ನಿಮ್ಮ ಇಮೇಲ್ ವಿಳಾಸವನ್ನು ಅಪ್ಡೇಟ್ ಮಾಡುವ ಬಗೆ
ಅಪ್ ಟು ಡೇಟ್ ಇಮೇಲ್ ವಿಳಾಸವನ್ನು ನಿಮ್ಮ ಖಾತೆಗೆ ಸಂಯೋಜಿಸುವ ಮೂಲಕ ನೀವು ಸುಧಾರಿತ ಖಾತೆ ಭದ್ರತೆಯ ಕಡೆಗೆ ಮಹತ್ವದ ಹೆಜ್ಜೆ ಇಟ್ಟಂತಾಗುತ್ತದೆ.
ನಿಮ್ಮ ಇಮೇಲ್ ವಿಳಾಸವನ್ನು ಅಪ್ಡೇಟ್ ಮಾಡಲು ಎರಡು ಹಂತಗಳಿವೆ:
- ನಿಮ್ಮ ಖಾತೆ ಸೆಟ್ಟಿಂಗ್ಗಳಲ್ಲಿ ನಿಮ್ಮ ಇಮೇಲ್ ವಿಳಾಸವನ್ನು ಅಪ್ಡೇಟ್ ಮಾಡುವುದು
- ನಿಮ್ಮ ಇಮೇಲ್ ವಿಳಾಸವನ್ನು ದೃಢೀಕರಿಸುವುದು
ಗಮನಿಸಿ: ಪ್ರತಿ ಬಾರಿ ನಿಮ್ಮ Twitter ಖಾತೆಯೊಂದಿಗೆ ಇಮೇಲ್ ವಿಳಾಸವನ್ನು ಅಪ್ಡೇಟ್ ಮಾಡಿದಾಗಲೂ, ಈ ಬದಲಾವಣೆಗೆ ನಿಮ್ಮನ್ನು ಎಚ್ಚರಿಸಲು ಈ ಹಿಂದೆ ಬಳಸಿದ ಇಮೇಲ್ ವಿಳಾಸಕ್ಕೆ ನಾವು ಇಮೇಲ್ ಸೂಚನೆಯನ್ನು ನೀಡುತ್ತೇವೆ. ಈ ರೀತಿಯ ಎಚ್ಚರಿಕೆಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಖಾತೆ ಭದ್ರತೆ ಕುರಿತು ಓದಿ. ಇದರ ಜೊತೆಗೆ, ನೀವು ಈ ಹಿಂದೆ ಬಳಸಿದ ಇಮೇಲ್ ವಿಳಾಸಗಳನ್ನು ನಾವು ಸಂಗ್ರಹಿಸುವುದನ್ನು ಮುಂದುವರಿಸುತ್ತೇವೆ ಮತ್ತು ಸುರಕ್ಷತೆ ಮತ್ತು ಭದ್ರತೆ ಉದ್ದೇಶಕ್ಕೆ ಈ ಮಾಹಿತಿಯನ್ನು ಬಳಸುತ್ತೇವೆ. ನಿಮ್ಮ Twitter ಡೇಟಾ ಮೂಲಕ ನಿಮ್ಮ ಡೇಟಾವನ್ನು ಡೌನ್ಲೋಡ್ ಮಾಡಿ ನಿಮ್ಮ ಖಾತೆಯೊಂದಿಗೆ ಸಂಯೋಜಿಸಲಾಗಿರುವ ಇಮೇಲ್ ವಿಳಾಸಗಳ ಸಂಪೂರ್ಣ ಇತಿಹಾಸವನ್ನು ನೀವು ಪಡೆಯಬಹುದು.
ಗಮನಿಸಿ: Twitter ನಲ್ಲಿ ನಿಮ್ಮ ಸಾರ್ವಜನಿಕ ಪ್ರೊಫೈಲ್ನಲ್ಲಿ ನಿಮ್ಮ ಇಮೇಲ್ ವಿಳಾಸವು ಪ್ರದರ್ಶನಗೊಳ್ಳುವುದಿಲ್ಲ. ಇಮೇಲ್ ವಿಳಾಸದ ಮೂಲಕ ಇತರರು ನನ್ನನ್ನು ಕಂಡುಕೊಳ್ಳಲಿ ಸೆಟ್ಟಿಂಗ್ ಅನ್ನು ನೀವು ಆಫ್ ಮಾಡಿದ್ದರೆ, ಈಗಾಗಲೇ ನಿಮ್ಮ ವಿಳಾಸವನ್ನು ಹೊಂದಿರುವ ಇತರರು ನಿಮ್ಮ Twitter ಖಾತೆಯನ್ನು ಕಂಡುಕೊಳ್ಳಬಹುದು. ಇಮೇಲ್ ಮತ್ತು ಫೋನ್ ನಂಬರ್ ಪರಿಶೋಧನೆ ಗೌಪ್ಯತೆ ಸೆಟ್ಟಿಂಗ್ಗಳ ಬಗ್ಗೆ ಇನ್ನಷ್ಟು ತಿಳಿಯಿರಿ.
ನಿಮ್ಮ ಇಮೇಲ್ ವಿಳಾಸವನ್ನು ದೃಢೀಕರಿಸಿ
ನಿಮ್ಮ ಖಾತೆಗೆ ಲಗತ್ತಿಸಿದ ಇಮೇಲ್ ವಿಳಾಸವನ್ನು ನೀವು ಅಪ್ಡೇಟ್ ಮಾಡುವಾಗ, ಬದಲಾವಣೆಯನ್ನು ದೃಢೀಕರಿಸುವಂತೆ ನಿಮ್ಮನ್ನು ಕೇಳುವ ಇಮೇಲ್ ಅನ್ನು ನಾವು ಕಳುಹಿಸುತ್ತೇವೆ. ನಾವು ಕಳುಹಿಸುವ ಇಮೇಲ್ನಲ್ಲಿ, ಈಗಲೇ ದೃಢೀಕರಿಸಿ ಬಟನ್ ಕ್ಲಿಕ್ ಮಾಡಿದರೆ, ಈ ಇಮೇಲ್ ವಿಳಾಸ ನಿಮ್ಮದು ಎಂಬುದು ನಮಗೆ ತಿಳಿಯುತ್ತದೆ.
- ನೀವು ಈಗಷ್ಟೇ ಅಪ್ಡೇಟ್ ಮಾಡಿದ ವಿಳಾಸದ ಇಮೇಲ್ ಇನ್ಬಾಕ್ಸ್ಗೆ ಲಾಗ್ ಇನ್ ಮಾಡಿ.
- ನಿಮ್ಮ ಖಾತೆಯನ್ನು ದೃಢೀಕರಿಸಲು ನಿಮ್ಮನ್ನು ಆಹ್ವಾನಿಸುವ Twitter ನ ಇಮೇಲ್ ಅನ್ನು ತೆರೆಯಿರಿ.
- ಆ ಇಮೇಲ್ನಲ್ಲಿ ಇರುವ ಈಗಲೇ ದೃಢೀಕರಿಸಿ ಕ್ಲಿಕ್ ಮಾಡಿ.
- ನಾವು ನಿಮ್ಮನ್ನು Twitter ಖಾತೆಗೆ ನಿರ್ದೇಶಿಸುತ್ತೇವೆ ಮತ್ತು ನೀವು ಈಗಾಗಲೇ ಲಾಗ್ ಇನ್ ಮಾಡಿಲ್ಲದಿದ್ದರೆ, ಲಾಗ್ ಇನ್ ಮಾಡುವಂತೆ ನಾವು ನಿಮ್ಮನ್ನು ಕೇಳುತ್ತೇವೆ.
ಗಮನಿಸಿ: ಈ ಮೇಲಿನ ದೃಢೀಕರಣ ಪ್ರಕ್ರಿಯೆಯನ್ನು ನೀವು ಮುಗಿಸದಿದ್ದರೆ, ನಿಮ್ಮ ಇಮೇಲ್ ದೃಢೀಕರಿಸದ ಸ್ಥಿತಿಯಲ್ಲಿ ಉಳಿದುಕೊಳ್ಳುತ್ತದೆ. ಅಂದರೆ, ನಿಮ್ಮ ಟ್ವೀಟ್ ಆರ್ಕೈವ್ ವಿನಂತಿಸುವುದು ಅಥವಾ ಲಾಗಿನ್ ಪರಿಶೀಲನೆಯಂತಹ ಭದ್ರತಾ ಲಕ್ಷಣಗಳ ಅನುಕೂಲವನ್ನು ಪಡೆಯುವಂತಹ ನೀವು ಖಾತೆಯ ಕೆಲವು ಲಕ್ಷಣಗಳ ಅನುಕೂಲವನ್ನು ಪಡೆಯಲಾಗದು.