Twitter ಅನ್ನು ನಾವು ಹೇಗೆ ಸುರಕ್ಷಿತವಾಗಿಸುತ್ತಿರುವ ಬಗೆ

ಸಂವಾದಗಳಿಗೆ ಉತ್ತಮ ಸ್ಥಳವನ್ನು ರೂಪಿಸುವುದು.

ನಿಮ್ಮ ವಿಶಿಷ್ಟ ಧ್ವನಿ ಮತ್ತು ಸಂವಾದಗಳೇ Twitter ಅನ್ನು Twitter ಆಗಿಸುತ್ತದೆ. ಹೀಗಾಗಿ, ಎಲ್ಲ ಜನರೂ ಸಾರ್ವಜನಿಕ ಸಂವಾದದಲ್ಲಿ ಮುಕ್ತ ಮತ್ತು ಸುರಕ್ಷಿತವಾಗಿ ಭಾಗವಹಿಸುವುದನ್ನು ಖಚಿತಪಡಿಸಲು ನಾವು ನಮ್ಮ ನಿಯಮಗಳು, ಪ್ರಕ್ರಿಯೆಗಳು, ತಂತ್ರಜ್ಞಾನ ಮತ್ತು ಪರಿಕರಗಳನ್ನು ನಿರಂತರವಾಗಿ ಸುಧಾರಿಸುತ್ತಲೇ ಇರುತ್ತೇವೆ.

Twitter ನಲ್ಲಿ ಸುರಕ್ಷಿತ ಭಾವನೆ ಹೊಂದುವ ಅರ್ಹತೆ ನಿಮಗಿದೆ - ಹಾಗೆ ಮಾಡುವುದು ನಮ್ಮ ಕೆಲಸವೂ ಆಗಿದೆ.

ಮುಂಚಿತವಾಗಿ ಗುರುತಿಸುವುದು

ನಮ್ಮ ನಿಯಮಗಳನ್ನು ಉಲ್ಲಂಘಿಸುವ ಟ್ವೀಟ್‌ಗಳ ಕುರಿತು ನೀವು ವರದಿ ಮಾಡುವುದಕ್ಕೂ ಮೊದಲೇ ಅವುಗಳನ್ನು ಮೊದಲೇ ಗುರುತಿಸಿ ವರದಿ ಮಾಡುವ ಉದ್ದೇಶದಿಂದ ನಾವು ತಂತ್ರಜ್ಞಾನವನ್ನು ಬಳಸುತ್ತೇವೆ.

ಖಾತೆಗಳನ್ನು ತಡೆಹಿಡಿಯಿರಿ

ನಿಮ್ಮ ಟ್ವೀಟ್‌ಗಳನ್ನು ಯಾರಾದರೂ ನೋಡಬಾರದು ಎಂದಾದರೆ ಮತ್ತು ಅವರ ಟ್ವೀಟ್‌ಗಳನ್ನು ನೀವು ನೋಡಬಾರದು ಎಂದಾದರೆ ತಕ್ಷಣವೇ ಯಾವುದೇ ಖಾತೆಯನ್ನಾದರೂ ತಡೆಹಿಡಿಯಿರಿ.

ದೌರ್ಜನ್ಯಕರ ವರ್ತನೆಯನ್ನು ವರದಿ ಮಾಡಿ

ದೌರ್ಜನ್ಯಕರ ವರ್ತನೆ ಕಂಡುಬಂದರೆ ನೀವು ಅದರ ಬಗ್ಗೆ ನಮಗೆ ವರದಿ ಮಾಡಬೇಕು ಎಂದು ನಾವು ಬಯಸುತ್ತೇವೆ.

ಖಾತೆಗಳನ್ನು ಸದ್ದಡಗಿಸಿ

ಖಾತೆಯನ್ನು ಹಿಂಬಾಲಿಸದಿರುವಿಕೆ ಮಾಡಬಾರದು, ಆದರೆ ಅವರ ಟ್ವೀಟ್‌ಗಳು ಕಾಣಬಾರದು ಎಂದು ನೀವು ಬಯಸಿದರೆ ಅವರು ಖಾತೆಯನ್ನು ನೀವು ಸದ್ದಡಗಿಸಬಹುದು.

ಶಬ್ದಗಳನ್ನು ಸದ್ದಡಗಿಸಿ

ನಿರ್ದಿಷ್ಟ ಶಬ್ದಗಳನ್ನು ಸದ್ದಡಗಿಸುವ ಮೂಲಕ ನೀವು ನೋಡಲು ಬಯಸದ ವಿಷಯವನ್ನು ದೂರವಿಡಿ.

ಸಂವಾದಗಳನ್ನು ಸದ್ದಡಗಿಸಿ

ನೀವು ಭಾಗವಾಗಿರುವ ಟ್ವೀಟ್‌ ಬಗ್ಗೆ ಸೂಚನೆಗಳನ್ನು ನಿಲ್ಲಿಸಲು ಸಂವಾದವನ್ನು ಸದ್ದಡಗಿಸಿ.

ಸೂಚನೆಗಳ ಟೈಮ್‌ಲೈನ್ ಫಿಲ್ಟರುಗಳು

ನಿಮ್ಮ ಸೂಚನೆಗಳ ಟೈಮ್‌ಲೈನ್‌ನಲ್ಲಿ ನಿಮಗೆ ಕಾಣುವ ಖಾತೆಗಳ ವಿಧಗಳನ್ನು ಫಿಲ್ಟರ್ ಮಾಡಿ.

Twitter ಸುರಕ್ಷತೆ
ನಾವು ಇತ್ತೀಚೆಗೆ ಯಾವುದರ ಕುರಿತು ಪರಿಶ್ರಮಿಸುತ್ತಿದ್ದೇವೆ ಎಂದು ನೋಡಿ.
Follow icon @Twitter ಸುರಕ್ಷತೆ ಹಿಂಬಾಲಿಸಿ