ಲಾಕ್ ಆದ ಅಥವಾ ಸೀಮಿತ ಖಾತೆಯ ಬಗ್ಗೆ ಸಹಾಯ

ಖಾತೆಯು ರಾಜಿಯಾಗಿದೆ ಎಂದು ಕಂಡುಬಂದರೆ ಅಥವಾ Twitter ನಿಯಮಗಳು ಅಥವಾ ಸೇವಾ ನಿಯಮಗಳ ಉಲ್ಲಂಘನೆ ಮಾಡಿದರೆ ಖಾತೆಯನ್ನು ನಾವು ಲಾಕ್ ಮಾಡಬಹುದು ಅಥವಾ ಕೆಲವು ಖಾತೆ ವೈಶಿಷ್ಟ್ಯಗಳ ಮೇಲೆ ತಾತ್ಕಾಲಿಕ ಮಿತಿಗಳನ್ನು ಹಾಕಬಹುದು. ನೀವು ಲಾಗಿನ್ ಮಾಡಿದಾಗ ಅಥವಾ ಆಪ್ ತೆರೆದಾಗ ನಿಮ್ಮ ಖಾತೆಯನ್ನು ಲಾಕ್ ಮಾಡಲಾಗಿದೆ ಎಂಬ ಸಂದೇಶ ಕಾಣಿಸಿದರೆ ಅಥವಾ ಖಾತೆಯ ಕೆಲವು ವೈಶಿಷ್ಟ್ಯಗಳನ್ನು ಮಿತಿಗೊಳಿಸಲಾಗಿದ್ದರೆ ಮರುಸ್ಥಾಪಿಸಲು ಸೂಚನೆಗಳನ್ನು ಅನುಸರಿಸಿ ಅಥವಾ ಇನ್ನಷ್ಟು ಮಾಹಿತಿ ಓದುವುದನ್ನು ಮುಂದುವರಿಸಿ.


ನಿಮ್ಮ ಖಾತೆಯನ್ನು ಸುರಕ್ಷತೆ ಉದ್ದೇಶಗಳಿಗೆ ಲಾಕ್ ಮಾಡಲಾಗಿದೆ


ನಿಮ್ಮ ಖಾತೆಗೆ ನೀವು ಲಾಗಿನ್ ಮಾಡಿದಾಗ ಸುರಕ್ಷತೆ ಉದ್ದೇಶಗಳಿಗೆ ನಿಮ್ಮ ಖಾತೆಯನ್ನು ಲಾಕ್ ಮಾಡಲಾಗಿದೆ ಎಂಬ ಸಂದೇಶ ಕಾಣಿಸಿದರೆ, ಅನುಮಾನಾಸ್ಪದ ವರ್ತನೆಯನ್ನು ನಾವು ಕಂಡುಕೊಂಡಿದ್ದೇವೆ ಮತ್ತು ನಿಮ್ಮ ಖಾತೆ ರಾಜಿಯಾಗಿರಬಹುದು ಎಂಬಂತೆ ಕಾಣಿಸುತ್ತಿದೆ ಎಂದು ಅರ್ಥವಾಗಿದೆ. ನಿಮ್ಮ ಖಾತೆಯನ್ನು ಅನ್‌ಲಾಕ್ ಮಾಡಲು, ಈಗ ನಿಮ್ಮ ಪಾಸ್‌ವರ್ಡ್‌ ಬದಲಾಯಿಸಿ ಮೂಲಕ ಇದನ್ನು ಸುರಕ್ಷಿತಗೊಳಿಸಿ.

ನಿಮ್ಮ ಖಾತೆಯೊಂದಿಗೆ ಸಂಬಂಧ ಹೊಂದಿರುವ ಇಮೇಲ್ ವಿಳಾಸವನ್ನು ಹೊಂದಿದ್ದರೆ, ಆ ವಿಳಾಸಕ್ಕೆ ನಾವು ಸೂಚನೆಗಳನ್ನೂ ಕಳುಹಿಸಿದ್ದೇವೆ. ನಮ್ಮಿಂದ ಬಂದಿರುವ ಇಮೇಲ್ ಕಾಣಿಸದಿದ್ದರೆ, ನಿಮ್ಮ ಸ್ಪ್ಯಾಮ್‌, ಜಂಕ್ ಮತ್ತು ಸಾಮಾಜಿಕ ಫೋಲ್ಡರ್‌ಗಳನ್ನು ದಯವಿಟ್ಟು ಪರಿಶೀಲಿಸಿ.

ನಿಮ್ಮ ಖಾತೆಯನ್ನು ಸುರಕ್ಷಿತವಾಗಿಡುವುದು ಹೇಗೆ ಎಂಬ ಬಗ್ಗೆ ಸಲಹೆಗಳನ್ನು ಓದಿ.

ನಿಮ್ಮ ಖಾತೆಯನ್ನು ಅನ್‌ಲಾಕ್ ಮಾಡಲು ಹೆಚ್ಚುವರಿ ಸಹಾಯ ಬೇಕಾದಲ್ಲಿ ನಮ್ಮ ಬೆಂಬಲ ತಂಡವನ್ನು ಸಂಪರ್ಕಿಸಿ.
 

ನಿಮ್ಮ ಖಾತೆಯನ್ನು ಲಾಕ್ ಮಾಡಲಾಗಿದೆ ಮತ್ತು ನಿಮ್ಮ ಮಾನ್ಯವಾದ ಮಾಲೀಕರನ್ನು ನಾವು ದೃಢೀಕರಿಸಬೇಕು

Twitter ನಿಯಮಗಳು ಅನ್ನು ಉಲ್ಲಂಘಿಸುವ ಸ್ವಯಂಚಾಲಿತ ವರ್ತನೆಯನ್ನು ನಿಮ್ಮ ಖಾತೆಯು ಪ್ರದರ್ಶಿಸಿದಂತೆ ಕಂಡುಬಂದರೆ, ನಾವು ಅದನ್ನು ಲಾಕ್ ಮಾಡಬಹುದು ಮತ್ತು ಖಾತೆಯ ಮಾನ್ಯವಾದ ಮಾಲೀಕರು ನೀವು ಎಂದು ದೃಢೀಕರಿಸಲು ವಿನಂತಿಸುತ್ತೇವೆ.

ಖಾತೆಯನ್ನು ಅನ್‌ಲಾಕ್ ಮಾಡಲು:

  1. ನಿಮ್ಮ ಖಾತೆಗೆ ಲಾಗ್ ಇನ್ ಮಾಡಿ.
  2. ನಿಮ್ಮ ಖಾತೆಯನ್ನು ಲಾಕ್ ಮಾಡಲಾಗಿದೆ ಎಂದು ನಿಮಗೆ ತಿಳಿಸುವ ಸಂದೇಶವನ್ನು ಹುಡುಕಿ.
  3. ಆರಂಭ ಎಂಬುದನ್ನು ಕ್ಲಿಕ್ ಮಾಡಿ ಅಥವಾ ತಟ್ಟಿ.
  4. ನಿಮ್ಮ ಫೋನ್ ನಂಬರ್ ನಮೂದಿಸಿ. ನಿಮ್ಮ ಖಾತೆಯೊಂದಿಗೆ ಈ ಪೋನ್ ನಂಬರ್ ಅನ್ನು ನಾವು ಸಂಯೋಜಿಸುತ್ತೇವೆ ಎಂಬುದನ್ನು ದಯವಿಟ್ಟು ಗಮನಿಸಿ.
  5. ಪರಿಶೀಲನೆ ಕೋಡ್ ಇರುವ ಪಠ್ಯ ಸಂದೇಶವನ್ನು ನಾವು ನಿಮಗೆ ಕಳುಹಿಸುತ್ತೇವೆ ಅಥವಾ ಫೋನ್ ಕಾಲ್ ಸ್ವೀಕರಿಸುತ್ತೀರಿ. ಕೋಡ್ ನಿಮ್ಮ ಫೋನ್‌ಗೆ ಬರಲು ಕೆಲವು ನಿಮಿಷಗಳನ್ನು ತೆಗೆದುಕೊಳ್ಳಬಹುದು.
  6. ನೀವು ಪರಿಶೀಲನೆ ಕೋಡ್ ಅನ್ನು ನಮೂದಿಸಿದ ನಂತರ, ನಿಮ್ಮ ಖಾತೆ ಅನ್‌ಲಾಕ್ ಮಾಡಲು ಸಲ್ಲಿಸಿ ಅನ್ನು ಕ್ಲಿಕ್ ಮಾಡಿ ಅಥವಾ ತಟ್ಟಿ.

ನಿಮ್ಮ ಖಾತೆಯೊಂದಿಗೆ ಸಂಬಂಧ ಹೊಂದಿರುವ ಇಮೇಲ್ ವಿಳಾಸವನ್ನು ಹೊಂದಿದ್ದರೆ, ಆ ವಿಳಾಸಕ್ಕೆ ನಾವು ಸೂಚನೆಗಳನ್ನೂ ಕಳುಹಿಸಿದ್ದೇವೆ. ನಮ್ಮಿಂದ ಬಂದಿರುವ ಇಮೇಲ್ ಕಾಣಿಸದಿದ್ದರೆ, ನಿಮ್ಮ ಸ್ಪ್ಯಾಮ್‌, ಜಂಕ್ ಮತ್ತು ಸಾಮಾಜಿಕ ಫೋಲ್ಡರ್‌ಗಳನ್ನು ದಯವಿಟ್ಟು ಪರಿಶೀಲಿಸಿ.

ನಿಮ್ಮ ಖಾತೆಯನ್ನು ಅನ್‌ಲಾಕ್ ಮಾಡಲು ಹೆಚ್ಚುವರಿ ಸಹಾಯ ಬೇಕಾದಲ್ಲಿ ನಮ್ಮ ಬೆಂಬಲ ತಂಡವನ್ನು ಸಂಪರ್ಕಿಸಿ.

ನಿಮ್ಮ ಖಾತೆಯು ಈ ಸ್ಥಿತಿಯಲ್ಲಿದ್ದು, ಖಾತೆಯು ಅಸಹಜ ಚಟುವಟಿಕೆಯನ್ನು ಪ್ರದರ್ಶಿಸಿದೆ ಎಂಬ ಸಂದೇಶವು ನಿಮ್ಮ ಪ್ರೊಫೈಲ್‌ಗೆ ಭೇಟಿ ಮಾಡಿದ ಜನರಿಗೆ ಕಾಣಿಸುತ್ತದೆ ಮತ್ತು ಇನ್ನೂ ನೋಡಲು ಬಯಸಿದ್ದಾರೆಯೇ ಎಂಬುದನ್ನು ದೃಢೀಕರಿಸಲು ಅವರನ್ನು ಕೇಳಲಾಗುತ್ತದೆ.


Twitter ನಿಯಮಗಳನ್ನು ಉಲ್ಲಂಘಿಸಿರಬಹುದಾದ್ದರಿಂದ ನಿಮ್ಮ ಖಾತೆ ಸೀಮಿತಗೊಂಡಿದೆ
 

 

Twitter ನಿಯಮಗಳನ್ನು ಉಲ್ಲಂಘಿಸಿರಬಹುದಾದ್ದರಿಂದ ನಿಮ್ಮ ಖಾತೆಯನ್ನು ಮಿತಿಗೊಳಿಸಲಾಗಿದ್ದರೆ, Twitter ಅನ್ನು ನೀವು ಬ್ರೌಸ್ ಮಾಡಬಹುದು. ಆದರೆ, ಈ ಸ್ಥಿತಿಯಲ್ಲಿ ನಿಮ್ಮ ಹಿಂಬಾಲಕರಿಗೆ ನೇರ ಸಂದೇಶಗಳನ್ನು ಮಾತ್ರ ಕಳುಹಿಸಬಹುದು. ಟ್ವೀಟ್ ಮಾಡುವುದು, ಮರುಟ್ವೀಟ್ ಮಾಡುವುದು ಅಥವಾ ಇಷ್ಟಪಡುವುದರಂತಹ ಕ್ರಮಗಳಲ್ಲಿ ನೀವು ತೊಡಗಿಸಿಕೊಳ್ಳಲಾಗದು ಮತ್ತು ನಿಮ್ಮ ಹಿಂಬಾಲಕರು ಹಳೆ ಟ್ವೀಟ್‌ಗಳು ಮಾತ್ರ ನೋಡಬಹುದಾಗಿರುತ್ತದೆ.

ನಿಮ್ಮ ಸೀಮಿತ ಸ್ಥಿತಿಯಲ್ಲಿ ಕ್ಷಣಗಣನೆಯನ್ನು ಆರಂಭಿಸುವುದಕ್ಕೂ ಮೊದಲು, ಕೆಲವು ಕ್ರಮಗಳನ್ನು ಪೂರ್ಣಗೊಳಿಸುವಂತೆ ನಾವು ನಿಮ್ಮನ್ನು ಕೇಳಬಹುದು. ನಿಮ್ಮ ಇಮೇಲ್‌ ವಿಳಾಸವನ್ನು ಪರಿಶೀಲಿಸುವುದು, ನಿಮ್ಮ ಖಾತೆಗೆ ಫೋನ್ ನಂಬರ್ ಸೇರಿಸುವುದು ಅಥವಾ ನಮ್ಮ ನಿಯಮಗಳನ್ನು ಉಲ್ಲಂಘಿಸಿದ ಟ್ವೀಟ್‌ಗಳನ್ನು ಅಳಿಸುವಂತಹವುಗಳನ್ನು ಈ ಕ್ರಮಗಳು ಒಳಗೊಂಡಿರಬಹುದು.

ನಿಮ್ಮ ಖಾತೆಯನ್ನು ಮರುಸ್ಥಾಪಿಸಲು, ಲಾಗಿನ್ ಮಾಡಿ ಮತ್ತು ನಿಮ್ಮ ಖಾತೆಯನ್ನು ಲಾಕ್ ಮಾಡಲಾಗಿದೆ ಎಂದು ನಿಮಗೆ ತಿಳಿಸುವ ಸಂದೇಶವನ್ನು ಹುಡುಕಿ. ಆರಂಭ ಎಂಬುದನ್ನು ಕ್ಲಿಕ್ ಮಾಡಿ ಅಥವಾ ತಟ್ಟಿ ಮತ್ತು ವಿನಂತಿಸಿದ ಕ್ರಮಗಳನ್ನು ಪೂರ್ಣಗೊಳಿಸಲು ಸೂಚನೆಗಳನ್ನು ಅನುಸರಿಸಿ.

ಟಿಪ್ಪಣಿ: Twitter ನಿಯಮಗಳ ಪುನರಾವರ್ತಿತ ಉಲ್ಲಂಘನೆಗಳು ಶಾಶ್ವತ ಅಮಾನತಿಗೆ ಕಾರಣವಾಗಬಹುದು.

ನಿಮ್ಮ ಖಾತೆಯನ್ನು ದೋಷಯುಕ್ತವಾಗಿ ಸೀಮಿತಗೊಳಿಸಲಾಗಿದೆ ಎಂದು ಭಾವಿಸಿದರೆ, ನಮ್ಮ ಬೆಂಬಲ ತಂಡವನ್ನು ಸಂಪರ್ಕಿಸುವ ಮೂಲಕ ನೀವು ಮೇಲ್ಮನವಿ ಸಲ್ಲಿಸಬಹುದು.

ನಿಮ್ಮ ಖಾತೆಯನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿದ್ದರೆ, ನಿಮ್ಮ ಪ್ರೊಫೈಲ್‌ಗೆ ಭೇಟಿ ನೀಡುವ ಜನರಿಗೆ Twitter ನಿಯಮಗಳನ್ನು ಖಾತೆ ಉಲ್ಲಂಖಿಸಿರಬಹುದು ಎಂದು ತಿಳಿಸುವ ಮತ್ತು ಇನ್ನೂ ನೋಡಲು ಅವರು ಬಯಸಿದ್ದಾರೆಯೇ ಎಂದು ದೃಢೀಕರಿಸುವಂತೆ ಕೇಳುವ ಸಂದೇಶ ಕಾಣಿಸಿಕೊಳ್ಳಬಹುದು.
 

ಅನುಮಾನಾಸ್ಪದ ಚಟುವಟಿಕೆಯಿಂದಾಗಿ ನಿಮ್ಮ ಖಾತೆಯ ಕೆಲವು ವೈಶಿಷ್ಟ್ಯಗಳು ಸೀಮಿತವಾಗಿವೆ


Twitter ನಿಯಮಗಳನ್ನು ಉಲ್ಲಂಘಿಸುವ ವ್ಯಗ್ರ ಹಿಂಬಾಲಿಸುವಿಕೆ ಅಥವಾ ವ್ಯಗ್ರ ಎಂಗೇಜ್‍ಮೆಂಟ್‌ಗಳನ್ನು (ಇಷ್ಟ, ಮರುಟ್ವೀಟ್ ಮತ್ತು ಕೋಟ್ ಟ್ವೀಟ್‌ನಂತಹ) ನಿಮ್ಮ ಖಾತೆಯು ತೋರಿಸಿದರೆ, ನಿರ್ದಿಷ್ಟ ಸಮಯಕ್ಕೆ ನಿಮ್ಮ ಖಾತೆ ವೈಶಿಷ್ಟ್ಯಗಳನ್ನು ಮಿತಿಗೊಳಿಸಲಾಗಿದೆ ಎಂಬ ಸಂದೇಶ ನಿಮಗೆ ಕಾಣಿಸುತ್ತದೆ.

ಆಯ್ಕೆ ಮಾಡಲು ಎರಡು ಆಯ್ಕೆಗಳನ್ನು ನೀವು ಹೊಂದಿರುತ್ತೀರಿ:

  • ಪಟ್ಟಿ ಮಾಡಿದ ನಿಗದಿತ ಸಮಯಕ್ಕೆ ತಾತ್ಕಾಲಿಕವಾಗಿ, ಸೀಮಿತ ಸ್ಥಿತಿಯಲ್ಲಿ Twitter ಬಳಸುವುದು.
  • ನಿಮ್ಮ ಫೋನ್ ಸಂಖ್ಯೆ ಅಥವಾ ಇಮೇಲ್ ವಿಳಾಸವನ್ನು ಪರಿಶೀಲಿಸಲು ನಮ್ಮ ಸೂಚನೆಗಳನ್ನು ಪೂರ್ಣಗೊಳಿಸಿ.
     

Twitter ಅನ್ನು ತಾತ್ಕಾಲಿಕವಾಗಿ, ಸೀಮಿತ ಸ್ಥಿತಿಯಲ್ಲಿ ಬಳಸಲು, Twitter ಗೆ ಮುಂದುವರಿಯಿರಿ ಅನ್ನು ನೀವು ಸರಳವಾಗಿ ಕ್ಲಿಕ್ ಮಾಡಬಹುದು ಅಥವಾ ತಟ್ಟಬಹುದು. ನಿಮ್ಮ ಸೀಮಿತ ಸ್ಥಿತಿಯಲ್ಲಿ, ಶೋಧ ಫಲಿತಾಂಶಗಳು ಮತ್ತು ಸೂಚನೆಗಳಿಂದ ಸೇರಿದಂತೆ Twitter ನಲ್ಲಿ ಕೆಲವು ಸ್ಥಳಗಳನ್ನು ನಿಮ್ಮ ಖಾತೆ ಮತ್ತು ಟ್ವೀಟ್‌ಗಳು ಫಿಲ್ಟರ್ ಮಾಡಿರಬಹುದು. ನೀವು Twitter ಗೆ ಮುಂದುವರಿಯಿರಿ ಆಯ್ಕೆ ಮಾಡಿದರೆ, ವಾಪಸು ಹೋಗಿ ಪರಿಶೀಲನೆ ಆಯ್ಕೆಯನ್ನು ಆರಿಸಲು ನಿಮಗೆ ಸಾಧ್ಯವಾಗುವುದಿಲ್ಲ.

ಫೋನ್ ನಂಬರ್ ಅಥವಾ ಇಮೇಲ್ ವಿಳಾಸವನ್ನು ಪರಿಶೀಲಿಸುವ ಮೂಲಕ ನಿಮ್ಮ ಖಾತೆಯನ್ನು ಮರುಸ್ಥಾಪಿಸಲು, ಪರಿಶೀಲಿಸಿ ಎಂಬುದನ್ನು ಕ್ಲಿಕ್ ಮಾಡಿ ಅಥವಾ ತಟ್ಟಿ ಮತ್ತು ನಾವು ಒದಗಿಸುವ ಸೂಚನೆಗಳನ್ನು ಅನುಸರಿಸಿ. ನಿಮ್ಮ ಫೋನ್ ನಂಬರ್ ಮತ್ತು ಇಮೇಲ್ ವಿಳಾಸವನ್ನು ಪರಿಶೀಲಿಸುವುದರಿಂದ, Twitter ನಲ್ಲಿ ಸಂಭಾವ್ಯವಾಗಿ ಸ್ವಯಂಚಾಲಿತ ಅಥವಾ ಸ್ಕ್ರಿಪ್ಟ್ ಮಾಡಿದ ಚಟುವಟಿಕೆಯನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ.

ಗಮನಿಸಿ: ನಿಮ್ಮ ಖಾತೆಯು Twitter ನಿಯಮಗಳನ್ನು ಪುನರಾವರ್ತಿತವಾಗಿ ಉಲ್ಲಂಘಿಸುವುದು ಕಂಡುಬಂದರೆ ಅಥವಾ ಇತರ ಖಾತೆಗಳೊಂದಿಗೆ ವ್ಯಗ್ರವಾಗಿ ತೊಡಗಿಸಿಕೊಂಡಿದ್ದರೆ, ಫೋನ್ ಮೂಲಕ ಪರಿಶೀಲಿಸುವ ಆಯ್ಕೆಯನ್ನು ನಿಮಗೆ ಒದಗಿಸಲಾಗದಿರಬಹುದು. ಈ ಸನ್ನಿವೇಶದಲ್ಲಿ, ಪಟ್ಟಿ ಮಾಡಿದ ನಿಗದಿತ ಸಮಯದವರೆಗೆ ಸೀಮಿತ ಸ್ಥಿತಿಯಲ್ಲಿ Twitter ಬಳಸಲು ಮಾತ್ರ ನಿಮಗೆ ಸಾಧ್ಯವಾಗುತ್ತದೆ.

ನಿಮ್ಮ ಲಾಕ್‌ ಆದ ಖಾತೆಯನ್ನು ನಿಷ್ಕ್ರಿಯಗೊಳಿಸುವುದು ಹೇಗೆ

ನಿಮ್ಮ ಲಾಕ್ ಆದ ಖಾತೆಯನ್ನು ನಿಷ್ಕ್ರಿಯಗೊಳಿಸಲು, ದಯವಿಟ್ಟು ನಮ್ಮ ದೋಷ ಪರಿಹಾರ ಲೇಖನಗಳನ್ನು ನೋಡಿ ಅಥವಾ ಇಲ್ಲಿ ವಿನಂತಿ ಸಲ್ಲಿಸಿ. ನಮ್ಮ ಗೌಪ್ಯತಾ ನೀತಿಯ "ನಮ್ಮನ್ನು ಸಂಪರ್ಕಿಸುವುದು ಹೇಗೆ" ವಿಭಾಗದ ಅಡಿಯಲ್ಲಿ ಪಟ್ಟಿ ಮಾಡಿದ ಸಂಪರ್ಕಗಳಿಗೆ ವಿನಂತಿಗಳನ್ನು ಕಳುಹಿಸಬಹುದು.
 

ನಿಮ್ಮ ವೈಯಕ್ತಿಕ ಮಾಹಿತಿಯ ಪ್ರತಿಯನ್ನು ವಿನಂತಿಸುವುದು ಹೇಗೆ

ತಮ್ಮ ಮಾಹಿತಿಯನ್ನು ಪ್ರವೇಶಿಸಲು ಲಾಕ್ ಆದ ಖಾತೆಗಳು ಇಲ್ಲಿ ವಿನಂತಿಯನ್ನು ಸಲ್ಲಿಸಬಹುದು. ನಮ್ಮ ಗೌಪ್ಯತಾ ನೀತಿಯ "ನಮ್ಮನ್ನು ಸಂಪರ್ಕಿಸುವುದು ಹೇಗೆ" ವಿಭಾಗದ ಅಡಿಯಲ್ಲಿ ಪಟ್ಟಿ ಮಾಡಿದ ಸಂಪರ್ಕಗಳಿಗೆ ವಿನಂತಿಗಳನ್ನು ಕಳುಹಿಸಬಹುದು.

ನಿಮ್ಮ ಖಾತೆಯನ್ನು ದೋಷಯುಕ್ತವಾಗಿ ಲಾಕ್ ಮಾಡಲಾಗಿದೆ ಎಂದು ಭಾವಿಸಿದರೆ, ನಮ್ಮ ಬೆಂಬಲ ತಂಡವನ್ನು ಸಂಪರ್ಕಿಸುವ ಮೂಲಕ ನೀವು ಮೇಲ್ಮನವಿ ಸಲ್ಲಿಸಬಹುದು.
 

ನಿಮ್ಮ ಕೆಲವು ಖಾತೆ ವೈಶಿಷ್ಟ್ಯಗಳನ್ನು ಸೀಮಿತಗೊಳಿಸಲಾಗಿದೆ


ಸಂವಾದಗಳು Twitter ಗೆ ಪ್ರಮುಖ ಆದ್ಯತೆಯಾಗಿದೆ. ಆದರೆ, Twitter ನಿಯಮಗಳನ್ನು ಉಲ್ಲಂಘಿಸಿರಬಹುದಾದ ಅಥವಾ ಇತರರ ಮುಕ್ತವಾಗಿ ಅಭಿವ್ಯಕ್ತಿಸುವ ಸಾಮರ್ಥ್ಯಕ್ಕೆ ಅಡ್ಡಿಪಡಿಸಿರಬಹುದಾದ ವರ್ತನೆಯನ್ನು ನಾವು ಗುರುತಿಸಿದರೆ ಖಾತೆಯ ಕೆಲವು ವೈಶಿಷ್ಟ್ಯಗಳನ್ನು ನಾವು ತಾತ್ಕಾಲಿಕವಾಗಿ ಸೀಮಿತಗೊಳಿಸಬಹುದು. ಉದಾಹರಣೆಗೆ, ಟ್ವೀಟ್‌ಗಳು, ಇಷ್ಟಗಳು, ಮರುಟ್ವೀಟ್‌ಗಳು ಇತ್ಯಾದಿ ಸೇರಿದಂತೆ Twitter ನಲ್ಲಿ ನಿಮ್ಮ ಚಟುವಟಿಕೆಯನ್ನು ನಿಮ್ಮ ಹಿಂಬಾಲಕರು ಮಾತ್ರ ನೋಡಬಹುದು ಎಂದಾಗಿದೆ. ಸಂಭಾವ್ಯ ನಿಂದನೀಯ ಕಂಟೆಂಟ್ ತಲುಪುವಿಕೆಯನ್ನು ಮಿತಿಗೊಳಿಸುವುದರಿಂದ, ಸುರಕ್ಷಿತ ಪರಿಸರ ಮತ್ತು ಸುಸ್ಥಿರ Twitter ಸಮುದಾಯ ರಚನೆಯಾಗುತ್ತದೆ.

ನೀವು ಲಾಗಿನ್ ಮಾಡಿದಾಗ ಈ ಸಂದೇಶ ಕಂಡುಬಂದರೆ, ನಿಮ್ಮ ಖಾತೆ ವೈಶಿಷ್ಟ್ಯಗಳನ್ನು ಮರುಸ್ಥಾಪಿಸಲು ಕ್ಷಣಗಣನೆಯನ್ನು ಆರಂಭಿಸಲು Twitter ಗೆ ಮುಂದುವರಿಯಿರಿ ಕ್ಲಿಕ್ ಮಾಡಿ ಅಥವಾ ತಟ್ಟಿ. Twitter ನ ನಿಂದನೀಯ ವರ್ತನೆ ನೀತಿ ಬಗ್ಗೆ ಇನ್ನಷ್ಟನ್ನು ನೀವು ಓದಬಹುದು ಮತ್ತು ನಮ್ಮ ದ್ವೇಷಪೂರಿತ ನಡವಳಿಕೆಯ ನೀತಿಗೆ ಮಾರ್ಗಸೂಚಿಗಳನ್ನು ಕಂಡುಕೊಳ್ಳಬಹುದು.

ಈ ಲೇಖನ ಹಂಚಿಕೊಳ್ಳಿ