ನಿಮ್ಮ ವ್ಯಾಪ್ತಿಯನ್ನು ಹೆಚ್ಚಿಸುವ ಬಗೆ

ನೀವು ಟ್ವೀಟ್​ಮಾಡಿರುವ ಯಾವುದಾದರೂ ವಿಷಯದ ಬಗ್ಗೆ ನಿಮಗೆ ಹೆಮ್ಮೆ ಇದ್ದರೆ ಮತ್ತು ಅದನ್ನು ಹೆಚ್ಚು ಜನರಿಗೆ ಹಂಚಿಕೊಳ್ಳಲು ಬಯಸಿದ್ದರೆ, ಅದರ ವ್ಯಾಪ್ತಿಯನ್ನು ಹೆಚ್ಚಿಸಲು ನೀವು ಅದನ್ನು ಪ್ರಚಾರಪಡಿಸಬಹುದು ಮತ್ತು ಹೆಚ್ಚಿನ ವೀಕ್ಷಿಕರಿಗೆ ಇದು ತಲುಪಲು ನೆರವಾಗಬಹುದು. ಒಂದು ಟ್ವೀಟ್ಅನ್ನು ಪ್ರಾಯೋಜನೆ ಮಾಡುವುದು ತುಂಬಾ ಸುಲಭ ಮತ್ತು ಪ್ರಗತಿಯನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುವುದಕ್ಕಾಗಿ ಮತ್ತು ಫಲಿತಾಂಶಗಳನ್ನು ನೋಡುವುದಕ್ಕಾಗಿ ನಾವು ಪರಿಕರಗಳನ್ನು ಒದಗಿಸುತ್ತೇವೆ.

ಇನ್ನಷ್ಟು ಜನರನ್ನು ತಲುಪುವ ಬಗೆ

ಆರಂಭಿಸಲು, ನೀವು ಪ್ರಚಾರ ಮಾಡಲು ಬಯಸಿದ ಟ್ವೀಟ್ಅನ್ನು ಕಂಡುಕೊಳ್ಳಿ (ನೀವು ಈಗಾಗಲೇ ಪೋಸ್ಟ್ ಮಾಡಿದ ಟ್ವೀಟ್ ಅನ್ನು ಮಾತ್ರ ನೀವು ಪ್ರಚಾರ ಮಾಡಬಹುದು):

  1. ನಿಮ್ಮ ಪ್ರೊಫೈಲ್​ಗೆ ಹೋಗಿ.
    1. ವೆಬ್ ಮೂಲಕ: ನಿಮ್ಮ ಪ್ರೊಫೈಲ್ ಐಕಾನ್ ಕ್ಲಿಕ್ ಮಾಡಿ.
    2. iOS ಗಾಗಿ Twitter ನಲ್ಲಿ: ಮೇಲಿನ ಮೆನುವಿನಲ್ಲಿ, ನಿಮ್ಮ ಪ್ರೊಫೈಲ್ ಐಕಾನ್ ಮೇಲೆ ತಟ್ಟಿ, ನಂತರ ಪ್ರೊಫೈಲ್​ ತಟ್ಟಿ.
    3. Android ಗಾಗಿ Twitter ನಲ್ಲಿ: ಮೇಲ್ಭಾಗದ ಮೆನುವಿನಲ್ಲಿ, ನೀವು ನ್ಯಾವಿಗೇಶನ್ ಮೆನು ಐಕಾನ್  ಅಥವಾ ನಿಮ್ಮ ಪ್ರೊಫೈಲ್ ಐಕಾನ್ ನೋಡುತ್ತೀರಿ. ನೀವು ಹೊಂದಿರುವ ಯಾವುದೇ ಐಕಾನ್ ಅನ್ನು ತಟ್ಟಿ ಮತ್ತು ನಂತರ ಪ್ರೊಫೈಲ್ ಅನ್ನು ತಟ್ಟಿ.
  2. ನೀವು ಪ್ರಾಯೋಜಿಸಲು ಬಯಸುವ ಟ್ವೀಟ್ ಕಂಡುಕೊಳ್ಳಿ.
  3. ಟ್ವೀಟ್ ಚಟುವಟಿಕೆ ಐಕಾನ್ ವೀಕ್ಷಿಸಿ   ಕ್ಲಿಕ್ ಮಾಡಿ ಅಥವಾ ತಟ್ಟಿ   
  4. ನಿಮ್ಮ ಟ್ವೀಟ್ ಪ್ರಾಯೋಜಿಸಿ ಕ್ಲಿಕ್ ಮಾಡಿ ಅಥವಾ ತಟ್ಟಿ.
  5. ಮೊದಲ ಬಾರಿ ನೀವು ಟ್ವೀಟ್​ಪ್ರಾಯೋಜನೆ ಮಾಡುವಾಗ ಈ ಕೆಳಗಿನ ಮಾಹಿತಿಯನ್ನು ಒದಗಿಸಿ:
  6. ನಿಮ್ಮ ದೇಶ ಮತ್ತು ಸಮಯ ವಲಯ ಆಯ್ಕೆ ಮಾಡಿ, ನಿಮ್ಮ ಸಂಪರ್ಕ ಮಾಹಿತಿ ನೀಡಿ ಮತ್ತು Twitter ಜಾಹೀರಾತು ನಿಯಮಗಳಿಗೆ ಸಮ್ಮತಿಸಿ. ನಂತರ ಮುಂದೆ ತಟ್ಟಿ.
  7. ನಿಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ಮಾಹಿತಿ ಮತ್ತು ನಿಮ್ಮ ಬಿಲ್ಲಿಂಗ್ ವಿಳಾಸವನ್ನು ನಮೂದಿಸಿ. ನಂತರ ಮುಂದೆ ತಟ್ಟಿ. 
    ಗಮನಿಸಿ: ಈ ಮಾಹಿತಿಯನ್ನು ಭವಿಷ್ಯದ ಪ್ರಾಯೋಜಿತ ಟ್ವೀಟ್​ಗಳಿಗಾಗಿ ಸುರಕ್ಷಿತವಾಗಿ ಸಂಗ್ರಹಿಸಬಹುದು.
  8. ಟಾರ್ಗೆಟಿಂಗ್ ಅಡಿಯಲ್ಲಿ, ನಿಮ್ಮ ಟ್ವೀಟ್ ಮೂಲಕ ಟಾರ್ಗೆಟ್ ಮಾಡಲು ನೀವು ಬಯಸುವ ಸ್ಥಳವನ್ನು ಆಯ್ಕೆ ಮಾಡಿ. ನೀವು ವಿಶ್ವಾದ್ಯಂತ ಅಥವಾ ನಿಮ್ಮ ಸ್ಥಳಕ್ಕೆ ಸಮೀಪದ ಟಾರ್ಗೆಟ್ ಪ್ರದೇಶವನ್ನು ಆಯ್ಕೆ ಮಾಡಬಹುದು.
  9. ಬಜೆಟ್ ಅಡಿಯಲ್ಲಿ, ನೀವು ವೆಚ್ಚ ಮಾಡಲು ಬಯಸುವ ಮೊತ್ತವನ್ನು ಆಯ್ಕೆ ಮಾಡಿ. ನೀವು $10 ಮತ್ತು $2,500 (ಅಥವಾ ಇದಕ್ಕೆ ಸಮಾನ ಸ್ಥಳೀಯ ಮೊತ್ತ) ಮಧ್ಯೆ ವೆಚ್ಚ ಮಾಡಬಹುದು ಮತ್ತು ಪ್ರತಿ ಮೊತ್ತಕ್ಕೂ ಎಂಗೇಜ್ಮೆಂಟ್ ಅಂದಾಜು ಮೊತ್ತವನ್ನು ನಾವು ತೋರಿಸುತ್ತೇವೆ.
  10. ನಿಮ್ಮ ಪ್ರಾಯೋಜಕತ್ವವನ್ನು ಆರಂಭಿಸಲು ವೆಚ್ಚ ದೃಢೀಕರಿಸಿ ಕ್ಲಿಕ್ ಮಾಡಿ ಅಥವಾ ತಟ್ಟಿ.

 

Note: ಪ್ರಾಯೋಜನೆ ಅವಧಿ ಮುಗಿದ ನಂತರ, ನೀವು ಅದೇ ಟ್ವೀಟ್ ಅನ್ನು ಪುನಃ ಪ್ರಾಯೋಜನೆ ಮಾಡಬಹುದು.

ಪ್ರಗತಿ ಟ್ರ್ಯಾಕ್ ಮಾಡುವುದು ಮತ್ತು ಫಲಿತಾಂಶಗಳನ್ನು ವೀಕ್ಷಿಸುವುದು

ನಿಮ್ಮ ಫಲಿತಾಂಶಗಳನ್ನು ನೀವು ನೈಜ ಸಮಯದಲ್ಲಿ ಟ್ರ್ಯಾಕ್ ಮಾಡಬಹುದು ಮತ್ತು ಪ್ರಾಯೋಜಕತ್ವ ಮುಗಿದ ನಂತರ ನೀವು ಅಂತಿಮ ಫಲಿತಾಂಶಗಳನ್ನು ವೀಕ್ಷಿಸಬಹುದು:

  1. ನೀವು ಪ್ರಾಯೋಜಕತ್ವ ಮಾಡಿದ ಟ್ವೀಟ್ ಕಂಡುಕೊಳ್ಳಿ ಮತ್ತು ಟ್ವೀಟ್ ವಿವರಗಳನ್ನು ತೆರೆಯಲು ಕ್ಲಿಕ್ ಮಾಡಿ ಅಥವಾ ತಟ್ಟಿ.
  2. ಟ್ವೀಟ್ ಚಟುವಟಿಕೆ ಐಕಾನ್ ಕ್ಲಿಕ್ ಮಾಡಿ ಅಥವಾ ತಟ್ಟಿ 
  3. ಆರ್ಗ್ಯಾನಿಕ್ ಮತ್ತು ಪ್ರಾಯೋಜಿತ ಎಂಗೇಜ್ಮೆಂಟ್ ಮೂಲಕ ಆಯೋಜಿಸಿದ ಫಲಿತಾಂಶಗಳನ್ನು ವೀಕ್ಷಿಸಲು ನಿಮಗೆ ಸಾಧ್ಯವಾಗುತ್ತದೆ:
    • ಲಿಂಕ್ ಕ್ಲಿಕ್​ಗಳು (ನಿಮ್ಮ ಟ್ವೀಟ್ ಲಿಂಕ್ ಹೊಂದಿದ್ದರೆ);
    • ಇಂಪ್ರೆಶನ್ (ನಿಮ್ಮ ಟ್ವೀಟ್ ವೀಕ್ಷಿಸಿದ ಜನರ ಸಂಖ್ಯೆ); ಮತ್ತು
    • ಒಟ್ಟು ಎಂಗೇಜ್ಮೆಂಟ್ (ನಿಮ್ಮ ಟ್ವೀಟ್​ನೊಂದಿಗಿನ ಸಂವಹನಗಳ ಸಂಖ್ಯೆ).

ಇನ್ನಷ್ಟು ವಿವರವಾದ ವಿಶ್ಲೇಷಣೆಗಾಗಿ ಮತ್ತು ನಿಮ್ಮ ಪ್ರಾಯೋಜಿತ ಟ್ವೀಟ್​ನ ಸುಧಾರಿತ ನಿಯಂತ್ರಣಕ್ಕಾಗಿ ನಿಮ್ಮ Twitter ಬಳಕೆದಾರರ ಹೆಸರು ಮತ್ತು ಪಾಸ್​ವರ್ಡ್ ಬಳಸಿ ads.twitter.com ಗೆ ಲಾಗ್ ಇನ್ ಮಾಡಬಹುದು. ಪ್ರತಿ ಬಾರಿ ನೀವು ಟ್ವೀಟ್ ಅನ್ನು ಪ್ರಾಯೋಜನೆ ಮಾಡಿದಾಗಲೂ, ಕ್ಯಾಂಪೇನ್ ಟ್ಯಾಬ್​ನಲ್ಲಿ ಇದನ್ನು ಸ್ವಂತ ಕ್ಯಾಂಪೇನ್ ಎಂದು ದಾಖಲಿಸಲಾಗಿರುತ್ತದೆ.

Note: ಎಂಗೇಜ್ಮೆಂಟ್ ಮೆಟ್ರಿಕ್​ಗಳ ವಿವರವಾದ ವ್ಯಾಖ್ಯಾನವನ್ನು ಕಂಡುಕೊಳ್ಳಿ.

ನಿಮ್ಮ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ನಿರ್ವಹಿಸುವಿಕೆ

ನೀವು ಒಮ್ಮೆ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ನಮೂದಿಸಿದ ನಂತರ, ಭವಿಷ್ಯದ ಟ್ವೀಟ್ ಪ್ರಾಯೋಜನೆಗಳಿಗಾಗಿ ಸಂಗ್ರಹಿಸಲಾಗುತ್ತದೆ.

ads.twitter.com ಗೆ ಭೇಟಿ ನೀಡುವ ಮೂಲಕ ನೀವು ಪ್ರಸ್ತುತ ಕ್ರೆಡಿಟ್/ಡೆಬಿಟ್ ಕಾರ್ಡ್ ಮಾಹಿತಿಯನ್ನು ತಿದ್ದುಪಡಿ ಮಾಡಬಹುದು ಅಥವಾ ಹೆಚ್ಚುವರಿ ಕಾರ್ಡ್​ಗಳನ್ನು ಸೇರಿಸಬಹುದು:

  1. ನಿಮ್ಮ Twitter ಬಳಕೆದಾರರಹೆಸರು ಮತ್ತು ಪಾಸ್​ವರ್ಡ್ ಬಳಸಿ ads.twitter.com ಗೆ ಲಾಗ್ ಇನ್ ಮಾಡಿ
  2. ನಿಮ್ಮ ಖಾತೆ ಹೆಸರನ್ನು ಕ್ಲಿಕ್ ಮಾಡಿ (ಮೇಲಿನ ಶೀರ್ಷಿಕೆ ಪಟ್ಟಿಯಲ್ಲಿ) ಮತ್ತು ಮೆನುವಿನಿಂದ ಪಾವತಿ ವಿಧಾನಗಳನ್ನು ಆಯ್ಕೆ ಮಾಡಿ.
  3. ಇಲ್ಲಿಂದ ನೀವು ಬಳಕೆಗಾಗಿ ಡೀಫಾಲ್ಟ್ ಕಾರ್ಡ್ ಅನ್ನು ಗುರುತಿಸಬಹುದು (ನಿಮ್ಮ ಟ್ವೀಟ್ ಪ್ರಾಯೋಜನೆಗಳಿಗೆ ನೀವು ಹಲವು ಕಾರ್ಡ್​ಗಳನ್ನು ಸಂಯೋಜಿಸಿದ್ದರೆ); ಕಾರ್ಡ್ ಅಳಿಸಬಹುದು; ಮತ್ತು ಹೊಸ ಪಾವತಿ ವಿಧಾನಗಳನ್ನು ಸೇರಿಸಬಹುದು.

Note: ಟ್ವೀಟ್ ಪ್ರಾಯೋಜನೆಗಳು ಅಥವಾ ಜಾಹೀರಾತು ಕ್ಯಾಂಪೇನ್​ಗಳಿಗಾಗಿ ಸಂಗ್ರಹಿಸಿದ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್​ಗಳನ್ನು, Twitter ಬಳಸಿ ಉತ್ಪನ್ನಗಳನ್ನು ಖರೀದಿಸುವುದಕ್ಕಾಗಿ ನಿಮ್ಮ ಖಾತೆ ಪಾವತಿ ಸೆಟ್ಟಿಂಗ್​ಗಳಲ್ಲಿ ನೀವು ಉಳಿಸಿರಬಹುದಾದ ಪಾವತಿ ವಿಧಾನಗಳಿಂದ ಪ್ರತ್ಯೇಕವಾಗಿ ads.twitter.com ನಲ್ಲಿ ಸಂಗ್ರಹಿಸಲಾಗುತ್ತದೆ.

ನನ್ನ ಪ್ರಾಯೋಜನೆ ಎಷ್ಟು ಸಮಯದವರೆಗೆ ಇರುತ್ತದೆ?

ಸಾಮಾನ್ಯವಾಗಿ ಒಂದು ಟ್ವೀಟ್ ಪ್ರಾಯೋಜನೆ ಕೆಲವು ಗಂಟೆಗಳ ಕಾಲ ಇರುತ್ತದೆ, ಆದರೆ ಒಟ್ಟಾರೆ ಅವಧಿಯು ಬಜೆಟ್‌ನ ಹಿಂಬಾಲಕರು, ಹಿಂಬಾಲಕರ ಲೆಕ್ಕಾಚಾರ ಇತ್ಯಾದಿಯಂತಹ ವಿವಿಧ ಅಂಶಗಳನ್ನು ಆಧರಿಸಿ ಬದಲಾಗುತ್ತದೆ. ಪ್ರಚಾರ ಅವಧಿಯು ಮುಕ್ತಾಯವಾದಾಗ ನೀವು ಸೂಚನೆಯನ್ನು ಸ್ವೀಕರಿಸುತ್ತೀರಿ.

ನನ್ನ ಪ್ರಾಯೋಜಿತ ಟ್ವೀಟ್ ಅನ್ನು ಯಾರು ನೋಡುತ್ತಾರೆ?

ನಿಮ್ಮ ವಿಷಯವನ್ನು ಹೆಚ್ಚು ಮೆಚ್ಚುವ ಜನರಿಗೆ ನಿಮ್ಮ ಟ್ವೀಟ್ ಅನ್ನು ನಾವು ಕಳುಹಿಸುತ್ತೇವೆ. ನಿಮ್ಮ ಟ್ವೀಟ್​ಗಳನ್ನು ನೋಡಲು ಬಯಸುವವರು ನಿಮ್ಮ ಹಿಂಬಾಲಕರೇ ಆಗಿರುವುದರಿಂದ ನಿಮ್ಮ ಪ್ರಸ್ತುತ ಹಿಂಬಾಲಕರನ್ನು ಆಧರಿಸಿ ನಾವು ಮಾದರಿ ಮಾಡುತ್ತೇವೆ.

ನೀವು ಯಾವ ಕ್ರೆಡಿಟ್ ಕಾರ್ಡ್​ಗಳನ್ನು ಸಮ್ಮತಿಸುತ್ತೀರಿ?

ನಾವು ಪ್ರಸ್ತುತ ವೀಸಾ, ಮಾಸ್ಟರ್​ಕಾರ್ಡ್ ಮತ್ತು ಅಮೆರಿಕನ್ ಎಕ್ಸ್​ಪ್ರೆಸ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್​ಗಳನ್ನು ಸಮ್ಮತಿಸುತ್ತೇವೆ. ದೇಶದ ಅಧಿಕೃತ ಕರೆನ್ಸಿಗಳಲ್ಲಿ ಪಾವತಿಗಳನ್ನು ಸಮ್ಮತಿಸಲಾಗುತ್ತದೆ. Twitter ಜಾಹೀರಾತುಗಳಿಗೆ ಅರ್ಹತೆ ಬಗ್ಗೆ ಇನ್ನಷ್ಟು ತಿಳಿಯಿರಿ.

ಪ್ರಾಯೋಜಿತ ಟ್ವೀಟ್​ಗಳಿಗೆ ಬೆಂಬಲಿಸುವ ಭಾಷೆಗಳು ಯಾವುವು?

ಪ್ರಾಯೋಜಿತ ಟ್ವೀಟ್​ಗಳು ಬೆಂಬಲಿತ Twitter ಭಾಷೆಯನ್ನು ಬಳಸಬೇಕು. ಈ ಭಾಷೆಗಳಲ್ಲಿ ಕೆಲವೆಂದರೆ: ಬಾಸಾ, ಇಂಗ್ಲಿಷ್, ಸ್ಪಾನಿಷ್, ಫ್ರೆಂಚ್, ಇಟಾಲಿಯನ್, ಡಚ್, ಜರ್ಮನ್, ಪೋರ್ಚುಗೀಸ್, ಜಪಾನೀಸ್, ಫಿನ್ನಿಶ್, ನಾರ್ವೇಜಿಯನ್, ಸ್ಟೀಡಿಶ್ ಅಥವಾ ಡ್ಯಾನಿಶ್. Twitter ಜಾಹೀರಾತುಗಳಿಗೆ ಅರ್ಹತೆ ಮತ್ತು ಬೆಂಬಲಿತ ಭಾಷೆಗಳ ಕುರಿತು ಇನ್ನಷ್ಟು ತಿಳಿಯಿರಿ.

ಪ್ರಾಯೋಜಿತ ಟ್ವೀಟ್​ಗಳನ್ನು ಎಲ್ಲಿ ಪ್ರದರ್ಶಿಸಲಾಗುತ್ತದೆ?

ನೀವು ಪ್ರಾಯೋಜಿಸುವ ಟ್ವೀಟ್​ಗಳನ್ನು Twitter ಮಾಲೀಕತ್ವದ ಮತ್ತು ನಿರ್ವಹಣೆಯ ಅಂದರೆ ಹೋಮ್ ಕಾಲರೇಖೆಗಳು, ಪ್ರೊಫೈಲ್​ಗಳು ಇತ್ಯಾದಿಯಲ್ಲಿ ಪ್ರದರ್ಶಿಸಬಹುದಾಗಿದೆ.

Bookmark or share this article