ಲಾಗಿನ್ ಪರಿಶೀಲನೆಯಲ್ಲಿ ಸಹಾಯ

ನಾನು ನನ್ನ ಫೋನ್ ಕಳೆದುಕೊಂಡಿದ್ದೇನೆ

 • ನೀವು ಲಾಗಿನ್ ಪರಿಶೀಲನೆಯಲ್ಲಿ ಲಾಗಿನ್ ಮಾಡಿದ್ದರೆ ಮತ್ತು ನೀವು ಬ್ಯಾಕ್ಅಪ್ ಕೋಡ್ ಅನ್ನು ರಚಿಸಿದ್ದರೆ, ನಿಮ್ಮ ಖಾತೆ ಪ್ರವೇಶಿಸಲು ಬ್ಯಾಕಅಪ್ ಕೋಡ್ ನಮೂದಿಸಿ ಮತ್ತು ನಿಮ್ಮ ಮೊಬೈಲ್ ಸೆಟ್ಟಿಂಗ್​ಗಳನ್ನು ಅಪ್​ಡೇಟ್ ಮಾಡಿ.
 • ನೀವು ನಿಮ್ಮ ಖಾತೆಗೆ ಲಾಗ್ ಇನ್ ಮಾಡಿಲ್ಲದಿದ್ದರೆ ಮತ್ತು ಸಕ್ರಿಯ ಬ್ಯಾಕ್ ಅಪ್ ಕೋಡ್​ಗೆ ಪ್ರವೇಶಾವಕಾಶ ಹೊಂದಿಲ್ಲದಿದ್ದರೆ, ನೆರವಿಗಾಗಿ ದಯವಿಟ್ಟು ಬೆಂಬಲ ಸಂಪರ್ಕ ಮಾಡಿ.

Note: ನೀವು ನಿಮ್ಮ ಖಾತೆಗೆ ಇನ್ನೂ ಲಾಗ್ ಇನ್ ಮಾಡಿಯೇ ಇದ್ದರೆ, twitter.com ನಲ್ಲಿ ನಿಮ್ಮ ಮೊಬೈಲ್ ಸೆಟ್ಟಿಂಗ್​ಗಳಿಂದ ನಿಮ್ಮ ಫೋನ್ ತೆಗೆದುಹಾಕಬಹುದು. ನನ್ನ ಫೋನ್ ಅಳಿಸಿ ಕ್ಲಿಕ್ ಮಾಡಿ ಮತ್ತು ನಿಮ್ಮ ಖಾತೆಗೆ ಲಾಗಿನ್ ಪರಿಶೀಲನೆಯು ಸ್ವಯಂಚಾಲಿತವಾಗಿ ನಿಷ್ಕ್ರಿಯಗೊಳ್ಳುತ್ತದೆ.

ನಾನು ಹೊಸ ಫೋನ್ ಖರೀದಿಸಿದೆ

 • ನೀವು ಬದಲಾವಣೆ ಮಾಡುವುದಕ್ಕೂ ಮೊದಲು ನಿಮ್ಮ ಹಳೆಯ ಫೋನ್​ನ ಬ್ಯಾಕ್ಅಪ್ ಮಾಡುವಂತೆ ನಾವು ಸಲಹೆ ಮಾಡುತ್ತೇವೆ. ನಿಮ್ಮ ಹೊಸ ಸಾಧನದಲ್ಲಿ ನಿಮ್ಮ ಆಪ್ ಸೆಷನ್ ಅನ್ನು ಮರುಸ್ಥಾಪಿಸಲು ಇದು ಅನುಮತಿಸುತ್ತದೆ, ಲಾಗಿನ್ ಪರಿಶೀಲನೆ ಬಳಕೆ ಮುಂದುವರಿಸಲು ನಿಮಗೆ ಅನುವು ಮಾಡುತ್ತದೆ. (ಗಮನಿಸಿ: ನೀವು iOS ಗಾಗಿನ Twitter ನಲ್ಲಿದ್ದರೆ, ನಿಮ್ಮ ಆಪ್ ಕೀ ಅನ್ನು ಸಂರಕ್ಷಿಸಲು ಎನ್​ಕ್ರಿಪ್ಟ್ ಮಾಡಿದ ಬ್ಯಾಕ್​ಅಪ್ ಅನ್ನು ಮಾಡುವಂತೆ ನಾವು ಶಿಫಾರಸು ಮಾಡುತ್ತೇವೆ. ವಾಸ್ತವವಾಗಿ, iCloud ಬ್ಯಾಕ್​ಅಪ್​ಗಳು ಮಾತ್ರವೇ ಕೀಯನ್ನು ಸಂರಕ್ಷಿಸುವುದಿಲ್ಲ ಮತ್ತು ಎನ್​ಕ್ರಿಪ್ಟ್ ಮಾಡಿದ ಡೇಟಾ ಇಲ್ಲದೇ, twitter.com ನಲ್ಲಿ ಜನರೇಟ್ ಮಾಡಿದ ತಾತ್ಕಾಲಿಕ ಪಾಸ್​ವರ್ಡ್ ಬಳಸಿ ನೀವು ಆಪ್​ಗೆ ಪುನಃ ಲಾಗ್ ಇನ್ ಮಾಡಬೇಕಾಗಬಹುದು)
 • ನಿಮ್ಮ ಹಳೆಯ ಫೋನ್​ನಿಂದ ಅಥವಾ ಪ್ರಸ್ತುತ ತೆರೆದ ವೆಬ್ ಸೆಷನ್ ಇದ್ದಲ್ಲಿ twitter.com ನಿಂದ ಲಾಗಿನ್ ಪರಿಶೀಲನೆಯ ನೋಂದಣಿಯನ್ನು ಕೂಡ ರದ್ದು ಮಾಡಬಹುದು. ನೀವು ತೆರೆದ ವೆಬ್ ಸೆಷನ್ ಹೊಂದಿಲ್ಲದಿದ್ದರೆ ಮತ್ತು ಹಳೆಯ ಫೋನ್ ಅನ್ನು ನೀವು ಹೊಂದಿಲ್ಲದಿದ್ದರೆ, ನಿಮ್ಮ ಬ್ಯಾಕ್​ಅಪ್ ಕೋಡ್ ಬಳಸಿ twitter.com ಗೆ ನೀವು ಪುನಃ ಲಾಗ್ ಇನ್ ಮಾಡಬಹುದು.
 • ನಿಮ್ಮ ಖಾತೆಯನ್ನು ಸುರಕ್ಷಿತವಾಗಿಡುವುದು ಹೇಗೆ ಎಂಬ ಬಗ್ಗೆ ಸಲಹೆಗಳನ್ನು ತಿಳಿಯಿರಿ.

ನನಗೆ ಎಸ್​ಎಮ್ಎಸ್ ಪರಿಶೀಲನೆ ಕೋಡ್ ಬಂದಿಲ್ಲ

 • ಎಸ್​ಎಮ್ಎಸ್ ಪಠ್ಯ ಸಂದೇಶಗಳು ಡೆಲಿವರಿಯಲ್ಲಿ ವಿಳಂಬವನ್ನು ಎದುರಿಸಬಹುದು. ಪುನಃ ಸೈನ್ ಇನ್ ಮಾಡಲು ಯತ್ನಿಸುವುದಕ್ಕೂ ಮೊದಲು ಕನಿಷ್ಠ ಎರಡು ನಿಮಿಷಗಳವರೆಗೆ ನಿರೀಕ್ಷಿಸಿ.
 • ನೀವು ಲಾಗ್ ಇನ್ ಮಾಡಿದರೆ, ನಿಮ್ಮ ಮೊಬೈಲ್ ಸೆಟ್ಟಿಂಗ್​ಗಳಲ್ಲಿ ಸರಿಯಾಗಿ ನಿಮ್ಮ ಫೋನ್ ಸಕ್ರಿಯಗೊಂಡಿದೆಯೇ ಎಂಬುದನ್ನು ಪರಿಶೀಲಿಸಿ. ಈ ಎಸ್​ಎಮ್ಎಸ್​ಗಾಗಿ Twitter ದೋಷ ಪರಿಹಾರ ಸಲಹೆಗಳನ್ನು ಪ್ರಯತ್ನಿಸಿ
 • ನೀವು ಇತ್ತೀಚೆಗೆ ಫೋನ್ ಸಂಖ್ಯೆ ಅಥವಾ ಮೊಬೈಲ್ ಕ್ಯಾರಿಯರ್ ಅನ್ನು ಬದಲಿಸಿದ್ದರೆ, ನಿಮ್ಮ ಸೆಟ್ಟಿಂಗ್​ಗಳನ್ನು ನೀವು ಅಪ್​ಡೇಟ್ ಮಾಡಬೇಕು. ನೀವು ಈಗಲೂ ಲಾಗ್ ಇನ್ ಆಗಿದ್ದರೆ, ವೆಬ್, iOS ಅಥವಾ Android ಆಪ್​ಗಳ ಮೂಲಕ ಇದನ್ನು ನೀವು ಮಾಡಬಹುದು. ಇಲ್ಲವಾದರೆ, ಲಾಗ್ ಇನ್ ಮಾಡಿ ನಿಮ್ಮ ಸೆಟ್ಟಿಂಗ್​ಗಳನ್ನು ಬದಲಿಸಲು ಬ್ಯಾಕ್ ಅಪ್ ಕೋಡ್ ಅನ್ನು ನೀವು ಬಳಸಬಹುದು. ಬ್ಯಾಕ್​ಅಪ್ ಕೋಡ್​ಗಳ ಬಗ್ಗೆ ಹೆಚ್ಚಿನ ಮಾಹಿತಿ ಈ ಕೆಳಗಿನಂತಿದೆ.
 • ನಿಮ್ಮ ಮೊಬೈಲ್ ಸಾಧನ ಆಫ್​ಲೈನ್​ನಲ್ಲಿದ್ದರೆ ಅಥವಾ ಫ್ಲೈಟ್ ಮೋಡ್​ನಲ್ಲಿದ್ದರೆ, ಎಸ್​ಎಮ್ಎಸ್ ಮೂಲಕ ಲಾಗ್ ಇನ್ ಪರಿಶೀಲನೆ ಕೋಡ್​ಗಳನ್ನು ಸ್ವೀಕರಿಸಲು ನೀವು ವಿಫಲವಾಗಬಹುದು. ಪರ್ಯಾಯವಾಗಿ, ನಿಮ್ಮ iOSಗಾಗಿನ Twitter ಅಥವಾ Android ಆಪ್​ಗಾಗಿನ Twitter ಮೂಲಕ ಅಥವಾ twitter.com ಮೂಲಕ ಕ್ಯೂಆರ್ ಕೋಡ್ (ಸೂಚನೆಗಳನ್ನು ಈ ಕೆಳಗೆ ನೀಡಲಾಗಿದೆ) ಮೂಲಕ ಕೋಡ್ ಅನ್ನು ರಚಿಸಬಹುದು.

ನನ್ನ ಫೋನ್ ಆಫ್​ಲೈನ್​ನಲ್ಲಿದೆ ಅಥವಾ ಫ್ಲೈಟ್ ಮೋಡ್​ನಲ್ಲಿದೆ

iOSಗಾಗಿನ Twitter ಅಥವಾ Android ಗಾಗಿನ Twitter ಆಪ್​ಗಳಲ್ಲಿನ ಕೋಡ್ ಜನರೇಟ್ ಮಾಡುವ ಬಗೆ:

 1. ನಿಮ್ಮ ಸೆಟ್ಟಿಂಗ್​ಗಳು ಮತ್ತು ಗೌಪ್ಯತೆಗೆ ತೆರಳಿ.
  • iOS ಗಾಗಿ Twitter ನಲ್ಲಿ: ಮೇಲಿನ ಮೆನುವಿನಲ್ಲಿ, ನಿಮ್ಮ ಪ್ರೊಫೈಲ್ ಐಕಾನ್ ತಟ್ಟಿ ಮತ್ತು ಸೆಟ್ಟಿಂಗ್​ಗಳು ಮತ್ತು ಗೌಪ್ಯತೆ ಆಯ್ಕೆ ಮಾಡಿ.
  • Android ಗಾಗಿ Twitter ನಲ್ಲಿ: ಮೇಲ್ಭಾಗದ ಮೆನುವಿನಲ್ಲಿ, ನೀವು ನ್ಯಾವಿಗೇಶನ್ ಮೆನು ಐಕಾನ್  ಅಥವಾ ನಿಮ್ಮ ಪ್ರೊಫೈಲ್ ಐಕಾನ್ ನೋಡುತ್ತೀರಿ. ನೀವು ಹೊಂದಿರುವ ಯಾವುದಾದರೂ ಐಕಾನ್ ಮೇಲೆ ತಟ್ಟಿ ಮತ್ತು ಸೆಟ್ಟಿಂಗ್​ಗಳು ಮತ್ತು ಗೌಪ್ಯತೆಯನ್ನು ಆಯ್ಕೆ ಮಾಡಿ.
 2. ಖಾತೆ ತಟ್ಟಿ, ನಂತರ ಭದ್ರತೆ ತಟ್ಟಿ.
 3. ಲಾಗಿನ್ ಕೋಡ್ ಜನರೇಟರ್ ತಟ್ಟಿ. 
 4. ನಿಮ್ಮ Twitter ಖಾತೆಗೆ ಲಾಗ್ ಇನ್ ಮಾಡಲು ತೋರಿಸಿದ ಕೋಡ್ ಅನ್ನು ಬಳಸಿ.

 

ನಾನು ನನ್ನ ಫೋನ್​ನಿಂದ ಲಾಗ್ ಇನ್ ಮಾಡಲು ಆಗುತ್ತಿಲ್ಲ

 • ಈ ಸಮಸ್ಯೆಗೆ ಮೊಬೈಲ್ ಸೆಟ್ಟಿಂಗ್​ಗಳಲ್ಲಿ ಹೊಂದಾಣಿಕೆಯು ಪರಿಹಾರ ನೀಡಬಹುದು. ಡೆಸ್ಕ್​ಟಾಪ್ ಅಥವಾ ಲ್ಯಾಪ್​ಟಾಪ್ ಕಂಪ್ಯೂಟರಿನಿಂದ twitter.com ಗೆ ಲಾಗ್ ಇನ್ ಮಾಡಿ.
 • ಪರ್ಯಾಯವಾಗಿ, ಲಾಗಿನ್ ಪರಿಶೀಲನೆಯಲ್ಲಿ ನೀವು ನೋಂದಣಿ ಮಾಡಲು ಬಳಸಿದ ಸಾಧನದಿಂದ ನಿಮ್ಮ ಖಾತೆಯಿಂದ ಸೈನ್ ಔಟ್ ಮಾಡಲು ಪ್ರಯತ್ನಿಸಿ. ಆಗ ಇದು ನಿಷ್ಕ್ರಿಯಗೊಳಿಸುತ್ತದೆ ಮತ್ತು ನೀವು ಪುನಃ ನಿಮ್ಮ ಬಳಕೆದಾರರ ಹೆಸರು ಮತ್ತು ಪಾಸ್​ವರ್ಡ್ ಮೂಲಕ ಸೈನ್ ಇನ್ ಮಾಡಬಹುದು. ಸೈನ್ ಔಟ್ ಸೂಚನೆಗಳಿಗಾಗಿ ಈ ಲೇಖನಗಳಿಗೆ ಭೇಟಿ ನೀಡಿ: iOS ಗಾಗಿನ Twitter ಅಥವಾ Android ಗಾಗಿನ Twitter

ನನಗೆ ಪುಶ್ ಸೂಚನೆ ಬಂದಿಲ್ಲ

 • ನೀವು ಮೊಬೈಲ್ ಸೂಚನೆಗಳನ್ನು ಸಕ್ರಿಯಗೊಳಿಸಿರುವಿರಾ ಎಂಬುದನ್ನು ಪರಿಶೀಲಿಸಿ. ನಿಮ್ಮ ಸಾಧನದಲ್ಲಿ ಮೊಬೈಲ್ ಸೂಚನೆಗಳನ್ನು ಆನ್ ಮಾಡಿಲ್ಲದೇ ಇದ್ದರೆ ನಿಮಗೆ ಲಾಗಿನ್ ಪುಶ್ ಸೂಚನೆಗಳು ಬರುವುದಿಲ್ಲ.
 • ಅನುಮೋದನೆ ಅಥವಾ ನಿರಾಕರಣೆಗೆ ಲಭ್ಯವಿರುವ ಎಲ್ಲ ವಿನಂತಿಗಳ ಪಟ್ಟಿಯನ್ನು ನೋಡಲು ನಿಮ್ಮ ಆಪ್​ನಲ್ಲೇ ಇತ್ತೀಚಿನ ಲಾಗಿನ್ ವಿನಂತಿಗಳನ್ನು ನೀವು ಎಂದಿಗೂ ಪರಿಶೀಲಿಸಬಹುದು. ಅತ್ಯಂತ ಇತ್ತೀಚಿನ ವಿನಂತಿಗಳನ್ನು ನೋಡುವುದಕ್ಕಾಗಿ ಪುಟವನ್ನು ರಿಫ್ರೆಶ್ ಮಾಡಲು ಪಟ್ಟಿಯನ್ನು ಕೆಳಕ್ಕೆ ಎಳೆಯಿರಿ.

iOS ಗಾಗಿನ Twitter ಬಳಸುತ್ತಿದ್ದರೆ:

 1. ಮೇಲಿನ ಮೆನುವಿನಲ್ಲಿ, ನಿಮ್ಮ ಪ್ರೊಫೈಲ್ ಐಕಾನ್ ತಟ್ಟಿ ಮತ್ತು ಸೆಟ್ಟಿಂಗ್​ಗಳು ಮತ್ತು ಗೌಪ್ಯತೆ ಆಯ್ಕೆ ಮಾಡಿ.
 2. ಖಾತೆ ತಟ್ಟಿ, ನಂತರ ಭದ್ರತೆ ತಟ್ಟಿ.
 3. ಎಲ್ಲ ವಿನಂತಿಗಳ ಪಟ್ಟಿಯನ್ನು ನೋಡಲು ಲಾಗಿನ್ ವಿನಂತಿಗಳನ್ನು ತಟ್ಟಿ.
 4. ಈಗಲೂ ನೀವು ಸಿಕ್ಕಿಕೊಂಡಿದ್ದರೆ, ಪಠ್ಯ ಸಂದೇಶದ ಮೂಲಕ ನಿಮ್ಮ ಫೋನ್​ಗೆ ಲಾಗಿನ್ ಕೋಡ್ ಕಳುಹಿಸುವಂತೆ ನೀವು ವಿನಂತಿಸಬಹುದು. ಎಸ್ಎಮ್ಎಸ್ ಮೂಲಕ ನಿಮ್ಮ ಫೋನ್​ಗೆ ಕಳುಹಿಸಿದ ಕೋಡ್ ವಿನಂತಿಯ ಲಿಂಕ್ ಅನ್ನು twitter.com ನಲ್ಲಿ ನಿಮ್ಮ ಖಾತೆಗೆ ಲಾಗಿನ್ ಮಾಡಿದಾಗ ಕ್ಲಿಕ್ ಮಾಡಿ.

Android ಗಾಗಿನ Twitter ಬಳಸುತ್ತಿದ್ದರೆ:

 1. ಮೇಲ್ಭಾಗದ ಮೆನುವಿನಲ್ಲಿ, ನೀವು ನ್ಯಾವಿಗೇಶನ್ ಮೆನು ಐಕಾನ್  ಅಥವಾ ನಿಮ್ಮ ಪ್ರೊಫೈಲ್ ಐಕಾನ್ ನೋಡುತ್ತೀರಿ. ನೀವು ಹೊಂದಿರುವ ಯಾವುದೇ ಐಕಾನ್ ಅನ್ನು ತಟ್ಟಿ.
 2. ಸೆಟ್ಟಿಂಗ್​ಗಳು ಮತ್ತು ಗೌಪ್ಯತೆ ತಟ್ಟಿ.
 3. ಖಾತೆ ತಟ್ಟಿ ಮತ್ತು ಭದ್ರತೆ ಆಯ್ಕೆ ಮಾಡಿ.
 4. ಲಾಗಿನ್ ವಿನಂತಿಗಳಿಗಾಗಿ ಆಯ್ಕೆ ತಟ್ಟಿ,
 5. ಈಗಲೂ ನೀವು ಸಿಕ್ಕಿಕೊಂಡಿದ್ದರೆ, ಪಠ್ಯ ಸಂದೇಶದ ಮೂಲಕ ನಿಮ್ಮ ಫೋನ್​ಗೆ ಲಾಗಿನ್ ಕೋಡ್ ಕಳುಹಿಸುವಂತೆ ನೀವು ವಿನಂತಿಸಬಹುದು. ಎಸ್ಎಮ್ಎಸ್ ಮೂಲಕ ನಿಮ್ಮ ಫೋನ್​ಗೆ ಕಳುಹಿಸಿದ ಕೋಡ್ ವಿನಂತಿಯ ಲಿಂಕ್ ಅನ್ನು twitter.com ನಲ್ಲಿ ನಿಮ್ಮ ಖಾತೆಗೆ ಲಾಗಿನ್ ಮಾಡಿದಾಗ ಕ್ಲಿಕ್ ಮಾಡಿ.

ನನ್ನ ಬ್ಯಾಕ್​ಅಪ್ ಕೋಡ್​ಗಳನ್ನು ಬಳಸಲು ನಾನು ಯತ್ನಿಸಿದಾಗ ನನಗೆ ದೋಷ ಎದುರಾಗುತ್ತದೆ

 • ನಿಷ್ಕ್ರಿಯ ಬ್ಯಾಕ್ಅಪ್ ಕೋಡ್ ಅನ್ನು ನೀವು ಬಳಸಿ ಲಾಗಿನ್ ಮಾಡಲು ಯತ್ನಿಸಿದರೆ ಅಥವಾ ಅನುಕ್ರಮವಲ್ಲದ ಬ್ಯಾಕ್ ಅಪ್​ಕೋಡ್ ಅನ್ನು ಬಳಸಲು ನೀವು ಯತ್ನಿಸಿದರೆ, ನಿಮಗೆ ದೋಷ ಸಂದೇಶ ಕಾಣಿಸುತ್ತದೆ. ಲಾಗ್ ಇನ್ ಮಾಡಲು ಹೊಸ ಬ್ಯಾಕ್​ಅಪ್ ಕೋಡ್ ಅನ್ನು ನೀವು ಜನರೇಟ್ ಮಾಡಬೇಕು.
 • twitter.com, mobile.twitter.com ಅಥವಾ iOS ಅಥವಾ ಆಂಡ್ರಾಯ್ಡ್​ಗಾಗಿನ Twitter ಅಥವಾ ಇನ್ನೊಂದು Twitter ಕ್ಲೈಂಟ್​ನಲ್ಲಿ ಲಾಗ್ ಇನ್ ಮಾಡಿದಾಗ ಮಾತ್ರ ನಿಮ್ಮ ಬ್ಯಾಕ್ ಅಪ್ ಕೋಡ್​ಗಳು ಕೆಲಸ ಮಾಡುತ್ತವೆ. ನಿಮ್ಮ Twitter ಖಾತೆಗೆ ಸಂಯೋಜಿಸಿದ ತೃತೀಯ ಪಕ್ಷದ ಅಪ್ಲಿಕೇಶನ್ ಅನ್ನು ಪ್ರವೇಶಿಸಲು ನೀವು ಪ್ರಯತ್ನಿಸಿದರೆ, ನಿಮ್ಮ ಬ್ಯಾಕ್​ಅಪ್ ಕೋಡ್ ಬದಲಿಗೆ ತಾತ್ಕಾಲಿಕ ಪಾಸ್​ವರ್ಡ್ ಅನ್ನು ನೀವು ಬಳಸಬೇಕು.

ಬ್ಯಾಕ್​ಅಪ್ ಕೋಡ್​ಗಳನ್ನು ಬಳಸುವುದು

ನಿಮ್ಮ iOS ಅಥವಾ Android​ Twitter ಆಪ್ ಮೂಲಕ ಲಾಗಿನ್ ಪರಿಶೀಲನೆಯನ್ನು ನೀವು ಸಕ್ರಿಯಗೊಳಿಸುವಾಗ ನಿಮಗಾಗಿ ಒಂದು ಬ್ಯಾಕ್ಅಪ್ ಕೋಡ್ ಸ್ವಯಂಚಾಲಿತವಾಗಿ ಜನರೇಟ್ ಆಗುತ್ತದೆ. twitter.com ನಲ್ಲಿ ಬ್ಯಾಕ್ ಅಪ್ ಕೋಡ್ ಅನ್ನು ನೀವೂ ಕೂಡ ಜನರೇಟ್ ಮಾಡಬಹುದು. ಈ ಬ್ಯಾಕ್ಅಪ್ ಕೋಡ್ ಅನ್ನು ಬರೆದಿಟ್ಟುಕೊಳ್ಳಿ, ಮುದ್ರಿಸಿಕೊಳ್ಳಿ ಅಥವಾ ಸ್ಕ್ರೀನ್​ಶಾಟ್ ತೆಗೆದುಕೊಳ್ಳಿ. ನೀವು ಮೊಬೈಲ್ ಸಾಧನವನ್ನು ಕಳೆದುಕೊಂಡರೆ ಅಥವಾ ಫೋನ್ ಸಂಖ್ಯೆಯನ್ನು ಬದಲಿಸಿದರೆ ನಿಮ್ಮ ಖಾತೆಗೆ ಲಾಗ್ ಇನ್ ಮಾಡಲು ನೀವು ಈ ಬ್ಯಾಕ್​ಅಪ್ ಕೋಡ್ ಅನ್ನು ಬಳಸಬಹುದಾಗಿದೆ. ತಾತ್ಕಾಲಿಕ ಪಾಸ್​ವರ್ಡ್​ನಂತೆಯೇ ಬ್ಯಾಕ್​ಅಪ್ ಕೋಡ್​ಗಳು ಇರುವುದಿಲ್ಲ.

ನಿಮ್ಮ Twitter ಆಪ್ ಮೂಲಕ ಹೊಸ ಬ್ಯಾಕ್​ಅಪ್ ಕೋಡ್ ಅನ್ನು ಜನರೇಟ್ ಮಾಡಲು:

 1. ನಿಮ್ಮ ಸೆಟ್ಟಿಂಗ್​ಗಳು ಮತ್ತು ಗೌಪ್ಯತೆಗೆ ತೆರಳಿ (iOS ಸಾಧನದಲ್ಲಿ ನಿಮ್ಮ ಪ್ರೊಫೈಲ್ ಐಕಾನ್ ತಟ್ಟಿ; ಆಂಡ್ರಾಯ್ಡ್ ಸಾಧನದಲ್ಲಿ ನ್ಯಾವಿಗೇಶನ್ ಮೆನು ಐಕಾನ್   ಅಥವಾ ನಿಮ್ಮ ಪ್ರೊಫೈಲ್ ಐಕಾನ್ ತಟ್ಟಿ).
 2. ಖಾತೆ ತಟ್ಟಿ, ನಂತರ ಭದ್ರತೆ ತಟ್ಟಿ.
 3. ಬ್ಯಾಕ್ ಅಪ್ ಕೋಡ್ ತಟ್ಟಿ.
 4. ನಿಮ್ಮ ಬ್ಯಾಕ್ಅಪ್ ಕೋಡ್ ಬಳಸಲು, ನಿಮ್ಮ ಸಾಮಾನ್ಯ ಬಳಕೆದಾರರ ಹೆಸರು ಮತ್ತು ಪಾಸ್​ವರ್ಡ್ ಸಂಯೋಜನೆಯೊಂದಿಗೆ Twitter ಗೆ ಲಾಗ್ ಇನ್ ಮಾಡಿ. ಲಾಗಿನ್ ಪರಿಶೀಲನೆಯನ್ನು ಕಳುಹಿಸಿರುವುದನ್ನು ನೀವು ನೋಡಿದಾಗ, ನಿಮ್ಮ ಬ್ಯಾಕ್ಅಪ್ ಕೋಡ್ ನಮೂದಿಸಲು ಲಿಂಕ್ ಮೇಲೆ ಕ್ಲಿಕ್ ಮಾಡಿ. ನೀವು ಜನರೇಟ್ ಮಾಡಿದ ಬ್ಯಾಕ್​ಅಪ್​ಕೋಡ್ ಅನ್ನು ಸೈಟ್​ಗೆ ಲಾಗ್ ಇನ್ ಮಾಡಲು ನಮೂದಿಸಿ.

Note: ಯಾವ ಸಮಯದಲ್ಲಾದರೂ ನೀವು ಗರಿಷ್ಠ ಐದು ಸಕ್ರಿಯ ಬ್ಯಾಕ್​ಅಪ್ ಕೋಡ್​ಗಳನ್ನು ಜನರೇಟ್ ಮಾಡಬಹುದು. ನೀವು ಜನರೇಟ್ ಮಾಡಿದ ಅನುಕ್ರಮದಲ್ಲೇ ಕೋಡ್​ಗಳನ್ನು ಬಳಸುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ; ಅನುಕ್ರಮವಲ್ಲದ ಕೋಡ್ ಅನ್ನು ಬಳಸುವುದರಿಂದ ಈ ಹಿಂದೆ ಜನರೇಟ್ ಮಾಡಿದ ಎಲ್ಲ ಕೋಡ್​ಗಳೂ ಅಮಾನ್ಯಗೊಳ್ಳುತ್ತವೆ.

ನಾನು ವೆರಿಜಾನ್ ಗ್ರಾಹಕ ಮತ್ತು ನನ್ನ ಖಾತೆಗೆ ನಾನು ಲಾಗ್ ಇನ್ ಮಾಡಲಾಗುತ್ತಿಲ್ಲ

ನೀವು ಹೊಸ ಅಥವಾ ಪ್ರಸ್ತುತ ವೆರಿಜಾನ್ ಗ್ರಾಹಕರಾಗಿದ್ದರೆ, ಪಠ್ಯ ಸಂದೇಶದ ಮೂಲಕ ನೀವು ಲಾಗ್ ಇನ್ ಪರಿಶೀಲನೆ ಪಿನ್ ಅನ್ನು ನೀವು ಸ್ವೀಕರಿಸುತ್ತಿಲ್ಲವಾದ ಕಾರಣ ನಿಮ್ಮ ಖಾತೆಗೆ ಲಾಗಿನ್ ಮಾಡಲು ಸಾಧ್ಯವಾಗದಿರಬಹುದು. Twitter ಖಾತೆಯಿಂದ ಲಾಗ್ ಔಟ್ ಆಗಿ ಪುನಃ ಲಾಗ್ ಇನ್ ಮಾಡಿ ಪ್ರಯತ್ನಿಸಿ. ಆಗ ನೀವು ಎಸ್​ಎಮ್ಎಸ್ ಮೂಲಕ ಪರಿಶೀಲನೆ ಪಿನ್ ಅನ್ನು ಸ್ವೀಕರಿಸುತ್ತೀರಿ. ಇದು ನಿಮ್ಮ ಸಮಸ್ಯೆಯನ್ನು ಪರಿಹರಿಸದೇ ಇದ್ದರೆ, Twitter ಕಿರು ಸಂಕೇತ 40404 ಗೆ GO ಎಂಬುದಾಗಿ ಸಂದೇಶವನ್ನು ನಿಮ್ಮ ಸಾಧನದಿಂದ ಪಠ್ಯ ಸಂದೇಶದ ಮೂಲಕ ಕಳುಹಿಸಿ. ನಿಮ್ಮ ನೊಟಿಫಿಕೇಶನ್ ಸೆಟ್ಟಿಂಗ್​ಗಳಿಗೆ ಸುಸ್ಥಿರವಾಗಿರುವ ಇದು Twitter ಇಂದ ಎಸ್​ಎಂಎಸ್ ಸ್ವೀಕರಿಸಲು ನಿಮಗೆ ಅನುವು ಮಾಡುತ್ತದೆ.

ಲಾಗಿನ್ ಪರಿಶೀಲನೆಗೆ ಈಗಲೂ ನನಗೆ ಸಮಸ್ಯೆಯಿದೆ.

ಲಾಗಿನ್ ಪರಿಶೀಲನೆಯಲ್ಲಿ ನೋಂದಣಿಗೆ ಬಳಸಿ ಸಾಧನಕ್ಕೆ ನೀವು ಪ್ರವೇಶಾವಕಾಶವನ್ನು ಹೊಂದಿದ್ದರೆ, ಆ ಸಾಧನದಲ್ಲಿ Twitter ಖಾತೆಯಿಂದ ಲಾಗ್ ಔಟ್ ಮಾಡುವ ಮೂಲಕ ನೀವು ನಿಷ್ಕ್ರಿಯಗೊಳಿಸಬಹುದು. ನಂತರ ನೀವು ನಿಮ್ಮ ಬಳಕೆದಾರರ ಹೆಸರು ಮತ್ತು ಪಾಸ್​ವರ್ಡ್ ಮೂಲಕ ಪುನಃ ಲಾಗ್ ಇನ್ ಮಾಡಬಹುದು. iOS ಸಾಧನಗಳಿಗೆ ಮತ್ತು Android ಸಾಧನಗಳಿಗೆ ನಮ್ಮ ಲಾಗ್ ಔಟ್ ಸೂಚನೆಗಳನ್ನು ಓದಿ.

Bookmark or share this article