪ್ರವೇಶವನ್ನು ನಿಷ್ಕ್ರಿಯಗೊಳಿಸಿದ ವಿಷಯದ ಗುರುತಿಸುವಿಕೆ ಮತ್ತು ತೆಗೆದುಹಾಕುವುದಕ್ಕೂ ಮೊದಲು ಅಥವಾ ನಿಷ್ಕ್ರಿಯಗೊಳಿಸುವುದಕ್ಕೂ ಮೊದಲು ಕಾಣಿಸಿದ್ದ ಸ್ಥಳವನ್ನು ಗುರುತಿಸುವುದು (ಹಕ್ಕುಸ್ವಾಮ್ಯ ನೋಟಿಸ್​ನ ವಿವರಣೆ ಸಾಕಾಗುತ್ತದೆ);
 4. ತೆಗೆದುಹಾಕಲಾಗುವ ಅಥವಾ ನಿಷ್ಕ್ರಿಯಗೊಳಿಸಲಾಗುವ ವಿಷಯವನ್ನು ತಪ್ಪಾಗಿ ಅಥವಾ ತಪ್ಪು ಗುರುತಿಸುವಿಕೆಯಿಂದಾಗಿ ವಿಷಯವನ್ನು ತೆಗೆದುಹಾಕಲಾಗಿದೆ ಅಥವಾ ನಿಷ್ಕ್ರಿಯಗೊಳಿಸಲಾಗಿದೆ ಎಂಬ ಉತ್ತಮ ನಂಬಿಕೆಯ ಅಡಿಯಲ್ಲಿ ಹೇಳಿಕೆ; ಮತ್ತು
 5. ಈ ಮುಂದಿನ ಒಂದು ನ್ಯಾಯವ್ಯಾಪ್ತಿ ಸಮ್ಮತಿ ಹೇಳಿಕೆ:

(ನಿಮ್ಮ ವಿಳಾಸವು ಯುನೈಟೆಡ್‌ ಸ್ಟೇಟ್ಸ್‌ನಲ್ಲಿದ್ದರೆ) 

"ನನ್ನ ವಿಳಾಸ ಇರುವ ನ್ಯಾಯ ಜಿಲ್ಲೆಗೆ ಫೆಡರಲ್‌ ಜಿಲ್ಲಾ ನ್ಯಾಯಾಲಯದ ನ್ಯಾಯವ್ಯಾಪ್ತಿಗೆ ನಾನು ಸಮ್ಮತಿಸುತ್ತೇನೆ 17 U.S.C 512(c)(1)(C) ಅಡಿಯಲ್ಲಿ ನೋಟಿಸ್ ನೀಡಿದ ಅಥವಾ ಅಂತಹ ವ್ಯಕ್ತಿಯ ಏಜೆಂಟ್‌ನಿಂದ ಪ್ರಕ್ರಿಯೆಯ ಸೇವೆಯನ್ನು ನಾನು ಸಮ್ಮತಿಸುತ್ತೇನೆ."

ಅಥವಾ

(ನಿಮ್ಮ ವಿಳಾಸವು ಯುನೈಟೆಡ್‌ ಸ್ಟೇಟ್ಸ್‌ ಹೊರಗಿದ್ದರೆ) 

"Twitter ಕಂಡುಬರಬಹುದಾದ ಯಾವುದೇ ನ್ಯಾಯಾಂಗ ಜಿಲ್ಲೆಗೆ ನಾನು ಸಮ್ಮತಿಸುತ್ತೇನೆ ಮತ್ತು 17 U.S.C. 512 (c)(1)(C) ಅಡಿಯಲ್ಲಿ ನೋಟಿಸ್ ನೀಡಿದ ವ್ಯಕ್ತಿ ಅಥವಾ ಅಂತಹ ವ್ಯಕ್ತಿಯ ಯಾವುದೇ ಏಜೆಂಟ್‌ರಿಂದ ಪ್ರಕ್ರಿಯೆಯ ಸೇವೆಗೆ ನಾನು ಸಮ್ಮತಿಸುತ್ತೇನೆ."

ಪ್ರತಿ ನೋಟಿಸ್ ಅನ್ನು ಸಲ್ಲಿಸುವುದಕ್ಕಾಗಿ, ಇಲ್ಲಿ ಇರುವ ನಮ್ಮ ವೆಬ್‌ ನಮೂನೆಯನ್ನು ಬಳಸಿ ಈ ಮೇಲಿನ ಎಲ್ಲ ಮಾಹಿತಿಯನ್ನೂ ದಯವಿಟ್ಟು ಒದಗಿಸಿ.

ನಾನು ಪ್ರತಿ ನೋಟಿಸ್ ಸಲ್ಲಿಸಿದ ನಂತರ ಏನಾಗುತ್ತದೆ?

ಮಾನ್ಯವಾದ ಪ್ರತಿ ನೋಟಿಸ್ ಸ್ವೀಕರಿಸಿದ ನಂತರ, ಮೂಲ ನೋಟಿಸ್ ಸಲ್ಲಿಸಿದ ವ್ಯಕ್ತಿಗೆ ನಾವು ಒಂದು ಪ್ರತಿಯನ್ನು ಕಳುಹಿಸುತ್ತೇವೆ. ಅಂದರೆ, ನಿಮ್ಮ ಪ್ರತಿ ನೋಟಿಸ್​ನಲ್ಲಿ ಸಲ್ಲಿಸಿದ ಸಂಪರ್ಕ ಮಾಹಿತಿಯನ್ನು ಮೂಲ ನೋಟಿಸ್ ಸಲ್ಲಿಸಿದ ವ್ಯಕ್ತಿಯೊಂದಿಗೆ ಹಂಚಿಕೊಳ್ಳಲಾಗುತ್ತದೆ. 

ದೋಷದಿಂದ ಅಥವಾ ತಪ್ಪು ಗುರುತಿಸುವಿಕೆಯಿಂದಾಗಿ ವಿಷಯವನ್ನು ತೆಗೆದುಹಾಕಲಾಗಿದೆ ಎಂಬುದನ್ನು ಹಕ್ಕುಸ್ವಾಮ್ಯ ಮಾಲೀಕರು ನಿರಾಕರಿಸಿದರೆ, ನಿಮ್ಮ ವಿರುದ್ಧ ಅವರು ಕಾನೂನು ಕ್ರಮಕ್ಕೆ ಮುಂದಾಗಬಹುದು.  ಸಮಸ್ಯಾತ್ಮಕ ವಿಷಯದ ಹೆಚ್ಚುವರಿ ಉಲ್ಲಂಘನೆಯನ್ನು ತಡೆಯಲು ಕೋರ್ಟ್ ಆದೇಶವನ್ನು ಮೂಲ ಸಲ್ಲಿಕೆದಾರರು ಬಯಸುತ್ತಿದ್ದಾರೆ ಎಂಬುದರ ಬಗ್ಗೆ 10 ವಹಿವಾಟು ದಿನಗಳಲ್ಲಿ ನಾವು ನೋಟಿಸ್ ಸ್ವೀಕರಿಸದಿದ್ದರೆ, ತೆಗೆದುಹಾಕಲಾದ ವಿಷಯಕ್ಕೆ ಪ್ರವೇಶ ನಿಷ್ಕ್ರಿಯತೆಯನ್ನು ನಾವು ಬದಲಿಸಬಹುದು ಅಥವಾ ವಜಾಗೊಳಿಸಬಹುದು.

ನಾವು ಯಾವುದೇ ಕಾನೂನು ಸಲಹೆಯನ್ನು ನೀಡುವುದಿಲ್ಲ. ಪ್ರಶ್ನೆಗಳಿದ್ದಲ್ಲಿ, ದಯವಿಟ್ಟು ಒಬ್ಬ ವಕೀಲರನ್ನು ಸಂಪರ್ಕಿಸಿ.

ಹಕ್ಕುಸ್ವಾಮ್ಯ ದೂರು ಅಥವಾ ಪ್ರತಿ ನೋಟಿಸ್ ಸಲ್ಲಿಸುವುದು ಗಂಭೀರ ವಿಷಯವಾಗಿದೆ!

ವಿಶೇಷವಾಗಿ ಹಕ್ಕುದಾರರ ಪರವಾಗಿ ವರ್ತಿಸಲು ನೀವು ದೃಢೀಕೃತರಾಗಿದ್ದೀರೇ ಅಥವಾ ನಿಜವಾದ ಹಕ್ಕುದಾರರಾಗಿದ್ದೀರಾ ಎಂಬುದರ ಬಗ್ಗೆ ನಿಮಗೆ ಖಚಿತವಿಲ್ಲದಿದ್ದರೆ ಕ್ಲೇಮ್ ಅಥವಾ ಪ್ರತಿ ನೋಟಿಸ್ ಸಲ್ಲಿಸುವುದಕ್ಕೂ ಮುನ್ನ ದಯವಿಟ್ಟು ಎರಡು ಬಾರಿ ಯೋಚಿಸಿ. ಮೋಸದ ಮತ್ತು/ಅಥವಾ ಕೆಟ್ಟ ಉದ್ದೇಶದ ಸಲ್ಲಿಕೆಗಳಿಗೆ ಕಾನೂನು ಮತ್ತು ಹಣಕಾಸು ಪರಿಣಾಮಗಳಿರುತ್ತವೆ. ನೀವು ನಿಜವಾದ ಹಕ್ಕುದಾರರು ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ ಅಥವಾ ವಿಷಯವನ್ನು ತಪ್ಪಾಗಿ ತೆಗೆದುಹಾಕಲಾಗಿದೆ ಎಂಬ ಬಗ್ಗೆ ನಿಮಗೆ ಖಚಿತ ನಂಬಿಕೆ ಇರಲಿ ಮತ್ತು ತಪ್ಪು ಕ್ಲೇಮ್ ಸಲ್ಲಿಸುವುದರ ಪ್ರತಿ ಪರಿಣಾಮಗಳನ್ನು ನೀವು ಅರ್ಥ ಮಾಡಿಕೊಂಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

ನನ್ನ ಖಾತೆಯು ಹಲವು ಹಕ್ಕುಸ್ವಾಮ್ಯ ದೂರುಗಳನ್ನು ಸ್ವೀಕರಿಸಿದರೆ ಏನಾಗುತ್ತದೆ?

ಒಂದು ಖಾತೆಯ ಬಗ್ಗೆ ಹಲವು ಹಕ್ಕುಸ್ವಾಮ್ಯ ದೂರುಗಳು ಬಂದರೆ ಅಥವಾ ಪುನರಾವರ್ತಿತ ಉಲ್ಲಂಘನೆಯ ಪ್ಯಾಟರ್ನ್‌ ಅನ್ನು ಇತರ ಸಾಕ್ಷಿಯು ಸಲಹೆ ಮಾಡಿದರೆ, ನಮ್ಮ ಪುನರಾವರ್ತಿತ ಉಲ್ಲಂಘನೆದಾರರ ಕುರಿತ ನೀತಿಗೆ ಅನುಗುಣವಾಗಿ ಆ ಖಾತೆಯನ್ನು Twitter ಅಮಾನತು ಮಾಡಬಹುದು.  ಈ ನಮೂನೆ ಬಳಸಿ ಬಳಕೆದಾರರು ಅಮಾನತು ಮೇಲ್ಮನವಿಯನ್ನು ಸಲ್ಲಿಸಬಹುದು. ನಮ್ಮ ಪುನರಾವರ್ತಿತ ಉಲ್ಲಂಘನೆದಾರರ ಕುರಿತ ನೀತಿಯು ಮಾನ್ಯವಾದ ಹಿಂಪಡೆಯುವಿಕೆಗಳನ್ನು ಮತ್ತು ಪ್ರತಿ ನೋಟಿಸ್‌ಗಳನ್ನು ಪರಿಗಣಿಸುತ್ತದೆ.

ಈ ಲೇಖನ ಹಂಚಿಕೊಳ್ಳಿ