ಲಾಗಿನ್ ಪರಿಶೀಲನೆ ಬಳಸುವುದು ಹೇಗೆ
ಲಾಗಿನ್ ಪರಿಶೀಲನೆಯು ನಿಮ್ಮ Twitter ಖಾತೆಗೆ ಭದ್ರತೆಯ ಹೆಚ್ಚುವರಿ ಪದರವಾಗಿದೆ. ಲಾಗ್ ಇನ್ ಮಾಡಲು ಕೇವಲ ಪಾಸ್ವರ್ಡ್ ಮಾತ್ರ ನಮೂದಿಸುವ ಬದಲಾಗಿ, ನೀವು ನಿಮ್ಮ ಮೊಬೈಲ್ ಫೋನ್ಗೆ ಕಳುಹಿಸಲಾಗುವ ಕೋಡ್ ಕೂಡ ನಮೂದಿಸುತ್ತೀರಿ. ಈ ಪರಿಶೀಲನೆಯು ನೀವು, ಮತ್ತು ಕೇವಲ ನೀವು ಮಾತ್ರ ನಿಮ್ಮ ಖಾತೆಯನ್ನು ಪ್ರವೇಶಿಸುವುದನ್ನು ಖಚಿತಪಡಿಸುವಲ್ಲಿ ಸಹಾಯ ಮಾಡುತ್ತದೆ.
ನೀವು ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಿದ ನಂತರ, ನಿಮ್ಮ ಖಾತೆಗೆ ಲಾಗ್ ಇನ್ ಮಾಡಲು ನಿಮಗೆ ನಿಮ್ಮ ಪಾಸ್ವರ್ಡ್ ಮತ್ತು ನಿಮ್ಮ ಮೊಬೈಲ್ ಫೋನ್ ಈ ಎರಡೂ ಅಥವಾ ಸೆಕ್ಯೂರಿಟಿ ಕೀ (twitter.com ಮೂಲಕ) ಅಗತ್ಯವಿರುತ್ತದೆ. ನೀವು twitter.com, iOS ಗಾಗಿ twitter, Android ಗೆ twitter, ಅಥವಾ mobile.twitter.com ಗೆ ಲಾಗ್ ಇನ್ ಮಾಡಿದಾಗ, ನೀವು ನಮೂದಿಸಲು ಆರು ಅಂಕಿಗಳ ಲಾಗಿನ್ ಕೋಡ್ ಸ್ವೀಕರಿಸುತ್ತೀರಿ. ಡೀಫಾಲ್ಟ್ ಆಗಿ, ಇದನ್ನು SMS ಪಠ್ಯ ಸಂದೇಶ(ಬೆಂಬಲಿತ ಕ್ಯಾರಿಯರ್ಗಳನ ನಮ್ಮ ಪಟ್ಟಿಯನ್ನು ನೋಡಿ)ದ ಮೂಲಕ ಕಳುಹಿಸಲಾಗುತ್ತದೆ, ಅಥವಾ ನೀವು ಪರಿಶೀಲನೆಗಾಗಿ ಮೂರನೇ ವ್ಯಕ್ತಿಯ ಆಪ್ ಅಥವಾ ಭದ್ರತೆ ಕೀಯನ್ನು ಉಪಯೋಗಿಸಬಹುದು (ವಿವರಗಳನ್ನು ಈ ಕೆಳಗೆ ನೋಡಿ).
ಗಮನಿಸಿ: ಲಾಗಿನ್ ಪರಿಶೀಲನೆಯನ್ನು ಸೆಟ್ ಅಪ್ ಮಾಡುವ ನಿಟ್ಟಿನಲ್ಲಿ, ನೀವು ನಿಮ್ಮ Twitter ಖಾತೆಗೆ ಸಂಬಂಧಿಸಿದ ಫೋನ್ ಸಂಖ್ಯೆಯನ್ನು ಹೊಂದಿರಬೇಕಾಗುತ್ತದೆ. ಈ ಅಗತ್ಯತೆಯು ಖಾತೆಯ ಮರುಪಡೆಯುವಿಕೆಗೆ ಜಾರಿಯಲ್ಲಿದೆ. ನೀವು ಒಂದೇ ಫೋನ್ ಸಂಖ್ಯೆಯನ್ನು ಉಪಯೋಗಿಸುವ ಬಹು ಖಾತೆಗಳನ್ನು ನಿರ್ವಹಿಸುತ್ತಿದ್ದರೆ, ಪ್ರತಿ ಖಾತೆಗೆ ಲಾಗಿನ್ ಪರಿಶೀಲನೆಯನ್ನು ಉಪಯೋಗಿಸಲು ಸಾಧ್ಯವಿದೆ. ಹೆಚ್ಚುವರಿ ಸುರಕ್ಷತೆಗಾಗಿ, ನಾವು ನಿಮ್ಮ ಎಲ್ಲಾ ಖಾತೆಗಳಿಗೆ ಲಾಗಿನ್ ಸಕ್ರಿಯಗೊಳಿಸಬೇಕೆಂದು ಶಿಫಾರಸು ಮಾಡುತ್ತೇವೆ.
ಪ್ರಮುಖ: ನೀವು ಲಾಗಿನ್ ಪರಿಶೀಲನೆಯನ್ನು ಸಕ್ರಿಯಗೊಳಿಸುವ ಮುನ್ನ, ಇವುಗಳನ್ನು ಮಾಡಬೇಕು:
ತಾತ್ಕಾಲಿಕ ಪಾಸ್ವರ್ಡ್ಗಳು
ವೆಬ್ನಲ್ಲಿನ ನಿಮ್ಮ ಖಾತೆಗೆ ಲಾಗಿನ್ ಪರಿಶೀಲನೆಯನ್ನು ನೀವು ಸಕ್ರಿಯಗೊಳಿಸಿದ ನಂತರ, ನೀವು ನಿಮ್ಮ Twitter ಪಾಸ್ವರ್ಡ್ ನಮೂದಿಸಲು ಅಗತ್ಯವಿರುವ ಇತರೆ ಸಾಧನಗಳು ಅಥವಾ ಅಪ್ಲಿಕೇಶನ್ಗಳಲ್ಲಿ Twitter ನಲ್ಲಿ ಲಾಗಿನ್ ಮಾಡಲು ತಾತ್ಕಾಲಿಕ ಪಾಸ್ವರ್ಡ್ ಅನ್ನು ಉಪಯೋಗಿಸಬೇಕಾಗುತ್ತದೆ; ನಿಮ್ಮ ಸಾಮಾನ್ಯ ಬಳಕೆದಾರಹೆಸರು ಮತ್ತು ಪಾಸ್ವರ್ಡ್ ಸಂಯೋಜನೆ ಉಪಯೋಗಿಸಿಕೊಂಡು ಲಾಗ್ ಇನ್ ಮಾಡಲು ನಿಮಗೆ ಸಾಧ್ಯವಾಗುವುದಿಲ್ಲ. ಉದಾಹರಣೆಗೆ, ನೀವು ವೆಬ್ನಲ್ಲಿ ನಿಮ್ಮ ಖಾತೆಯ ಸೆಟ್ಟಿಂಗ್ಗಳಲ್ಲಿ ಲಾಗಿನ್ ಪರಿಶೀಲನೆಯನ್ನು ಸಕ್ರಿಯಗೊಳಿಸಿದ್ದರೆ ಮತ್ತು Android ಆಪ್ಗಾಗಿ Twitter ಗೆ ಲಾಗಿನ್ ಮಾಡಬೇಕಾಗಿದ್ದರೆ, ನೀವು ಹಾಗೆ ಮಾಡುವಂತೆ ತಾತ್ಕಾಲಿಕ ಪಾಸ್ವರ್ಡ್ ಅನ್ನು ಉಪಯೋಗಿಸಬೇಕಾಗುತ್ತದೆ.
ಲಾಗಿನ್ ಮಾಡಲು ನಿಮಗೆ ತಾತ್ಕಾಲಿಕ ಪಾಸ್ವರ್ಡ್ ಅಗತ್ಯವಿದೆ ಎಂದು ನಾವು ಪತ್ತೆ ಮಾಡಿದರೆ, ನಾವು ನಿಮ್ಮ ಫೋನ್ಗೆ SMS ಪಠ್ಯ ಸಂದೇಶದ ಮೂಲಕ ಅದನ್ನು ಕಳುಹಿಸುತ್ತೇವೆ. ಬದಲಾಗಿ, ನೀವು ನಿಮ್ಮ ಸ್ವಂತ ತಾತ್ಕಾಲಿಕ ಪಾಸ್ವರ್ಡ್ ಅನ್ನು ಜನರೇಟ್ ಮಾಡಬಹುದು.
twitter.com ನಲ್ಲಿ ತಾತ್ಕಾಲಿಕ ಪಾಸ್ವರ್ಡ್ ಅನ್ನು ಜನರೇಟ್ ಮಾಡುವುದು ಹೇಗೆ
- twitter.com ನಲ್ಲಿ ನಿಮ್ಮ ಖಾತೆಯ ಸೆಟ್ಟಿಂಗ್ಗಳ ಖಾತೆ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
- ಆಪ್ ಪಾಸ್ವರ್ಡ್ ಜನರೇಟ್ ಮಾಡಿ ಕ್ಲಿಕ್ ಮಾಡಿ.
- ನಿಮ್ಮ ಪ್ರಸ್ತುತ ಖಾತೆಯ ಪಾಸ್ವರ್ಡ್ ಅನ್ನು ನಮೂದಿಸಿ ಮತ್ತು ಮತ್ತೊಮ್ಮೆ ಸಲ್ಲಿಸಿ ಕ್ಲಿಕ್ ಮಾಡಿ.
- ನೀವು ತಾತ್ಕಾಲಿಕ ಪಾಸ್ವರ್ಡ್ ಮೇಲೆ ಕ್ಲಿಕ್ ಮಾಡಬಹುದು ಮತ್ತು ಇದು ನಿಮಗಾಗಿ ಸ್ವಯಂಚಾಲಿತವಾಗಿ ಅದನ್ನು ನಕಲು ಮಾಡುತ್ತದೆ.
- ನಿಮ್ಮ ಇತರೆ ಸಾಧನ ಅಥವಾ ಅಪ್ಲಿಕೇಶನ್ಗೆ ಲಾಗ್ ಇನ್ ಮಾಡಲು ಪ್ರಾಂಪ್ಟ್ ಮಾಡಿದಾಗ, ನಿಮ್ಮ ಬಳಕೆದಾರ ಹೆಸರನ್ನು ನಮೂದಿಸಿ ಮತ್ತು ನಿಮಗೆ ಒದಗಿಸಲಾದ ತಾತ್ಕಾಲಿಕ ಪಾಸ್ವರ್ಡ್ ಅನ್ನು ಉಪಯೋಗಿಸಿ.
ಗಮನಿಸಿ: ತಾತ್ಕಾಲಿಕ ಪಾಸ್ವರ್ಡ್ಗಳು ಒಂದು ಗಂಟೆಯ ನಂತರ ಅವಧಿ ಮೀರುತ್ತದೆ. iOS ಗಾಗಿ Twitter or Android ಗಾಗಿ Twitter ಅಥವಾ mobile.twitter.com ನಲ್ಲಿ ಲಾಗ್ ಇನ್ ಮಾಡಲು ನಿಮಗೆ ತಾತ್ಕಾಲಿಕ ಪಾಸ್ವರ್ಡ್ ಅಗತ್ಯವಿರುವುದಿಲ್ಲ.