ನಿಮ್ಮ ಬಳಕೆದಾರರ ಹೆಸರನ್ನು ಬದಲಾವಣೆ ಮಾಡುವ ಬಗೆ
ಇದಕ್ಕಾಗಿ ಸೂಚನೆಗಳನ್ನು ವೀಕ್ಷಿಸಿ:
ಗಮನಿಸಿ: ನಿಮ್ಮ ಬಳಕೆದಾರರ ಹೆಸರು ಬದಲಿಸಿದರೆ, ನಿಮ್ಮ ಪ್ರಸ್ತುತ ಹಿಂಬಾಲಕರು, ನೇರ ಸಂದೇಶಗಳು ಅಥವಾ ಪ್ರತಿಕ್ರಿಯೆಗಳಿಗೆ ಬಾಧಿಸುವುದಿಲ್ಲ. ನೀವು ಅಪ್ಡೇಟ್ ಮಾಡಿದಾಗ ನಿಮ್ಮ ಪ್ರೊಫೈಲ್ ಪಕ್ಕ ಹೊಸ ಬಳಕೆದಾರರ ಹೆಸರನ್ನು ನಿಮ್ಮ ಹಿಂಬಾಲಕರು ನೋಡುತ್ತಾರೆ. ನೀವು ಬಳಕೆದಾರರ ಹೆಸರು ಬದಲಿಸುವುದಕ್ಕೂ ಮುನ್ನ ನಿಮ್ಮ ಹಿಂಬಾಲಕರಿಗೆ ನೀವು ಸೂಚನೆ ನೀಡಬೇಕು ಎಂದು ನಾವು ಸಲಹೆ ನೀಡುತ್ತೇವೆ. ಇದರಿಂದ ಅವರು ನಿಮ್ಮ ಹೊಸ ಬಳಕೆದಾರರ ಹೆಸರಿಗೆ ಪ್ರತಿಕ್ರಿಯೆಗಳು ಅಥವಾ ನೇರ ಸಂದೇಶಗಳನ್ನು ಕಳುಹಿಸಬಹುದು.
ನಿಮ್ಮ ಬಳಕೆದಾರರ ಹೆಸರು ಮತ್ತು ನಿಮ್ಮ ಹೆಸರಿನ ಮಧ್ಯೆ ವ್ಯತ್ಯಾಸವೇನು?
- ನಿಮ್ಮ ಬಳಕೆದಾರರ ಹೆಸರು ನಿಮ್ಮ ಪ್ರೊಫೈಲ್ ಯುಆರ್ಎಲ್ನಲ್ಲಿ ಕಾಣಿಸುತ್ತದೆ ಮತ್ತು ಇದು ನಿಮಗೆ ವಿಶಿಷ್ಟವಾದದ್ದಾಗಿರುತ್ತದೆ. ಇದನ್ನು ಲಾಗಿನ್, ಪ್ರತಿಕ್ರಿಯೆಗಳು ಮತ್ತು ನೇರ ಸಂದೇಶಗಳಿಗೆ ಬಳಸಲಾಗುತ್ತದೆ.
- ನಿಮ್ಮ ಡಿಸ್ಪ್ಲೇ ಹೆಸರು ನಿಮ್ಮ ಪ್ರೊಫೈಲ್ ಪುಟದಲ್ಲಿ ಪ್ರದರ್ಶಿಸಿದ ವೈಯಕ್ತಿಕ ಗುರುತುಕಾರಕವಾಗಿದೆ (ಕೆಲವು ಬಾರಿ ವಹಿವಾಟು ಹೆಸರು ಅಥವಾ ನಿಜವಾದ ಹೆಸರು) ಮತ್ತು ನಿಮ್ಮ ಹೆಸರು ಅಥವಾ ವಹಿವಾಟು ಹೆಸರಿಗಿಂತ ನಿಮ್ಮ ಬಳಕೆದಾರರ ಹೆಸರು ವಿಭಿನ್ನವಾಗಿದ್ದಾಗ ನಿಮ್ಮ ಸ್ನೇಹಿತರಿಗೆ ನಿಮ್ಮನ್ನು ಗುರುತಿಸಲು ಇದು ಬಳಸಲಲಾಗುತ್ತದೆ. ನಿಮ್ಮ ಬಳಕೆದಾರರ ಹೆಸರನ್ನು ಬದಲಾವಣೆ ಮಾಡುವುದು ಹೇಗೆ ಎಂದು ತಿಳಿಯಿರಿ.
ಹೆಸರುಗಳು ಮತ್ತು ಬಳಕೆದಾರರ ಹೆಸರು ಎಷ್ಟು ಉದ್ದವಾಗಿರಬಹುದು?
- ನಿಮ್ಮ ಬಳಕೆದಾರರ ಹೆಸರು 15 ಅಕ್ಷರಗಳಷ್ಟು ಉದ್ದವಿರಬಹುದು.
- ನಿಮ್ಮ ಡಿಸ್ಪ್ಲೇ ಹೆಸರು 50 ಅಕ್ಷರಗಳಷ್ಟು ಉದ್ದವಿರಬಹುದು.