ಕಳೆದ ಅಥವಾ ಮರೆತ ಪಾಸ್ವರ್ಡ್ ಮರುಹೊಂದಿಸುವ ಬಗೆ
ನಿಮ್ಮ ಖಾತೆಗೆ ಪ್ರವೇಶಾವಕಾಶವನ್ನು ನೀವು ಎಂದೂ ಕಳೆದುಕೊಳ್ಳದಂತೆ ಖಚಿತಪಡಿಸಲು ನಿಖರ ಮತ್ತು ನವೀಕರಿಸಿದ ಇಮೇಲ್ ವಿಳಾಸ ಮತ್ತು/ಅಥವಾ ಫೋನ್ ಸಂಖ್ಯೆಯು ಉತ್ತಮ ಕ್ರಮವಾಗಿದೆ. ಸ್ವಲ್ಪ ಸಮಯವನ್ನು ಮೀಸಲಿಡಿ ಮತ್ತು ನಿಮ್ಮ ಖಾತೆಗೆ ನಿಯೋಜಿಸಿದ ಇಮೇಲ್ ವಿಳಾಸ ಮತ್ತು/ಅಥವಾ ಫೋನ್ ಸಂಖ್ಯೆ ನವೀಕರಿಸಲ್ಪಟ್ಟಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
ನೀವು ಲಾಗಿನ್ ಮಾಡಿದಾಗ ನಿಮ್ಮ ಪಾಸ್ವರ್ಡ್ ಬದಲಾವಣೆ ಮಾಡುವ ಬಗೆ
- ನಿಮ್ಮ ಲಾಗಿನ್ ಆದ ಖಾತೆಯಿಂದ, ನ್ಯಾವಿಗೇಶನ್ ಬಾರ್ನಲ್ಲಿರುವ ಇನ್ನಷ್ಟು ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ಸೆಟ್ಟಿಂಗ್ಗಳು ಮತ್ತು ಗೌಪ್ಯತೆ ಅಯ್ಕೆ ಮಾಡಿ.
- ಖಾತೆ ಟ್ಯಾಬ್ನಿಂದ ಪಾಸ್ವರ್ಡ್ಕ್ಲಿಕ್ ಮಾಡಿ.
- ನಿಮ್ಮ ಪ್ರಸ್ತುತ ಪಾಸ್ವರ್ಡ್ ನಮೂದಿಸಿ.
- ನಿಮ್ಮ ಹೊಸ ಪಾಸ್ವರ್ಡ್ ಆಯ್ಕೆಮಾಡಿ.
- ಉಳಿಸಿ ಎಂಬುದನ್ನು ಕ್ಲಿಕ್ ಮಾಡುವ ಮೂಲಕ ಬದಲಾವಣೆಗಳನ್ನು ಉಳಿಸಿ.
ಗಮನಿಸಿ: ನಿಮಗೆ ಲಾಗ್ ಇನ್ ಮಾಡಲು ಸಾಧ್ಯವಾಗುತ್ತಿದ್ದು, ನಿಮ್ಮ ಪಾಸ್ವರ್ಡ್ ನೆನಪಿಲ್ಲದಿದ್ದರೆ, ಪಾಸ್ವರ್ಡ್ ಸೆಟ್ಟಿಂಗ್ಗಳ ಪುಟದಿಂದ ಪಾಸ್ವರ್ಡ್ ಮರುಹೊಂದಿಸಿ ಇಮೇಲ್ ಅನ್ನು ನಿಮಗೆ ನೀವೇ ಕಳುಹಿಸಿಕೊಳ್ಳಬಹುದು. ಇದರ ಜೊತೆಗೆ, ನೀವು ನಿಮ್ಮ ಪಾಸ್ವರ್ಡ್ ಬದಲಾವಣೆ ಮಾಡಲು ಬಳಸುತ್ತಿರುವುದನ್ನು ಹೊರತುಪಡಿಸಿ, ಎಲ್ಲ ನಿಮ್ಮ ಸಕ್ರಿಯ Twitter ಸೆಷನ್ಗಳಿಂದ ಲಾಗ್ ಔಟ್ ಆಗುತ್ತೀರಿ.
ಇಮೇಲ್ ಮೂಲಕ ನಿಮಗೆ ಪಾಸ್ವರ್ಡ್ ಮರುಹೊಂದಿಸುವ ಇಮೇಲ್ ಕಳುಹಿಸುವ ಬಗೆ
- twitter.com, mobile.twitter.com ಅಥವಾ iOS ಗಾಗಿ Twitter ಅಥವಾ ಆಂಡ್ರಾಯ್ಡ್ ಆಪ್ನಲ್ಲಿನ ಸೈನ್ ಇನ್ ಪುಟದಿಂದ ಪಾಸ್ವರ್ಡ್ ಮರೆತಿದೆಯೇ? ಕ್ಲಿಕ್ ಮಾಡಿ
- ನಿಮ್ಮ ಇಮೇಲ್ ವಿಳಾಸ, ಫೋನ್ ಸಂಖ್ಯೆ ಅಥವಾ Twitter ಬಳಕೆದಾರರ ಹೆಸರು ನಮೂದಿಸಿ. ನಿಮ್ಮ ಫೋನ್ ಸಂಖ್ಯೆಯೊಂದಿಗೆ ಹಲವು ಖಾತೆಗಳನ್ನು ನೀವು ಸಂಯೋಜಿಸಿದ್ದರೆ, ಈ ಹಂತದಲ್ಲಿ ನೀವು ನಿಮ್ಮ ಫೋನ್ ಸಂಖ್ಯೆಯನ್ನು ಬಳಸಲಾಗದು.
- ಪಾಸ್ವರ್ಡ್ ಮರುನಿಗದಿ ಇಮೇಲ್ ಅನ್ನು ಸ್ವೀಕರಿಸಲು ಬಯಸುವ ಇಮೇಲ್ ವಿಳಾಸವನ್ನು ಆಯ್ಕೆ ಮಾಡಿ.
- ನಿಮ್ಮ ಇಮೇಲ್ ಇನ್ಬಾಕ್ಸ್ ಪರಿಶೀಲಿಸಿ. ನಿಮ್ಮ ಖಾತೆಯ ಇಮೇಲ್ ವಿಳಾಸಕ್ಕೆ ತಕ್ಷಣವೇ Twitter ಸಂದೇಶ ಕಳುಹಿಸುತ್ತದೆ.
- ಇಮೇಲ್ನಲ್ಲಿ ಇರುವ ಮರುನಿಗದಿ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಹೊಸ ಪಾಸ್ವರ್ಡ್ ಆಯ್ಕೆ ಮಾಡಿ.
ಗಮನಿಸಿ: ಈ ಇಮೇಲ್ಗಳಲ್ಲಿ ಸೇರಿಸಲಾಗಿರುವ ಪಾಸ್ವರ್ಡ್ ಮರುನಿಗದಿ ಲಿಂಕ್ಗಳು ಸಮಯ ಸಂವೇದನೆಯನ್ನು ಹೊಂದಿರುತ್ತವೆ. ನೀವು ಲಿಂಕ್ ಮೇಲೆ ಕ್ಲಿಕ್ ಮಾಡಿದರೂ ಅದು ಕೆಲಸ ಮಾಡದೇ ಇದ್ದರೆ, ಹೊಸ ಲಿಂಕ್ ವಿನಂತಿಸಲು ಪ್ರಯತ್ನಿಸಿ ಮತ್ತು ಲಿಂಕ್ ಅನ್ನು ಸಾಧ್ಯವಾದಷ್ಟು ಬೇಗ ಬಳಸಿ. ಇದರ ಜೊತೆಗೆ, ನಿಮ್ಮ ಪಾಸ್ವರ್ಡ್ ಮರುಹೊಂದಿಸಿದರೆ ನಿಮ್ಮ ಎಲ್ಲ ಸಕ್ರಿಯ Twitter ಸೆಷನ್ಗಳಿಂದ ನೀವು ಲಾಗ್ ಔಟ್ ಆಗುತ್ತೀರಿ.
ಎಸ್ಎಮ್ಎಸ್ ಮೂಲಕ ಪಾಸ್ವರ್ಡ್ ಮರುನಿಗದಿ ಮಾಡುವ ಬಗೆ
ನಿಮ್ಮ ಮೊಬೈಲ್ ಸೆಟ್ಟಿಂಗ್ಗಳಲ್ಲಿನಿಮ್ಮ ಖಾತೆಗೆ ನೀವು ಫೋನ್ ನಂಬರನ್ನು ಸೇರಿಸಿದ್ದರೆ, ಎಸ್ಎಮ್ಎಸ್/ಪಠ್ಯ ಸಂದೇಶದ ಮೂಲಕ ಪಾಸ್ವರ್ಡ್ ಮರುನಿಗದಿ ಮಾಹಿತಿಯನ್ನು ನೀವು ಸ್ವೀಕರಿಸುತ್ತೀರಿ.
- ಪಾಸ್ವರ್ಡ್ ಮರೆತಿದೆಯೇ? ಪುಟದಿಂದ ನಿಮ್ಮ ಇಮೇಲ್ ವಿಳಾಸ, ಫೋನ್ ಸಂಖ್ಯೆ ಅಥವಾ Twitter ಬಳಕೆದಾರರ ಹೆಸರು ನಮೂದಿಸಿ.
- ನಿಮ್ಮ ಫೋನ್ ಸಂಖ್ಯೆಯನ್ನು ನಮೂದಿಸಿ ಮತ್ತು ಹುಡುಕು ಕ್ಲಿಕ್ ಮಾಡಿ.
- [XX] ನಿಂದ ಕೊನೆಯಾಗುವ ನನ್ನ ಫೋನ್ ಸಂಖ್ಯೆಗೆ ಕೋಡ್ ಕಳುಹಿಸಿ ಎಂಬುದು ಪ್ರದರ್ಶನಗೊಳ್ಳುತ್ತದೆ. ಮುಂದುವರಿಸು ಕ್ಲಿಕ್ ಮಾಡಿ.
- Twitter ಆರು ಅಂಕಿಯ ಕೋಡ್ ಅನ್ನು ನಿಮಗೆ ಪಠ್ಯ ಸಂದೇಶ ಕಳುಹಿಸುತ್ತದೆ. ಇದು 15 ನಿಮಿಷಗಳವರೆಗೆ ಮಾನ್ಯವಾಗಿರುತ್ತದೆ.
- ಪಾಸ್ವರ್ಡ್ ಮರುನಿಗದಿ ಪುಟದಲ್ಲಿನ ಪಠ್ಯದ ಕ್ಷೇತ್ರದಲ್ಲಿ ಈ ಕೋಡ್ ನಮೂದಿಸಿ ಮತ್ತು ಸಲ್ಲಿಸಿ ಕ್ಲಿಕ್ ಮಾಡಿ.
- ಹೊಸ ಪಾಸ್ವರ್ಡ್ ಆಯ್ಕೆ ಮಾಡಿ ಎಂಬುದನ್ನು ನಿಮಗೆ ಸೂಚಿಸಲಾಗುತ್ತದೆ.
ಗಮನಿಸಿ: ನಿಮ್ಮ ಪಾಸ್ವರ್ಡ್ ಮರುಹೊಂದಿಸಿದರೆ ನಿಮ್ಮ ಎಲ್ಲ ಸಕ್ರಿಯ Twitter ಸೆಷನ್ಗಳಿಂದ ನೀವು ಲಾಗ್ ಔಟ್ ಆಗುತ್ತೀರಿ. ಇದರ ಜೊತೆಗೆ, ಲಾಗಿನ್ ಪರಿಶೀಲನೆಯಲ್ಲಿ ನೋಂದಣಿಗೊಳ್ಳದ ಖಾತೆಗಳಿಗೆ ಎಸ್ಎಮ್ಎಸ್ ಮೂಲಕ ಪಾಸ್ವರ್ಡ್ ಮರುನಿಗದಿಯು ಲಭ್ಯವಿರುವುದಿಲ್ಲ. ಇಮೇಲ್ ಮೂಲಕ ಮಾತ್ರವೇ ನೀವು ಪಾಸ್ವರ್ಡ್ ಮರುನಿಗದಿ ಮಾಡಬಹುದು.
ನಿಮಗೆ ಎಸ್ಎಮ್ಎಸ್ ಕೋಡ್ ಬಂದಿಲ್ಲವೇ?
- ಕೋಡ್ ನಿಮಗೆ ಬರಲು ಕೆಲವು ನಿಮಿಷಗಳನ್ನು ತೆಗೆದುಕೊಳ್ಳಬಹುದು.
- ಇಮೇಲ್ ಪಾಸ್ವರ್ಡ್ ಮರುಹೊಂದಿಸುವಿಕೆ ಆಯ್ಕೆಯನ್ನು ಬಳಸಿ.
ಪಾಸ್ವರ್ಡ್ ಮರುನಿಗದಿ ವಿನಂತಿಸಲು ಹೆಚ್ಚುವರಿ ಮಾಹಿತಿ ಅಗತ್ಯವಿದೆ
ನೀವು ವಿನಂತಿ ಮಾಡಿಲ್ಲದ ಪಾಸ್ವರ್ಡ್ ಮರುನಿಗದಿ ಸಂದೇಶಗಳು ನಿಮಗೆ ಪದೇ ಪದೆ ಆಗಮಿಸುತ್ತಿದ್ದರೆ, ಪಾಸ್ವರ್ಡ್ ಮರುನಿಗದಿಯನ್ನು ಆರಂಭಿಸಲು ನೀವು ಹೆಚ್ಚುವರಿ ಮಾಹಿತಿ ನಮೂದಿಸುವಂತೆ ವಿನಂತಿಸಬಹುದಾಗಿದೆ.
- twitter.com ಮೂಲಕ ನಿಮ್ಮ ಖಾತೆ ಸೆಟ್ಟಿಂಗ್ಗಳಿಗೆ ಹೋಗಿ.
- ಭದ್ರತೆ ವಿಭಾಗದ ಅಡಿಯಲ್ಲಿ, ಪಾಸ್ವರ್ಡ್ ಮರುನಿಗದಿ ರಕ್ಷಣೆ ಪಕ್ಕದಲ್ಲಿರುವ ಬಾಕ್ಸ್ ಗುರುತು ಮಾಡಿ.
- ಪಾಸ್ವರ್ಡ್ ಮರುನಿಗದಿ ಇಮೇಲ್ ಅಥವಾ ಎಸ್ಎಮ್ಎಸ್/ಪಠ್ಯವನ್ನು ಕಳುಹಿಸಲು ನಿಮ್ಮ ಖಾತೆಯ ಇಮೇಲ್ ವಿಳಾಸ ಅಥವಾ ಫೋನ್ ಸಂಖ್ಯೆಯನ್ನು ನಮೂದಿಸಬೇಕು.
- ನಿಮ್ಮ ಇಮೇಲ್ ವಿಳಾಸ ಮತ್ತು ಫೋನ್ ಸಂಖ್ಯೆಯೆರಡೂ ನಿಮ್ಮ ಖಾತೆಯೊಂದಿಗೆ ಸಂಯೋಜಿಸಲ್ಪಟ್ಟಿದ್ದರೆ, ಪಾಸ್ವರ್ಡ್ ಮರುನಿಗದಿ ಇಮೇಲ್ ಅಥವಾ ಎಸ್ಎಮ್ಎಸ್/ಪಠ್ಯವನ್ನು ಕಳುಹಿಸುವುದಕ್ಕಾಗಿ ಎರಡನ್ನೂ ನಮೂದಿಸುವಂತೆ ನಿಮಗೆ ಸೂಚಿಸಲಾಗುತ್ತದೆ.